Oppanna.com

ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ

ಬರದೋರು :   ಶರ್ಮಪ್ಪಚ್ಚಿ    on   01/06/2017    10 ಒಪ್ಪಂಗೊ

ಬಂಧುಗಳೇ,

ಈ ಬೈಲು ಸುರುವಾಗಿ 8 ವರ್ಷಲ್ಲಿ, ನಮ್ಮ ನಿರೀಕ್ಷೆಗೂ ಮೀರಿ ವಿಶಾಲವಾಗಿ ಬೆಳೆತ್ತಾ ಇದ್ದು ಹೇಳ್ತ ಸಂಗತಿ ನಿಂಗೊಗೆಲ್ಲಾ ಗೊಂತಿಪ್ಪದೇ.
ಸಾಹಿತ್ಯ ಕ್ಷೇತ್ರದ ಹಲವಾರು ವಿಭಾಗಂಗಳಲ್ಲಿ ತೊಡಗಿಸಿಗೊಂಡು ಬೈಲು ಬೆಳವದರೊಟ್ಟಿಂಗೆ, ಲೇಖಕರ ವರ್ಗವನ್ನೂ ಪ್ರೋತ್ಸಾಹಿಸಿ ಬೆಳೆಶುತ್ತ ಕೆಲಸ ಮಾಡ್ತಾ ಇದ್ದು ಈ ಬೈಲು.
ಇತ್ತೀಚೆಗೆ ಏರ್ಪಾಡು ಮಾಡಿದ ವಿಶು ವಿಶೇಷ ಸ್ಪರ್ಧೆಗೆ ಬಂದ ಪ್ರವೇಶಂಗೊ ಸಂಖ್ಯಾ ದೃಷ್ಟಿಂದಲೂ, ಗುಣಮಟ್ಟದ ದೃಷ್ಟಿಂದಲೂ ಎತ್ತರದ ಸ್ಥಾನಲ್ಲಿ ಇತ್ತಿದ್ದು ಹೇಳುವದೇ ಇದಕ್ಕೆ ಸಾಕ್ಷಿ.

ಲೇಖಕರಿಂಗೆ ಸ್ಥಾನಮಾನ ಕೊಡುವದರೊಟ್ಟಿಂಗೆ, ನಮ್ಮ ಮಕ್ಕಳ ಪ್ರತಿಭೆಯನ್ನೂ ಗುರುತಿಸಿ ಗೌರವಿಸೆಕ್ಕು ಹೇಳುವದು ನಮ್ಮ ಆಶಯ.
ನಮ್ಮ ಕೂಸುಗೊ, ಮಾಣಿಯಂಗೊ ಯಾವುದರಲ್ಲಿಯೂ ಕಮ್ಮಿ ಇಲ್ಲೆ ಹೇಳ್ತದರ ಎಲ್ಲಾ ಕ್ಷೇತ್ರಂಗಳಲ್ಲಿಯೂ ತೋರಿಸಿಕೊಡ್ತಾ ಇದ್ದವು.

ವಿದ್ಯಾನಿಧಿಂದ ಪ್ರತಿಭಾನ್ವೇಷಣೆ
ವಿದ್ಯಾವಿಭಾಗಂದ ಪ್ರತಿಭಾನ್ವೇಷಣೆ

ಈ ದೃಷ್ಟಿಂದ ಮೊದಲನೇ ಕಾರ್ಯಕ್ರಮವಾಗಿ ಈ ವರ್ಷದ SSLC ಮತ್ತೆ PUC ಪರೀಕ್ಷೆಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಸಿಕ್ಕಿದ ಪ್ರತಿಭೆಗಳ, ಮತ್ತೆ ಬೇರೆ ಬೇರೆ ಕ್ಷೇತ್ರಂಗಳಲ್ಲಿ ಸಾಧನೆಗಳ ಮಾಡಿದ ಮಕ್ಕಳ ಈ ಬೈಲಿಲ್ಲಿ ಪರಿಚಯ ಮಾಡಿ ಗೌರವಿಸುಲೆ ಎಂಗೊಗೆ ತುಂಬಾ ಹೆಮ್ಮೆ ಅನಿಸುತ್ತು.
ಇದಕ್ಕೆ ನಿಂಗಳೂ ಕೈ ಜೋಡುಸೆಕ್ಕು ಹೇಳುವದೇ ಎಂಗಳ ಪ್ರಾರ್ಥನೆ.

ನಿಂಗೊ ಮಾಡೆಕ್ಕಾದ್ದು ಇಷ್ಟೆ:
ನಿಂಗಳ ಪೈಕಿ ಅಥವಾ ನಿಂಗಳ ಗೊಂತಿಲ್ಲಿಪ್ಪ ಯುವ ಪ್ರತಿಭೆಗಳ ವಿವರಂಗಳ ಎಂಗೊಗೆ ಕಳುಸಿಕೊಡುವದು.

ವಿದ್ಯಾರ್ಥಿ/ವಿದ್ಯಾರ್ಥಿನಿಯ ಹೆಸರು,
ಅವರ ಅಬ್ಬೆ ಅಪ್ಪನ ಹೆಸರು,
ವಿಳಾಸ & ಫೋನ್ ನಂಬ್ರ
ಅವು ಕಲ್ತ ಶಾಲೆ/ಕಾಲೇಜು,
ತೆಕ್ಕೊಂಡ ವಿಷಯಂಗೊ ಮತ್ತೆ ಮಾರ್ಕು,
ಇತರ ಹವ್ಯಾಸ,
ಬಾಲ ಪ್ರತಿಭೆಗಾಗಿ ಸಿಕ್ಕಿದ ಇತರ ಪುರಸ್ಕಾರಂಗೊ ಇದ್ದರೆ ಅದರ ವಿವರ,
– ಇವಿಷ್ಟರ ಎಂಗೊಗೆ ಬರದು ಕಳುಸುವದು.
ಹ್ಞಾಂ… ಒಂದು ಪಟವೂ ಒಟ್ಟಿಂಗೆ ಇರಳಿ.

ವಿವರಂಗಳ ನಿಂಗೊ ಕಳುಸೆಕ್ಕಾದ ವಿಳಾಸ:

  • WhatsApp : 9449806563
  • ಪೋಸ್ಟಿಲ್ಲಿ ಕಳುಸುವದಾದರೆ:
    ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)
    “ಅನುಗ್ರಹ” ಶಿವಗಿರಿನಗರ,
    ಕುಳಾಯಿ-ಹೊಸಬೆಟ್ಟು ಅಂಚೆ.
    ಮಂಗಳೂರು 575019.
  • ದೂರವಾಣಿ ಸಂಖ್ಯೆ:
    ಸ್ಥಿರ ದೂರವಾಣಿ:  0824-2409563
    ನಿಸ್ತಂತು  : 9449806563

ಎಂಗಳ ಈ ಕಾರ್ಯಲ್ಲಿ ನಿಂಗೊ ಕೈ ಜೋಡುಸುತ್ತೀರನ್ನೇ..
ಮತ್ತೆ ತಡ ಮಾಡುವದೆಂತಕೆ.
ಆದಷ್ಟು ಬೇಗ ಕಳುಸಿಕೊಡಿ, ಮಕ್ಕಳ ಪ್ರತಿಭೆಯ ಪ್ರೋತ್ಸಾಹಿಸುವೊ°, ಗೌರವಿಸುವೊ°

~

ಸಂಚಾಲಕರು – ವಿದ್ಯಾನಿಧಿ,
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

10 thoughts on “ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ

  1. ಪ್ರತಿಭೆಯ ಗುರುತಿಸಿ ಪ್ರೋತ್ಸಾಹಿಸೋದು ಶ್ಲಾಘನೀಯ.

  2. ಭಾರೀ ಒಳ್ಳೆಯ ಕೆಲಸ

  3. ಆಯೆಕ್ಕಾದ ಕಾರ್ಯ.

  4. ಅಗತ್ಯವಾಗಿ ಆಯೆಕ್ಕಾದ ಕೆಲಸ,ಎಡಿಗಾರೆ ಬೈಲಿ ಲಿ ಒಂದು’ ಮಕ್ಕಳ ಪುಟ ‘ಮಾಡಲಕ್ಕು.ನಮ್ಮ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಲಿ ಹೇಳ್ತ ಆಶಯ .

  5. ಬಾರೀ ಒೞೆ ಕೆಲಸ. ಮಕ್ಕೊಗೂ ಪ್ರೋತ್ಸಾಹ, ಬೈಲಿನೋರಿಂಗು ಗೊಂತಾವುತ್ತು.

  6. ಒಳ್ಳೆ ಕೆಲಸ.ನಮ್ಮ ಬಾಲಪ್ರತಿಭೆಗಳ ಅನಾವರಣದ ಈ ಪ್ರಯತ್ನವೂ ಯಶಸ್ವಿಯಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×