ನಮ್ಮೂರು, ನಮ್ಮೋರು: ಪ್ರತಿಭೆಗಳ ವಿವರಕ್ಕೆ ಆಹ್ವಾನ

May 19, 2014 ರ 2:10 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಂಧುಗಳೇ,

ಈ ಬೈಲು ಸುರುವಾಗಿ 6 ವರ್ಷಲ್ಲಿ, ನಮ್ಮ ನಿರೀಕ್ಷೆಗೂ ಮೀರಿ ವಿಶಾಲವಾಗಿ ಬೆಳೆತ್ತಾ ಇದ್ದು ಹೇಳ್ತ ಸಂಗತಿ ನಿಂಗೊಗೆಲ್ಲಾ ಗೊಂತಿಪ್ಪದೇ.
ಸಾಹಿತ್ಯ ಕ್ಷೇತ್ರದ ಹಲವಾರು ವಿಭಾಗಂಗಳಲ್ಲಿ ತೊಡಗಿಸಿಗೊಂಡು ಬೈಲು ಬೆಳವದರೊಟ್ಟಿಂಗೆ, ಲೇಖಕರ ವರ್ಗವನ್ನೂ ಪ್ರೋತ್ಸಾಹಿಸಿ ಬೆಳೆಶುತ್ತ ಕೆಲಸ ಮಾಡ್ತಾ ಇದ್ದು ಈ ಬೈಲು.
ಇತ್ತೀಚೆಗೆ ಏರ್ಪಾಡು ಮಾಡಿದ ವಿಶು ವಿಶೇಷ ಸ್ಪರ್ಧೆಗೆ ಬಂದ ಪ್ರವೇಶಂಗೊ ಸಂಖ್ಯಾ ದೃಷ್ಟಿಂದಲೂ, ಗುಣಮಟ್ಟದ ದೃಷ್ಟಿಂದಲೂ ಎತ್ತರದ ಸ್ಥಾನಲ್ಲಿ ಇತ್ತಿದ್ದು ಹೇಳುವದೇ ಇದಕ್ಕೆ ಸಾಕ್ಷಿ.

ಲೇಖಕರಿಂಗೆ ಸ್ಥಾನಮಾನ ಕೊಡುವದರೊಟ್ಟಿಂಗೆ, ನಮ್ಮ ಮಕ್ಕಳ ಪ್ರತಿಭೆಯನ್ನೂ ಗುರುತಿಸಿ ಗೌರವಿಸೆಕ್ಕು ಹೇಳುವದು ನಮ್ಮ ಆಶಯ.
ನಮ್ಮ ಕೂಸುಗೊ, ಮಾಣಿಯಂಗೊ ಯಾವುದರಲ್ಲಿಯೂ ಕಮ್ಮಿ ಇಲ್ಲೆ ಹೇಳ್ತದರ ಎಲ್ಲಾ ಕ್ಷೇತ್ರಂಗಳಲ್ಲಿಯೂ ತೋರಿಸಿಕೊಡ್ತಾ ಇದ್ದವು.

ವಿದ್ಯಾನಿಧಿಂದ ಪ್ರತಿಭಾನ್ವೇಷಣೆ
ವಿದ್ಯಾನಿಧಿಂದ ಪ್ರತಿಭಾನ್ವೇಷಣೆ

ಈ ದೃಷ್ಟಿಂದ ಮೊದಲನೇ ಕಾರ್ಯಕ್ರಮವಾಗಿ ಈ ವರ್ಷದ SSLC ಮತ್ತೆ PUC ಪರೀಕ್ಷೆಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಸಿಕ್ಕಿದ ಪ್ರತಿಭೆಗಳ, ಮತ್ತೆ ಬೇರೆ ಬೇರೆ ಕ್ಷೇತ್ರಂಗಳಲ್ಲಿ ಸಾಧನೆಗಳ ಮಾಡಿದ ಮಕ್ಕಳ ಈ ಬೈಲಿಲ್ಲಿ ಪರಿಚಯ ಮಾಡಿ ಗೌರವಿಸುಲೆ ಎಂಗೊಗೆ ತುಂಬಾ ಹೆಮ್ಮೆ ಅನಿಸುತ್ತು.
ಇದಕ್ಕೆ ನಿಂಗಳೂ ಕೈ ಜೋಡುಸೆಕ್ಕು ಹೇಳುವದೇ ಎಂಗಳ ಪ್ರಾರ್ಥನೆ.

ನಿಂಗೊ ಮಾಡೆಕ್ಕಾದ್ದು ಇಷ್ಟೆ:
ನಿಂಗಳ ಪೈಕಿ ಅಥವಾ ನಿಂಗಳ ಗೊಂತಿಲ್ಲಿಪ್ಪ ಯುವ ಪ್ರತಿಭೆಗಳ ವಿವರಂಗಳ ಎಂಗೊಗೆ ಕಳುಸಿಕೊಡುವದು.

ವಿದ್ಯಾರ್ಥಿ/ವಿದ್ಯಾರ್ಥಿನಿಯ ಹೆಸರು,
ಅವರ ಅಬ್ಬೆ ಅಪ್ಪನ ಹೆಸರು,
ವಿಳಾಸ & ಪೋನ್ನಂಬ್ರ,
ಅವು ಕಲ್ತ ಶಾಲೆ/ಕಾಲೇಜು,
ತೆಕ್ಕೊಂಡ ವಿಷಯಂಗೊ ಮತ್ತೆ ಮಾರ್ಕು,
ಇತರ ಹವ್ಯಾಸ,
ಬಾಲ ಪ್ರತಿಭೆಗಾಗಿ ಸಿಕ್ಕಿದ ಇತರ ಪುರಸ್ಕಾರಂಗೊ ಇದ್ದರೆ ಅದರ ವಿವರ,
– ಇವಿಷ್ಟರ ಎಂಗೊಗೆ ಬರದು ಕಳುಸುವದು.
ಹ್ಞಾಂ… ಒಂದು ಪಟವೂ ಒಟ್ಟಿಂಗೆ ಇರಳಿ.

ವಿವರಂಗಳ ನಿಂಗೊ ಕಳುಸೆಕ್ಕಾದ ವಿಳಾಸ:

  • ಮಿಂಚಂಚೆ ಮಾಡುವದಾದರೆ: editor@oppanna.com
  • ಪೋಸ್ಟಿಲ್ಲಿ ಕಳುಸುವದಾದರೆ:
    ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)
    “ಅನುಗ್ರಹ” ಶಿವಗಿರಿನಗರ,
    ಕುಳಾಯಿ-ಹೊಸಬೆಟ್ಟು ಅಂಚೆ.
    ಮಂಗಳೂರು 575019.
  • ದೂರವಾಣಿ ಸಂಖ್ಯೆ:
    ತಂತು: 0824-2409563
    ನಿಸ್ತಂತು: 9449806563

ಎಂಗಳ ಈ ಕಾರ್ಯಲ್ಲಿ ನಿಂಗೊ ಕೈ ಜೋಡುಸುತ್ತೀರನ್ನೇ..
ಮತ್ತೆ ತಡ ಮಾಡುವದೆಂತಕೆ.
ಆದಷ್ಟು ಬೇಗ ಕಳುಸಿಕೊಡಿ, ಮಕ್ಕಳ ಪ್ರತಿಭೆಯ ಪ್ರೋತ್ಸಾಹಿಸುವೊ°, ಗೌರವಿಸುವೊ°

~

ಶರ್ಮಪ್ಪಚ್ಚಿ,
ಸಂಚಾಲಕ – ವಿದ್ಯಾನಿಧಿ,
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಶರ್ಮಪ್ಪಚ್ಚಿಅನಿತಾ ನರೇಶ್, ಮಂಚಿಕಾವಿನಮೂಲೆ ಮಾಣಿಅಕ್ಷರ°ಸುಭಗಮಾಷ್ಟ್ರುಮಾವ°ಮಂಗ್ಳೂರ ಮಾಣಿಸಂಪಾದಕ°ಡೈಮಂಡು ಭಾವಬಂಡಾಡಿ ಅಜ್ಜಿಕೆದೂರು ಡಾಕ್ಟ್ರುಬಾವ°ಶಾಂತತ್ತೆದೇವಸ್ಯ ಮಾಣಿಕಜೆವಸಂತ°ವಿಜಯತ್ತೆಒಪ್ಪಕ್ಕವಿನಯ ಶಂಕರ, ಚೆಕ್ಕೆಮನೆಎರುಂಬು ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಅಕ್ಷರದಣ್ಣರಾಜಣ್ಣಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ