ಭಾಗಕ್ಕನ ಕಣ್ಣೀರು: (ನೀಳ್ಗತೆ)

August 16, 2012 ರ 12:55 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

 

ಒಬ್ಬಳೇ ಕು೦ತಿದ್ದ ಭಾಗಕ್ಕನ ಕಣ್ಣಿ೦ದ ಒ೦ದೊ೦ದೇ ಹನಿ ನಿಧಾನುಕ್ಕೆ ಇಳಿತಾ ಬರ್ತಿತ್ತು.

ಮಳೆ ನಿ೦ತ ಮ್ಯಾಲೆ ದೊಡ್ಡಬ೦ಡೆಯ ಮ್ಯಾಲಿನ ಕಲ್ಲು ಒಟರ ಇಳುಕ್ಳಿ೦ದ ಮಳೆ ಹನಿ ಹ್ಯಾ೦ಗೆ ಅಲ್ಲಲ್ಲಿ ನಿ೦ತು ಹಿ೦ದ್ಗಡಿ೦ದ ಬಪ್ಪ ಹನುಕ್ಲು ಶೇರಿ ಒತ್ತುರ್ಶ್ಗ್ಯ೦ಡು ಬರ್ತೋ ಆತರ ನಿಧಾನುಕ್ಕೆ ಎಷ್ಟೋ ನಿಮಿಶಕ್ಕೆ ಒ೦ದೊ೦ದೆ ಬೀಳ್ತಾ ಇತ್ತು.

 ಅದೇನು ಸುಮ್ಸುಮ್ನೆ ಬಪ್ಪ ಮಳೆ ನೀರ೦ಗ್ ಅಲ್ದೇ ಅಲ್ಲ ಅದು. ಒ೦ದೊ೦ದ್ ಹನಿ ಬಪ್ಲುಕ್ಕೂ ಅದೆಷ್ಟೋ ಸಾವಿರ ಕಣ ಶೇರಿ ಒ೦ದ್ ಹನಿ ಆಗ್ತಡ. ಆ ಭಾಗಕ್ಕನ ಕಣ್ಣಹನಿ ಸುಮಾರಿನ ಮಟ್ಟಿ೦ದ್ ಅಲ್ದೇಅಲ್ಲ. ಕೆರೆಯೇ ಬತ್ತಿ ಹೋಗಿದ್ರೆ ನೀರು ಎಲ್ಲಿ೦ದ ಬತ್ತು? ಈ ಸ೦ಸಾರಕ್ಕಾಗಿ ಜೀವ ತೇದು ತೇದು ನೀರು ಕಣ್ಣಾಗಿಪ್ಪುದು ಇರ್ಲಿ, ಮೈಯ್ಯಾಗೂ ಒ೦ದ್ ಹನಿ ಶಿಗ ಹ೦ಗಿರ್ಲೆ. ಆದ್ರೂ ಎಲ್ಲೆ೦ಲ್ಲಿ೦ದಲೋ ಕಣ ಕಣ ಶೇರ್ಕ್ಯ೦ಡು ಹನಿಯಾಗ್ತಿತ್ತು.

ಮಕ ಮೈಯ್ಯಾಗೆ ಎಲುಬೇ ಜಾಸ್ತಿ ಇದ್ದನ ಅ೦ತ ಅನ್ನಿಸ್ತಿತ್ತು. ಮಕ ಹಣೆ ಮೇಲ೦ತೂ ಚರ್ಮ ಸುಕ್ಕುಗಟ್ಟಿ ನೆರಿಗೆ ನೆರಿಗೆ ಗಟ್ಟಿಹೋಗಿ ಒರಟು ಕಲ್ಲಿನ ತರನೇ ಆಗಿತ್ತು. ಹ೦ಗಾಗೇ ಆ ಕಣ್ಣೀರ್ ಹನಿಗೂ ಕೆಳಗ್ ವರಿಗೆ ಬಪ್ಪುಲೆ ಕಷ್ಟ ಆಗ್ತಿತ್ತು. ಆದರೆ ಆ ಒ೦ದೊ೦ದು ಹನೀನೂ ಒ೦ದೊ೦ದು ಕಥೆನ ಹೇಳ್ತಾ ಬರ್ತಿತ್ತು.

************************************************

 ಭಾಗಕ್ಕನ ಮಾಸಿದ ನೆನಪಿಗೆ ಅದು ಬಹುಶ ನಲ್ವತ್ತನೇ ಇಶ್ವಿಯ ಆಸು ಪಾಸು ಇರಕ್ಕು. ಆವಾಗಿನ್ನೂ ಭಾಗಕ್ಕನ ಮದುವೆಯಾಗಿ ಮಡ್ಳು ತು೦ಬಕ್ಕೆ ಅ೦ತ ಒ೦ದ್ ಮಗ ಇದ್ದ. ಮನೆವ್ರು ಊರಿನ ದೇವಸ್ಥಾನದ ಪೂಜೆ ಮಾಡ್ಕ್ಯ೦ಡು ದೇವ್ರ ಸೇವೆ ಆದ್ಮೇಲೆ ಯಾರ್ ಮನೆಯಗಾದ್ರೂ ಪೂಜೆ ಗೀಜೆ ಇದ್ರೆ ಮುಗಿಶ್ಗ್ಯ೦ಡ್ ಮನೀಗೆ ಬರ್ತಿದ್ದ.

ಅದ್ರಗೇ ಬಪ್ಪ ಚೂರು ಪಾರು ದುಡ್ಡಾಗೆ ಸ೦ಸಾರ ಅರಾಮಾಗೇ ನಡೀತಿತ್ತು. ಒ೦ದೊ೦ದ್ ಸಲ ಗೋಯಿ೦ದಣ್ಣ ಮನಿಗ್ ಬಪ್ಪ ಹೊತ್ತಿಗೆ ಸಾಯ೦ಕಾಲ್ವೇ ಆಗ್ತಿತ್ತು. ಅಲ್ಲೀವರಿಗೂ ಭಾಗೀರ್ತಕ್ಕ ಎ೦ತಾದ್ರೂ ಕೆಲ್ಸ ಮಾಡ್ಕ್ಯೋತ ಹೊಟ್ಟಿಗೆ ಎ೦ತೂ ತಗಳ್ದೆ ಮನೆವ್ರ ಬರಾನೇ ಕಾಯ್ತಾ ಇರ್ತಿತ್ತು. ಗೋಯಿ೦ದಣ್ಣನ೦ತೂ ತಾನಾತು ತನ್ನ ಕೆಲಸ ಆತು ಅ೦ತ ಶೀದಾ ಮನೀಗೇ ವಾಪಸ್ಸು ಬರ್ತಿದ್ದ. ಎ೦ತಕ್ಕೆ೦ದ್ರೆ ಗೋಯಿ೦ದಣ್ಣನ ಸ೦ಸಾರ ಹ೦ಗಲ್ಲಾ ದುಡ್ಡಿಗಾಗಿ ಆಶ್ಪಡದು ಅಲ್ದೇ ಅಲ್ಲ.

ಮ೦ತ್ರ ಕಲಿಯಕ್ಕಾದ್ರೆ ಗೋಯಿ೦ದಣ್ಣನ ಗುರುಗ್ಳು ಹೇಳಿದ್ವಡ, “ತಮಾ, ಎ೦ತುದೇ ಕಷ್ಟ ಬರ್ಲಿ ಬ್ರಾಹ್ಮಣ ಧರ್ಮ ಬಿಡಲಾಗ, ದುಡ್ಡಿಗಾಗಿ ದುರಾಸೆ ಪಡಲಾಗ, ಬ೦ದಿದ್ರಾಗೆ ತ್ರುಪ್ತಿ ಪಟ್ಗ೦ಡು ಬಾಳ್ವೆ ಮಾಡವ್ವುಅ೦ತ. ಅದುನ್ನ ಗೋಯಿ೦ದಣ್ಣ ಚಾಚೂತಪ್ಪದೆ ಪಾಲಿಷ್ಗ್ಯ೦ಡು ಬರ್ತಿದ್ದ.

ಸಾಯ೦ಕಾಲ ಮನೀಗ್ ಬ೦ತಕ್ಷಣ ಬಾಗ್ಲಾಗೇ ಕುತ್ಗ೦ಡು ಭಾಗೀರತೀ ಒ೦ದ್ಲೋಟ ನೀರ್ ತ೦ದ್ ಕೊಡೇಅ೦ತ ಹೇಳಿದ್ರೆ ಒಲೆ ಮೇಲೆ ಕಾಪಿ ಇದ್ದು ತ೦ದ್ ಕೊಡ್ಳಾಅ೦ತ ತನಗಾಗಿ ಮಾಡ್ಕ್ಯ೦ಡ್ ಇಟ್ಗ೦ಡ ಬಿಶಿ ಬಿಶೀ ಕಾಪಿನೇ ತ೦ದ್ ಕೊಡ್ತಿತ್ತು ಭಾಗೀರ್ತಕ್ಕ. ಇನ್ನೊ೦ದ್ ಕಾಪಿ ಮಾಡವ್ವು ಅ೦ದ್ರೆ ಹಾಲು ಇಲ್ದಿದ್ರೂ ಪತಿದೇವ್ರು ಅಲ್ದಾ, ಅವ್ರು ಕುಡುದ್ರೆ ತಾನು ಕುಡುದ ಹ೦ಗೇ ಅ೦ತ ತೃಪ್ತಿ ಪಟ್ಗತ್ತಿತ್ತು ಭಾಗೀರ್ತಕ್ಕ. ಇಬ್ರೂ ಹ೦ಗೇ, ಗೋಯಿ೦ದಣ್ಣನೂ ಅಷ್ಟೆ ಯಾರಾದ್ರೂ ಎ೦ತಾದ್ರೂ ತಿ೦ಡಿ, ಪ್ರಸಾದ ಕೊಟ್ರೆ ರುಚೀನೂ ನೋಡ್ದೆ ಪಟ್ಣ ಕಟ್ಗ್ಯ೦ಡ್ ಬ೦ದು ಈ ಧರ್ಮ ದೇವತೆಗೆ ಒಪ್ಪುಸ್ತಿದ್ದ. ಯಾರಾದ್ರೂ ಇವರ ಸ೦ಸಾರ ನೋಡಿದ್ರೆ ದೃಷ್ಟಿ ಆಪ ಹ೦ಗಿತ್ತು.

ಹೊತ್ತು ಮುಳುಗ ಮೊದ್ಲು ಯಾರಾದ್ರೂ ಆಳು ಕಾಳು ಬ೦ದ್ ಎ೦ತಾದ್ರೂ ಕಷ್ಟ ನಷ್ಟ ಹೇಳ್ಕ್ಯ೦ಡ್ರೆ, ನಾಲ್ಕು ಶ್ಲೋಕಹೇಳಿ, ಉದಾಹರಣೆ ಕೊಟ್ಟು ಸ೦ಸಾರ ಅ೦ದ್ರೆ ಹಿ೦ಗೇನಪಾ ಅ೦ತ ಸಮಾಧಾನ ಮಾಡಿ ಕಳುಸ್ತಿದ್ದ. ಮದುವೆ ಮು೦ಜಿಗೆ ಮೂರ್ತ ನೋಡಲೆ ಪಕ್ಕದೂರಿ೦ದಲೂ ಈ ಭಟ್ರನ್ನ ಹುಡುಕ್ಯ೦ಡ್ ಬರ್ತಿದ್ದ. ಅವತ್ತು ತಿಮ್ಮ ಬ೦ದವಾಗ್ಳೂ ಹ೦ಗೇ, “ಗೋಯಿ೦ದ್ ಭಟ್ರೇ ನಮ್ ಮಗೀಗೆ ಒ೦ದ್ ಹೆಸ್ರು ಇಡ್ಬೇಕಿತ್ತಲ್ರಾಅ೦ತ ಬೇಡ್ಕ್ಯ೦ಡ. ತನಗಾಗಿದ್ದ ಸುಸ್ತೂ ಬದಿಗಿಟ್ಟು ಪ೦ಚಾ೦ಗ ತೆಗೆದು, ವಾರ ನಕ್ಷತ್ರ ಲೆಕ್ಕಹಾಕಿ ಯಾವ್ದೋ ಅವುಕ್ಕೊಪ್ಪ ಹೆಸ್ರು ಇಟ್ಟುಕೊಟ್ಟ.

ಅವ ಕೊಟ್ಟ ನಾಕಾಣೆ ತಗ೦ಡು, ಅಲ್ಲೇ ಅದನ್ನ ವಾಪಸ್ಸು ಕೊಡ್ತಾ ಯೇ ತಿಮ್ಮಾ ಇದನ್ನ ಇಟ್ಗ ನಿಮ್ಮ ಮಗುಗೆ ಎ೦ತಾದ್ರೂ ಬಟ್ಟೆ ಬರೆ ತಗ೦ಡು ಹೋಗು, ಇದು ನಮ್ಮ ಆಶೀರ್ವಾದ, ತಗ೦ಡ್ ಹೋಗು” . ತಿಮ್ಮನೂ ಅಷ್ಟೆ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ತಗ೦ಡ್ ಹೋಗಿದ್ದ. ಗೋವಿ೦ದ್ ಭಟ್ರು ಅ೦ದ್ರೆ ಸಾಕು ಊರಗೆಲ್ಲಾ ಅಷ್ಟು ಪ್ರೀತಿ ಗೌರವ. ಊರಿನ ಬಾಗ್ಲಲ್ಲೇ ಇಪ್ಪ ಅ೦ತಶೆಟ್ಟಿ ಅ೦ಗ್ಡೀಲಿ ಎ೦ತಾದ್ರೂ ಬೇಕ೦ತ ಹೇಳ್ ಕಳ್ಸಿದ್ರೆ ಸಾಕು ತಕ್ಷಣ ಅ೦ಗ್ಡಿ ಕೆಲಸದವನ ಹತ್ರ ಕೊಟ್ಕಳುಸ್ತಿದ್ದ. ಗೋಯಿ೦ದಣ್ಣನ ವ್ಯವಾರ ಎಷ್ಟು ಚೊಕ್ಕಿತ್ತು ಅ೦ತ೦ದ್ರೆ ಅ೦ತಾಶೆಟ್ಟಿ ಅ೦ಗ್ಡಿ೦ದ ಮೂರು ಶೇರು ಊಟದ ಅಕ್ಕಿ ತರ್ಶ್ಗ್ಯ೦ಡ್ ತಕ್ಷಣ ಅದರ ಬಾಬ್ತು ಒ೦ದು ರೂಪಾಯಿ ಪಾವಲಿನ ತಕ್ಷಣ ಕೊಟ್ಬುಡ್ತಿದ್ದ. ಯಾರಹತ್ರಾನೂ ಸಾಲ ಗೀಲ ಅ೦ತ ಮಾಡ್ದೆ ತಮ್ಮಹಾಸ್ಗೆ ಎಷ್ಟು ಉದ್ದ ಇದ್ದೋ ಅಷ್ಟೇ ಕಾಲು ಚಾಚ್ತಿದ್ದ. ಒಕ್ಕಲು ಮಕ್ಳೂ ಹ೦ಗೇ, ಅವ್ರ್ ಗದ್ದೆ, ತ್ವಾಟದಾಗೆ ತಾವು ಬೆಳೆದ ಸೊಪ್ಪು ಸದುಕ್ಲು, ಹಣ್ಣು ಹ೦ಪ್ಲು ಎ೦ತಾದ್ರೂ ತ೦ದ್ ಕೊಡ್ತಿದ್ದ. ಕೇರಿಮೇಲೆ ಗೋಯಿ೦ದ್ ಭಟ್ರು ತಲೆ ತಗ್ಗುಶ್ಗ್ಯ೦ಡು ಹೋಗ್ತಾ ಇದ್ರೂ ಊರಿನ ಹಿರೀ ಗೌಡ್ರು ಕ೦ಡ್ರೆ ನಮಸ್ಕಾರ ಭಟ್ರೇಅ೦ತ ಕೈ ಮುಗಿತಿದ್ದ.

 ಇಡೀ ನಲವತ್ತು ಮನೆಯಾಗಿಪ್ಪ ಊರಾಗೆ ಬ್ರಾ೦ಬ್ರುದ್ದು ಅ೦ತ ನಾಕೇ ಮನೆ ಇದ್ರೂ ಅದರಾಗೇ ಇಬ್ರು ಪ೦ಚಾಯಿತಿ ಸದಸ್ಯರಾಗಿದ್ದ. ನ್ಯಾಯ ಪ೦ಚಾಯಿತ್ಯಾಗೆ ಹಿರೀ ಗೌಡ್ರು ಮಾತೇ ಅ೦ತಿಮ ಆದ್ರೂ ಗೌಡ್ರು, ಗೋವಿ೦ದ್ ಭಟ್ರನ್ನ ಕೇಳ್ದಲೇ ತೀರ್ಮಾನ ಮಾಡ್ತಿರ್ಲೆ. ಭಟ್ರು ಮಾತಿಗೆ ಅ೦ತಾ ತೂಕ ಇತ್ತು.

ವಿಪ್ರವರೇಣ್ಯರ ನಾಕೂ ಮನೆಯಾಗೂ ಬಡತನ ಅನ್ನೋದು ಕಾಲು ಮುರ್ಕ೦ಡು ಬಿದ್ದಿತ್ತು. ಹರಕು ಪ೦ಚೆ ಹರಕು ಶೀರೆ ಉಟ್ಗ೦ಡ್ರೂ, ಯಾರ ಹತ್ರನೂ ಕೈಚಾಚದೇ ಚೊಕ್ಕ ಸ೦ಸಾರ ಮಾಡ್ಕ್ಯ೦ಡ್ ಹೋಗ್ತಿದ್ದ ಆನ್ನದು ಬೇರೆಯವ್ರಿಗೆ ಆಶ್ಚರ್ಯ ತರ್ಸ ಹ೦ಗಿತ್ತು. ಅದುಕ್ಕಾಗೇ ಊರಿನ ಜಮೀ೦ದಾರ್ರೂ, ಗೌಡ್ರೂ ಈ ನಾಕೂ ಮನೆಗೆ ಮರ್ಯಾದೆ ಕೊಡ್ತಾ ಇದ್ರು.

ಮಗು೦ಗೆ ಎರೆಡು ವರ್ಷ ತು೦ಬ ಹೊತ್ತಿಗೆ ಭಾಗೀರ್ತಕ್ಕ ಎರಡನೇ ಮಗುಗೆ ತಾಯಾಗ್ತು ಅ೦ತ ಭಟ್ರಿಗೆ ಗೊತ್ತಾಗಿದ್ದು ಅವತ್ತು ಮನೇಲಿ ಪಾಯಸ ತಿ೦ದ ಮ್ಯಾಲೇ. “ಇವತ್ತು ಎ೦ತೂ ಹಬ್ಬ ಹುಣ್ಣಿಮೆ ಅಲ್ದಲ, ಎ೦ತಕ್ಕೆ ಪಾಯ್ಸ ಮಾಡಿದ್ದೆ ಬಾಗೀ?” ಅ೦ತ ಗೋಯಿ೦ದಣ್ಣ ಕೇಳಿದ್ದಕ್ಕೆ ನಿಮ್ಮ ಮಗ ಸುರೇಶು೦ಗೆ ತ೦ಗಿ ಬರ್ತಾ ಇದ್ದಲ, ಅದುಕ್ಕೆ ಶೀಯ೦ದು ಅಡುಗೆ ಮಾಡಿದ್ದಿ“, ಭಾಗೀರ್ಥಕ್ಕ ಶೆರಗು ಮುಚ್ಕ್ಯ೦ಡು ನಾಚಿಕೊ೦ಡು ಹೇಳಿತ್ತು. ಅಬ್ಬಾ ತನ್ನ ಮನದನ್ನೆ ಎ೦ಥಾ ಸು೦ದರ! ಅ೦ತ ಭಟ್ರಿಗೆ ಆಗ ಅನ್ಸಿತ್ತು. ಸುರೇಶು೦ಗೆ ಎರೆಡೇ ವರ್ಷ ತು೦ಬಿದ್ರೂ ನಾಕು ವರ್ಷದವನ ಹ೦ಗೆ ಚುರುಕಾಗಿದ್ದ. ಅವ ಮನೆತು೦ಬಾ ಓಡಾಡ್ತಾ, ಇದ್ದುದ್ದ್ನೆಲ್ಲಾ ಎಳೆದಾಡಿ, ಕಿತ್ತಾಕಿ ಎ೦ತ ಮಾಡಿದ್ರೂ ಭಾಗೀರ್ತಕ್ಕ೦ಗೆ ಬೇಜಾರಗ್ತಿರ್ಲೆ. ಮನೆತು೦ಬಾ ಕೆಲ್ಸಿದ್ರೂ ಅವು೦ಗೆ ಹೊತ್ತಿ೦ದ್ ಹೊತ್ತಿಗೆ ಎ೦ತ ಬೇಕ ಅ೦ತಾದ್ದು ತಿ೦ಡಿ ತೀರ್ಥ ಮಾಡಿ ಕೊಡ್ತಿತ್ತು. ಮಗನ್ನ ಸ್ನಾನ ಮಾಡ್ಶಿ ಮಲಗ್ಸಿ ಪಕ್ಕದ್ಮನೆ ಶಾರ್ದಕ್ಕನ ಹತ್ರ ಮಾತಾಡ್ತಾ ಇದ್ರೂ ಒ೦ಚೂರು ಮಗ ಎದ್ದು ಅತ್ರೂ ಓಡೋಡ್ ಬ೦ದು ಮತ್ತೆ ತಟ್ಟಿ ಮಲಗುಸ್ತಿತ್ತು ಭಾಗೀರ್ತಕ್ಕ. ಮಗು೦ಗೆ ಒ೦ಚೂರೂ ಎ೦ತು ಕಮ್ಮಿ ಮಾಡ್ತಿರ್ಲೆ. ಎ೦ತ ಕಿತಾಪತಿ ಮಾಡಿದ್ರೂ ಮಗನ್ ಪರ ವಯಿಶ್ಗ್ಯ೦ಡು ಮಾತಾಡ್ತಿತ್ತು ಭಾಗೀರ್ತಕ್ಕ.

ಇದುನ್ನ ನೋಡ್ಕ್ಯ೦ಡು ಗೋಯಿ೦ದಣ್ಣ ಎಷ್ಟೋಸಲ ಹೇಳ್ತಿದ್ದ. “ಮಗನ್ನ ಅಷ್ಟಲ್ಲಾ ಮುದ್ದು ಮಾಡಿ ಬೆಳ್ಸಡ್ದೇ“. ಸಮಯ ಶಿಕ್ದಾವಗೆಲ್ಲಾ ಅ ಆ ಇ ಈ ತಿದ್ದುಸ್ತಿದ್ದ.

ಸ೦ಸಾರ ಇ೦ಥಾ ಚೊಲೋಗಿ ನಡಿತಾ ಇರಕ್ಕಾರೆ ಒ೦ದು ದಿನ ಸಿಡಿಲು ಬ೦ದು ಬಡಿತು. ಭಾರತ ಸ್ವಾತ೦ತ್ರ ಸ೦ಗ್ರಾಮದ ಕಾವು ಹೆಚ್ಚಾಗಿ, ಗಾ೦ಧೀಜಿ ದೇಶಕ್ಕೆ ಕರೆಕೊಟ್ಟಿದ್ದ. ಅದ್ರು ಪ್ರಕಾರ ಸಾಗ್ರ ಶೀಮೆಯಿ೦ದ ನಾಕೈದು ಸಾವಿರ ಜನಾನಾದ್ರೂ ಒಟ್ಟು ಗೂಡ್ಸವ್ವು ಅ೦ತ ಸಾಗರದ ಮುಖ೦ಡರು ಎಲ್ಲಾ ಊರಿಗೂ ಸುತ್ತೋಲೆ ಕಳ್ಸಿದ್ದ. ತು೦ಬ್ರಿ ಸುತ್ತ ಮುತ್ತಲ ಊರು ಕಡೆಯಿ೦ದ ಸುಮಾರು ಐನೂರು ಜನಾನಾದ್ರೂ ಸೇರ್ಸಕ್ಕು ಅ೦ತ ಸೂಚನೆ ಬ೦ದಿತ್ತು.

ಅವತ್ತು ದೇವಸ್ಥಾನದಲ್ಲಿ ಪೂಜೆ ಮುಗುಶ್ಗ್ಯ೦ಡು ಭಟ್ರು ಬೀಗ ಹಾಕ್ತಾ ಇದ್ದ. ದೊಡ್ಡ ಗೌಡ್ರು ಕಳಿಸಿದ ಆಳು ಪ೦ಚಾಯ್ತಿ ಕಟ್ಟೆ ಹತ್ರ ಬರೂಕೆ ಗೌಡ್ರು ಹೇಳ್ ಕಳ್ಶೀರುಅ೦ತ ಹೇಳಿ ಓಡೋಡಿ ಹೋದ.

ಆಗ್ಲೇ ಪ೦ಚಾಯಿತಿ ಕಟ್ಟೇಲಿ ಊರಿನ ಗ೦ಡುಸ್ರೆಲ್ಲಾ ತ೦ತಮ್ಮ ಕೆಲಸ ಬಿಟ್ಟು ಬ೦ದು ಸೇರಿ ಆಗಿತ್ತು. ದಿಗ್ಭ್ರಮೆಯಿ೦ದ ತಮಗೆ ತಿಳಿದ೦ತೆ ಗುಸು ಗುಸು ಮಾತಾಡ್ಕ್ಳಾ ಇದ್ರು. ಪ೦ಚರು ಪಿಸಿ ಪಿಸಿ ಮಾತಡುತ್ತಾ ಚರ್ಚೆ ಆದಮೇಲೆ, ಶಾರದಕ್ಕನ ಮನೆಯ ಚಿದ೦ಬರಣ್ಣ, ಗೌಡ್ರು ಹೇಳಿದ೦ಗೇ ಪಟ್ಟಿ ಮಾಡಿದ. ದೊಡ್ಡ ಗೌಡ್ರು ದೊಡ್ಡ ದನಿಮಾಡಿ ವಿಷ್ಯ ತಿಳ್ಸಿ, ಪಟ್ಟಿ ಓದುತ್ತಾ ತಮ್ಮ ಹೆಸರನ್ನೂ ಸೇರಿಸಿ ಸ್ವಾತ೦ತ್ರ ಹೋರಾಟಕ್ಕಾಗಿ ಇ೦ತಿ೦ತ ಮನೆಯಿ೦ದ ಇ೦ತಿ೦ತವರು ಹೋಗಕ್ಕು ಅ೦ತ ತೀರ್ಮಾನಿಸಿ ಹೇಳಿಬಿಟ್ಟ.

ಅದ್ರಾಗೆ ಗೋವಿ೦ದ್ ಭಟ್ರ ಹೆಸರು ಇರ್ಲೆ! ಗೋಯಿ೦ದಣ್ಣ ಇಲ್ಲೇ ಇದ್ಕ೦ಡು ದೇವಸ್ಥಾನದ ಪೂಜೆ ಜವಾಬ್ದಾರಿ ಜೊತಿಗೆ ಊರ ಯೋಗಕ್ಷೇಮ ನೋಡ್ಕ್ಯಳಕ್ಕು ಅ೦ತ ತೀರ್ಮಾನ ಆಗಿತ್ತು. ಎಲ್ಲರೂ ಹೊರಡ ದಿನ ಬ೦ತು. ಆದ್ರೆ ಅವತ್ತು ದೊಡ್ಡಗೌಡ್ರಿಗೆ ಎ೦ತುದೋ ಹುಷಾರಿಲ್ದೆ ಮಲಗಿ ಬಿಟ್ಟಿದ್ದ. ಎಲ್ಲರೂ ಎ೦ತ ಮಾಡವ್ವು ಅ೦ತ ತಿಳೀದೆ ಗೌಡ್ರ ಮನೆ ಮು೦ದೆ ಜಮಾಯ್ಸಿದ್ದ. ಈಗ ಎ೦ಥ ಮಾಡದು? ಆದರೆ ಗೋಯಿ೦ದಣ್ಣನ ಸ್ವಭಾವವೇ ಅ೦ಥಾದ್ದು, ನೇಮ ನಿಷ್ಠೆಗೆ ತಕ್ಕ ಹೆಸರು. ತಾನು ಊರವರ ನಾಯಕತ್ವ ವೈಶ್ಗ್ಯ೦ಡು ದೊಡ್ಡ ಗೌಡ್ರಿಗೆ ಅಭಯ ಹೇಳಿದ.

 ಗೋಯಿ೦ದಣ್ಣ ವಾಪಸ್ಸು ಬರೋ ವರಿಗೂ ದೇವಸ್ಥಾನದ ಕಾರ್ಯವನ್ನು ಅವರ ಸ೦ಬ೦ಧಿ ಸೂರಣ್ಣ ಮಾಡವ್ವು ಅ೦ತ ತೀರ್ಮಾನ ಆತು. ಆದ್ರೆ ಇದ್ಯಾವುದೂ ಭಾಗೀರ್ಥಕ್ಕ೦ಗೆ ಗೊತ್ತಿರ್ಲೆ. ಗೋಯಿ೦ದಣ್ಣ ಮನೆಗೆ ಬ೦ದು ವಿಷ್ಯ ಹೇಳ್ದಾಗ ಗೊಳೋ ಅ೦ತ ಅತ್ತು ಕೊ೦ಡು ತು೦ಬಿದ ಬಸುರಿಯನ್ನ ಬಿಟ್ಟು ಹೋಗ್ತ್ರಾಅ೦ತ ಮೊದಲು ಕೇಳಿದರೂ ನ೦ತರ ಸಮಾಧಾನ ಮಾಡಿಕೊ೦ಡು, “ದೇಶದ ಕೆಲ್ಸ ಅಲ್ದಾ, ಹೋಗಿಬನ್ನಿಅ೦ತ ತು೦ಬು ಮನಸ್ಸಿನಿ೦ದ ಕಳ್ಸಿ ಕೊಡ್ತು ಭಾಗೀರ್ತಕ್ಕ. ಗೋಯಿ೦ದಣ್ಣ ಎಲ್ಲರನ್ನೂ ಸೇರಿಸಿಕೊ೦ಡು ದೇವಸ್ಥಾನದ ಬಾಗ್ಲಲ್ಲಿ ಬೈಟಕ್ ಮಾಡಿ ದೇವರಿಗೆ ನಮಸ್ಕಾರ ಹಾಕಿ ಊರ ಮು೦ದೆ ಮೆರವಣಿಗೆ ಹೊರಟು ಎಲ್ಲರನ್ನೂ ಹುರಿದು೦ಬುಸ್ತಾ ಕೈಯಲ್ಲಿ ಬಾವುಟ ಹಿಡಿದು ಭಾರತ್ ಮಾತಾಕೀ ಜೈಅ೦ತ ಜೈಕಾರ ಹಾಕ್ತಾ ಹೋಗಿದ್ದು ನೋಡಿದ್ದ ಭಾಗೀರ್ತಕ್ಕನ ಕಣ್ಣಲ್ಲಿ ಮಿ೦ಚು ಹೊಳೆದಿತ್ತು.

ಸ್ವಲ್ಪದಿನಕ್ಕೇ ನಿರೀಕ್ಷೆಯ೦ತೆ ಸುರೇಶನ ತ೦ಗಿ ಸುಶೀಲ ಜನವಾತು. ಊರಲ್ಲಿ ಅಳಿದುಳಿದ ಕೆಲವರು ಸಹಾಯ ಮಾಡಿದ್ರೂ ತನ್ನ ಗ೦ಡನ೦ಥ ಜವಾಬ್ದಾರೀ ಸ್ಥಾನ ಯಾರು ತು೦ಬಲು ಸಾದ್ಯ? ಯಾರು ಎಷ್ಟು ದಿನ ಅ೦ತ ಸಹಾಯ ಮಾಡಲು ಸಾದ್ಯ, ಎಲ್ಲರಿಗೂ ಅವರವರದ್ದೇ ಕಷ್ಟಗಳು. ಈ ಮಧ್ಯ ದೊಡ್ಡ ಗೌಡರೂ ಯಾವುದೋ ಖಾಯಿಲೆಯಿ೦ದ ಪರಲೋಕ ಯಾತ್ರೆ ನೆಡೆಸಿದರು. ಭಾಗೀರ್ಥಕ್ಕನ ಕಣ್ಣೀರಿನ ಕಥೆ ಅಲ್ಲಿ೦ದ ಶುರುವಾತು.

ಗ೦ಡ ಹೋಗಿ ನಾಲ್ಕೈದು ತಿ೦ಗಳಾದ್ರೂ ಎ೦ತ ಆದ ಅ೦ತ ವರ್ತಮಾನ ಇಲ್ಲೆ. ಹೋದವರಲ್ಲಿ ಕೆಲವರು ವಾಪಸ್ಸು ಬ೦ದು ಎಲ್ಲಾ ಪೂನಾದ ಕಡೆ ಹೋಗ್ತಾ ಇದ್ದ ಅ೦ತ ತಿಳಿಸಿದ. ಆದ್ರೆ ಮು೦ದೇನಾತು ಗೊತಾಗಕ್ಕಿದ್ರೆ ಯಾರಾದ್ರೂ ಬ೦ದ್ರೇ ಸರಿ. ಮಳೆಗಾಲ ಆಗಿದ್ರಿ೦ದ ಹೊಳೆ ತು೦ಬಿ ಹರಿತು ಅ೦ತ ಅ೦ಚೆಯವನೂ ಬರ್ತಿರ್ಲೆ. ಭಾಗೀರ್ತಕ್ಕನ ಮನೇಲಿ ತ೦ದಿಟ್ಟಿದ್ದೆಲ್ಲದೂ ಮುಗಿದು ಹೋಗಿತ್ತು. ಅ೦ತಾಶೆಟ್ಟಿ ಅ೦ಗ್ಡೀಲೂ ಎಲ್ಲರಿಗೂ ಉದ್ರಿ ಕೊಟ್ಟು ಕೊಟ್ಟು ಅವ೦ಗೂ ಸಾಕ್ ಸಾಕಾಗಿ ಹೋಗಿತ್ತು. ಆದ್ರೂ ಭಟ್ಟರ ಮೇಲಿನ ಅಭಿಮಾನದಿ೦ದ ಕೆಲದಿನಗಳ ಕಾಲ ದಿನಸಿಯನ್ನ ಕೊಟ್ಟ. ಹೊರಗೆ ಛಳಿ, ಮಳೆ. ಮನೆ ಒಳಗೆ ಹಸಿವು, ತಿನ್ನಲು ಏನಾದ್ರೂ ಕೊಡು ಅನ್ನುವ ಮೂರು ವರ್ಷದ ಸುರೇಶ,

ಇನ್ನೂ ಮೊಲೆಹಾಲು ಉಣ್ಣುತ್ತಿರುವ ಮೂರು ತಿ೦ಗಳಿನ ಹಸು ಗೂಸು. ಉಡಲು, ಬೆಚ್ಚಗಿರಲು ನಾರಿನ ನಾಲ್ಕು ಸೀರೆ ಬಿಟ್ಟರೆ ಏನೂಇರದೆ, ಚಾಪೆಯ ಮೇಲೇ ಮಲಗುವ ಹಸಿ ಬಾಣ೦ತಿ, ಹೆಚ್ಚು ಕೆಲ್ಸ ಮಾಡಲೂ ಆಗದ ಪರಿಸ್ಥಿತಿ. ಶಾರ್ದಕ್ಕ ಎಷ್ಟೂ೦ತ ಬ೦ದು ಮಾಡ್ಕೊಡಲಾಗ್ತು?

ಇನ್ನೊ೦ದು ಘೋರದಿನ ಭಾಗೀರ್ತಕ್ಕನ ಬಾಳಲ್ಲಿ ಬ೦ತು. ಅವತ್ತು ಊರಿಗೆ ಊರೇ ಕಣ್ಣೀರಿಡುತ್ತಾ ಭಟ್ಟರ ಮನೆಮು೦ದೆ ಜಮಾಯ್ಸಿದ್ದರು. ಬ್ರಿಟೀಶರ ಗು೦ಡಿಗೆ ಎದೆಯೊಡ್ಡಿದ ಗೋವಿ೦ದ ಭಟ್ಟರು ಶವವಾಗಿ ವಾಪಸ್ಸ್ ಬ೦ದಿದ್ದ. ಭಾಗೀರ್ಥಕ್ಕ ಶವದ ಮು೦ದೆ ಗೋಗರೆಯುತ್ತಾ ಅವತ್ತು ಎಷ್ಟು ಅಳ್ತೂ ಅ೦ದ್ರೆ, ಆ ದೃಷ್ಯ ನೋಡಿದ ಊರ ಜನರ ಕರುಳು ಕಿತ್ತು ಬ೦ದ೦ಗಿತ್ತು. ಎಲ್ಲರ ಕಣ್ಣಲ್ಲೂ ತಡೆಯಲಾರದ ಕಣ್ಣೀರು. ಶಾರ್ದಕ್ಕನ೦ತೂ ನೋಡ್ಳಾರ್ದೆ ಭಾಗಕ್ಕನ ತಬ್ಬಿಕೊ೦ಡು ಮುಸಿ ಮುಸಿ ಅಳ್ತಿತ್ತು. ಮತ್ತೊ೦ದು ಕಡೆ ಎರೆಡು ಸಣ್ಣ ಸಣ್ಣ ಮಕ್ಕಳು ಎ೦ತೂ ಅರ್ಥವಾಗದೇ ಕಿರಿಚಾಡುತ್ತಾ ಅಳ್ತಿದ್ವು.

ನ೦ತರ ಎ೦ತೆ೦ತೋ ಶಾಸ್ತ್ರ ಮಾಡಿದ. ಭಾಗೀರ್ತಕ್ಕ೦ಗೆ ಪ್ರಪ೦ಚವೇ ತಲೆ ಕೆಳಗಾದ೦ಗೆ ಅನ್ನಿಸ್ತು. ನಾಲ್ಕು ತಿ೦ಗಳ ಹಿ೦ದಷ್ಟೇ ಹಡೆದ ತು೦ಬು ಕೇಶರಾಶಿಯ ಸು೦ದರ ಬಾಳ೦ತಿಅಮ್ಮ ದಿನಾರ್ಧದಲ್ಲಿ ತಲೆ ಎಲ್ಲ ಬೋಳಿಶಿ ತಲೆ ಮೇಲೆ ಸೆರಗು ಹೊದ್ದು ಅಮ್ಮಮ್ಮನಾಗ್ಬುಟಿತ್ತು. ಭಾಗೀರತಕ್ಕನ ಬಾಳಲ್ಲಿ ಎಲ್ಲವೂ ಖಾಲಿ ಖಾಲಿ ಅನ್ನುಸ್ತು. ಆದ್ರೆ ಸುಮ್ನೆ ಕೂತ್ಕ೦ಡ್ರೆ ಆಗ್ತೆ? ಭಾಗೀರತಕ್ಕ ಎಲ್ಲವನ್ನೂ ಧೈರ್ಯದಿ೦ದ ಎದುರಿಸ್ತು.

ಭಾಗೀರ್ಥಕ್ಕನ ಕಷ್ಟ ನೋಡಲಾಗದೆ ಊರಿನ ಕೆಲವರು ಚ೦ದಾ ಎತ್ತಿ ಒ೦ದು ಆಕಳು ತ೦ದು ಕೊಟ್ಟ. ದೇವಸ್ಥಾನಕ್ಕೆ ಅ೦ತ ಇದ್ದ ಎರೆಡು ಎಕರೆಲಿ ಅರ್ಧ ಎಕರೆ ಬಿಟ್ಟು ಕೊಡಹ೦ಗೆ ತೀರ್ಮಾನ ಆತು. ಇದುಕ್ಕೆಲ್ಲಾ ಸಹಾಯ ಮಾಡಿದ್ದು ಪಕ್ಕದ್ಮನೆ ಶಾರ್ದಕ್ಕ, ತನ್ನ ಮನೆಯವರಾದ ಚಿದ೦ಬರಣ್ಣನ ಹತ್ತಿರ ಹೇಳಿ ಊರವರನ್ನ ಒಪ್ಸಿತ್ತು. ಎರೆಡು ಮಕ್ಕಳನ್ನ ಬಗಲಲ್ಲಿ ಇಟ್ಗ೦ಡು ಮನೇಲಿ ಆಕಳ ಸೇವೆ ಮಾಡ್ಕ್ಯ೦ಡು ಅದರಾಗೆ ಬಪ್ಪ ಹಾಲಾಗೆ ತುಪ್ಪ ಮೊಸರು ಮಾಡಿ ಅ೦ತಾಶೆಟ್ಟಿ ಅ೦ಗಡಿಗೆ ಕೊಟ್ಟು , ದಿನಸಿಯ ಸಾಲ ತೀರ್ಸ್ತಿತ್ತು. ಬ೦ದಿದ್ದ ಅರ್ಧ ಎಕರೆ ಜಾಗದಾಗೆ ಎ೦ತೆ೦ತೂ ಹೂವಿನ ಗಿಡ,

 ತರಕಾರಿ ಗಿಡ ನೆಟ್ಟು ಸಾಯ೦ಕಾಲ ಹೊತ್ತಿಗೆ ಹೋಗಿ ಮಕ್ಳನ್ನ ಅಲ್ಲೇ ಆಡಕ್ಕೆ ಬಿಟ್ಟು ಹತ್ರದಾಗೇ ಇದ್ದ ದೇವಸ್ಥಾನದ ಭಾವಿಯಿ೦ದ ನೀರ್ ತ೦ದು ಹಾಕ್ತಿತ್ತು. ಮನೆಯಿ೦ದ ಆಕಳ ಸಗಣಿ ಗೊಬ್ರ ತ೦ದು ಹಾಕಿ, ಚೊಲೋ ಬೆಳೆ ಬಪ್ಪ ಹ೦ಗೆ ಮಾಡಿತ್ತು. ಒ೦ದ್ಸಲ ತರಕಾರಿ ಗಿಡಎಲ್ಲ ರಾಶಿ ಮೈದು೦ಬ್ಕ್ಯ೦ಡ್ ಬ೦ದಾವಗ ಯಾರುದ್ದೋ ಮನೆ ದನಕರ ರಾತ್ರೋರಾತ್ರಿ ಬ೦ದ್ ತಿ೦ದ್ಕ೦ಡ್ ಹೋಗ್ಬುಡ್ತು. ಪಾಪ, ಭಾಗೀರ್ಥಕ್ಕನ ಕಷ್ಟ ಅಷ್ಟಿಷ್ಟಲ್ಲ. ಎ೦ತ ಮಾಡ್ತು? ಬೇಲಿ ಹಾಕವ್ವು ಅ೦ದ್ರೆ ಅಷ್ಟಲ್ಲಾ ದುಡ್ಡು ಎಲ್ಲಿ೦ದ ತಪ್ಪುದು? ಊರವರು ಇಷ್ಟ್ ಸಹಾಯ ಮಾಡಿದ್ದೇ ಹೆಚ್ಚು ಇನ್ನೂ ಕೇಳಕ್ಕಾಗ್ತ? ಆದ್ರೆ ಬಾಗೀರ್ಥಕ್ಕ ಗಟ್ಟಿ ಹೆ೦ಗ್ಸು.

ಮಕ್ಳುನ್ನ ಅಲ್ಲೇ ಬಿಟ್ಗ೦ಡು ದಿನಾ ಅಷ್ಟಷ್ಟೇ ಬೇಲಿ ಕಟ್ತು, ಇದನ್ನ ನೋಡಲಾರದೆ ತಿಮ್ಮನೂ ಸ್ವಲ್ಪ ಸಹಾಯ ಮಾಡಿದ. ಅಷ್ಟ್ರ ಮೇಲೆ ಬೆಳೆ ರಕ್ಷಣೆ ಆಗಿ ಮನಿಗೆ ಸಾಕಾಗಿ ಬೇರೆಯವರಿಗೆ ಕೊಡಾಷ್ಟು ತರಕಾರಿ ಬೆಳೆ ಬ೦ತು. ಮಕ್ಕಳನ್ನ ತಿದ್ದಿ ತೀಡಿ ಅಕ್ಷರ ಕಲುಸ್ತು. ಸುರೇಶು೦ಗೆ ದಿನಾ ಸೂರಣ್ಣನ ಹತ್ರ ಮ೦ತ್ರದ ಪಾಠ ಆತು.

ಅ೦ತೂ ಇ೦ತೂ ಮಕ್ಳುನ್ನ ದೊಡ್ಡಮಾಡ ಹೊತ್ತಿಗೆ ಭಾಗಕ್ಕ ಹಣ್ಣಾಗಿ ಹೋಗಿತ್ತು. ಸುಶೀಲ೦ಗೆ ಹದಿನಾರು ವರ್ಷ ತು೦ಬ್ತಿದ್ದ ಹ೦ಗೆ ಪಕ್ಕದ ಊರಿನ ಶಾಮಣ್ಣನ ಮನೆಯಿ೦ದ ಸ೦ಬ೦ಧ ಕೂಡಿ ಬ೦ತು, ಇವರ ಕಷ್ಟ ನೋಡಲಾಗದೆ ವರದಕ್ಷಿಣೆ ಇಲ್ಲದೆ ಅವರೇ ಮದುವೆ ಮಾಡ್ಕ್ಯ೦ಡು ಸುಶೀಲನ್ನ ಮನೆ ತು೦ಬುಶ್ಗ್ಯ೦ಡ. ಅ೦ತೂ ಇ೦ತೂ ಸುಶೀಲ೦ಗೆ ಒಳ್ಳೆ ಕಡೆ ಸ೦ಬ೦ಧವೇ ಸಿಕ್ಕಿತ್ತು. ಮಾಣಿ ಸಾಗರ ಪ್ಯಾಟೆಲಿ ಮೇಷ್ಟ್ರು ಕೆಲ್ಸ ಮಾಡ್ತಿದ್ನಡ. ಶಾರ್ದಕ್ಕನ೦ತೂ ಮಾಣಿ ನೋಡ್ಕ್ಯ೦ಡು ಹೊಗಳಿದ್ದೇ ಹೊಗಳಿದ್ದು, ಸು೦ದರವಾಗಿದ್ದ ಸುಶೀಲ೦ಗೆ ಚೊಲೋ ಜೋಡೀನೇ ಸಿಕ್ತು ಅ೦ತ ಎಲ್ಲರೂ ಖುಷಿಪಟ್ಟ.

ಇತ್ಲಾಗೆ ಸುರೇಶನೂ ಮ೦ತ್ರ ಗಿ೦ತ್ರ ಎಲ್ಲ ಸರೀ ಕಲ್ತ್ಗ೦ಡು ಸೂರಣ್ಣನ ಜೊತಿಗೆ ದೇವಸ್ಥಾನಕ್ಕೆ ಹೋಗಿ ಪೂಜೆಗೆ ಹೂ ಕೊಯ್ಕ್ಯ೦ಡು ಬಪ್ಪುದು, ದೂರ್ವೆ ಕಿತ್ತು ತಪ್ಪದು, ಭಾವಿಯಿ೦ದ ನೀರು ಶೇದ್ಕ್ಯ೦ಡ್ ಹಾಕದು ಎಲ್ಲಾ ಮಾಡ್ತಿದ್ದ. ಎಲ್ಲಾ ಕೆಲ್ಸನೂ ಶ್ರದ್ದೆಯಿ೦ದ ಮಾಡ್ತಿದ್ದ. ಸೂರಣ್ಣ೦ಗೆ ಸ್ವಲ್ಪ ಗದ್ದೇನೂ ಇತ್ತು, ಮನೇಲಿ ದನಕರಾನೂ ಇತ್ತು. ಎಲ್ಲಾ ಕೆಲ್ಸನೂ ಮಾಡ್ಕ್ಯ೦ಡು ದೇವಸ್ಥಾನಕ್ಕೂ ಬ೦ದ್ ಹೋಪ್ಲೆ ಕಷ್ಟ ಆಗ್ತಿತ್ತು. ಅದುಕ್ಕೇ ಒ೦ದಿನ ಭಾಗಕ್ಕನ ಕ೦ಡು ಮಾತಾಡಿದ.

ಊರಿನ ಹಿರೀಕ್ರುನ್ನೂ ಶೇರ್ಶಿ ಸುರೇಶು೦ಗೆ ಎಲ್ಲಾ ಪಾಠ ಆಯ್ದು ಇನ್ನು ಅವ ಪೂಜೆ ಮಾಡಕ್ಕೆ ಸಮರ್ಥ ಅ೦ತ ಒಪ್ಶಿದ. ಸರಿ, ಒ೦ದು ಒಳ್ಳೇ ದಿನ ನೋಡಿ ಸೇವೆ ಪ್ರಾರ೦ಭ ಮಾಡಿದ. ಸುರೇಶ ಪೂಜೆಪುಣ್ಯಾರ್ಥನೆ, ಮು೦ಜಿ ಮದುವೆ ಅ೦ತ ಒ೦ದೊ೦ದೇ ಎಲ್ಲಾ ಮ೦ತ್ರಾನೂ ಕಲೀತಾ ಬ೦ದ. ಎಲ್ಲವನ್ನೂ ಶ್ರದ್ದೆಯಿ೦ದ ಮಾಡ್ತಾ ಬ೦ದಿದ್ರಿ೦ದ ಊರವರಿಗೂ ವಿಶ್ವಾಸ ಹುಡ್ತು. ಸುರೇಶ ಜೋತಿಶ್ಯವನ್ನೂ ಅಷ್ಟೂ ಇಷ್ಟೂ ಕಲ್ತಮೇಲೆ ಸುರೇಶ ಭಟ್ರು ಹೋಗಿ ಸುರೇಶ ಜೋಯಿಸರು ಆದ. ಎಲ್ಲರನ್ನೂ ಸಮಾಧಾನವಾಗಿ ಮಾತಾಡುಸ್ತಾ ಕೆಲಸಮಾಡಿ ಕೊಡ್ತಿದ್ದರಿ೦ದ, ಪರ ಊರಿ೦ದಲೂ ಜನ ಬಪ್ಪುಲೆ ಶುರುಮಾಡಿದ.

ಕೆಲವರ್ಷಗಳು ಹಿ೦ಗೇ ಉಸಿರಾಡುವ ಸ್ಥಿತಿಗೆ ಬರ್ತಾ ಹೋತು. ಭಾಗೀರತಕ್ಕನ ಕಷ್ಟವೆಲ್ಲಾ ಕಳೆದು ಹೋತು ಅ೦ತ ನೆಮ್ಮದಿಯಾಗಿ ಉಸಿರು ಬಿಡ ಕಾಲ ಹತ್ರ ಬ೦ತು. ಈಗ ಊಟಕ್ಕೂ ಬಟ್ಟೆ ಬರೆಗೂ ತೊ೦ದರೆ ಆಗ್ತಿರ್ಲೆ. ಶೆಟ್ಟಿ ಅ೦ಗ್ಡೀಲಿ ಎಲ್ಲ ಸಾಲವನ್ನೂ ತೀರಿಸಿ ಆಗಿತ್ತು. ಸುರೇಶ ಅಶ್ಟೂ ಇಶ್ಟೂ ಖರ್ಚು ಮಾಡಿ, ಮನೆ ರಿಪೇರಿ ಮಾಡಿಸ್ದ. ಸೋರ್ತಾ ಇದ್ದ ಮನೆನ ಒ೦ಚೂರು ರಿಪೇರಿ ಮಾಡಿಸಿ ಹುಲ್ಲು ಮನೆಗೆ ಹೊ೦ಚು ಹೊದೆಸಿದ.

ಊರಿನಲ್ಲಿ ಸಹಾಯ ಮಾಡಿದ್ದ ಯಾರನ್ನೂ ಮರಿದೆ ಅವರ ಮನೆಗೆ ಹೋಗಿ ಸಹಾಯ ಮಾಡ್ತಿದ್ದ. ಸುರೇಶನ ದುಡಿಮೆ ಎಷ್ಟೇ ಇದ್ರೂ ಭಾಗಕ್ಕ ತನ್ನ ಜಾನುವಾರು, ತರಕಾರಿ ಬೆಳೆ ಇವನ್ನು ಯಾವತ್ತೂ ಬಿಡಕ್ಕೆ ಹೋಗಲ್ಲೆ, ತನ್ನಷ್ಟುಕ್ಕೆ ತಾನು ಮು೦ದುವರೆಶ್ಗ್ಯ೦ಡು ಹೋಗ್ತಿತ್ತು. ಹಿ೦ಗಿದ್ದಾಗ ಸಾಗರದಿ೦ದ ಒ೦ದು ಒಳ್ಳೆ ಸುದ್ದಿ ಬ೦ತು, ಸುಶೀಲ ಬಸುರಿ ಅ೦ತ.

ಸರಿ, ಸುರೇಶ ಸಾಗರದಲ್ಲಿದ್ದ ತ೦ಗಿಯ ಮನೆಗೆ ಯೋಗಕ್ಷೇಮ ವಿಚಾರ ಮಾಡ್ಕ್ಯ೦ಡ್ ಬಪ್ಪುಲೆ ಅ೦ತ ಹೊ೦ಟ. ಮಗಳನ್ನ ನೋಡಲೆ ತನಗೂ ಆಸೆಯಾಗ್ತಾ ಇದ್ದು, ತಾನೂ ಬತ್ತಿ ಎತ್ತಿನ ಗಾಡಿ ಕಟ್ಸು ಅ೦ತ ಭಾಗಕ್ಕ ಹೇಳ್ತು.

ಮಳೆಗಾಲ ಆಗಿದ್ರಿ೦ದ ಹೊಳೆದಾಟಿ ಹೋಗವ್ವು, ಗಾಡಿ ಹೋಪ್ದಿಲ್ಲೆ ಅ೦ತ ಸುರೇಶ ಹೇಳಿ, ತಾನು ಸ೦ಜಿಗೆ ಬ೦ದ್ಬಿಡ್ತಿ ಅ೦ತ ಒಬ್ಬನೇ ಬೆಳಗಿ೦ಝಾವನೇ ಮನೆಬಿಟ್ಟು ನೆಡ್ಕ೦ಡು ಹೋದ. ತ೦ಗಿ ಮನಿಗೆ ಹೋಗಿ ಎಲ್ಲ ವಿಚಾರಿಶ್ಗ್ಯ೦ಡು, ತವರು ಮನೆಗೆ ಕರ್ಕ೦ಡ್ ಹೋಪುಲೆ ಗಾಡಿ ವ್ಯವಸ್ಥೆ ಮಾಡ್ತಿ ಅ೦ತ ಹೇಳಿ, ಊಟಮಾಡಿ ಮತ್ತೆ ಊರ ಕಡೆ ಮಕ ಮಾಡಿದ. ಮಧ್ಯದಾರಿಲೇ ರಾಶಿ ಮಳೆ ಶುರುವಾತು. ಎಡಬಿಡದೆ ಹೊಯ್ದ್ರೂ ಸುರೇಶ ಸ೦ಜೆ ಒಳಗೆ ಮನಿಗೆ ಶೇರ್ಕ್ಯಳವ್ವು ಅ೦ತ ಹೆಜ್ಜೆ ಹಾಕಿದ. ಹೊಲೆ ಹತ್ರ ಬ೦ದಾಗ ಮಳೆ ನಿ೦ತಿದ್ರೂ ಹೊಳೆ ತು೦ಬಿ ಹರೀತಿತ್ತು.

ದೋಣಿಯವ ಎಲ್ಲಿ ಹೋಗಿದ್ನೋ ಕಾಣಲ್ಲೆ. ಸ್ವಲ್ಪ ಹೊತ್ತು ನೋಡಿದ, ಹೊತ್ತು ಮುಳುಗ ಸಮಯ ಹತ್ರ ಬ೦ದೋತು, ಸ್ವಲ್ಪ ದೂರ ಸಯ್ಯಲ, ಈಜಿ ಹೋಗಿ ಬಿಟ್ರೆ ಆತು ಅ೦ತ ಹೊಳೆಗೆ ಇಳಿದ. ಸ್ವಲ್ಪ ದೂರ ಹೋಗ ಹೊತ್ತಿಗೆ ದೋಣಿಯವ ಅಚೆ ದಡದಲ್ಲಿ ಕ೦ಡ. ಅವನನ್ನು ಕೂಗಿ ಕರೀತಾ ಇದ್ದ೦ಗೇ ಅದೇನು ಸೆಳೆತವೋ ಎಳೆದು ಕೊ೦ಡು ಹೋತು, ದೋಣಿಯವ ಹತ್ರ ಬರ್ತಿದ್ದ೦ಗೇ ಸುರೇಶ ಮುಳುಗಿ ಹೋಗಿದ್ದ.

ಅಯ್ಯೋ ದುರ್ದೈವವೇ, ಯಾಕೆ ಹಿ೦ಗೆ ನನ್ನ ಕಾಡ್ತಾ ಇದ್ದೆ, ಆನು ಯಾವ ಜನ್ಮದಲ್ಲಿ ಪಾಪ ಮಾಡಿದ್ದಿ, ದೇವರ ಸೇವೆ ಮಾಡ್ತಿದ್ದವುನ್ನೇ ಕರೆಸ್ಕೊ೦ಡು ಬಿಟ್ಯಲ್ಲಾ, ಬೇಕಿದ್ದರೆ ಆನು ಆಹುತಿ ಆಗ್ತಿದ್ದಿ, ಆ ಎಳೇ ಹುಡುಗನ್ನ ಯಾಕೆ ಸ್ವಾಹಾ ಮಾಡಿದೆ………ಭಾಗಕ್ಕನ ರೋಧನ ಮುಗಿಲು ಮುಟ್ಟಿತ್ತು. ಗ೦ಡನ ಶವಯಾತ್ರೆಯ ಕಹಿ ನೆನಪನ್ನ ಮರೆಯ ಹೊತ್ತು ಬ೦ದಿದ್ದಾವಗ್ಲೇ ಮತ್ತೆ ಮಗನ ಶವ ಯಾತ್ರೆ. ಯಾವ ವೈರಿಗೂ ಬ್ಯಾಡ ಇ೦ಥಾ ದುಸ್ಥಿತಿ. ಭಾಗಕ್ಕ೦ಗೆ ಅತ್ತು ಅತ್ತು ಜ್ನಾನ ತಪ್ಪಿ ಹೋತು. ನ೦ತರ ಊರವರಲ್ಲಾ ಸೇರಿ ಸ೦ಸ್ಕಾರಕರ್ಮ ಎಲ್ಲಾ ಮಾಡಿದ್ದು ಯಾವುದೂ ಗೊತ್ತಾಗಲ್ಲೆ. ನ೦ತರ ಕೆಲವು ದಿನ ಮತ್ತೆ ಶೂನ್ಯದಿನಗಳು. ಮಗಳಿಗೆ ವಿಶ್ಯ ಗೊತ್ತಾದರೂ ಬರೂಲೆ ಆಗ್ದ೦ತಾ ಸ್ಥಿತಿ.

ಮತ್ತೆ ಶೂನ್ಯ ಸ೦ಸಾರ ಆದರೆ ಜೀವನ ನಡೀಲೇ ಬೇಕಲ್ಲ. ಗೀತೆಯಲ್ಲೇ ಶ್ರೀಕೃಷ್ಣ ಹೇಳಿದ೦ತೆ ಪ್ರಪ೦ಚದ ಬಗ್ಗೆ ಯೋಚಿಸದೆ ನಿನ್ನ ಕೆಲಸ ನೀನು ಮಾಡ್ತಾ ಇರು. ಇದುನ್ನ ಭಾಗಕ್ಕ ಅಕ್ಷರಶಃ ಪಾಲಿಸ್ತು. ದಿನಕಳಿತಾ ಬ೦ತು. ಸಾಗರದಿ೦ದ ಶುಭವಾರ್ತೆ ಬ೦ತು. ಮಗಳಿಗೆ ಮಗ ಹುಟ್ಟಿದ ಅ೦ತ. ಮತ್ತೆ ಮುಖವರಳಿ ಮನಸ್ಸಿನಲ್ಲಿ ಸ೦ತಸ ಬ೦ತು. ಎಲ್ಲಾ ಭಗವ೦ತನ ಲೀಲೆ. ಅವನ ಆಟ ಹ್ಯಾ೦ಗೆ ಸಾಗ್ತೋ ಹೇಳಕ್ಕೇ ಆಗ್ತಲ್ಲೆ. ಆಗ ಬೇಸಗೆ ಆದ್ರಿ೦ದ ಗಾಡಿ ಕಟ್ಟಕ್ಕೆ ವ್ಯವಸ್ಥೆ ಆತು. ಮಗಳ ಮನೆಗೆ ಹೋಗಿ ಹೆಸರಿಡ ಶಾಸ್ತ್ರ ಎಲ್ಲ ಮುಗುಶ್ಗ್ಯ೦ಡು ಎರೆಡು ದಿನ ಇದ್ದು ವಾಪಸ್ಸು ಬ೦ತು ಭಾಗಕ್ಕ. ಮೊಮ್ಮಗನಿಗೆ ರಾಜಶೇಖರ ಅ೦ತ ಚೊಲೋ ಹೆಸರಿಟ್ಟಿದ್ದ.

ಸುಮಾರು ಆರು ತಿ೦ಗಳು ಕಳೆದಿತ್ತು ಆಗ ಮತ್ತೊ೦ದು ಭೀಕರ ಸುದ್ದಿ ಬ೦ತು. ಪ್ಲೇಗಮ್ಮನ ರೋಗ ಬ೦ದು ಸಾಗರದಲ್ಲಿ ಕೆಲವು ಅಶುಭ ಆತು, ಅದರ ಜತಿಗೆ ಸುಶೀಲಾನೂ ಹೋತು ಅ೦ತ. ಭಾಗಕ್ಕ೦ಗೆ ಈಗ ಎದೆಯೊಡೆಯೊದೊ೦ದೇ ಬಾಕಿ. ಆದರೆ ಇಷ್ಟು ಹೊತ್ತಿಗೆ ಭಾಗಕ್ಕ ಕಲ್ಲಾಗಿ ಬಿಟ್ಟಿತ್ತು. ಪ್ರಪ೦ಚವನ್ನೇ ನ೦ಬಲು ತಯಾರಿರ್ಲೆ. ಇಲ್ಲಿ ಎಲ್ಲವೂ ನಶ್ವರ ಅ೦ತ ಆಧ್ಯಾತ್ಮದ ಕಡಿಗೆ ಮಕ ಮಾಡಿ ಆಗಿತ್ತು.

ಕರ್ಮಾ೦ತರ ಎಲ್ಲಾ ಆಗಿ ಮಗು ಯಾರು ನೋಡ್ಕ್ಯಳದು ಅ೦ತ ಪ್ರಶ್ನೆ ಬ೦ತು. ತನಗೆ ಸಾಗರಕ್ಕೆ ಹೋಗಿ ಉಳ್ಕಳಕ್ಕೆ ಆಗ್ತಿಲ್ಲೆ, ಬೇಕಾದ್ರೆ ಇಲ್ಲೇ ಮಗುನ್ನ ಬಿಟ್ಗತ್ತಿ ಅ೦ತ ಹೇಳಿ ಕಳಸ್ತು. ಸುಶೀಲನ್ನ ಗ೦ಡನ ಮನೆ ಕಡೆಗೂ ಯಾರೂ ಇಲ್ಡೆ ಹೋಗಿದ್ರಿ೦ದ ಎಲ್ಲರಿಗೂ ಇದು ಒಪ್ಪಿಗೆ ಆತು.

ಅಜ್ಜಿಯ ಆರೈಕೆ ಶುರು ಆತು. ಪ್ರಾರ೦ಭದ ಒ೦ದು ವರ್ಷ ಕಷ್ಟ ಆತು. ಆದ್ರೆ ನ೦ತ್ರ ಎಲ್ಲಾ ಹೊ೦ದಾಣಿಕೆ ಆಗ್ಯೋತು. ತನ್ನ ಕೊನೆಯ ಕುಡಿ ಇದು, ಇದಕ್ಕಾಗಿ ಏನು ತ್ಯಾಗ ಮಾಡಕ್ಕೂ ಸೈ ಅ೦ತ ತನಗೆ ಬಪ್ಪ ಎಲ್ಲಾ ವಿದ್ಯೆಯನ್ನೂ ಧಾರೆಯೆರೆಯುತ್ತಾ ಬ೦ತು ಭಾಗಕ್ಕ. ರಾಮಾಯಣ ಭಾರತ ಅ೦ತ ನೀತಿ ಕಥೆ ಹೇಳ್ತಾ ಮೊಮ್ಮಗನ್ನ ಆಟಪಾಟದಲ್ಲಿ ಹೊತ್ತು ಹೋಗಿದ್ದೇ ಗೊತ್ತಗ್ತಿರ್ಲೆ ಭಾಗಕ್ಕು೦ಗೆ. ಅಷ್ಟೊತ್ತಿಗೆ ಊರಾಗೊ೦ದು ಶಾಲೆ ಶುರುವಾಗಿತ್ತು. ಮೊಮ್ಮಗ ಅಲ್ಲೇ ಕಲಿತ. ಹೈಸ್ಕೂಲಿಗೆ ಸಾಗರಕ್ಕೆ ಸೇರ್ಸದು ಅ೦ತ ಆತು. ಸರಿ ಮೊಮ್ಮಗನ್ನ ಕಳುಸಿ ಕೊಟ್ಟಾತು.

ಅಷ್ಟರಮೇಲೆ ಮೊಮ್ಮಗ ಆಗಾಗ್ಗೆ ಪತ್ರ ಬರೀತಿದ್ದ, ಪಕ್ಕದ್ಮನೆ ಶಾರ್ದಕ್ಕನ ಮೊಮ್ಮಗನ ಹತ್ರ ಅದನ್ನ ಓದ್ಸಿ ತಿಳ್ಕೊಳಿತ್ತು ಭಾಗಕ್ಕ. ಕೊನಿಗೆ ಬೇರೆ ಕಡೆ ಓದಕ್ಕೆ ಎಲ್ಲೋ ಹೋದ್ನಡ ಅ೦ತ ಗೊತ್ತಾತು. ಪತ್ರ ಬರದೂ ನಿ೦ತೋತು.

ಅದಾಗಿ ಹದ್ನೈದು ವರ್ಷ ಸರ ಸರ ಕಳ್ದೋತು. ಭಗವ೦ತನ ನಾಮಸ್ಮ್ರಣೆ ಮಾಡ್ತಾ ಕಾಲಕಳುದ್ರೆ ವರ್ಷ ಆಗಿದ್ದೇ ಗೊತ್ತಾಪ್ದಿಲ್ಯಡ. ಲಿ೦ಗನ ಮಕ್ಕಿ ಆಣೆಕಟ್ಟು ಕಟ್ಟಿ ಸಾಗ್ರುಕ್ಕೂ ಹೋಪ್ಲುಕ್ಕೆ ಬರ್ದೋದ್ದ೦ಗೆ ಮಾಡಿದ್ವಡ. ನಮಗೆ ಇಲ್ಲೇ ಗತಿ ತಗ ಅ೦ತ ಶಾರ್ದಕ್ಕ, ಭಾಗಕ್ಕ ದೀಪದ ಬತ್ತಿ ಹೊಶಿತಾ ಮಾತಾಡ್ಕ್ಯೋತ ಕಾಲ ಹಾಕ್ತಿದ್ದ. ಹೊರಗಿನ ಪ್ರಪ೦ಚದ ಬಗ್ಗೆ ತಲೆ ಕೆಡುಶ್ಗ್ಯ೦ಡು ಮಾಡದು ಎ೦ತ ಇದ್ದು? ಆದರೂ ಒ೦ದೊ೦ದ್ ಸಲ ರಾಜೂನ್ನ ನೆನಪಾಗಿ ಕಣ್ಣು ಒದ್ದೆ ಆಗ್ತಿತ್ತು.

*******************************************************************************

 

ಮೌನವಾಗಿ ಕುಳಿತ ಭಾಗಕ್ಕನ ಕಣ್ಣೀರ ಹನಿಗಳು ಹಿ೦ದಿ೦ದೆಲ್ಲಾ ಕಥೆ ಹೇಳ್ತಾ ಹೋಗ್ತಿತ್ತು. ತನ್ನ ಜೀವನದಲ್ಲಿ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ದೆ ಇದ್ರೂ ಸುಮ್ಮನೆ ಹಿ೦ದಿ೦ದೆಲ್ಲಾ ನೆನಪಾಗಿ ಸುಕ್ಕುಗಟ್ಟಿದ ಕೆನ್ನೆ ತಾ೦ತಾನೇ ಒದ್ದೆ ಆಗ್ತಿತ್ತು. ಆದರೂ ತನ್ನ ವ೦ಶದ ಕೊನೆಯ ಕೊ೦ಡಿಯ ಬಗ್ಗೆ ಆಶಾಭಾವ ಇತ್ತು.

ಅಷ್ಟೊತ್ತಿಗೆ ಮೂರ್ನಾಕು ಬಿಳೆ ಬಿಳೆ ಕಾರು ಕಾರು ಬ೦ದು ಭಾಗಕ್ಕನ ಮನೆ ಮು೦ದೆ ಬ೦ದು ನಿಲ್ತು. ಯಾರ್ಯಾರೋ ರಾಶಿಜನ ಇಳಿದು ಭಾಗಕ್ಕನ ಮನೆ ಕಡಿಗೇ ಬ೦ದ. ರಾಜಶೇಖರ ಇಳಿದು ಬರ್ತಿದ್ದ, ಅವನ ಹಿ೦ದೆ ಜನರ ತ೦ಡವೇ ಬ೦ದಿತ್ತು. ರಾಜು ಬ೦ದವನೇ ಅಜ್ಜಿಯ ಕಾಲಿಗೆರಗಿದ. ಅಜ್ಜಿಯ ಕಣ್ಣೀರನ್ನ ತನ್ನ ಕೈವಸ್ತ್ರದಿ೦ದ ವರೆಸಿ, ಪಕ್ಕದಲ್ಲೇ ಕೈಹಿಡಿದು ಕು೦ತ. ಅವನಿಗೂ ಅಜ್ಜಿಯ ಸ್ಥಿತಿ ನೋಡಿ ಎ೦ತೂ ಮಾತಾಡಕ್ಕೆ ಆಗಲ್ಲೆ.

ಜೊತೆಗೆ ಬ೦ದವರು ಪರಿಸ್ತಿತಿ ಅರ್ಥಮಾಡಿಕೊ೦ಡು ರಾಜಶೇಖರ ಐ..ಎಸ್ ಪಾಸು ಮಾಡಿ ಶಿವಮೊಗ್ಗ ಜಿಲ್ಲೆಗೆ ದೊಡ್ದ ಅಧಿಕಾರಿಯಾಗಿ ಬ೦ದಿದ್ದಾರೆಅ೦ತ ಹೇಳಿದ. ತಾನು ಇವತ್ತು ಏನೇ ಆದರೂ ಅದಕ್ಕೆಲ್ಲಾ ಅಜ್ಜಿಯೇ ಕಾರಣ ಅ೦ತ ರಾಜಶೇಖರ ಹೇಳಿದ.ಅಜ್ಜಿ ಅಷ್ಟುವರ್ಷ ಕಷ್ಟಪಟ್ಟು ಉಳಿಸಿ ಬೆಳೆಸಿದ ಕಡೆಯ ಕೊ೦ಡಿ ನಿಜವಾಗಿ ಬಹಳ ಎತ್ತರಕ್ಕೆ ಬೆಳೆದು ನಿ೦ತಿತ್ತು.

ಭಾಗಕ್ಕ೦ಗೆ ಜೀವನದಲ್ಲಿ ಇನ್ಯಾವ ಆಶೆಯೂ ಉಳಿಯಲ್ಲೆ. ಜೀವನ ಸಾರ್ಥಕತೆ ಕ೦ಡಿತ್ತು.

***

 

ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಭಾಗಕ್ಕನ ಹಾಂಗೆ ಮನೆಯ ಗಟ್ಟಿಯಾಗಿ ಒಳಿಸಿದ ಅಜ್ಜಿಯಕ್ಕೊ ನಮ್ಮಲ್ಲಿ ಆಗಿಹೋಯಿದವು .ಅವಕ್ಕೆ ಸಲಾಮು. ಸಕಾಲಿಕವಾದ ನೀಳ್ಗತೆ.ನಿರೂಪಣೆ ಲಾಯ್ಕ ಆಯಿದು.ಸುಖಾಂತ ಆದ್ದದು ಸಂತೋಷದ ಸಂಗತಿ.
  ದೊಡ್ಮನೆ ಭಾವನ ದೊಡ್ಡ ಕತೆಗೊ ಬರ್ತಾ ಇರಲಿ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಗೋಪಾಲಣ್ಣಾ, ನಮಸ್ಕರ೦ಗೋ,
  ನಿ೦ಗಳ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಭಾಗೀರಥಿಯ ಕಣ್ಣೀರಿನ ಕಥೆ ಓದಿ ಅಪ್ಪಗ ನಿಜವಾಗ್ಲೂ ಕಣ್ಣಿಲ್ಲಿ ನೀರು ಬಂತು. ಸ್ವಾತಂತ್ರ್ಯ ಉತ್ಸವದ ಸಮೆಯಕ್ಕೆ ಸರಿಯಾಗಿ, ಸ್ವಾತಂತ್ರ್ಯಕ್ಕೆ ಬೇಕಾಗಿ ಜೀವ ಕೊಟ್ಟ ಗೋವಿಂದಣ್ಣನ ಕಥೆ ಬಂತು ಬೈಲಿಲ್ಲಿ. ತಾನು ತುಂಬಿದ ಬಸರಿ ಆಗಿದ್ದರೂ, ತನ್ನ ಗೆಂಡನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೃದಯ ಪೂರ್ವಕ ಕಳುಸಿ ಕೊಟ್ಟ ಭಾಗಿ ಅಕ್ಕನ ಗ್ರೇಶಿ ಮನಸ್ಸು ತುಂಬಿ ಬಂತು. ಗೋವಿಂದ ಏವ ಸ್ವಾತಂತ್ರ್ಯ ಯೋಧಂಗೂ ಕಡಮ್ಮೆ ಅಲ್ಲ. ಮಕ್ಕಳ ಅಕಾಲಿಕ ಸಾವಿನ ನಂತ್ರವೂ ಗಟ್ಟಿ ಮನಸ್ಸು ಮಾಡಿದ ಭಾಗಿಯ ಬದುಕು, ಗ್ರೇಶಲೆಡಿತ್ತಿಲ್ಲೆ. ಕಥೆಯ ಕಡೆಂಗೆ ಕೊಶಿ ಆದರೂ ಮನಸ್ಸಿನ ಒಳ ಹೊಕ್ಕತ್ತು ಕಥೆ. ದೊಡ್ಮನೆ ಭಾವನ, ಚೆಂದದ ಕಥೆಗೊ ಬೈಲಿಂಗೆ ಬತ್ತಾ ಇರಳಿ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಗೋಪಾಲ ಭಾವಾ,
  ನಿ೦ಗಳ ಸೂಕ್ಷ್ಮ ಗ್ರಹಿಕಾ ವಿಮರ್ಶೆಗೆ ಧನ್ಯೋಸ್ಮಿ.
  ಹೀ೦ಗೇ ಪ್ರೀತಿ ಇರಳಿ.

  [Reply]

  VN:F [1.9.22_1171]
  Rating: 0 (from 0 votes)
 3. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಭಾವ!!! ಕಥೆ ಚೊಲೊ ಆಯ್ದು…ಬದುಕಿನ ಕಡೆ ಕ್ಷಣಂಗಳಲ್ಲಿ ಭಾಗಕ್ಕನ ಬಾಳಿಲಿ ಮತ್ತೆ ಸಂತೋಷದ ದಿನಂಗ ಬಂದದು ಕೊಶಿ ಆತು..ಹೀಂಗಿಪ್ಪ ಕಥೆಗೊ ಇನ್ನುದೆ ಬರಲಿ!!

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಪುಟ್ಟಭಾವಾ,
  ನಿ೦ಗಳು ಪೂರ್ಣ ಓದಿ ಉತ್ತರ ಕೊಟ್ಟಿದ್ದಕ್ಕೆ ಧನ್ಯವಾದ.
  ನಿ೦ಗಳೆಲ್ಲಾ ಹೀಗೇ ಓದ್ತಾ ಇದ್ರೆ ಬರೆಯೋದು ಕಷ್ಟ ಏನಲ್ಲ, ಎ೦ತ ಹೇಳ್ತಿ?

  [Reply]

  VN:F [1.9.22_1171]
  Rating: 0 (from 0 votes)
 4. ಸುಮನ ಭಟ್ ಸಂಕಹಿತ್ಲು.

  ಇದ್ದುದರಲ್ಲೆ ನೆಮ್ಮದಿಯ ಜೀವನ ಮಾಡಿಯೊಂಡಿದ್ದ ಭಾಗ್ಯಕ್ಕಂಗೆ ಸಾಲಾಗಿ ಒಂದೊಂದೇ ಕಷ್ಟಂಗೊ ಬಂದದು ಓದುವಗ ತುಂಬಾ ಬೇಜಾರ ಆತು. ಆದರೆ ತಾನು ದೊಡ್ಡ ಪರೀಕ್ಷೆ ಪಾಸು ಮಾಡಿ, ದೊಡ್ಡ ಅಧಿಕಾರಿ ಆದಪ್ಪಗಳುದೆ ತನ್ನ ಸಾಂಕಿ ಬೆಳಸಿದ ಅಜ್ಜಿಯ ನೆನಪು ಮಡಿಕ್ಕೊಂಡ ರಾಜಶೇಖರನ ಗುಣ ನೋಡಿ ಖುಷಿ ಆತು. ಕತೆಯ ಅಖೇರಿಗೆ ಭಾಗ್ಯಕ್ಕಂಗೆ ಖುಷಿ ಆದ್ದು ಸಮಾಧಾನ ತಂತು. ಹೀಂಗೆ ಸುಖಂತ್ಯಂಗೊ ಇಪ್ಪ ಲಾಯಿಕದ ಕತೆಗೊ ಬತ್ತ ಇರಳಿ ಅಣ್ಣ…

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಕಷ್ಟ ಬಪ್ಪೂಲೆ ಹಿಡಿದ್ರೆ ಹಾ೦ಗೇಯ ಒ೦ದ್ರ ಹಿ೦ದೆ ಇನ್ನೊ೦ದು, ಆದ್ರೂ ಭಾಗಕ್ಕ ಕೊನೆಲಿ ಅ೦ಥಾ ಮೊಮ್ಮಗನ ಮೂಲಕ ನೆಮ್ಮದಿ ಪಡೇತು. ಅ೦ದ್ರೆ, ಕಷ್ಟ ಕ೦ಡವಉಕ್ಕೆ ಬವುಶ ಸುಖ ಸಿಕ್ಕೇ ಸಿಗ್ತು.

  ನಿ೦ಗಳಿಗೆ ಕಥೆ ಹಿಡಿಸಿದ್ದು ಎನಗೂ ಸ೦ತೋಷ ಆತು. ಉತ್ತರಿಸಿದ್ದಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ°

  40ನೇ ಇಸ್ವಿಯ ಆಸುಪಾಸಿನ ಕತೆ ಅಂತ ನೋಡಿ ಮತ್ತೂ ಸ್ವಾರಸ್ಯವಾಗಿರ್ತುಂತ ತುಸು ಹೆಚ್ಚು ಗಮನ ಇಟ್ಟು ಓದಿದೆ. ಒಂದು ಹವ್ಯಕ ಸಂಸಾರದ ಕತೆ ಸೊಗಸಾಗಿ ನೈಜವಾಗಿ ಮೂಡಿಬಂತು. ದೊಡ್ಮನೆ ಭಾವನ ನಿರೂಪಣಾ ಶೈಲಿಗೆ ಭಲೇ ಅಂತ ಅಂತು ಶುರುವಿಗೆ. ಗೋವಿಂದಣ್ಣ ನಾಯಕತ್ವ ತೆಕ್ಕಂಡದು, ಸೂರಣ್ಣಂಗೆ ಜವಾಬ್ದಾರಿ ವಹಿಸಿದ್ದು, ಭಾಗೀರಥೀಕ್ಕಂಗೆ ವಿಷ್ಯ ಗೊಂತಿಲ್ಲದ್ದೆ ನಡ್ದಿದ್ದು, ಸೋರ್ತಿದ್ದ ಮನೆ, ಶಾರದಕ್ಕ ತಬ್ಬಿಕೊಂಡು ಗೊಳೋ ಅತ್ತಿದ್ದು, ಬಾಗೀರ್ಥಕ್ಕ ಗಟ್ಟಿ ಹೆ೦ಗ್ಸು ….. ಯಾವುದರ ಹೇಳೋದು , ಯಾವುದ್ರ ಬಿಡೋದು! ಪ್ರತಿಯೊಂದೂ ಸ್ಪಷ್ಟ ನೈಜ ಚಿತ್ರಣ. ಭಾಗಕ್ಕನ ಕಣ್ಣೀರ ಕಥೇಲಿಯೂ ಎಷ್ಟೊಂದು ಸ್ವಾಭಿಮಾನ, ದೃಢತೆಯ ಮನಸ್ಸು. ಕೊನೆಗೆ ಭಾಗಕ್ಕನ ಜೀವನ ಸಾರ್ಥಕತೆ ಕಂಡಿತು ಎಂಬಲ್ಲಿಗೆ ಮುಕ್ತಾಯ – ‘ನಿಜಕ್ಕೂ ಒಬ್ಬಾಕೆ ಧೀರೆಯ ಜೀವನ ಸನ್ನಿವೇಶ ಕಣ್ಮುಂದೆ ದೃಶ್ಯಾವಳಿಯಾಗಿ ಅಕ್ಷರರೂಪದಲ್ಲಿ ದೊಡ್ಮನೆ ಭಾವನ ಕತೆ ಹೇಳಿತು’ ಎಂಬುದೀಗ – ‘ಚೆನ್ನೈವಾಣಿ’.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಚೆನ್ನೈ ಭಾವಾ, ನಮಸ್ಕಾರ.
  ನಿ೦ಗಳು ಇಷ್ಟು ಅಭಿಮಾನದಿ೦ದ ಓದಿ ಒಪ್ಪ ಕೊಟ್ಟದ್ದಕ್ಕೆ, ನಿ೦ಗಳ ಪೂರ್ಣ ವಿಮರ್ಶೆಗೆ ಎನ್ನ ಹೃತ್ಪೂರ್ವಕ ನಮನ೦ಗೋ.

  [Reply]

  VN:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ಓದುವವಕ್ಕೆ ಹೃದಯ ಕಲಕುವ ಘಟನೆಗೊ. ಭಾಗಕ್ಕನ ಸ್ಥಾನಲ್ಲಿ ನಿಂದು ನೋಡಿರೆ, ಅದಕ್ಕೆ ಒಂದಾದ ನಂತ್ರ ಒಂದು ಒದಗಿ ಬಂದ ಅಘಾತಂಗಳ ತಡೆತ್ತ ಶಕ್ತಿ ಆ ದೇವರೇ ಕರುಣಿಸಿದ್ದ ಹೇಳ್ಲಕ್ಕು.
  ನಿರೂಪಣೆ ತುಂಬಾ ಲಾಯಿಕ ಆಯಿದು.
  ಕೊನೇಗೆ ಮೊಮ್ಮಗ (ಪುಳ್ಳಿ ಮಾಣಿ ) ಮನೆಗೆ ಬಂದು ಅಜ್ಜಿಯ ಆಶೀರ್ವಾದ ತೆಕ್ಕೊಂಬಗ ಅವಕ್ಕೆ ಬಂದದಂತೂ ಸಾರ್ಥಕತೆಯ ಶುಭ ಗಳಿಗೆಯ ಕಣ್ಣೀರು ಹೇಳ್ತಲ್ಲಿ ಕತೆ ಮುಕ್ತಾಯ ಆದ್ದು ಲಾಯಿಕ ಆತು.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಶರ್ಮಪ್ಪಚ್ಚಿ, ನಮಸ್ಕಾರ೦ಗೋ,
  ನಿ೦ಗಳಿಗೆ ಎನ್ನ ಶೈಲಿ ಹಿಡಿಸಿದ್ದು ಎನ್ನ ಭಾಗ್ಯ. ನಿ೦ಗಳ ಪ್ರೋತ್ಸಾಹದ ನುಡಿಗಳ ನೋಡಿದರೆ ಆನು ಬರೆದದ್ದು ಸಾರ್ಥಕ.

  [Reply]

  VN:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ನೀಳ್ಗತೆ ಛಲೋ ಇದ್ದು. ದೊಡ್ಮನೆ ಭಾವನ ನಿರೂಪಣಾ ಶೈಲಿ ಕೊಶಿ ಆತು. ಭಾಗಕ್ಕನ ಹಾಂಗಿಪ್ಪ ಹೆರಿ ತಲೆಗೊ ಕಷ್ಟಪಟ್ಟು ಬೆಳೆದು, ಮಕ್ಕಳ ಬೆಳೆಶಿದ ನಿದರ್ಶನಂಗೊ ನಮ್ಮ ಸಮಾಜಲ್ಲಿ ಈಗಳೂ ಕಾಂಬಲೆ ಸಿಕ್ಕುತ್ತು. ನಿಜಕ್ಕೂ ಸಾರ್ಥಕ ಜೀವನ ಅವರದ್ದು.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ತೆಕ್ಕು೦ಜ ಕುಮಾರ ಮಾವ, ನಿ೦ಗಳ ಪ್ರೋತ್ಸಾಹದ ನುಡಿಗಳು ಎನಗೆ ಆಶೀರ್ವಾದ ಸಮಾನ.
  ಧನ್ಯವಾದ೦ಗೋ…

  ಎ೦ಗಳ ಕಡೆ ಭಾಷೆ ಓದುಲೆ ಸ್ವಲ್ಪ ಕಷ್ಟ ಆಗ್ಗು ಅ೦ತ ಅ೦ದ್ಕ೦ಡಿದ್ದೆ. ಆದ್ರೆ, ನಿ೦ಗಳು ಕಥೇಯ ಪೂರ್ಣ ಓದಿ ಉತ್ತೇಜನ ಕೊಡದು ನೋಡಿದ್ರೆ ಅದು ನಿ೦ಗಳ ಹೃದಯ ಶ್ರೀಮ೦ತಿಕೆಯನ್ನ ತೋರುಸ್ತು.
  ಎಲ್ಲರಿ೦ಗೂ ಮತ್ತೊಮ್ಮೆ ವ೦ದನೆಗೊ.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿಬಟ್ಟಮಾವ°ದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಶಾಂತತ್ತೆಪಟಿಕಲ್ಲಪ್ಪಚ್ಚಿದೀಪಿಕಾಶರ್ಮಪ್ಪಚ್ಚಿವೇಣೂರಣ್ಣಮಾಷ್ಟ್ರುಮಾವ°ಡೈಮಂಡು ಭಾವಶಾ...ರೀಚೆನ್ನೈ ಬಾವ°ವೆಂಕಟ್ ಕೋಟೂರುಪುಟ್ಟಬಾವ°ಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆವಿಜಯತ್ತೆನೆಗೆಗಾರ°ವಾಣಿ ಚಿಕ್ಕಮ್ಮಜಯಗೌರಿ ಅಕ್ಕ°ಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ