ಕಣ್ಯಾರ ಕಂಡ ಮೇರು ವ್ಯಕ್ತಿ, ಹಿರಿಯ ಚೇತನ ದಿ. ಡಾ|| ಮಡ್ವ ಶಾಮ ಭಟ್ಟ

September 10, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಣ್ಯಾರ ಪೇಟೆಲಿ “ಶ್ರೀ ಮಹಾದೇವ ಕ್ಲಿನಿಕ್” ಲ್ಲಿ ಹಲವಾರು ವರ್ಷ ಜನ ಸೇವೆಯೇ ಜನಾರ್ದನ ಸೇವೆ ಹೇಳಿ ಕಾರ್ಯ ಪ್ರವೃತ್ತರಾಗಿತ್ತಿದ್ದ ಮಹಾನ್ ಚೇತನ ಇಹ ಲೋಕ ಬಿಟ್ಟು ಸರಿ ಸುಮಾರು 6 ವರ್ಷ ಕಳುದರೂ ಅವರ ನೆನಪು ಇನ್ನೂ ಮಾಸದ್ದೆ ಇಪ್ಪಲೆ ಕಾರಣ ಅವು ಸಮಾಜಲ್ಲಿ ತನ್ನ ತೊಡಗಿಸಿಗೊಂಡು ಆದರ್ಶಪ್ರಾಯರಾಗಿ ಇತ್ತಿದ್ದ ರೀತಿಂದಾಗಿ. ಇವೇ ಡಾ || ಮಡ್ವ ಶಾಮ ಭಟ್.

ಮದ್ರಾಸಿನ ಕಿಲ್ಪಾಕಂ ಮೆಡಿಕಲ್ ಕಾಲೇಜಿಲ್ಲಿ LIM ಡಿಗ್ರಿ ತೆಕ್ಕೊಂಡು ತನ್ನ ಊರಿಲ್ಲೇ ಜೆನಂಗಳ ಸೇವೆ ಮಾಡುವ ಉದ್ದೇಶಂದ ಕಣ್ಯಾರ ಪೇಟೆಲಿ 1956 ರಿಂದ ವೃತ್ತಿ ಜೀವನವ ಆರಂಭಿಸಿ 46 ವರ್ಷದ ಸುಧೀರ್ಘ ಸೇವೆ ಸಲ್ಲಿಸಿದವು.

ದಿ | ಡಾ. ಶಾಮ ಭಟ್ ದಂಪತಿ

ಇವು 4-5 ದಶಕಗಳ ಹಿಂದೆಯೇ ಕಣ್ಯಾರಕ್ಕೆ ಪರಿಚಯಿಸಿದ ಕೆಲವು ಪ್ರಥಮಂಗೊ (ನೇಂದ್ರ ಬಾಳೆ ಹಣ್ಣಿನ ಪ್ರಥಮಂದ ಹೆಚ್ಚು ರುಚಿ)

 • ಮಕ್ಕೊಗೆ ಬಪ್ಪ ಡಿಫ್ತೀರಿಯಾ, ನಾಯಿ ಕೆಮ್ಮು ಮತ್ತೆ ಟೆಟಾನಸ್ ಇದಕ್ಕೆ ಒಟ್ಟಿಂಗೆ ಕೊಡುವ Triple Antigen ಮತ್ತೆ ಪೋಲಿಯೊ ಲಸಿಕೆಯ ಪರಿಚಯಿಸಿ ಜೆನಂಗೊಕ್ಕೆ ಇದರ ಬಗ್ಗೆ ಜಾಗೃತಿ ಮೂಡಿಕೆ.
 • 6 ಹಾಸಿಗೆಯ ನರ್ಸಿಂಗ್ ಹೋಂ ಕಟ್ಟಿಸಿ, ಮಣಿಪಾಲದ ಡಾ|| ಟಿ. ಎಂ.ಎ. ಪೈ ಇವರಿಂದ ಉದ್ಘಾಟಸಿ ಜೆನಂಗಳ ಸೇವೆಗೆ ಉಪಯೋಗ.
 • ರಕ್ತ, ಕಫ, ಮಲ, ಮೂತ್ರ ಪರೀಕ್ಷೆಗಾಗಿ ಇದೇ ನರ್ಸಿಂಗ್ ಹೋಂ ಲ್ಲಿ ಪ್ರಯೋಗ ಶಾಲೆ ಪ್ರಾರಂಭ.
 • ಮೂಳೆ ಸಂಬಂಧ, ಶ್ವಾಸ ಕೋಶ ತೊಂದರೆಗಳ ಪರೀಕ್ಷೆಗಾಗಿ X-Ray ಲಾಬೊರೇಟರಿ ಪ್ರಾರಂಭ.
 • ಬೇರೆ ಬೇರೆ ವೈದ್ಯಕೀಯ ಕ್ಷೇತ್ರಲ್ಲಿ ಹೆಸರು ಮಾಡಿದ ವೈದ್ಯರಿಂದ, ತನ್ನ ನರ್ಸಿಂಗ್ ಹೋಮಿಲ್ಲಿ, ತಪಾಸಣೆಗೆ ವ್ಯವಸ್ಥೆ.
 • ಪ್ರತ್ಯೇಕ ಹೆರಿಗೆ ವಾರ್ಡ್ ಪ್ರಾರಂಭಿಸಿ, ಅದಕ್ಕೆ ತಜ್ಞ ದಾದಿಯ ನೇಮಕ.
 • ಅಂದ್ರಾಂಣ ಕಾಲಲ್ಲೇ, ವಿಷ ಜಂತುಗೊ (ಹಾವುಗೊ) ಕಚ್ಚಿದ್ದಕ್ಕೆ ಬೇಕಾದ ಉಪಚಾರಲ್ಲಿ ಪ್ರತ್ಯೇಕ ತರಬೇತಿ ತೆಕ್ಕೊಂಡು, ಅದಕ್ಕೆ ಬೇಕಾದ ಪ್ರತಿ ವಿಷ ಮತ್ತೆ ಚಿಕಿತ್ಸೆ ಯಾವಾಗಲೂ ಜೆನಂಗೊಕ್ಕೆ ಸಿಕ್ಕುವ ಹಾಂಗೆ ವ್ಯವಸ್ಥೆ ಮಾಡಿ, ಭಾರೀ ಹೆಸರು ಮಾಡಿತ್ತಿದ್ದವು.
 • ಪ್ರತಿಯೊಬ್ಬ ರೋಗಿಗಳ ಅನಾರೋಗ್ಯದ ವಿವರ, ಅದಕ್ಕೆ ಕೊಟ್ಟ ಮದ್ದುಗಳ ವಿವರಂಗಳ ಪ್ರತ್ಯೇಕ ಪ್ರತ್ಯೇಕ ಪುಸ್ತಕಂಗಳಲ್ಲಿ ಬರದು ಮಡುಗಿ, ಅವು ಮತ್ತಾಣ ಸರ್ತಿ ಬಪ್ಪಗ ರೋಗ ನಿರ್ಧರಿಸಲೆ ಅನುಕೂಲ ಅಪ್ಪ ಹಾಂಗೆ ವ್ಯವಸ್ಥೆ.
 • ಕಂಪ್ಯೂಟರ್ ಬಂದ ಸಮಯಲ್ಲಿ, ಅದರ ಕಲ್ತು, ಅದರಲ್ಲಿ ರೋಗಿಗಳ ವಿವರ ಸಂಗ್ರಹ.
 • ಆಸ್ಪತ್ರೆಗೆ ಬಪ್ಪಲೆ ಎಡಿಯದ್ದ ಅಶಕ್ತ ರೋಗಿಗಳ ಪರೀಕ್ಷೆ ಮಾಡ್ಲೆ ಅವರ ಮನೆಗೊಕ್ಕೆ ಕೂಡಾ ಹೋಪದು. ಹಗಲು ಇರುಳು ಹೇಳುವ ಯಾವುದೇ ಭೇದ ಇಲ್ಲದ್ದೆ ಸೇವೆ ಮಾಡುವದು. ವಾಹನ ವ್ಯವಸ್ಥೆ ಇಲ್ಲದ್ದಲ್ಲಿಗೆ ನೆಡಕ್ಕೊಂಡೋ, ದೋಣಿಲೋ, ಸಿಕ್ಕಿದ್ದರಲ್ಲಿ ಹೋಪದು.

ಒಬ್ಬ ವೈದ್ಯನಾಗಿ ಕೈಕ್ಕೆ ಮಾತ್ರೆ ಕೊಟ್ಟು, ಬೇನೆ ಅಪ್ಪ ಇಂಜೆಕ್ಷನ್ ಕೊಟ್ಟು ರೋಗಿಗಳ ಬೇನೆ ನಿವಾರಿಸಿ, ಅವರ ಮೋರೆಲಿ ನೆಗೆ ತರಿಸಿದವು ಮಾತ್ರ ಅಲ್ಲದ್ದೆ, ಬೇಕಾದಲ್ಲಿ ಆಪ್ತ ಸಲಹೆ ಕೂಡಾ ಕೊಟ್ಟು ಅವರ ಪ್ರೀತಿ ಗಳಿಸಿದವು.

ಯಾವಾಗಲೂ ಹಸನ್ಮುಖಿಯಾದ ಇವು ಮಕ್ಕಳೊಟ್ಟಿಂಗೆ ಮಕ್ಕಳಾಗಿ, ಸರೀಕರ ಒಟ್ಟಿಂಗೆ ಸರೀಕರಾಗಿ, ಗಣ್ಯರ ಒಟ್ಟಿಂಗೆ ಗಣ್ಯರಾಗಿ, ಹಿರಿಯರ ಎದುರು ಕಿರಿಯರಾಗಿ, ಜನಾನುರಾಗಿಯಾಗಿ ಜೀವನ ನಡೆಸಿದ ಮಹಾನ್ ವ್ಯಕ್ತಿ.
ಕಣಿಪುರ “ಶ್ರೀ ಗೋಪಾಲಕೃಷ್ಣ” ಮತ್ತೆ ಕಿದೂರು “ಶ್ರೀ ಮಹಾದೇವ” ನ ಭಕ್ತರಾಗಿ, ಅಲ್ಲಿಯ ಅಭಿವೃದ್ಧಿ ಕಾರ್ಯಕ್ರಮಂಗಳಲ್ಲಿ ತನ್ನ ತೊಡಗಿಸಿಗೊಂಡವು.
ಪ್ರತಿ ಶನಿವಾರ ಪ್ರಾತಃಕಾಲ ಭಕ್ತರ ಸೇರಿಸಿ “ಓಮ್ ನಮಃ ಶಿವಾಯ” ನಾಮ ಜಪವ ಕೆದೂರು ದೇವಸ್ಥಾನಲ್ಲಿ ಆರಂಭಿಸಿದವು.

ರಾಮಕೃಷ್ಣ ಪರಮ ಹಂಸ ಮತ್ತೆ ವಿವೇಕಾನಂದರು ಇವಕ್ಕೆ ಯಾವಾಗಲೂ ಆದರ್ಶಪ್ರಾಯರಾಗಿ ಇತ್ತಿದ್ದವು. ಮಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ನಿಯಮಿತ ಭೇಟಿ ಕೊಡುವದರೊಟ್ಟಿಂಗೆ ಅವರ ತತ್ವಂಗಳ ಜೀವನಲ್ಲಿ ಅಳವಡಿಸಿಗೊಂಡವು.
ಶ್ರೀ ಪೀಠದ ಶಿಷ್ಯರಾಗಿ ಪರಮ ಗುರು (ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿ) ಗಳ ಆರಾಧಕರಾಗಿ, ಶ್ರೀ ಮಠಕ್ಕೆ ನಿಷ್ಠರಾಗಿ ಸೇವೆ ಸಲ್ಲಿಸಿದವು.

ಸಾಹಿತ್ಯ ಕ್ಷೇತ್ರಲ್ಲಿ ಕೈ ಆಡಿಸಿ, ವೇದ ಮಂತ್ರಂಗಳ ಅನುವಾದವ ಪದ್ಯ ರೂಪಲ್ಲಿ ಪ್ರಕಟಿಸಿದವು. ಅವೇ ಹೇಳುವ ಹಾಂಗೆ ಮುಖ್ಯ ಉದ್ದೇಶ ಅವರದ್ದೇ ಮಾತಿಲ್ಲಿ:

ವೇದ ಮಂತ್ರ ಕಲಿಯುವ ವಟುಗಳಿಗೆ ಅರ್ಥ ಸಹಿತವಾಗಿ ಕಲಿಯುವಾಗ ಗ್ರಾಹ್ಯ ಸುಲಭ ವಾಗುವುದು.
ಸಸ್ವರ ವೇದ ಮಂತ್ರ ಪಠಣವನ್ನು ಕೇಳಿ ಆನಂದಿಸುವಾಗ ಅರ್ಥದ ಸವಿಯನ್ನು ಬೆರೆತು ಆಸ್ವಾದಿಸುವುದು.
ಭಕ್ತಿ ಕಾವ್ಯವೆಂದು ಓದಿ ಭಾವ ಪರವಶನಾಗುವುದು.

ತನ್ನ ಅಧ್ಯಾತ್ಮ ಜೀವನಲ್ಲಿ ವೇದ ಮಂತ್ರಂಗಳಲ್ಲಿ ಅಸಕ್ತಿ ಹುಟ್ಟಿಸಿದ ತನ್ನ ತೀರ್ಥ ರೂಪರ ನೆನಪಿಸುವದರೊಟ್ಟಿಂಗೆ ಕಾವ್ಯಲ್ಲಿ ಆಸಕ್ತಿ ಬಂದಪ್ಪಗ ಇವಕ್ಕೆ ಪ್ರೋತ್ಸಾಹ ನೀಡಿದ ಕಯ್ಯಾರ ಕಿಞ್ಞಣ್ಣ ರೈ ಯನ್ನು ಸ್ಮರಿಸಿಗೊಂಡ ಸಹೃದಯಿ.

ಇನ್ನೂ ವಿನೀತನಾಗಿ ಅವು ಹೇಳಿದ್ದವು “ಈ ಗೀತೆಗಳಲ್ಲಿ ಸರಿಯಾದ ಅರ್ಥ ಬರುವಂತೆ ಪ್ರಯತ್ನಿಸಿದ್ದೇನೆ. ನಾನು ವಿದ್ವಾಂಸನಲ್ಲ, ವೇದ ಪಾರಂಗತ ಮೊದಲೇ ಅಲ್ಲ. ಹಾಗಿರುವಾಗ ನನ್ನ ಸೀಮಿತ ಬುದ್ಧಿಗೆ ಎಟಕುವಷ್ಟು ಬರೆದೆ. ಪದ್ಯ ರೂಪದ ಅನುವಾದದಲ್ಲಿ ಭಾವಾರ್ಥಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ. ಮೆದುಳಿಗಿಂತ ಹೃದಯವೇ ಗೆದ್ದಿದೆ. ಋಷಿ ಮುಖದಿಂದ ಬಂದ ಮಂತ್ರಗಳಿಗೆ ಸ್ವರ ಗಾಂಭೀರ್ಯವೂ ಅರ್ಥ ಸೌಂದರ್ಯವೂ ರಸ ತನ್ಮಯತೆಯೂ ಇರುವುದರಿಂದ ಕೆಲವು ವೇದ ಮಂತ್ರಗಳನ್ನು ಆಯ್ದು ಜನ ಸಾಮಾನ್ಯನಿಗೆ ಆಸ್ವಾದಿಸುವುದಕ್ಕಾಗಿ ಜನ ಸಾಮಾನ್ಯನೊಬ್ಬನು ಇಲ್ಲಿ ಯತ್ನಿಸಿದ್ದಾನೆ

ಪ್ರಕಟಣೆ ಆದ ಪುಸ್ತಕಂಗೊ:

 • ವೇದ ಮಂತ್ರ ಗೀತಾಂಜಲಿ
 • ಸೂಕ್ತ ಗೀತಾಂಜಲಿ
 • ಉಪನಿಷತ್ ಗೀತಾಂಜಲಿ

ಇವರ ಈ ಸಾಧನೆಯ ಮೆಚ್ಚಿ ಪ್ರೋತ್ಸಾಹಿಸಿ ಹರಸಿದ ಗಣ್ಯರು: ಶ್ರೀ ಶಿರಂಕಲ್ಲು ಈಶ್ವರ ಭಟ್ಟರು, ಶ್ರೀ ಕವಿ ಕಯ್ಯಾರ ಕಿಞ್ಞಣ್ಣ ರೈ, ಶ್ರೀ ಪೆರ್ಲ ಕೃಷ್ಣ ಭಟ್ಟರು, ವೇ|ಮೂ| ಪಳ್ಳತ್ತಡ್ಕ ಪರಮೇಶ್ವರ ಭಟ್ಟರು, ವೇ|ಮೂ| ಕಿಳಿಂಗಾರು ನಡುಮನೆ ಗೋಪಾಲ ಕೃಷ್ಣ ಭಟ್ಟರು, ಮಂಗಳೂರಿನ ರಾಮಕೃಷ್ಣ ಆಶ್ರಮದ ಯತಿವರ್ಯರಾದ ಶ್ರೀ ಸುದಾನಂದ ಸ್ವಾಮೀಜಿ ಮತ್ತೆ ಶ್ರೀ ಪೂರ್ಣ ಕಾಮಾನಂದ ಸ್ವಾಮೀಜಿ ಹಾಂಗೂ ಕಾಸರಗೋಡಿನ ಅಂದಿನ ಪ್ರಸಿದ್ಧ ವಕೀಲರಾದ ಶ್ರೀ ಶಂಕರ ರಾಯರು.

ಅವರ ಈ ಎಲ್ಲಾ ಕಾರ್ಯಂಗಳಲ್ಲಿ ಅವಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದವು ಅವರ ಧರ್ಮ ಪತ್ನಿ ಶ್ರೀಮತಿ (ದಿ) ವಸಂತಿ ಭಟ್ ಮತ್ತೆ ಅವರ ಮಕ್ಕೊ.

ಕುಟುಂಬದ ವಿವರ:

ಜನನ: 17/12/1932
ದಿ. ಮಡ್ವ ಶಂಕರನಾರಾಯಣ ಭಟ್ಟರು, ಹಿರಿಯ ಜ್ಯೋತಿಷಿ ಮತ್ತೆ ಶ್ರೀಮತಿ ಪರಮೇಶ್ವರಿ ಅಮ್ಮ (ಇವು ಕಾವೇರಿಕಾನ ಹಿರಿಯ ಕವಿ ಕೃಷ್ಣ ಭಟ್ಟರ ಸೋದರಿ) ಇವರ ಪ್ರಥಮ ಪುತ್ರ.
ಸ್ವರ್ಗಸ್ಥರಾದ ದಿನ: 03/12/2003
ಹಿರಿಯ ಮಗ
: ಡಾ|| ಜಯಶಂಕರ ಭಟ್, ಮಣಿಪಾಲ ಆಸ್ಪತ್ರೆ, ಬೆಂಗಳೂರು ಇಲ್ಲಿ Minimal Access Surgery ವಿಭಾಗದ ಮುಖ್ಯಸ್ಥರು.
ಎರಡನೇ ಮಗ: ಶ್ರೀ. ರಾಜಾರಾಮ ಭಟ್, ಜಾಪಾನ್ ದೇಶದ MOL Tankship Pvt Ltd ಹೇಳುವ ಶಿಪ್ಪಿಂಗ್ ಕಂಪೆನಿಲಿ Marine Superintendent ಆಗಿ ಸಿಂಗಾಪೂರ್ ಲ್ಲಿ ಸೇವೆಲಿ ಇದ್ದವು
ಮಗಳು: ಡಾ|| ಪರಂಜ್ಯೋತಿ, ಕಳಯತ್ತೋಡಿ ಡಾ|| ಬಾಲಕೃಷ್ಣ ಭಟ್ ಇವರ ಧರ್ಮ ಪತ್ನಿ, ಅಮೇರಿಕಾದ ಕೆಲಿಫೋರ್ನಿಯಾಲ್ಲಿ ದಂತ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಾ ಇದ್ದವು.

ಈಶ್ವರಾರ್ಪಣೆ

ಉಮೆಯ ಸಹಿತನೆ ಪರಮ ಪುರುಷನೆ ಲಿಂಗ ಕೆದುಪುರ ರುದ್ರ ಶಿವನೆ
ನಮಿಪೆ ಪಂಚಾಕ್ಷರಿಯ ಜಪಿಸುತ ಧ್ಯಾನದಿಂದಭಿಷೇಕ ಗೈವೆ
ಮನವು ಚಂಚಲ ದೇಹ ದುರ್ಬಲ ಮತಿಯ ಕೃತಿಯಿದು ಉಚ್ಚ ಸ್ಥಿತಿಗೆ
ಕೃತಿ ಸಮರ್ಪಣೆ ಈಶ್ವರಾರ್ಪಣೆ ಶಿವನು ಸುಮನವ ನೀಡಲೆಮಗೆ.

ಸೂ: ನಮ್ಮ ಹೆಮ್ಮೆಯ ದಿ| ಶಾಮ ಭಟ್ ಬರದ ಕನ್ನಡ ಮಂತ್ರಾನುವಾದಂಗೊ ಸದ್ಯಲ್ಲೇ ನಮ್ಮ ಬೈಲಿನೋರಿಂಗೆ ಓದಲೆ ಕೊಟ್ಟೋಂಡಿದ್ದವು.
ಅದಕ್ಕೆ ಒಪ್ಪಿಗೆಯ ಮೂಲಕ ಅನುವುಮಾಡಿ ಕೊಟ್ಟ ಶ್ರೀಯುತರ ಮಕ್ಕೊಗೆ, ಅದರ ಹಾಕಲೆ ಮೂಲ ಕಾರಣ ಆದ ಶರ್ಮಪ್ಪಚ್ಚಿಗೆ ಬೈಲಿನ ಎಲ್ಲೋರ ಅಭಿನಂದನೆ ಸಲ್ಲುತ್ತು.

ಗುರಿಕ್ಕಾರ°

ಕಣ್ಯಾರ ಕಂಡ ಮೇರು ವ್ಯಕ್ತಿ, ಹಿರಿಯ ಚೇತನ ದಿ. ಡಾ|| ಮಡ್ವ ಶಾಮ ಭಟ್ಟ, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಗುಣಾಜೆ ಮಹೇಶ

  ಶರ್ಮ ದೊಡ್ಡಪ್ಪ, ಲೇಖನ ಒಪ್ಪ ಇದ್ದು. ಇವು ಎನಗೆ ಸಂಬಂಧಲ್ಲಿ ಅಜ್ಜ. ಪ್ರೀತಿಯ ಡಾಕ್ಟರಜ್ಜ. ಇವರ ಬಗ್ಗೆ ಬ್ಯೆಲಿಲ್ಲಿ ಹಾಕಿದ್ದಕ್ಕೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಮಾವ°

  ಧನ್ಯವಾದ ಶರ್ಮಪ್ಪಚ್ಚೀ,,,ಈ ಮಹಾನ್ ವ್ಯಕ್ತಿಯ ಬಗ್ಗೆ ಎನ್ನ ಅಜ್ಜನ ಮನೇಲಿ ಹೇಳುದು ಕೇಳಿದ್ದೆ…ಇವರಲ್ಲಿಪ್ಪ ಕಲಾ ಸರಸ್ವತಿಗೆ ನಮೋ ನಮ:

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಣ್ಣ, ನಿಂಗಳ ಲೇಖನ ಓದಿ ತುಂಬಾ ಸಂತೋಷ ಆತು. ಸಂತೋಶಂದ ಕಣ್ಣಿಲಿ ನೀರು ಬಂತು.
  ಅಪ್ಪ ಯಾವ ದೃಷ್ಟಿಲಿ ಈ ಕೆಲಸ ಸುರು ಮಾಡಿತ್ತಿದ್ದವೋ, ಆ ಕೆಲಸ ಸಂಪೂರ್ಣ ಆತು ಹೇಳಿ ಆವುತ್ತು.
  ಈ ರೂಪಲ್ಲಿ ವೇದ ಮಂತ್ರಲ್ಲಿ ಆಸಕ್ತಿ ಇಪ್ಪ ತುಂಬಾ ಜನರಿಂಗೆ ಪ್ರೀತಿ ಹುಟ್ಟುಲೆ, ಅಥವ ಬೆಳೆಸುಲೆ ಉಪಯೋಗ ಅಕ್ಕು.
  ಮಂತ್ರಂಗಳ ಅರ್ಥ ಸಹಿತ ಭಾವಪೂರಿತ ಆಗಿ ಹೇಳುವಾಗ, ನಮ್ಮ ಮನಸ್ಸಿಂಗೆ ಭಾವನೆಯ ಪರಕಾಷ್ಟೆಂದ ಮುಂದೆ ಹೊಪಲೆ ಸಹಾಯ ಆವುತ್ತು.
  (You transcend the mind easily. Only when you reach the peak of intellect-a true understanding, you fall into the valley of true devotion.)
  ಎಂಗಳ ಎಲ್ಲರ ಪರವಾಗಿ ನಿಂಗೋಗೆ, ಒಪ್ಪಣ್ಣಂಗೆ ಹೃತ್ಪೂರ್ವಕ ಧನ್ಯವಾದ.
  ಆದರದಿಂದ,
  ಜ್ಯೋತಿ

  [Reply]

  VA:F [1.9.22_1171]
  Rating: +2 (from 2 votes)
 4. ಶರ್ಮಣ್ಣ,
  ನಿಂಗಳ ಲೇಖನ ಓದಿ ತುಂಬಾ ಸಂತೋಷ ಆತು.
  Appana kelasa va oppanna mulaka ellaringude talapusuva Ningala prayathna sampoorna agali.

  preethiondige,
  rajaram

  [Reply]

  VA:F [1.9.22_1171]
  Rating: +2 (from 2 votes)
 5. ಗೋಪಾಲಣ್ಣ
  gopalakrishna BHAT S.K.

  Shyama doctor engala kutumba vaidyaru.avara maravale sadhya ille.avara hattare matadidare namma roga ardha kammi ada hange heli tumba jenara anubhava.Avara mantra sangraha odi Rudrada artha tilude anu kaleda vaara ooringe hogippaga.avakke chitra kalelu asakti ittu heli avu helida nenapu.eega avu bareda chitra

  enadaru iddo heli gonthille.avakke shraddhanjali.Sharmannange abhinandane.olle vishaya baraddakke. rating+2

  [Reply]

  VA:F [1.9.22_1171]
  Rating: 0 (from 0 votes)
 6. ಕೃಷ್ಣ ಭಟ್, ಶೇಡಿಗುಮ್ಮೆ

  ಶರ್ಮ ಭಾವ,

  ಮಾವನ ಬಗ್ಗೆ ಬರದ ಲೇಖನ ತುಂಬಾ ಚೆಂದಕ್ಕೆ ಮೂಡಿ ಬೈಂದು, ಓದಿ ಸಂತೋಷ ಆತು.
  ಮಾವ ಯಾವತ್ತಿಂಗೂ ಎನಗೆ ಮಾರ್ಗದರ್ಶಕರು. ಅವರ ಆದರ್ಶ ಜೀವನ, ಜೀವನೋತ್ಸಾಹದ ಮಾತುಗ ಎನಗೆ ಪ್ರತಿ ಹೆಜ್ಜೆಗೂ ನೆಂಪಾವುತ್ತು.

  ಧನ್ಯವಾದಂಗೋ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಬಟ್ಟಮಾವ°ಬಂಡಾಡಿ ಅಜ್ಜಿಒಪ್ಪಕ್ಕವಿಜಯತ್ತೆಕೇಜಿಮಾವ°ಪುತ್ತೂರುಬಾವಮಾಷ್ಟ್ರುಮಾವ°ಅನುಶ್ರೀ ಬಂಡಾಡಿಮಂಗ್ಳೂರ ಮಾಣಿಪೆಂಗಣ್ಣ°ಡಾಮಹೇಶಣ್ಣಗಣೇಶ ಮಾವ°ಡೈಮಂಡು ಭಾವಯೇನಂಕೂಡ್ಳು ಅಣ್ಣವೇಣೂರಣ್ಣಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆಚುಬ್ಬಣ್ಣಬೊಳುಂಬು ಮಾವ°ಕಳಾಯಿ ಗೀತತ್ತೆವೆಂಕಟ್ ಕೋಟೂರುಪುಟ್ಟಬಾವ°ನೀರ್ಕಜೆ ಮಹೇಶಕಾವಿನಮೂಲೆ ಮಾಣಿಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ