Oppanna.com

ಗಡಿನಾಡ ಬಹುಮುಖ ಪ್ರತಿಭೆ ಕು|ಶ್ರದ್ಧಾ. ಯನ್

ಬರದೋರು :   ವಿಜಯತ್ತೆ    on   05/06/2014    12 ಒಪ್ಪಂಗೊ

ಗಡಿನಾಡ ಬಹುಮುಖ ಪ್ರತಿಭೆ ಕು|ಶ್ರದ್ಧಾ. ಯನ್ಕು|ಶ್ರದ್ಧಾ. ಯನ್

ಕಾಸರಗೋಡು ಜಿಲ್ಲೆ ಪೈವಳಿಕೆ ಹತ್ತರೆ ಇಪ್ಪ ನಾಯರ್ಪಳ್ಳದ ಶ್ರೀ ಗೋಪಾಲಕೃಷ್ಣ ಭಟ್ (ಕಿರುಪುರೋಹಿತ) ಹಾಂಗೂ ಶ್ರೀಮತಿ ಮಾಲತಿ ಇವರ ಸುಪುತ್ರಿ ಕು|ಶ್ರದ್ಧಾ. ಯನ್,೨೦೧೪ ರ ಮಾರ್ಚಿಲಿ ಕೇರಳ ಎಸ್.ಎಸ್.ಎಲ್.ಸಿ ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿಯೂ “A+” ಗ್ರೇಡಿಲ್ಲಿ ಪಾಸಾದ ಕೂಸು ಪೈವಳಿಕೆ ಪ್ರೌಢಶಾಲೆಲಿ ಕಲ್ತ ಶ್ರದ್ಧಾ, ಪಾಠಂಗಳಲ್ಲಿ ಮಾತ್ರ ಅಲ್ಲದ್ದೆ   ಪಠ್ಯೇತರ  ಚಟುವಟಿಕೆಗಳಲ್ಲಿ ಉತ್ಸಾಹ ತೋರಿಸಿ ಮಾಡಿದ ಇತರ ಸಾಧನಗೊ:- ಗಮಕ ವಾಚನ, ವ್ಯಾಖ್ಯಾನ, ಭಾಷಣ, ಹರಿಕತೆ, ಏಕಪಾತ್ರಾಭಿನಯ, ಕಥಾಪ್ರಸಂಗ, ನಾಟಕಾಭಿನಯ, ಯಕ್ಷಗಾನ ಭಾಗವತಿಕೆ, ಅರ್ಥಗಾರಿಕೆ, ಲಘುಸಂಗೀತ ಇಷ್ಟು ವಿಷಯಂಗಳಲ್ಲಿ ನುರಿತ ಕಲಾವಿದೆ ಕವಿತಾರಚನೆ, ಖಂಡಕಾವ್ಯ ರಚನೆ, ಕಥಾರಚನೆ ಗಳಲ್ಲಿ ಬರಹಗಾರ್ತಿಯಾಗಿ ರೂಪುಗೊಂಡಿದು. ಪುಸ್ತಕ ರೂಪಲ್ಲಿ ಪ್ರಕಟವಾದ ಕೃತಿಗೊ:-

  • “ವಾಲ್ಮೀಕಿ ಚರಿತೆ” ಖಂಡಕಾವ್ಯ ಶರ ಷಟ್ಪದಿಲಿ
  • “ಸುರ ತರಂಗಿಣಿ” ಹೇಳ್ತ ಖಂಡ ಕಾವ್ಯ, ಕುಸುಮ ಷಟ್ಪದಿಲಿ
  • “ತೆರೆ” ಕವನ ಸಂಕಲನ,
  • “ಕನ್ಯಾತರಂಗ” ಖಂಡ ಕಾವ್ಯ, ಭೋಗ ಷಟ್ಪದಿಲಿ.
  • ಇನ್ನೀಗ “ಮಹಾಕಲಿ ಮಗದೇಂದ್ರ” ಹೇಳ್ತ ಖಂಡ ಕಾವ್ಯವ ವಾರ್ಧಕ ಷಟ್ಪದಿಲಿ ಬರವಲೆ ಸುರುಮಾಡಿದ್ದು.

ತನ್ನದಾಗಿಸಿಗೊಂಡ ಬಹುಮಾನಂಗೊ ಮತ್ತೆ ಪ್ರಶಸ್ತಿಗೊ:-

  1. ಹಾಸನಲ್ಲಿ ಗಮಕ ಸಪ್ತಾಹಲ್ಲಿ ವ್ಯಾಖ್ಯಾನ
  2. ಶಿವಮೊಗ್ಗ ಜಿಲಾ ಘಟಕ ಸಪ್ತಾಹಲ್ಲಿ  ಮಾರ್ಕಾಂಡೇಯ ಅವಧಾನಿಗಳ ಸಮ್ಮುಖಲ್ಲಿ ವ್ಯಾಖ್ಯಾನ.
  3. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಏರ್ಪಡಿಸಿದ “ಭಜ ಗೋವಿಂದಮ್” ಶ್ಲೋಕ ಕಂಟಸ್ಥ ಹೇಳುವದಲ್ಲಿ ಗೋಕರ್ಣ ಮಂಡಲಲ್ಲಿಯೇ ಪ್ರಥಮ ಸ್ಥಾನ.
  4. ಕರ್ನಾಟಕ ಕಥಾಮಂಜರಿ ಗಮಕ ಕಂಠ ಪಾಠಲ್ಲಿ ರಾಜ್ಯ ಮಟ್ಟಲ್ಲಿ ಪ್ರಥಮ.
  5. ಮೂಡಬಿದಿರೆ ಆಳ್ವಾಸ್ ವಿಶ್ವ ನುಡಿಸಿರಿಲಿ “ಹಾಡುಗಬ್ಬದ ಮೆರುಗು” ಹೇಳ್ತ ವಿಷಯದ ಬಗ್ಗೆ ಭಾಷಣ
  6. ಇತ್ತೀಚೆಗೆ ಕರ್ನಾಟಕ ಗಮಕ ಕಲಾಪರಿಷತ್ತಿನವರಿಂದ ಸನ್ಮಾನ.

ಐದನೇ ಕ್ಲಾಸಿಂದಲೇ ಸಾಹಿತ್ಯಾಸಕ್ತಿಂದಾಗಿ ಬರವಲೆ ಸುರುಮಾಡಿದ ಶ್ರದ್ಧಾ, ತನ್ನ ೯ನೇ ಕ್ಲಾಸಿಂಗೆ ಎತ್ತಿಯಪ್ಪಗ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲುಸಿದ್ದು ತುಂಬಾ ಹೆಮ್ಮೆಯ ವಿಷಯ. ಶಿಕ್ಷಣ ತಜ್ಞ , ಸಿರಿಗನ್ನಡ ವೇದಿಕೆ ಗಡಿನಾಡಿನ ಅಧ್ಯಕ್ಷರೂ ಸಾಹಿತಿಯೂ ಆಗಿ ಇಪ್ಪ ಶ್ರೀಯುತ ವಿ.ಬಿ.ಕುಳಮರ್ವ ಮತ್ತೆ ಕಲಿತ್ತ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಲಲಿತಾಕ್ಷಿ (ಶ್ರೀ ವಿ.ಬಿ.ಕುಳಮರ್ವ ಇವರ ಧರ್ಮಪತ್ನಿ)ಯವರ ನಿರಂತರ ಪ್ರೋತ್ಸಾಹವ  ಶ್ರದ್ಧಾ ಸ್ಮರಿಸುವದರೊಟ್ಟಿಂಗೆ ಗುರು ಹಿರಿಯ ಆಶೀರ್ವಾದ ಬೇಡುತ್ತಾ ಇದ್ದು. “ಎನಗೆ ಖಂಡಕಾವ್ಯ ರಚನೆಗೆ ಪ್ರೇರಣೆ ಶ್ರೀ ಗುರುಗಳ ’ರಾಮಕಥಾ’ ಶ್ರವಣವೇ ಕಾರಣ” ಹೇಳುವ ಶ್ರದ್ಧಂಗೆ ಶ್ರೀ ಗುರುಗೊ ದಿವ್ಯ ಮಂತ್ರಾಕ್ಷತೆ ಕೊಟ್ಟು ಹರಸಿದ್ದವು. ಈ ಅರಳು ಪ್ರತಿಭೆ ಕರ್ನಾಟಕದಾದ್ಯಂತ ಹೆಸರು ಮಾಡಿ ರಾಷ್ಟ್ರ ಮಟ್ಟಲ್ಲಿ ಬೆಳಗಲಿ ಹೇಳಿ ನಾವೆಲ್ಲಾ ಹರಸುವೊ°, ಹಾರೈಸುವೊ°

~~~***~~~

  ಗಡಿನಾಡ ಕೂಸು ಕು। ಶ್ರದ್ಧಾ , ಈಗ ಮಕ್ಕಳ ಸಾಹಿತ್ಯ ಸಂಗಮದ ಸರ್ವಾಧ್ಯಕ್ಷೆಯಾಗಿ ಆಯ್ಕೆ.

12 thoughts on “ಗಡಿನಾಡ ಬಹುಮುಖ ಪ್ರತಿಭೆ ಕು|ಶ್ರದ್ಧಾ. ಯನ್

  1. ಸುಬ್ರಹ್ಮಣ್ಯ ಭಟ್ ಕೆ. ಶ್ರೀಸದನ, ನೀರ್ಚಾಲು , ಅಂಚೆ ಬೇಳ. ಕ says:

    ಗಡಿನಾಡ ಪ್ರತಿಭೆ ಕುಮಾರಿ ಶ್ರದ್ಧಾಳ ಕನ್ನಡದ ಶ್ರದ್ಧೆ ನಡುನಾಡ ಕನ್ನಡಿಗರೆಲ್ಲರಿಂಗೂ ಸ್ಪೂರ್ತಿಯಾಗಲಿ . ಎಲ್ಲೆಲ್ಲೂ ಕನ್ನಡದ ಕಂಪು ಪಸರಿಸಲು ಗಡಿನಾಡ ಪ್ರತಿಭೆ ದಾರಿದೀಪವಾಗಲಿ. ಸಿರಿ ಗನ್ನಡಂ ಗೆಲ್ಗೆ.

  2. ಹರೇ ರಾಮ , ಕು| ಶ್ರದ್ಧಾ , ಈ ವರ್ಷ ಮುಂದೆ ಕಟೀಲಿಲ್ಲಿ ನೆಡವ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವದ್ಧ್ಯಕ್ಷೆಯಾಗಿ ಆಯ್ಕೆ ಅದ್ದು ನಮ್ಮೂರಿಂಗೊಂದು ಹೆಮ್ಮೆ..ಈ ಕೂಸು ಆರ್ಥಿಕತೆಲಿ ಬಡವಳಾದರೂ ಸಾಹಿತ್ಯ ಪ್ರತಿಭೆಲಿ ಶ್ರೀಮಂತೆ..

  3. ನಮ್ಮ ಸಮಾಜದ ಹೆಮ್ಮೆಯ ಕೂಸು . ಅಭಿನಂದನೆಗೋ .

  4. ಗಡಿನಾಡ ಕೂಸು ಕು। ಶ್ರದ್ಧಾ , ಈಗ ಮಕ್ಕಳ ಸಾಹಿತ್ಯ ಸಂಗಮದ ಸರ್ವಾಧ್ಯಕ್ಷೆಯಾಗಿ ಆಯ್ಕೆ. ಅಭಿನಂದನೆಗೋ

  5. ಆಳ್ವಾಸ್ ನುಡಿ ಸಿರಿಲಿ ಶ್ರದ್ಧನ ಭಾಷಣ ಕೇಳಿದ್ದೆ. ಅದ್ಭುತ ಪ್ರತಿಭೆ. ಎಲ್ಲರ ಹಾರೈಕೆಂದ ಸಾಹಿತ್ಯ ಲೋಕಲ್ಲಿ ದೊಡ್ಡ ಹೆಸರಾಗಲಿ.

  6. ಅದ್ಭುತ . ಈ ಕೂಸಿನ ಭವಿಷ್ಯ ಉಜ್ವಲವಾಗಲಿ .

  7. ಒಪ್ಪಕ್ಕನ ಪ್ರತಿಭೆ ಇನ್ನಷ್ಟು ಬೆಳಗಲಿ . ಶುಭ ಹಾರೈಕೆಗೊ.

  8. ಉತ್ತಮ ಪ್ರತಿಭೆ. ಅಭಿನಂದನೆಗೊ.

  9. ಒಳ್ಳೆ ಪ್ರತಿಭಾನ್ವಿತ ಕೂಸಿಂಗೆ ಅಭಿನಂದನೆಗೊ..
    ಸಣ್ಣ ಪ್ರಾಯಲ್ಲಿಯೇ ಸರಸ್ವತೀ ಅನುಗ್ರಹ ಹೊಂದಿದ ಈ ಕೂಸಿನ ಮುಂದಾಣ ದಿನಂಗ ಉಜ್ವಲ ಆಗಲಿ..

  10. ಶ್ರದ್ಧಾಳ ಬಗ್ಗೆ ಕಳುದ “ಕಾವ್ಯ ಗಾನ ಯಾನ ಕಾರ್ಯಕರ್ಮದ ದಿನ shree ವಿ.ಬಿ. ಕುಳಮರ್ವ ಹೇಳಿತ್ತಿದ್ದವು. “ಸುರತರಂಗಿಣಿ” ಪುಸ್ತಕವನ್ನೂ ಕೊಟ್ಟಿತ್ತಿದ್ದವು. ಆ pustaka ಓದಿ ಮೂಗಿಲಿ ಬೆರಳು ಮಡಗಿದೆ. ಆ ಖಂಡ ಕಾವ್ಯ ಓದಿಯಪ್ಪದ್ದೆ ಶ್ರದ್ಧಾಳ ಅದ್ಭುತ ಪ್ರತಿಭೆಯ ಪರಿಚಯ ಸಿಕ್ಕಿತ್ತು. ಯಕ್ಷಗಾನ ಸಪ್ತಾಹದ ಒಂದು ಆಟ ನೋಡಿ “ಈ ಕತೆಯ ಕಾವ್ಯ ರೂಪಲ್ಲಿ ಬರವಲೆ ಸ್ಫೂರ್ತಿ” ಸಿಕ್ಕಿತ್ತಡ . ಶ್ರದ್ಧಾಳ ಕಾವ್ಯ ಚಾತುರ್ಯದ ಅನುಭವಕ್ಕೆ ಆ ಪುಸ್ತಕದ ಒಂದು ಪ್ರಾರ್ಥನಾ ಪದ್ಯವ ಇಲ್ಲಿ ಹಾಕೆಕ್ಕು ಹೇಳಿ ಅನುಸುತ್ತು.
    ಮನದೊಳಗೆ ಗುರುಭಕ್ತಿ
    ತನುವೊಳಗೆ ಬಲುಶಕ್ತಿ-
    ಯನುದಿನವು ತುಂಬಿರಲು ಗುರುಕರುಣೆಯು |
    ವನದೊಳಡಗಿದ ಹೂವ
    ಕನಸಿನೊಳು ಕಲ್ಪಿಸುತ-
    ಲೆನಗೆ ತಿಳಿದಿಹ ಕಥೆಯ ಬರೆವೆ ನಾನು ||
    ಒಪ್ಪಣ್ಣ ಬೈಲಿಲಿ ಕೂಸಿನ ಪರಿಚಯ ಕೊಟ್ಟದಕ್ಕೆ ವಿಜಯತ್ತೆಗೆ dhanyavaadaMgo
    ಉಜ್ವಲ ಭವಿಷ್ಯವ haaraisi ಶ್ರದ್ಧಾಳಿಂಗೆ ಅಭಿನಂದಿಸುತ್ತೆ.

  11. ಅದ್ಭುತ ಪ್ರತಿಭೆ ! ಭವಿಷ್ಯ ಉಜ್ವಲವಾಗಿ ಬೆಳಗಲಿ. ಕಾವ್ಯ ರಚನೆಲಿ ಇನ್ನೂ ಹೆಚ್ಚಿನ ಯಶ ಸಿಕ್ಕಲಿ .
    ಪ್ರೋತ್ಸಾಹ ಕೊಡುತ್ತಾ ಇಪ್ಪ ಗುರುಗೊಕ್ಕೆ ಹಿರಿಯರಿಂಗೆ ನಮನ ಸಲ್ಲುಸುತ್ತೆ .

  12. ಗಡಿನಾಡಿನ ಪ್ರತಿಭೆ ಬಹುನಾಡಿಲ್ಲಿ ಬೆಳಗಲಿ.ಅಭಿನಂದನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×