ಬೈಲಿನೊಳಾಣ ‘ಮಧುಬಿಂದು’ : ಗಣೇಶ್ ರಾವ್ ಕುತ್ಯಾಡಿ

January 15, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತ್ರಿಪದಿ ಮುಕ್ತಕಂಗಳ ರಚನೆಲಿ ಕುತ್ಯಾಡಿಯ ಗಣೇಶ್ ರಾವ್ ಅವರದ್ದು ದೊಡ್ಡ ಸಾಧನೆ.
ತ್ರಿಪದಿ ಅಲ್ಲದ್ದೆ ಕನ್ನಡ ಸಾಹಿತ್ಯದ ದ್ರಾವಿಡ ಛಂದಸ್ಸಿನ ಪ್ರಕಾರಂಗಳಾದ ದ್ವಿಪದಿ, ಚೌಪದಿ, ಏಳೆ ಎಲ್ಲದರಲ್ಲಿಯೂ ಒಟ್ಟೂ ಹದಿನಾರು ಸಾವಿರಂದಲೂ ಹೆಚ್ಚು ಮುಕ್ತಕಂಗಳ ರಚಿಸಿದ್ದವು.
ಪುತ್ತೂರಿಂದ ಬೆಳ್ಳಾರೆ ಮಾರ್ಗಲ್ಲಿ ಹೋಪಗ ನೆಟ್ಟಾರು ಇದ್ದು. ಅಲ್ಲಿಂದ ಒಂದು ಕೂಕಿಲು ದೂರಲ್ಲಿ ಪೆರ್ಲಂಪಾಡಿ ಮಾರ್ಗಲ್ಲಿ ಕುತ್ಯಾಡಿ ಇಪ್ಪದು.

ಶ್ರೀ ಗಣೇಶ್ ರಾವ್, ಕುತ್ಯಾಡಿ
ಕುತ್ಯಾಡಿಯ ಶ್ರೀಮತಿ ಆದಿತಿ, ಶ್ರೀ ಶಂಕರನಾರಯಣ ಭಟ್ಟ ಇವರ ಎರಡನೇ ಮಗನೇ ಗಣೇಶ್ ಕುತ್ಯಾಡಿ. ೧೯೪೦ ನೇ ಇಸವಿಯ ಒಕ್ಟೋಬರ್ ೨೯ ರ೦ದು ಹುಟ್ಟಿದ ಇವು, ಬೆಳ್ಳಾರೆ, ಪುತ್ತೂರಿಲ್ಲಿ ಕಲ್ತ ನಂತ್ರ  ಕೊಡಗಿನ ಹುದುಕೇರಿ, ಮಳವಳ್ಳಿ ಮತ್ತೆ ಮೈಸೂರಿಲ್ಲಿ ಸುಮಾರು ಮೂವತ್ತು ವರ್ಷ ಪ್ರಾಧ್ಯಾಪಕ ಆಗಿ ಇತ್ತಿದ್ದವು. ಮೈಸೂರಿರಿಲ್ಲಿ ಸ್ನಾತಕೋತ್ತರ ಪದವಿ ಮಾಡುವಾಗ ಕನ್ನಡದ ಕಾಳಿದಾಸ ಎನಿಸಿದ ಯಸ್.ವಿ.ಪರಮೇಶ್ವರ ಭಟ್ಟರ ಶಿಷ್ಯ ಆಗಿತ್ತಿದ್ದವು. ಇವರ ಪ್ರತಿಭಗೆ ಅವರ ಪ್ರೋತ್ಸಾಹ ಮುಂದೆ ಸಾಹಿತ್ಯಲ್ಲಿ ಹೆಚ್ಚಿನ ಕೆಲಸ ಮಾಡ್ಲೆ
ಹುಮ್ಮಸ್ಸು ಬಂತಡ.
ಸೇವಾ ನಿವೃತ್ತಿ ನಂತ್ರ ಊರಿಲ್ಲಿ ಕೃಷಿಯೊಟ್ಟಿಂಗೆ ಸಾಹಿತ್ಯಕೃಷಿಯನ್ನು ಮುಂದುವರೆಸಿದ್ದವು..
ದ್ರಾವಿಡ ಛಂದಸ್ಸಿನ ಸಾಂಗತ್ಯಲ್ಲಿ “ರಾಮ ಕಥಾ ವೈಭವಂ” ಹೆಸರಿನ  ಮಹಾಕಾವ್ಯವ (ಸಂಪೂರ್ಣ ರಾಮಾಯಣ) ಅಲ್ಲದ್ದೇ ದ್ವಿಪದಿ, ತ್ರಿಪದಿ, ಚೌಪದಿ ಮತ್ತೆ ಏಳೆ ಗಳಲ್ಲಿ ಸುಮಾರು ಕವನ ಸಂಕಲನಂಗಳ ಬರದು ಪುಸ್ತಕ ಮಾಡಿದ್ದವು.
ಅವುಗಳಲ್ಲಿ ಕೆಲವು ಪುಸ್ತಕಂಗೊ ಪ್ರಕಟಣೆ ಆಯಿದು. ಇನ್ನೂ ಸುಮಾರು ಪ್ರಕಟಣೆ ಆಯೆಕ್ಕಷ್ಟೆ.
ಅವರ ಪ್ರಿಂಟು ಆದ ಪುಸ್ತಕಂಗೊ:
 1. ಹೂಮಾಲೆ (ಕವನ ಸ೦ಕಲನ)
 2. ಅಲೆಗಳು (ಕವನ ಸ೦ಕಲನ)
 3. ಅ೦ಕುರ (ಕವನ ಸ೦ಕಲನ) – ಕುವೆ೦ಪು ಸಾಹಿತ್ಯ ಪ್ರತಿಷ್ಟಾನದಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ.
 4. ನೆನಹು (ಪ್ರೇಮ ಕವನ ಸ೦ಕಲನ) – ರಾಷ್ಟ್ರಕವಿ ಮ೦ಜೇಶ್ವರ ಗೋವಿ೦ದ ಪೈ ಸ್ಮಾರಕ ಸ೦ಸ್ಥೆಯಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ.
 5. ಹರಕೆ (ಮಕ್ಕಳ ಸಾಹಿತ್ಯ) – ಕನ್ನಡ ಸಾಹಿತ್ಯ ಪರಿಷತ್ತು- ಬೆ೦ಗಳೂರು ಇವರಿ೦ದ ಪ್ರಕಟಿತ
 6. ಬಾಳಿಗೊ೦ದು ಬೆಳಕು –  ಶ್ರೀ ಸಾಯಿ ಪ್ರಕಾಶನ-ಬೆ೦ಗಳೂರು ಇವರಿ೦ದ ಪ್ರಕಟಿತ
 7. ಮಧುಬಿ೦ದು (ಸಾ೦ಗತ್ಯ ಮುಕ್ತಕಗಳು)
 8. ಔತಣ (ಸಾ೦ಗತ್ಯ ಮುಕ್ತಕಗಳು)
 9. ಗಣಪಯ್ಯನ ವಚನಗಳು(ತ್ರಿಪದಿ ಮುಕ್ತಕಗಳು)
 10. ಧರ್ಮಜ್ಞ  ವಚನಗಳು (ತ್ರಿಪದಿ ಮುಕ್ತಕಗಳು)
 11. ಹಾಡು ಹೊಗಳು (ನಿರತ ಸಾಹಿತ್ಯ ಸ೦ಪದ-ತು೦ಬೆ ಅವರಿ೦ದ ರಾಜ್ಯ ಮಟ್ಟದ ಕವಿತಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ)
ಅಪ್ರಕಟಿತ ಹಸ್ತಪ್ರತಿಗೊ:
 1. ಶ್ರೀ ರಾಮ ಕಥಾ ವೈಭವ೦ (ಸಾ೦ಗತ್ಯ ಮಹಾಕಾವ್ಯ)
 2. ಮೇಘ ಮ೦ದಾರ (ಕವನ ಸ೦ಕಲನ)
 3. ಚಿಲುಮೆ (ಕವನ ಸ೦ಕಲನ)
 4. ಪಚ್ಚೆಗದಿರು (ಕವನ ಸ೦ಕಲನ)
 5. ಗಣೇಶ ಮುಕ್ತಕ ಮುಕುರ (ಚೌಪದಿ ಮುಕ್ತಕಗಳು)
 6. ಎಸಳುಗಳು (ಏಳೆ ಮುಕ್ತಕಗಳು)
 7. ಚುಕ್ಕಿಗಳು (ದ್ವಿಪದಿ ಮುಕ್ತಕಗಳು)
 8. ಸುಹಾಸ (ಸಾ೦ಗತ್ಯ ಮುಕ್ತಕಗಳು)
 9. ಧರ್ಮರಾಯನ ದರೋಡೆ (ಸಾಮಾಜಿಕ ಕಾದ೦ಬರಿ)
 10. ವಿಧಿ ವಿಲಾಸ (ಖ೦ಡ ಕಾವ್ಯ)
ಸ೦ದ ಗೌರವ / ಪುರಸ್ಕಾರಂಗೊ:
 1. ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ -ವಿರಾಜಪೇಟೆ”ಚುಟುಕ ರತ್ನ” (೨೦೦೯)
 2. ಸುಳ್ಯ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (೨೦೦೮)
 3. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ವತಿಯಿ೦ದ ಸನ್ಮಾನ (೨೦೦೭)
 4. ಅಖಿಲ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ, ಮೈಸೂರು ವತಿಯಿ೦ದ ಸನ್ಮಾನ (೨೦೦೩)
 5. ಕುವೆ೦ಪು ಸಾಹಿತ್ಯ ಪ್ರತಿಷ್ಟಾನದಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ-ಅ೦ಕುರ (ಕವನ ಸ೦ಕಲನ)
 6. ರಾಷ್ಟ್ರಕವಿ ಮ೦ಜೇಶ್ವರ ಗೋವಿ೦ದ ಪೈ ಸ್ಮಾರಕ ಸ೦ಸ್ಥೆಯಿ೦ದ ರಾಜ್ಯ ಮಟ್ಟದ ಪ್ರಥಮ ಬಹುಮಾನಿತ ಕೃತಿ – ನೆನಹು (ಪ್ರೇಮ ಕವನ ಸ೦ಕಲನ) –
ಗಣೇಶ್ ಕುತ್ಯಾಡಿಯವರ ಕವನ ಸಂಕಲನಂಗೊಕ್ಕೆ ಬೇರೆ ಕವಿಗಳ ವಿಮರ್ಶೆ:
“ನಿಮ್ಮ ಒ೦ದೊ೦ದು ಸಾ೦ಗತ್ಯವೂ ಮಧುಬಿ೦ದುವೇ ಆಗಿದೆ….ಜೀವನದಲ್ಲಿ ನೀವು ಕ೦ಡು೦ಡ ಮತ್ತು ಕೇಳಿ ತಿಳಿದ ಅಳು-ನಗು, ಸುಖ-ದು:ಖ, ಬಿಸಿಲು-ಬೆಳದಿ೦ಗಳು, ಮುಳ್ಳು-ಮಲ್ಲಿಗೆ, ಕೊಳೆ-ಶುಚಿ ಮು೦ತಾದುವು ನಿಮ್ಮ ಸಾ೦ಗತ್ಯದ ಕನ್ನಡಿಯಲ್ಲಿ ಬಹಳ ಧ್ವನಿರಮ್ಯವಾಗಿ ಪ್ರತಿಫಲಿಸಿದೆ. ಶೃ೦ಗಾರ, ಕರುಣ, ಹಾಸ್ಯರಸಗಳು ಈ ಸಾ೦ಗತ್ಯದಲ್ಲಿ ತೊಟ್ಟಿಕ್ಕುತ್ತಿವೆ. ನಿಮ್ಮ “ಮಧುಬಿ೦ದು”ವಿಗಾಗಿ ಕನ್ನಡಿಗರು ನಿಮಗೆ ಕೃತಜ್ಞರಾಗಿರಬೇಕು”.
ಎಸ್.ವಿ. ಪರಮೇಶ್ವರ ಭಟ್ಟ
(“ಮಧುಬಿ೦ದು” ಮುಕ್ತಕ ಸ೦ಕಲನಂದ)’
~
ಕುತ್ಯಾಡಿಯವರ “ಹೂಮಾಲೆ” ಯ ಕವನ ಸ೦ಕಲನದಲ್ಲಿ ನನಗೆ ಕ೦ಡುಬ೦ದದ್ದು ಅವರ ಭಾವನೆಯ ತೀವ್ರತೆ, ಶುಧ್ಧ ಭಾಷೆಯ ಶೈಲಿ, ಕವಿಯಲ್ಲಿರಬೇಕಾದ ಪ್ರತಿಭಾಸ೦ಪನ್ನತೆ ಇಲ್ಲಿ ಎದ್ದು ಕಾಣುತ್ತದೆ.
– ಡಾ. ಶಿವರಾಮ ಕಾರ೦ತ
(“ಹೂಮಾಲೆ” ಕವನ ಸ೦ಕಲನದ ಕುರಿತು)’
~
‘ಕೇಳುಗರ ಮನವನ್ನು ಸೆಳೆದು ನಿಲ್ಲಿಸಿ ಇನ್ನೂ ಕೇಳೊಣ ಎನ್ನಿಸುವ ಒ೦ದು ಮನೋವಿಲಾಸ ಮತ್ತು ಕೌಶಲ ಶ್ರೀ ಗಣೇಶ್ ಕುತ್ಯಾಡಿಯವರ ರಚನೆಯಲ್ಲಿ ನನಗೆ ಕಡು ಬ೦ದವು. ಅನುಭವದ ಗಾಢತೆ, ವರ್ಣನೆಯಲ್ಲಿನ ಔಚಿತ್ಯ ಪ್ರಜ್ಞೆ, ಹಿ೦ಗದ ಹುರುಪು, ಶುಧ್ಧ ಭಾಷೆಯ ಶೈಲಿ, ಸದಭಿರುಚಿ, ಸೌ೦ದರ್ಯೋಪಾಸನೆ ಕಾವ್ಯರಸಸ೦ವಹನ ಆನ೦ದವಾಹಿಯಾಗಿದೆ….”
– ಪು.ತಿ.ನ
(“ಮೇಘ ಮ೦ದಾರ” ಕವನ ಸ೦ಕಲನಂದ”’)
~
‘ಬೆಟ್ಟದ ಕಿಬ್ಬಿಯಲ್ಲಿ ಥುಮುಕಿ ಹರಿಯುವ ಝರಿಯ೦ತೆ ಅವರ ಕವನಗಳು ವೇಗವಾಗಿ ಹರಿಯುತ್ತವೆ… ಕುತ್ಯಾಡಿಯವರ ಕವನಗಳ ಇನ್ನೊ೦ದು ಗುಣವೆ೦ದರೆ ಅವುಗಳ ಗೇಯತೆ….. ಅವರು ಭಾಷೆಯನ್ನು ಪಳಗಿಸಿಕೊ೦ಡವರು. ನವುರಾದ ಭಾವನೆಗಳನ್ನೂ ಬದುಕಿನ ವ್ಯಗ್ರತೆಯನ್ನೂ ಸರಳವಾಗಿ ಹಾಗೂ ಖಚಿತವಾಗಿ ಅಭಿವ್ಯಕ್ತಿಸಬಲ್ಲವರು…..
– ಎಚ್ಚೆಸ್ಕೆ
(“ಅ೦ಕುರ” ಕವನ ಸ೦ಕಲನದಿ೦ದ)”’
~
‘”ಮಧುಬಿ೦ದು” ಕುತ್ಯಾಡಿಯವರ ಆಳವಾದ, ಪರಿಪಕ್ವ, ಅನುಭವದ ಪ್ರತಿಫಲ. ಅದು ಕನ್ನಡದ ಶ್ರೇಷ್ಟ ಮುಕ್ತಕ ಸ೦ಕಲನದ ಸಾಲಿಗೆ ಸೇರಿದೆ.
‘ಹಾ.ಮಾ. ನಾಯಕ’
“ಮಧುಬಿ೦ದು” ಮುಕ್ತಕ ಸ೦ಕಲನದ ಕುರಿತು”’
~
~*~*~
ಧರ್ಮಜ್ಞ ವಚನದ ಕೆಲವು ತ್ರಿಪದಿಮುಕ್ತಕಂಗೊ..

ಅಜಿಪಿಲದ ಅರಸನಿಜ ಭುಜಗಭೂಷಣ ದೇವ|
ಭಜಿಸುವೆನು ಹರನೆ ಮಹಲಿಂಗ ಫಾಲಾಕ್ಷ|
ಸಾಜದಿಂ ಮಣಿವೆ ಧ‍ರ್ಮಜ್ಞ|
ಮಘವಾರ್ಚಿತನೆಭವನೆ ಅಘಹರನೆ ಶಂಕರನೆ|
ಖಗವಾಹನಂಗೆ ಸಖನೆನಿಸಿ ದುರುಳರನು|
ಮಿಗೆ ಕೊಂದೆ ಹರನೆ ಧ‍ರ್ಮಜ್ಞ|
ಸಚ್ಚಿದಾನಂದ ಜಗ ನಿಚ್ಚವೂ ಬೆಳಗುತಿರೆ|
ಹಚ್ಚಹಸುರೆಲ್ಲ ನಗುತಿಹವು ಹೆಚ್ಚಿಬಗೆ|
ಹಚ್ಚುವೆನು ದೀಪ ಧ‍ರ್ಮಜ್ಞ|
ಕಟಕಿಯಾಡಲು ಬೇಡ ಮಟಕದಾಟವು ಬೇಡ|
ಕೆಟ್ಟಯೋಚನೆಯು ದಿಟವಾಗಿ ತಾ ಬೇಡ|
ಬಿಟ್ಟುಬಿಡು ಕುಹಕ ಧ‍ರ್ಮಜ್ಞ|
ಗುರುಪೂಜೆಯಿಂದಧಿಕತರ ಪೂಜೆ ಜಗದೊಳಗೆ|
ದೊರೆಯದದು ಪರಮ ಗುರುಚರಣ ಸನ್ನಿಧಿಯು|
ನಿರತ ಪಾವನವು ಧ‍ರ್ಮಜ್ಞ|
ಹಾಲಿನಾ ಸವಿಗಿಂತ ಶೀಲವಂತನನೇಹ|
ಅಲೋಚಿಸಲ್ಕೆ ಮೇಲೆಂದು ತೋಚುವುದು|
ಬಲ್ಲವರ ನುಡಿಯು ಧ‍ರ್ಮಜ್ಞ|
ಮರಳಿನಲಿ ತೈಲವನು ಮರುಳನಲಿ ವಿದ್ಯೆಯನು|
ಕುರುಡನಲಿ ದಿಟ್ಟಿ ಮರುಭೂಮಿಯಲಿ ಕೃಷಿಯು|
ಧರೆಯೊಳಗೆ ಸಲ್ಲ ಧ‍ರ್ಮಜ್ಞ|
ಅರಳು ಹೂವಿನ ಹಾಗೆ ನೊರೆಹಾಲ ಬಿಳಿ ಹಾಗೆ|
ಕಿರು ಶಿಶುವ ಮುಗ್ಧ ನಗುವಿಹುದು ಸೊಗವಿಹುದು|
ಬರೆದೊಲವ ಎದೆಗೆ ಧ‍ರ್ಮಜ್ಞ|
ನೆರಳಿಹುದು ಬೆಳಕಿಹುದು ಇರುಳಿಹುದು ಹಗಲಿಹುದು|
ಇರುತಿಹುದು ಬೇವು ಬೆಲ್ಲಗಳು ಬಾಳಿನಲಿ|
ತಿರೆಯು ಬರಿ ದ್ವಂದ್ವ ಧ‍ರ್ಮಜ್ಞ|
ದುಡಿವ ಕಾ‍ರ್ಯದ ಜೊತೆಗೆ ಕೊಡುವ ಕಾರ್ಯವು ಬೇಕು|
ಕೊಡುಕೊಳುವ ಬಂಧದಿಂದಲೇ ಮುನ್ನಡೆದು|
ಪೊಡವಿ ಸಾಗುವುದು ಧ‍ರ್ಮಜ್ಞ|
ತಿಳಿಯುವಾ ಜೊತೆಯಲ್ಲೆ ತಿಳಿಸುವಾ ಕಾರ್ಯವನು|
ತಿಳಿಯಾಗಿ ಬಿಡದೆ ಸಾಧಿಪನತಿಳಿವು ತಾ|
ಇಳೆಯೊಳಗೆ ಮಾನ್ಯ ಧ‍ರ್ಮಜ್ಞ|
~*~*~
ಸಂಪರ್ಕ:
ಕುತ್ಯಾಡಿ ಮನೆ
ಅಂಚೆ: ಮಣಿಕ್ಕಾರ
ಸುಳ್ಯ ತಾಲೂಕು
08257-204039
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶುದ್ದಿ ಓದಿ ಕುಶೀ ಆತು ಕುಮಾರಣ್ಣ. ಒಪ್ಪ.

  [Reply]

  VA:F [1.9.22_1171]
  Rating: +1 (from 1 vote)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಬಹಳ ಸಂತೋಷ.

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘು ಮುಳಿಯ

  ಕುಮಾರಣ್ಣ,
  ನಮ್ಮ ಸಮಾಜದ ಈ ಸಾಧಕರ ಪರಿಚಯ ಮಾಡಿಕೊಟ್ಟದು ಭಾರೀ ಲಾಯ್ಕಾಯಿದು. ಇವರ “ಗಣಪಯ್ಯನ ವಚನಗಳು”ಅನುಭವಾಮೃತವೇ ಸರಿ.”ಮೇಘಮ೦ದಾರ” ಭಾವಗೀತೆಗೊ ಪ್ರಾಸಬದ್ಧವಾಗಿ ಕೊಶಿ ಕೊಡುತ್ತು.
  ಇದೇ ರೀತಿಲಿ ಮು೦ದೆಯೂ ಮಾವನ ಸಾಹಿತ್ಯಸೇವೆ ಮು೦ದುವರಿಯಲಿ ಹೇಳಿ ಪ್ರಾರ್ಥನೆಗೊ.

  [Reply]

  VA:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಇವರ ಇಲ್ಲಿ ಪರಿಚಯ ಮಾಡಿ ಕೊಟ್ಟ ಕುಮಾರಣ್ಣಂಗೆ ಧನ್ಯವಾದಂಗೊ.
  ಬೈಲಿಂಗೆ ಇವಕ್ಕೆ ಸ್ವಾಗತ ಹೇಳುವೊ. ಬೈಲಿಲ್ಲಿ ಇವರ ಕೃತಿಗಳ ಓದುವ ಸದವಕಾಶ ನವಗೆ ಸಿಕ್ಕಲಿ.

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಶುದ್ದಿಗೆ ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ..
  ಸಣ್ಣ ಕಥೆ, ಕವನಂಗಳ ಬೈಲಿಂಗೆ ಕೊಡಿ ಹೇಳಿ ಅವರತ್ತರೆ ಕೇಳಿದ್ದೆ, ಒಪ್ಪಿದ್ದವು..ಅವರ ಕವನಂಗೊ, ತ್ರಿಪದಿಗಳ ಬೈಲಿಲ್ಲಿ ಹಾಕುವ ಪ್ರಯತ್ನ ಮಾಡ್ತೆ..

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಶ್ರೀ ಕುತ್ಯಾಡಿ – ಇವರ ಪರಿಚಯ ಬೈಲಿಲಿ ಕೊಟ್ಟದಕ್ಕೆ ಕುಮಾರಣ್ಣಂಗೆ ಧನ್ಯವಾದ.
  ಹವಿ ಕನ್ನಡಲ್ಲಿ ಚುಟುಕು, ತ್ರಿಪದಿಗಳ ಇವು ಬರದು ಬೈಲಿಂಗೆ ಹಾಕಿರೆ ನವಗೆಲ್ಲ ಓದುವ ಅವಕಾಶ ಸಿಕ್ಕುಗು, ಅಲ್ಲದೋ..?.

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಅಕ್ಕು ಮಾವಾ°..

  [Reply]

  VA:F [1.9.22_1171]
  Rating: 0 (from 0 votes)
 6. ಜಯಶ್ರೀ ನೀರಮೂಲೆ
  jayashree.neeramoole

  ಬೈಲಿನೊಳಾಣ ‘ಮಧುಬಿಂದು’ ವ ಪರಿಚಯಿಸಿದ ಕುಮಾರಣ್ಣ೦ಗೆ ಧನ್ಯವಾದಂಗ…

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಆತಕ್ಕಾ°, ಇನ್ನು ಅವರ ಪದ್ಯಂಗಳನ್ನೂ ಹಾಕುವ ಪ್ರಯತ್ನ ಮಾಡ್ತೆ..

  [Reply]

  VA:F [1.9.22_1171]
  Rating: 0 (from 0 votes)
 7. ದೀಪಿಕಾ
  ದೀಪಿಕಾ

  ಗಣೇಶ್ ಕುತ್ಯಾಡಿ ಹೇಳಿ ಹೆಸರು ಕೇಳಿತ್ತಿದ್ದೆ..ಆದರೆ ಇವ್ವು ನಮ್ಮೊರೆ ಹೇಳಿ ಗೊ೦ತಿತ್ತಿದ್ದಿಲ್ಲೆ..ಓದಿ ಖುಶಿ ಆತು.
  ಇವರ ರಚನೆಯ ಒ೦ದು ಭಾವ ಗೀತೆ- “ಬದುಕಿನೀ ಕಾವ್ಯಕ್ಕೆ ಮುನ್ನುಡಿಯ ಬರೆದವಳೆ ಹೇ ತಾಯೆ ಹರಸು ಎನ್ನ ” ಹೇಳುವ ಪದ್ಯ ಎ೦ಗೊಳ ಮನೆಲಿ ಎಲ್ಲೋರಿ೦ಗೂ ಭಾರೀ ಇಷ್ಟ.ಎನ್ನ ಅಜ್ಜಿಗೆ ಅ೦ತು ಆ ಪದ್ಯವ ಕೇಳಿದಷ್ಟು ಸರ್ತಿ ಕಣ್ಣೀರು ಬತ್ತು..ಅ೦ತೊರ ಬಗ್ಗೆ ಇಲ್ಲಿ ಓದಿ ಖುಶಿ ಆತು.

  [Reply]

  VN:F [1.9.22_1171]
  Rating: +1 (from 1 vote)
 8. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಅಭಿಮಾನದ ಒಪ್ಪಕ್ಕೆ ಧನ್ಯವಾದಂಗೊ..
  {“ಬದುಕಿನೀ ಕಾವ್ಯಕ್ಕೆ ಮುನ್ನುಡಿಯ ಬರೆದವಳೆ ಹೇ ತಾಯೆ ಹರಸು ಎನ್ನ ” } ಇದು ಅಂಕುರ ಕವನಸಂಕಲನದ ಒಂದು ಪದ್ಯ,
  ‘ಮೇಘಮಂದಾರ’ ಕವನ ಸಂಕಲನ ಸದ್ಯವೇ ಪ್ರಿಂಟು ಆವ್ತು, ಆ ಪದ್ಯಂಗಳನ್ನೂ ಬೈಲಿಲ್ಲಿ ಕೊಡುವೋ..ರಾಗ ಸಂಯೋಜನೆ ಮಾಡಿ ನಿಂಗೊ ಹಾಡೆಕು ಅತೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಅಜ್ಜಕಾನ ಭಾವದೊಡ್ಡಮಾವ°ಅನು ಉಡುಪುಮೂಲೆನೀರ್ಕಜೆ ಮಹೇಶಗೋಪಾಲಣ್ಣಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿನೆಗೆಗಾರ°ಪೆಂಗಣ್ಣ°ರಾಜಣ್ಣವಸಂತರಾಜ್ ಹಳೆಮನೆಎರುಂಬು ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಪವನಜಮಾವವಾಣಿ ಚಿಕ್ಕಮ್ಮಶ್ರೀಅಕ್ಕ°ಕಳಾಯಿ ಗೀತತ್ತೆಚುಬ್ಬಣ್ಣಪುಣಚ ಡಾಕ್ಟ್ರುಬೊಳುಂಬು ಮಾವ°ಕೊಳಚ್ಚಿಪ್ಪು ಬಾವಕಜೆವಸಂತ°ದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ