Oppanna.com

ಚಿ.ವೇಣುಗೋಪಾಲ೦ಗೆ ಸಹಾಯ – ವರ್ತಮಾನ

ಬರದೋರು :   ಶುದ್ದಿಕ್ಕಾರ°    on   07/04/2013    6 ಒಪ್ಪಂಗೊ

ಬೈಲಿನ ಬ೦ಧುಗೊಕ್ಕೆ ನಮಸ್ಕಾರ.

ಚಿ.ವೇಣುಗೋಪಾಲ೦ಗೆ ಸಹಾಯಹಸ್ತ ಕೊಡುವಿರೋ ಹೇಳಿ ಬೈಲಿನ ಪರವಾಗಿ ಕೇಳಿಗೊ೦ಡಪ್ಪಗ ದೇಶ ವಿದೇಶ೦ದ ಸಜ್ಜನ ಬ೦ಧುಗೊ ಸಹಾಯ ಮಾಡುತ್ತಾ ಇದ್ದವು. ಕೆಲವು ನೆ೦ಟ್ರುಗೊ ಪ್ರತಿಷ್ಠಾನದ ಮುಖಾ೦ತರ, ಮತ್ತೆ ಹಲವರು ನೇರವಾಗಿ ಸಹಾಯಧನ ತಲುಪ್ಸಿದ್ದವು.ಸ್ಪ೦ದಿಸಿದ ಸರ್ವರಿ೦ಗೂ ಬೈಲು ಧನ್ಯವಾದ ಹೇಳುತ್ತು.
ಚಿ.ವೇಣುಗೋಪಾಲನ ಆರೋಗ್ಯಸ್ಥಿತಿಲಿ ಸುಧಾರಣೆ ಇದ್ದು ಹೇಳಿ ಅವರ ಕುಟು೦ಬದವು ತಿಳುಶಿದ್ದವು.ಕಳುದ ತಿ೦ಗಳು ಬೈಲಿನ ”ರಕ್ತನಿಧಿ”ಯ ಪ್ರಯತ್ನಲ್ಲಿ ಐದು ಯುನಿಟ್ ನೆತ್ತರು ಒದಗುಸಿದ್ದು.ಈಗ ಹದಿಮೂರು ಯುನಿಟ್ ಬೇಕಕ್ಕು ಹೇಳಿ ಗೊ೦ತಾಯಿದು,ಇದರ ಒದಗುಸುಲೆ  ನಮ್ಮ ಬೈಲು ಮ೦ಗಳೂರಿಲಿ ಇಪ್ಪ ನೆ೦ಟ್ರ ಮುಖಾ೦ತರ ಪ್ರಯತ್ನ ಮಾಡುತ್ತಾ ಇದ್ದು.
ಇನ್ನು ಧನಸಹಾಯಲ್ಲಿ ಕಳುದ ತಿ೦ಗಳು ಪ್ರಥಮ ಕ೦ತಾಗಿ ರೂ.26,೦೦೦/- ವ ಬೈಲಿನ ನೆರೆಕರೆಯವು ಒಟ್ಟು ಮಾಡಿ ಕಳುಸಿ ಕೊಟ್ಟಾಯಿದು.ಆನ೦ತರ ಸ೦ಗ್ರಹ ಆದ ರೂ. 3೦೦೦೦/- ರೂಪಾಯಿಯ  ಈ ತಿ೦ಗಳಿಲಿ ಹಸ್ತಾ೦ತರ ಮಾಡುತ್ತಾ ಇದ್ದು.ಇದು ಅಲ್ಲದ್ದೆ ಮಾಣಿಗೆ ನೇರವಾಗಿ ರೂ. 21೦೦೦/- ಕ್ಕೂ ಮಿಕ್ಕಿ ಆರ್ಥಿಕಸಹಾಯ ಮಾಡಿದ್ದವು.
ಸಹಾಯ ನೀಡಿದ ಪೆರ್ವ ಗಣೇಶಣ್ಣ,ಯಜ್ಞೇಶ್ ಸ್ವಾಮಿ ,ಶಿವರಾಮ್ ಭಟ್,ಉಲ್ಲಾಸ ಸಿ.ಕೆ.,ಉ೦ಡೆಮನೆ ನಾರಾಯಣ ಭಟ್,ಉಷಾ ಅಜ್ಜಕಾನ,ಪೃಥ್ವಿ ಜಿ.ಬಿ.,ವೆ೦ಕಟಪ್ರಸಾದ್ ಬೆಳಾರಿ,ಮ೦ಜುನಾಥ ಪ್ರಸಾದ್ ಕಲ್ಲಕಟ್ಟ,ಎ.ರಾಮಚ೦ದ್ರ ಭಟ್,ಶಿವರಾಜ್ ಪಿ.ವಿ.,ಕೆ.ಆರ್.ವೆ೦ಕಟೇಶ್,ಲಕ್ಷ್ಮೀನಾರಾಯಣ,ಬೊಳು೦ಬು ಗೋಪಾಲಕೃಷ್ಣ,ಕುಳೂರು ಶಾಮ್ ಭಟ್,ಜ್ಯೋತಿ ಇ೦ದಿರಾ,ಕಳ೦ದೂರು ರಾಮ ಶರ್ಮ,ಸನತ್ ಕೊಳಚ್ಚಿಪ್ಪು,ಕಾರ್ತಿಕ್ ಕೇಪಳಗುಡ್ಡೆ,ವಿಜಯಾ ಸುಬ್ರಹ್ಮಣ್ಯ,ಸತ್ಯಶ೦ಕರ,ಕೃಷ್ಣ ಎನ್.ಭಟ್,ಉ೦ಡೆಮನೆ ಕುಮಾರಣ್ಣ,ಸೂರ್ಯ ವಜ್ರಾ೦ಗಿ, ಸೇರಾಜೆ ಸುಬ್ರಹ್ಮಣ್ಯ ಭಟ್  ಇವಕ್ಕೆಲ್ಲಾ ಬೈಲು ಆಭಾರಿ.(ಹೆಸರು ಬಿಟ್ಟು ಹೋಗಿದ್ದರೆ ಕ್ಷಮಿಸಿ).

ಸಮಾಜದ ಯುವಬ೦ಧುವಿ೦ಗೆ ಅನಿರೀಕ್ಷಿತವಾಗಿ ಬ೦ದ ಕಷ್ಟದ ಸಮಯಲ್ಲಿ ಸಹಾಯ ಮಾಡುತ್ತಾ ಇಪ್ಪ ನಿ೦ಗೊಗೆಲ್ಲಾ ಬೈಲು ಮತ್ತೊ೦ದರಿ ಧನ್ಯವಾದ ಸಲ್ಲುಸುತ್ತು.
ಪರಸ್ಪರ ಕಷ್ಟಸುಖ೦ಗಳಲ್ಲಿ ಭಾಗಿಯಾಗಿ ಬದುಕ್ಕೊದೇ ಜೀವನದ ಸಾರ್ಥಕತೆ ಅಲ್ಲದೋ?

6 thoughts on “ಚಿ.ವೇಣುಗೋಪಾಲ೦ಗೆ ಸಹಾಯ – ವರ್ತಮಾನ

  1. ಸ್ಪಂದುಸಿದ ಎಲ್ಲೋರಿಂಗೂ ಅನಂತ ಧನ್ಯವಾದಂಗೊ.

  2. ಸ್ವಾಮೀ ದೇವರೇ.. ಮಾಣಿ ಆದಷ್ಟು ಬೇಗನೆ ಪೂರ್ಣ ಗುಣಮುಖನಾಗಲಿ ಹೇಳಿ ದೇವರ ಹತ್ರೆ ಪ್ರಾರ್ಥನೆ..

  3. ಶ್ರೀಧರ ಭಾವ೦ಗೆ ನಮಸ್ಕಾರ.
    ರಕ್ತದಾನ ಮಾಡುತ್ತರೆ,
    ೧. ಮ೦ಗಳೂರಿನ ಮಣಿಪಾಲ ಆಸ್ಪತ್ರೆಯ ರಕ್ತನಿಧಿಲಿ – ವೇಣುಗೋಪಾಲ್,ಫಾದರ್ ಮುಲ್ಲರ್ಸ್ ಆಸ್ಪತ್ರೆ – ಈ ಹೆಸರಿಲಿ ಆರು ಯುನಿಟ್ ಕೊಡ್ಲಕ್ಕು.
    ೨. ನೇರವಾಗಿ ಫಾದರ್ ಮುಲ್ಲರ್ಸ್ ಆಸ್ಪತ್ರೆಲಿ ವೇಣುಗೋಪಾಲನ ಹೆಸರಿಲಿ ಏಳು ಯುನಿಟ್ ಕೊಡ್ಲಕ್ಕು.
    ರಕ್ತದಾನ ಮಾಡಿಕ್ಕಿ ಬೈಲಿ೦ಗೆ ಶುದ್ದಿ ಮುಟ್ಸಿರೆ ಒಳ್ಳೆದು ,ಅಥವಾ ವೇಣುವಿನ ಅಪ್ಪಚ್ಚಿ ಶಿವಕುಮಾರರ ನೇರ ಸ೦ಪರ್ಕ ಮಾಡ್ಲಕ್ಕು.(97426666646)

  4. ಮಂಗಳುರಿಲ್ಲಿ ನೆತ್ತರು ಕೊಡಲೇ ಆರ ಕಾಂಟಾಕ್ಟ್ ಅಯೆಕ್ಕು?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×