ಮರೆಯಲಾಗದ್ದ ಮಹಾನ್ ಸಸ್ಯಶಾಸ್ತ್ರಜ್ಞ ಡಾ.ಪಳ್ಳತ್ತಡ್ಕ ಕೇಶವ ಭಟ್

August 10, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಎಲ್ಲೋರ ನೆಚ್ಚಿನ, ಹಿರಿಯ ವಿಜ್ಞಾನಿ, ಡಾ|ಪಳ್ಳತ್ತಡ್ಕ ಕೇಶವಭಟ್ ಮೊನ್ನೆ ತೀರಿಗೊಂಡಿದವು. ಅವರ ಬಗ್ಗೆ ವಿಶೇಷ ಲೇಖನ ವೇಣೂರಣ್ಣ ನವಗೆ ಹೇಳುದು.
ಪ್ರಖ್ಯಾತ ಪರಿಸರ ವಿಜ್ಞಾನಿ ಪಳ್ಳತ್ತಡ್ಕ ಕೇಶವ ಭಟ್ ಅಮೇರಿಕಾದ ವಯಾಮಿ೦ಗ್ನಲ್ಲಿ  ಜುಲೈ ೨೫ಕ್ಕೆ ವಿಧಿವಶ ಆಯಿದವು.
ಕೇಶವ ಮಾವ ಹೇಳಿಯೇ ಎಲ್ಲೋರಿಂದಲೂ ಪ್ರೀತಿಲ್ಲಿ ಕರೆಸಿಗೊಂಡಿತ್ತ ಅವು ಎಪ್ಪತ್ತೊಂದು ವರ್ಷ ಸಾರ್ಥಕ ಜೀವನ ನಡೆಸಿ ಪತ್ನಿ ಸಹಿತ ಮೂರು ಜೆನ ಮಗಳಕ್ಕೋ ಮತ್ತೆ ಒಬ್ಬ ಮಗ ಹಾಂಗೆ ಅಪಾರ ಬಂಧುಗಳ, ಅಭಿಮಾನಿಗಳ ಬಿಟ್ಟು ಮೊನ್ನೆ ಆದಿತ್ಯವಾರ ತೀರಿಗೊಂಡಿದವು.
ಕಾಸರಗೋಡು ಜಲ್ಲೆಯ ಪಳ್ಳತ್ತಡ್ಕ ಹೇಳ್ತ ಸಣ್ಣ ಹಳ್ಳಿಲ್ಲಿ ಹುಟ್ಟಿ ಪ್ರಾಥಮಿಕ ವಿದ್ಯಾಭ್ಯಾಸ ಪಳ್ಳತ್ತಡ್ಕಲ್ಲು, ನವಜೀವನ ಹೈಸ್ಕೂಲ್ ಪೆರಡಾಲಲ್ಲಿ  ಹೈಸ್ಕೂಲ್ , ಹಾಂಗೆ ಉಡುಪಿಯ ಎಂ.ಜಿ.ಎಂ ಕಾಲೆಜಿಲ್ಲಿ ಇಂಟರ್ ಮಿಡಿಯೇಟ್, ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿಲ್ಲಿ ಪ್ರಖ್ಯಾತ ಸಸ್ಯಶಾಸ್ತ್ರಜ್ಞ  ಡಾ.ಬಿ.ಜಿ.ಯಲ್.ಸ್ವಾಮಿ (ಡಿ.ವಿ.ಗುಂಡಪ್ಪಜ್ಜನ ಮಗ) ಅವರ ಮಾರ್ಗದರ್ಶನಲ್ಲಿ ಪಿ.ಎಚ್.ಡಿ. ಮುಗಿಸಿ ಅದೇ ಕೋಲೆಜಿಲ್ಲಿ ಸಂಶೋಧನಾ ಸಹಾಯಕ (Research Assistant) ಆಗಿ  ಕೆಲಸ ಮಾಡಿಕ್ಕಿ ಮುಂದೆ ದಕ್ಷಿಣ ಅಮೇರಿಕಾದ ವೆನೆಜುವೆಲದ ಒರಿಯಂಟೆ ವಿಶ್ವವಿದ್ಯಾಲಯಲ್ಲಿ ಹಿರಿಯ ಪ್ರಾಧ್ಯಾಪಕ ಆಗಿ ಇವು  ಕೆಲಸ ನಿರ್ವಹಿಸಿತ್ತಿದ್ದವು.
ಸರಳ ಸಜ್ಜನ, ವಿಜ್ಞಾನಿ ಡಾ| ಪಳ್ಳತ್ತಡ್ಕ ಕೇಶವ ಭಟ್ಟ
ಸರಳ ಸಜ್ಜನ, ವಿಜ್ಞಾನಿ ಡಾ| ಪಳ್ಳತ್ತಡ್ಕ ಕೇಶವ ಭಟ್ಟ

ಕೇಶವ ಮಾವ ಹವ್ಯಕ ಸಮಾಜಕ್ಕೆ ದೊಡ್ಡ ಹೆಸರು ತಯಿಂದವು.
ಹಲವಾರು ಜೆನಕ್ಕೆ ವಿದ್ಯಾಭ್ಯಾಸಕ್ಕೆ ವೇದ ಪಾಠ ಶಾಲೆಗೆ, ಹೀಂಗೆ ಹಲವಾರು ಸಾಮಾಜಿಕ ಕಳಕಳಿ ಇಪ್ಪ ಸಂಸ್ಥೆಗೊಕ್ಕೆ ಸಹಾಯ ಮಾಡಿದ್ದವು.

ತನ್ನ ಸಸ್ಯ ಶಾಸ್ತ್ರೀಯ ಮೂಲಿಕೆಗಳಿಂದ ಸಾವಿರಾರು  ಜನರ ಅನಾರೋಗ್ಯವ ಗುಣಪಡಿಸಿದ್ದವು. ಅವರ ಜೀವನದ ಬಹುತೇಕ ಹೆಚ್ಚಿನ ಸಮಯ ದಕ್ಷಿಣ ಅಮೆರಿಕಾಲ್ಲಿ ಇತ್ತ ಕಾರಣ ಲಕ್ಷಗಟ್ಟಲೆ ಅನುಯಾಯಿಗಳ ಹೊ೦ದಿಪ್ಪ ಅವು ಸುಮಾರು ಪ್ರಪಂಚದ 15 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು ಕನ್ನಡ, ಸ್ಪಾನಿಶ್ , ಫ್ರೆಂಚ್ ಹಾಂಗೆ ಇಂಗ್ಲಿಶ್ ಭಾಷೆಲಿ ಹಲವಾರು ಪುಸ್ತಕ ಬರದ್ದವು .
“Holistic Life” ಹೇಳ್ತ ಪುಸ್ತಕ  ಪ್ರಪಂಚದ  ಹಲವು ಭಾಷೆಗೊಕ್ಕೆ ಅನುವಾದಗೊಂಡಿದು. ಭಾರತೀಯ ನೈಸರ್ಗಿಕ ಆಹಾರ ಪದ್ದತಿಯ ವಿಶ್ವಾದ್ಯಂತ ಪ್ರಚಾರ ಮಾಡಿದವರಲ್ಲಿ ಕೇಶವ ಮಾವ ಅಗ್ರಗಣ್ಯರು .
Guide to Good Eating
ಹೇಳ್ತ ಅವರ ಪುಸ್ತಕ ಭಾರತೀಯ ಆಹಾರ ಪದ್ದತಿಯ ಸಮಗ್ರ ಬಳಕೆ ಬಗ್ಗೆ ಮಾಹಿತಿ ಕೊಡುತ್ತು.
ಎಲ್ಲೋರಿಂಗೂ ಅರ್ತ ಅಪ್ಪಲೆ ಸರಳ ಕನ್ನಡ  ಭಾಷೇಲಿ “ಸರಳ ಜೀವನದಿಂದ ಸಮೃದ್ಧ ಚಿಂತನೆಯೆಡೆಗೆ ” ಪುಸ್ತಕಲ್ಲಿ ಅವರ ವಿವಿಧ ವಿಚಾರಂಗಳ ವಿವರಿಸಿದ್ದವು.
ಮೈಸೂರಿನ “ಪ್ರಜೀವಾ “ ಹೇಳ್ತ ಪತ್ರಿಕೆಲಿ ಅವರ ಲೇಖನ ಮಾಲೆಗೋ ಪ್ರಕಟ ಆಯಿದು.
ಸಸ್ಯಶಾಸ್ತ್ರಜ್ಞ ಆಗಿದ್ದರೂ  ಕೇಶವ ಮಾವಂಗೆ ಜ್ಯೋತಿಷ್ಯ , ವೇದಗಣಿತ ಇತ್ಯಾದಿ ಪಾರಂಪರಿಕ ಭಾರತೀಯ ವಿಚಾರಂಗಳಲ್ಲೂ ಅಪಾರ ಜ್ಞಾನ ಇತ್ತು.
ಖಗೋಳ ಶಾಸ್ತ್ರದ ಬಗ್ಗೆ ತಮ್ಮದೇ ಆದ ಸಿದ್ಧಾಂತ ಅವರದ್ದಿತ್ತು . ಅದರ “The cosmos” ಮತ್ತೆ “Helical helix” ಎರಡು ಪುಸ್ತಕಲ್ಲಿ ವಿವರಿಸಿದ್ದವು. (ಇದರ ಒಂದು ವಿಡಿಯೋ ತುಣುಕು http://www.youtube.com/watch?v=ub-Wg6s-_TM&feature=player_embedded ಲಿ ಇದ್ದು).
ನ್ಯೂಟನ್ ನ ಚಲನೆಯ ತತ್ವಂಗೋ ಸುಳ್ಳು, ಪಾಶ್ಚಾತ್ಯ ವೈದ್ಯ ಪದ್ಧತಿಯ ತಪ್ಪುಗೊ, ಈಗ ವಿಜ್ಞಾನ ಹೇಳಿ ಮಕ್ಕೊಗೆ ನಾವು ಹೇಳಿ ಕೊಡುವ ತಪ್ಪುಗೋ, ಇತ್ಯಾದಿ ಹಲವು ವಿಚಾರಧಾರೆಗಳ “Goodbye to ruling science, a new proposal for science” ಹೇಳ್ತ ಪುಸ್ತಕಲ್ಲಿ ವಿವರವಾಗಿ ಬರದ್ದವು.

ಕುಟುಂಬಲ್ಲಿ ಒಂದಾಗಿ ಡಾ.ಕೇಶವ ಮಾವ

ಎಷ್ಟೋ ಜೆನ ವಿದ್ವಾಂಸರ ಈ ವಿಚಾರವಾಗಿ ಚರ್ಚೆಗೂ ದಿನುಗೆಳಿದ್ದವು.  ಅವು ಪ್ರತಿಪಾದಿಸಿದ ಪ್ರತಿಯೊಂದು ವಿಚಾಂಗೊಕ್ಕು ಸ್ಪಷ್ಟ ಉತ್ತರ ಅವರ ಹತ್ತರೆ ಇತ್ತಿದ್ದು.
ತನ್ನ ಎಪ್ಪತ್ತೊಂದನೆ ವಯಸ್ಸಿಲ್ಲು ಬರಿ ಕಣ್ಣಿಲ್ಲಿ ಆಕಾಶಲ್ಲಿಪ್ಪ ವಿವಿಧ ನಕ್ಷತ್ರಂಗಳ ಗುರುತಿಸಿ ಮಕ್ಕೊಗೆ ಮಾಹಿತಿ  ಕೊಟ್ಟೋ೦ಡು ಇತ್ತಿದವು.

ಹವ್ಯಕ ಸಮುದಾಯಲ್ಲಿ ಅವರ ವಿಶೇಷವಾದ ಅಧ್ಯಯನ ಹೇಳಿರೆ ಜಮದಗ್ನಿ ಗೋತ್ರದವರ  “ವಂಶವೃಕ್ಷ “ ರಚಸಿದ್ದು – ಇದಕ್ಕಾಗಿ ಕಾಸರಗೋಡು, ಉತ್ತರಕನ್ನಡ, ಬೇರೆ ಬೇರೆ ಊರು ಸುತ್ತಿ ಹಿರಿಯರ ಕಂಡು ಮಾಹಿತಿ ಪಡದು ಸುಮಾರು ೨೫ ತಲೆಮಾರಿಂದಲೂ ಜಮದಗ್ನಿ ಗೋತ್ರಲ್ಲಿ ಆಗಿ ಬಂದವರ  “ವಂಶವೃಕ್ಷ ” ರಚಿಸಿ ಮಡುಗಿದ್ದವು.
ಸದಾ ಒಂದು ಬೆಳಿ ಲುಂಗಿ, ಸಾಮಾನ್ಯ ಅಂಗಿ , ಒಂದು ಜೋಳಿಗೆ ಹಾಕ್ಯೊಂಡು  ಸರಳ ಉಡುಪಿಲ್ಲಿ ಇತ್ತ ಕೇಶವ ಮಾವಂಗೆ ಮಕ್ಕಳ ಬಗ್ಗೆ ವಿಶೇಷ ಪ್ರೀತಿ.
ಯಾವಾಗಲೂ ಮಕ್ಕೊಗೆ ಪ್ರಕೃತಿಲ್ಲಿಪ್ಪ ವಿವಿಧ ಕುತೂಹಲಕರ ಸಂಗತಿಗಳ ಸ್ವಾರಸ್ಯಪೂರ್ಣವಾಗಿ ವಿವರಿಸಿ ಹೇಳುಗು. ಸಹಜ ಜೀವನ ಸಮೃದ್ಧ ಚಿಂತನೆಯ ಮಾರ್ಗವ ತೋರುಸಿಕೊಟ್ಟ ಅವು ಯೋಗ ಜೆವನವ ನಡೆಸಿ ಯೋಗಿಯಾಗಿಯೇ ಪ್ರಾಣ ತ್ಯಾಗ ಮಾಡಿದ್ದವು.
ಪ್ರಖ್ಯಾತ ಪರಿಸರ ವಿಜ್ಞಾನಿ ಪಳ್ಳತ್ತಡ್ಕ  ಕೇಶವ ಭಟ್ಟರ ಪೂರ್ಣ bio-data  http://helicalhelix.blogspot.com/ ಹೇಳ್ತ  ಕೊಂಡಿಲ್ಲಿ ಇದ್ದು. ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನ ಪ್ರಕಟ ಆಯಿದು . ಹಾಂಗೆ ಅವರ ಬಗ್ಗೆ ಎಲ್ಲ ಪತ್ರಿಕೆಲೂ ಲೇಖನಗೋ ಬಯಿಂದು.
ಅಂಥ ಮಹಾನ್ ವಿಜ್ಞಾನಿಯ ಕಳಕ್ಕೊಂಡದು ಹವ್ಯಕ ಸಮುದಾಯಕ್ಕೆ ಅಪಾರ ನಷ್ಟ.

ಹೆಲಿಕಲ್ ಹೆಲಿಕ್ಸ್ - ಡಾ. ಪಳ್ಳತ್ತಡ್ಕ ಕೇಶವ ಭಟ್
ಹವ್ಯಕರ ಹೆಮ್ಮೆಯಾದ ಅವು ಹಾಕಿಕೊಟ್ಟ ಜೀವನ ಪಥಲ್ಲಿ ನಡದರೆ ಯಾವುದೇ ರೋಗ ಬಾಧೆ ಇಲ್ಲದ್ದೆ ಜೀವನ ಸುಖಕರವಾಗಿ ನಡೆಶುಲಕ್ಕು.
ಡಾ | ಪಳ್ಳತ್ತಡ್ಕ ಕೇಶವ ಭಟ್ ಅವರ ಬಗ್ಗೆ ಹಾಲ್ದೊಡ್ಡೇರಿ ಸುಧೀಂದ್ರ ವಿಜಯಕರ್ನಾಟಕಲ್ಲಿ ಬರದ “ನೆಟ್-ನೋಟ” ಅಂಕಣ ಇಲ್ಲಿದ್ದು:
ಮರೆಯಲಾಗದ್ದ ಮಹಾನ್ ಸಸ್ಯಶಾಸ್ತ್ರಜ್ಞ ಡಾ.ಪಳ್ಳತ್ತಡ್ಕ ಕೇಶವ ಭಟ್, 4.6 out of 10 based on 8 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

  1. ಶ್ರೀಅಕ್ಕ°
    ಶ್ರೀದೇವಿ ವಿಶ್ವನಾಥ್

    ವೇಣೂರಣ್ಣ, ನಮ್ಮ ಸಮಾಜ ಹೆಮ್ಮೆ ಪಡುವಂಥ ಪಳ್ಳತ್ತಡ್ಕ ಕೇಶವ ಮಾವನ ಪರಿಚಯ ಬೈಲಿಂಗೆ ಮಾಡಿದ್ದಿ. ನಮ್ಮ ಆಹಾರ ಕ್ರಮದ ತಪ್ಪು ಒಪ್ಪುಗಳ ನವಗೆ ಚೆಂದಲ್ಲಿ ವಿವರ್ಸಿ ಹೇಳಿ ಕೊಟ್ಟಂಥಾ ವ್ಯಕ್ತಿ. ಆಹಾರವೇ ಎಲ್ಲಾ ಅನಾರೋಗ್ಯದ ಮೂಲ ಹೇಳಿ, ಯಾವ ಆಹಾರ ತೆಕ್ಕೊಂಡು ಹೇಂಗೆ ಆರೋಗ್ಯವಂತರಾಗಿ ಇಪ್ಪಲಕ್ಕು ಹೇಳಿ ಮಾದರಿಯಾಗಿ ನಡದು ತೋರ್ಸಿದವ್ವು ಕೇಶವ ಮಾವ°.
    ನಾವೆಲ್ಲಾ ಅವು ಹಾಕಿ ಕೊಟ್ಟಂಥಾ ದಾರಿಲಿ ನಡದು ಆರೋಗ್ಯವಂತರಪ್ಪ ಹಾಂಗೆಯೇ ಅವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ದೇವರಲ್ಲಿ ಪ್ರಾರ್ಥಿಸುವ°..

    [Reply]

    VA:F [1.9.22_1171]
    Rating: 0 (from 0 votes)
  2. ಡಾ. ಶ್ರೀಕೃಷ್ಣ ಭಟ್ ಸಿದ್ದನಕೆರೆ.

    ನಮ್ಮ ಹವ್ಯಕ ಸಮಾಜ ಹೆಮ್ಮೆ ಪಡುವಂಥ ಪಳ್ಳತ್ತಡ್ಕ ಕೇಶವ ಮಾವನ ಪರಿಚಯ ನಿಜಕ್ಕು ಶ್ಲಾಘನೀಯ. ಆನು ನೋಡಿದ ಕೆಲವೇ ಅಧ್ಭುತ ವ್ಯಕ್ತಿಗಳಲ್ಲಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರು ಒಬ್ಬರು. ಸಸ್ಯ ಶಾಸ್ತ್ರದ ಮಹಾ ಪಂಡಿತ. ನಮ್ಮ ಆಹಾರ ಕ್ರಮದ ಬಗ್ಗೆ ಹೇಳಿ ಕೊಟ್ಟಂಥಾ ವ್ಯಕ್ತಿ. ಅವರ “Holistic way of Life” ಹೇಳ್ತ ಪುಸ್ತಕ ಆನು ಓದಿದ್ದೆ. ಅವರ ತತ್ವಂಗೊಕ್ಕೆ ನಮ್ಮ ದೇಶಲ್ಲಿ ಪ್ರಚಾರ ಸಿಕ್ಕಿದ್ದಿಲ್ಲೆ. ಅದು ವಿಶಾದನಿಯ. ಅವರ ಕೆಲವು ಪುಸ್ತಕಂಗಳ ನಮ್ಮ ಹವ್ಯಕರು ಓದುವಂತಾಗಲಿ ಹೇಳಿ ಎನ್ನ ಬಿನ್ನಹ.

    [Reply]

    VA:F [1.9.22_1171]
    Rating: +1 (from 1 vote)
  3. ಡಾ. ಶ್ರೀಕೃಷ್ಣ ಭಟ್ ಸಿದ್ದನಕೆರೆ.

    ನಮ್ಮ ಹವ್ಯಕ ಸಮಾಜ ಹೆಮ್ಮೆ ಪಡುವಂಥ ಪಳ್ಳತ್ತಡ್ಕ ಕೇಶವ ಮಾವನ ಪರಿಚಯ ನಿಜಕ್ಕು ಶ್ಲಾಘನೀಯ. ಆನು ನೋಡಿದ ಕೆಲವೇ ಅಧ್ಭುತ ವ್ಯಕ್ತಿಗಳಲ್ಲಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರು ಒಬ್ಬರು. ಸಸ್ಯ ಶಾಸ್ತ್ರದ ಮಹಾ ಪಂಡಿತ. ನಮ್ಮ ಆಹಾರ ಕ್ರಮದ ಬಗ್ಗೆ ಹೇಳಿ ಕೊಟ್ಟಂಥಾ ವ್ಯಕ್ತಿ. ಅವರ “Holistic way of Life” ಹೇಳ್ತ ಪುಸ್ತಕ ಆನು ಓದಿದ್ದೆ. ಅವರ ತತ್ವಂಗೊಕ್ಕೆ ನಮ್ಮ ದೇಶಲ್ಲಿ ಪ್ರಚಾರ ಸಿಕ್ಕಿದ್ದಿಲ್ಲೆ. ಅದು ವಿಶಾದನಿಯ. ಅವರ ಕೆಲವು ಪುಸ್ತಕಂಗಳ ನಮ್ಮ ಹವ್ಯಕರು ಓದುವಂತಾಗಲಿ ಹೇಳಿ ಎನ್ನ ಬಿನ್ನಹ.

    [Reply]

    VA:F [1.9.22_1171]
    Rating: 0 (from 0 votes)
  4. ವೇಣೂರಣ್ಣ

    ಅಪ್ಪು .ಪಳ್ಳತ್ತಡ್ಕ ಕೇಶವ ಮಾವ ಅಪೂರ್ವ ವ್ಯಕ್ತಿ. ಅವು ಕಾಯಾ-ವಾಚಾ -ಮನಸಾ ಹೇಳಿದ ಹಾಂಗೆ ಮಾಡಿ ತೋರ್ಸಿದವು. ಅವು “ಸರಳ ಜೀವನದಿಂದ ಸಮೃದ್ಧ ಚಿಂತನೆಯೆಡೆಗೆ ” ಹೇಳ್ತ ಪುಸ್ತಕಲ್ಲಿ ಹಲವು ಉಪಯುಕ್ತ ಮಾಹಿತಿಗಳ ಕನ್ನಡ ಭಾಷೇಲಿ ಕೊಟ್ಟಿದವು.

    [Reply]

    VN:F [1.9.22_1171]
    Rating: 0 (from 0 votes)
  5. Dr. Rajagopala S

    Dr. Pallattadka Keshava Bhat was a living legendary for nature lovers, I have been in his contact since my early childhood, have read many of his articles, and also attended some lecture programs, I could understand the essence of his discourses only after joining to Ayurveda studies, we really lost one GEM, My prayers to Lord Almighty for peace to the departed soul and courage to his family and all well wishers to bear the loss, we have a lot to learn from his life, let us try for it…

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಮಂಗ್ಳೂರ ಮಾಣಿಶ್ರೀಅಕ್ಕ°ಪ್ರಕಾಶಪ್ಪಚ್ಚಿನೆಗೆಗಾರ°ವಿದ್ವಾನಣ್ಣಬೊಳುಂಬು ಮಾವ°ದೀಪಿಕಾಡಾಗುಟ್ರಕ್ಕ°ಕೇಜಿಮಾವ°ವೆಂಕಟ್ ಕೋಟೂರುಉಡುಪುಮೂಲೆ ಅಪ್ಪಚ್ಚಿಅಜ್ಜಕಾನ ಭಾವಮುಳಿಯ ಭಾವಪುತ್ತೂರಿನ ಪುಟ್ಟಕ್ಕಬೋಸ ಬಾವvreddhiಸರ್ಪಮಲೆ ಮಾವ°ಕಾವಿನಮೂಲೆ ಮಾಣಿಕಜೆವಸಂತ°ಮಾಲಕ್ಕ°ತೆಕ್ಕುಂಜ ಕುಮಾರ ಮಾವ°ಸಂಪಾದಕ°ಅಕ್ಷರ°ಕಳಾಯಿ ಗೀತತ್ತೆಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ