ಮಲೆನಾಡು ಗಿಡ್ಡ

ಭಾರೀ ವಿಶಿಷ್ಟ ದನದ ಜಾತಿ ಹೇಳ್ರೆ ’ಮಲೆನಾಡು ಗಿಡ್ಡ’. ನೋಡ್ಲೆ ಕುಂಞ ಉಂಬೆ, ಆದರೆ ಅದು ಭಾರೀ ಶಕ್ತಿ ಹೇಳ್ರೆ ಹೆಚ್ಚಾಗ. ಹೆಚ್ಚಾಗಿ ಅವು ಕಪ್ಪು, ಕೆಂಚು, ರಜ ಬೆಳಿ, ಕಂದು ಬಣ್ಣದ ಉಂಬೆಗಳೇ ಜಾಸ್ತಿ ಇಪ್ಪೊದು. ಉದಿಯಪ್ಪಗ ಕೆದೆಂದಹೆರ ಹೋದರೆ ಬೈಲಿ, ಗುಡ್ಡೆ ಎಲ್ಲ ತಿರಿಗಿಕ್ಕಿ, ಬಚ್ಚಿದರೆ ಅಲ್ಲೆ ನೆರಳಿಲಿ ಮನಿಗಿಕ್ಕಿ ಹೊತ್ತೋಪಗ ಪುನ: ಕೆದೆಗೆ ಬತ್ತವು. ಆಯುರ್ವೇದ ಪ್ರಕಾರ ಈ ದನಗಳ ಹಾಲು ಭಾರೀ ಒಳ್ಳೇದು ಹೇಳ್ತು.

ಅದಲ್ಲಿಯುದೆ ಕಪ್ಪುಲ್ಚಿ (ಕಪಿಲೆ ವರ್ಣ) ಉಂಬೆಹೇಳಿ ಇದ್ದು. ಇದರದ್ದು ಅತ್ಯಂತ ಸಾಧು ಸ್ವಭಾವ. ಮನುಷ್ಯರ ಮಾನ್ತಿನ ಹಾಂಗೆ ಅರ್ಥ ಮಾಡಿಗೊಂಬ ಉಂಬೆ ಇದು. ಪೂರ್ತಿ ಶರೀರ ಕಪಿಲೆ ವರ್ಣ (ಅರಷಿನ + ಕೆಂಪು ಸೇರಿರೆ ಅಪ್ಪ ಬಣ್ಣ), ಬೀಲದ ಕೊಡಿ ಬೆಳಿ, ನಾಲ್ಕೂ ಪಾದಂಗಳ ಬುಡ ಬೆಳಿ ಬಣ್ಣ, ಸಣ್ಣ ಕೊಂಬು ಇದರ ವಿಶೇಷತೆ. ಇದರ ಹಾಲು, ಗೋಮೂತ್ರ, ಗೋಮಯ ಎಲ್ಲವುದೇ ಮದ್ದಿಂಗೆ ಭಾರೀ ಒಳ್ಳೇದು ಹೇಳಿ ಚರಕ/ಶುಶ್ರುತ ಸಂಹಿತೆಲಿ ಹೇಳಿದ್ದು.

ತರವಾಡು: ಮಲೆನಾಡು ಸೀಮೆ  – ಮಂಗಳೂರು ಹೋಬಳಿ, ಸಾಗರ ಹೋಬಳಿ, ಕುಮಟಾ ಹೋಬಳಿ
ವಿಭಾಗ: ಕೆಲಸಕ್ಕಾರ ತಳಿ. ನೋಡ್ಲೆ ಸಣ್ಣ, ತುಂಬಾ ರೋಗ ನಿರೋಧಕ ಶಕ್ತಿ ಇಪ್ಪವು. ಕಮ್ಮಿ ತಿಂದು ಜಾಸ್ತಿ ಪೌಷ್ಟಿಕಾಂಶಯುಕ್ತ ಹಾಲು ಕೊಡ್ತವು. ಹಾಲು ಮಾತ್ರ ಕುಡ್ತೆ ಲೆಕ್ಕಲ್ಲಿ ಸಿಕ್ಕುಗಷ್ಟೆ. ವಿಶೇಷ ಸುದ್ದಿ ಎಂತರ ಹೇಳಿರೇ ನಮ್ಮ ಗುರುಗ ಪೂಜೆ ಮಾಡುವಾಗ  ಈ ದನದ ಹಾಲನ್ನೇ ಹೆಚ್ಚಾಗಿ ನೈವೇದ್ಯಕ್ಕೆ ಉಪಯೋಗಿಸುದು.
ಬಣ್ಣ: ಕಪ್ಪುಲ್ಚಿ, ಕೆಂಪು, ಕಂದು, ಬೆಳಿ, ಕಪ್ಪು
ಮೋರೆ: ಸಪೂರ ಆಗಿ ಉದ್ದ
ಕೊಂಬು: ಕುಂಞಿ
ಬೀಲ: ಉದ್ದ.

ಕೆಲ ವರ್ಷಂಗಳ ಮೊದಲು ಹೊಸನಗರ ಮಠಲ್ಲಿ ಗುರುಗೊ ಇಪ್ಪಗ ಶಿರಂಕಲ್ಲು ಈಶ್ವರ ಭಟ್ರು (ಗೊಂತಿದ್ದನ್ನೇ ನಮ್ಮ ಸಮಾಜದ ಶ್ರೇಷ್ಠ ಲೇಖಕರು) ಬಂದಿತ್ತಿದ್ದವು. ಅಂವು ಗುರುಗಳ ಹತ್ತರೆ “ಎನಗೆ ಈಗ ಬರವಲೇ ಎಡ್ತಿಲ್ಲೆ, ಸಂಸ್ಥಾನ ಎಂತ ಮಾಡೋದು ಹೇಳಿ ಕಾಣ್ತಿಲ್ಲೆ” ಹೇಳಿದವು. ಆವಾಗ ಗುರುಗೊ “ಅದಾ ಆ ಕಪ್ಪುಲ್ಚಿ ದನದ ಕೆಮಿಲಿ ಹೇಳಿ ಎಲ್ಲ ಸರಿ ಆವುತ್ತು” ಹೇಳಿದವು. ಹಾಂಗೆ ಶಿರಂಕಲ್ಲು ಅಜ್ಜ ಅದರ ಕೆಮಿಲಿ ಹೇಳಿದವು. ಆವಾಗ ಕಪ್ಪುಲ್ಚಿ ದನ ತಲೆ ಅಲ್ಲಾಡಿಸಿತ್ತು ಅಷ್ಟೆ. ಮತ್ತೆ ಗುರುಗಳತ್ರ ಮಂತ್ರಾಕ್ಷತೆ ತೆಕ್ಕೊಂಡು ಊರಿಂಗೆ ಹೋದವು. ಮರುದಿನ ಅವು ಊರಿಂದ ದೂರವಾಣಿ ಕರೆ ಮಾಡಿ “ಈಗ ಆರಾಮಲ್ಲಿ ಬರೆತ್ತ ಇದ್ದೆ” ಹೇಳಿ ಹೇಳಿದವು.

ಹೇಳ್ರೆ ನಾವು ಹೇಳಿದ್ದರ ಅರ್ಥ ಮಾಡ್ಯೋಂಡು, ನವಗೆ ಆಶೀರ್ವದಿಸುವ ಸಾಮರ್ಥ್ಯ ಆ ಕಪ್ಪುಲ್ಚಿ ಉಂಬೆಗೆ ಇದ್ದು ಹೇಳಿ ಆತಿಲ್ಲೆಯಾ,

ಸೂ.: ಮುಂದಿನ ಸಂಚಿಕೆಲಿ ಮಲೆನಾಡು ಗಿಡ್ಡ ತಳಿಯ ವೈಜ್ಞಾನಿಕ ವಿಶೇಷಂಗ

ಗೋ ಸೇವಕ

9449595227

ಮೋಂತಿಮಾರು ಮಾವ°

   

You may also like...

8 Responses

 1. ಒಳ್ಳೆ ಮಾಹಿತಿ ಮಾವ○.. ಹೀಂಗೆ ಬರತ್ತಾ ಇರಿ

 2. Raamajja says:

  baari laayka ayidu baraddu. engala javvanattigeya kaalalli e yocane madiddille. iga gontavuttu. avaagale rakshane madekkittu heli. engalalliyu ondu maledu gidda ittiddu. bare papaddu. guddege hogi tindondu bakku. 2 kudte halu kodugu.

 3. ಅದ್ಕತ್ತಿಮಾರು ಮಾವ... says:

  ಎಂಗ ಸಣ್ಣ ಆದಿಪ್ಪಗ ಇಪ್ಪತ್ತರ ಮೇಲೆ ದನಗ ಇಕ್ಕು ಅವು ಗುಡ್ದೆ ಗೆ ಹೋಗಿ ಬಪ್ಪದು ನೋಡುದೇ ಚೆಂದ….ಪದವಿಲಿ ಮೇವಗ ದನ ಗಳ ಹಿಂಡು ನೋಡಿ ಅದು ಇಂತ ಮನೆಯೊರದ್ದು…ಇದು ಇಂತ ಮನೆಯೊರದ್ದು ಹೇಳಿ ಗುರ್ತ ಹಿಡಿಗು…..ಈಗ ನೆನಪು ಮಾಂತ್ರ….ಪಾಪ ಅವರ ಕೆದೆಲಿ ಕಟ್ತಿ ಯೆ ಸಾಂಕೆಕ್ಕನ್ನೆ…..

 4. ಎಂತ ಮಾಡುದು ಮಾವ°? ಹಿಂದಾಣ ಕಾಲಲ್ಲಿ ಕಾಡಿಲ್ಲಿ ಹುಲಿಗೊ ಇತ್ತಿದ್ದವು. ಈಗ ನಾಡಿಲ್ಲಿ ಬೆಳಿ ಹುಲಿಗಳ ಸಂಖ್ಯೆ ಜಾಸ್ತಿ ಆವುತ್ತಾ ಇದ್ದು. ತಲೆಗೆ ಬೆಳಿ ಟೊಪ್ಪಿ ಮಡುಗ್ಯೊಂಡು ಹಗಲು ಎಂತಾರು ಹೆಳೆ ಹಿಡ್ಕೊಂಡು ಬತ್ತವು. ಇರುಳು ಅವರ ಕಾರ್ಬಾರೇ ಬೇರೆ. ನಮ್ಮ ಬೆಳಿ ಅಂಗಿ ಹಾಕುವ ಬೆಳಿ ನೆಗೆ ಮಾಡುವ ರಾಜಕಾರಣಿಗಳುದೆ ಈ ಬೆಳಿ ಹುಲಿಗೊಕ್ಕೇ ಸಪೋರ್ಟ್.

  ಒಂದಾರಿ ಎಂಗಳಲ್ಲಿಗೆ ಹೀಂಗೇ ಎಂತದೋ ಕಚ್ಚೋಡಕ್ಕೆ ಬಂದ ಮಾಪಳೆ ಕೇಳುದು ನಿಂಗೊ ಹಟ್ಟಿಗೆ ಬೀಗ ಹಾಕುತ್ತಿರಾ ಹೇಳಿ. ಅದಕ್ಕೆಂತಕೆ ಬೇಕು ಅಧಿಕ ಪ್ರಸಂಗ?

 5. Soumya says:

  Engo Malenaadillippadu.Illi, danangala maargalli biduva krama. Ee dana tinnadda gida ille. Engala belilippa Lambaana/ Kaagada hoogu kooda tinthu 🙁

 6. Pramod m says:

  ಈ ಉಂಬೆ ಬೇರೆ ಜಾತಿ ಉಂಬೆಗಿಂತ ಹೆಚ್ಚು ಸಮಯ ಬದುಕುತ್ತವು.ಈ ಉಂಬೆಗೆ ಕೇರಳಲ್ಲಿ ಭಾರಿ ಬೇಡಿಕೆ ಇದ್ದು.ಅಂಬಗಂಬಗ ಅಲ್ಲಿ ಈ ದನಗಳ ಪ್ರದರ್ಶನಂಗ ನೆಡೆತ್ತು…

 7. jayashree.neeramoole says:

  ಶಿರಂಕಲ್ಲು ಈಶ್ವರ ಭಟ್ರ ಕಥೆ ಓದಿ ಖುಷಿ ಆತು… ನಮಗೆಲ್ಲ ಗೊಂತಿದ್ದು ಉಮ್ಬೆಗೆ ಅಷ್ಟುದೆ ಶಕ್ತಿ ಇದ್ದು ಹೇಳಿ… ಯಾವ ಯಾವ ಮದ್ದುಗಳಿಂದ ಕಡಮ್ಮೆ ಆಗದ್ದ ಹಲವು ಸಮಸ್ಯೆಗೋ ಹೀಂಗೆ ಸುಲಭಲ್ಲಿ ಪರಿಹಾರ ಆದ ಹಲವು ಉದಾಹರಣೆಗೋ ನಮ್ಮ ಕಣ್ಣ ಮುಂದೆ ಇದ್ದು… ಆದರೂ ನಾವು ಇನ್ನುದೆ ಉಮ್ಬೆಗಳ ರಕ್ಷಿಸುಲೇ ಏಕೆ ಗಂಭೀರವಾದ ಕ್ರಮ ಕೈಗೊಳ್ಳುತ್ತಾ ಇಲ್ಲೇ… “ಅನಾರೋಗ್ಯ ಬಂದರೆ ಪೇಟೆಲ್ಲಿ ಸೌಕರ್ಯ ಹೇಳಿ ಅನ್ನಿಸುವ ಬದಲು ರೋಗವೇ ಬಾರದ್ದ ಹಾಂಗೆ ಕಪಿಲೆಯ ಸೇವೆ ಮಾಡಿಗೊಂಡು ಇಪ್ಪದು ಒಳ್ಳೇದು ಹೇಳಿ ಏಕೆ ಅನ್ನಿಸುತ್ತಿಲ್ಲೇ”

  • jayashree.neeramoole says:

   ಊರಿಲ್ಲಿ ಆದರೂ ಶುದ್ದ ತಳಿಯ ದನವ ಸಾಂಕುಲೇ ಅದೆಷ್ಟು ಸಮಸ್ಯೆಗೋ…
   ಎಂಗಳ ನೆರೆಕರೆಲಿ ಹಲವು ಮನೆಗಳಿಂದ ರಾತ್ರೋ ರಾತ್ರಿ ಹಟ್ಟಿ೦ದಲೇ ದನ ಕದ್ದುಗೊಂಡು ಹೋವುತ್ತಾ ಇದ್ದವು…
   ಆದರೂ ಗುರುಗಳ ಮೇಲೆ ಭಾರ ಹಾಕಿ ‘ಶುದ್ದ ಊರ ತಳಿ’ಯ ದನ ಸಾಂಕೆಕ್ಕು ಹೇಳಿ ಆಸೆ ಇದ್ದು… ಎಲ್ಲ ಕಡೆ ಕ್ರಾಸ್ ದನಗಳೇ ಇಪ್ಪದು…

   ನೀರಮೂಲೆಗೆ ಹತ್ತರೆ ಅಪ್ಪ ಹಾಂಗೆ ಕುಂಬಳೆ/ಬದಿಯಡ್ಕ ಹೊಡೆಲಿ ಆದರೂ ಅಕ್ಕು. ಮಲೆನಾಡು ಗಿಡ್ಡ ಶುದ್ದ ತಳಿಯ ದನ/ಗಡಸು ಇದ್ದರೆ ಗೊಂತಿಪ್ಪವು ಹೇಳಿ. ಎಂಗೊಗೆ ಬೇಕು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *