Oppanna.com

ಮರೆಯಲಾಗದ್ದ ಮಹಾನ್ ಸಸ್ಯಶಾಸ್ತ್ರಜ್ಞ ಡಾ.ಪಳ್ಳತ್ತಡ್ಕ ಕೇಶವ ಭಟ್

ಬರದೋರು :   ವೇಣೂರಣ್ಣ    on   10/08/2010    17 ಒಪ್ಪಂಗೊ

ವೇಣೂರಣ್ಣ
ನಮ್ಮ ಬೈಲಿನ ಎಲ್ಲೋರ ನೆಚ್ಚಿನ, ಹಿರಿಯ ವಿಜ್ಞಾನಿ, ಡಾ|ಪಳ್ಳತ್ತಡ್ಕ ಕೇಶವಭಟ್ ಮೊನ್ನೆ ತೀರಿಗೊಂಡಿದವು. ಅವರ ಬಗ್ಗೆ ವಿಶೇಷ ಲೇಖನ ವೇಣೂರಣ್ಣ ನವಗೆ ಹೇಳುದು.
ಪ್ರಖ್ಯಾತ ಪರಿಸರ ವಿಜ್ಞಾನಿ ಪಳ್ಳತ್ತಡ್ಕ ಕೇಶವ ಭಟ್ ಅಮೇರಿಕಾದ ವಯಾಮಿ೦ಗ್ನಲ್ಲಿ  ಜುಲೈ ೨೫ಕ್ಕೆ ವಿಧಿವಶ ಆಯಿದವು.
ಕೇಶವ ಮಾವ ಹೇಳಿಯೇ ಎಲ್ಲೋರಿಂದಲೂ ಪ್ರೀತಿಲ್ಲಿ ಕರೆಸಿಗೊಂಡಿತ್ತ ಅವು ಎಪ್ಪತ್ತೊಂದು ವರ್ಷ ಸಾರ್ಥಕ ಜೀವನ ನಡೆಸಿ ಪತ್ನಿ ಸಹಿತ ಮೂರು ಜೆನ ಮಗಳಕ್ಕೋ ಮತ್ತೆ ಒಬ್ಬ ಮಗ ಹಾಂಗೆ ಅಪಾರ ಬಂಧುಗಳ, ಅಭಿಮಾನಿಗಳ ಬಿಟ್ಟು ಮೊನ್ನೆ ಆದಿತ್ಯವಾರ ತೀರಿಗೊಂಡಿದವು.
ಕಾಸರಗೋಡು ಜಲ್ಲೆಯ ಪಳ್ಳತ್ತಡ್ಕ ಹೇಳ್ತ ಸಣ್ಣ ಹಳ್ಳಿಲ್ಲಿ ಹುಟ್ಟಿ ಪ್ರಾಥಮಿಕ ವಿದ್ಯಾಭ್ಯಾಸ ಪಳ್ಳತ್ತಡ್ಕಲ್ಲು, ನವಜೀವನ ಹೈಸ್ಕೂಲ್ ಪೆರಡಾಲಲ್ಲಿ  ಹೈಸ್ಕೂಲ್ , ಹಾಂಗೆ ಉಡುಪಿಯ ಎಂ.ಜಿ.ಎಂ ಕಾಲೆಜಿಲ್ಲಿ ಇಂಟರ್ ಮಿಡಿಯೇಟ್, ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿಲ್ಲಿ ಪ್ರಖ್ಯಾತ ಸಸ್ಯಶಾಸ್ತ್ರಜ್ಞ  ಡಾ.ಬಿ.ಜಿ.ಯಲ್.ಸ್ವಾಮಿ (ಡಿ.ವಿ.ಗುಂಡಪ್ಪಜ್ಜನ ಮಗ) ಅವರ ಮಾರ್ಗದರ್ಶನಲ್ಲಿ ಪಿ.ಎಚ್.ಡಿ. ಮುಗಿಸಿ ಅದೇ ಕೋಲೆಜಿಲ್ಲಿ ಸಂಶೋಧನಾ ಸಹಾಯಕ (Research Assistant) ಆಗಿ  ಕೆಲಸ ಮಾಡಿಕ್ಕಿ ಮುಂದೆ ದಕ್ಷಿಣ ಅಮೇರಿಕಾದ ವೆನೆಜುವೆಲದ ಒರಿಯಂಟೆ ವಿಶ್ವವಿದ್ಯಾಲಯಲ್ಲಿ ಹಿರಿಯ ಪ್ರಾಧ್ಯಾಪಕ ಆಗಿ ಇವು  ಕೆಲಸ ನಿರ್ವಹಿಸಿತ್ತಿದ್ದವು.
ಸರಳ ಸಜ್ಜನ, ವಿಜ್ಞಾನಿ ಡಾ| ಪಳ್ಳತ್ತಡ್ಕ ಕೇಶವ ಭಟ್ಟ
ಸರಳ ಸಜ್ಜನ, ವಿಜ್ಞಾನಿ ಡಾ| ಪಳ್ಳತ್ತಡ್ಕ ಕೇಶವ ಭಟ್ಟ

ಕೇಶವ ಮಾವ ಹವ್ಯಕ ಸಮಾಜಕ್ಕೆ ದೊಡ್ಡ ಹೆಸರು ತಯಿಂದವು.
ಹಲವಾರು ಜೆನಕ್ಕೆ ವಿದ್ಯಾಭ್ಯಾಸಕ್ಕೆ ವೇದ ಪಾಠ ಶಾಲೆಗೆ, ಹೀಂಗೆ ಹಲವಾರು ಸಾಮಾಜಿಕ ಕಳಕಳಿ ಇಪ್ಪ ಸಂಸ್ಥೆಗೊಕ್ಕೆ ಸಹಾಯ ಮಾಡಿದ್ದವು.
ತನ್ನ ಸಸ್ಯ ಶಾಸ್ತ್ರೀಯ ಮೂಲಿಕೆಗಳಿಂದ ಸಾವಿರಾರು  ಜನರ ಅನಾರೋಗ್ಯವ ಗುಣಪಡಿಸಿದ್ದವು. ಅವರ ಜೀವನದ ಬಹುತೇಕ ಹೆಚ್ಚಿನ ಸಮಯ ದಕ್ಷಿಣ ಅಮೆರಿಕಾಲ್ಲಿ ಇತ್ತ ಕಾರಣ ಲಕ್ಷಗಟ್ಟಲೆ ಅನುಯಾಯಿಗಳ ಹೊ೦ದಿಪ್ಪ ಅವು ಸುಮಾರು ಪ್ರಪಂಚದ 15 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು ಕನ್ನಡ, ಸ್ಪಾನಿಶ್ , ಫ್ರೆಂಚ್ ಹಾಂಗೆ ಇಂಗ್ಲಿಶ್ ಭಾಷೆಲಿ ಹಲವಾರು ಪುಸ್ತಕ ಬರದ್ದವು .
“Holistic Life” ಹೇಳ್ತ ಪುಸ್ತಕ  ಪ್ರಪಂಚದ  ಹಲವು ಭಾಷೆಗೊಕ್ಕೆ ಅನುವಾದಗೊಂಡಿದು. ಭಾರತೀಯ ನೈಸರ್ಗಿಕ ಆಹಾರ ಪದ್ದತಿಯ ವಿಶ್ವಾದ್ಯಂತ ಪ್ರಚಾರ ಮಾಡಿದವರಲ್ಲಿ ಕೇಶವ ಮಾವ ಅಗ್ರಗಣ್ಯರು .
Guide to Good Eating
ಹೇಳ್ತ ಅವರ ಪುಸ್ತಕ ಭಾರತೀಯ ಆಹಾರ ಪದ್ದತಿಯ ಸಮಗ್ರ ಬಳಕೆ ಬಗ್ಗೆ ಮಾಹಿತಿ ಕೊಡುತ್ತು.
ಎಲ್ಲೋರಿಂಗೂ ಅರ್ತ ಅಪ್ಪಲೆ ಸರಳ ಕನ್ನಡ  ಭಾಷೇಲಿ “ಸರಳ ಜೀವನದಿಂದ ಸಮೃದ್ಧ ಚಿಂತನೆಯೆಡೆಗೆ ” ಪುಸ್ತಕಲ್ಲಿ ಅವರ ವಿವಿಧ ವಿಚಾರಂಗಳ ವಿವರಿಸಿದ್ದವು.
ಮೈಸೂರಿನ “ಪ್ರಜೀವಾ “ ಹೇಳ್ತ ಪತ್ರಿಕೆಲಿ ಅವರ ಲೇಖನ ಮಾಲೆಗೋ ಪ್ರಕಟ ಆಯಿದು.
ಸಸ್ಯಶಾಸ್ತ್ರಜ್ಞ ಆಗಿದ್ದರೂ  ಕೇಶವ ಮಾವಂಗೆ ಜ್ಯೋತಿಷ್ಯ , ವೇದಗಣಿತ ಇತ್ಯಾದಿ ಪಾರಂಪರಿಕ ಭಾರತೀಯ ವಿಚಾರಂಗಳಲ್ಲೂ ಅಪಾರ ಜ್ಞಾನ ಇತ್ತು.
ಖಗೋಳ ಶಾಸ್ತ್ರದ ಬಗ್ಗೆ ತಮ್ಮದೇ ಆದ ಸಿದ್ಧಾಂತ ಅವರದ್ದಿತ್ತು . ಅದರ “The cosmos” ಮತ್ತೆ “Helical helix” ಎರಡು ಪುಸ್ತಕಲ್ಲಿ ವಿವರಿಸಿದ್ದವು. (ಇದರ ಒಂದು ವಿಡಿಯೋ ತುಣುಕು http://www.youtube.com/watch?v=ub-Wg6s-_TM&feature=player_embedded ಲಿ ಇದ್ದು).
ನ್ಯೂಟನ್ ನ ಚಲನೆಯ ತತ್ವಂಗೋ ಸುಳ್ಳು, ಪಾಶ್ಚಾತ್ಯ ವೈದ್ಯ ಪದ್ಧತಿಯ ತಪ್ಪುಗೊ, ಈಗ ವಿಜ್ಞಾನ ಹೇಳಿ ಮಕ್ಕೊಗೆ ನಾವು ಹೇಳಿ ಕೊಡುವ ತಪ್ಪುಗೋ, ಇತ್ಯಾದಿ ಹಲವು ವಿಚಾರಧಾರೆಗಳ “Goodbye to ruling science, a new proposal for science” ಹೇಳ್ತ ಪುಸ್ತಕಲ್ಲಿ ವಿವರವಾಗಿ ಬರದ್ದವು.
ಕುಟುಂಬಲ್ಲಿ ಒಂದಾಗಿ ಡಾ.ಕೇಶವ ಮಾವ

ಎಷ್ಟೋ ಜೆನ ವಿದ್ವಾಂಸರ ಈ ವಿಚಾರವಾಗಿ ಚರ್ಚೆಗೂ ದಿನುಗೆಳಿದ್ದವು.  ಅವು ಪ್ರತಿಪಾದಿಸಿದ ಪ್ರತಿಯೊಂದು ವಿಚಾಂಗೊಕ್ಕು ಸ್ಪಷ್ಟ ಉತ್ತರ ಅವರ ಹತ್ತರೆ ಇತ್ತಿದ್ದು.
ತನ್ನ ಎಪ್ಪತ್ತೊಂದನೆ ವಯಸ್ಸಿಲ್ಲು ಬರಿ ಕಣ್ಣಿಲ್ಲಿ ಆಕಾಶಲ್ಲಿಪ್ಪ ವಿವಿಧ ನಕ್ಷತ್ರಂಗಳ ಗುರುತಿಸಿ ಮಕ್ಕೊಗೆ ಮಾಹಿತಿ  ಕೊಟ್ಟೋ೦ಡು ಇತ್ತಿದವು.
ಹವ್ಯಕ ಸಮುದಾಯಲ್ಲಿ ಅವರ ವಿಶೇಷವಾದ ಅಧ್ಯಯನ ಹೇಳಿರೆ ಜಮದಗ್ನಿ ಗೋತ್ರದವರ  “ವಂಶವೃಕ್ಷ “ ರಚಸಿದ್ದು – ಇದಕ್ಕಾಗಿ ಕಾಸರಗೋಡು, ಉತ್ತರಕನ್ನಡ, ಬೇರೆ ಬೇರೆ ಊರು ಸುತ್ತಿ ಹಿರಿಯರ ಕಂಡು ಮಾಹಿತಿ ಪಡದು ಸುಮಾರು ೨೫ ತಲೆಮಾರಿಂದಲೂ ಜಮದಗ್ನಿ ಗೋತ್ರಲ್ಲಿ ಆಗಿ ಬಂದವರ  “ವಂಶವೃಕ್ಷ ” ರಚಿಸಿ ಮಡುಗಿದ್ದವು.
ಸದಾ ಒಂದು ಬೆಳಿ ಲುಂಗಿ, ಸಾಮಾನ್ಯ ಅಂಗಿ , ಒಂದು ಜೋಳಿಗೆ ಹಾಕ್ಯೊಂಡು  ಸರಳ ಉಡುಪಿಲ್ಲಿ ಇತ್ತ ಕೇಶವ ಮಾವಂಗೆ ಮಕ್ಕಳ ಬಗ್ಗೆ ವಿಶೇಷ ಪ್ರೀತಿ.
ಯಾವಾಗಲೂ ಮಕ್ಕೊಗೆ ಪ್ರಕೃತಿಲ್ಲಿಪ್ಪ ವಿವಿಧ ಕುತೂಹಲಕರ ಸಂಗತಿಗಳ ಸ್ವಾರಸ್ಯಪೂರ್ಣವಾಗಿ ವಿವರಿಸಿ ಹೇಳುಗು. ಸಹಜ ಜೀವನ ಸಮೃದ್ಧ ಚಿಂತನೆಯ ಮಾರ್ಗವ ತೋರುಸಿಕೊಟ್ಟ ಅವು ಯೋಗ ಜೆವನವ ನಡೆಸಿ ಯೋಗಿಯಾಗಿಯೇ ಪ್ರಾಣ ತ್ಯಾಗ ಮಾಡಿದ್ದವು.
ಪ್ರಖ್ಯಾತ ಪರಿಸರ ವಿಜ್ಞಾನಿ ಪಳ್ಳತ್ತಡ್ಕ  ಕೇಶವ ಭಟ್ಟರ ಪೂರ್ಣ bio-data  http://helicalhelix.blogspot.com/ ಹೇಳ್ತ  ಕೊಂಡಿಲ್ಲಿ ಇದ್ದು. ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನ ಪ್ರಕಟ ಆಯಿದು . ಹಾಂಗೆ ಅವರ ಬಗ್ಗೆ ಎಲ್ಲ ಪತ್ರಿಕೆಲೂ ಲೇಖನಗೋ ಬಯಿಂದು.
ಅಂಥ ಮಹಾನ್ ವಿಜ್ಞಾನಿಯ ಕಳಕ್ಕೊಂಡದು ಹವ್ಯಕ ಸಮುದಾಯಕ್ಕೆ ಅಪಾರ ನಷ್ಟ.
ಹೆಲಿಕಲ್ ಹೆಲಿಕ್ಸ್ - ಡಾ. ಪಳ್ಳತ್ತಡ್ಕ ಕೇಶವ ಭಟ್
ಹವ್ಯಕರ ಹೆಮ್ಮೆಯಾದ ಅವು ಹಾಕಿಕೊಟ್ಟ ಜೀವನ ಪಥಲ್ಲಿ ನಡದರೆ ಯಾವುದೇ ರೋಗ ಬಾಧೆ ಇಲ್ಲದ್ದೆ ಜೀವನ ಸುಖಕರವಾಗಿ ನಡೆಶುಲಕ್ಕು.
ಡಾ | ಪಳ್ಳತ್ತಡ್ಕ ಕೇಶವ ಭಟ್ ಅವರ ಬಗ್ಗೆ ಹಾಲ್ದೊಡ್ಡೇರಿ ಸುಧೀಂದ್ರ ವಿಜಯಕರ್ನಾಟಕಲ್ಲಿ ಬರದ “ನೆಟ್-ನೋಟ” ಅಂಕಣ ಇಲ್ಲಿದ್ದು:

17 thoughts on “ಮರೆಯಲಾಗದ್ದ ಮಹಾನ್ ಸಸ್ಯಶಾಸ್ತ್ರಜ್ಞ ಡಾ.ಪಳ್ಳತ್ತಡ್ಕ ಕೇಶವ ಭಟ್

  1. Dr. Pallattadka Keshava Bhat was a living legendary for nature lovers, I have been in his contact since my early childhood, have read many of his articles, and also attended some lecture programs, I could understand the essence of his discourses only after joining to Ayurveda studies, we really lost one GEM, My prayers to Lord Almighty for peace to the departed soul and courage to his family and all well wishers to bear the loss, we have a lot to learn from his life, let us try for it…

  2. ಅಪ್ಪು .ಪಳ್ಳತ್ತಡ್ಕ ಕೇಶವ ಮಾವ ಅಪೂರ್ವ ವ್ಯಕ್ತಿ. ಅವು ಕಾಯಾ-ವಾಚಾ -ಮನಸಾ ಹೇಳಿದ ಹಾಂಗೆ ಮಾಡಿ ತೋರ್ಸಿದವು. ಅವು “ಸರಳ ಜೀವನದಿಂದ ಸಮೃದ್ಧ ಚಿಂತನೆಯೆಡೆಗೆ ” ಹೇಳ್ತ ಪುಸ್ತಕಲ್ಲಿ ಹಲವು ಉಪಯುಕ್ತ ಮಾಹಿತಿಗಳ ಕನ್ನಡ ಭಾಷೇಲಿ ಕೊಟ್ಟಿದವು.

  3. ನಮ್ಮ ಹವ್ಯಕ ಸಮಾಜ ಹೆಮ್ಮೆ ಪಡುವಂಥ ಪಳ್ಳತ್ತಡ್ಕ ಕೇಶವ ಮಾವನ ಪರಿಚಯ ನಿಜಕ್ಕು ಶ್ಲಾಘನೀಯ. ಆನು ನೋಡಿದ ಕೆಲವೇ ಅಧ್ಭುತ ವ್ಯಕ್ತಿಗಳಲ್ಲಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರು ಒಬ್ಬರು. ಸಸ್ಯ ಶಾಸ್ತ್ರದ ಮಹಾ ಪಂಡಿತ. ನಮ್ಮ ಆಹಾರ ಕ್ರಮದ ಬಗ್ಗೆ ಹೇಳಿ ಕೊಟ್ಟಂಥಾ ವ್ಯಕ್ತಿ. ಅವರ “Holistic way of Life” ಹೇಳ್ತ ಪುಸ್ತಕ ಆನು ಓದಿದ್ದೆ. ಅವರ ತತ್ವಂಗೊಕ್ಕೆ ನಮ್ಮ ದೇಶಲ್ಲಿ ಪ್ರಚಾರ ಸಿಕ್ಕಿದ್ದಿಲ್ಲೆ. ಅದು ವಿಶಾದನಿಯ. ಅವರ ಕೆಲವು ಪುಸ್ತಕಂಗಳ ನಮ್ಮ ಹವ್ಯಕರು ಓದುವಂತಾಗಲಿ ಹೇಳಿ ಎನ್ನ ಬಿನ್ನಹ.

  4. ನಮ್ಮ ಹವ್ಯಕ ಸಮಾಜ ಹೆಮ್ಮೆ ಪಡುವಂಥ ಪಳ್ಳತ್ತಡ್ಕ ಕೇಶವ ಮಾವನ ಪರಿಚಯ ನಿಜಕ್ಕು ಶ್ಲಾಘನೀಯ. ಆನು ನೋಡಿದ ಕೆಲವೇ ಅಧ್ಭುತ ವ್ಯಕ್ತಿಗಳಲ್ಲಿ ಡಾ.ಪಳ್ಳತ್ತಡ್ಕ ಕೇಶವ ಭಟ್ಟರು ಒಬ್ಬರು. ಸಸ್ಯ ಶಾಸ್ತ್ರದ ಮಹಾ ಪಂಡಿತ. ನಮ್ಮ ಆಹಾರ ಕ್ರಮದ ಬಗ್ಗೆ ಹೇಳಿ ಕೊಟ್ಟಂಥಾ ವ್ಯಕ್ತಿ. ಅವರ “Holistic way of Life” ಹೇಳ್ತ ಪುಸ್ತಕ ಆನು ಓದಿದ್ದೆ. ಅವರ ತತ್ವಂಗೊಕ್ಕೆ ನಮ್ಮ ದೇಶಲ್ಲಿ ಪ್ರಚಾರ ಸಿಕ್ಕಿದ್ದಿಲ್ಲೆ. ಅದು ವಿಶಾದನಿಯ. ಅವರ ಕೆಲವು ಪುಸ್ತಕಂಗಳ ನಮ್ಮ ಹವ್ಯಕರು ಓದುವಂತಾಗಲಿ ಹೇಳಿ ಎನ್ನ ಬಿನ್ನಹ.

  5. ವೇಣೂರಣ್ಣ, ನಮ್ಮ ಸಮಾಜ ಹೆಮ್ಮೆ ಪಡುವಂಥ ಪಳ್ಳತ್ತಡ್ಕ ಕೇಶವ ಮಾವನ ಪರಿಚಯ ಬೈಲಿಂಗೆ ಮಾಡಿದ್ದಿ. ನಮ್ಮ ಆಹಾರ ಕ್ರಮದ ತಪ್ಪು ಒಪ್ಪುಗಳ ನವಗೆ ಚೆಂದಲ್ಲಿ ವಿವರ್ಸಿ ಹೇಳಿ ಕೊಟ್ಟಂಥಾ ವ್ಯಕ್ತಿ. ಆಹಾರವೇ ಎಲ್ಲಾ ಅನಾರೋಗ್ಯದ ಮೂಲ ಹೇಳಿ, ಯಾವ ಆಹಾರ ತೆಕ್ಕೊಂಡು ಹೇಂಗೆ ಆರೋಗ್ಯವಂತರಾಗಿ ಇಪ್ಪಲಕ್ಕು ಹೇಳಿ ಮಾದರಿಯಾಗಿ ನಡದು ತೋರ್ಸಿದವ್ವು ಕೇಶವ ಮಾವ°.
    ನಾವೆಲ್ಲಾ ಅವು ಹಾಕಿ ಕೊಟ್ಟಂಥಾ ದಾರಿಲಿ ನಡದು ಆರೋಗ್ಯವಂತರಪ್ಪ ಹಾಂಗೆಯೇ ಅವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ ಹೇಳಿ ದೇವರಲ್ಲಿ ಪ್ರಾರ್ಥಿಸುವ°..

  6. ಡಾ | ಪಳ್ಳತ್ತಡ್ಕ ಕೇಶವ ಭಟ್ ಅವರ ಬಗ್ಗೆ ಹಾಲ್ದೊಡ್ಡೇರಿ ಸುಧೀಂದ್ರ ವಿಜಯಕರ್ನಾಟಕಲ್ಲಿ ಬರದ “ನೆಟ್-ನೋಟ” ಅಂಕಣ ದ ಸಂಕೋಲೆ ಸರಿಯಾಗಿ ಕೆಲಸ ಮಾಡುತ್ತಿಲ್ಲೆನ್ನೆ 🙁

  7. ವೇಣೂರಣ್ಣನ ಲೇಖನ ತುಂಬಾ ಒಳ್ಳೆ ಮಾಹಿತಿ ಕೊಡುತ್ತು. ಕೇಶವಣ್ಣನ ಮಕ್ಕೊ ಎಲ್ಲ ಎಲ್ಲಿದ್ದವು, ಎಂತ ಮಾಡ್ತವು, ಹೆಸರೆಂತ ಇತ್ಯಾದಿ ತಿಳಿಯೆಕ್ಕು ಹೇಳಿ ಎನ್ನ ಒಂದು ವೈಯ್ಯಕ್ತಿಕ ಆಶೆ. ದಯಮಾಡಿ ತಿಳಿಶುಲೆ ಎಡಿಗಾ . . .

  8. enna doddappana pulliya maduveli keshava maavanannoo, avara french student ondu koosinannoo thindige koorsi, thindi kaapi kottu upachaara maadiddu monne monne heluva haange aavtaa iddu. adu kaludu 1 varshave aagiyondu banthu.
    enna maavanoru, matthe pallatthadka keshava bhat 10ne varege shaaleli sahapaatigo ada. ee lekhanava maavange odi heliyappaga avu theeri hodavva heli bejaaru maadigondavu.
    “sarala vyakthiya maadari vyakthithva” keshava maavandu.

    1. ಕೇಶವ ಮಾವನ ಜೀವನ -ಸಾಧನೆ -ಒಡನಾಡಿಗಳ ಅನುಭವ ಕುರಿತ ಒಂದು ಪುಸ್ತಕ ಹೊರ ತಪ್ಪ ಆಲೋಚನೆಲಿ ಕುಟುಂಬಸ್ಥರೆಲ್ಲೋರು ಇದ್ದವು. ಎಲ್ಲೋರಿಂಗೂ ಈ ಪುಸ್ತಕಕ್ಕೆ ಲೇಖನ/ ಅನುಭವ ಕಲಿಸುವ ಅವಕಾಶ ಇದ್ದು.

  9. ಆನು ಸಣ್ಣಾದಿಪ್ಪಗ ಗೋಳಿತ್ತಡ್ಕ ಸಣ್ಣಜ್ಜನ ಮನೆಗೆ ಹೋಗಿಪ್ಪಾಗ ಈ ಪಳ್ಳತ್ತಡ್ಕ ಮಾವನ ಬಗ್ಗೆ ಕೇಳಿತ್ತಿದ್ದೆ. ಅವರ ನೋಡೆಕ್ಕು ಹೇಳಿ ಭಾರೀ ಆಶೆ ಇತ್ತು. ಹಾಂಗೆ ಒಂದು ದಿನ ವೆಣೂರಣ್ಣ ನ ಮನೆಲಿ ತಾಳಮದ್ದಳೆ ಮುಗಿಶಿ ಮನೆಗೆ ತಲ್ಪಿ ಆಪ್ಪಾಗ ಗೊಂತಾತು ಪಳ್ಳತ್ತಡ್ಕ ಬಂದಿತ್ತಿದ್ದವ್, ಮಂಗಳೂರಿಲಿ ಬೇರೆ ಕಾರ್ಯಕ್ರಮ ಇತ್ತ ಕಾರಣ ಬೇಗ ಹೊದವ್ ಹೇಳಿ. ಇನ್ಯಾವಾಗ ಅವ್ವ್ ಸಿಕ್ಕುಗೋ ಹೇಳಿ ಕಾದು ಕೂದ ಎನಗೆ ಮೊನ್ನೆ ಏಪ್ರಿಲ್ ಲೀ ಬಲಿಪ್ಪಜ್ಜನ ಪುಸ್ತಕ ಬಿಡುಗಡೆ ಲಿ ಸಿಕ್ಕಿದವ್. ಹೋಗಿ ಮಾತಡ್ಸಿಯಪ್ಪಾಗ ಖುಷಿ ಆತು, ಸುಮಾರು ಸಮಯಂದ ಎನ್ನ ಗುರ್ತ ಇಪ್ಪೊರ ಹಾಂಗೆ ಕೈ ಹಿಡ್ಕೊಂಡು ಮಾತಾಡಿದವ್. ಒಬ್ಬ ಅದ್ಭುತ ವ್ಯಕ್ತಿಯ ಮುಖತಹ ಭೇಟಿ ಆದ್ದು ಎನಗೆ ತುಂಬಾ ಖುಷಿ ಕೊಟ್ಟತ್ಟು.
    ಪಲ್ಳತಡ್ಕ ಮಾವ ಸದಾ ನಮ್ಮೊಟ್ಟಿಂಗೆ ಇದ್ದವ್ ಹೇಳಿ ಗ್ರೇಷಿಗೊಂಡು ಪುನಹ ನಮ್ಮೂರ್ಲೀಯೇ ಹವ್ಯಕರಾಗಿಯೇ ಹುಟ್ಟಿ ಬರಲಿ ಹೇಳಿ ಬೇಡುತ್ತೆ

  10. ಮಾಹಿತಿ ಪೂರ್ಣ ಲೇಖನ.. ವೇಣೂರಣ್ಣ
    ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ ಹೇಳ್ತದೆ ಪ್ರಾರ್ಥನೆ..

  11. ಡಾ| ಪಳ್ಳತ್ತಡ್ಕ ಕೇಶವ ಭಟ್ಟರ ಬಗ್ಗೆ ಅವರ ಸೋದರ ಅಳಿಯನೇ ಬರದ ಈ ನುಡಿ ನಮನ ಸಮಯೋಚಿತ.
    ಡಾ| ಭಟ್, ನಮ್ಮ ಸಮಾಜಕ್ಕೆ, ನಾಡಿಂಗೆ ಮಾತ್ರ ಅಲ್ಲದ್ದೆ ವಿಶ್ವಕ್ಕೇ ಒಂದು ಆಸ್ತಿ ಆಗಿ ಇತ್ತಿದ್ದವು. ಸರಳತೆ ಹೇಳುವದಕ್ಕೆ ಭಾಷ್ಯ ಬರವದು ಇದ್ದರೆ ಇವಕ್ಕಿಂತ ಒಳ್ಳೆ ಉದಾಹರಣೆ ಸಿಕ್ಕ. ಅತಿ ಉನ್ನತ ಮಟ್ಟದ ಚಿಂತನೆ ಇದ್ದರೂ ಸಣ್ಣ ಮಕ್ಕಳೊಟ್ಟಿಂಗೆ ಮಕ್ಕಳಾಗಿ ಬೆರವದು, ಅವರೊಟ್ಟಿಂಗೆ ಸಂವಾದ ಮಾಡುವದು, ಆಡುವದು ಎಲ್ಲಾ ನೋಡಿದ್ದೆ. ಸಾತ್ವಿಕ ಆಹಾರದ ವಿಷಯಲ್ಲಿ ಅವರ ಚಿಂತನೆಗಳ ಕೇಳಿದ್ದೆ. ಮನಸ್ಸಿಂಗೆ ಮುಟ್ಟುವ ಹಾಂಗೆ, ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ವಿಷಯಂಗಳ ಸರಳವಾಗಿ ಅವು ಪ್ರಸ್ತುತ ಪಡುಸುವ ರೀತಿ ಮೆಚ್ಚೆಕಾದ್ದೆ. ನಮ್ಮ ನಾಡಿಲ್ಲಿ ಗುರುತಿಸುವದಕ್ಕಿಂತ ಹೆಚ್ಚಾಗಿ ಹೆರ ದೇಶದವು ಅವರ ಪಾಂಡಿತ್ಯವ, ಪ್ರತಿಭೆಯ ಗುರುತಿಸಿದ್ದವು.
    ಎಂಗಳ ಮಗಳ ಮದುವೆಗೆ ಬಂದು ಆಶೀರ್ವಾದ ಮಾಡಿಕ್ಕಿ ಊಟಕ್ಕೆ ಹೋಪಗ ಆನು ಹೇಳಿದೆ “ನಿಂಗೊಗೆ ಬೇಕಾದ ಹಾಂಗಿಪ್ಪ ಅಡಿಗೆ ತಯಾರಿ ಇದ್ದೋ ಇಲ್ಲೆಯೋ” ಹೇಳಿ. ನೀನು ಆಲೋಚನೆ ಮಾಡೆಡ. ಆನು ಬೇಕಾದ್ದರ ನೋಡಿ ತೆಕ್ಕೊಂಬೆ ಹೇಳಿದವು (ಆಹಾರಲ್ಲಿ ಅವು ಕೆಂಪು ಮೆಣಸು, ಸಕ್ಕರೆ, ಟೊಮೆಟೊ, ಪೋಲಿಶ್ ಮಾಡಿದ ಅಕ್ಕಿಯ ಅಷನ, ಮತ್ತೆ ಕೆಲವು ತರಕಾರಿ ತೆಕ್ಕೊಂಡು ಇತ್ತಿದ್ದವಿಲ್ಲೆ. ಅಡಿಗೆಲಿ ಸಕ್ಕರೆ ಬದಲು ಬೆಲ್ಲ, ಕೆಂಪು ಮೆಣಸಿನ ಬದಲು ಕಾಳು ಮೆಣಸು, ಕಾಪಿ-ಚಾ ದ ಬದಲು ಎಳ್ಳು ಬೆಲ್ಲ ಪಾನಕದ ಉಪಯೋಗ ಇದೆಲ್ಲಾ ಅವು ಕೊಟ್ಟೊಂಡು ಇತ್ತಿದ್ದ ಕೆಲವು ಸಲಹೆಗೊ ಮತ್ತೆ ಆಚರಣೆಗೊ)
    ಈ ಸಂದರ್ಭಲ್ಲಿ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಹೇಳಿ ಪ್ರಾರ್ಥನೆ ಮಾದುವದರೊಟ್ಟಿಂಗೆ ಅವರ ಸರಳತೆ ಮತ್ತೆ ಉದಾತ್ತ ಚಿಂತನೆಲಿ ರೆಜಾ ಅಂಶ ಆದರೂ ನಮ್ಮ ಜೀವನಲ್ಲಿ ಅಳವಡಿಸಿದರೆ ಅದುವೇ ನಾವು ಅವಕ್ಕೆ ಕೊಡುವ ಗೌರವ.

  12. ಡಾ.ಪಳ್ಳತ್ತಡ್ಕ ಕೇಶವ ಭಟ್ಟರ ಬಗ್ಗೆ ಬೈಲಿಲ್ಲಿ ಬಂದ ಲೇಖನ ಲಾಯಕಿದ್ದು. ಸಕಾಲಿಕ ಕೂಡ. ಮಂಗಳೂರು ಹವ್ಯಕ ಸಭಾಲ್ಲಿ ನಾಲ್ಕು ವರ್ಷ ಹಿಂದೆ ಅವರ ಮಹತ್ವಪೂರ್ಣ ಭಾಷಣ ಕೇಳಿ ಅವರ ಮೆಚ್ಚಿಕೊಂಡವ ಆನೂ ಒಬ್ಬ. ಮನ್ನೆ ಮಂಗಳೂರಿಲ್ಲಿ ಅವಕ್ಕೆ ನುಡಿ ನಮನ ನಡದತ್ತು. ಅವರ ಅಭಿಮಾನಿಗೊ ತುಂಬಾ ಜೆನ ಸೇರಿತ್ತಿದ್ದವು. ಎಂಗಳೂ ಹೋಗಿತ್ತಿದ್ದೆಯ. ಶಾಸಕರಾದ ಯೋಗೀಶ್ ಭಟ್, ನಾಗರಾಜ ಶೆಟ್ಟಿ, ಮಾಜಿ ಕುಂಬಳೆ ಸುಂದರ ರಾವ್, ಮೊದಲಾಗಿ ದೊಡ್ಡವೆಲ್ಲ ಬಂದಿತ್ತಿದ್ದವು. ಮಣಿಪಾಲಲ್ಲಿ ರಾಜ ಮರ್ಯಾದೆಲಿ ಶವ ಸಂಸ್ಕಾರ ಮಾಡಿದ್ದವಾಡ. ವೆನೆಜುವೆಲಾಲ್ಲಿ ಡಾ. ಪಳ್ಳತ್ತಡ್ಕ ಅವರ ಅಭಿಮಾನಿ/ಅನುಯಾಯಿಗೊ 6500ಕ್ಕಿಂತಲೂ ಹೆಚ್ಚು ಜೆನ ಸೇರಿ ಮಣಿಪಾಲಲ್ಲಿ ದಹನ ಕಾರ್ಯ ನಡೆತ್ತ ಸಂದರ್ಭಲ್ಲೇ ಶ್ರದ್ದಾಂಜಲಿ ಅರ್ಪಿಸಿದವಾಡ. ಡಾ. ಪಳ್ಳತ್ತಡ್ಕ ಅವಕ್ಕೆ, ಅವರ ತತ್ವಂಗೊವಕ್ಕೆ ನಮ್ಮ ದೇಶಲ್ಲೂ ಒಳ್ಳೆ ಉತ್ತೇಜನ, ಮರ್ಯಾದಿ ಸಿಕ್ಕೆಕಾತು. ಅವರ ಸರಳ ಜೀವನ, ತತ್ವಂಗಳ ನಮ್ಮ ಜೀವನಲ್ಲೂ ಅಳವಡಿಸೆಂಡರೆ ಅದೇ ಅವಕ್ಕೆ ಕೊಡುತ್ತ ನಮ್ಮ ಗೌರವ.

  13. ಡಾ.ಪಳ್ಳತ್ತಡ್ಕ ಕೇಶವ ಭಟ್‌ ಅವರ ಕುರಿತು ಸುಬ್ರಹ್ಮಣ್ಯ ಬರೆದ ಲೇಖನ ಲಾಯಕಿದು. ಕೇಶವ ಮಾವ ಅವರ ವ್ಯಕಿತ್ವ, ಸಾಧನೆಗಳ ಕಟಿಟಕೊಡುವ ಲೇಖನ. ಇವರ ಕುರಿತು ಆನು ಕಳೆದ ವರ್ಷ ಪ್ರಜಾವಾಣಿ ಪತ್ರಿಕೆಗೆ ’ಇರಬೇಕು ಇಂಥವರು’ ಮಾಲಿಕೆಗೆ ಲೇಖನ ಬರೆದಿತ್ತಿದ್ದೆ. ಇವರ ಸರಳ ಜೀವನ, ಆಹಾರ ಕ್ರಮ, ತತ್ವ ಎಲ್ಲರಿಗೂ ಆದರ್ಶಪ್ರಾಯ, ಅನುಕರಣೀಯ ಕೂಡ.
    ಉಮಾ ಅನಂತ್‌, ಹಿರಿಯ ಉಪಸಂಪಾದಕಿ, ಸುಧಾ ವಾರಪತ್ರಿಕೆ, ಬೆಂಗಳೂರು

  14. ಕೇಶವ ಮಾವನ ಮೊನ್ನೆ ಮೊನ್ನೆ ಸುಬ್ಬಣ್ಣನ ವೇಣೂರು ಮನೆಲಿ ಆದ ಬಲಿಪ್ಪನ ಪ್ರಸಂಗ ಬಿಡುಗಡೆ ಕಾರ್ಯಕ್ರಮಲ್ಲಿ ನೋಡಿದ್ದು ಆನು. ಪುಳ್ಳಿಗೆ ರಸಾಯನ ಶಾಸ್ತ್ರ ಪಾಠ ಹೇಳಿ ಕೊಟ್ಟದು ಕಣ್ಣಿಲಿ (ಮೇಲೆ ಪಟಲ್ಲಿ ಇಪ್ಪದು) ಈಗಲೂ ಹಾಂಗೆ ಇದ್ದು. ಅತೀ ಸರಳ ಜೀವಿ, ಸಾತ್ವಿಕ ಮನುಶ್ಯ ನಮ್ಮೆಲ್ಲರ ಬಿಟ್ಟು ಹೋದವು ಹೇಳುವಗ ಮನಸ್ಸಿಂಗೆ ಬೆಜಾರು ಅವುತ್ತು. ಅವರ ಆತ್ಮಕ್ಕೆ ಭಗವಂಥ ಶಾಂತಿ/ಸದ್ಗತಿ ಕೊಡಲಿ, ಮತ್ತೆ ಅವರ ಆದರ್ಶಂಗ ನಮಗೆಲ್ಲ ದಾರಿ ದೀಪ ಆಗಲಿ ಹೇಳಿ ದೆವರಲ್ಲಿ ಪ್ರರ್ಥನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×