Oppanna.com

ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿ

ಬರದೋರು :   ಶರ್ಮಪ್ಪಚ್ಚಿ    on   01/02/2016    2 ಒಪ್ಪಂಗೊ

ಕರ್ನಾಟಕ ಸರಕಾರದ ೨೦೧೫ ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿ-ಡಿ. ಕೆ. ಗೌತಮಡಿ. ಕೆ. ಗೌತಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಂದ ಕೊಡುವ ೨೦೧೫ ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿಯ ಎನ್. ಐ. ಟಿ. ಕೆ. ಆಂಗ್ಲಮಾಧ್ಯಮ ಶಾಲೆ ಸುರತ್ಕಲ್ ನ ವಿದ್ಯಾರ್ಥಿ,  ಡಿ. ಕೆ. ಗೌತಮಂಗೆ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿನ ಗಮನಾರ್ಹ ಸಾಧನೆಗಾಗಿ  ನೀಡಿ ಗೌರವಿಸಿದವು .

ಗಣ ರಾಜ್ಯೋತ್ಸವ ದಿನಾಚರಣೆ – ೨೦೧೬ ರ ಪ್ರಯುಕ್ತ ಜನವರಿ ೨೬, ೨೦೧೬ ರಂದು ಮಂಗಳೂರಿನ ನೆಹರೂ ಮೈದಾನಲ್ಲಿ ನಡೆದ ವೈಭವದ ಜಿಲ್ಲಾ ಮಟ್ಟದ ಗಣ ರಾಜ್ಯೋತ್ಸವ ದಿನಾಚರಣೆ ೨೦೧೬ ಕಾರ್ಯಕ್ರಮಲ್ಲಿ ಈ ಪ್ರಶಸ್ತಿಯ ನೀಡಿ ಪುರಸ್ಕರಿಸಿದವು.

ಸಮಾರಂಭಲ್ಲಿ ಕರ್ನಾಟಕ ಸರಕಾರದ ಮಾನ್ಯ ಅರಣ್ಯ ಸಚಿವರಾದ ಶ್ರೀ ರಮಾನಾಥ ರೈ, ಶಾಸಕರಾದ ಶ್ರೀ ಜೆ. ಆರ್. ಲೋಬೊ, ಶ್ರೀ ಐವನ್ ಪಿಂಟೊ, ಶ್ರೀ ಗಣೇಶ್ ಕಾರ್ಣಿಕ್, ಜಿಲ್ಲಾಧಿಕಾರಿ ಶ್ರೀ ಎ ಬಿ ಇಬ್ರಾಹಿಂ ಮತ್ತಿತರ ಗಣ್ಯರು ಉಪಸ್ಥಿತರಿತ್ತಿದ್ದವು.

ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಗೌತಮ್ ಈ ಹಿಂದೆ   ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ  ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ  ಬೆಂಗಳೂರು  ಇವರಿಂದ ವಚನ ಮಂದಾರರಾಜ್ಯ  ಪ್ರಶಸ್ತಿ ಹಾಂಗೂ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿನ ಗಮನಾರ್ಹ ಸಾಧನೆಗಾಗಿಅರಳು ಮಲ್ಲಿಗೆ ರಾಜ್ಯ  ಪ್ರಶಸ್ತಿ,  ಮತ್ತೆ  ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿಂದ ಕನ್ನಡ ‘ರಾಜ್ಯೋತ್ಸವ ಸಂಧರ್ಭಲ್ಲಿ ೨೦೧೫ ನೇ ಸಾಲಿನ ರಾಜ್ಯೋತ್ಸವ ಸಾಧಕ ಪುರಸ್ಕಾರಪ್ರಶಸ್ತಿಳನ್ನು ಪಡಕ್ಕೊಂಡದರ ಇಲ್ಲಿ ನೆನಪಿಸಿಗೊಂಬೊ.
ಇವ° ಎನ್ ಐ ಟಿ ಕೆ ಸುರತ್ಕಲ್ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೃಷ್ಣ ಭಟ್ ಮತ್ತು ರಾಜೇಶ್ವರಿ ದಂಪತಿ ಪುತ್ರ.

ಡಿ.ಕೆ.ಗೌತಮ ಇನ್ನು ಮುಂದೆಯೂ ಹತ್ತು ಹಲವಾರು ಪ್ರಶಸ್ತಿಯ ತನ್ನದಾಗಿಸಿಗೊಂಡು, ತಾನು ಕಲಿತ್ತ ಶಾಲೆಗೆ, ತನ್ನ ಹೆತ್ತವರಿಂಗೆ, ಸಮಾಜಕ್ಕೆ ಒಳ್ಳೆಯ ಕೀರ್ತಿ ತಂದು ಕೊಡಲಿ ಹೇಳಿ ನಾವು ಆಶೀರ್ವಾದ ಮಾಡುವೊ°

~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿ

  1. ಅಭಿನಂದನೆಗೊ. ಶುದ್ದಿ ಹೇದ ಅಪ್ಪಚ್ಚಿಗೆ ನಮೋ ನಮಃ . ಶ್ರೇಯಸ್ಸಾಗಲಿ ಹೇದು ನಮ್ಮ ಹಾರೈಕೆಗೊ

  2. ಗೌತಮ ಒಳ್ಳೆ ಪ್ರತಿಭಾವಂತ.ಅವನ ಭವಿಷ್ಯ ಉಜ್ಜ್ವಲವಾಗಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×