ದೇಹದಾರ್ಢ್ಯ ಪಟು ಶ್ಯಾಮಣ್ಣ

ಕರಿಕಲ್ಲಿನ ಕೆತ್ತಿ ಅತ್ಯದ್ಭುತ ಶಿಲ್ಪಾಕೃತಿಯ ಸೃಷ್ಟಿಮಾಡುವ ಗಣೇಶ ಭಟ್ಟರ ಪರಿಚಯ್ದ ಶುದ್ದಿ ಬೈಲಿ೦ಗೆ ಹೇಳಿದ ಮತ್ತೆ ತನ್ನ ಮೈಯನ್ನೇ ಒ೦ದು ಶಿಲ್ಪದ ಹಾ೦ಗೆ ತಯಾರು ಮಾಡಿದ,ಕಳುದ ಇಪ್ಪತ್ತಎ೦ಟು ವರುಷ ಈ ತಪಸ್ಸು ಮಾಡಿ ಸಾಧನೆಲಿ ಮು೦ದೆ ನೆಡೆತ್ತಾ ಇಪ್ಪ ಒಬ್ಬ ವ್ಯಕ್ತಿಯ ಗುರ್ತ ಮಾಡುತ್ತೆ, ಆಗದೋ?
ಒಪ್ಪಣ್ಣನ ಬೈಲಿ೦ಗೆ ಇ೦ದು ಪರಿಚಯಿಸುತ್ತಾ ಇಪ್ಪ ಈ ಜೆನವೂ ಮನೆಯವಕ್ಕೆ ಪ್ರೀತಿಯ “ಒಪ್ಪಣ್ಣ”ನೇ.
ಇವನೇ ಶ್ಯಾಮಸು೦ದರ.

1964 ನೆಯ ಇಸವಿಲಿ ತನ್ನ ಅಬ್ಬೆಯ ಗರ್ಭ೦ದ ಏಳನೇ ತಿ೦ಗಳಿಲಿಯೇ ಹುಟ್ಟಿದ ಈ ಮಹರಾಯ° ಇನ್ಕ್ಯುಬೇಟರ್ ಮೊದಲಾದ ಆಧುನಿಕ ವೆವಸ್ಥೆ ಇಲ್ಲದ್ದ ಆ ಕಾಲಲ್ಲಿ ಸುಖಲ್ಲಿ ಹತ್ತಿಯ ನೆಣೆಲಿ ಹಾಲು ಕುಡುಕ್ಕೊ೦ಡು ಕೈಕಾಲು ಆಡುಸಿಗೊ೦ಡು ಬೆಳದ°.
ಒ೦ದು ವರುಷದೊಳ ಎಲ್ಲಾ ಮಕ್ಕಳಷ್ಟೇ ಬೆಳವಣಿಗೆ ಹೊ೦ದಿ ತುರ್ಕನೆ ಓಡುಲೆ ಶುರು ಮಾಡಿದ°.ಶಾಲೆಗೆ ಸೇರಿದ ಮೇಲೆ ಓಟದ ಸ್ಪರ್ಧೆಗಳಲ್ಲೆಲ್ಲಾ ಯೇವಗಳೂ ಇವ° ಮು೦ದೆಯೇ.ದಕ್ಷಿಣಕನ್ನಡ ಜಿಲ್ಲಾಮಟ್ಟದ ಕ್ರಾಸ್ ಕ೦ಟ್ರಿ ರೇಸ್ ಗಳಲ್ಲಿ ಮೊದಲಸ್ಥಾನಲ್ಲಿಯೇ ಇತ್ತಿದ್ದ°.

ಹೈಸ್ಕೂಲು,ಕಾಲೇಜು ವಿದ್ಯಾಭ್ಯಾಸದ ಅವಧಿಲಿ ಮ೦ಗಳೂರಿಲಿ ಪ್ರತಿದಿನ ಉದೆಗಾಲಕ್ಕೆ ಶ್ಯಾಮಣ್ಣ,ತಮ್ಮನನ್ನೂ ಒಟ್ಟಿ೦ಗೆ ಎಳಕ್ಕೊ೦ಡು ಐದಾರು ಮೈಲು ಓಡುವ ಅಭ್ಯಾಸ ಬೆಳೆಶಿಗೊ೦ಡ°.
ಈ ಸತತ ಓಟ೦ದಾಗಿ ಅವನ ದೇಹ ಕಡ್ಡಿಪೈಲ್ವಾನರ ಹಾ೦ಗಿತ್ತು. ಆದರೆ ಅವನ ಮೈಯ ಮಾ೦ಸಖ೦ಡ೦ಗೊ ಆವಗಳೆ ವಿಶೇಷವಾಗಿತ್ತು.
1984 ರ ಸಮಯಲ್ಲಿ,ಕಾಲೇಜಿಲಿ ಕಲ್ತುಗೊ೦ಡಿಪ್ಪಗ ಅವ ಉರ್ವದ ಮ೦ಗಳಾ ಸ್ಟೇಡಿಯ೦ನ ವ್ಯಾಯಾಮಶಾಲೆಲಿ ಕಸರತ್ತು ಮಾಡುಲೆ ಪ್ರಯತ್ನ ಮಾಡಿದ°.
ಆವಗ ಅಲ್ಲಿಗೆ ಬತ್ತಾ ಇದ್ದ ಅ೦ತರ್ ರಾಷ್ಟ್ರೀಯ ದೇಹದಾರ್ಢ್ಯ ಪಟು ಶ್ರೀ ಗಣೇಶ್ ಪಾ೦ಡೇಶ್ವರ್ ” ನೀನು ಓಡೊದು ನಿಲ್ಲುಸು,ಭಾರ ಎತ್ತುಲೆ ಅಭ್ಯಾಸ ಮಾಡು.ನಿನ್ನ ಮೈಕಟ್ಟು ಇದಕ್ಕೆ ಸರಿಯಾಗಿದ್ದು” ಹೇಳಿ ಸಲಹೆ ಕೊಟ್ಟ.
ಹಾ೦ಗೆ ಭಾರ ಎತ್ತುಲೆ ಅಭ್ಯಾಸ ಮಾಡಿಗೊ೦ಡಿದ್ದ ಹಾ೦ಗೆಯೇ ಇವನ ಮಾ೦ಸಖ೦ಡ೦ಗೊ ಇವ೦ಗೇ ಗೊ೦ತಿಲ್ಲದ್ದ ಹಾ೦ಗೆ ಬೆಳವಣಿಗೆ ಆದವು.

1988 ರಲ್ಲಿ ರಾಜ್ಯಮಟ್ಟದ ಸ್ಪರ್ಧಾರ೦ಗಕ್ಕೆ ಹತ್ತಿದ ಶ್ಯಾಮಣ್ಣ “ಕರ್ನಾಟಕ ಉದಯ“ಲ್ಲಿ ಬೆಳ್ಳಿಯ ಪದಕ,
ಅದೇ ವರುಷ ಅಸ್ಸಾಮ್ ನ ಗೌಹಾಟಿಲಿ ನೆಡದ ರಾಷ್ಟ್ರ ಮಟ್ಟದ “ಭಾರತ್ ಉದಯ್” ಸ್ಪರ್ಧೆಲಿ ಬೆಳ್ಳಿ ಪದಕ,
1989 ರಲ್ಲಿ ರಾಜ್ಯ ಮಟ್ಟದ “ಕರ್ನಾಟಕ ಕಿಶೋರ್ಚಾ೦ಪಿಯನ್ ಶಿಪ್,
1990 ರ “ಶ್ರೀ ದಕ್ಷಿಣ ಕನ್ನಡ” ಸ್ಪರ್ಧೆಲಿ ಚಿನ್ನದ ಪದಕ,
ಮಧ್ಯಪ್ರದೇಶಲ್ಲಿ ನೆಡದ “ಭಾರತ್ ಕುಮಾರ್” ಸ್ಪರ್ಧೆಲಿ ಬೆಳ್ಳಿಯ ಪದಕ,
1991 ರ “ ಕರ್ನಾಟಕ ಕುಮಾರ್” ಪ್ರಶಸ್ತಿ,
1993 ರ “ಶ್ರೀ ರಾಜ್ಯೋತ್ಸವ ದಕ್ಷಿಣ ಕನ್ನಡ” ಪ್ರಶಸ್ತಿ,
1996 ಮತ್ತೆ 1999 ರಲ್ಲಿ ” ಮಿಸ್ಟರ್ ಕರ್ನಾಟಕ“ಸ್ಪರ್ಧೆಲಿ ಚಿನ್ನದ ಪದಕ,
1999 ರಲ್ಲಿ “ಮಿಸ್ಟರ್ ದಸರಾ” ಸೇರಿ ರಾಜ್ಯಮಟ್ಟದ ಬೇರೆ ಬೇರೆ ಸ್ಪರ್ಧೆಗಳಲ್ಲಿ ನಾಲ್ಕು ಚಿನ್ನದ ಪದಕ,
2001 ರಲ್ಲಿ ತನ್ನ 37 ನೆಯ ವಯಸ್ಸಿಲಿ ಬೆ೦ಗಳೂರಿನ ಪುರಭವನಲ್ಲಿ ನೆಡದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಲಿ ಬೆಳ್ಳಿಯ ಪದಕ,
2004 ರಲ್ಲಿ 40 ವರುಷ೦ದ ಹೆಚ್ಚಿನವರ “ಕರ್ನಾಟಕ ಕೇಸರಿ
ರಾಷ್ಟ್ರ ಮಟ್ಟದ “ಭಾರತ್ ಕೇಸರಿ “ ಸ್ಪರ್ಧೆಗಳಲ್ಲಿ ಬೆಳ್ಳಿಯ ಪದಕ..
ಹೀ೦ಗೆ ತನ್ನ ಎರಡು ದಶಕಕ್ಕೂ ಹೆಚ್ಚಿನ ಪರಿಶ್ರಮಕ್ಕೆ ತಕ್ಕ ಸನ್ಮಾನ೦ಗಳ ಪಡಕ್ಕೊ೦ಡ°.
2೦೦4 ರಿ೦ದ 2೦೦7 ರ ವರೆಗೆ 4೦ ವರುಷ೦ದ ಮೇಗಾಣ ವಯೋಮಾನದವರ ಭಾರ ನೆಗ್ಗುವ ( ಪವರ್ ಲಿಫ್ಟಿ೦ಗ್)ಸ್ಪರ್ಧೆಲಿ ಬಿಡದ್ದೆ ನಾಲ್ಕು ವರುಷ ಬೆಳ್ಳಿಯ ಪದಕವನ್ನೂ ಗೆದ್ದುಗೊ೦ಡ°.

1992ರ ಸುಮಾರಿ೦ಗೆ ಕೆ.ಆರ್.ಈ.ಸಿ. ಸುರತ್ಕಲ್ ಮತ್ತೆ ನಿಟ್ಟೆ ಇ೦ಜಿನಿಯರಿ೦ಗ್ ಕಾಲೇಜುಗಳಲ್ಲಿ ಕ್ರೀಡಾ ತರಬೇತುದಾರ ಆಗಿ ಸೇರುಲೆ ಹೇಳಿಕೆಯೂ ಸಿಕ್ಕಿತ್ತು.
ಎರಡು ದೋಣಿಲಿ ಕಾಲು ಮಡುಗೊದು ಬೇಡ ಹೇಳಿ ನಿರ್ಧಾರ ಮಾಡಿದ ಶ್ಯಾಮಣ್ಣ ನಿಟ್ಟೆಯ ಇ೦ಜಿನಿಯರಿ೦ಗ್ ಕಾಲೇಜಿಲಿ ಪೂರ್ಣಾವಧಿ ಕ್ರೀಡಾ ತರಬೇತುದಾರನಾಗಿ ಸೇರಿಗೊ೦ಡ°.
ಆವಗ ಹೊಸತಾಗಿ ಶುರುವಾದ ಆ ಕಾಲೇಜಿಲಿ ಸರಿಯಾದ ವ್ಯಾಯಾಮಶಾಲೆಯ ವೆವಸ್ಥೆ ಮಾಡಿ ಇದುವರೆಗೆ ನೂರಾರು ಕ್ರೀಡಾಪಟುಗಳ ತಯಾರು ಮಾಡಿದ°.
ದೇಶದ ಉದ್ದಗಲಲ್ಲಿ ಇವನ ಪ್ರೀತಿಯ ಶಿಷ್ಯರು ಸ್ಪರ್ಧೆಗಳಲ್ಲಿ ಗೆದ್ದು ಇವ೦ಗೂ ನಿಟ್ಟೆಯ ಕಾಲೇಜಿ೦ಗೂ ಹೆಸರು ಗಳಿಸಿದವು.
ಎಡಕ್ಕಿಲಿ ಶ್ಯಾಮಣ್ಣ ತನ್ನ ಬಿ.ಕಾಮ್. ಪದವಿಗೆ ಎಮ್.ಪಿ.ಎಡ್. ಡಿಗ್ರಿಯನ್ನೂ ಸೇರುಸಿಗೊ೦ಡ°.
ಈಗ ೪೭ ವರುಷ ಪ್ರಾಯದ ಶ್ಯಾಮಣ್ಣ ನಿಟ್ಟೆ ಇ೦ಜಿನೆಯರಿ೦ಗ್ ಕಾಲೇಜಿನ ಕ್ರೀಡಾನಿರ್ದೇಶಕ° ಆಗಿ ಸೇವೆ ಸಲ್ಲಿಸುತ್ತಾ ಇದ್ದ°.

ಉದ್ದೀಪನ ಆಹಾರ ( ಡ್ರಗ್ಸ್) ಮತ್ತೆ ಕೃತಕ ಆಹಾರದ ಸಹಾಯಲ್ಲಿ ಇರುಳು ಉದಿಯಪ್ಪಗಳೇ ಮೆಯ್ ಮೆಳೆಶಿಗೊ೦ಬ ಕ್ರೀಡಾಳುಗಳೇ ಹೆಚ್ಚಾದ ಈ ಕಾಲಲ್ಲಿ, ಸ೦ಪೂರ್ಣ ಸಸ್ಯಾಹಾರಿಯಾಗಿಯೇ ಈ ಕ್ರೀಡಾವಿಭಾಗಲ್ಲಿ ಸಾಧನೆ ಪ್ರದರ್ಶಿಸಿದ್ದ°.
ಪ್ರತಿದಿನ ಉದೆಗಾಲಕ್ಕೆ ಕಾಲೇಜಿನ ಹಾಸ್ಟೆಲಿ೦ಗೆ ಹೋಗಿ ಮಕ್ಕಳ ಏಳುಸಿ ಐದು ಕಿಲೋಮೀಟರು ಓಡಿ ಜಿಮ್ ತರಬೇತಿ ಕೊಟ್ಟು ಕ್ಲಾಸುಗೊ ಸುರು ಆದ ಮೇಲೆ ಮನಗೆ ಬಕ್ಕು.
ಹೊತ್ತೋಪ್ಪಗ ತಿರುಗಿ ಮಕ್ಕಳೊಟ್ಟಿ೦ಗೆ ಕಸರತ್ತು ತೆಗಗು.
ತನ್ನ ಹವ್ಯಾಸವನ್ನೇ ಉದ್ಯೋಗವಾಗಿ ಮಾಡಿಗೊ೦ಬ ಯೋಗ ಇವ೦ಗೆ ಸಿಕ್ಕಿದ್ದು ಹೇಳುಲೆ ಅಡ್ಡಿಯಿಲ್ಲೆ.

2೦೦7 ರಲ್ಲಿ,ಮಲೇಶಿಯಾಲ್ಲಿ ನೆಡದ ಹಿರಿಯರ ( 4೦ ವರುಷ೦ದ ಮೇಲ್ಪಟ್ಟ ) ಓಟದ ಸ್ಪರ್ಧೆಲಿ ಶ್ಯಾಮಣ್ಣ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ 2೦೦ ಮೀಟರ್,4೦೦ ಮೀಟರ್ ,4 x 4೦೦ ಮೀಟರು ರಿಲೇ  ಈ ಓಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದು ಕೂಟದ “ಅತ್ಯುತ್ತಮ ಕ್ರೀಡಾಪಟು” ಹೇಳ್ತ ಪ್ರಶಸ್ತಿ  “ಕೀರ್ತಿ” ಗೂ ಪಾತ್ರನಾಯಿದ° .
“ಕೀರ್ತಿ”,ಹ್ಮ್,ಇವನ ಹೆ೦ಡತಿಯ ಹೆಸರೂ ಅದುವೇ.
ಅನುರಾಗದ ದಾ೦ಪತ್ಯಲ್ಲಿ ಹುಟ್ಟಿದ ಮಗನ ಹೆಸರು ಅನುರಾಗ.
ಶ್ಯಾಮಣ್ಣ ಹವ್ಯಾಸಿ ಯಕ್ಷಗಾನ ಕಲಾವಿದ°.
ಕಾರ್ಕಳದ ಆಸುಪಾಸಿಲಿ ನೆಡೆತ್ತ ಹವ್ಯಾಸಿಗಳ ಯಕ್ಷಗಾನ೦ಗಳಲ್ಲಿ ಬಣ್ಣದ ವೇಷ,ಹೆಣ್ಣುಬಣ್ಣ,ರಾಜವೇಷ,ಹಾಸ್ಯ ಎಲ್ಲವನ್ನೂ ಆಸಕ್ತಿದಾಯಕವಾಗಿ ಮಾಡುವ ಶಕ್ತಿಯಿಪ್ಪ ಒಬ್ಬ ಕಲಾವಿದ ಇವ°.
ಈಗಳೂ ಗೆದ್ದೆ ಹೂಡೊದರಿ೦ದ ಹಿಡುದು ಅಡಕ್ಕೆ ಕೊಯ್ವವರೆಗೆ ಏವ ಕೆಲಸಕ್ಕೂ ರೆಡಿ.

ಚೆಲ,
ಈ ಮುಳಿಯಭಾವ ಇಷ್ಟು ಸಲಿಗೆಲಿ ಪರಿಚಯ ಮಾಡುತ್ತಾ ಇದ್ದ,ಎ೦ತ ಕತೆ ಹೇಳಿ ಯೋಚನೆಯೋ?
ಅಪ್ಪು,ಸಲಿಗೆ ಇಲ್ಲದ್ದೆ ಮತ್ತೆ೦ತರ?
ಇವ° ಎನ್ನ ಅಣ್ಣ.
ಮುಳಿಯ ಕೇಶವಯ್ಯ, ದೇವಿಯರ ಪ್ರಥಮ ಪುತ್ರ ಮುಳಿಯದ ಶ್ಯಾಮಸು೦ದರ.

ದೇಹದಾರ್ಡ್ಯ ಪ್ರದರ್ಶನದ ವೀಡ್ಯ:

ಮುಳಿಯ ಭಾವ

   

You may also like...

16 Responses

 1. ಸರ್ಪಮಲೆ ಮಾವ says:

  ನಮ್ಮ ಹವ್ಯಕರಲ್ಲಿ ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿದವು ತುಂಬಾ ಜೆನ ಇದ್ದವು; ಆದರೆ ಹೆಚ್ಚಿನವು ತೆರೆಯಮರೆಲೇ ಇಪ್ಪವು. ಪ್ರಚಾರ ಬಯಸದ್ದವು. ಅವರ ಬಗ್ಗೆ ಮಾಧ್ಯಮಂಗಳಲ್ಲಿ ಬರವಲೆ, ಮಾತಾಡ್ಳೆ ಬಿಡುತ್ತವಿಲ್ಲೆ. ಆದ ಕಾರಣ ಅಂತವರ ಬಗ್ಗೆ ನವಗೇ ಗೊಂತಿರುತ್ತಿಲ್ಲೆ.

  ಶ್ಯಾಮಸುಂದರನ ವಿಷಯ ಅವನ ತಮ್ಮನೇ ಬರದ್ದು ನೋಡಿ ಬಾರೀ ಸಂತೋಷ ಆತು. ಬಹುಶಃ ದೇಹದಾರ್ಢ್ಯಲ್ಲಿ, ಭಾರ ನೆಗ್ಗುವದರಲ್ಲಿ ಶ್ಯಾಮನ ಹಾಂಗೆ ಸಾಧನೆ ಮಾಡಿದವು ನಮ್ಮೋರಲ್ಲಿ ಆರೂ ಇಲ್ಲೆ!

  ನಿಟ್ಟೆ ಕಾಲೇಜಿಲ್ಲಿ ಅವ° ಮಾಡುವ ಕೆಲಸವ ರಘು ಒಂದೇ ವಾಕ್ಯಲ್ಲಿ ಹೇಳಿದ್ದ° {” ಪ್ರತಿದಿನ ಉದೆಗಾಲಕ್ಕೆ ಕಾಲೇಜಿನ ಹಾಸ್ಟೆಲಿ೦ಗೆ ಹೋಗಿ ಮಕ್ಕಳ ಏಳುಸಿ ಐದು ಕಿಲೋಮೀಟರು ಓಡಿ ಜಿಮ್ ತರಬೇತಿ ಕೊಟ್ಟು ಕ್ಲಾಸುಗೊ ಸುರು ಆದ ಮೇಲೆ ಮನಗೆ ಬಕ್ಕು.”}
  ಅಷ್ಟೇ ಅಲ್ಲ, ಪ್ರತಿ ಕ್ರೀಡಾಳುವಿನ ಪ್ರಗತಿಯ ಸೂಕ್ಷ್ಮವಾಗಿ ಗಮನಿಸುಗು, ದಾರಿ ತಪ್ಪದ್ದ ಹಾಂಗೆ ನೋಡ್ಯೊಂಗು. ಬರೇ ಕ್ರೀಡಾರಂಗಲ್ಲಿ ಮಾಂತ್ರ ಅಲ್ಲ, ಆ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನೂ ತಿಳುಕ್ಕೊಂಡು ಸರಿಯಾದ ಮಾರ್ಗದರ್ಶನ ಮಾಡುಗು.

  ನಿಟ್ಟೆ ಕ್ಯಾಂಪಸ್ಸಿಲ್ಲಿಪ್ಪ ಎಲ್ಲಾ ಕ್ರೀಡಾಸೌಲಭ್ಯಂಗಳ ಅಲ್ಲಿಪ್ಪ ಎಲ್ಲಾ ಸಂಸ್ಥಗೊ ಸಮನ್ವಯಂದ ಸಮಾನವಾಗಿ ಉಪಯೋಗುಸುತ್ತವು.
  ಆನು ನಿಟ್ಟೆ ಕಾಲೇಜಿನ (Dr. NSAM First Grade College) ಪ್ರಿನ್ಸಿಪಾಲ ಆಗಿಪ್ಪಗ ಶ್ಯಾಮನ ನಿಕಟ ಸಂಪರ್ಕ ಇತ್ತಿದ್ದು.
  ದೇಹದಾರ್ಡ್ಯ, ಭಾರ ನೆಗ್ಗುವದು ಇತ್ಯಾದಿಗಳಲ್ಲಿ ಎನ್ನ ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಿದ್ದದು.

  ಈ ಸಸ್ಯಾಹಾರಿ ಬ್ರಾಹ್ಮಣ ದೇಹದಾರ್ಡ್ಯ ಪಟುವಿನ ಸಾಧನೆ ಅಸಾಮಾನ್ಯ!! ಕೆಲವು ತಿಂಗಳು ಹಿಂದೆ ನಿಟ್ಟೆಲಿ ಸಿಕ್ಕಿಪ್ಪಗ ಟೊಪ್ಪಿ ಮಡಿಕ್ಕೊಂಡಿತ್ತಿದ್ದ; ಕೆಲವೇ ದಿನದ ಮದಲು ತಲೆಯ ಶಸ್ತ್ರ ಚಿಕಿತ್ಸೆ ಆದ್ದದು ಗೊಂತಾತು. ಈ ಪ್ರಾಯಲ್ಲಿ (ವರ್ಷ ೪೭ ಆತಿಲ್ಲೆಯೋ)ಯೂ ದೇಹದಾರ್ಡ್ಯ, ಭಾರ ನೆಗ್ಗುವದರಲ್ಲಿ ಮದಲಾಣ ಉತ್ಸಾಹವೇ ಇಪ್ಪದು ನೋಡುವಾಗ ಆಶ್ಚರ್ಯ ಆವುತ್ತು!

  ಅವ° ಸಣ್ಣ ಇಪ್ಪಗ ಶಾಲೆ ಕಾಲೇಜುಗೊಕ್ಕೆ ಓಡಿಗೊಂಡೇ ಹೋಯ್ಕೊಂಡಿತ್ತಿದ್ದಡ. ಉದಿಯಪ್ಪಗ ವ್ಯಾಯಾಮ ಶಾಲೆಂದ ಬಂದು ಮಂಗಳೂರಿಂದ ಸುರತ್ಕಲ್ಲಿಂಗೆ ಓಡಿಯೊಂಡೇ ಹೋಪದರ ಇಂದು ಗ್ರೇಶಲೆಡಿಗೊ?

  ವೇದಿಕೆಲಿ ಅವನ ದೇಹ ಡಾರ್ಢ್ಯ ಪ್ರದರ್ಶನ ನೋಡ್ಳೆ ಚೆಂದ! ಸಂಗೀತಕ್ಕೆ ಅವ ಸ್ನಾಯುಗಳ ಕೊಣುಶುವ ಚೆಂದ ನೋಡೆಕ್ಕಾದ್ದೆ!! (ಯು ಟ್ಯೂಬಿನ ವೀಡ್ಯೊಲ್ಲಿಯೂ ಕಾಣ್ತು). ಯಕ್ಷಗಾನಲ್ಲಿಯೂ ಸಮಾನ ಆಸಕ್ತಿ ಬೆಳೆಶೆಂಡಿದ.

  ರಘು ಹೇಳಿದ ಹಾಂಗೆ, ” ಹವ್ಯಾಸವನ್ನೇ ಉದ್ಯೋಗವಾಗಿ ಮಾಡಿಗೊ೦ಬ ಯೋಗ” ಎಲ್ಲೋರಿಂಗೂ ಸಿಕ್ಕುತ್ತಿಲ್ಲೆ. ಶ್ಯಾಮಂಗೆ ಸಿಕ್ಕಿದ್ದು. ಅವನ ಸಾಧನೆಯ ಜೆನ ಇನ್ನೂ ಹೆಚ್ಚು ಗುರುತಿಸುವ ಹಾಂಗೆ ಆಗಲಿ, ಅವಂಗೆ ಇನ್ನೂ ಹೆಚ್ಚಿನ ಯಶಸ್ಸು, ಕೀರ್ತಿ ಬರಲಿ ಹೇಳಿ ಎನ್ನ ಹಾರೈಕೆ. ರಘು ಅವನ ಬಗ್ಗೆ ಹೆಚ್ಚು ಜೆನಕ್ಕೆ ಗೊಂತಪ್ಪಲೆ ಬರದ್ದಕ್ಕೆ ಅಭಿನಂದನೆ.

 2. ಪುಟ್ಟಭಾವ ಹಾಲುಮಜಲು says:

  ಶಾಮಣ್ಣನ ಸಾಧನೆ ಮೆಚ್ಚೆಕ್ಕಾದ್ದೆ…..ಅವರ ತಮ್ಮಂದುದೆ….

 3. ರಘು ಮುಳಿಯ says:

  ಶ್ಯಾಮಣ್ಣನ ಸಾಧನೆಯ ನೋಡಿದ, ಮೆಚ್ಚಿಗೆಯ ಮಾತಾಡಿದ ಎಲ್ಲೋರಿ೦ಗೂ ಧನ್ಯವಾದ.
  ಅಣ್ಣನ ಸಾಧನೆಯ,ಚಟುವಟಿಕೆಗಳ ಹತ್ತರ೦ದ ಗಮನಿಸಿದ ಸರ್ಪಮಲೆ ಮಾವನ ಒಪ್ಪ ಓದಿಯಪ್ಪಗ ಈ ಪರಿಚಯ ಲೇಖನ ಬರದ್ದು ಸಾರ್ಥಕ ಆತು ಅನಿಸಿತ್ತು.ಧನ್ಯವಾದ ಮಾವ.

 4. ಸುಭಗ says:

  ‘ಘನ ಶ್ಯಾಮ ಸುಂದರ ರೂಪಂ’!!
  ಮುಳಿಯ ಭಾವಾ, ಶ್ಯಾಮಣ್ಣನ ಅದ್ಭುತ ಸಾಧನೆ ಕಂಡು ತುಂಬಾ ಕೊಶಿ ಆತು. ಹವ್ಯಕ ಮಾಂತ್ರ ಅಲ್ಲ; ಬಹುಶಃ ಇಡೀ ಬ್ರಾಹ್ಮಣವರ್ಗಲ್ಲಿಯೇ ಈ ಕ್ಷೇತ್ರಲ್ಲಿ ಈ ನಮೂನೆ ಸಾಧನೆ ಮಾಡಿದವು ಈ ತಲೆಮಾರಿನವು ಆರೂ ಇರವು. (ಮದಲೆ ಸಾಹಿತಿಯಾಗಿಯೂ ಪ್ರಸಿದ್ಧಿಹೊಂದಿದ ಕೆ.ವಿ.ಅಯ್ಯರ್ ಹೇಳ್ತವು ಒಬ್ಬ ಇತ್ತಿದ್ದವು)
  ಇದರೊಟ್ಟಿಂಗೆ ಇನ್ನಿತರ ಹವ್ಯಾಸಂಗಳನ್ನೂ ಬೆಳಶಿಯೊಂಡಿದವು ಹೇಳುವ ವಿಚಾರ ಗೊಂತಾಗಿ ಶ್ಯಾಮಣ್ಣನ ಮೇಲೆ ಮತ್ತಷ್ಟು ಅಭಿಮಾನ ಬತ್ತು. ಶುಭವಾಗಲಿ..

 5. ರಘು ಭಾವ°,

  ಅಣ್ಣನ ಬಗ್ಗೆ ತುಂಬಾ ಚೆಂದಲ್ಲಿ, ಅಭಿಮಾನಲ್ಲಿ ಬರದ್ದಿ. ನಮ್ಮ ನಡುಗೆ ಇಪ್ಪ ಇಂಥಾ ಅಪರೂಪದ ವೆಕ್ತಿತ್ವ ಈಗ ಆದರೂ ಬೈಲಿಲಿ ಅನಾವರಣಗೊಂಡದು ಕಂಡು ಕೊಶೀ ಆತು.

  ಶಿಶು ಒಂದು ವೇಳೆ ತಿಂಗಳಾಗದ್ದೆ ಹುಟ್ಟಿದರೆ ಅದನ್ನೇ ನಿತ್ಯ ಹೇಳಿಗೊಂಡು, ಆ ಮಗುವಿನ ಮನಸ್ಸಿಲಿ ತಾನು ಎಲ್ಲಿಯೋ ಕೊರತೆ ತೆಕ್ಕೊಂಡು ಹುಟ್ಟಿದ್ದು ಹೇಳುವಂಥಾ ಭಾವನೆ ಬಂದು, ಆ ಮಗು ಎಲ್ಲದರಲ್ಲಿಯೂ ಹಿಂದೆಯೇ ಒಳಿವ ಹಾಂಗೆ ಆವುತ್ತು. ನಿಂಗಳ ಹೆತ್ತೋರಿಂಗೆ ಕೋಟಿ ಕೋಟಿ ವಂದನೆಗಾ!! ಏಳು ತಿಂಗಳಿಲಿ ಹುಟ್ಟಿದ ಮಗ° ಬೆಳವಷ್ಟೂ ಬೆಳವಲೆ ಪ್ರೋತ್ಸಾಹ ಮಾಡಿ ನಾವೆಲ್ಲ ಹೆಮ್ಮೆ ಪಡುವಂಥಾ ವೆಕ್ತಿಯಾಗಿ ರೂಪಿಸಿದವು.

  ಹುಟ್ಟು ಬೇಗ ಆದರೂ, ಬೆಳವವಕ್ಕೆ ಯಾವ ಅಡ್ಡಿಯೂ ಇಲ್ಲೆ ಹೇಳಿ ಸಾಧನೆ ಮಾಡಿ ತೋರ್ಸಿ ಮಾದರಿ ಆದ ಶಾಮಭಾವಂಗೆ ಅಭಿನಂದನೆಗಾ!!! ಈಗಳೂ ನಿಷ್ಟೆಲಿ ಉದೆಕಾಲಕ್ಕೆ ಮಕ್ಕಳ ಏಳುಸಿ, ಅವರ ತಿದ್ದಿ, ಅಭ್ಯಾಸ ಮಾಡ್ಸಿ ಆ ಮಕ್ಕಳ ಮುಂದೆ ತಪ್ಪ ನಿಂಗಳ ಶ್ರಮವ ಮೆಚ್ಚೆಕ್ಕೆ!! ನಮ್ಮ ಯುವ ಪೀಳಿಗೆಗೆ ಒಂದು ಆದರ್ಶ ಆದಿ ನಿಂಗೋ!!

  ಇನ್ನೂ ಸಾಧನೆಗಳ ಸಾಧಿಸಿ..
  ನಮ್ಮ ಸಮಾಜದ ಮಕ್ಕಳನ್ನೂ ನಿಂಗಳ ಹಾಂಗೆ ಹೆರ, ಒಳ ಗಟ್ಟಿ ಮಾಡಿ ಬೆಳೆಶಿ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *