ಅಜಿತ್ ಪಿ.ಎಸ್

ಮಂಗಳೂರು ಕೆನರಾ ಹೈಸ್ಕೂಲಿನ ವಿದ್ಯಾರ್ಥಿ ಅಜಿತ್ ಪಿ.ಎಸ್, 2010 ರ  ಮಾರ್ಚ್ ತಿಂಗಳ  ಕರ್ಣಾಟಕ  SSLC ಬೋರ್ಡ್ ಪರೀಕ್ಷೆಲಿ 625 ರಲ್ಲಿ 610 ಮಾರ್ಕ್ (97.6%)  ತೆಗದು ಶಾಲೆಗೆ ಪ್ರಥಮ ಬಂದದ್ದು ಅಲ್ಲದ್ದೆ ದಕ್ಷಿಣ ಕನ್ನಡ ಜಿಲ್ಲೆಗೆ 4 ನೇ ಸ್ಥಾನ ತಂದು ಕೊಟ್ಟದು ನವಗೆಲ್ಲಾ ಹೆಮ್ಮೆಯ ವಿಷಯ.
ಈ ವರ್ಷ ಅತ್ಯಂತ ಕ್ಲಿಷ್ಟವಾಗಿತ್ತಿದ್ದ ಗಣಿತ ವಿಷಯಲ್ಲಿ ಶೇಕಡಾ 100 ಮಾರ್ಕ್ ತೆಗದ್ದದು ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ.

ಗಣಿತ ಕಲಿಸಿದ ಸತೀಶರಾಯ ಮಾಷ್ಟ್ರಿಂದ ಮತ್ತೆ ಹೈಸ್ಕೂಲಿನ ಮುಖ್ಯೋಪಾಧ್ಯಾಯರಿಂದ “ಭೇಷ್” ಹೇಳಿಸಿಗೊಂಡ ಇವ ಯಾವುದೇ ಕೋಚಿಂಗ್ ಕ್ಲಾಸ್ ನ ತರಬೇತಿ ತೆಕ್ಕೊಳದ್ದೆ ಈ ಸಾಧನೆಯ ಮಾಡಿದ್ದ.

ಮಂಗಳೂರಿನ ಕಾವೂರು ಗಾಂಧೀನಗರಲ್ಲಿ ವಾಸವಾಗಿಪ್ಪ,  ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಂಪೆನಿ ಉದ್ಯೋಗಿ, ಪಾಂಡೇಲು ಶಂಕರ (ವೇದ ಮೂರ್ತಿ ದಿವಂಗತ ಪಾಂಡೇಲು ಸುಬ್ರಾಯ ಭಟ್ಟರ ಮಗ) ಮತ್ತೆ ವಿಮಲ ದಂಪತಿಯ ಎರಡನೇ ಮಗನಾಗಿ ಜನಿಸಿದ ಇವಂಗೆ ಪುಸ್ತಕ ಓದುವದು ಹವ್ಯಾಸ.
ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಇವಂಗೆ ನಾವೆಲ್ಲ  ಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ  ಹಾರೈಸುವೊ.

ಸಂಕ್ಷಿಪ್ತ ವಿವರ:

ಅಜಿತ್ ಪಿ.ಎಸ್

ಸಾಧನೆಯ ವಿವರ: ಈ ಸರ್ತಿಯಾಣ(ಮಾರ್ಚ್-೨೦೧೦) ಕರ್ನಾಟಕ ಎಸ್.ಎಸ್.ಎಲ್.ಸಿ.ಪರೀಕ್ಷೆಲಿ ೬೧೦/೬೨೫, ಹೇಳಿದರೆ ೯೭.೬% ಮಾರ್ಕು.

ಅಪ್ಪನ ಹೆಸರು: ಶಂಕರ ಪಿ.ಎಸ್.

ಅಮ್ಮನ ಹೆಸರು: ವಿಮಲ ಪಿ.ಎಸ್.

ಮನೆ: ಈಗ ಮಂಗಳೂರಿನ ಕಾವೂರು ಗಾಂಧಿ ನಗರ.

ಮೂಲ ಮನೆ: ನೀರ್ಚಾಲಿನ ಪಾಂಡೇಲು. ಸರಿ ಗುರ್ತ ಬೇಕಾದರೆ,ಪುರೋಹಿತರಾಗಿದ್ದ ದಿ.ಪಾಂಡೇಲು ಸುಬ್ರಾಯ ಭಟ್ಟರ ಮಂಗ್ಳೂರು ಪುಳ್ಳಿ.

ಬಯಲಿನ ಎಲ್ಲಾ ದೊಡ್ಡಪ್ಪ/ದೊಡ್ಡಮ್ಮಂದಿರ ಹಾಂಗೂ ಅತ್ತೆ/ಮಾವಂದಿರ ಆಶೀರ್ವಾದಂಗೊ ಮುಂದಂಗೂ ಬೇಕು ಹೇಳಿ ಅಜಿತ ಕೇಳುತ್ತಾ ಇದ್ದo.

ಶರ್ಮಪ್ಪಚ್ಚಿ

   

You may also like...

11 Responses

  1. ಅಕ್ಷಯ ಭಟ್ says:

    ಹೇ ಮಾಣಿ, ನಿನ್ನ ಜೀವನ ಇನ್ನೂ ಉಜ್ವಲ ಆಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *