ಮರೆಯಾ(ಯ)ದ ‘ಮಹಾಜನ’ ಶ್ರೀ ಖಂಡಿಗೆ ಶಾಮ ಭಟ್

ಖಂಡಿಗೆ ಅಜ್ಜನ ನಿಧನವಾರ್ತೆ ಬೈಲಿಲಿ ಬಂದಪ್ಪದ್ದೇ, ನಮ್ಮ ದೊಡ್ಡಬಾವ° ಅವಕ್ಕೆ ನುಡಿನಮನ ಬರದು ಕಳುಗಿದವು.
ಬೈಲಿನ ಶ್ರೀಅಕ್ಕ° ಅದರ ನಮ್ಮ ಬೈಲಿಂಗೆ ಅಪ್ಪಹಾಂಗೆ ಮಾಡಿ ಕೊಟ್ಟವು.
ಅಜ್ಜನ ದಿನದ ಲೆಕ್ಕಲ್ಲಿ ಈ ವಿಶೇಷ ಶುದ್ದಿ..

ಶ್ರೀ ಖಂಡಿಗೆ ಶಾಮ ಭಟ್ ರ ಅರಡಿಗಲ್ಲದ ಎಲ್ಲರಿಂಗೆ? ‘ಖಂಡಿಗೆಪ್ರಿನ್ಸಿಪಾಲ್ರು’ ಹೇಳಿಯೇ ಎಲ್ಲರಿಂಗೆ ಗೊಂತಿಪ್ಪದು. ನಮ್ಮ ದೊಡ್ಡ ಭಾವ° ಬರವ ಸಣ್ಣ ಮಕ್ಕಳ ಬ್ಲಾಗ್ http://mschsnirchal.blogspot.com ಲಿ ಇವರ ಪಟವ ನೋಡಿಯೇ ನೋಡಿಪ್ಪಿ. ಇಂದು ಉದೆ ಉದೆ ಕಾಲಕ್ಕೆ ಬಂದ ಬೇಜಾರಾದ ಶುದ್ದಿ. ಇಡೀ ಜೀವನವ ಗಂಧದ ಹಾಂಗೆ ತೇದ ಜೀವ ತನ್ನ ಬದುಕಿನ ಸಾರ್ಥಕ್ಯವ ಮುಗಿಶಿ ತೊಂಬತ್ತಎರಡರ ಪೂರ್ಣ ಬದುಕಿಂಗೆ ವಿರಾಮ ಹೇಳಿ ಶಾಶ್ವತ ಒರಕ್ಕು ಒರಗಿದವು ಹೇಳಿ!! ಕಾಸರಗೋಡಿನ ಕನ್ನಡ ಹೋರಾಟಗಾರರೂ, ಸಂಸ್ಕೃತ ವಿದ್ವಾಂಸರೂ, ಜ್ಞಾನ ವೃದ್ಧರೂ, ವಯೋವೃದ್ಧರೂ, ಅಪಾರ ಜನಮನ್ನಣೆ ಗಳಿಸಿದ ಶ್ರೀ ಖಂಡಿಗೆ ಶಾಮ ಭಟ್ 14.12. 2011 ರ ದಿನ ಈ ಭೌತಿಕ ಪ್ರಪಂಚವ ಬಿಟ್ಟು ಆಕಾಶದ ಅವಕಾಶಲ್ಲಿ, ಪಂಚ ಭೂತಂಗಳಲ್ಲಿ ಒಂದಾಯಿದವು.

ನೀರ್ಚಾಲು ಹೇಳಿದರೆ ಖಂಡಿಗೆ ನೆಂಪಪ್ಪ ಹಾಂಗೆ ಮಹಾಜನ ಶಾಲೆ ಹೇಳಿದರೆ ಪ್ರಿನ್ಸಿಪಾಲ್ ರ ನೆಂಪಾಗದ್ದೆ ಇರ. ಮಹಾಜನ ಶಾಲೆ ಹೇಳಿದರೆ ಸರ್ವ ರೋಗ ಪರಿಹಾರದ ಶತಾಯುಷಿ ಕಹಿಬೇವಿನ ಮರ ನೆಂಪಾದರೆ ಶಾಲೆಯ ಒಟ್ಟಿಂಗೆ ಸರ್ವ ಮನ ಮುದಕರ, ಮಧುರ ನುಡಿಯ ಹಿರಿಯ ಜೀವ ಶಾಮ ಭಟ್ರ ನೆಂಪಾಗದ್ದೆ ಇರ. ನೀರ್ಚಾಲಿನ ಮಹಾಜನತೆಗೆ ಉಪಯೋಗ ಆದ ಮಹಾಜನ ಶಾಲೆಯ ಸದ್ಧೃಢತೆಗೆ ಕಾರಣಕರ್ತರಲ್ಲಿ ಒಬ್ಬರಾಗಿ ತಮ್ಮ ಅಕೇರಿಯಾಣ ದಿನಂಗಳಲ್ಲಿಯೂ ಕೂಡ ಶಾಲೆಯ ಬಗ್ಗೆ ಆಸ್ಥೆ ಮಡಗಿ ಶಾಲೆಯ ಎಲ್ಲಾ ರೀತಿಯ ಬೆಳವಣಿಗೆಗೆ ಕಾರಣ ಆದ ಮಹಾನುಭಾವರು. ಈಗಾಣ ಕಂಪ್ಯೂಟರ್ ಯುಗಕ್ಕೆ ತಕ್ಕ ಹಾಂಗೆ ಮಹಾಜನ ಶಾಲೆಯ ಮಕ್ಕೊಗೂ ಅಂತರ್ಜಾಲದ ಮೂಲಕ ಪ್ರಪಂಚದ ಕಿಟಿಕಿ ತೆಗವಲೆ ಬೀಗ ತೆಗದೋರು. ಈ ಮೂಲಕ ಮೊತ್ತ ಮೊದಲ ಮಕ್ಕಳ ಬ್ಲಾಗ್ ಹೊಂದಿದ ಶಾಲೆ ಹೇಳ್ತ ಕೀರ್ತಿಯ ಶಾಶ್ವತ ಮಾಡಿಗೊಂಡತ್ತು ಮಹಾಜನ ಶಾಲೆ.
1919 ಸೆಪ್ಟೆಂಬರ್ 28 ರ ಶುಭ ದಿನ ಖಂಡಿಗೆ ಮಹಾಲಿಂಗ ಭಟ್ ಮತ್ತೆ ಶಂಕರಿ ದಂಪತಿಗಳ ಪುತ್ರ ಆಗಿ ಹುಟ್ಟಿದ ಖಂಡಿಗೆ ಶಾಮ ಭಟ್ ತಮ್ಮ ಮನೆ, ಮನೆತನ ಮಾಂತ್ರ ಅಲ್ಲ ಇಡೀ ಸಮಾಜಕ್ಕೆ ಹೆಸರು ತಯಿಂದವು. ಪೆರಡಾಲ ಮಹಾಜನ ಸಂಸ್ಕೃತ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗಲ್ಲಿ ಪ್ರಾಥಮಿಕ ಕನ್ನಡ ಸಂಸ್ಕೃತ ಶಿಕ್ಷಣ ಮಾಡಿ ಮತ್ತೆ ಹೈಸ್ಕೂಲ್ ನ ಮಂಗ್ಳೂರಿಲಿ ಕೆನರಾ ಹೈಸ್ಕೂಲ್ ಮಾಡಿ, ಮಂಗ್ಳೂರಿನ ಸರ್ಕಾರೀ ಕಾಲೇಜಿಲಿ ಇಂಟರ್ ಮೀಡಿಯೇಟ್ ಮತ್ತೆ ಮದ್ರಾಸು ಪ್ರೆಸಿಡೆನ್ಸಿ ಕಾಲೇಜಿಲಿ ಸಂಸ್ಕೃತ ಎಂ ಎ ತೆಕ್ಕೊಂಡು ಪ್ರೈವೇಟ್ ಆಗಿ ಅಧ್ಯಯನ ಮಾಡಿ ಕನ್ನಡ ಎಂ ಎ ಸ್ನಾತಕೋತ್ತರ ಪದವಿಯ ಪಡಕ್ಕೊಂಡವು.
ಮಹಾಜನ ಸಂಸ್ಕೃತ ಕಾಲೇಜಿಲಿ ಕಲಿಶುಲೆ ಸುರು ಮಾಡಿ ಮತ್ತೆ ಪ್ರಿನ್ಸಿಪಾಲ್ ಆಗಿ ಶಾಲೆಯ, ಮಕ್ಕಳ ಬೆಳವಣಿಗೆಗೆ ಕಾರಣ ಆದವು. ಇವು ಕಲ್ಲೀಕೋಟೆಯ ವಿಶ್ವ ವಿದ್ಯಾನಿಲಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಲಿ ಸದಸ್ಯರಾಗಿ, ಕೇರಳ ವಿಶ್ವ ವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಫ್ಯಾಕಲ್ಟಿ ಆಫ್ ಓರಿಯೆಂಟಲ್ ಸ್ಟಡೀಸ್ ನ ಸದಸ್ಯರಾಗಿ, ಸಂಸ್ಕೃತ ವಿದ್ಯಾಭ್ಯಾಸ ಸಮಿತಿಯ ಸದಸ್ಯರಾಗಿ, ಕನ್ನಡ ಪಠ್ಯ ಪುಸ್ತಕ ತಯಾರಿಕೆಗೆ ನಿಯಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ, ಕಾಸರಗೋಡು ಕರ್ನಾಟಕ ಸಮಿತಿಯ ಅಧ್ಯಕ್ಷರಾಗಿ, ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಸಂಸ್ಥೆಯ ಆಡಳಿತ ಮಂಡಳಿ ಯ ನಿರ್ದೇಶಕರಾಗಿ, ಪೆರಡಾಲ ಸೇವಾ ಸಹಕಾರೀ ಬ್ಯಾಂಕ್ ಮತ್ತೆ ಕಾಸರಗೋಡು ಕೃಷಿಕರ ಸಹಕಾರೀ ಮಾರಾಟ ಸಂಘದ ಅಧ್ಯಕ್ಷರಾಗಿ, ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷರಾಗಿ, ಶಾಲಾ ವ್ಯವಸ್ಥಾಪಕರಾಗಿ ಹಲವಾರು ಸಂಘ ಸಂಸ್ಥೇಲಿ ತೊಡಗಿಸಿಗೊಂಡು ಎಲ್ಲಾ ಕ್ಷೇತ್ರದ ಉದ್ಧಾರಕ್ಕೆ ಶ್ರಮಿಸಿದ್ದವು. 1946 ರಿಂದ 1966 ರ ವರೆಗೆ ಮಹಾಜನ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದವು. 27-8-1973 ರಿಂದ 26-01-2011 ರ ವರೆಗೆ ನೀರ್ಚಾಲಿನ ಮಹಾಜನ ಸಂಸ್ಕೃತ ಪ್ರೌಢ ಶಾಲೆ ಮತ್ತೆ ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿ ಸುದೀರ್ಘ ಕೆಲಸ ಮಾಡಿದ್ದವು.

ಖಂಡಿಗೆ ಮನೆತನಲ್ಲಿಯೂ ಸರ್ವ ಮಾನ್ಯರಾದ ಖಂಡಿಗೆ ಶಾಮ ಭಟ್ ರಿಂಗೆ ಒಳ್ಳೆಯ ಸಂತಾನ ಭಾಗ್ಯವೂ ದೇವರು ಕರುಣಿಸಿದ್ದವು. ಮಗಂದ್ರು ಡಾ. ಸುಬ್ರಹ್ಮಣ್ಯ ಭಟ್, ಡಾ. ಪತಂಜಲಿ, ರಾಮಚಂದ್ರ ಭಟ್, ಡಾ. ಕೃಷ್ಣರಾಜ, ಜಯದೇವ ಖಂಡಿಗೆ, ಡಾ. ಗಣೇಶ. ಮಗಳಕ್ಕೋ ಶಂಕರಿ, ಸುಧಾ, ಪ್ರಭಾ ಮತ್ತೆ ಮಾಯಾ. ಈ ಎಲ್ಲಾ ಮಕ್ಕೊಗೆ ಅಬ್ಬೆಯ ಕಳಕ್ಕೊಂಡು ವರ್ಷವೂ ಪೂರ್ತಿ ಆಗದ್ದೆ , ಆ ಬೇನೆ ಮಾಸುವ ಮೊದಲೇ ಅಪ್ಪನನ್ನೂ ಕಳಕೊಳ್ಳೆಕ್ಕಾಗಿ ಬಂದದು ವಿಧಿನಿಯಮ ಅಲ್ಲದ್ದೆ ಮತ್ತೆಂತದೂ ಅಲ್ಲ.
ಖಂಡಿಗೆ ಕುಟುಂಬಕ್ಕೆ ಈ ದುಃಖವ ಸಹಿಸಿಗೊಂಬ ಶಕ್ತಿಯ ದೇವರು ಕೊಡಲಿ.
ಎಲ್ಲಾ ಮಕ್ಕಳೂ, ಪುಳ್ಳಿಯಕ್ಕಳೂ ಸಮಾಜಕ್ಕೆ ಹಿತವಾಗಿ ನಡದು ಅಪ್ಪನ, ಅಜ್ಜನ ಕೀರ್ತಿಯ ಶಾಶ್ವತ ಮಾಡುವ ಹಾಂಗೆ ಆಗಲಿ..
ಬೈಲಿನ ವತಿಂದ ವಿದ್ಯಾದಾನಿಯೂ, ವಿದ್ಯಾಪೋಷಕರೂ, ಸರ್ವಜನ ಪ್ರಿಯರೂ ಆಗಿ ಬೆಳಗಿ ಬಾಳಿದ ಶ್ರೀ ಖಂಡಿಗೆ ಶಾಮ ಭಟ್ ರ ಆತ್ಮಕ್ಕೆ ಚಿರಶಾಂತಿ ಕೊರ್ತಾ ಇದ್ದೆಯಾ°.

ದೊಡ್ಡಭಾವ

   

You may also like...

21 Responses

  1. Rajagopala says:

    ಕಾಸರಗೋಡು ಪ್ರದೇಶಲ್ಲಿ “ಪ್ರಾತಃಸ್ಮರಣೀಯ” ವ್ಯಕ್ತಿಗಳಲ್ಲಿ ಒಬ್ಬ ಎಂಗಳ ‘ ಖಂಡಿಗೆ ಅಜ್ಜ, ಹವ್ಯಕ ಸಮಾಜದ ಹೆಮ್ಮೆ ಇವು. ಹಿರಿಯರಾದ ಇವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *