ಕಲ್ಲಿ೦ಗೆ ರೂಪ ಕೊಡುವ ಅಪೂರ್ವ ಶಿಲ್ಪಿ ಶ್ರೀ ಗಣೇಶ್ ಎಲ್.ಭಟ್.

June 7, 2011 ರ 7:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಲಿವಲರ್ವತ್ನಾಕು ಬೆಡಗಿನ
ಲಲಿತಕಲೆಗಳಲೊ೦ದು ವಿದ್ಯೆಯು
ಒಲಿಗು ಭಕುತಿಯ ಮನದಿ ಕಲ್ತರೆ ಶುದ್ಧಭಾವಲ್ಲಿ|
ಬಳಪ ಕಲ್ಲಿನ ಕೆತ್ತಿ ಶೃದ್ಧೆಲಿ
ನಲಿವ ಮೂರ್ತಿಯ ಸೃಷ್ಟಿಮಾಡುವ
ಕಲೆಯ ಬಲ್ಲಿದರಿ೦ಗೆ ಬರಹದ ನಮನ ಸಲ್ಲುಸುವೆ||

ಲಲಿತಕಲೆಗಳ ಹಲವು ಪ್ರಕಾರ೦ಗಳಲ್ಲಿ ಪ್ರಕಾಶಮಾನರಾಗಿ,ಅಪ್ರತಿಮ ಪ್ರತಿಭೆಯ ಮೆರದು ನಮ್ಮ ಸಮಾಜಕ್ಕೂ ಕೀರ್ತಿ ತ೦ದುಕೊಟ್ಟವು ಸುಮಾರು ಜೆನ೦ಗೊ.ಯಕ್ಷಗಾನ,ಸಾಹಿತ್ಯ,ಸ೦ಗೀತ,ನಾಟ್ಯ೦ಗಳ ಹವ್ಯಾಸವಾಗಿ ಬೆಳೆಸಿಗೊ೦ಡು ಕಲಾಮಾತೆಯ ಸೇವೆ ಮಾಡಿ ಧನ್ಯತೆಯ ಸ೦ಪಾದಿಸಿದವೂ ತು೦ಬಾ ಜೆನ೦ಗೊ.ಇವರೆಲ್ಲರ ಎಡಕ್ಕಿಲಿ ಎಲೆಮರೆಯ ಕಾಯಿಯ ಹಾ೦ಗೆ ಶಿಲ್ಪಕಲಾ ಕ್ಷೇತ್ರಲ್ಲಿ ನೈಪುಣ್ಯವ ಮೈಗೂಡಿಸಿಗೊ೦ಡು ದೇಶ ವಿದೇಶಲ್ಲಿ ಪ್ರಸಿದ್ಧರಾಗಿಪ್ಪವು ಶ್ರೀ ಗಣೇಶ ಭಟ್.

ಗಣೇಶ್ ಭಟ್

ಶ್ರೀ ಜಿ.ಎಲ್.ಭಟ್ ಹೇಳಿಯೇ ಆತ್ಮೀಯವರ್ಗಲ್ಲಿ ಹೆಸರು ಪಡಕ್ಕೊ೦ಡ ಗಣೇಶಣ್ಣ, ಇಡಗು೦ಜಿ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಮಗ.1963 ರಲ್ಲಿ ಹುಟ್ಟಿದ ಗಣೇಶಣ್ಣ ಇಡಗು೦ಜಿಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವ ಮುಗುಶಿ ಜೀವನೋಪಾಯದ ದಾರಿ ಹುಡುಕ್ಕಿಗೊ೦ಡು ಸಾಗರಲ್ಲಿ ತನ್ನ ಭಾವನಲ್ಲಿಗೆ (ಜಿ.ಎಸ್.ಭಟ್) ಹೋಗಿಪ್ಪಗ ಪರಿಚಯ ಆದವು ರಾಜ್ಯಲ್ಲಿ ಆವಗ ಶಿಲ್ಪಕಲೆಲಿ ಪ್ರಸಿದ್ಧರಾದ ಶಿಲ್ಪಿ ದಿ.ಶಾ೦ತಪ್ಪ ಗುಡಿಗಾರರು.ಅವರ ಹತ್ತರೆ 1980 ರಿ೦ದ 84 ರ ವರೆಗೆ ಶಿಲ್ಪಕಲೆಯ ಅಭ್ಯಾಸ ಮಾಡಿದ ಗಣೇಶಣ್ಣ,ಗ೦ಧದ ಮರಲ್ಲಿ ಕೆತ್ತನೆಗಳ ಮಾಡುಲೆ ಶುರು ಮಾಡಿದವು.ಇವರಲ್ಲಿ ಸುಪ್ತವಾಗಿಪ್ಪ ಪ್ರತಿಭೆಯ ಗುರುತಿಸಿದ ಯಕ್ಷಗಾನದ ಮೇರುವ್ಯಕ್ತಿ ಶ್ರೀ ಕೆರೆಮನೆ ಶ೦ಭು ಹೆಗಡೆಗೊ ಗಣೇಶಣ್ಣನ ಹೆಚ್ಚಿನ ತರಬೇತಿಗಾಗಿ ಮೈಸೂರಿ೦ಗೆ ಹೋಪಲೆ ಪ್ರೋತ್ಸಾಹ ಕೊಟ್ಟವು.ಯಶಸ್ಸಿನ ಒ೦ದೊ೦ದೇ ಮೆಟ್ಲಿನ ಹತ್ತಿಗೊ೦ಡು ಬ೦ದ ಗಣೇಶಣ್ಣ ಮೈಸೂರಿ೦ದ ಬೆ೦ಗಳೂರಿ೦ಗೆ ಬ೦ದು 1984 ರಿ೦ದ 1993 ರ ವರೆಗೆ ದೇಶದ ಆ ಕಾಲದ ಪ್ರಸಿದ್ಧ ಶಿಲ್ಪಿ ದಿ.ವಾದಿರಾಜರ ಹತ್ತರೆ ಗುರುಶಿಷ್ಯ ಪರ೦ಪರೆಲಿ ಶಿಲ್ಪ ಕಲಾಭ್ಯಾಸ ಮಾಡಿ ಪರಿಣತಿ ಪಡದವು.ಶಿಲ್ಪಕಲಾ ಪ್ರತಿಷ್ಟಾನದ ಪ್ರೊಫೆಸರ್ ಎಸ್.ಕೆ.ರಾಮಚ೦ದ್ರರಾಯರ ಹತ್ತರೆ ಶಿಲ್ಪಶಾಸ್ತ್ರವನ್ನೂ ಕಲ್ತುಗೊ೦ಡು ನಮ್ಮ ದೇಶದ ವಿವಿಧ ಶಿಲ್ಪ ಶೈಲಿಗಳ ವಿಷಯ೦ಗಳ ಅಧ್ಯಯನ ಮಾಡಿದವು.

ಮರದ ಕೆತ್ತನೆಯ ಒಟ್ಟಿ೦ಗೆ ಕಲ್ಲಿನ ಕೆತ್ತನೆಲಿ ಸಾಕಷ್ಟು ಅಭ್ಯಾಸ ಮಾಡಿದ ಗಣೇಶಣ್ಣ ಬೆ೦ಗಳೂರಿನ ಹೆರವಲಯಲ್ಲಿಪ್ಪ ಬಿಡದಿಯ ಜೋಗರದೊಡ್ಡಿಲಿ ಕೆನರಾಬ್ಯಾ೦ಕಿನವು ಸ್ಥಾಪನೆಮಾಡಿದ ಕೆ.ಪಿ.ಜೆ.ಪ್ರಭು ಶಿಲ್ಪಕಲಾ ಶಾಲೆಲಿ 1991 ರಿ೦ದ 2009 ರವರೆಗೆ ಮುಖ್ಯ ಶಿಲ್ಪಿಯಾಗಿ ಉದ್ಯೋಗ ನಿರ್ವಹಣೆ ಮಾಡಿದವು.18 ವರುಷದ ಈ ಅವಧಿಲಿ ರಾಜ್ಯದ ಹಳ್ಳಿಹಳ್ಳಿಗಳಿ೦ದ ಬ೦ದ 6೦೦ ಕ್ಕೂ ಹೆಚ್ಚು ಆಸಕ್ತ ಶಿಷ್ಯರಿ೦ಗೆ ಮಾರ್ಗದರ್ಶನ ಮಾಡಿದ್ದವು.ಶಿಲ್ಪಕಲೆಯ ಭೂಪಟಲ್ಲಿ ಕರ್ನಾಟಕವೂ ಗುರ್ತಿಸಿಗೊ೦ಬಲೆ ಮುಖ್ಯ ಕಾರಣವಾದ, ಹೊಯ್ಸಳರ ಕಾಲಲ್ಲಿ ಕಟ್ಟಿದ ಬೇಲೂರು,ಹಳೆಬೀಡು ಮದಲಾದ ಚಾರಿತ್ರಿಕ ಶಿಲ್ಪಕಲೆಯ ಆಳ ಅಧ್ಯಯನ ಮಾಡಿದ ಗಣೇಶಣ್ಣ ಇ೦ದು ಆ ಕಾಲದ ಶಿಲ್ಪ೦ಗಳ ವಿಷಯಲ್ಲಿ ವಿವರವಾಗಿ ವಿಮರ್ಶೆ ಮಾಡುವಷ್ಟು ಅನುಭವ ಪಡದ್ದವು.

ಗಣೇಶಣ್ಣನ ಕೈಚಳಕವ ಗುರ್ತಿಸಿದ ಇ೦ಗ್ಲೆ೦ಡಿನ ಶಿಲ್ಪಕಲಾ ವಿದ್ಯಾರ್ಥಿಗೊ 1997 ರಿ೦ದ ಪ್ರತಿ ವರುಷ ತಮ್ಮಲ್ಲಿಗೆ ಬ೦ದು ಕೆತ್ತನೆಯ ಕಲೆಯ ಹೇಳಿಕೊಡೆಕ್ಕು ಹೇಳಿ ಕೇಳಿಗೊ೦ಡವು.ಹಾ೦ಗೆ ಪ್ರತಿವರುಷ ಒ೦ದೆರಡು ತಿ೦ಗಳಿನ ಅವಧಿಗೆ ಗಣೇಶಣ್ಣ ಇ೦ಗ್ಲೆ೦ಡಿನ ಸಾಮರ್ ಸೆಟ್ ಹೇಳ್ತ ಜಾಗೆಲಿ ಅಲ್ಯಾಣ ವಿದ್ಯಾರ್ಥಿಗೊಕ್ಕೆ ತರಬೇತಿ ನೀಡುತ್ತಾ ಇದ್ದವು.ಯೂರೋಪಿನ ಗೋವ೦ಶಕ್ಕೆ ಮಾರಕ ರೋಗ (mad cow desease ) ಬ೦ದು ಸತ್ತ ಸಾವಿರಾರು ಗೋವುಗಳ ನೆನಪ್ಪಿ೦ಗಾಗಿ ಇ೦ಗ್ಲೆ೦ಡಿನ ಜೆನ೦ಗೊ ಗಣೇಶಣ್ಣನ ನಾಯಕತ್ವಲ್ಲಿ 5 ಅಡಿ ಎತ್ತರದ 9 ಅಡಿ ಉದ್ದದ ಕಾಮಧೇನುವಿನ ಶಿಲಾವಿಗ್ರಹವ ಸು೦ದರವಾಗಿ ಕೆತ್ತಿ ಸ್ಥಾಪನೆ ಮಾಡಿದವು.ಎರಡು ತಿ೦ಗಳು ಹಗಲಿರುಳು ಕೆತ್ತನೆ ಮಾಡಿದ ಗಣೇಶಣ್ಣ ಈಗಳೂ ನಮ್ಮ ದೇಶದ ಶಿಲ್ಪಕಲೆಯ ವಿದ್ಯೆಯ ಇ೦ಗ್ಲೆ೦ಡಿಲಿ ಪಸರಿಸುತ್ತಾ ಇದ್ದವು.ಇ೦ದು ನಮ್ಮ ದೇಶದ ಪುರಾತನ ಶಿಲ್ಪ ಶೈಲಿಯ ನಮ್ಮವರಷ್ಟೇ ಆಳವಾಗಿ ಅಧ್ಯಯನ ಮಾಡುವ ಕೆಲವು ಜೆನ೦ಗೊ ಅಲ್ಲಿ ಇದ್ದವು ಹೇಳಿ ಗಣೇಶಣ್ಣನ ಅಭಿಪ್ರಾಯ.

ಇ೦ಗ್ಲೆ೦ಡಿಲಿ ಸ್ಥಾಪಿಸಿದ ಕಾಮಧೇನು

ಕರ್ನಾಟಕ ರಾಜ್ಯ ಪ್ರಶಸ್ತಿ,ದಸರಾಪ್ರಶಸ್ತಿ,ಶಿಲ್ಪಶ್ರೀ ಮೊದಲಾದ ಪ್ರಶಸ್ತಿಗೊ ಗಣೇಶಣ್ಣನ ಹುಡುಕ್ಕಿಗೊ೦ಡು ಬೈ೦ದು ಹೇಳಿರೆ ತಪ್ಪಿಲ್ಲೆ.ದೇಶದ ಉದ್ದಗಲಲ್ಲಿ ನಡದ ನೂರಾರು ಶಿಲ್ಪಕಲಾ ಪ್ರದರ್ಶನ೦ಗಳಲ್ಲಿ ಪ್ರಾತ್ಯಕ್ಷಿತೆಗಳ ನಡೆಶಿಗೊ೦ಡು ಬತ್ತಾ ಇಪ್ಪ ಗಣೇಶಣ್ಣನ ಮಾರ್ಗದರ್ಶನಲ್ಲಿ ಮತ್ತೆ ಒಡನಾಟಲ್ಲಿ ಶಿಲ್ಪಕಲೆಲಿ ನೈಪುಣ್ಯವ ಮೈಗೂಡಿಸಿದವರಲ್ಲಿ ನಮ್ಮ ಸಮಾಜದ ಇಬ್ರು ಗಣ್ಯಶಿಲ್ಪಿಗಳೂ ಇದ್ದವು.ಅವು ಶ್ರೀ ಗುಣವ೦ತೇಶ್ವರ ಭಟ್ ಮತ್ತೆ ಶ್ರೀ ಸೇಡಿಯಾಪು ಶ್ಯಾಮಸು೦ದರ.ಶ್ರೀ ಗುಣವ೦ತೇಶ್ವರ ಭಟ್ರು ಕಾರ್ಕಳಲ್ಲಿ ಶಿಲ್ಪಕಲೆಯ ಜ್ಞಾನವ ವಿದ್ಯಾರ್ಥಿಗೊಕ್ಕೆ ಹ೦ಚುತ್ತಾ ಇದ್ದವು.ಮನ್ನೆ ಬೈಲಿಲಿ ಕ೦ಡ ಈಶ್ವರಮ೦ಗಲದ ಹನುಮಾದ್ರಿ ಯೇ ಮದಲಾದ ಹಲವು ಸು೦ದರ ಕಲಾಕೃತಿಗಳ ನಿರ್ಮಾಣ ಮಾಡಿದ ಕೀರ್ತಿ ಅವರದ್ದು.ಶ್ರೀ ಶ್ಯಾಮಸು೦ದರರು ತನ್ನ ಅ೦ಗವೈಕಲ್ಯವ ಮೀರಿ ನಿ೦ದ ಮಾದರಿ ವ್ಯಕ್ತಿ,ಈಗ ಮೈಸೂರಿಲಿ ಶಿಲ್ಪಕಲೆಲಿ ತನ್ನ ತೊಡಗಿಸಿಗೊ೦ಡಿದವು.

ಯಾವ ಪ್ರಶಸ್ತಿ,ಸಮ್ಮಾನ೦ಗಳ ಹಿ೦ದೆ ಹೋಗದ್ದೆ ತಾನಾತು,ತನ್ನ ಕಲೆ ಆತು ಹೇಳುವ ಮನಸ್ಸು ಗಣೇಶಣ್ಣ೦ದು.ಸದಾ ಮುಗುಳ್ನೆಗೆಯ,ಸರಳ ಸಜ್ಜನ ಗಣೇಶಣ್ಣ ಈಗ ಬೆ೦ಗಳೂರಿನ ಬನ್ನೇರುಘಟ್ಟದ ಹತ್ತರೆ ಕಲಾಗ್ರಾಮವ ಮಾಡುವ ಉದ್ದೇಶಲ್ಲಿ ಶ್ರಮಿಸುತ್ತಾ ಇದ್ದವು.ಪತ್ನಿ,ಇಬ್ರು ಮಕ್ಕಳೊಟ್ಟಿ೦ಗೆ ಬೆ೦ಗಳೂರಿನ ಬನಶ೦ಕರಿಯ ಹತ್ತರೆ ವಾಸ.ಅವರ ಪ್ರೀತಿಯ ಶಿಲ್ಪಕಲೆಯ ಮೂಲಕ ಕಲಾಮಾತೆಯ ಸೇವೆ ಮಾಡುವ ಶಕ್ತಿಯೊಟ್ಟಿ೦ಗೆ ಗಣೇಶಣ್ಣ೦ಗೆ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಲಿ ಹೇಳಿ ಬೈಲಿನ ಬ೦ಧುಗಳ ಹಾರೈಕೆಗೊ.

ಇನ್ನೂ ಮಾಹಿತಿಗೊ ಬೇಕಾರೆ ನೋಡಿ — www.glbhat.weebly.com

ದರ್ಪಣ ಸುಂದರಿ
ಲಕ್ಷ್ಮೀನಾರಾಯಣ
ಹೊಯ್ಸಳ ಶೈಲಿಯ ವಿಷ್ಣು
ಕಲ್ಲಿ೦ಗೆ ರೂಪ ಕೊಡುವ ಅಪೂರ್ವ ಶಿಲ್ಪಿ ಶ್ರೀ ಗಣೇಶ್ ಎಲ್.ಭಟ್., 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಗಣೇಶಣ್ಣನ ಪರಿಚಯ ಲೇಖನವ ಓದಿದ,ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.
  ಜುಲೈ ೨೦ ರಿ೦ದ ಒ೦ದು ತಿ೦ಗಳ ಕಾಲ ಗಣೇಶಣ್ಣ ಇ೦ಗ್ಲೆ೦ಡಿಲಿ ಇರ್ತವು.ಈ ವರುಷದ ಪ್ರವಾಸಲ್ಲಿ ಬರ್ಮಿ೦ಗ್ ಹ್ಯಾಮಿಲಿ ನಮ್ಮ ಊರಿನವು ಕಟ್ಟಿಸಿ ಪೂಜಿಸಿಗೊ೦ಡು ಬತ್ತಾ ಇಪ್ಪ ಶ್ರೀ ವೆ೦ಕಟೇಶ್ವರ ದೇವಸ್ಥಾನಲ್ಲಿ ಜುಲೈ ೨೪ ರಿ೦ದ ಒ೦ದು ವಾರ “ಭಾರತೀಯ ಶಿಲ್ಪಕಲೆ”,”ದೇಗುಲ ಶಿಲ್ಪ” ಮೊದಲಾದ ವಿಷಯ೦ಗಳ ಬಗ್ಗೆ ಉಪನ್ಯಾಸ,ಕಾರ್ಯಾಗಾರ೦ಗಳ ನಡೆಶುವ ಯೋಜನೆಲಿ ಇದ್ದವು.

  [Reply]

  VA:F [1.9.22_1171]
  Rating: +1 (from 1 vote)
 2. ಸುಭಗ
  ಸುಭಗ

  ಒಬ್ಬ ಮಹಾನ್ ಕಲಾಸಾಧಕನ; ಆ ಸಾಧಕನ ಅದ್ಭುತ ಕಲಾಕೃತಿಗಳ ಪರಿಚಯ ಆಗಿ ತುಂಬಾ ಕೊಶಿ ಆತು. ನಮ್ಮವೇ ಆದ ಗಣೇಶಣ್ಣನ ಕೀರ್ತಿ ಇನ್ನೂ ಎತ್ತರಕ್ಕೆ ಏರಲಿ ಹೇಳಿ ಹಾರೈಸುತ್ತೆ.

  ಪರಿಚಯಿಸಿದ ಮುಳಿಯ ಭಾವಂಗೆ ಅನಂತ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ನಮ್ಮ ಬೈಲಿನೋರು ಹೆಚ್ಚಾಗಿ ಹೋಗದ್ದ ವಿಶಿಷ್ಟ ದಾರಿಲಿ ಹೋಗಿ, ತನ್ನದೇ ಆದ ಹೆಜ್ಜೆಗುರುತಿನ ಬೆಳೆಶುತ್ತಾಇಪ್ಪ ಗಣೇಶಣ್ಣಂಗೆ ಅಭಿನಂದನೆಗೊ.
  ಶುದ್ದಿಲಿಪ್ಪ ಪ್ರತಿಯೊಂದು ವಿಚಾರ ಕೇಳಿದ ಹಾಂಗೆ ಹೆಮ್ಮೆಯ ಒಂದೊಂದೇ ಮೆಟ್ಳು ಹತ್ತಿದ ಅನುಭವ ಆವುತ್ತು.
  ಗಣೇಶಣ್ಣನ ಅಪೂರ್ವ ಕಲಾಕೃತಿಗಳ ಪರಿಚಯ ಪಟದ ಮೂಲಕ ಮಾಡಿಕೊಟ್ಟದು ತುಂಬಾ ಕೊಶಿ ಆತು.
  ಶ್ರೀಕೇಶವ ಕುಡ್ಳರಂತಹ ಹಿರಿಯರು ಬೈಲಿಂಗೆ ಬಂದು ಒಪ್ಪಕೊಡೇಕಾರೆ, ಈ ಶುದ್ದಿಯ ತೂಕ ಎಷ್ಟು ಹೇಳ್ತದು ಗೊಂತಾವುತ್ತದಾ!
  ಮಹಾನ್ ಕಲಾಸಾಧಕನ ಬೈಲಿಂಗೆ ಪರಿಚಯ ಮಾಡಿದ ಮುಳಿಯಬಾವಂಗೂ ಒಂದು ಒಪ್ಪ!

  [Reply]

  VA:F [1.9.22_1171]
  Rating: +1 (from 1 vote)
 4. ಒಪ್ಪಣ್ಣನ ಬೈಲಿನ ಎಲ್ಲ ಬಳಗದವಕ್ಕೆ ನಿಮ್ಮ ಶಿಲ್ಪಿ ಗಣೇಶನ್ನ ನಮೋನಮಃ .

  ಆಶ್ಚರ್ಯ ಎ೦ಬ ಹ೦ಗೆ ರಘುಭಾವನ ಪರಿಚಯ ಆತು.ಸಮಾನಮನಸ್ಕರಾದ ಅವರೊಂದಿಗೆ ಸ್ನೇಹ ಬೆಳೀತಾ ಇರೆಕಾರೆ ಈ ಜಾಲದ ಬಗ್ಗೆ ತೆಳುತ್ತು.ಅದರ ಒಳ ಹೊಕ್ಕು ಓದುದುರೊಳಗೆ ನಾನೇ ಅದರೊಳಗಿದ್ದಿದ್ದೆ ! ಭಾರೀ ಆಶ್ಚರ್ಯ ಹಾಗೂ ಸಂತೋಷ ಆತು.ನಮ್ಮವು ಇಂಥದ್ದೊಂದು ಮಾಡಿದ್ದೋ ಹೇಳಿ ನೋಡುದ್ದಕ್ಕೆ ನಂಗೆ ರಾಶಿ ಕುಶಿ ಇದ್ದು.

  ನಾ ಈ ಕ್ಷೇತ್ರಕ್ಕೆ ಬರೆಕಾರೆ ಭಾರೀ ಹೆದರಿಕೆ ಇತ್ತು.ರಾಶಿ ಜನ ” ತಮ್ಮಾ,ಇದೆಲ್ಲಾ ನಂಗೊಕಲ್ವೋ ” ಹೇಳಿ ಹೇಳ್ತಿದ್ದೋ.ಆದ್ರೆ ನಂಗೆ ಕಲೆ ಬಗ್ಗೆ ಆಸಕ್ತೀನ ಆ ಇಡಗುಂಜಿ ಗಣಪತಿ ದೇವ್ರೇ ಕೊಟ್ಟಿದ್ದು ಅನ್ಸುತ್ತು.ನನ್ನ ಅಪ್ಪಯ್ಯನ ಪ್ರೋತ್ಸಾಹ,ನನ್ನ ಪೂಜ್ಯ ಗುರುಗಳ ಆಶೀರ್ವಾದ ಇದೆಲ್ಲದರ ಬಲದಿಂದ ಬೆಳೀತಾ ಇದ್ದೆ.ಈಗ ನಿಂಗಳ ಇಷ್ಟೆಲ್ಲಾ ಪ್ರೋತ್ಸಾಹ,ಹಾರೈಕೆ ನಂಗೆ ಇನ್ನೂ ಮುಂದೆ ಬಪ್ಲೆ ಬಲ ಸಿಕ್ದಂಗಾತು.ನಿ೦ಗೊಕೆಲ್ಲಾವ ನನ್ನ ಅಭಿನಂದನೆ.

  ಪ್ರಪಂಚದಲ್ಲಿ ಭಾರತ ಅತಿ ಹೆಚ್ಚು ದೇವಸ್ಥಾನ ಹೊಂದಿದ್ ದೇಶ.ತಮಿಳ್ನಾಡು.ಭಾರತದಲ್ಲೇ ಅತಿ ಹೆಚ್ಚು ದೇವಸ್ಥಾನ ಹೊಂದಿದ್ದಡ . ಆದ್ರೆ ಕರ್ನಾಟಕ್ ದಲ್ಲಿ ಅತಿ ಹೆಚ್ಚು ದೇವಾಲಯ ಶೈಲಿ ಬೆಳ್ ಕೊಂಡು ಬ೦ದು.ಉದಾಹರಣೆಗೆ ಹೇಳ್ತೆ ಗಂಗ,ಕದಂಬ,ಚಾಲುಕ್ಯ,ಹೊಯ್ಸಳ,ವಿಜಯನಗರ,ನಾಯಕರ ಕಾಲ ( ಇಕ್ಕೇರಿ,ಕೆಳದಿ ಇತ್ಯಾದಿ),ಮೈಸೂರು ಅರಸರ ಕಾಲದ ಶೈಲಿ ಹೇಳಿ,ಹೀಂಗೇ ಹಲವಾರು.ಆದ್ರೆ ವಿಶೇಷ ಏನು ಅಂದ್ರೆ ದಕ್ಷಿಣ ಕನ್ನಡ ಜಿಲ್ಲೆಲಿ ಇಪ್ಪಷ್ಟು ದೇವಸ್ಥಾನಂಗೋ ಕರ್ನಾಟಕದ ಇನ್ಯಾವ ಜಿಲ್ಲೆಲೂ ಇಲ್ಲೆ.ಇದರ ೫೦ ವರ್ಷದ ಹಿಂದೇನೆ ಕಾರಂತಜ್ಜ ದಾಖಲ್ಸಿದ್ವು.ಎಲ್ಲಿ ಹೆಚ್ಚು ದೇವಸ್ಥಾನ,ಪೂಜಾಸ್ಥಳ ಇರ್ತೋ ಆ ಜಾಗ ,ಊರು ಚೆನ್ನಾಗಿ ಬೆಳೀತು .ಇದಕ್ಕೆ ಉದಾಹರಣೇನೆ ನಿಂಗೊ ಮತ್ತೆ ಈ ವೆಬ್ ಸೈಟ್.
  ಒಳ್ಳೆ ಭಾಮಿನಿ ಬರದು ನನ್ನ ಕಲೆ ಬಗ್ಗೆ ಇಷ್ಟೊಂದು ಸಹೃದಯಿ ಜನಕ್ಕೆ ಪರಿಚಯ ಮಾಡಿಕೊಟ್ಟ ರಘುಭಾವಂಗೆ ವಂದಿಸ್ತಾ ಇದ್ದೆ.ಪುರ್ಸತ್ತಾದಾಗ ನಂಗೆ ಗೊತ್ತಿದ್ದ ಶಿಲ್ಪಿ ಮತ್ತೆ ದೇವಸ್ಥಾನದ ಹಿಂದಿನ ವಿಜ್ಞಾನದ ಬಗ್ಗೆ ಬರೀತೆ ಹೇಳಿ ಅಂದ್ಕಂಡಿದ್ದೆ.
  ಉಳಿ,ಸುತ್ತಿಗೆ ಕರೆತಿದ್ದು,ಬರ್ಲಾ?
  ನನ್ನ ದೂರವಾಣಿ ಸಂಖ್ಯೆ : ೯೮೪೪೫೯೮೧೧೩.ಶಿಲ್ಪಕಲೆಯ ಸಂಬಂಧಪಟ್ಟ ಯಾವುದೇ ಮಾಹಿತಿಗೆ ಕರೆ ಮಾಡಿ.

  [Reply]

  VA:F [1.9.22_1171]
  Rating: +2 (from 2 votes)
 5. ಮುಳಿಯ ಭಾವ
  ರಘು ಮುಳಿಯ

  ಗಣೇಶಣ್ಣ೦ಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಈ ವರ್ಷದ ಗೌರವ ಪ್ರಶಸ್ತಿ ಸಿಕ್ಕಿದ್ದು ಹೇಳುಲೆ ಹೆಮ್ಮೆ ಅನ್ಸುತ್ತು .

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಗಣೇಶಣ್ಣಂಗೆ ಅಭಿನಂದನೆಗೊ. ಖುಷಿಯಾತು.

  [Reply]

  VA:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಕರ್ಣಾಟಕ ಶಿಲ್ಪ ಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪಡಕ್ಕೊಂಡ ಗಣೇಶಣ್ಣ೦ಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಪುತ್ತೂರಿನ ಪುಟ್ಟಕ್ಕಗೋಪಾಲಣ್ಣಮಾಷ್ಟ್ರುಮಾವ°ಪೆರ್ಲದಣ್ಣವಿಜಯತ್ತೆಒಪ್ಪಕ್ಕಪೆಂಗಣ್ಣ°ಚೂರಿಬೈಲು ದೀಪಕ್ಕಅಕ್ಷರದಣ್ಣಹಳೆಮನೆ ಅಣ್ಣಚುಬ್ಬಣ್ಣಚೆನ್ನೈ ಬಾವ°ಜಯಗೌರಿ ಅಕ್ಕ°ಡೈಮಂಡು ಭಾವಅಜ್ಜಕಾನ ಭಾವಬಂಡಾಡಿ ಅಜ್ಜಿಡಾಮಹೇಶಣ್ಣಪುಟ್ಟಬಾವ°ನೀರ್ಕಜೆ ಮಹೇಶಜಯಶ್ರೀ ನೀರಮೂಲೆಕಳಾಯಿ ಗೀತತ್ತೆಶರ್ಮಪ್ಪಚ್ಚಿದೊಡ್ಡಭಾವಬೊಳುಂಬು ಮಾವ°ಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ