ಅಂಗವಿಕಲರಿಂಗೆ ಸಹಾಯ ಹಸ್ತವ ಸದಾ ನೀಡುವ ಕೊಡಕ್ಕಲ್ ಶಿವಪ್ರಸಾದ

ಸಾದಿಸೆಕ್ಕು ಹೇಳ್ತ ಛಲ ಇದ್ದರೆ ಅಂಗ ವಿಕಲತೆ ಶಾಪ ಅಲ್ಲ ಹೇಳಿ ಜಗತ್ತಿಂಗೆ  ತೋರಿಸಿ ಕೊಟ್ಟವು ಶಿವಮೊಗ್ಗಲ್ಲಿ ಸಮಾಜ ಸೇವಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಇಪ್ಪ ಕೊಡಕ್ಕಲ್ ಶಿವಪ್ರಸಾದ.
ತಾವು ಮಾತ್ರ ಅಂಗ ವೈಕಲ್ಯವ ಮೆಟ್ಟಿ ಎದ್ದು ನಿಂದದಲ್ಲದ್ದೆ ಹಲವಾರು ವಿಕಲ ಚೇತರಿಂಗೆ ಧೈರ್ಯ ಹೇಳುವ ಮತ್ತೆ ದಾರಿ ತೋರುಸುವ ಕೆಲಸ ನಿರಂತರವಾಗಿ ಮಾಡ್ತಾ ಇದ್ದವು.

ಈ ನಿಟ್ಟಿಲ್ಲಿ ಅವು ಅನೇಕ ಸರಕಾರೇತರ ಸಂಘ ಸಂಸ್ಥೆಗಳೊಟ್ಟಿಂಗೆ ತನ್ನ ಗುರುತಿಸಿಗೊಂಡು, ಅಗತ್ಯ ಇಪ್ಪವಕ್ಕೆ ಸಹಾಯ ಹಸ್ತ ಜೋಡುಸುತ್ತ ಇದ್ದವು.

ಶ್ರೀ ಕೊಡಕ್ಕಲ್ ಶಿವಪ್ರಸಾದ್

ಅಂಗ ವಿಕಲರಿಂಗಾಗಿ ಇಪ್ಪ ಕಾನೂನು ನೆರವು ಕೇಂದ್ರದ, ದಕ್ಷಿಣ ವಿಭಾಗದ ಸಂಪರ್ಕ ಅಧಿಕಾರಿಯಾಗಿ ನೇಮಕಗೊಂಡಿದವು.
ಸಮಾಜ ಸೇವೆ ಇವಕ್ಕೆ ರಕ್ತಗತವಾಗಿ ಬಂದ ಅನುಗ್ರಹ ಹಾಂಗೂ ಗುರುಹಿರಿಯರ ಆಶೀರ್ವಾದ.
[ಶ್ರೀ ಶ್ರೀ ಶ್ರೀಧರ ಸ್ವಾಮೀಜಿ ಮತ್ತೆ ಶ್ರೀ ಪೀಠದ ಪರಮ ಗುರು ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಯವು ಇವರಲ್ಲಿ ಭಿಕ್ಷಾ ಸೇವೆ ಸ್ವೀಕರಿಸಿತ್ತಿದ್ದವು].
ಇವರ ಅಪ್ಪ, ಕೊಡಕ್ಕಲ್ ವೆಂಕಟ್ರಮಣ ಭಟ್ ಮುಡಿಪ್ಪಿಲ್ಲಿ ಸುರು ಮಾಡಿದ ಭಾರತಿ ಹೈಯರ್ ಪ್ರೈಮರಿ ಶಾಲೆ ಈಗಲೂ ಮಕ್ಕೊಗೆ ವಿದ್ಯಾದಾನ ಮಾಡ್ತಾ ಇದ್ದು.
(ಸಮಾಜಕ್ಕೆ ಇವರ ಕೊಡುಗೆ ಇನ್ನೂ ಹಲವಾರು ಇದ್ದು. ಈ ಸಂಕೋಲೆ ನೋಡಿ: http://www.kodakkalshivaprasad.wetpaint.com)

ಮಂಗಳೂರು ಜಿಲ್ಲೆಯ ಮುಡಿಪ್ಪಿನ  ಕೊಡಕ್ಕಲ್ ಶಿವ ಪ್ರಸಾದ, ಇವು ಶಿವಮೊಗ್ಗ ಕೆನರಾ ಬೇಂಕಿಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾ ಇಪ್ಪದರ ಒಟ್ಟಿಂಗೆ, ಶಿವಮೊಗ್ಗ ಜಿಲ್ಲೆ ಅಂಗ ವಿಕಲ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೂಡಾ ಸೇವೆ ಸಲ್ಲಿಸುತ್ತಾ ಇದ್ದವು.
ತನ್ನ 6 ನೇ ವರ್ಷಂದಲೇ ಶ್ರವಣ ದೋಷ ಹೊಂದಿದ ಇವು, ಪೋಲಿಯೋಂದಾಗಿ ಎರಡು ಕಾಲಿಲ್ಲಿ ಸ್ವಾಧೀನ ಇಲ್ಲದ್ದ ನಾಗರತ್ನ ಎಂಬವರ ಮದುವೆ ಆದ ಇವಕ್ಕೆ ನಾಗ ಪ್ರಸಾದ ಮತ್ತೆ ಕಾವೇರಿ ಹೇಳುವ ಎರಡು ಮಕ್ಕೊ ಇದ್ದವು.
ತಾನು ವಿಕಲ ಚೇತನರಾಗಿದ್ದುಗೊಂಡು ಹಾಂಗಿಪ್ಪವರ ಏಳಿಗೆಗಾಗಿ ಅವಿರತ ಶ್ರಮ ಪಡ್ತಾ ಇಪ್ಪ ಇವು ಮಂಗಳೂರಿಲ್ಲಿ ವಿಕಲ ಚೇತರಿಂಗಾಗಿ ವಿಚಾರ ಸಂಕಿರಣ ಏರ್ಪಾಡು ಮಾಡಿತ್ತಿದ್ದವು.
ಹಲವಾರು ಸಂಘ ಸಂಸ್ಥೆಗಳಲ್ಲಿ ವಿಕಲ ಚೇತನಂಗಳ ಸಮಸ್ಯೆಗಳ ಕೇಳಿ ತಿಳ್ಕೊಂಡು ಅವಕ್ಕೆ ಬೇಕಾದ ಸಲಹೆ ಸಹಾಯವ ಕೊಡುವದು ಇವರ ವ್ಯೆಕ್ತಿತ್ವಕ್ಕೆ ಹಿಡುದ ಕನ್ನಾಟಿ. ಹೀಂಗಿಪ್ಪವರ ಏಳಿಗೆಗಾಗಿ ಕೆಂದ್ರ ಸರಕಾರಲ್ಲಿ ಕೂಡಾ ತನ್ನ ಕಾರ್ಯಂಗಳ ವಿಸ್ತರಿಸಿದ್ದವು.

ಅಂಗ ವಿಕಲರ ಕಲ್ಯಾಣಕ್ಕಾಗಿ ಇವು ಬರೆದ ನೂರಾರು ಲೇಖನಂಗೊ ಕರ್ಣಾಟಕದ ಎಲ್ಲಾ ಪತ್ರಿಕೆಗಳಲ್ಲಿಯೂ ಅಲ್ಲದ್ದೆ ರಾಷ್ಟ್ರೀಯ ಮತ್ತೆ ಅಂತರ್ರಾಷ್ಟ್ರೀಯ ನಿಯತ ಕಾಲಿಕಂಗಳಲ್ಲಿಯೂ  ಪ್ರಕಟವಾಯಿದು.
ಅಂಗ ವಿಕಲರಿಂಗಾಗಿ ಪ್ರಕಟ ಅಪ್ಪ ಒಳ್ಳೆ ಪತ್ರಿಕಾವರದಿಗಾಗಿ Shimoga District Press Guild  ಇವರ ಹೆಸರಿಲ್ಲಿ ಪ್ರಶಸ್ತಿ ಕೂಡಾ ವೆವಸ್ಥೆ ಮಾಡಿದ್ದು ಹೇಳಲೆ ತುಂಬಾ ಸಂತೋಷ ಆವುತ್ತು.
ನವದೆಹಲಿಲಿ ಇಪ್ಪ ಪೆಂಗ್ವಿನ್ ಪಬ್ಲಿಕೇಷನ್ ಸಂಸ್ಥೆ ಇವಕ್ಕೆ ಚಿನ್ನದ ಪದಕ ಮತ್ತೆ ಬೆಳ್ಳಿ ಫಲಕ ಕೊಟ್ಟು  ರೈಸಿಂಗ್ ಪರ್ಸನಾಲಿಟಿ ಆಫ್ ಇಂಡಿಯಾ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದ್ದು.
ದೆಹಲಿಲಿ ಇಪ್ಪ ಮಕ್ಕಳ ಕಲ್ಯಾಣ ಸಂಸ್ಥೆ ಹಲವು ದಶಕಂದ ಅಂಗ ವಿಕಲರ ಸೇವೆಲಿ ತೊಡಗಿಸಿಗೊಂಡು ಇದ್ದು. ಕೊಡಕ್ಕಲ್ ಇದರಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾ ಇದ್ದವು www.disabilityindia.org/legalaid.cfm#1 ಈ ವೆಬ್ ಸೈಟಿಲ್ಲಿ ಇವರ ಸಂಪರ್ಕ ಮಾಡ್ಲೆ ಅಕ್ಕು

ಕೊಡಕ್ಕಲ್ ಶಿವಪ್ರಸಾದ್, ಅರ್ಧಾಂಗಿ ನಾಗರತ್ನ, ಮಗಳು ಕಾವೇರಿ, ಮಗ ನಾಗಪ್ರಸಾದ!

ಇವರ ಸಾಧನೆಯ ಗುರುತಿಸಿ ಗೌರವಿಸಿದವು:
ಇಂಗ್ಲೇಂಡಿಂದ ಪ್ರಕಟ ಅಪ್ಪ ಅಂತರಾಷ್ಟ್ರೀಯ ಬಯಾಗ್ರಾಫಿ (International Biographical centre, England) ಪುಸ್ತಕಲ್ಲಿ ಇವರ ಸಾಧನೆ ಸನ್ಮಾನಂಗಳ ಬಗ್ಗೆ ಲೇಖನ ಪ್ರಕಟ ಆಯಿದು.
ಅಮೇರಿಕನ್ ಬಯಾಗ್ರಾಫಿಕಲ್ ಇನ್ ಸ್ಟಿಟ್ಯೂಟ್, ಇವರ “order of merit ಹೇಳಿ ಗೌರವಿಸಿದ್ದವು

ASIAN ADMIRABLE ACHIEVERS [Vol.II], ಇದರಲ್ಲಿ ಇವರ ಪರಿಚಯ ಲೇಖನ ಕೊಟ್ಟಿದವು, ಮಾತ್ರ ಅಲ್ಲದ್ದೆ ಕೆಳ ಕೊಟ್ಟ ಪತ್ರಿಕೆಗಳಲ್ಲಿ ಇವರ ಪರಿಚಯಾತ್ಮಕ ಲೇಖನಂಗೊ ಪ್ರಕಟವಾಯಿದು.

 1. International Biographical Note : Published by International Biographical Centre, England
 2. Asian-American Who’s Who Note: Published by Refacimento International, New Delhi
 3. American Biographical Note : Published by American Biographical Centre,
 4. USAReference Asia Biographical Note: Published by Refacimento International, New Delhi
 5. Reference Asia Note : Published by Refacimento International, New Delhi
 6. Asia-Pacific Who’s Who: Published by Refacimento International, New Delhi
 7. Indo-Asian Who’s Who Note: Published by Refacimento International, New Delhi
 8. Afro-Asian Who’s Who Note : Published by Refacimento International, New Delhi


Ministry of Social Justice & Empowerment, Govt.of India, New Delhi ಇದರಲ್ಲಿ ಅಂಗ ವಿಕಲರ ಕಾಯಿದೆಯ ಪುನರ್ವಿಮರ್ಷೆ ಕಮಿಟಿಯ ಸದಸ್ಯರನ್ನಾಗಿ ಮಾಡಿದ್ದವು.
ಸಂಕೋಲೆ ಇಲ್ಲಿ ಇದ್ದು. [http://socialjustice.nic.in/disabled/welcome.htm]

United Nations Development Programme department,USA, ಇವು ಕೊಡಕ್ಕಲ್ ಇವರ e-discussion ಟೀಮಿಂಗೆ ಸದಸ್ಯರಾಗಿ ಮಾಡಿದ್ದವು.
ಸಂಕೋಲೆ ಇಲ್ಲಿ ಇದ್ದು. [http://www.un.org/ecosoc/newfunct/amredis.shtml]

ಮುಂಬಯಿಲಿ 5 ಮತ್ತೆ 6 ದಶಂಬರ 2009 ರಂದು ಆಯೋಜಿಸಿದ Ist international Deaf Conference ಲ್ಲಿ ಇವರ ಪ್ರಧಾನ ಭಾಷಣಕಾರರನ್ನಾಗಿ ನೇಮಿಸಿತ್ತಿದ್ದವು.

ಅಂಗವಿಕಲರ ಸಮಸ್ಯೆ, ಪರಿಹಾರ ಇತ್ಯಾದಿ ವಿವರಂಗಳ ಬಗ್ಗೆ ಪರಸ್ಪರ ತಿಳುವಳೆಕೆಗಾಗಿ ಇತ್ತೀಚೆಗೆ ಹೊಸ ವೆಬ್ ಸೈಟ್ http://www.kodakkal.ning.com ತಯಾರು ಮಾಡಿದ್ದವು.

ಗುರುವಾಯೂರು, ತಿರುಪತಿ ಮತ್ತೆ ಕರ್ನಾಟಕದ ಸುತ್ತ ಮುತ್ತಲಿನ ಒಟ್ಟು 29 ದೇವಸ್ಥಾನಂಗಳಲ್ಲಿ ಇವು ಶಾಶ್ವತ ನಿತ್ಯ ಪೂಜೆಗೆ ಏರ್ಪಾಡು ಮಾಡಿದ್ದವು ಹೇಳುವದು ಇವರ ದೈವ ಭಕ್ತಿಗೆ ಸಾಕ್ಷಿ.
ಇದಲ್ಲದ್ದೆ 19 ಸಂಘ ಸಂಸ್ಥೆಗೆ ಜೀವಾವಧಿ ಸದಸ್ಯತ್ವ ತೆಕ್ಕೊಂಡದು ಇವರ ಸಾಮಾಜಿಕ ಕಳಕಳಿಯ ಎತ್ತಿ ತೋರುಸುತ್ತು. (ವಿವರಕ್ಕೆಈ ಸಂಕೋಲೆಲಿ ನೋಡಿ:
http://kodakkalshivaprasad.wetpaint.com/page/Life+Membership+With+Associations%2FMissions

ಇವರ ಎಲ್ಲಾ ಚಟುವಟಿಗೆ ಬಗ್ಗೆ ತಿಳಿವಲೆ ವೆಬ್ ಸೈಟ್:

www.disabilityindia.org/legalaid.cfm#1

http://www.kodakkalshivaprasad.blogspot.com

http://www.kodakkalshivaprasad.wetpaint.com .

http://www.kodakkal.ning.com

ಮೊಬೈಲಿಲ್ಲಿ SMS ಮೂಲಕ ಸಂಪರ್ಕಿಸಲೆ:
9482533747

ಇವಕ್ಕೂ ಇವರ ಕುಟುಂಬದವಕ್ಕೂ ದೇವರು ಅಯುರಾರೋಗ್ಯ ನೀಡಿ ಇವರಿಂದ ಇನ್ನೂ ಹೆಚ್ಚಿನ ಸೇವೆ ಸಮಾಜಕ್ಕೆ ಸಿಕ್ಕಲಿ ಹೇಳುವದೇ ನಮ್ಮ ಆಶಯ.

ಶರ್ಮಪ್ಪಚ್ಚಿ

   

You may also like...

10 Responses

 1. Dear SriKrishna Sharma,

  Thanks for introducing me to HAVYAKA community in your blog, hope that your act in noble by introducing me really get inspired/motivated to one and all in near future. Please do keep it up.

  However hope to be may be get more to moe encouragements from your end such a philonthropic ways like introductory articles and many more.

  with kind regards,
  yours sincerely,
  KODAKKAL SHIVAPRASAD
  http://www.kodakkalraja.community.officelive.com

 2. ರಘುಮುಳಿಯ says:

  ಕೊಡಕ್ಕಲ್ ಶಿವಪ್ರಸಾದ್ – ಈ ಹೆಸರು ಆಗಾಗ ಕೇಳಿತ್ತಿದ್ದೆ.ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದ ಅಪ್ಪಚ್ಚಿ.
  ಇಂಥ ಅದ್ಭುತ ಶಗುತಿ ನಮ್ಮ ಸಮಾಜಲ್ಲಿ ಇದ್ದವು ಹೇಳಿ ಹೆಮ್ಮೆ ಆವುತ್ತು.ಶಿವಪ್ರಸಾದ ಅಣ್ಣ ಇಲ್ಲಿ೦ದಲೇ ಕೈ ಮುಗುದೆ,ನಿ೦ಗಳ ಸೇವಾ ಶಕ್ತಿ ಇನ್ನೂ ಹೆಚ್ಚಲಿ ಹೇಳಿ ಹಾರೈಸುತ್ತಾ.

 3. Krishnamohan Bhat says:

  olleyavara parichaya maadi koduvadu kuuda ondu olle kelasa.ee lekhana baraddadakke ondu thanks.ennu Shiva prasadaringe namo namaha.oppangalottinge.

 4. ಗೋಪಾಲ ಮಾವ says:

  ಶ್ರೀ ಕೊಡಕ್ಕಲ್ ಶಿವಪ್ರಸಾದ್ ನಿಜವಾಗಿಯೂ ಗ್ರೇಟ್. ಅವರ ಪರಿಚಯ ಲೇಖನ ಬಂದು ಅವರ ಬಗ್ಗೆ ಇನ್ನಷ್ಟು ತಿಳಿತ್ತ ಹಾಂಗಾತು. ಶಿವಪ್ರಸಾದ್ ಅವಕ್ಕೆ ಅಭಿನಂದನೆಗೊ.

 5. Gopalakrishna BHAT S.K. says:

  I have read of him long ago.I am happy to read about him in this bl

  og.Best wishes to Shri.Shivaprasad. Thanks to Sharmanna for a good article.

 6. ಶ್ರೀದೇವಿ ವಿಶ್ವನಾಥ್ says:

  ಸಾಧನೆಗೆ ಅಡ್ಡಿ ಯಾವುದೂ ಇಲ್ಲೆ ಹೇಳಿ ತೋರ್ಸಿ ಕೊಟ್ಟವು ಶಿವಪ್ರಸಾದಣ್ಣ. ತನ್ನ ವೈಕಲ್ಯವ ಮೆಟ್ಟಿ ನಿಂದು ಇನ್ನೊಬ್ಬಂಗೆ ಮಾದರಿ ಆದ್ದದು ಮಾತ್ರ ಅಲ್ಲ ಬೇರೆ ಬೇರೆ ವೈಕಲ್ಯ ಇಪ್ಪ ಜನಂಗಳ, ವಿಕಲಚೇತನರಿಂಗೆ ಸಹಾಯ ಒದಗಿಸಿ ಅವುದೆ ತಮ್ಮ ತಮ್ಮ ಕಾಲ ಮೇಲೆ ನಿಂಬಲೆ ಸಹಾಯ ಮಾಡ್ತವು. ಇನ್ನುದೇ ಇಂಥಾ ಸಾಧನೆಗಳ ಮಾಡಿ ತುಂಬಾ ಜೆನಂಗೊಕ್ಕೆ ದಾರಿದೀಪ ಅಪ್ಪಲೆ ನಿಂಗೊಗೆ ಶ್ರೀ ಗುರು ದೇವರುಗಳ ಅನುಗ್ರಹ ಇದ್ದು, ಆಯುರಾರೋಗ್ಯ ಕೊಡಲಿ…
  ಶರ್ಮಪ್ಪಚ್ಚಿ.., ನಮ್ಮ ಬೈಲಿಂಗೆ ಇವರ ಪರಿಚಯ ಮಾಡಿ ಕೊಟ್ಟದಕ್ಕೆ ನಿಂಗೊಗೆ ಧನ್ಯವಾದಂಗ…

 7. ಶರ್ಮಪ್ಪಚ್ಚಿ says:

  ಈ ಲೇಖನಕ್ಕೆ ಒಪ್ಪ ಕೊಟ್ಟ ಎಲ್ಲರಿಂಗೂ ಎನ್ನ ಧನ್ಯವಾದಂಗೊ. ಅವರ ಕಾರ್ಯಂಗೊಕ್ಕೆ ನಮ್ಮೆಲ್ಲರ ಸಹಕಾರ ಕೊಡುವೊ.

  ಕೊಡಕ್ಕಲ್ ಶಿವ ಪ್ರಸಾದ ಮತ್ತೆ ಎನ್ನ ಭೇಟಿ ಮೊದಲು ಆದ್ದು ಓರ್ಕುಟ್ ಮೂಲಕ ಸುಮಾರು ಒಂದು ವರ್ಷ ಮೊದಲು. ಮತ್ತೆ ಎಂಗೊ ಜೀ ಮೈಲ್ ಮೂಲಕ ಚಾಟ್ ಮಾಡಿಗೊಂಡು ಇತ್ತಿದ್ದೆಯೊ. ಎನಗೆ ಅಂಬಗ ಕಂಡ ಅವರ ವಿಶೇಷ ಗುಣ ಹೇಳಿರೆ, ವಿಕಲ ಚೇತನರಿಂಗಾಗಿ ಅವರ ಸಾಮಾಜಿಕ ಕಳಕಳಿ. ಪ್ರತಿ ದಿನ ಮಾತಾಡುವಾಗಲೂ ಬೇರೆ ಎಷ್ಟೋ ವಿಶಯ ಇದ್ದರೂ ವಿಕಲ ಚೇತನಂಗಳ ಬಗ್ಗೆ ಯಾವುದಾರೂ ಒಂದು ವಿಶಯ ಇದ್ದೇ ಇರ್ತಿತ್ತು. ಅಷ್ಟು ಕೂಡಾ ಅವು ಅದರಲ್ಲಿ involve ಆದ್ದರ ನೋಡಿ ಅವರ ಬಗ್ಗೆ ಹೆಚ್ಚು ತಿಳ್ಕೊಳೆಕ್ಕು ಹೇಳ್ತ ಅಭಿಪ್ರಾಯ ಬಂತು. ಅವರ ಸಮಾಜ ಸೇವೆ ಬಗ್ಗೆ ಎಷ್ಟು ಹೇಳಿರೂ ಕಮ್ಮಿಯೇ. ವಿಕಲ ಚೇತನದವಕ್ಕೆ ಬೇಕಾಗಿ ತನ್ನ ಎಲ್ಲಾ ಸಮಯವನ್ನೂ ಮುಡಿಪಾಗಿ ಮಡುಗಿದ ಮುಡಿಪ್ಪಿನವು. ಅವಕ್ಕೆ ಬೇಕಾಗಿ ವಿಚಾರ ಸಂಕಿರಣ, ಉದ್ಯೋಗ ಮೇಳ, ಸರ್ಕಾರಂದ ಸಿಕ್ಕುವ ಸವಲತ್ತುಗಳ ತೆಗೆಸಿ ಕೊಡುವದು, ಇನ್ನೂ ಎಂತೆಲ್ಲ ಮಾಡ್ಲೆ ಎಡಿಗು ಅದೆಲ್ಲಾ ಮಾಡುವದು ಹೇಳಿರೆ ಅವಕ್ಕೆ ಕೊಶಿಯೇ.
  ಇತ್ತೀಚೆಗೆ ಅವರ ಆಮಂತ್ರಣಂದಾಗಿ ಅವರ ಮನೆಗೆ ಒಂದು ಜೆಂಬಾರಕ್ಕೆ ಹೋಗಿತ್ತಿದ್ದೆ. ಎನ್ನ ನೋಡಿದ ಕೂಡ್ಲೆ ಬಂದು ಆಸರಿಂಗೆ ವಿಚಾರಿಸಿದ್ದಲ್ಲದ್ದೆ, ಎಲ್ಲರಿಂಗೂ ಪರಿಚಯ ಮಾಡಿ ಕೊಟ್ಟವು. ಮನೆ ಎಲ್ಲಾ ತೋರಿಸಿದವು. ಬಹುಶಃ 100 ವರ್ಷಂದಲೂ ಹಳೇ ಮನೆ, ದೊಡ್ಡ ದೊಡ್ಡ ಕಂಬಂಗೊ, ಅದರಲ್ಲಿ ಕೆತ್ತನೆ ಕೆಲಸಂಗೊ, ದೇವರ ಕೋಣೆಲಿ ಇಪ್ಪ ವಿಶೇಷ ಗಂಧದ ಮರದ ಮಂಟಪ, ಮೇಗೆ ಮಾಳಿಗೆಯ ಜಗಲಿಲಿ ಕೂದರೆ ಇಡೀ ತೋಟ ಕಾಂಬದು, ಶ್ರೀ ಶ್ರೀಧರ ಸ್ವಾಮಿಗೊ ಬಂದಿಪ್ಪಗ ತೆಗದ ಪಟ ಎಲ್ಲವನ್ನೂ ವಿವರವಾಗಿ ಹೇಳಿ ತೋರಿಸಿದವು. ಪ್ರತಿ ಸರ್ತಿಯೂ ಬಾಗಿಲು ದಾಂಟುವಾಗ, ಬಾಗಿಲು ಕುಂಟು, ತಲೆ ಜಾಗ್ರತೆ ಮಾಡಿ ಹೇಳಿ ವಿಶೇಷ ಆಸ್ಥೆ ವಹಿಸಿದವು. ಎಷ್ಟೋ ವರ್ಷದ ನಂತ್ರ ಕಾಂಬಲೆ ಸಿಕ್ಕಿದ ಚಡ್ಡಿ ದೋಸ್ತಿ ಹಾಂಗೆ ಉಪಚಾರ ಮಾಡಿದವು. ಅಕೇರಿಗೆ ಹೆರಡ್ಲೆ ಅಪ್ಪಗ, ಚಾ ಕುಡುದ್ದೆ ಹೇಳಿರೂ, ತಾನೇ ಕೈಯ್ಯಾರೆ ಚಾ ತಂದು ಕೊಟ್ಟಪ್ಪಗಳೇ ಅವಕ್ಕೆ ತೃಪ್ತಿ ಆದ್ದು. ಅಂತಹ ಒಂದು ಆತ್ಮೀಯತೆಯ ಉಪಚಾರ. ಆ ದಿನ ಎನಗೆ ಮರವಲೆ ಎಡಿಯದ್ದ ಒಂದು ದಿನ.

 8. Indira K Bhat says:

  Very good article by Sharmanna

 9. ಕೆದೂರುಡಾಕ್ಟ್ರು says:

  ಉತ್ತಮ ಲೇಖನ ಶರ್ಮಪ್ಪಚ್ಚಿ…

 10. ಕೊಡಕ್ಕಲ್ಲು ಶಿವಪ್ರಸಾದರು ” ಸಿ.ವಿ.ರಾಮನ್ ಪ್ರಶಸ್ತಿ” ಗೆ ಆಯ್ಕೆ ಆಯಿದವು ಹೇಳ್ತ ಶುದ್ದಿ ಇ೦ದ್ರಾಣ ದಿನಪತ್ರಿಕೆಲಿ ವರದಿ ಆಯಿದು.
  ಅಭಿನ೦ದನೆಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *