Oppanna.com

ಕೂಳಕ್ಕೊಡ್ಳು ಮಹೇಶಣ್ಣಂಗೆ ಡಾಕ್ಟರೇಟ್

ಬರದೋರು :   ಶುದ್ದಿಕ್ಕಾರ°    on   31/07/2010    51 ಒಪ್ಪಂಗೊ

ನಮ್ಮ ಬೈಲಿನ ಹೆಮ್ಮೆಯ ಮಾಣಿ ಕೇಮಹೇಶಣ್ಣ ಕಳುದವಾರಂದ ಡಾಕುಟ್ರುಮಹೇಶಣ್ಣ ಆದವು.
(ಮದ್ದು ಕೊಡ್ತ ಡಾಗುಟ್ರು ಅಲ್ಲ, ಓದಿ ಅಪ್ಪ ಡಾಕುಟ್ರು! )
ನಾವೆಲ್ಲರೂ ಹೆಮ್ಮೆ ಪಡುವಂತಹ, ನಮ್ಮ ಹಿಂದಾಣೋರ ಬಗ್ಗೆ ಮಾಡಿದ ಅಧ್ಯಯನ. ಬೊಂಬಾಯಿಯ ಐಐಟಿ ಅದರ ಗುರುತಿಸಿ ಗೌರವಿಸಿದ್ದು.
ಬೈಲಿಲಿ ಅವರ ಗುರುತಿಸೇಕಾದ್ದು ನಮ್ಮ ಹೆಮ್ಮೆಯ ಕರ್ತವ್ಯ.
ಬನ್ನಿ, ಅವು ಮಾಡಿದ ದೊಡ್ಡ ಕೆಲಸದ ಬಗ್ಗೆ ಸಣ್ಣ ವಿಶಯ ಅವರ ಮಾತುಗಳಲ್ಲೇ ತಿಳ್ಕೊಂಬ:

ಶೀರ್ಷಕ:
A Critical Study of Siddhanta-darpana of Nilakantha Somayaji
(‘ನೀಲಕಂಠ-ಸೋಮಯಾಜಿ-ಕೃತಸ್ಯ ಸಿದ್ಧಾಂತದರ್ಪಣಸ್ಯ ವಿಮರ್ಶಾತ್ಮಕಮಧ್ಯಯನಮ್ ’)

ಡಾ. ಕೂಳಕ್ಕೂಡ್ಳು ಮಹೇಶ್ (K-M)

ಈ ಗ್ರಂಥ ಭಾರತೀಯ ಖಗೋಳ ಶಾಸ್ತ್ರದ (Indian astronomy) ಕೆಲವು ನಿಯಮಂಗಳ ಬಗ್ಗೆ ಮಾತಾಡ್ತು.
ನೀಲಕಂಠ (೧೫ ನೆ ಶತಾಬ್ದಿ) ನಮ್ಮ ದೇಶದ ಒಬ್ಬ ಅತ್ಯಂತ ಮೇಧಾವೀ ಗಣಿತ-ಖಗೋಳಜ್ಞ. (ನವಗೆ ಗೊಂತಾದ್ದದು ಈಗ!!)  ನೀಲಕಂಠನ ಭಾಷೆ, ವ್ಯಾಖ್ಯಾನ, ವಿಷಯವ ಹೇಳುವ ಶೈಲಿ ಎಲ್ಲವೂ ಅದ್ಭುತ.
ಒಬ್ಬ ವಿಜ್ಞಾನಿಗೆ ಇರೆಕಾದ ದೃಷ್ಟಿ, ಒಬ್ಬ ಮಾಷ್ಟ್ರಾಗಿ ಮಕ್ಕೊಗೆ ಹೇಳುವ ಹಿತವಚನ ಹೀಂಗಿಪ್ಪದೆಲ್ಲ ಇದರಲ್ಲಿ ಸಿಕ್ಕುತ್ತು.
ಇದರಲ್ಲಿಪ್ಪ  ಗ್ರಹ-ಭ್ರಮಣ ರೂಪರೇಖೆ  (planetary model) ತುಂಬಾ ಮಹತ್ತ್ವದ್ದು.
ಅಯನಾಂಶದ ಚಲನೆಯ ಕಣ್ಣಿಂಗೆ ಕಟ್ಟುವ ಹಾಂಗೆ ವಿವರಣೆ, ಭುಜಾ-ಕೋಟಿ-ಕರ್ಣ-ನ್ಯಾಯಕ್ಕಿಪ್ಪ ಉಪಪತ್ತಿ (ಪ್ರೂಫ್) . . .
Planetary Model ನ ಬಗ್ಗೆ ಭಾರತೀಯರಿಂಗೆ ಇದ್ದ ಕಲ್ಪನೆ ಎಂತದು ಹೇಳಿ ಬೇರೆ ಯಾವ ಗ್ರಂಥಲ್ಲಿಯು ಸಿಕ್ಕದ್ದ ಮಾಹಿತಿ ಇದರಲ್ಲಿದ್ದು.
ಬರೇ ಭೂಮಿಯ ಸುತ್ತ ಎಲ್ಲಾ ಸುತ್ತುತ್ತು ಹೇಳಿ ನಂಬ್ಯೊಂಡು ಕೂದವಲ್ಲ  ನಮ್ಮ ಪೂರ್ವಜರು!!

ಮಾಡಿದ ಕೆಲಸ ಎಂತರ?
ಸಂಪೂರ್ಣ ಗ್ರಂಥದ ಭಾಷಾಂತರ ಇಂಗ್ಲಿಶಿಲ್ಲಿ, ಬೇಕಾದಲ್ಲಿ ವಿವರಣೆಗೆ ಚಿತ್ರಂಗೋ, ಆಧುನಿಕ ಗಣಿತದ ಭಾಷೆಲ್ಲಿ ವಿವರಣೆ, ವಿಷಯದ ಮಹತ್ತ್ವ ಪ್ರತಿಪಾದನೆ,. . . . . . . .

ಆಶ್ರಯ:

  • Cell for Indian Science and Technology in Sanskrit
    (‘ಸಂಸ್ಕೃತಸ್ಥ-ವಿಜ್ಞಾನ-ತಂತ್ರಜ್ಞಾನ-ನಿರೂಪಣ-ಕಕ್ಷಃ’)
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಮುಂಬಯಿ
    (ಭಾರತೀಯ ಪ್ರೌದ್ಯೋಗಿಕೀ ಸಂಸ್ಥಾನಂ )
ಎನ್ನ ಗುರುಗೋ:
ಶ್ರೀ  ರಾಮಸುಬ್ರಹ್ಮಣ್ಯಂ

ಸಂಸ್ಕೃತಲ್ಲಿಪ್ಪ ವಿಜ್ಞಾನವಿಷಯವ ಆಧರಿಸಿ IIT ಲ್ಲಿ ಆದ ಒಂದು ಮೊದಲ PhD ಇದು ಹೇಳಿ ಹೇಳಲಕ್ಕು.

– ಕೇಮಹೇಶಣ್ಣ

ಈ ಕೊಶಿಯ ಶುದ್ದಿ ಗೊಂತಾದ ಕೂಡ್ಳೇ ದೊಡ್ಡಭಾವ, ಶರ್ಮಪ್ಪಚ್ಚಿ ಎಲ್ಲೊರುದೇ ಮಿಂಚಂಚೆ ಬರದು ತಿಳುಸಿದವು.
ಅದಕ್ಕೆ ಅವು ಸಂತೋಶಲ್ಲಿ ಹೀಂಗೆ ಹೇಳಿದವು:

ನಮಸ್ಕಾರ,
ಎನ್ನ ಶೋಧ ಕಾರ್ಯದ ಬಗ್ಗೆ ದೊಡ್ಡ ಭಾವನ ಬ್ಲೋಗಿಲ್ಲಿ ವಿವರಣೆ ಇದ್ದು.

ಗುರು ಹಿರಿಯರ, ನಮ್ಮವರ ಎಲ್ಲೋರ ಆಶೀರ್ವಾದ, ಪ್ರೀತಿ, ವಿಶ್ವಾಸ, ಅಭಿಮಾನ….. ಇಪ್ಪದರಿಂದಲೇ ಅದ ಎನಗೆ ಇದೆಲ್ಲ ಸಾಧ್ಯ ಆದ್ದದು!
ಹವ್ಯಕ ಸಮಾಜಂದ, ಕೃಷಿ ಪರಿವಾರಂದ ಸಿಕ್ಕಿದ, ಎನಗೆ ಅರಡಿಯದ್ದೆ ಬಂದಂತಹ ಕೆಲವು ಸಾಮರ್ಥ್ಯಂಗ, ಒಳ್ಳೆ ಗುಣಂಗ ಜೀವನಲ್ಲಿ ತುಂಬಾ ದಾರಿ ತೋರುಸಿದ್ದು ಹೇಳಿ ಭಾವಪೂರ್ಣವಾಗಿ ಆನು ಮನಸ್ಸಿಲ್ಲೇ ಹೇಳಿಕೊಳ್ಳುತ್ತೆ ಅಂಬಗಂಬಗ.
ಹಿರಿಯರು ಕೊಟ್ಟ  ಕೆಲವೊಂದು ಸಂಸ್ಕಾರ ಇಪ್ಪ ಕಾರಣ ಹೋದಲ್ಲೆಲ್ಲ ಉತ್ತಮ ಜನರ ಆಶಿಸ್ಸು ಸಿಕ್ಕಲೆ ಅನುಕೂಲ ಆದ್ದದು ತುಂಬಾ ಅನುಭವಕ್ಕೆ ಬಯಿಂದು.

ಭಾರತದ ಜ್ಞಾನ-ಸಂಸ್ಕೃತಿಯ  ಪರಂಪರೆ ಇಷ್ಟು ಸಮೃದ್ಧವಾಗಿ ಇಪ್ಪದರಿಂದಲೇ ನಾವು ಎಂತ ಮಾಡದ್ರೂ ರಜ ವಿವೇಚನೆ-ಬುದ್ಧಿಶಕ್ತಿ ಬಂದು ದಾರಿತೋರುಸುವದು,
ಅಪ್ಪಲ್ಲದ?

– ಡಾ | ಮಹೇಶ ಕೂಳಕ್ಕೂಡ್ಳು
Research Scholar,
Cell for Indian Science and Technology in Sanskrit,
Indian Institute of Technology,
Powai, Mumbai- 400076.
Ph: 9869101325.

ಆಗಲಿ, ಅವು ಇನ್ನೂ ಎತ್ತರಕ್ಕೆ ಹೋಗಲಿ. ಭಾರತಮಾತೆಗೆ, ನಮ್ಮ ಸಮಾಜಕ್ಕೆ ಇನ್ನುದೇ ತುಂಬಾ ಸೇವೆ ಮಾಡ್ಳಿ.
ದೇವರು ಅದಕ್ಕಿಪ್ಪ ಎಲ್ಲ ಸವುಕರಿಯವನ್ನುದೇ ಒದಗುಸಿ ಕೊಡಲಿ ಹೇಳುದೇ ಬೈಲಿನವರ ಆಶಯ.
ಸೂ: ಬೈಲಿಲಿ ಅವರ ಹೆಸರು ಡಾಮಹೇಶಣ್ಣ ಹೇಳಿ ಬದಲಾಯಿಸಿದ್ದು. (ಮೊದಲು ಕೇಮಹೇಶಣ್ಣ ಹೇಳಿ ಇತ್ತು!)

51 thoughts on “ಕೂಳಕ್ಕೊಡ್ಳು ಮಹೇಶಣ್ಣಂಗೆ ಡಾಕ್ಟರೇಟ್

  1. ಕೂಳಕ್ಕೂಡ್ಳು ಅಣ್ಣಂಗೆ ಅಭಿನಂದನೆಗೋ…
    “ಹವ್ಯಕ ಸಮಾಜಂದ, ಕೃಷಿ ಪರಿವಾರಂದ ಸಿಕ್ಕಿದ, ಎನಗೆ ಅರಡಿಯದ್ದೆ ಬಂದಂತಹ ಕೆಲವು ಸಾಮರ್ಥ್ಯಂಗ, ಒಳ್ಳೆ ಗುಣಂಗ ಜೀವನಲ್ಲಿ ತುಂಬಾ ದಾರಿ ತೋರುಸಿದ್ದು ಹೇಳಿ ಭಾವಪೂರ್ಣವಾಗಿ ಆನು ಮನಸ್ಸಿಲ್ಲೇ ಹೇಳಿಕೊಳ್ಳುತ್ತೆ ಅಂಬಗಂಬಗ.ಹಿರಿಯರು ಕೊಟ್ಟ ಕೆಲವೊಂದು ಸಂಸ್ಕಾರ ಇಪ್ಪ ಕಾರಣ ಹೋದಲ್ಲೆಲ್ಲ ಉತ್ತಮ ಜನರ ಆಶಿಸ್ಸು ಸಿಕ್ಕಲೆ ಅನುಕೂಲ ಆದ್ದದು ತುಂಬಾ ಅನುಭವಕ್ಕೆ ಬಯಿಂದು.”
    ಇದರ ಓದುವಗ ಹೃದಯ ತುಂಬಿ ಬತ್ತು… ಎಷ್ಟೋ ಅಬ್ಬೆ,ಅಪ್ಪಂಗೆ ಮಕ್ಕಳ ಹೀಂಗಿದ್ದ ವಾತಾವರಣಲ್ಲಿ ಬೆಳೆಷೆಕ್ಕು ಹೇಳಿ ಆಸೆ ಇದ್ದು… ಆದರೆ ಸಾಧ್ಯ ಆವುತ್ತಾ ಇಲ್ಲೇ… ಇದರ ಬಗ್ಗೆ ನಾವೆಲ್ಲ ಗಂಭೀರವಾಗಿ ಆಲೋಚನೆ ಮಾಡಿ ಕ್ರಮ ಕೈಗೊಳ್ಳಲೇಬೇಕು… ನಮ್ಮ ಮಕ್ಕೋ ಪ್ರತಿಯೊಬ್ಬನೂ ಮಹೇಶಣ್ಣನ ಹಾಂಗೆ ಸಾಧನೆ ಮಾಡುವ ಹಾಂಗೆ ಆದರೆ ಭಾರತಕ್ಕೆ ಅದೆಷ್ಟು ದೊಡ್ಡ ಆಸ್ತಿ ಅಕ್ಕು…

  2. ಮಹೇಶ೦ಗೆ ಹೃದಯಪೂರ್ವಕ ಅಭಿನ೦ದನೆಗೊ. ಎನ್ನ ಬಾಲ್ಯದ ಗೆಳೆಯ೦ಗೆ ಸಮ್ಮಾನ ಮಾಡುವದು ಎನಗೂ ಹೆಮ್ಮೆಯ ವಿಷಯವೇ ಅಲ್ಲದೊ? (ಮುಲ್ಲಪ್ಪೂ೦ಕೊಡಿಯೇಟ್ಟು ಕಿಡಕ್ಕು೦ ಕಲ್ಲಿನುಮು೦ಡೊರು ಸೌರಭ್ಯ೦ ಹೇಳಿ ಮಲಯಾಳಲ್ಲಿ ಒ೦ದು ಗಾದೆ ಮಾತು ಇದ್ದಿದಾ… :-)…)

    1. ಏ ಗಣೇಶ ಭಾವಾ,,ಹೀಂಗಿಪ್ಪ ಹಳೆ ಸಂಸ್ಕೃತಿಯ ಪುನರಾವರ್ತನೆ ಮಾಡುವ ಪ್ರಯತ್ನ ನಮ್ಮ ಬೈಲಿನವರದ್ದು..ಹಾಂಗಾಗಿ ಆ ಗಾದೆಯ ವಿವರಣೆ ರಜ್ಜ ಕೊಡುವಿರೋ?

      1. ಮುಲ್ಲಪ್ಪೂ೦ಕೊಡಿಯೇಟ್ಟುಕಿಡಕ್ಕು೦ ಕಲ್ಲಿನುಮು೦ಡೊರು ಸೌರಭ್ಯ೦ – ಹೇಳಿದರೆ ಕಲ್ಲಿನ ಮೂರ್ತಿಗೆ ದಿನಾಗಳೂ ಮಲ್ಲಿಗೆ ಹೂಗಿನ ಮಾಲೆ ಹಾಕಿ ಪೂಜೆ ಮಾಡಿ ಮಾಡಿ ಕಲ್ಲಿ೦ಗೆ ಕೂಡ ಪರಿಮಳ ಬಪ್ಪಲೆ ಸುರು ಆತಡ… ನಮ್ಮ ಸ್ವಭಾವ ರೂಪೀಕರಣಲ್ಲಿ ನಮ್ಮ ಒಡನಾಡಿಗಳ ಪ್ರಭಾವ ಕೂಡಾ ಇರ್ತಲ್ಲದಾ.. ಆದ ಕಾರಣ ನಾವು ‘ಸೆಗಣಿ ಹೊತ್ತವನ ಜೊತೆ ಸರಸವಾಡುವದಕ್ಕಿ೦ತ ಶ್ರೀಗ೦ಧ ಹೊತ್ತವನ ಜೊತೆ ಗುದ್ದಾಡುವದು ಲೇಸು’ ಅಡ… ಆನು ಇಲ್ಲಿ ಆ ಗಾದೆ ಉಪಯೋಗಿಸುಲೆ ಕಾರಣ ಈ ಮಹೇಶ ಮತ್ತು ಆನು ೧ನೇ ಕ್ಲಾಸಿ೦ದ ೧೦ನೇ ಕ್ಲಾಸಿನ ವರೇ೦ಗೆ ಒ೦ದೇ ಕ್ಲಾಸಿಲ್ಲಿ ಕಲ್ತದು.. ಕೆಲವು ವರ್ಷ ಒ೦ದೇ ಬೆ೦ಚಿಲ್ಲಿ ಕೂದ್ದದು ಕೂಡಾ.. ಮತ್ತೆ ಅವ ಉಜಿರೆ, ತಿರುಪತಿ ಅತ್ಲಾಗಿ ಹೋಗಿ ಮು೦ಬಯಿಗೆ ಎತ್ತಿ ಹೆಸರು ಮಾಡ್ತಾ ಇದ್ದ, ಆನು ತೆ೦ಕ್ಲಾಗಿ ಹೋಗಿ ಇಲ್ಲಿ ಈ ಮರುಭೂಮಿ ವರೇ೦ಗೆ ಎತ್ತಿದೆ ಇದಾ…. ಅವನ ಸಹವಾಸ೦ದಾಗಿ ಅವ೦ಗೆ ಇಪ್ಪ ಒಳ್ಳೆ ಗುಣ೦ಗಳ ಒ೦ದ೦ಶ ಎನಗೂ ಕೂಡ ಲಾಭ ಆದಿಕ್ಕಲ್ದಾ.. ಆದ ಕಾರಣ ಆ ಗಾದೆ ಉಪಯೋಗಿಸಿದ್ದದು..

        1. ವಿವರಣೆ ಕೊಟ್ಟದಕ್ಕೆ ಧನ್ಯವಾದಂಗ..ನಿಂಗಳ ಮತ್ತೆ ಮಹೇಶಣ್ಣನ ಬಾಲ್ಯದ ಗೆಳೆತನ ಹೀಂಗೆ ಮುಂದುವರಿಯಲಿ.ಬೈಲಿಂಗೆ ಹೀಂಗಿಪ್ಪ ಅರ್ಥಗರ್ಭಿತ ಗಾದೆಗಳ ಇನ್ನಷ್ಟು ತಿಳಿಶಿಕ್ಕಿ.

  3. ನವೆ೦ಬರು 28 ನೆ ತಾರೀಕು ಭಾನುವಾರ ಬದಿಯಡ್ಕ ನವಜೀವನ ಪ್ರೌಢ ಶಾಲೆಲಿ ನಮ್ಮ ಬೈಲಿನ ಹೆಮ್ಮೆಯ ಮಾಣಿ ಡಾ.ಕೂಳಕ್ಕೊಡ್ಳು ಮಹೇಶಣ್ಣ೦ಗೆ ಬದಿಯಡ್ಕ -ನೀರ್ಚಾಲು ಕನ್ನಡ ಶಾಲೆಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜನೆ ಆಯಿದಡ.
    ವಿದ್ವಾಂಸರಾದ ನಿಟಿಲಾಪುರ ಕೃಷ್ಣಮೂರ್ತಿ,ಹಿರಿಯ ಉಪ್ಪಂಗಳ ನಾರಾಯಣ ಶರ್ಮ ಮೊದಲಾದ ಗಣ್ಯರ ಉಪಸ್ಥಿತಿಲಿ ಕಾರ್ಯಕ್ರಮ ನೆಡವೊದು.. ಬೈಲಿನ ಎಲ್ಲೋರು ಹೋಪ,ಆಗದೋ.

  4. Mahesha, ninage enna nempidda gonthille. 1ne classinda 10-ne classina varenge ninnottinge ithidde. Doctorate sikkiddu gonthathu. Hrudayapoorvaka abhinandanegalu mathu prarthanegalu.

  5. ನಿಂಗಳ ಅಭಿನಂದನೆ ಸಿಕ್ಕುವಗ ತುಂಬಾ ಸಂತೋಷ ಆವುತ್ತು. ಎಲ್ಲೋರ ಹಾರೈಕೆಗಳ, ನಿರೀಕ್ಷೆಗಳ ಸಾಕಾರ ಮಾಡ್ಲೆ ಪ್ರಯತ್ನ ಮಾಡ್ತೆ.
    ಧನ್ಯೋಸ್ಮಿ!!
    ಮುಂದುವರಿದ ಸುದ್ದಿ: ನಿನ್ನೆ ಆಷಾಢ ಕೃಷ್ಣ-ಏಕಾದಶೀ ದಿನ (ಆಗಸ್ಟ್ ೬, ಶುಕ್ರವಾರ) ದೀಕ್ಷಾಂತ ಸಮಾರೋಹ (convocation) ಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದವು.

    1. ಎನ್ನ ಹಾರೈಕೆ ನಿರೀಕ್ಷೆ ಸಾಕಾರ ಆಯೆಕ್ಕಾರೆ ಕೂಳಕ್ಕೋಡ್ಲು ಅಪ್ಪಚ್ಚಿ ಪ್ರಯತ್ನ ಮಾಡೆಕ್ಕೋ ಹೇಳಿ.. ನೀನು ಮಾಡಿಕ್ಕೆಡಾ !!

  6. ಮಹೇಶ..
    ನೀನು ಹೇಳಿದ ಹಾಂಗೆ, ಸಂಸ್ಕೃತದ ಬಗ್ಗೆ ಹೆಚ್ಚು ಜೆನ ಅಧ್ಯಯನ ಮಾಡುವ ಹಾಂಗೆ ಅಪ್ಪಲೆ ನಿನ್ನ ಈ ಸಾಧನೆ ಮಾರ್ಗದರ್ಶಿಯಾಗಲಿ.

  7. ಮಹೇಶಾ.. ನಿನಗೆ PhD award ಆದ್ದು ಕೇಳಿ ಭಾರಿ ಸಂತೋಷ ಆತು. ಒಳ್ಳೆಯ ಸಾಧನೆಗೆ ಸಂದ ಪ್ರತಿಫಲ. ಎಲ್ಲೋರಿಂಗೂ ಇದು ಹೆಮ್ಮೆಯ ವಿಷಯ

  8. ಡಾಮಹೇಶಣ್ಣಂಗೆ ಅಭಿನಂದನೆಗೊ. ನಿಂಗಳ ಮುಂದಾಣ ಬದುಕು ಹಸನಾಗಿರಲಿ ಹೇಳಿ ದೇವರಲ್ಲಿ ಪ್ರಾರ್ಥನೆ. ಘಟ್ತ ಹತ್ತಿದ ಕಾರಣ ರಜಾ ತಡವಾತು. ಬೇಜಾರು ಮಾಡೆಡಿ..

  9. ಡಾ.ಮಹೇಶಂಗೆ ಅಭಿನಂದನೆಗೊ. ವಿಷಯ ಕೇಳಿ ತುಂಬಾ ಕೊಶಿ ಆತು. ಇನ್ನುದೆ ತುಂಬಾ ಗರಿಗೊ ನಿನ್ನ ಕಿರೀಟಲ್ಲಿ ಬರಲಿ.

  10. Hare Rama,
    ಅದ್ಭುತ ಸಾಧನೆ ………… ಮಹೇಶಣ್ಣ ನಿನಗೊಂದು ದೊಡ್ಡ ನಮಸ್ಕಾರ …… ನಮ್ಮ ಹಿರಿಯರು ಎಷ್ಟು ಬುದ್ದಿವಂತರು, ಸಂಸ್ಕೃತ ಜ್ಞಾನ ಭಂಡಾರ ಲ್ಲಿ ನಾವೆಷ್ಟು ಗಟ್ಟಿಗರು ಹೇಳಿ ಲೋಕಕ್ಕೆ ತೋರ್ಸಿಕೊಟ್ಟಿದೆ. ಅದುದೇ Ph D ಮಾಡಿದ್ದು IIT Bombay Li. ಸೂಪರ್ .
    .
    ಗುರಿಕ್ಕಾರೆ , Dr ಮಹೇಶಣ್ಣ೦ಗೆ ಒಂದು ಆಟಿಸಂಮನಕ್ಕೆ ಏರ್ಪಾಟು ಅಯೆಕು ಬೈಲಿಲಿ.

      1. ಭಾವಾ..ರಾಜಣ್ಣ ಗುರಿಕ್ಕಾರರ ಹತ್ರೆ ಹೇಯಿದ್ಸೂ ಅದನ್ನೇ..ಮಹೇಶಂಗೆ ಬೇಗ ಆಟಿ ಸಮ್ಮಾನ ಅಪ್ಪ ಹಾಂಗೆ ವೆವಸ್ತೆ ಮಾಡ್ಸೆಕ್ಕು ಹೇಳಿ..ಈ ಆಟಿ ಕಳಾತು. ವರುಷ ಓಡುತ್ತಿಲ್ಲೆಯೋ ಒಂದರಿ ಮಾವಿನ ಹಣ್ಣು, ಹಲಸಿನ ಹಣ್ಣು ತಿನ್ದಪ್ಪಗ .. ಇನ್ನಾಣ ಆಟಿಗಾದರೂ.. ಎಂತ ಮಹೇಶೋ

    1. ಎಲ್ಲೋರೂ ಶುಭಾಶಯ ಹೇಳಿಗೊಂಡು ಇಪ್ಪಗ ಕೆದೂರು ಡಾಕ್ಟ್ರು ಧನ್ಯವಾದ ಹೇಳಿದ್ದು ಆರಿಂಗೆ ಹೇಳಿ ಒಂದು ಸಣ್ಣ ಕನುಫ್ಯೂಸು ಬಯಿಂದು ದೊಡ್ಡಭಾವಂಗೆ…

      1. ಮೊನ್ನೆ ಕಿದೂರು ಜೆಂಬ್ರ ಕಳುದ ಮತ್ತೆ ಎಲ್ಲೋರತ್ರೂ ಹಾಂಗೇ ಹೇಳುದಡ.
        ಈಗೀಗ ಒರಕ್ಕಿಲಿದೇ ಅದನ್ನೇ ಹೇಳ್ತವು- ಹೇಳಿ ಕಿದೂರುಒಕೀಲ್ತಿ ಹೇಳಿತ್ತಿದ್ದವು!! 😉

        1. ಅದು ಸರಿ, ಎಂತ್ಸಕೂ ನಮ್ಮ ಬೈಲಿಲ್ಲಿ ಕೆದೂರು ಡಾಕ್ಟ್ರ ಕಾಣದ್ದೆ ಸುಮಾರು ಸಮಯ ಆಗಿದ್ದತ್ತು, ಇಂದು ಅವರ ಕಂಡಪ್ಪಗ ಖೊಷಿ ಆತು…

        2. @ನಗೆಗಾರ- ವಕೀಲ್ತಿ ಒರಗುಲೇ ಬಿಡ್ತಿಲ್ಲೆ! ಇನ್ನು ಮಾತಾಡುದು ಎಲ್ಲಿ೦ದ?

          1. ನಿಂಗೊಗೆ ಮಾತಾಡ್ಳೆ ಬಿಡವು, ಗೊಂತಿದ್ದು – ಅವು ಒಕೀಲಕ್ಕ° ಅಲ್ಲದೋ! 😉
            ಆದರೆ ಒರಗಲೆ ಬಿಡ್ತವಿಲ್ಲೆ ಎಂತ್ಸಕ್ಕೋ? ಉಮ್ಮಪ್ಪ!!

          2. ಪಾಪ, ಕೆದೂರು ಡಾಕ್ತ್ರಿಂಗೆ ಇಲ್ಲಿಯೂ ಸ್ಪೆಲ್ಲಿಂಗು ತಪ್ಪಿ ಹೋದ್ಸೋ ಹೇಂಗೆ…! ಅವ್ವು ಬೈಲಿಂಗೆ ಬಾರದ್ದೆ ಸುಮಾರು ಸಮಯ ಆತಾನೆ..!

          3. {ಇಲ್ಲಿಯೂ ಸ್ಪೆಲ್ಲಿಂಗು ತಪ್ಪಿ ಹೋದ್ಸೋ}
            ಯೇ ಡಾಗ್ಟ್ರೆ, ಇಲ್ಲಿ ತಪ್ಪರೆ ಸಾರ ಇಲ್ಲೆ. ಅಲ್ಲಿ – ಮದ್ದು ಬರೆತ್ತಲ್ಲಿ ತಪ್ಪಿರೆ ಒಯಿವಾಟು ಕೆಡುಗು.
            ತಲೆಬೇನೆ ಕಮ್ಮಿ ಅಪ್ಪಲೆ ಮದ್ದು ಬರದ್ದು ತಪ್ಪಿ ಕಾಲುಬೇನೆ ಜೋರಕ್ಕು!
            ಮತ್ತೆ ಡಾಗುಟ್ರಕ್ಕನ ಕಶಾಯವೇ ಗೆತಿ..

          4. ಡಾಗುಟ್ರ ಬಾವಾ. ನಿಂಗೊ ಹೀಂಗೆ ಹೇಳಿ ನಮ್ಮ ಒಪ್ಪಣ್ಣ ಈಗಲೇ ತಲೆ ಬೆಶಿ ಮಾಡುಲೆ ಶುರು ಮಾಡಿದ್ದ. ಜೋರು ಮಳೆ ಇದ್ದರೂ ಬೆಶಿ ಕಮ್ಮಿ ಅಯಿದೇ ಇಲ್ಲೆ.. ಎಂತ ಮಾಡುದೋ? ದೊಡ್ಡಣ್ಣನತ್ರ ಎಂತಾರು ಮದ್ದು ಇದ್ದೋ..

          5. @ಆಜ್ಜಕಾನ- ಅಯ್ಯೋ! ಒಪ್ಪಣ್ಣ ಈಗಲೇ ಎ೦ತಕೆ ತಲೆಬೆಶಿ ಮಾಡುದು? ಇನ್ನೂ ಸಮಯ ಇದ್ದನ್ನೆ?

      2. ಹಹಹಾ…..ಬರವಗ ರೆಜಾ ಸ್ಪೆಲ್ಲಿ೦ಗು ತಪ್ಪಿತ್ತು ದೊಡ್ಡಬಾವಾ, ಬರೆಯದ್ದೆ ಕೆಲಾವು ಸಮಯ ಆತನ್ನೆ, ಹಾ೦ಗಾಗಿ..

          1. ಬೈಲಿಲಿ ಹೇಳಿರೆ ಆನು ಒಬ್ಬನೆ ಅಲ್ಲಾ ಎಲ್ಲರುದುದೆ ಕಲ್ವಲಾವುತ್ತನ್ನೆ.. ತಲೆಬೆಶಿ ಮಾಡೆಡ.. ಎಂತಾರು ಆದರೆ ರಾಮಮೋಹನಣ್ಣನೋ ರಾಮ ಭಟ್ರೊ ಇದ್ದವನ್ನೆ..

          2. ಕೇಳಿ ನೋಡುವ°(ಫೀಚು ಎಶ್ಟು ಹೇಳ್ತವು ಗೊ೦ತಿಲ್ಲೆ!!)

  11. ಶುಭಾಶಯಂಗ ಮಹೇಶಣ್ಣ!! ನಿಂಗ ಹೀಂಗೆ ಮುಂದೆಯೂ ನಮ್ಮ ಹಿರಿಯರು ಕೊಟ್ಟ ಅಮೂಲ್ಯ ಸಂಪತ್ತಿನ ಸಂಶೋಧನೆ ಮಾಡಿ ಹೇಳುದೆ ನಮ್ಮ ಹಾರೈಕೆ/ ಆಶಯ.

  12. ಮಹೇಶಾ.. ನೀನು ದಾಗುಟ್ರಾದ ಶುದ್ದಿ ಕೇಳಿ ಭಾರಿ ಸಂತೋಷ ಆತು.
    ಭವತಃ ಸಫಲತಾಯೈ ಅಭಿನಂದನಂ. ಶುಭಂ ಭೂಯಾತ್.

  13. ಮಹೇಶಣ್ಣಾ. ಧನ್ಯವಾದಂಗೊ ನಿಂಗಳ ಸಾಧನೆ ಎಂಗಳಂತವಕ್ಕೆ ಸ್ಫೂರ್ತಿ.. ಬಾಯಿ ಒಂದರಿ ಚೀಪೆ ಮಾಡೆಕ್ಕು ನಿಂಗೊ..
    ಶೈಕ್ಷಣಿಕ ಕ್ಷೇತ್ರಲ್ಲಿ ನಿಂಗೊ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಹೇಳ್ತದೆ ಹಾರೈಕೆ.

  14. ಕೂಳಕ್ಕೋಡ್ಳು ಅಣ್ಣಾ..
    ಅಭಿನಂದನೆಗೊ, ಇನ್ನೂ ಎತ್ತರದ ಜೀವನ ನಿಂಗಳದ್ದಾಗಲಿ..
    ಶುಭಮ್ ಭದ್ರಮ್ ಭೂಯಾತ್!!

    1. ಒಪ್ಪಣ್ಣಾ !
      ಎತ್ತರಕ್ಕೆ ಹತ್ತುಸುವಗ, ಹತ್ತರಾಣವು (ನಿಂಗಳ ಹಾಂಗಿಪ್ಪವು) ಒಟ್ಟಿಂಗೆ ಇರ್ತವು ಹೇಳಿ ಧೈರ್ಯ ಇದ್ದಿದ! ತೋಂಪಟ ಮಾಡಿಯಪ್ಪಗ ಹಾಂಗಾಗಿ ಕೊಶಿ ಅಪ್ಪದು! 🙂
      ಸಣ್ಣ ಮಾಣಿ ಆಯನಲ್ಲಿ ದೇವರ ಕಾಂಬಲೆ ದೊಡ್ಡವರ ಹೆಗಲಿಲ್ಲಿ ಕೂದ ಹಾಂಗೆ. ಆಧಾರ ಗಟ್ಟಿ ಬೇಕನ್ನೇ?

  15. ಕೂಳಕ್ಕೋಡ್ಳು ಮಹೇಶಣ್ಣಂಗೆ ಅಭಿನಂದನೆಗೊ.
    ಡಾಕುಟ್ರು ಆದ ಲೆಕ್ಕಲ್ಲಿ ಒಂದರಿ ಬಾಯಿಚೀಪೆ ಮಾಡಿ ಬಿಡಿ ಆತೋ?
    ಗುರುಗಳ, ದೇವರ ಅನುಗ್ರಹ ಯೇವತ್ತೂ ನಿಂಗಳ ಮೇಲಿರಲಿ..
    ಹರೇರಾಮ…

    1. ಗುರಿಕ್ಕಾರ್ರೆ,
      ಅಪ್ಪಪ್ಪು, ಬಾಯಿಚೀಪೆ ಮಾಡೆಕು,
      ಡಾಕ್ಟ್ರಕ್ಕಂದ್ರು, ಬಂಡಾಡಿ ಅಜ್ಜಿಯುದೆ ಹೇಳ್ಯೊಂಡು ಇತ್ತಿದ್ದವು, ಪೇಟೆಲ್ಲಿ ಸಿಕ್ಕುವದೆಲ್ಲ ಬೇಡ, ಇಲ್ಲಿಯೇ……………. ಹೇಳಿ. ನಿಂಗಳತ್ರೆ ಹೇಳಿದ್ದವಿಲ್ಲೆಯೋ ಅಂಬಗ? ಹೊಸ ರುಚಿ ಎಂತಾರು ಮಾಡಿ ಮಡುಗಿದ್ದವೋ ಎಂತದೋ? ಏ°? 🙂

  16. ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..

  17. ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ ಇಲ್ಲದ್ದ ವಿಶಯ ಯಾವುದೂ ಇಲ್ಲೆ ಹೇಳುವದರ ಜೆನಂಗೊಕ್ಕೆ ತೋರುಸುವ ಒಳ್ಳೆ ಕೆಲಸಕ್ಕೆ ಕೈ ಹಾಕಿದ್ದೆ.ಈ ನಿನ್ನ ಸಾಧನೆ ನಮ್ಮೂರ ಮಕ್ಕೊಗೆ ಸಂಸ್ಕೃತಲ್ಲಿ ಅಧ್ಯಯನ ಮಾಡ್ಲೆ ಸ್ಪೂರ್ತಿ ಕೊಡುವ ಹಾಂಗೆ ಆಗಲಿ. ಶುಭವಾಗಲಿ

    1. ಅಪ್ಪಚ್ಚಿ,
      ಅಪ್ಪು, ಸಂಸ್ಕೃತ ಕ್ಷೇತ್ರವುದೇ successful career ಗೆ ಒಂದು ಆಯ್ಕೆ ಅಪ್ಪಲೆಡಿಗು ಹೇಳುವದು ಬಹಳಷ್ಟು ಜೆನಂಗೊಕ್ಕೆ ತಿಳುಶೆಕಾದ ಆವಶ್ಯಕತೆ ಇದ್ದು.
      {…ಸ್ಪೂರ್ತಿ ಕೊಡುವ ಹಾಂಗೆ ಆಗಲಿ}
      ನಿಂಗಳ ಆಶಯಂಗೋ ಹೊಸ ಹುರುಪು ಕೊಡ್ತಾ ಇದ್ದು. ಖುಷಿ ಆತು.

  18. ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ ಪ್ರಬಂಧ ಎಂಗೊಗೆ ಒಳ್ಳೆ ಮಾರ್ಗದರ್ಶನ ಅಕ್ಕು ಖಂಡಿತಾ!! .ಗುರುಗೊ ಮತ್ತು ದೇವರ ಅನುಗ್ರಹಲ್ಲಿ ನಿಂಗಳ ಪ್ರತಿಭೆ ಇನ್ನಷ್ಟು ಉದ್ದೀಪನವಾಗಲಿ ಹೇಳಿ ಹಾರೈಸುತ್ತೆ.. ಗುಡ್ ಲಕ್…

    1. ಗಣೇಶ ಮಾವ,
      ಧನ್ಯವಾದಃ,
      ಭವತಃ ಕಾರ್ಯೇ ಅಪಿ ಶುಭಂ ಭವತು!

  19. ಡಾಮಹೇಶಣ್ಣ… ಅಭಿನಂದನೆಗಾ…. ತುಂಬಾ ಒಳ್ಳೆ ಕೆಲಸ… ಅದರಲ್ಲೂ ನಮ್ಮ ಸಂಸ್ಕೃತಿ, ಸಂಸ್ಕೃತದ ವಿಷಯವನ್ನೇ ತೆಕ್ಕೊಂಡು, ಅದರಲ್ಲಿ ಪ್ರಥಮರಾಗಿ PhD ಮಾಡಿ ಎಂಗೊ ಎಲ್ಲೋರು ಸಂಭ್ರಮಿಸುವ ಹಾಂಗೆ ಮಾಡಿದ್ದಿ… ಕೆಲವು ವರ್ಷದ ಸಾಧನೆ ಇಕ್ಕು ಇದರಲ್ಲಿ, ಅದು ಫಲಪ್ರದ ಆದ್ದದು ತುಂಬಾ ಕೊಶಿ ಆತು.. ಸಂಪೂರ್ಣ ಗ್ರಂಥವ ಇಂಗ್ಲಿಷಿಂಗೆ ಭಾಷಾಂತರ ಮಾಡಿದ್ದು ತುಂಬಾ ಒಳ್ಳೇದಾತು…ಇನ್ನು ಮುಂದಾಣವಕ್ಕೆ ದಾರಿ ತೋರ್ಸುಗು… ನಿಂಗೊ ಇನ್ನುದೆ ಅಪೂರ್ವ ಗ್ರಂಥಂಗಳ ಬೆಣಚ್ಚಿಂಗೆ ತನ್ನಿ.. ಇನ್ನೂ ನಮ್ಮಲ್ಲಿಪ್ಪ ಪ್ರತಿಭೆಗೊಕ್ಕೆ ಮೇಲೆ ಬಪ್ಪಲೆ ಸಹಾಯ ಮಾಡಿ.. ನಿಂಗಳ ಸಾಧನೆಯ ಎಂಗೊ ಗೌರವಿಸುತ್ತೆಯಾ° .. ಒಳ್ಳೆದಾಗಲಿ…
    ಶುದ್ದಿಕ್ಕಾರೋ°.., ನಮ್ಮ ಬೈಲಿನೋನೆ ಆದರೂ ಒಳ್ಳೆ ಪ್ರತಿಭೆಯ ಗುರುತಿಸಿ, ಗೌರವಿಸಿ ಬೈಲಿನ ಎದುರು ನಿಲ್ಲುಸಿದ ಎಲ್ಲೋರಿಂಗೂ ಧನ್ಯವಾದ ಆತಾ… ಪಟ ಲಾಯ್ಕಿದ್ದು.. ಶುದ್ದಿಕ್ಕಾರಂಗೆ ಬೇಕಾದ ಹಾಂಗೆ ಪಟಂಗ ಸಿಕ್ಕುತ್ತಲ್ಲದಾ? ಈ ಪಟ ಡಾಮಹೇಶಣ್ಣ ತನಗಾಗಿ ಹೇಳಿಯೇ ಮಾಡ್ಸಿದ ಹಾಂಗಿದ್ದು.. 😉

    1. ಶ್ರೀ ಅಕ್ಕಾ!
      ಮಹಾನ್ ಸಂತೋಷಃ!! 🙂
      ಆ ಮೇಲೆ ಇಪ್ಪ ಪಟ ಒಂದು ಹೂದೋಟ ನೋಡ್ಲೆ ಹೋಗಿಪ್ಪಗ ತೆಗದ್ದದು. ಆನು ಹೋಪಗಳೇ ಅಲ್ಲಿ ಹಾಂಗೆ ಬರದು ರೆಡಿ ಮಾಡಿ ಮಡುಗಿತ್ತಿದ್ದವು. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×