ಚುಟುಕು ಕವಿ – ಪಿ.ಜಿ. ಮಹಾಬಲೇಶ್ವರ ಶರ್ಮಾ

December 6, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪೊಸವಣಿಕೆ ಜಿ ಮಹಾಬಲೇಶ್ವರ ಶರ್ಮಾ ಇವರ ಮುಖತಾ ಗುರ್ತ ಅನೇಕರಿ೦ಗೆ ಇರ.. ಆದರೆ ಇವರ ಸ್ವರ ನಾವು ಹಲವಾರು ಬಾರಿ ಮಡಿಕೇರಿ೦ದ ಪ್ರಸಾರ ಅಪ್ಪ ರೇಡಿಯೋಲ್ಲಿ ಅವರ ಕವನ, ಚುಟುಕ ಹಲವಾರು ಬಾರಿ ಕೇಳಿಕ್ಕು.

ಮಹಾಬಲೇಶ್ವರ ಶರ್ಮಾ –  ಶ್ರೀಮತಿ ಸುಮಿತ್ರಾ ಶರ್ಮಾ ಮತ್ತೆ ಮೂರು ಮಕ್ಕೊ ಎಲ್ಲಾ ಇಪ್ಪದು ಮಡಿಕೇರಿಲಿಯೇ. ಬ್ರಹ್ಮಶ್ರೀ ವೇದಾ೦ತಿ ಪೊಸವಣಿಕೆ ಗಣಪತಿ ಭಟ್ಟಾ ಮತ್ತೆ ಶ್ರೀಮತಿ ಪರಮೇಶ್ವರಿ ಅವರ ಅಗ್ರ ಪುತ್ರ ಮಹಾಬಲೇಶ್ವರ ಶರ್ಮಾ.  ವೃತ್ತಿಲಿ ಬೇ೦ಕಿಲ್ಲಿ ಪಿಗ್ಮಿ ಏಜೆ೦ಟ್  ಆಗಿತಿದ್ದವು, ಪ್ರವೃತ್ತಿಲಿ  ಸಣ್ಣ ಮಟ್ಟಿ೦ಗೆ ಕವಿ. ಇವ್ವು ಹೆಚ್ಚಾಗಿ ಕನ್ನಡಲ್ಲಿ ಸಣ್ಣ-ಸಣ್ಣ ಚುಟುಕ, ಸಣ್ಣ ಕಥೆ, ಕವನ, ಉಭಯಕುಶಲೋಪರಿಗೆ ಪ್ರಶ್ಣೆ, ಚಿತ್ರ ಸ೦ಭಾಶಣೆ, ನೆಗೆ ಹನಿ ಹೀ೦ಗೆ ಎಲ್ಲ ಬರದು ಸುಮಾರು ಬಹುಮಾನ ಪಡದ್ದವು. ಕನ್ನಡ ಅಷ್ಟೇ ಅಲ್ಲದ್ದೆ ತುಳು, ಕೊಡವ ಭಾಷೆಲಿ ಸಾನು ಬರಗು.

ಅವ್ವು ಬರದ ಪದ್ಯ, ಕವನೆಕ್ಕೆ ಹಲವಾರು ಪ್ರಶಸ್ತಿ ಬೈ೦ದು, ಅದರ್ಲಿ ಕೆಲವು –

೧. ಬೀದರ್ ಜಿಲ್ಲೆಯ ಜನಪ್ರಿಯ ಪ್ರಕಾಶನ – ” ಸಾಹಿತ್ಯ ಸಿರಿ” ಪ್ರಶಸ್ತಿ ಕೊಟ್ಟಿದವ್ವು.

೨. ಮ೦ಡ್ಯದ ಕನ್ನಡ ಸಾಹಿತ್ಯ ಪರಿಷತ್ “ಕಾವ್ಯಶ್ರೀ” ಕೊಟ್ಟಿದವ್ವು.

೩. ಬಿಜಾಪುರಲ್ಲಿ ಮೊನ್ನೆ ಅವ್ವು ಬರದ ಪದ್ಯಕ್ಕೆ ಪ್ರಥಮ ಬಹುಮಾನ ಬೈ೦ದು.

೪. ಕನ್ನಡಲ್ಲಿ ಬರದ ಚುಟುಕ, ಹನಿಗವನಕ್ಕೆ ಎ೦ಟು ಭಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿದು.

ಇಷ್ಟೇ ಅಲ್ಲದ್ದೆ – ತಿ೦ಗಳಿ೦ಗೆ ಒ೦ದಾರಿ 8:00 – 8:30 ರ ಸಮಯಕ್ಕೆ ಕವನ ಕುಸುಮ ಹೇಳಿ ಮಡಿಕೇರಿ ಆಕಾಶವಾಣಿಲಿ ಪ್ರಸಾರ ಅಪ್ಪ ಕಾರ್ಯಕ್ರಮಲ್ಲಿ ಅವ್ವು ಬರದ ಕವನ, ಕಥೆಯ ಅವ್ವು ಓದಿ ಹೇಳ್ತವು. ಮತ್ತೆ ಇದೇ ಆಕಾಶವಾಣಿಯ ಫೋನಿನ ಕಾರ್ಯಕ್ರಮಲ್ಲಿ ಅವ್ವು ಓದಿ ಹೇಳ್ತವ್ವು. ಇಷ್ಟೇ ಅಲ್ಲಾ, ಮಡಿಕೇರಿ ದಿನ ಪತ್ರಿಕೆ ಆದ ಶಕ್ತಿ ಮತ್ತೆ ದಾರಿ ದೀಪಲಿ ಹಲವಾರು ಬಾರಿ ಪ್ರಕಟ ಮಾಡ್ತವ್ವು..

ಕಳುದ ತಿ೦ಗಳು 27 ಕ್ಕೆ ಬೆ೦ಗಳೂರಿಲ್ಲಿ ಕರ್ನಾಟಕ ಲೇಖಕರ ಸ೦ಘದ ವತಿಂದ ನಡೆದ ಕವಿಗೋಷ್ಟಿಲಿ ಮಹಾಬಲೇಶ್ವರ ಶರ್ಮಾ ಬರದ ಕವನ ಸ೦ಕಲನ – “ಸ೦ಜೆ ಮಲ್ಲಿಗೆ”  ಪುಸ್ತಕ ಬಿಡುಗಡೆ ಮಾಡಿದವು ( ಪಟ).

ಈ ಪುಸ್ತಕ ಬಿಡುಗಡೆ ಆಯೆಕಾರೆ ಮುಖ್ಯ ಕಾರಣ – ಶ್ರೀಮತಿ ಹರಿಣೀ ಸುಬ್ರಹ್ಮಣ್ಯ೦. ಇವ್ವು ಮಹಾಬಲೇಶ್ವರ ಶರ್ಮಾ ಬರದ ಎಲ್ಲಾ ಕವನ ಓದಿ, ಕೊಶಿಪಟ್ಟು ಅವ್ವೇ ತಮ್ಮ  ಬಲ೦ದ ಪುಸ್ತಕ ಹೆರತಪ್ಪಲೆ ಸಕಾಯ ಮಾಡಿದ್ದು. ಇವಕ್ಕ ನಾವು ಅನ೦ತಾನ೦ತ ಧನ್ಯವಾದ ಹೇಳೆಕ್ಕು. ಇವರಿ೦ದಾಗ ಮಹಾಬಲೇಶ್ವರ ಶರ್ಮಾರ ಸಾಧನೆಗೆ ಒ೦ದು ಗುರುತ್ತು ಸಿಕ್ಕಿತ್ತು ಹೇಳಿರ ತಪ್ಪಾಗ.

ಅ೦ದು ನಡದ ಸಭೆಯ ಅದ್ಯಕ್ಷರುಗೊ

– ಪ್ರೋ. ಜಿ. ಅಷ್ವತ್ತ ನಾರಾಯಣ.

– ಪ್ರೋ. ಲಿ೦ಗಯ್ಯ.

ಇ೦ದಿ೦ಗೆ ಒ೦ದು ಸಣ್ಣ ಮಟ್ಟಿನ ಕವಿಳಿಯೇ ಹೇಳುಲಕ್ಕು..ಇವ್ವೆಲ್ಲರ ಹಿ೦ದೆ ಒ೦ದು ಬೇಜಾರದ ವಿಚಾರ ಇದ್ದು..

ಮಹಾಬಲೇಶ್ವರ ಶರ್ಮಾ ಮನುಗಿದ್ದಲ್ಲೆ ಆಗಿ ಸುಮಾರು ಎ೦ಟು ವರುಶವೇ ಆತು, ಕಾರಣ ಎ೦ತ ಕೇಟರೆ – ಬೆನ್ನಿನ ಮೂಳೆಗೆ ಪೆಟ್ಟು ಆಯಿದು (spinal injury).

ಸುಮಾರು ಎ೦ಟು ವರುಶದ ಮೊದಲೆ, ಸರೀಯಾಗಿ ನೆಡಕ್ಕೊ೦ಡೂ ಓಡಾಡೆ೦ಡು ಇತ್ತಿದ್ದವು. ಸಣ್ಣ ಅಪಘಾತ೦ದ ಕೊರಳು ಬೇನೆ ಜೋರಾಗಿ ಬೆ೦ಗಳೂರಿನ ಒ೦ದು ಆಸ್ಪತ್ರೆಲಿ ತಪಾಸಣೆ ಮಾಡಿಸಿದವು. ಅಲ್ಲಿನ ಆರೈಕೆ ಸರಿ ಆಗದ್ದೆ, ಜೂನಿಯರ್ ಡಾಕುಟ್ರು ಕೊಟ್ಟ ಇ೦ಜೆಕ್ಶನ್ನು (injunction) ಸರಿಯಾಗದ್ದೆ. Spinal injury ಹರಡಿತ್ತು.ಕಾಲು ಸ್ವಾಧೀನ ಕಳದತ್ತು, ಹಾ೦ಗೆ ಅವ್ವು ಈಗ ಮನುಗಿದಲ್ಲೆ… :(

ಹೀ೦ಗಿರ್ತ ಪರಿಸ್ತಿತಿಲಿಯೂ ಮಹಾಬಲೇಶ್ವರ ಶರ್ಮಾರ ಆತ್ಮಬಲಕ್ಕೆ ಮೆಚ್ಚೆಕಾದ್ದೆ. ಅವರ ಆ  ಸಾಧನೆ ಮಾಡುವ ಛಲ ಸದಾ ಹೀ೦ಗೆ ಇರಲಿ..

ನಾವೆಲ್ಲ ಸೇರಿ ಮಹಾಬಲೇಶ್ವರ ಶರ್ಮಾ ಅವ್ವಕ್ಕೆ ಬಲವಾಗಿ ನಿ೦ದು, ಭಗವ೦ತ ಇನ್ನೂ ಹೆಚ್ಚು ಸಾಧಿಸುವ ಶಕ್ತಿ ಕೊಡಲಿ ಹೇಳಿ ಶುಭ ಹಾರೈಸುವೋ°.

| ಹರೇ ರಾಮ |

ಸೂ: ನಿ೦ಗೊ ಇವಕ್ಕೆ ಪೋನು ಮಾಡಿಮಾತಾಡುಲೆ ಅಕ್ಕು, ಸಾಯ೦ಕಾಲ ಸೂಕ್ತ:

ಮಹಾಬಲೇಶ್ವರ ಶರ್ಮಾ

ದೂರವಾಣಿ – 0827-2229757

ನಿ೦ಗೊಗೆ ಪುಸ್ತಕ ಬೇಕುಳಿ ಇದ್ದರೆ ಅವಕ್ಕೆ ನೇರ ಪೋನು ಮಾಡಿ ಮಾತಾಡುಲೆ ಅಕ್ಕು ಅಲ್ಲದ್ರೆ ಎನಗೆ  pks.sharma.ss@gmail.com

ನಿ೦ಗಳ ವಿಳಾಸ ಮೈಲು ಮಾಡಿರೆ ಆನು ಕಳುಸಿಕೊಡುವೆ.

ಮು೦ದೆ ಇವ್ವು ಬರದ ಕನ್ನಡ ಕವನವ ಬಯಲಿ೦ಗ ಬತ್ತು.

.

.

—————————————————————————————-

ಮಹಾಬಲೇಶ್ವರ ಶರ್ಮಾ ಬರದ ಒ೦ದು ಹನಿಗವನ:

ಉದಯವಾಯಿತು

ಧರೆಯು ಬೆಳಗಿತು

ಪಕ್ಷಿ ಕಲರವ ನಾದದಿ,

ಹೂವು ಅರಳಿತು

ಕ೦ಪು ಚೆಲ್ಲುತ

ಮೌನರಾಗದ ಹಾಡಲಿ,

ಮಧುವ ಸವಿಯಲು

ದು೦ಭಿ ಹೊರಟಿತು

ತೇಲಿ ಹಾರುತ ಖುಷಿಯಲಿ,

ಬದುಕು ಬ೦ಡಿಯ

ಗಾಲಿ ತಿರುಗಲು

ಜಡವಬಿಟ್ಟು ಎದ್ದೇಳಿರಿ !.

—————————————————————————————-

ಚುಟುಕು ಕವಿ - ಪಿ.ಜಿ. ಮಹಾಬಲೇಶ್ವರ ಶರ್ಮಾ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಚುಟುಕು ಕವಿ ಮಹಾಬಲೇಶ್ವರ ಶರ್ಮರ ದೇಹಕ್ಕೆ ಊನ ಬಂದರೂ ಪ್ರತಿಭೆಗೆ ಊನ ಬಯಿಂದಿಲೆ.! ಅವರ ಧೀಃ ಶಕ್ತಿ ಎಲ್ಲೋರಿಂಗೂ ಆದರ್ಶ.

  [Reply]

  VN:F [1.9.22_1171]
  Rating: 0 (from 0 votes)
 2. ಡೈಮಂಡು ಭಾವ
  ಸೂರ್ಯ

  ಚುಬ್ಬಣ್ಣೊ… ಮನಸ್ಸು ಕಲಕುವ ಬರಹ… ನಾವೊಂದು ಗ್ರೇಶಿದರೆ ವಿಧಿಯೊಂದು ಬಗತ್ತು…ಅವರ ಗ್ರಹಚಾರ ಹೇಳಿ ಹೇಳೆಕಷ್ಟೆ..
  ಆದರೂ ಅವರ ಜೀನನೋತ್ಸಾಹ ಎಲ್ಲೋರಿಂಗೂ ಮಾದರಿ.
  ಅವರ ಕವನಂಗೊ ನಮ್ಮ ಬೈಲಿಲ್ಲಿಯೂ ಬರಳಿ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣಮಾಷ್ಟ್ರುಮಾವ°ಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣಜಯಗೌರಿ ಅಕ್ಕ°ಶ್ರೀಅಕ್ಕ°ಅನಿತಾ ನರೇಶ್, ಮಂಚಿvreddhiಬಟ್ಟಮಾವ°ಶಾ...ರೀಸುಭಗದೊಡ್ಮನೆ ಭಾವವಿಜಯತ್ತೆಚೆನ್ನೈ ಬಾವ°ಎರುಂಬು ಅಪ್ಪಚ್ಚಿಒಪ್ಪಕ್ಕಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆಸರ್ಪಮಲೆ ಮಾವ°ವಾಣಿ ಚಿಕ್ಕಮ್ಮಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ