ಕೃತಜ್ಞತೆ-ಲಕ್ಷ್ಮೀಶ ಜೆ.ಹೆಗಡೆ

ಕೃತಜ್ಞತೆ-ಲಕ್ಷ್ಮೀಶ ಜೆ.ಹೆಗಡೆ

ಲಕ್ಷ್ಮೀಶ ಜೆ.ಹೆಗಡೆಶರ್ಮರಿಗೆ ನಮಸ್ಕಾರ.

ಆನುಲಕ್ಷ್ಮೀಶ. ನಿಂಗಳ ಎಲ್ಲರ ಮತ್ತು ಶ್ರೀಗುರುಗಳ ಆಶೀರ್ವಾದದಿಂದ ಆನು ಮೂರನೇ ವರ್ಷದ ಎಂಬಿಬಿಎಸ್ನಲ್ಲಿ 61% ಫಲಿತಾಂಶ ತೆಗೆದು ಪಾಸಾಗುವುದ್ರ ಜೊತಿಗೆ ಮೂರನೇ ವರ್ಷವನ್ನು ಯಶಸ್ವಿಯಾಗಿಪೂರೈಸಿದ್ದಿ. ಕಳೆದ ಡಿಸೆಂಬರ್ 2014ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಇವತ್ತು (13/03/15)ರಾತ್ರಿಯಷ್ಟೇ ಬಂತು. ಬಂದ ತಕ್ಷಣ ಈ ಸುದ್ದಿಯನ್ನ ಒಪ್ಪಣ್ಣನ ಬೈಲಿನ ಹವ್ಯಕ ಬಂಧುಗಳಜೊತಿಗೆ ಹಂಚಿಕೊಂಬ ಮನಸ್ಸಾತು. ಹಂಗಾಗಿ ಈ ಮೇಲ್ ಕಳಿಸ್ತಾ ಇದ್ದಿ. ಅದನ್ನ ದಯವಿಟ್ಟು ಒಪ್ಪಣ್ಣ.ಕಾಮ್ ವೆಬ್ ಸೈಟ್ ನಲ್ಲಿಪ್ರಕಟಿಸಿ. ನಿಂಗಳೆಲ್ಲರ ಆಶೀರ್ವಾದ ಯನ್ನ ಮೇಲೆ ಸದಾ ಇರ್ಲಿ.
-ಲಕ್ಷ್ಮೀಶ ಜೆ.ಹೆಗಡೆ

ಹರೇ ರಾಮ.ಒಪ್ಪಣ್ಣ ಬೈಲಿನ ಎಲ್ಲಾ ಹವ್ಯಕ ಬಂಧುಗಳಿಗೂ ನಮಸ್ಕಾರ.ಆನು ಲಕ್ಷ್ಮೀಶ ಜೆ.ಹೆಗಡೆ.ನಿಂಗಕ್ಕೆ ನೆನಪಿದ್ದಾ ಇಲ್ಯ,2011ರಲ್ಲಿ ಆನು ಸೆಕೆಂಡ್ ಪಿಯುಸಿ ಮುಗಿಸಿ ಸಿಇಟಿಯಲ್ಲಿ ವೈದ್ಯಕೀಯ ವಿಭಾಗದಲ್ಲಿ 728ನೇ Rank ಗಳಿಸಿ ಮೆಡಿಕಲ್ ಸೇರ ಕನಸು ಕಾಣ್ತಾ ಇದ್ದಿದ್ದಿ. ಯಂಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೀಟೂ ಸಿಕ್ಕಿತ್ತು. ಆದ್ರೆ ಯಂಗಳ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿತ್ತಿಲ್ಲೆ. ಯನ್ನನ್ನ ಮೆಡಿಕಲ್ ಓದಿಸದು ಯನ್ನ ಅಪ್ಪಂಗೆ ಅಸಾಧ್ಯವಾದ ಮಾತಾಗಿತ್ತು. ಆ ಸಮಯದಲ್ಲಿ ಒಪ್ಪಣ್ಣ ಜಾಲತಾಣದಲ್ಲಿ ಯನ್ನ ಬಗ್ಗೆ ಬಂದ ವರದಿಯ ನೋಡಿ ನಿಂಗಳೆಲ್ಲರೂ ಆನು ಯಾರು ಹೇಳ ಗುರ್ತು ಪರಿಚಯ ಇಲ್ಲದೇ ಇದ್ರೂ ಕೂಡಾ “ನಮ್ಮ ಹವ್ಯಕ ಮಾಣಿ” ಹೇಳಿ ಪ್ರೀತಿ ತೋರಿ ನಿರೇಕ್ಷೆಗೂ ಮೀರಿ ಆರ್ಥಿಕ ಸಹಾಯ ಮಾಡಿದ್ದಿ. ಆ ಆರ್ಥಿಕ ಸಹಾಯ ಇಲ್ದೇ ಹೋಗಿದ್ರೆ ಆನು ಮೆಡಿಕಲ್ ಮಾಡದು ಸಾಧ್ಯವೇ ಇತ್ತಿಲ್ಲೆ.

ಈಗ ಆನು ಮೂರನೇ ವರ್ಷದ ಎಂಬಿಬಿಎಸ್ (3rd Year MBBS) ಪರೀಕ್ಷೆಯಲ್ಲಿ 61% ತೆಗೆದು ಯಶಸ್ವಿಯಾಗಿ ಪಾಸಾಗಿ ಅಂತಿಮ ವರ್ಷದ ಎಂಬಿಬಿಎಸ್ (4th Year) ಕಲಿತಾ ಇದ್ದಿ. ಈ ಸುದ್ದಿನ ನಿಂಗಳೆಲ್ಲರ ಜೊತೆ ಹಂಚಿಕ್ಯಂಬ್ಲೆ ಯಂಗೆ ಭಾರೀ ಖುಶಿ ಆಗ್ತಾ ಇದ್ದು. ಶ್ರೀ ಗುರುಗಳ ಮತ್ತು ನಿಂಗಳೆಲ್ಲರ ಆಶೀರ್ವಾದ ಎನ್ನ ಮೇಲೆ ಸದಾ ಇದ್ದು ಹೇಳಿ ಆನು ಇಲ್ಲಿಯವರೆಗೆ ತಿಳ್ಕಂಡಿದ್ದಿ,ಮತ್ತು ಇನ್ನು ಮುಂದೆಯೂ ನಿಂಗಳ ಆಶೀರ್ವಾದ ಹೀಗೇ ಇರ್ಲಿ ಹೇಳಿ ಬೇಡ್ತಾ ಇದ್ದಿ. ಆವತ್ತು ಎಂಬಿಬಿಎಸ್ ಸೇರಲೆ ಯಂಗೆ ಸಹಾಯ ಮಾಡಿದ ಒಪ್ಪಣ್ಣ ಬೈಲಿನ ಬಂಧುಗಳಿಗೂ ಮತ್ತೆ ಎಲ್ಲಾ ಹವ್ಯಕ ಬಂಧುಗಳಿಗೂ ಆನು ಈ ಮೂಲಕ ಮತ್ತೊಮ್ಮೆ ಕೃತಜ್ಞತೆ ಹೇಳ್ತಾ ಇದ್ದಿ. ವೈಯಕ್ತಿಕವಾಗಿ ಹೆಸರು ಹೇಳಿ ಧನ್ಯವಾದ ಹೇಳ್ತಾ ಇಲ್ಲೆ ಹೇಳಿ ಯಾರೂ ಅನ್ಯಥಾ ಭಾವಿಸಲಾಗ.ನಿಮ್ಮೆಲ್ಲರ ಆಶೀರ್ವಾದ ಯನ್ನ ಮೇಲೆ ಸದಾ ಇರ್ಲಿ.ಮತ್ತೊಮ್ಮೆ ಎಲ್ಲರಿಗೂ ಧನ್ಯವಾದ

ಹರೇ ರಾಮ

~~~***~~~~

 

ಶರ್ಮಪ್ಪಚ್ಚಿ

   

You may also like...

5 Responses

 1. ಹರೇ ರಾಮ. ನೆಂಪು ಪ್ರಯತ್ನ ಪ್ರೀತಿ ಸದಾ ಇರಳಿ. ಗುರುದೇವತಾನುಗ್ರಹಂದ ಉಜ್ವಲ ಭವಿಷ್ಯ ಲಕ್ಷ್ಮೀಶಂಗೆ ಆಗಲಿ.

 2. ಉಪಕಾರ ಸ್ಮರಣೆ, ಕೃತಜ್ಞತಾಭಾವನೆ, ಒಳ್ಳೆ ಬೆಳವಣಿಗೆ!. ನಿನ್ನ ಇಷ್ಟಾರ್ಥ ಈಡೇರಿ ಕುಟುಂಬಕ್ಕೆ, ಊರಿಂಗೆ, ನಾಡಿಂಗೆ ಒಳ್ಳೆದು ಮಾಡು.

 3. ತೆಕ್ಕುಂಜ ಕುಮಾರ ಮಾವ° says:

  ನಿನ್ನ ರಿಸಲ್ಟ್ ನೋಡಿ ಸಂತೋಷ ಆತು. ಮುಂದೆಯೂ ಉತ್ತಮೋತ್ತಮ ಅಭಿವೃದ್ಧಿ ಸಿಕ್ಕಲಿ, ಲಕ್ಷ್ಮೀಶ.

 4. ರಘು ಮುಳಿಯ says:

  ಲಕ್ಷ್ಮೀಶಂಗೆ ಅಭಿನಂದನೆ , ಮುಂದಿನ ವರ್ಷ೦ಗಳಲ್ಲಿಯೂ ಒಳ್ಳೆಯ ಅಂಕ ಪಡದು ಸಮುದಾಯಕ್ಕೆ – ಸಮಾಜಕ್ಕೆ ಸೇವೆ ಸಲ್ಲುಸಿ ಕೀರ್ತಿ ಪಡವ ಹಾಂಗೆ ಗುರು ದೇವರು ಅನುಗ್ರಹಿಸಲಿ ಹೇಳಿ ಹಾರೈಕೆಗೋ .

 5. S.K.Gopalakrishna Bhat says:

  ಅಭಿನಂದನೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *