Oppanna.com

ಎಡನೀರು ಕೆ. ಗೋಪಾಲಕೃಷ್ಣ ಭಟ್, IAS – ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು

ಬರದೋರು :   ಚುಬ್ಬಣ್ಣ    on   11/03/2014    14 ಒಪ್ಪಂಗೊ

ನಮ್ಮ ಬೈಲಿನ ಎಡನ್ನೀರಿನ ಗೋಪಾಲಕೃಷ್ಣ ಭಟ್ ಇವು ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿಯುಕ್ತಿಗೊಂಡವು. ಈ ಸಂದರ್ಭಲ್ಲಿ ಅವಕ್ಕೆ ಶುಭಹಾರೈಸುತ್ತಾ, ಅವರ ಪರಿಚಯ ಲೇಖನ ಬೈಲಿನೋರಿಂಗಾಗಿ. ಇವು ನಮ್ಮ ಚುಬ್ಬಣ್ಣನ ರಕ್ತಸಂಬಂಧಿ.

ಎಡನೀರು ಗೋಪಾಲಕೃಷ್ಣ ಭಟ್, IAS
ಎಡನೀರು ಗೋಪಾಲಕೃಷ್ಣ ಭಟ್, IAS

ನಮ್ಮದೇ ಬಯಲಿನ ಎಡನ್ನೀರು ಹೊಡೆಯಾಣೋರಾದ ಕೆ. ಗೋಪಾಲಕೃಷ್ಣ ಭಟ್ಟ  – ಇವು ಕೇರಳ ರಾಜ್ಯದ ಏಕೈಕ ಹವ್ಯಕ IAS ಅಧಿಕಾರಿ.
ಪ್ರಸ್ತುತ ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ  (Director of Public Instructions as the Head of General Education Department) ಕಾರ್ಯ ನಿರ್ವಹಿಸುತ್ತಾ ಇದ್ದವು.
ಕುಟುಂಬ:
ಶ್ರೀಯುತರು ಎಡನೀರು ದಿ|ಕೆ. ಕೃಷ್ಣ ಭಟ್ ಮತ್ತು ದಿ| ಪರಮೇಶ್ವರಿ ಅವರ ಹಿರಿಯ ಪುತ್ರ. ಇವಕ್ಕೆ ಮೂರು ಜೆನ ಸಹೋದರರು ಇದ್ದವು.
ಪತ್ನಿ ಶ್ರೀಮತಿ ಗೀತಾ ಗೃಹಿಣಿಯಾಗಿ ಶ್ರೀಯುತರ ಎಲ್ಲ ಸಾಧನೆಗೆ ಸ್ಪೂರ್ತಿಯಾಗಿದ್ದವು. ಮೂವರು ಸುಪುತ್ರಿಯರ ಪಡೆದ ಇವರದ್ದು ಸಂತೃಪ್ತ ಕುಟುಂಬ.
ದೊಡ್ಡ ಮಗಳು ಕುಮಾರಿ ಕೃಪಾ ವೈದ್ಯಕೀಯ ವಿದ್ಯಾಭ್ಯಾಸ ಮಾಡ್ತಾ ಇದ್ದು. ಎರಡ್ನೇ ಮಗಳು ಕೃತಿ, ಮೂರನೇ ಮಗಳು ಮೈಥಿಲಿ – ಇವು ಶಾಲೆಲಿ ವಿದ್ಯಾಭ್ಯಾಸ ಪಡೆತ್ತಾ ಇದ್ದವು.
ವಿದ್ಯಾಭ್ಯಾಸ:
ಗೋಪಾಲಕೃಷ್ಣ ಭಟ್ಟರ ಶಾಲಾ ಶಿಕ್ಷಣ ಎಡನ್ನೀರು ಸ್ವಾಮೀಜಿ ಶಾಲೆಲಿ ನೆರವೇರಿತ್ತು. ಮುಂದಾಣ ಕಾಲೇಜು ವಿದ್ಯಾಭ್ಯಾಸವ ಕಾಸರಗೋಡಿನ ಸರಕಾರಿ ಕಾಲೇಜಿಲ್ಲಿ ಪಡಕ್ಕೊಂಡವು. ಇ೦ಗ್ಲೀಷ್ ಮತ್ತು ಸಾಹಿತ್ಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯಂದ ಸ್ನಾತಕೋತ್ತರ M.A–ಪದವಿ ಪಡೆದವು.
ಉದ್ಯೋಗ:
ವಿದ್ಯಾಭ್ಯಾಸ ಮುಗುದಕೂಡ್ಳೇ, 1993 ರಲ್ಲಿ ಕೇರಳದ KAS ತೇರ್ಗಡೆಯಾಗಿ ಕಾಸರಗೋಡಿಲ್ಲಿ Additional District Magistrate (ADM) ಸೇರ್ಪಡೆಯಾದವು. ಶ್ರೀಯುತರ ಕಾರ್ಯನಿಷ್ಠೆ, ಮತ್ತೆ ಪರಿಶ್ರಮ೦ದಾಗಿ 2003 ರಲ್ಲಿ IAS ಸೇವೆಗೆ ಭಡ್ತಿ- ಸೇರ್ಪಡೆಯಾದವು.
ಮಾನ೦ತವಾಡಿ (Mananthavady)ಲಿ ಉಪ ಜಿಲ್ಲಾಧಿಕಾರಿ (Sub Collector) ಆಗಿ ಕರ್ತವ್ಯ ನಿರ್ವಹಣೆ,
ಉನ್ನತ ಶಿಕ್ಷಣ ಪ್ರಾಧಿಕಾರಲ್ಲಿ ನಿರ್ದೇಶಕರಾಗಿ (Director of Collegiate Education Department) ಸೇವೆ,
ವಯನಾಡಿಲಿ ಜಿಲ್ಲಾಧಿಕಾರಿಯಾಗಿ (District Collector),
ತಿರುವನಂತಪುರಲ್ಲಿ ಸಹಕಾರಿ ಸಂಘದ ನಿರ್ದೇಶಕರಾಗಿ (Registrar of Co-Operative Societies) – ಇತ್ಯಾದಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದವು.
ಪ್ರಸ್ತುತ ಕೇರಳ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ (Director of Public Instructions as the Head of General Education Department) ಕಾರ್ಯ ನಿರ್ವಹಣೆ ಮಾಡತ್ತಾ ಇದ್ದವು.
ಹವ್ಯಾಸ:
ಕೆಲಸದ ಒಟ್ಟಿ೦ಗೆ, ಬರಹ, ಪುಸ್ತಕ ಓದುದು, ಕೃಷಿ – ಇವರ ಕೆಲವು ಹವ್ಯಾಸಂಗೊ.
ಸರಕಾರಿ ಕೆಲಸದ ಎಡಕ್ಕಿಲಿ ಪುರುಸೋತ್ತು ಮಾಡಿಗೊ೦ಡು, “ಎಡನ್ನೀರು ಗೋಪಾಲಕೃಷ್ಣ” ಹೇಳುವ ಅ೦ಕಿತನಾಮಲ್ಲಿ ಹಲವಾರು ಕಥೆ, ಕವನ, ಲೇಖನಗಳನ್ನೂ ಬರದ್ದವು.
ಇವು ಬರೆದ “ಮರಳು ಗಾಡಿನ ಕೋಗಿಲೆ” ಹೇಳುವ ಒ೦ದು ಚುಟುಕು ಕಥೆ ಪುಸ್ತಕ ಬಿಡುಗಡೆ ಆಯಿದು.
ಇವರ ಬರಹ – ಸುಧಾ , ತರ೦ಗ, ತುಷಾರ, ಪ್ರಜಾವಾಣಿ, ಹಲವಾರುಪತ್ರಿಕೆಗಳಲ್ಲಿ ಪ್ರಕಟ ಆಯಿದು.
ನಮ್ಮ ಎಡನ್ನೀರು ಗೋಪಾಲಕೃಷ್ಣ೦ಣ್ಣ೦ಗೆ, ನಾವೆಲ್ಲರೂ ಸೇರಿ ಶುಭ ಹಾರೈಸುವೋ.
ಅವು ನೆಡದ ದಾರಿ ಹವ್ಯಕ ಯುವ ಸಮಾಜಕ್ಕೆ ಆದರ್ಶಪ್ರಾಯವಾಗಿರಳಿ – ಹೇದು ಹಾರೈಕೆ.
ಮತ್ತೆ ನಮ್ಮ ಬಯಲಿ೦ಗೆ ಅ೦ಬಗ೦ಬಗ ಬ೦ದು ಅವರ ಲೇಖನ೦ಗೊ, ಕವನ೦ಗೊ ಬರೆಯಲಿ – ಹೇದೂ ಅವರ ಹತ್ತೆರೆ ಇಲ್ಲಿ ಕೇಳಿಗೊ೦ಬೋ.
~
ಚುಬ್ಬಣ್ಣ
ಎಡನೀರು ಗೋಪಾಲಣ್ಣ ಬೈಲಿಂಗೆ ಬಂದು ಶುಭಕೋರಿದ ಒಪ್ಪ:
ಎಡನ್ನೀರು ಗೋಪಾಲಣ್ಣನ ಶುಭಹಾರೈಕೆ
ಬೈಲಿಂಗೆ ಎಡನ್ನೀರು ಗೋಪಾಲಣ್ಣನ ಶುಭಹಾರೈಕೆ

 

ಚುಬ್ಬಣ್ಣ

14 thoughts on “ಎಡನೀರು ಕೆ. ಗೋಪಾಲಕೃಷ್ಣ ಭಟ್, IAS – ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು

  1. ಎಡನ್ನೀರು ಗೋಪಾಲಣ್ಣನ ಸಾಧನೆ ಬಗ್ಗೆ ತುಂಬಾ ಹೆಮ್ಮೆ ಅನುಸುತ್ತು. ಬೆಳವ ಮಕ್ಕೊಗೆ ಅವು ಉತ್ತಮ ಮಾದರಿಯಾಗಲಿ. ಅಭಿನಂದನೆಗೊ. ಗೋಪಾಲಣ್ಣನ ಅನುಭವಂಗೊ, ಕತೆ ಕವನಂಗೊ ನಮ್ಮ ಬೈಲಿಲ್ಲಿಯೂ ಬರಳಿ.

    1. ಹರೇ ರಾಮ;ಗೋಪಾಲಣ್ಣ ನಮ್ಮ ಹವ್ಯಕ ಸಮುದಾದಯದ ಒಬ್ಬ ಪ್ರತಿಭಾನ್ವಿತ ವ್ಯಕ್ತಿ.ಅವರ ಬಗ್ಗೆ ವಿಜಯ ಕರ್ನಾಟಕಲ್ಲಿ ಬ೦ದ ಈ ಶುದ್ದಿಯ ಓದಿ ತು೦ಬಾ ಸ೦ತೋಷ ಆತು.ನಮ್ಮ ಸಮಾಜಕ್ಕೆ ಅವು ಉತ್ತಮ ಆದರ್ಶ ವ್ಯಕ್ತಿಯಾಗಿ ಮು೦ದೆಯು ಬೆಳಗಲಿ.ಅವರ ಸಾಹಿತ್ತಿಕ ರಚನಗೊ ನಮ್ಮ ಬೈಲಿ೦ಗೂ ಅದಷ್ಟು ಬೇಗ ಬರಲಿ ಹೇದು ಹಾರೈಸಿಯೊ೦ಡು ಅಭಿನ೦ದನಗೊ.ಈ ಶುದ್ದಿಯ ಇಲ್ಲಿ ಬರದು ನಮ್ಮವಕ್ಕೂ ತಿಳುಶಿ ಹೇಳಿದ ಚುಬ್ಬಣ್ಣ೦ಗೆ ಧನ್ಯವಾದ೦ಗೊ.

  2. ಶುಭಾಶಯ೦ಗೊ.
    ಗೋಪಾಲಣ್ಣನ ಸಾಧನೆ ಸಮಾಜದ ಯುವ ಪೀಳಿಗೆಗೆ ಸ್ಪೂರ್ತಿಯಾಗಲಿ.ಇವರ ಶುದ್ದಿಗೊ,ಕವನ೦ಗೊ ಬೈಲಿಲಿಯೂ ಬರಲಿ.

  3. ಹರೇ ರಾಮ. ಸಂತೋಷ ಹಾಂಗೂ ಅಭಿಮಾನದ ಶುದ್ದಿ. ಅಭಿನಂದನೆ ಮತ್ತೆ ಶುಭಹಾರೈಕೆಗೊ.

  4. ಗೋಪಾಲಣ್ಣಂಗೆ ಶುಭಾಶಯಂಗೊ .

  5. ಶುಭಾಶಯಂಗೊ.
    ನಿಂಗೊಗೆ ಎಲ್ಲಾ ರೀತಿಯ ಶ್ರೇಯಸ್ಸು ಸಿಕ್ಕಲಿ,
    ನಿಂಗಳ ಈ ಸಾಧನೆ ನಮ್ಮವಕ್ಕೆ ಸ್ಪೂರ್ತಿ ಕೊಡಲಿ.

  6. ಅಭಿನಂದನೆಗಳು ಗೋಪಾಲಣ್ಣ. ನಿಮ್ಮ ಸಾಧನೆ ನಮ್ಮ ಸಮಾಜಕ್ಕೆ ಸ್ಫೂರ್ತಿ ನೀಡಲಿ. ಸಂಖ್ಯೆ ಹೆಚ್ಚಾಗಲಿ. ನಿಮಗೆ ಒಳಿತಾಗಲಿ

  7. ಅಭಿನಂದನೆಗೊ! ನಿಂಗಳ ನೇತೃತ್ವಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಲಿ!
    ನಿಂಗಗೆ ಉನ್ನತೋನ್ನತ ಪ್ರಾಶಾಸನಿಕ ಅಧಿಕಾರಂಗ ಇನ್ನಷ್ಟು ಸಿಕ್ಕಲಿ. ಶುಭಾಶಯಂಗ!

  8. ಎಡನೀರು ಗೋಪಾಲಕೃಷ್ಣರಿಂಗೆ ಅಭಿನಂದನೆಗೊ. ನಿಂಗಳ ಪರಿಶ್ರಮ,ಸಾಧನೆಗೊ ಎಲ್ಲೋರಿಂಗೆ ಸ್ಪೂರ್ತಿ. ಅಬ್ಬೆ ಭಾಷೆಲಿಯೂ ನಿಂಗಳ ಚುಟುಕು ಕತೆಗೊ, ಶುದ್ಧಿಗೊ ಬೈಲಿಲಿ ಹರುದು ಬರಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×