ಸಾಧನೆಯ ಹಾದಿಲಿ ‘ಪ್ರಸನ್ನಕ್ಕ’

March 18, 2012 ರ 5:55 pmಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಂಗೆ ಬಾರದ್ದೆ ಸುಮಾರು ದಿನ ಆತದಾ, ಕಾಣೆಯಾದವರ ಪಟ್ಟಿಗೆ ಎನ್ನ ಹೆಸರು ಸೇರಿತ್ತೋ ಏನ ಹೇಳಿ ಗ್ರೇಶಿದೆ.
ಒಂದೇ ಮನೆಯವ್ವು ನಾವು..ರಜ್ಜ ದಿನ ಹೆರ ಹೋಗಿ ಬಪ್ಪದು ಎಲ್ಲ ಇದ್ದದೇ ಆದರೆ ಅಕೇರಿಗೆ ಮನೆಗೇ ಬಂದೆತ್ತೆಕನ್ನೇ !
ಇಲ್ಲಿಗೆ ಬಾರದ್ದರೂ ಮರತ್ತಿದಿಲ್ಲೆ  ಆನೂ ಆರನ್ನೂ ಮರದ್ದಿಲ್ಲೆ, ಎನ್ನನ್ನೂ ಆರೂ ಮರದ್ದವಿಲ್ಲೆ!
ಸುಮಾರು ದಿನಂದ ಹೇಳುಲೆ ಬಾಕಿ ಇಪ್ಪ ಶುದ್ದಿ ಸುಮಾರಿದ್ದು, ಯೇವುದರಿಂದ ಶುರು ಮಾಡೆಕು ಹೇಳಿಯೇ ಅಂದಾಜಿ ಆವ್ತಿಲ್ಲೆ !

ಓ ಮೊನ್ನೆ ವಿಶ್ವ ಹೆಮ್ಮಕ್ಕಳ ದಿನ ಕಳುತ್ತದ, ಅದೇ ರೀತಿ ಅಮ್ಮಂದ್ರ ದಿನವೂ ಬಪ್ಪದಿದ್ದು. ಹೆಮ್ಮಕ್ಕೊಗೆ..
ಅಮ್ಮಂದ್ರಿಂಗೆ ಒಂದು ದಿನಲ್ಲಿ ಗೌರವ..ಪ್ರೀತಿ..ಅಭಿನಂದನೆ..ಧನ್ಯವಾದ ಎಲ್ಲ ಕೊಟ್ಟರೆ ಸಾಕಾ? ಹೇಳಿ ಮುಗಿಗಾ?
ಆದರೂ ಒಂದು ದಿನ ಅದಕ್ಕೆ ಬೇಕಾಗಿ ಮೀಸಲಿಡುವ ಪ್ರಯತ್ನ ಪಾಶ್ಚಾತ್ಯರದ್ದು. ನವರಾತ್ರಿಲಿ,ದೇವಿ ಪೂಜೆಲಿ ನಾವುದೇ ಆ ಮಹತ್ತರ ಶಕ್ತಿಗೆ ಕೃತಜ್ಞತೆ ಹೇಳುವ ಪ್ರಯತ್ನವನ್ನೇ ಮಾಡುದಲ್ಲದಾ?!
ಸಮಾಜಲ್ಲಿ, ನಿತ್ಯಜೀವನಲ್ಲಿ ಹೆಮ್ಮಕ್ಕೊ ಅನುಭವಿಸುವ ಸಹಿಸುವ ಸಮಸ್ಯೆಗೊ ಅದೆಷ್ಟೋ..
ಅದೆಲ್ಲವನ್ನೂ ಮೀರಿ ಬೆಳೆವ ಶಕ್ತಿಯ, ತಾಳ್ಮೆಯ ಅದೆಲ್ಲಿಂದಲೋ ಕೊಟ್ಟಿದ ದೇವರು ಹೆಮ್ಮಕ್ಕೊಗೆ. ಅದೇ ರೀತಿ ಸಾಧನೆ ಮಾಡಿದ ಒಂದು ಅಕ್ಕನ ಕಥೆ ಇದು…
ಕುಂಬ್ಳೆ ಸೀಮೆಯ ಒಂದು ಗ್ರಾಮಲ್ಲಿ ಹುಟ್ಟಿ ಬೆಳೆದ ಅಕ್ಕ ’ಪ್ರಸನ್ನಾ’, ನಮ್ಮ ಸಮಾಜಲ್ಲಿ ಸಾಮಾನ್ಯವಾಗಿ ಅಪ್ಪಹಾಂಗೆ 18-19 ರ ಪ್ರಾಯಕ್ಕೆ ಮದುವೆ ಆಗಿ ಬಂದದು ಕೂಡುಕುಟುಂಬಕ್ಕೆ.
ಮನೆ ತುಂಬ ಜನ, ಹಟ್ಟಿ ಕೆಲಸ, ಮಡಿ-ಮೈಲಿಗೆ, ಆಳುಗೊ ಅಡಕ್ಕೆ ತೋಟ… ಒಬ್ಬ ಮಗ..
ಇದೆಲ್ಲದರ ನಿಭಾಯಿಸಿಗೊಂಡು ಹೆರಟ ಈ ಅಕ್ಕ ಒಬ್ಬ ಸಾಮಾನ್ಯ ಹೆಮ್ಮಕ್ಕೊ ಆಗಿತ್ತಿದ್ದವು. ಆದರೆ ಅವರ ಒಳಾಣ ಒಂದು ಚೈತನ್ಯ ಅವರ ಸುಮ್ಮನಿಪ್ಪಲೆ ಬಿಟ್ಟತ್ತಿಲ್ಲೆ…
ತನ್ನ ಮನಸ್ಸಿನ ಭಾವನೆಗೊಕ್ಕೆ ಒಂದು ರೂಪ ಕೊಟ್ಟವು.
ಸಂಸಾರದ ನೂರು ಜಂಜಾಟಂಗಳ ನಡೂಕೆ ಪೆನ್ನು ಕಾಗದ ಜೀವನದ ಇನ್ನೊಂದು ಹಂತಕ್ಕೆ ಅವರ ಏರ್ಸಿತ್ತು.
ಓದುವ ಹವ್ಯಾಸ ಮೊದಲಿಂದಲೇ ಇದ್ದ ಅಕ್ಕ ಮನೆಗೆಲಸದ ಮಧ್ಯೆ ಪುರ್ಸೊತ್ತಪ್ಪಗ ಬರವಲೆ ಶುರು ಮಾಡಿದವ್ವು. ಬರದ್ದರ ಪತ್ರಿಕೆಗೊಕ್ಕೆ ಕಳುಸಿದವು, ಉದಯವಾಣಿ,ಹೊಸದಿಗಂತ,ಕೋಲಾರ ಪತ್ರಿಕೆ,ತುಷಾರ, ಸುಧಾ,ಮಂಜುವಾಣಿ, ಬಾಲಮಂಗಳ, ಗಿಳಿವಿಂಡು ಇತ್ಯಾದಿ ಪತ್ರಿಕೆಗಳಲ್ಲಿ ಅವರ ಕಥೆ, ಕವನ, ಲೇಖನಂಗೊ ಪ್ರಕಟ ಆತು.

ಅಡುಗೆಕೋಣೆಲಿ ಒಲೆಯ ಮುಂದೆ ಹೆಚ್ಚು ಹೊತ್ತು ಕಳಕ್ಕೊಂಡಿದ್ದ ಒಂದು ಅಕ್ಕನ ಸಾಧನೆ ಇಷ್ಟಕ್ಕೇ ನಿಂದಿದಿಲ್ಲೆ…”ಅಖಿಲ ಭಾರತ ಮಟ್ಟದ ದಿ|ಕೊಡಗಿನ ಗೌರಮ್ಮ ಸ್ಮಾರಕ ದತ್ತಿನಿಧಿ ಕಥಾ ಸ್ಪರ್ಧೆ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ನಡೆಸಿದ ಚುಟುಕುಕಥಾ ಸ್ಪರ್ಧೆ, ಕಣಿಪುರ ಪ್ರತಿಷ್ಠಾನ ನಡೆಸ್ದ ’ಶೇಣಿ ಸಂಸ್ಕರಣಾಲೇಖನ ಸ್ಪರ್ಧೆ”ಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದವು. ಆರಿಂಗೂ ಗೊಂತಿಲ್ಲದ್ದ ಒಬ್ಬ ಸಾಮಾನ್ಯ ಹೆಮ್ಮಕ್ಕೊ ಲೇಖಕಿ “ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ’ ಆಗಿ ಬೆಳದವು.
ಈಗ ಸುಮಾರು ಪತ್ರಿಕೆಂದ ಅವಕ್ಕೆ ಅಂಕಣ ಬರವಲೆ ಆಹ್ವಾನ ಇದ್ದು, ಕೆಲವು ಜನ ಅವರ ಕಥಾ ಸಂಕಲನ ಮಾಡುಲೂ ಮುಂದೆ ಬಯಿಂದವು.
ಊರಿಲ್ಲಿ ಕೆಲವು ಶಾಲೆಗಳಿಂಗೆ, ಬೇರೆ ಬೇರೆ ಕಡೆಂಗೆ ಅವಕ್ಕೆ ಭಾಷಣ ಮಾಡುಲೆ ಸಂಪನ್ಮೂಲ ವ್ಯಕ್ತಿ ಆಗಿಯೂ ದಿನಿಗೇಳುತ್ತವು.

ಇದೆಲ್ಲದರ ಮಧ್ಯೆ ಅವ್ವು ತಮ್ಮ ಕರ್ತವ್ಯವ ಎಂದೂ ಮರದ್ದವಿಲ್ಲೆ; ಅವರ ಹತ್ತರೆ ಅವರ ಬಗ್ಗೆ ಕೇಳಿರೆ ಅವ್ವು ಹೇಳುದು ’ಆನು ಗೃಹಿಣಿ’ ಹೇಳಿ.
ಒಬ್ಬ ವ್ಯಕ್ತಿಯಾಗಿ ಅವ್ವು ಮಾಡ್ತಾ ಇಪ್ಪ ಸಾಧನೆ ಅಭಿನಂದನಾರ್ಹ, ಅದರೊಟ್ಟಿಂಗೆ ಅಮ್ಮ ಆಗಿ ಅವ್ವು ಅವರ ಮಗ ’ವಿನಯಶಂಕರ’ನನ್ನೂ ಕೂಡ ಉತ್ತಮ ವ್ಯಕ್ತಿ ಅಪ್ಪ ಹಾಂಗೆ ಮಾಡಿದ್ದವು.
ಈ ಮಾಣಿ ಸಣ್ಣ ಪ್ರಾಯಲ್ಲಿಯೇ ಕಥೆ ಕವನ ಬರವಲೆ ಶುರು ಮಾಡಿದ, ಅವ ಬರದ್ದು ಬಾಲಮಂಗಳ ಗಿಳಿವಿಂಡು ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟ ಆತು.
ಈ ಪುಟ್ಟು ಮಾಣಿಗೆ ಸಾಹಿತ್ಯ ಪರಿಷತ್ತಿನ ಸನ್ಮಾನವೂ ಸಿಕ್ಕಿದ್ದು.

ಗೃಹಿಣಿ ಇದ್ದರೇ ಅಲ್ಲದಾ ನಮ್ಮ ಮನೆ ಬೆಳಗುದು? ಪ್ರಸನ್ನಕ್ಕನ ಹಾಂಗಿದ್ದ ಅಕ್ಕಂದ್ರಿಂದಾಗಿಯೇ ನಮ್ಮ ಸಮಾಜ ಎತ್ತರಕ್ಕೆ ಏರುದು, ಅಲ್ಲದಾ?
ನಮ್ಮ ಬೈಲಿಂಗೆ ಬೇಕಾಗಿಯೇ ಅವ್ವು ಬರದ ಒಂದು ಕಥೆಯ ಬೈಲಿಲ್ಲಿ ಹಾಕುತ್ತೆ.
ನಿಂಗೊಗೆ ಅವರ ಸಾಧನೆ ನೋಡಿ ಸಂತೋಷ ಆದರೆ, ಅವಕ್ಕೆ ಅಭಿನಂದನೆ ಹೇಳುವ ಮನಸ್ಸಾದರೆ, ಪ್ರೋತ್ಸಾಹಿಸುವ ಮನಸ್ಸಾದರೆ ಈ ವಿಳಾಸಕ್ಕೆ ಒಂದು ಕಾಗದ ಅಥವಾ ಕಾರ್ಡ್ ಬರದು ಹಾಕಿಕ್ಕಿ. (ಅವಕ್ಕೆ ಬೈಲಿಂಗೆ ಬಂದು ನೋಡುವ ವ್ಯವಸ್ಥೆ ಸದ್ಯ ಇಲ್ಲೆ)

ವಿಳಾಸ:
ಶ್ರೀಮತಿ ಪ್ರಸನ್ನಾ ವೆಂಕಟಕೃಷ್ಣ,
ಚೆಕ್ಕೆಮನೆ, ಧರ್ಮತಡ್ಕ ಅಂಚೆ,
ವಯಾ: ಮಂಗಲ್ಪಾಡಿ,
ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ – 671324

ನಮ್ಮ ಪ್ರಸನ್ನಕ್ಕಂಗೆ ಬೈಲಿನ ಕಡೇಂದ ಅಭಿನಂದನೆ ಮತ್ತೆ ನಮ್ಮ ಶುಭಹಾರೈಕೆಗೊ:-)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಶ್ರೀಅಕ್ಕ°

  ಡಾಗುಟ್ರಕ್ಕೋ,
  ರಜ್ಜ ಸಮಯ ಬಿಟ್ಟೇ ಬೈಲಿಂಗೆ ಬಂದರೂ ಕೂಡಾ ತುಂಬಾ ಒಳ್ಳೆ ಜನರ ಕರ್ಕೊಂಡು ಬಯಿಂದಿ. ತುಂಬಾ ಲಾಯ್ಕಾತು.

  [ಸಮಾಜಲ್ಲಿ, ನಿತ್ಯಜೀವನಲ್ಲಿ ಹೆಮ್ಮಕ್ಕೊ ಅನುಭವಿಸುವ ಸಹಿಸುವ ಸಮಸ್ಯೆಗೊ ಅದೆಷ್ಟೋ..
  ಅದೆಲ್ಲವನ್ನೂ ಮೀರಿ ಬೆಳೆವ ಶಕ್ತಿಯ, ತಾಳ್ಮೆಯ ಅದೆಲ್ಲಿಂದಲೋ ಕೊಟ್ಟಿದ ದೇವರು ಹೆಮ್ಮಕ್ಕೊಗೆ. ]

  ನಿಂಗೋ ಹೇಳಿದ ಹಾಂಗೆ ದೇವರು ಹೆಮ್ಮಕ್ಕೊಗೆ ವಿಶೇಷ ಶಕ್ತಿ ಕೊಟ್ಟಿದವು. ನಮ್ಮ ಸಮಾಜಲ್ಲಿ ತುಂಬಾ ಜನ ಪ್ರತಿಭಾವಂತ ಹೆಮ್ಮಕ್ಕೋ ಇದ್ದವು. ಅವರ ಎಲ್ಲರ ಅನುಭವ, ಅಂದಾಜುಗೋ ಅಕ್ಷರ ರೂಪಕ್ಕೆ ಬಂದರೆ ಅದುವೇ ಒಂದು ಆಸ್ತಿ ಅಕ್ಕು ಮುಂದಾಣವಕ್ಕೆ!
  ಚೆಕ್ಕೆ ಮನೆ ಪ್ರಸನ್ನಕ್ಕಂಗೆ ಸರಸ್ವತಿಯ ಅನುಗ್ರಹ ಇರಲಿ..
  ಅವಕ್ಕೆ ಬೈಲಿಂಗೆ ಸ್ವಾಗತ. ಅವರ ಚೆಂದಕ್ಕೆ ಪರಿಚಯಿಸಿದ ನಿಂಗೊಗೆ ಧನ್ಯವಾದಂಗೋ.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಧನ್ಯವಾದ ಶ್ರೀ ಅಕ್ಕ :) ನಮ್ಮೆಲ್ಲರ ಈ ಬೈಲಿನ ಕುಟುಂಬಕ್ಕೆ ಪ್ರಸನ್ನಕ್ಕನೂ ಸೇರಿದವು :)

  [Reply]

  VN:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶಪೆರ್ವ

  ಪ್ರಸನ್ನಕ್ಕ೦ಗೆ ಅಭಿನ೦ದನೆಗಳುದೆ ಶುಭಹಾರೈಕೆಗಳುದೆ. ಇಲ್ಲಿ ಅವರಬಗ್ಗೆ ಶುದ್ದಿ ಬರದ ಸುವರ್ಣಿನಿ ಅಕ್ಕ೦ಗೆ ಧನ್ಯವಾದ೦ಗೊ

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಧನ್ಯವಾದ :)

  [Reply]

  VN:F [1.9.22_1171]
  Rating: 0 (from 0 votes)
 3. PERMUKHA ISHWARA BHAT

  navajivana high school ,peradala,badiadka lli enna vidyaarthini aagidda prasnna nge shubha haaraisutte.uttama parichaya lekhana baradu pratibheya gurutisida dr.suvarnini akkangude dhanyavaad.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಕೇಜಿಮಾವ°ಗೋಪಾಲಣ್ಣಶೀಲಾಲಕ್ಷ್ಮೀ ಕಾಸರಗೋಡುಸಂಪಾದಕ°ಸರ್ಪಮಲೆ ಮಾವ°ಪುಣಚ ಡಾಕ್ಟ್ರುಅನುಶ್ರೀ ಬಂಡಾಡಿಪ್ರಕಾಶಪ್ಪಚ್ಚಿಶಾ...ರೀಪುತ್ತೂರುಬಾವದೊಡ್ಮನೆ ಭಾವಯೇನಂಕೂಡ್ಳು ಅಣ್ಣಅಕ್ಷರ°ವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ಪುಟ್ಟಬಾವ°ಕೊಳಚ್ಚಿಪ್ಪು ಬಾವಚೆನ್ನಬೆಟ್ಟಣ್ಣವಸಂತರಾಜ್ ಹಳೆಮನೆಚೆನ್ನೈ ಬಾವ°ತೆಕ್ಕುಂಜ ಕುಮಾರ ಮಾವ°ಕಜೆವಸಂತ°ಜಯಶ್ರೀ ನೀರಮೂಲೆಬಟ್ಟಮಾವ°ಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ