ಎಡನೀರು ಕೆ. ಗೋಪಾಲಕೃಷ್ಣ ಭಟ್, IAS – ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು

March 11, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಎಡನ್ನೀರಿನ ಗೋಪಾಲಕೃಷ್ಣ ಭಟ್ ಇವು ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿಯುಕ್ತಿಗೊಂಡವು. ಈ ಸಂದರ್ಭಲ್ಲಿ ಅವಕ್ಕೆ ಶುಭಹಾರೈಸುತ್ತಾ, ಅವರ ಪರಿಚಯ ಲೇಖನ ಬೈಲಿನೋರಿಂಗಾಗಿ. ಇವು ನಮ್ಮ ಚುಬ್ಬಣ್ಣನ ರಕ್ತಸಂಬಂಧಿ.

ಎಡನೀರು ಗೋಪಾಲಕೃಷ್ಣ ಭಟ್, IAS
ಎಡನೀರು ಗೋಪಾಲಕೃಷ್ಣ ಭಟ್, IAS

ನಮ್ಮದೇ ಬಯಲಿನ ಎಡನ್ನೀರು ಹೊಡೆಯಾಣೋರಾದ ಕೆ. ಗೋಪಾಲಕೃಷ್ಣ ಭಟ್ಟ  – ಇವು ಕೇರಳ ರಾಜ್ಯದ ಏಕೈಕ ಹವ್ಯಕ IAS ಅಧಿಕಾರಿ.
ಪ್ರಸ್ತುತ ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ  (Director of Public Instructions as the Head of General Education Department) ಕಾರ್ಯ ನಿರ್ವಹಿಸುತ್ತಾ ಇದ್ದವು.

ಕುಟುಂಬ:
ಶ್ರೀಯುತರು ಎಡನೀರು ದಿ|ಕೆ. ಕೃಷ್ಣ ಭಟ್ ಮತ್ತು ದಿ| ಪರಮೇಶ್ವರಿ ಅವರ ಹಿರಿಯ ಪುತ್ರ. ಇವಕ್ಕೆ ಮೂರು ಜೆನ ಸಹೋದರರು ಇದ್ದವು.
ಪತ್ನಿ ಶ್ರೀಮತಿ ಗೀತಾ ಗೃಹಿಣಿಯಾಗಿ ಶ್ರೀಯುತರ ಎಲ್ಲ ಸಾಧನೆಗೆ ಸ್ಪೂರ್ತಿಯಾಗಿದ್ದವು. ಮೂವರು ಸುಪುತ್ರಿಯರ ಪಡೆದ ಇವರದ್ದು ಸಂತೃಪ್ತ ಕುಟುಂಬ.
ದೊಡ್ಡ ಮಗಳು ಕುಮಾರಿ ಕೃಪಾ ವೈದ್ಯಕೀಯ ವಿದ್ಯಾಭ್ಯಾಸ ಮಾಡ್ತಾ ಇದ್ದು. ಎರಡ್ನೇ ಮಗಳು ಕೃತಿ, ಮೂರನೇ ಮಗಳು ಮೈಥಿಲಿ – ಇವು ಶಾಲೆಲಿ ವಿದ್ಯಾಭ್ಯಾಸ ಪಡೆತ್ತಾ ಇದ್ದವು.

ವಿದ್ಯಾಭ್ಯಾಸ:
ಗೋಪಾಲಕೃಷ್ಣ ಭಟ್ಟರ ಶಾಲಾ ಶಿಕ್ಷಣ ಎಡನ್ನೀರು ಸ್ವಾಮೀಜಿ ಶಾಲೆಲಿ ನೆರವೇರಿತ್ತು. ಮುಂದಾಣ ಕಾಲೇಜು ವಿದ್ಯಾಭ್ಯಾಸವ ಕಾಸರಗೋಡಿನ ಸರಕಾರಿ ಕಾಲೇಜಿಲ್ಲಿ ಪಡಕ್ಕೊಂಡವು. ಇ೦ಗ್ಲೀಷ್ ಮತ್ತು ಸಾಹಿತ್ಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯಂದ ಸ್ನಾತಕೋತ್ತರ M.A–ಪದವಿ ಪಡೆದವು.

ಉದ್ಯೋಗ:
ವಿದ್ಯಾಭ್ಯಾಸ ಮುಗುದಕೂಡ್ಳೇ, 1993 ರಲ್ಲಿ ಕೇರಳದ KAS ತೇರ್ಗಡೆಯಾಗಿ ಕಾಸರಗೋಡಿಲ್ಲಿ Additional District Magistrate (ADM) ಸೇರ್ಪಡೆಯಾದವು. ಶ್ರೀಯುತರ ಕಾರ್ಯನಿಷ್ಠೆ, ಮತ್ತೆ ಪರಿಶ್ರಮ೦ದಾಗಿ 2003 ರಲ್ಲಿ IAS ಸೇವೆಗೆ ಭಡ್ತಿ- ಸೇರ್ಪಡೆಯಾದವು.
ಮಾನ೦ತವಾಡಿ (Mananthavady)ಲಿ ಉಪ ಜಿಲ್ಲಾಧಿಕಾರಿ (Sub Collector) ಆಗಿ ಕರ್ತವ್ಯ ನಿರ್ವಹಣೆ,
ಉನ್ನತ ಶಿಕ್ಷಣ ಪ್ರಾಧಿಕಾರಲ್ಲಿ ನಿರ್ದೇಶಕರಾಗಿ (Director of Collegiate Education Department) ಸೇವೆ,
ವಯನಾಡಿಲಿ ಜಿಲ್ಲಾಧಿಕಾರಿಯಾಗಿ (District Collector),
ತಿರುವನಂತಪುರಲ್ಲಿ ಸಹಕಾರಿ ಸಂಘದ ನಿರ್ದೇಶಕರಾಗಿ (Registrar of Co-Operative Societies) – ಇತ್ಯಾದಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದವು.

ಪ್ರಸ್ತುತ ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ (Director of Public Instructions as the Head of General Education Department) ಕಾರ್ಯ ನಿರ್ವಹಣೆ ಮಾಡತ್ತಾ ಇದ್ದವು.

ಹವ್ಯಾಸ:
ಕೆಲಸದ ಒಟ್ಟಿ೦ಗೆ, ಬರಹ, ಪುಸ್ತಕ ಓದುದು, ಕೃಷಿ – ಇವರ ಕೆಲವು ಹವ್ಯಾಸಂಗೊ.
ಸರಕಾರಿ ಕೆಲಸದ ಎಡಕ್ಕಿಲಿ ಪುರುಸೋತ್ತು ಮಾಡಿಗೊ೦ಡು, “ಎಡನ್ನೀರು ಗೋಪಾಲಕೃಷ್ಣ” ಹೇಳುವ ಅ೦ಕಿತನಾಮಲ್ಲಿ ಹಲವಾರು ಕಥೆ, ಕವನ, ಲೇಖನಗಳನ್ನೂ ಬರದ್ದವು.

ಇವು ಬರೆದ “ಮರಳು ಗಾಡಿನ ಕೋಗಿಲೆ” ಹೇಳುವ ಒ೦ದು ಚುಟುಕು ಕಥೆ ಪುಸ್ತಕ ಬಿಡುಗಡೆ ಆಯಿದು.
ಇವರ ಬರಹ – ಸುಧಾ , ತರ೦ಗ, ತುಷಾರ, ಪ್ರಜಾವಾಣಿ, ಹಲವಾರುಪತ್ರಿಕೆಗಳಲ್ಲಿ ಪ್ರಕಟ ಆಯಿದು.

ನಮ್ಮ ಎಡನ್ನೀರು ಗೋಪಾಲಕೃಷ್ಣ೦ಣ್ಣ೦ಗೆ, ನಾವೆಲ್ಲರೂ ಸೇರಿ ಶುಭ ಹಾರೈಸುವೋ.
ಅವು ನೆಡದ ದಾರಿ ಹವ್ಯಕ ಯುವ ಸಮಾಜಕ್ಕೆ ಆದರ್ಶಪ್ರಾಯವಾಗಿರಳಿ – ಹೇದು ಹಾರೈಕೆ.

ಮತ್ತೆ ನಮ್ಮ ಬಯಲಿ೦ಗೆ ಅ೦ಬಗ೦ಬಗ ಬ೦ದು ಅವರ ಲೇಖನ೦ಗೊ, ಕವನ೦ಗೊ ಬರೆಯಲಿ – ಹೇದೂ ಅವರ ಹತ್ತೆರೆ ಇಲ್ಲಿ ಕೇಳಿಗೊ೦ಬೋ.

~

ಚುಬ್ಬಣ್ಣ

ಎಡನೀರು ಗೋಪಾಲಣ್ಣ ಬೈಲಿಂಗೆ ಬಂದು ಶುಭಕೋರಿದ ಒಪ್ಪ:

ಎಡನ್ನೀರು ಗೋಪಾಲಣ್ಣನ ಶುಭಹಾರೈಕೆ
ಬೈಲಿಂಗೆ ಎಡನ್ನೀರು ಗೋಪಾಲಣ್ಣನ ಶುಭಹಾರೈಕೆ

 

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

  1. Venugopal Kambaru

    ಶುಭಾಶಯಂಗೊ

    [Reply]

    VA:F [1.9.22_1171]
    Rating: 0 (from 0 votes)
  2. ಮುಳಿಯ ಭಾವ
    ರಘುಮುಳಿಯ

    ಶುಭಾಶಯ೦ಗೊ.
    ಗೋಪಾಲಣ್ಣನ ಸಾಧನೆ ಸಮಾಜದ ಯುವ ಪೀಳಿಗೆಗೆ ಸ್ಪೂರ್ತಿಯಾಗಲಿ.ಇವರ ಶುದ್ದಿಗೊ,ಕವನ೦ಗೊ ಬೈಲಿಲಿಯೂ ಬರಲಿ.

    [Reply]

    VA:F [1.9.22_1171]
    Rating: 0 (from 0 votes)
  3. ಬೊಳುಂಬು ಮಾವ°
    ಬೊಳುಂಬು ಗೋಪಾಲ

    ಎಡನ್ನೀರು ಗೋಪಾಲಣ್ಣನ ಸಾಧನೆ ಬಗ್ಗೆ ತುಂಬಾ ಹೆಮ್ಮೆ ಅನುಸುತ್ತು. ಬೆಳವ ಮಕ್ಕೊಗೆ ಅವು ಉತ್ತಮ ಮಾದರಿಯಾಗಲಿ. ಅಭಿನಂದನೆಗೊ. ಗೋಪಾಲಣ್ಣನ ಅನುಭವಂಗೊ, ಕತೆ ಕವನಂಗೊ ನಮ್ಮ ಬೈಲಿಲ್ಲಿಯೂ ಬರಳಿ.

    [Reply]

    ಉಡುಪುಮೂಲೆ ಅಪ್ಪಚ್ಚಿ

    ಉಡುಪುಮೂಲೆ ಅಪ್ಪಚ್ಚಿ Reply:

    ಹರೇ ರಾಮ;ಗೋಪಾಲಣ್ಣ ನಮ್ಮ ಹವ್ಯಕ ಸಮುದಾದಯದ ಒಬ್ಬ ಪ್ರತಿಭಾನ್ವಿತ ವ್ಯಕ್ತಿ.ಅವರ ಬಗ್ಗೆ ವಿಜಯ ಕರ್ನಾಟಕಲ್ಲಿ ಬ೦ದ ಈ ಶುದ್ದಿಯ ಓದಿ ತು೦ಬಾ ಸ೦ತೋಷ ಆತು.ನಮ್ಮ ಸಮಾಜಕ್ಕೆ ಅವು ಉತ್ತಮ ಆದರ್ಶ ವ್ಯಕ್ತಿಯಾಗಿ ಮು೦ದೆಯು ಬೆಳಗಲಿ.ಅವರ ಸಾಹಿತ್ತಿಕ ರಚನಗೊ ನಮ್ಮ ಬೈಲಿ೦ಗೂ ಅದಷ್ಟು ಬೇಗ ಬರಲಿ ಹೇದು ಹಾರೈಸಿಯೊ೦ಡು ಅಭಿನ೦ದನಗೊ.ಈ ಶುದ್ದಿಯ ಇಲ್ಲಿ ಬರದು ನಮ್ಮವಕ್ಕೂ ತಿಳುಶಿ ಹೇಳಿದ ಚುಬ್ಬಣ್ಣ೦ಗೆ ಧನ್ಯವಾದ೦ಗೊ.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಕಾವಿನಮೂಲೆ ಮಾಣಿಕೆದೂರು ಡಾಕ್ಟ್ರುಬಾವ°ವೇಣೂರಣ್ಣಶ್ಯಾಮಣ್ಣಕೇಜಿಮಾವ°ಕೊಳಚ್ಚಿಪ್ಪು ಬಾವಎರುಂಬು ಅಪ್ಪಚ್ಚಿಅಕ್ಷರದಣ್ಣಸಂಪಾದಕ°ವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುಅನಿತಾ ನರೇಶ್, ಮಂಚಿಉಡುಪುಮೂಲೆ ಅಪ್ಪಚ್ಚಿಪೆಂಗಣ್ಣ°ಕಜೆವಸಂತ°ಶ್ರೀಅಕ್ಕ°ಪುಟ್ಟಬಾವ°ಜಯಶ್ರೀ ನೀರಮೂಲೆಡಾಗುಟ್ರಕ್ಕ°ಅಜ್ಜಕಾನ ಭಾವಬಟ್ಟಮಾವ°ಬಂಡಾಡಿ ಅಜ್ಜಿವಾಣಿ ಚಿಕ್ಕಮ್ಮತೆಕ್ಕುಂಜ ಕುಮಾರ ಮಾವ°ವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ