ಎಂ.ಟೆಕ್: ಹಳೆಮನೆ ರಶ್ಮಿ ಅಕ್ಕಂಗೆ ಚಿನ್ನದ ಪದಕ

September 11, 2012 ರ 7:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಲ್ಲಿ ಶರ್ಮಪ್ಪಚ್ಚಿ ಶುದ್ದಿ ಹೇಳಿಗೊಂಡು ಇಪ್ಪದು ನಿಂಗೊಗೆಲ್ಲಾ ಗೊಂತಿಪ್ಪದೇ; ಅಪ್ಪಚ್ಚಿ ಶುದ್ದಿಗಳ ಎಷ್ಟು ವಿವರವಾಗಿ ಚೆಂದಕ್ಕೆ ಹೇಳ್ತವು ಹೇಳಿಯೂ ನಿಂಗೊಗೆಲ್ಲಾ ಗೊಂತಿಪ್ಪದೇ. ಮರದ ಎಲ್ಲಾ ಗುಣಂಗ ಬೀಜಲ್ಲಿ ಇರ್ತು, ಮುಂದೆ ಅದು ಗಿಡ ಆಗಿ ಬೆಳಕ್ಕೊಂಡು ಬಪ್ಪಗ ಎಲ್ಲಾ ಗುಣಂಗ ಪ್ರಪಂಚಕ್ಕೆ ಕಾಣುತ್ತು ಹೇಳಿದ ಹಾಂಗೆ ಅಪ್ಪಚ್ಚಿಯ ಹಾಂಗೇ ಉಶಾರು ಆಗಿಯೊಂಡು ಈಗ ಚಿನ್ನದ ಪದಕ ಪಡಕ್ಕೊಂಡಿದು ಅವರ ದೊಡ್ಡಮಗಳು ರಶ್ಮಿ.
ಬೆಂಗಳೂರಿಲ್ಲಿಪ್ಪ ಎಂ.ಎಸ್. ರಾಮಯ್ಯ ಎಂಜಿನಿಯರ್ ಕಾಲೇಜಿಲ್ಲಿ 2010-12 ರಲ್ಲಿ ಡಿಜಿಟಲ್ ಎಲೆಕ್ಟ್ರೋನಿಕ್ಸ್ ವಿಶಯ ತೆಕ್ಕೊಂಡು ಅದರಲ್ಲಿ ಒಂದನೇ ರೇಂಕ್ ತೆಕ್ಕೊಂಡು ಚಿನ್ನದ ಪದಕವ ತನ್ನದಾಗಿಸಿಗೊಂಡತ್ತು.
ಒಲಿಂಪಿಕ್ ಸ್ಪರ್ಧೆಲಿ ಪದಕ ತೆಕ್ಕೊಂಡಷ್ಟೇ ಕೊಶಿ ಆತು” ಹೇಳಿತ್ತು ರಶ್ಮಿ.

ರಶ್ಮಿ ಅಕ್ಕನ “ಚಿನ್ನದ ರೆಂಕೆ”ಯ ನೆಗೆ!!

ಹಾಂಗೆ ನೋಡಿರೆ, ಒಂದನೇ ಬಹುಮಾನ ತೆಕ್ಕೊಂಡದು ಇದು ಮೊದಲು ಅಲ್ಲ. ಸಣ್ಣಪ್ರಾಯಂದಲೇ ಅದು ತನ್ನ ಪ್ರತಿಭೆ ನಿರಂತರವಾಗಿ ಬೆಳಗುತ್ತಾ ಇದ್ದು. ಅದು ಆಟ-ಪಾಠ ಎರಡರಲ್ಲಿಯೂ ಕೂಡಾ! ರಶ್ಮಿಯ ಎಲ್ಲಾ ಬೆಳವಣಿಗೆಯ ಹಿಂದೆ ಶರ್ಮಪ್ಪಚ್ಚಿ ಮತ್ತೆ ಚಿಕ್ಕಮ್ಮನ ಪ್ರೋತ್ಸಾಹ, ಅವರ ಶ್ರಮ, ಅದರ ಶ್ರದ್ಧೆ ಖಂಡಿತಾ ಇದ್ದು.
ಎಂ.ಆರ್.ಪಿ.ಎಲ್ ಶಾಲೆಲಿ ಕಲಿವಾಗ 7ನೇ ಕ್ಲಾಸಿಂದ 10 ನೇ ಕ್ಲಾಸ್ ವರೇಗೆ ನಿರಂತರ ಪ್ರತಿ ವರ್ಷವೂ  “Best Girl of the Class” ಪ್ರಶಸ್ತಿ ತೆಕ್ಕೊಂಡಿದು.
ಪಾಠಂಗಳಲ್ಲಿ ಪ್ರಥಮಂಗಳ ಸಾಧಿಸಿದ್ದು ಮಾತ್ರ ಅಲ್ಲದ್ದೆ ಆಟೋಟ ಸ್ಪರ್ಧೆಗಳಲ್ಲಿಯೂ “ಛಾಂಪಿಯನ್” ಅದ ಹೆಗ್ಗಳಿಕೆ ಇದರದ್ದು.
ಮಂಗಳೂರಿನ ಶಾರದಾ ಕಾಲೇಜಿಲ್ಲಿ ಪಿ.ಯು.ಸಿ ಕಲ್ತು ಹೆರ ಹೋಪಗ ಸಿಕ್ಕಿದ ಬಹುಮಾನ “Excellence in Academic & Co-Curricular activities”.
ಬೆಂಗಳೂರಿನ ಮಾತಾ ಅಮೃತಾನಂದಮಯಿ ಎಂಜಿನಿಯರ್ ಕಾಲೇಜಿಲ್ಲಿ Electronics & Communication ವಿಭಾಗಲ್ಲಿ B.Tech ಡಿಗ್ರಿಯ ಡಿಸ್ಟಿಂಕ್ಷನ್ ಲ್ಲಿ ತೆಕ್ಕೊಂಡು ಹೆರ ಬಂದಪ್ಪಗ ನಿರಂತರ ಅಧ್ಯಯನದ ಅವಕಾಶ ಕೊಡುವ “ಅಧ್ಯಾಪನ ವೃತ್ತಿಯೇ ಆಯೆಕ್ಕು” ಹೇಳಿ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿಲ್ಲಿ ಪ್ರಾಧ್ಯಾಪಿಕೆಯಾಗಿ ಕೆಲಸ ಮಾಡಿದ್ದು.

IEEE (Instritue of Electricals and Electronics Engineers) ಇದರ ಬೆಂಗಳೂರು ವಿಭಾಗಲ್ಲಿ ಒಂದು Conference ಲ್ಲಿ ವೈಜ್ಞಾನಿಕ ಲೇಖನ ಪ್ರಸ್ತುತಪಡಿಸಿದ್ದು ಮಾತ್ರ ಅಲ್ಲದ್ದೆ ಬೇರೆಯವರ ಸಹಯೋಗಂದ Defense Science Journal ಇದರಲ್ಲಿಯೂ ಲೇಖನ ಪ್ರಕಟ ಆಯಿದು.

ಮದುವೆ ಆದ ಮೇಲೆ M.Tech ಮಾಡುವದಕ್ಕೆ ಸಂಪೂರ್ಣ ಸಹಕಾರ ಮತ್ತೆ ಪ್ರೋತ್ಸಾಹ ಕೊಟ್ಟ ತನ್ನ ಗೆಂಡ ಕೊಯಂಗಾನ ಶಶಾಂಕನ ಮತ್ತೆ ಅತ್ತೆ ಮಾವನ ಹಾಂಗೂ ಅಪ್ಪ ಅಮ್ಮನ ಸಹಕಾರವ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ಬೈಲಿನ ಹೆರಿಯವರ ಎಲ್ಲರ ಆಶೀರ್ವಾದ ಬೇಡ್ತಾ ಇದ್ದು ನಮ್ಮ ಬೈಲಿನ ಕೂಸು ರಶ್ಮಿ.

ಸಾಧನೆ ಮಾಡುವ ಮನಸ್ಸಿದ್ದರೆ, ಛಲ ಇದ್ದರೆ, ಅನುಕೂಲ ವಾತಾವರಣ ಇದ್ದರೆ ಯಾವ ಸಾಧನೆಯನ್ನೂ ಮಾಡ್ಲಕ್ಕು ಹೇಳಿ ತೋರ್ಸಿಕೊಟ್ಟಿದು ರಶ್ಮಿ. “ಮದುವೆ ಆದ ಮತ್ತೆ ಕಲಿಯುವಿಕೆಯೇ ನಿಂದತ್ತು” ಹೇಳಿ ಗ್ರೇಶುವವಕ್ಕೆ ರಶ್ಮಿ ಅಕ್ಕ° ಮಾದರಿ. ಮನೆ ಮತ್ತೆ ಕಲಿಯುವಿಕೆಯ ತೂಗುಸಿಗೊಂಡು ನಮ್ಮ ಗುರಿಯ ಘನತೆಲಿ ಕಾಂಬಲಕ್ಕು ಹೇಳಿಯೂ ತೋರ್ಸಿಕೊಟ್ಟಿದು.

ಶರ್ಮಪ್ಪಚ್ಚಿಯ ವಾಚಿನ ಬೆಣಚ್ಚಿ ಎಷ್ಟಿದ್ದು ಹೇಳಿ ಬೈಲಿಂಗೇ ಗೊಂತಿದ್ದು. ಆ ಮನೆಂದಲೇ ಹೆರ ಹೊಳದು ಕಾಂಬ ರಮ್ಯ-ರಶ್ಮಿಗೊ ಮನೆಯ ಮನೆತನದ ಹೊಳಪಿನ ಇನ್ನಷ್ಟು ಬೆಳಗಲಿ.. ಎರಡು ಮನೆಯನ್ನೂ ಬೆಳಗಿಸಲಿ..
ಹಳೆಮನೆ ರಶ್ಮಿ ಅಕ್ಕಂಗೆ ತುಂಬಾ ತುಂಬಾ ಪ್ರೀತಿಯ ಅಭಿನಂದನೆಗೊ..

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಡಾಗುಟ್ರಕ್ಕ°
  ಸೌಮ್ಯ ಪ್ರಶಾಂತ

  ಅಭಿನಂದನೆಗೊ ರಶ್ಮಿ..
  ಜೀವನದ ಎಲ್ಲಾ ಹಂತಲ್ಲೂ ಯಶಸ್ಸು ಸಿಕ್ಕಲಿ..
  ಶ್ರೀ ಗುರುಗಳ,ರಾಮ ದೇವರ ಆಶೀರ್ವಾದ ನಿನಗಿರಲಿ… ಃ)

  [Reply]

  VA:F [1.9.22_1171]
  Rating: 0 (from 0 votes)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ರಶ್ಮಿಗೆ ಹಾರ್ದಿಕ ಶುಭಾಶಯಂಗೊ.. ” ಎಲ್ಲಿ ದಣಿವಿರದ ಗೈಮೆಯು ಕೈಯ ನೀಡಿಹುದೊ ಪರಿಪೂರ್ಣ ಸಫಲತೆಯ ಕಡೆಗದೆಲ್ಲಿ..”

  (ಮಧುರ ಗೀತಾಂಜಲಿ..ಪುಟ ೩೫ )

  [Reply]

  VN:F [1.9.22_1171]
  Rating: 0 (from 0 votes)
 3. ಅಚ್ಮಿ ಅಕ್ಕ

  ಸುಡ್ದಿ ಓದಿ ಸಂತೋಷ ಆತು ರಶ್ಮಿಗೆ ಹಾರ್ದಿಕ ಅಭಿನಂದನೆಗಳು

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ ಪೆರ್ವ

  ಅಭಿನ೦ದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 5. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ರಶ್ಮಿಗೆ ಅಭಿನಂದನೆಗೊ. ಶ್ರೀಅಕ್ಕಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 6. ಹಳೆಮನೆ ಮುರಲಿ
  ಮುರಲಿಕೃಷ್ಣ ಹಳೆಮನೆ

  ರಶ್ಮಿಯ ಸಾಧನೆ ನಿಜಕ್ಕೂ ಮೆಚ್ಚೆಕ್ಕಾದ್ದದೇ. ಈ ಸಂದರ್ಭಲ್ಲಿ ರಶ್ಮಿಯ ಯಜಮಾನ ಇಂಜಿನಿಯರ್ ಶಶಾಂಕಂಗುದೇ ಅಭಿನಂದನೆಗೊ… ಇಬ್ರುದೇ ಬೈಲಿಂಗೆ ಆದರ್ಶ ವ್ಯಕ್ತಿತ್ವ. ಇವರ ಇಬ್ರ “ಬೈಲಿನ ಈ ವರ್ಷದ ಹೆಮ್ಮೆಯ ವ್ಯಕ್ತಿಗೊ” ಆಗಿ ಗುರುತಿಸಿ ಎಲ್ಲೋರುದೇ ಅಭಿನಂದುಸೆಕ್ಕು. ಕೂಸು ಸಾಧಿಸಿದ್ದರಲ್ಲಿ ಭಾರೀ ಹೆಮ್ಮೆ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 7. ಶೇಡಿಗುಮ್ಮೆ ಕೃಷ್ಣ ಭಟ್ (ಕ್ಯಾಲಿಫೋರ್ನಿಯಾ,USA)

  ಎನ್ನ ಅಕ್ಕನ ಮಗಳ ಸಾಧನೆ ನೋಡಿ ತುಂಬಾ ಕುಶಿ ಆತು.
  ಅಭಿನಂದನೆಗೊ ರಶ್ಮಿ.

  [Reply]

  VA:F [1.9.22_1171]
  Rating: 0 (from 0 votes)
 8. ವಿಜಯತ್ತೆ

  ಎನ್ನ ಭಾವನ ಮಗಳು ರಶ್ಮಿ ಮಾಡಿದ ಸಾಧನೆ ಹವ್ಯಕ ಸಮಾಜಕ್ಕೆ ಒಂದು ಹೆಮ್ಮೆಯೇ ಸರಿ. ಅದರ ಜೀವನಲ್ಲಿ ಸಕಲ ಸೌಭಾಗ್ಯ ಸಿಕ್ಕಲಿ ಹೇಳಿ ಎನ್ನ ಹಾರೈಕೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕದೀಪಿಕಾನೀರ್ಕಜೆ ಮಹೇಶಮಂಗ್ಳೂರ ಮಾಣಿವಾಣಿ ಚಿಕ್ಕಮ್ಮಅಡ್ಕತ್ತಿಮಾರುಮಾವ°ವಸಂತರಾಜ್ ಹಳೆಮನೆಚೂರಿಬೈಲು ದೀಪಕ್ಕಸಂಪಾದಕ°ಪೆರ್ಲದಣ್ಣಸರ್ಪಮಲೆ ಮಾವ°ಚುಬ್ಬಣ್ಣಶ್ರೀಅಕ್ಕ°ಪವನಜಮಾವಅಜ್ಜಕಾನ ಭಾವವೇಣಿಯಕ್ಕ°ಶೇಡಿಗುಮ್ಮೆ ಪುಳ್ಳಿಪಟಿಕಲ್ಲಪ್ಪಚ್ಚಿವಿಜಯತ್ತೆಮುಳಿಯ ಭಾವಗಣೇಶ ಮಾವ°ಬೊಳುಂಬು ಮಾವ°ಜಯಗೌರಿ ಅಕ್ಕ°ಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ