ಬೈಲ ಬಾಂಧವರಿಂಗೆ ಲಕ್ಷ್ಮೀಶನ ಕೃತಜ್ಞತೆಗೊ

ಬೈಲಿಂಗೊಂದು ಸಂತೋಷದ ಶುದ್ದಿ.
ಒಂತಿಂಗಳ ಹಿಂದೆ, ನಮ್ಮೂರು-ನಮ್ಮೋರು ಅಂಕಣಲ್ಲಿ, ನಮ್ಮ ಬೈಲಿನ ಹೆಮ್ಮೆಯ ಮಾಣಿ ಲಕ್ಷ್ಮೀಶ ಹೆಗಡೆಯ ಬಗ್ಗೆ ಪರಿಚಯ ಮಾಡಿದವಲ್ಲದೋ- ನಮ್ಮ ಶರ್ಮಪ್ಪಚ್ಚಿ.
(ಶುದ್ದಿ ಸಂಕೊಲೆ: http://oppanna.com/nammooru/lakshmisha-hegad)
ಆ ಮಾಣಿಯ ವಿದ್ಯಾಭ್ಯಾಸಕ್ಕಾಗಿ ಸಂಪತ್ತಿನ ಕ್ರೋಢೀಕರಣಕ್ಕೆ ಸ್ವಂತ ಕೆಲಸದಷ್ಟೇ ಆಸಕ್ತಿಲಿ ಮಾಡಿದ್ದವು ನಮ್ಮ ಶರ್ಮಪ್ಪಚ್ಚಿ.
ಶರ್ಮಪ್ಪಚ್ಚಿಯ ಶ್ರಮ ವ್ಯರ್ಥ ಆಯಿದಿಲ್ಲೆ, ಒಳ್ಳೆಯ ವಿದ್ಯಾನಿಧಿ ಒಟ್ಟಾಯಿದು – ಶರ್ಮಪ್ಪಚ್ಚಿಯ ತಂಡಕ್ಕೆ ಅಭಿನಂದನೆಗೊ.
ಯಥಾಶಕ್ತಿ ಧನಸಹಾಯ ಮಾಡಿದ ಎಲ್ಲೋರಿಂಗೂ, ಲಕ್ಷ್ಮೀಶನ ಅಪ್ಪ, ಶ್ರೀಯುತ ಜಯರಾಮ ಹೆಗಡೆ ಬೈಲಿನ ಮೂಲಕ “ಎಲ್ಲೋರಿಂಗೂ ಕೃತಜ್ಞತೆ” ಹೇಳ್ತಾ ಇದ್ದವು.

ಯೋಗ್ಯ ವಿದ್ಯಾರ್ಥಿಗೆ ಸೂಕ್ತ ಸಕಾಯ ಮಾಡಿದ ಶರ್ಮಪ್ಪಚ್ಚಿಗೆ ಅಭಿನಂದನೆಗೊ.
ಲಕ್ಷ್ಮೀಶನ ಮುಂದಾಣ ವಿದ್ಯಾರ್ಥಿಜೀವನಕ್ಕೆ ಶುಭಾಶಯಂಗೊ.
ಜಯರಾಮಣ್ಣನ ಪ್ರೀತಿಯ ಮಾತುಗೊಕ್ಕೆ ವಂದನೆಗೊ.
~
ಗುರಿಕ್ಕಾರ°


ಹವ್ಯಕ ಬಂಧುಗಳೇ, ಅನಂತ ಪ್ರಣಾಮಗಳು.

ಆನು ಜಯರಾಮ ಹೆಗಡೆ- ಲಕ್ಷ್ಮೀಶ ಹೆಗಡೆಯ ಅಪ್ಪ.
ಆನು ಮೂಲತಃ ಸಾಗರ ತಾಲೂಕಿನವ, ಈಗ ಮೂಡಬಿದ್ರೆ ಹತ್ತಿರ ಮಿಜಾರಲ್ಲಿ ಒಂದು  ಕೃಷಿ ಫಾರಮ್ಮಿಲ್ಲಿ ತಿಂಗಳಿಗೆ 3500 ರೂಪಾಯಿ ಸಂಬಳಕ್ಕೆ ಉಸ್ತುವಾರಿ ಕೆಲಸ ಮಾಡ್ಕ್ಯಂಡು ಇದ್ದಿ.
ಯನ್ನ ಮಗ ಲಕ್ಷ್ಮೀಶ. ಅವ° ಯಂಗಕ್ಕೆ ಹುಟ್ಟಿದ್ದೇ ಬಹು ತಡವಾಗಿ. ಈಗ ಯನಗೆ ಪ್ರಾಯ 64. ತಡವಾಗಿ ಹುಟ್ಟಿದರೂ ಪ್ರತಿಭಾನ್ವಿತನಾಗಿ ಹುಟ್ಟಿದ್ದು ಯಂಗಳ ಸೌಭಾಗ್ಯ.
ಕನ್ನಡ ಮಾಧ್ಯಮಲ್ಲಿ, ಗ್ರಾಮಾಂತರ ಶಾಲೇಲಿ ಕಲ್ತು ಎಸ್.ಎಸ್.ಎಲ್.ಸಿ ಯಲ್ಲಿ 88.6 ಶೇಕಡಾ ಹಾಗೂ ಪಿ.ಯು.ಸಿ.ಯಲ್ಲಿ 92 ಶೇಕಡಾ ಪಿ.ಸಿ.ಎಮ್.ಬಿ. ವಿಭಾಗದಲ್ಲಿ ಪಾಸಾದ.
ತಾನು ಎಂ.ಬಿ.ಬಿ.ಎಸ್ ಓದವು ಹೇಳದು ಅವ್ನ ಆಶೆಯಾಗಿತ್ತು. ಯಂಗೆ ಮಾತ್ರಾ ಒಳಗೊಳಗೇ ದಿಗಿಲು ಆಗ್ತಾ ಇತ್ತು.
ಯನ್ನ ಈ ಅಲ್ಪ ಆದಾಯದಲ್ಲಿ ಅವನ್ನ ಡಾಕ್ಟರ್ ಓದ್ಸದು ಹ್ಯಾಂಗೆ ಹೇಳ ಚಿಂತೇಲಿ ಆನು ಇದ್ದಿದ್ದಿ.

ಚಿ | ಲಕ್ಷ್ಮೀಶ ಹೆಗಡೆ

ಇದೇ ವೇಳೆ ನಡೆದದ್ದು ಒಂದು ಪವಾಡ. ಸುರತ್ಕಲ್ ವಲಯ ಪರಿಷತ್ತಿನ ಶ್ರೀ ಬಾಲಕೃಷ್ಣ ಭಟ್ಟರು ಯಾರ ಮುಖಾಂತರವೋ ಯನ್ನ ಮಗನ ಸುದ್ದಿ ತಿಳ್ಕಂಡು ಒಂದಿನ ಯಮ್ಮನಿಗೆ ಬಂದೇ ಬಿಟ್ಟರು.
ಯನ್ನತ್ರ ಯೆಲ್ಲಾ ವಿವರ ತಿಳ್ಕಂಡು, ನಿಂಗ ಹೆದ್ರಡಿ, ಗುರುಗಳು ಕೈ ಬಿಡ್ತ್ವಿಲ್ಲೆ, ಗುರು ಅನುಗ್ರಹ ಬಂದು ಯೆಲ್ಲಾ ಸುಸೂತ್ರವಾಗಿ ಆಗ್ತು ಅಂತ ಹೇಳಿ ಹೋದ.
ಅನಂತ್ರ ಅವೆಲ್ಲಾ ಶೇರ್ಕ್ಯಂಡು ಯೇನೆಲ್ಲ ಮಾಡ್ವೋ, ಯಾರ್ನೆಲ್ಲಾ ಕಂಡ್ವೋ ದೇವ್ರಿಗೇ ಗೊತ್ತು. ವಲಯ ಕಾರ್ಯದರ್ಶಿ ಶ್ರೀ ಕೃಷ್ಣ ಶರ್ಮ, ಹವ್ಯಕ ಒಪ್ಪಣ್ಣ ವೆಬ್ ಸೈಟಿನಲ್ಲಿ ಒಂದು ಪ್ರಕಟನೆ ಕೊಟ್ಟು ಯನ್ನ ಮಗನ ವಿವರ ನೀಡಿದರು.
ಅದಕ್ಕೆ ಬಂದ ಪ್ರತಿಕ್ರಿಯೆ ನೋಡಿ ಯಂಗ ಯೆಲ್ಲಾ ದಂಗಾಗಿ ಹೋದ್ಯ.

ಮನಸ್ಸು ಪೂರಾ ತುಂಬಿದಾಗ ಮಾತು ಹೊರಡ್ತಿಲ್ಲ್ಯಡ. ಈಗ ಯನ್ನ ಕತೆಯೂ ಹಾಂಗೇ ಆತು.
ಯಾರು ಯಾರೋ, ಎಲ್ಲೆಲ್ಲಿಯವೋ, ಯಂತದೋ, ಯನಗೆ ಒಬ್ರ ಗುರ್ತವೂ ಇಲ್ಲೆ. ದೂರದ ಅಮೇರಿಕಾ, ಕಡಲಾಚೆಯ ದುಬೈ ಎಲ್ಲೆಲ್ಲಿಂದಲೋ ಹವ್ಯಕ ಬಂಧುಗಳ ನೆರವೇ ಹರಿದು ಬಂತು.
ಯನ್ನ ಮಗನ್ನ ತಮ್ಮ ಮಗ ಹೇಳ ಅಭಿಮಾನದಿಂದ ಎಲ್ರೂ ಕೈ ಹಿಡಿದೆತ್ತಿ ನಡೆಸಿದ್ದ. ಈ ಎಲ್ಲರ ಸದಾಶಯದ ನೆರವಿನಿಂದ ಅವಂಗೆ ಅವನಾಶೆ ಪೂರೈಸುವ ಯೋಗ ಕೂಡಿ ಬಂತು.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕೂ ಆತು. ಪ್ರವೇಶ ಧನ ಕಟ್ಟಿಯೂ ಆತು. ಇದೆಲ್ಲ ಎರಡೆರಡು ಜನ ಕೃಷ್ಣರಿಂದ ನಡೆದ ಪವಾಡ ಹೇಳಿ ಆನು ತಿಳ್ಕಳಕ್ಕೋ, ಅಥವಾ ಬಾಲಕೃಷ್ಣ ಭಟ್ಟರು ಹೇಳಿದ ಹಾಂಗೆ ಗುರುಗಳೆ ಹೀಂಗೆ  ಕೃಷ್ಣ ಸ್ವರೂಪಿಗಳಿಂದ ನೆರವಿನ ಆಶೀರ್ವಾದ ಮಾಡಿದ್ದ ಹೇಳಿ ತಿಳ್ಕಳೆಕ್ಕೋ ಹೇಳಿ ತಿಳಿತಿಲ್ಲೆ.

ಅಂತೂ ಗುರು ಸನ್ನಿಧಾನದ ಶ್ರೀ ಚರಣಕ್ಕೆ ಇಲ್ಲಿಂದಲೆ ಸಾಷ್ಟಾಂಗ ನಮಸ್ಕಾರ ಮಾಡಿ ಈ ತನಕ ನೆರವಿತ್ತ ಎಲ್ಲಾ ಹವ್ಯಕ ಬಂಧುಗಳಿಗೆ ಈ ಮೂಲಕ ಧನ್ಯವಾದ ಹೇಳ್ತಿ.
ವೈಯ್ಯಕ್ತಿಕವಾಗಿ ಪ್ರತಿಯೊಬ್ಬರನ್ನೂ ಭೇಟಿ ಮಾಡಲೆ ಕಷ್ಟ, ಅದಕ್ಕಾಗಿ ಈ ವೆಬ್ ಮೂಲಕವೇ ಅವರ ಉಪಕಾರಕ್ಕೆ ಧನ್ಯವಾದ ಹೇಳ್ತಿ. ಇದಕ್ಕಾಗಿ ಯಾರೂ ಅನ್ಯಥಾ ಭಾವಿಸಲಾಗ.

ಯನ್ನ ಮಗ ಬದುಕಿನುದ್ದಕ್ಕೂ ಇದನ್ನ ನೆನಪಲ್ಲಿ ಇಟ್ಗಳಕ್ಕು, ಮುಂದೆ ಅವನೂ ಹೀಂಗೇ ಸಮಾಜದಿಂದ ಪಡೆದಿದ್ದನ್ನು ಪ್ರತಿಯಾಗಿ ಸಮಾಜಕ್ಕೇ ಆ ಕಾಲಕ್ಕೆ ಅಗತ್ಯವಾದ ಸಮಯದಲ್ಲಿ ನೆರವೀಯೆಕ್ಕು ಹೇಳಿ ಯನ್ನ ಆಶೆ.
ಅದನ್ನ ಅವ್ನೂ ನೆನಪಿನಲಿಟ್ಗತ್ತ ಹೇಳಿ ಯನ್ನ ವಿಶ್ವಾಸ.

ಮತ್ತೊಮ್ಮೆ ಎಲ್ಲರನ್ನೂ ನೆನಪಿಸ್ಗ್ಯತ್ತಿ.

ನಿಂಗಳ ಬಂಧು,
ಜಯರಾಮ ಹೆಗಡೆ

ಯನ್ನ ವಿಳಾಸ:
“ಚಿತ್ರ ಭಾನು”, ಮಿಜಾರು,
ಮಂಗಳೂರು ತಾಲೂಕು – 574225
ದೂರವಾಣಿ: 9845668639

~*~*~*~

ಸೂ:

ಶರ್ಮಪ್ಪಚ್ಚಿ

   

You may also like...

9 Responses

 1. ತೆಕ್ಕುಂಜ ಕುಮಾರ says:

  { ಮುಂದೆ ಅವನೂ ಹೀಂಗೇ ಸಮಾಜದಿಂದ ಪಡೆದಿದ್ದನ್ನು ಪ್ರತಿಯಾಗಿ ಸಮಾಜಕ್ಕೇ ಆ ಕಾಲಕ್ಕೆ ಅಗತ್ಯವಾದ ಸಮಯದಲ್ಲಿ ನೆರವೀಯೆಕ್ಕು ಹೇಳಿ ಯನ್ನ ಆಶೆ.}
  ನಿಂಗಳ ಆಶೆ ಈಡೆರುಸುವ ಶಕ್ತಿಯ ಶ್ರೀ ಗುರುಗೊ, ಆ ಭಗವಂತ ಕರುಣಿಸುಗು ಹೇಳುವ ಭರವಸೆ ಇದ್ದು.

 2. ರಘು ಮುಳಿಯ says:

  ಲಕ್ಶ್ಮೀಶ೦ಗೆ ಶುಭಾಶಯ೦ಗೊ.
  ಸಮಾಜದ ಬ೦ಧುಗೊ ಒಟ್ಟು ಸೇರಿರೆ ಸಮಸ್ಯೆ ಸುಲಾಭಲ್ಲಿ ಪರಿಹಾರ ಕ೦ಡುಗೊ೦ಬಲೆ ಸಾಧ್ಯ ಇದ್ದು ಹೇಳ್ತದಕ್ಕೆ ಇದು ಉದಾಹರಣೆ.
  “ಕೆರೆಯ ನೀರನು ಕೆರೆಗೆ ಚೆಲ್ಲಿ” ಹೇಳ್ತ ಮನೋಭಾವವ ಬೆಳೆಶಿಗೊ೦ಡು ಸಮಾಜ೦ದ ಪಡದ್ದದರ ಸಮಾಜಕ್ಕೆ ಅರ್ಪಿಸುವ ಮನೋಭಾವವ ಬೆಳೆಶಿಗೊ೦ಡು ಮುನ್ನಡೆವ ಶಕ್ತಿಯ ದೇವರು ಮು೦ದೆಯೂ ಕರುಣಿಸಲಿ.
  ಜಯರಾಮ ಹೆಗಡೆಯವರ ಮಾತುಗಳ ಕೇಳಿ ಎ೦ಗಳ ಮನಸ್ಸೂ ತು೦ಬಿತ್ತು.ಶುಭವಾಗಲಿ.

 3. ಚೆನ್ನೈ ಭಾವ says:

  ನಿಂಗಳ ಕೃತಜ್ಞತೆ ಓದಿ ಹೃದಯ ತುಂಬಿತ್ತು . ಹನಿ ಹನಿ ಕೂಡಿ ಹಳ್ಳ ಹೇಳುತ್ತಾಂಗೆ ಬೈಲಿನ ಬಂಧುಗೊ ಪ್ರತಿಭೆಯ ಗುರುತಿಸಿ ತಮ್ಮ ಒಂದು ಹನಿಯ ನೀಡಿ ಪ್ರೋತ್ಸಾಹಿಸಿದ್ದವು . ಸಮಸ್ತರಿಂಗೂ ಬೈಲು ಧನ್ಯವಾದ ಹೇಳುತ್ತು. ಶರ್ಮಪ್ಪಚ್ಚಿಯ ಪ್ರಯತ್ನ ಬಹು ಶ್ಲಾಘನೀಯ.
  ಲಕ್ಶ್ಮೀಶ೦ಗೆ ಶುಭಾಶಯ೦ಗೊ. ಶ್ರೀ ಗುರುದೇವತಾ ಮತ್ತು ಹಿರಿಯರ ಅನುಗ್ರಹಂದ ಲಕ್ಷ್ಮೀಶ ಯಶಸ್ವಿಯಾಗಿ ವಿದ್ಯಾಭ್ಯಾಸ ಮುಗಿಸಿ ಈ ನೆನಪ ಸದಾ ಇರಿಸಿ ಮುಂದೆ ಅವನಿಂದ ಸಮಾಜಕ್ಕೆ ಉತ್ತಮ ಸೇವೆ ಮತ್ತು ಸಮಾಜದ ಬಡವರ್ಗ ಮತ್ತು ಅಸಹಾಯಕ ವರ್ಗದ ಮೇಲೆ ವಿಶೇಷ ಕಾಳಜಿ ದಯಾ ಸೇವೆ ಇರುವಂತಾಗಲಿ ಹೇಳಿ ಬೈಲ ಬಂಧುಗಳ ಪರವಾಗಿ ಆಶಿಸುತ್ತು.

 4. ಬೊಳುಂಬು ಮಾವ says:

  ಸುರತ್ಕಲ್ ವಲಯದವು , ಹಾಂಗೆ ವಲಯದ ಕಾರ್ಯದರ್ಶಿ ಶರ್ಮಪ್ಪಚ್ಚಿಯ ಶ್ರಮ ಸಾರ್ಥಕ ಆದ್ದು , ಲಕ್ಸ್ಮೀಶ ಮೆಡಿಕಲ್ ಕಾಲೇಜಿಂಗೆ ಸೇರಿದ್ದು ಕೇಳಿ ಕೊಶಿ ಆತು. ಅಭಿನಂದನೆಗೊ. ಶರ್ಮಪ್ಪಚ್ಚಿಯ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ. ಮಾಣಿಗೆ ಶುಭ ಹಾರೈಕೆಗೊ.

 5. ಶುಭಾಶಯಂಗೊ ಲಕ್ಷ್ಮೀಶಣ್ಣ…
  ಖುಶಿಯಾತು ಕೇಳಿ…

 6. ಗಣೇಶ says:

  ದೇವರು ಒಳ್ಳೇದು ಮಾಡ್ಲಿ.
  ಚೆ೦ದಕೆ ಕಲ್ತು ಸಮಾಜಕ್ಕೆ ಮಾದರಿಯಾಗಿ ಬದುಕುವ ಹಾ೦ಗೆ ಆಗಲಿ.
  ಶುಭಾಶಯ೦ಗೊ.

 7. ಕೆ.ಜಿ.ಭಟ್ says:

  ಒೞೆದಾಗಿಕಲ್ತು ಸಮಾಜಕ್ಕೆ ಅಪ್ಪ ಅಮ್ಮಂಗೆ ಹೆಮ್ಮೆ ತರಲಿ.ಆಶೀರ್ವಾದಂಗಳೊಟ್ಟಿಂಗೆ…………

 8. ಬೈಲಿಂದಾಗಿ ಲಕ್ಷ್ಮೀಶನ ಬಾಳು ಬೆಳಗಿದ್ದು ಕೇಳಿ ಖುಶೀ ಆತು. ಶರ್ಮಪ್ಪಚ್ಚಿಯ ಈ ಹೃದಯಶ್ರೀಮಂತಿಕೆ ಸದಾ ಸ್ಮರಣೀಯ.
  ಲಕ್ಷ್ಮೀಶ ಚೆಂದಕ್ಕೆ ಕಲ್ತು ಬೈಲಿಂಗೆ ಇನ್ನೊಬ್ಬ ಡಾಗುಟ್ರಾಗಲಿ ಹೇಳಿ ಹಾರೈಕೆ.

 9. ಬೆಟ್ಟುಕಜೆ ಮಾಣಿ says:

  ಶುಭವಾಗಲಿ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *