ಪಾಠ ಪುಸ್ತಕಲ್ಲಿ ‘ಪಳ್ಳತ್ತಡ್ಕ ಕೇಶವ ಮಾವ’

August 10, 2011 ರ 8:00 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಳ್ಳತ್ತಡ್ಕ ಕೇಶವ ಮಾವ ದೊಡ್ಡ ಸಸ್ಯ ವಿಜ್ಞಾನಿ.
ನಮ್ಮ ನಡುವೆ ಬಾಳಿ ಬದುಕಿ ಪ್ರಾಕೃತಿಕ ಜೀವನ ಪದ್ಧತಿಯ ವಿಧಾನವ ಹೇಳಿಕೊಟ್ಟವು.   ಹವ್ಯಕ ಸಮುದಾಯದ ಎಲ್ಲರೂ ಗರ್ವಪಡುವಷ್ಟು ಜೀವಮಾನ ಸಾಧನೆ ಮಾಡಿದವು.
ಅವರ ಕುರಿತು ಮಕ್ಕೊಗೆ ಪಾಠ ಪುಸ್ತಕಲ್ಲಿ ಒಂದು ಪಾಠವ ಕರ್ನಾಟಕ ಸರಕಾರ ಏಳನೇ ತರಗತಿಗೆ ಹೊಸದಾಗಿ ಬಿಡುಗಡೆ ಮಾಡಿದ ತೃತೀಯ ಭಾಷೆ ತುಳು ಪಾಠ ಪುಸ್ತಕ “ತುಳು ಎಸಲ್ -೨ “ ಹೇಳ್ತ ಪುಸ್ತಕಲ್ಲಿ ಪಳ್ಳತ್ತಡ್ಕ ಕೇಶವ ಮಾವನ ಜೀವನ ಸಾಧನೆ ಕುರಿತ ಒಂದು ಪಾಠವ ಮಡುಗಿದ್ದವು.

ನಾವು ಪ್ರಾಥಮಿಕ ಶಾಲೆಲಿಪ್ಪಗ ಗಾಂಧೀಜಿ , ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಎಲ್ಲ ಬಾಷೆಗಳಲ್ಲೂ ಒಂದೊಂದು ಪಾಠವ ಮಡುಗಿ ಅವರ ಕಣ್ಣಿಲ್ಲಿ ನೋಡದ್ರೂ ಅವರ ಬಗ್ಗೆ ಸರಿಯಾಗಿ ತಿಳ್ಕೊಂಬ ಹಾಂಗೆ ಮಾಡಿದ್ದರೆ; ಈ ಸರ್ತಿ ನಾವು ಹೆಚ್ಚಿನವು ನೋಡಿದ, ಒಡನಾಡಿದ ಸರಳ  ಧೀಮಂತ ವ್ಯಕ್ತಿಯೊಬ್ಬನ ಬಗ್ಗೆ ಸಕಾಲಲ್ಲಿ ಪಾಠ ಪುಸ್ತಕಲ್ಲಿ ಸೇರ್ಸಿ ನಮ್ಮ ಸುತ್ತಮುತ್ತವೇ ತುಂಬಾ ಜೆನ ಸಾಧಕರು ಇದ್ದವು ಹೇಳ್ತದ್ದರ ತಿಳಿಸಿ ಕೊಡುವ ಪ್ರಯತ್ನ ಮಾಡಿದ್ದು ನಿಜಕ್ಕೂ ನಾವೆಲ್ಲ ಹೆಮ್ಮೆ ಪಡೆಕ್ಕಾದ ವಿಷಯ.
ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ನೇತೃತ್ವದ ಪಾಠ ಪುಸ್ತಕ ಸಮಿತಿ “ತುಳು ಎಸಲ್-೨ ” ಪುಸ್ತಕಲ್ಲಿ ಅಚ್ಚುಕಟ್ಟಾಗಿ ಸರಳವಾಗಿ ಪಳ್ಳತ್ತಡ್ಕ ಕೇಶವ ಮಾವನ ಬಗ್ಗೆ ವಿವರ್ಸಿದ್ದವು .

ಡಾ.ಪಳ್ಳತ್ತಡ್ಕ ಕೇಶವ ಮಾವ  ನಮ್ಮ ಅಗಲಿ ಒಂದು ವರ್ಷ ಆಗ್ಯೊಂಡು ಬಂತು. ಅಗೋಸ್ತು 13 ಕ್ಕೆ ಕೇಶವ ಮಾವನ ವರ್ಷಾಂತ.
ಅವರ ಸವಿನೆನಪಿಂಗೆ ಅವರ ಒಡನಾಡಿಗೋ ಎಲ್ಲ ಸೇರಿ ಬರದ  ಸಂಸ್ಮರಣ ಸಂಪುಟ “ಸುರುಳಿ” ಯ ಬಿಡುಗಡೆ ಉಡುಪಿಯ ಎಂ.ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪಲ್ಲಿ ಇದೇ ಅಗೋಸ್ತು ೧೧ಕ್ಕೆ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣಗೊಳಿಸುವ ಕಾರ್ಯಕ್ರಮ ನಡವಲಿದ್ದು. ಇದರ ಒಟ್ಟಿ೦ಗೆ ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಸಂಘಟಕರ ಪರವಾಗಿ ಕೊಡುತ್ತಾ ಇದ್ದೆ.
ಎಲ್ಲೋರೂ ಬಂದು ಭಾಗವಹಿಸೆಕ್ಕು ಹೇಳಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರ ಮಗಳು ಡಾ.ಸುಮಾ ಪಿ.ಭಟ್  ಪ್ರೀತಿಪೂರ್ವಕವಾಗಿ ಕೇಳಿಗೊಂಡಿದವು.
ಎಲ್ಲೋರು ಬನ್ನಿ ..
ಶುಭ ಹಾರೈಸಿ..

ಸೂ:
ಪಳ್ಳತ್ತಡ್ಕ ಕೇಶವಮಾವನ ಬಗ್ಗೆ ಬರದ ಪರಿಚಯ ಲೇಖನ ಇಲ್ಲಿದ್ದು:
http://oppanna.com/nammooru/pallathadka-keshava-bhat


Subrahmanya Bhat
Assistant Professor in E&EE Department,
Sri Dharmasthala Manjunatheshwara Institute of Technology,Ujire
Ujire-574240

Belthangady Taluk,D.K.
Karnataka
ಪಾಠ ಪುಸ್ತಕಲ್ಲಿ 'ಪಳ್ಳತ್ತಡ್ಕ ಕೇಶವ ಮಾವ', 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿವಾಣಿ ಚಿಕ್ಕಮ್ಮಕೊಳಚ್ಚಿಪ್ಪು ಬಾವಡೈಮಂಡು ಭಾವಮಾಷ್ಟ್ರುಮಾವ°ಮಾಲಕ್ಕ°ಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಶಾಂತತ್ತೆಸಂಪಾದಕ°ಅಕ್ಷರದಣ್ಣಪುಣಚ ಡಾಕ್ಟ್ರುಪೆರ್ಲದಣ್ಣಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿಚೆನ್ನೈ ಬಾವ°ವೆಂಕಟ್ ಕೋಟೂರುಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಮಂಗ್ಳೂರ ಮಾಣಿಜಯಗೌರಿ ಅಕ್ಕ°ದೀಪಿಕಾನೀರ್ಕಜೆ ಮಹೇಶಜಯಶ್ರೀ ನೀರಮೂಲೆಶಾ...ರೀವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ