ಶ್ರೀ ಶೇಡಿಗುಮ್ಮೆ ಗೋಪಾಲಕೃಷ್ಣ ಭಟ್

ಸಾಧನೆಗೆ ಅಡ್ಡಿಯಾಗದ್ದ ಅಂಗ ವೈಕಲ್ಯ..

ಸಾಧಿಸುವ ಛಲ ಒಂದು ಇದ್ದರೆ,  ಅಂಗ ವೈಕಲ್ಯ ಅಡ್ಡಿ ಆವುತ್ತಿಲ್ಲೆ ಹೇಳಿ ತೋರಿಸಿ ಕೊಟ್ಟವು ನಮ್ಮ ಶೇಡಿಗುಮ್ಮೆ ಗೋಪಾಲ ಕೃಷ್ಣ ಭಟ್ಟರು.

ವಿವೇಕಿ ವಾನರ, ರಾಜರತ್ನ ನಿಷಧಾಧಿಪ - ಎರಡು ಪುಸ್ತಕಂಗ

ವಿವೇಕಿ ವಾನರ, ರಾಜರತ್ನ ನಿಷಧಾಧಿಪ - ಎರಡು ಪುಸ್ತಕಂಗ

ದಿವಂಗತ ಶ್ರೀ ಶೇಡಿಗುಮ್ಮೆ ಕೃಷ್ಣ ಭಟ್ ಮತ್ತೆ ಪರಮೇಶ್ವರಿ ಅಮ್ಮನವರ 9  ಮಕ್ಕಳ ಪೈಕಿ 8 ನೇ ಯವನಾಗಿ 1964 ರಲ್ಲಿ ಹುಟ್ಟಿದ ಇವು, ಎಲ್ಲ ಮಕ್ಕಳ ಹಾಂಗೇ ಇತ್ತಿದ್ದರೂ – 6 ನೇ ತಿಂಗಳಿಲ್ಲಿ ಬಂದ ಪೋಲಿಯೋ ಜ್ವರ, ಮುಂದಿನ ಜೀವಮಾನಲ್ಲಿ ಎದ್ದು ನಿಂಬಲೆ ಎಡಿಯದ್ದ ಹಾಂಗೆ ಮಾಡಿತ್ತು.
ಊರಿಲ್ಲಿ ಆ ಸಮಯಲ್ಲಿ “ಪೋಲಿಯೋ” ಎಲ್ಲಿಯೂ ಇಲ್ಲದ್ದರಿಂದಾಗಿ, ಹಾಂಗೊಂದು ಜ್ವರ ಆದಿಕ್ಕೋ ಹೇಳಿ ಸಂಶಯಕ್ಕೂ ಎಡೆ ಇತ್ತಿದ್ದಿಲ್ಲೆ.
ಗೊಂತಪ್ಪಗ ಸಮಯ ಮೀರಿತ್ತಿದ್ದು. ಆರ್ಥಿಕ ಪರಿಸ್ಥಿತಿ ಉತ್ತಮ ಇಲ್ಲದ್ದರೂ ಮಾಡುವ ಪ್ರಯತ್ನ ಎಲ್ಲಾ ಮಾಡಿರೂ ಪ್ರಯೋಜನ ಆಗದ್ದು ದುರ್ದೈವವೇ ಸರಿ.

ಮಕ್ಕೊಗೆ ಮನೆಯೇ ಮೊದಲ ಪಾಠ ಶಾಲೆ, ಅಬ್ಬೆಯೇ ಮೊದಲ ಗುರು ಹೇಳುವ ಮಾತು ಇವಕ್ಕೆ ಸರಿಯಾಗಿ ಅನ್ವಯಿಸಿತ್ತು.
ನೆಡವಲೆ ಎಡಿಯದ್ದ ಪರಿಸ್ಥಿತಿ, ಮನೆವರೆಗೆ ವಾಹನ ಬಪ್ಪ ಸೌಕರ್ಯ ಇಲ್ಲದ್ದದು, ಮನೆ ಹತ್ರೆ ಯಾವುದೇ ಪಾಠ ಶಾಲೆ ಇಲ್ಲದ್ದರಿಂದಾಗಿ ಮನೆಲಿಯೇ ಅಬ್ಬೆ ಮತ್ತೆ ಅಕ್ಕಂದಿರ ಮಾರ್ಗದರ್ಶನಲ್ಲಿ ಪ್ರಾಥಮಿಕ ಅಭ್ಯಾಸಂಗಳ ಮಾಡಿದವು.
ಇಪ್ಪತ್ತನೇ ಪ್ರಾಯಲ್ಲಿ (1984) ಕೇರಳ ಸರ್ಕಾರದ SSLC ಪರೀಕ್ಷೆಯ ಕುಂಬಳೆ ಶಾಲೆಲಿ ಬರದು 87.7% ಮಾರ್ಕು ತೆಗದ್ದು ಇವರ ಒಂದು ಸಾಧನೆಯೇ ಸರಿ.
ಇದು ಮುಂದಿನ ವಿಧ್ಯಾಭ್ಯಾಸಕ್ಕೆ ಅವಕ್ಕೆ ಸ್ಪೂರ್ತಿ ಕೊಟ್ಟತ್ತು.

ಬಾಹ್ಯ ವಿದ್ಯಾರ್ಥಿಯಾಗಿ ಕೇರಳದ PDC (Pre Degree Class) ಯ 1986 ರಲ್ಲಿ 70% ಅಂಕ ತೆಗದು ಸಾಧನೆ ಮಾಡಿದ ಇವು ನಂತರ ಕಲ್ಲಿಕೋಟೆ ವಿಶ್ವ ವಿದ್ಯಾಲಯಂದ ವಾಣಿಜ್ಯ ಪದವಿ (B.Com) ಪಡದವು.

1990 ರಲ್ಲಿ ರೈಲ್ವೇ ರಿಕ್ರೂಟ್ಮೆಂಟ್ ಬೋರ್ಡಿಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ನೇಮಕವಾದರೂ ವೈದ್ಯಕೀಯ ಪರೀಕ್ಷೆ ಅಡ್ಡಿ ಆತು.
1992 ರಲ್ಲಿ ಕೇರಳ ರಾಜ್ಯ ವಿದ್ಯುತ್ ಶಕ್ತಿ ಮಂಡಳಿಯ ಕುಂಬಳೆ ಕಚೇರಿಲಿ ಕ್ಯಾಶಿಯರ್ ಆಗಿ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದವು.
ಇದೇ ಸಮಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ 1993 ರಲ್ಲಿ ಮಂಗಳೂರು ಕಸ್ಟಮ್ಸ್ ಇಲಾಖೆಲಿ ಪ್ರಥಮ ದರ್ಜೆ ಗುಮಾಸ್ತರಾಗಿ ನೇಮಕಗೊಂಡವು.
ಹಂತ ಹಂತವಾಗಿ ಭಡ್ತಿ ಹೊಂದಿದ ಇವು ಈಗ ಅಲ್ಲಿ ಉಪ ಕಾರ್ಯಾಲಯ ಅಧೀಕ್ಷಕರಾಗಿ (Deputy Office Superintendent) ಸೇವೆ ಸಲ್ಲಿಸುತ್ತಾ ಇದ್ದವು.

ಈ ನಡುವೆ 1999ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಂದ ಇಂಗ್ಲೀಷ್ ಲ್ಲಿ ಸ್ನಾಕೋತ್ತರ (MA-English) ಪದವಿಯ ದ್ವಿತೀಯ ಶ್ರೇಣಿಲಿ ಪಡದವು.

ಶ್ರೀ ಶೇಡಿಗುಮ್ಮೆ ಗೋಪಾಲಕೃಷ್ಣ ಭಟ್

ಶ್ರೀ ಶೇಡಿಗುಮ್ಮೆ ಗೋಪಾಲಕೃಷ್ಣ ಭಟ್

ಸಾಹಿತ್ಯ ಕ್ಷೇತ್ರಲ್ಲಿ ಕೂಡಾ ಇವು ಕೆಲಸ ಮಾಡಿದ್ದವು.
ಇವು ತನ್ನ ಹದಿನಾಲ್ಕನೇ ವಯಸ್ಸಿಲ್ಲಿ ಬರೆದ ಕವಿತೆ ಮತ್ತೆ ಕತೆಗೊ ಉದಯವಾಣಿ ಬಾಲ ಜಗತ್ತಿಲ್ಲಿ ಪ್ರಕಟವಾಗಿತ್ತಿದ್ದು.

1981 ರಲ್ಲಿ ಇವು ಬರೆದ ಪೌರಾಣಿಕ ನಾಟಕರಾಜ ರತ್ನ ನಿಷಧಾಧಿಪ” ಹೇಳುವ ಪುಸ್ತಕವ ಕಾರ್ಕಳಲ್ಲಿ ಶ್ರೀ ವೀರಪ್ಪ ಮೊಯಿಲಿ ಮುಖ್ಯ ಅತಿಥಿ ಆಗಿಪ್ಪ ಸಮಾರಂಭಲ್ಲಿ ಬಿಡುಗಡೆ ಮಾಡಿ ಇವಕ್ಕೆ ಸನ್ಮಾನ ಮಾಡಿತ್ತಿದ್ದವು.
ಮಕ್ಕಳ ಕತೆಗಳ ಸಂಕಲನ “ವಿವೇಕಿ ವಾನರ” ಕೂಡಾ ಪುಸ್ತಕ ರೂಪಲ್ಲಿ ಬಿಡುಗಡೆ ಆಯಿದು.
ಕವನ ಸಂಕಲನ “ಬೇರು ಚಿಗುರು” ಮತ್ತೆ ಮಕ್ಕಳ ಕವಿತೆ “ಗಿರಿಗಿಟಿ” ಪ್ರಕಟಣೆಗೆ ತಯಾರು ಆವುತಾ ಇದ್ದು.

ಇವು ಕನ್ನಡ ಅಲ್ಲದ್ದೆ ಇಂಗ್ಲಿಷ್, ಹಿಂದಿ, ಮಲಯಾಳ ಮತ್ತೆ ಸಂಸ್ಕೃತ ಭಾಷೆಗಳಲ್ಲಿ ಕೂಡಾ ಅಧ್ಯಯನ ಮಾಡಿದ್ದವು.
ಜ್ಯೋತಿಷ್ಯ ಬಗ್ಗೆ ಕೂಡಾ ಅಭ್ಯಾಸ ಮಾಡಿದ ಇವಕ್ಕೆ ಅಂಚೆ ಚೀಟಿ ಸಂಗ್ರಹಿಸುವದು, ಪುಸ್ತಕ ಓದುವದು, ಯಕ್ಷಗಾನ ನೋಡುವದು, ತಾಳ ಮದ್ದಳೆ ಕೇಳುವದು ಹವ್ಯಾಸಂಗೊ

2003 ರಲ್ಲಿ ರಮಾದೇವಿಯ ಬಾಳ ಸಂಗಾತಿಯಾಗಿ ಸ್ವೀಕರಿಸಿದ ಇವು ಸುರತ್ಕಲ್ ಹತ್ರೆ ಹೊಸಬೆಟ್ಟು ಹೇಳುವಲ್ಲಿ ಗ್ರಹಸ್ಥ ಜೀವನ ನಡೆಸುತ್ತಾ ಇದ್ದವು.
ಅಣ್ಣ ಅತ್ತಿಗೆ ಒಟ್ಟಿಂಗೆ ಇವರದ್ದು ಕೂಡು ಕುಟುಂಬ. 3 ಚಕ್ರಕ್ಕೆ ಪರಿಷ್ಕರಿಸಿದ ದ್ವಿಚಕ್ರ ವಾಹನವ ತಾನೇ ಚಲಾಯಿಸಿಗೊಂಡು ಆಫೀಸಿಂಗೆ ಹೋಪದು ಮಾತ್ರ ಅಲ್ಲದ್ದೆ “ರುದ್ರಾಭ್ಯಾಸ” ತರಗತಿ ಮತ್ತೆ “ಸಂಗೀತ ಅಭ್ಯಾಸ” ಕ್ಕೆ ಕೂಡಾ ಹೋವ್ತಾ ಇದ್ದವು.

ಪೋಲಿಯೋ ಪೀಡಿತರಾಗಿ ಅಥವಾ ಇನ್ನ್ಯಾವುದೇ ರೀತಿಲಿ ಅಂಗ ವೈಕಲ್ಯ ಇದ್ದೊಂಡು ಅಸಹಾಯಕರು ಹೇಳಿ ತಿಳ್ಕೊಂಬವಕ್ಕೆ ಇವರ ಸಾಧನೆ ಒಂದು ಪ್ರೇರಣಾ ಶಕ್ತಿ ಆಗಲಿ.

ಇವರ ಸ್ವಾಭಿಮಾನವೇ ನಮ್ಮ ಹೆಮ್ಮೆ!
ಸ್ವ ಅಧ್ಯಯನ, ಸಾಧಿಸುವ ಛಲ ಇದ್ದರೆ ಗುರಿ ತಲುಪಲೆ ಕಷ್ಟ ಇಲ್ಲೆ ಹೇಳಿ ತೋರಿಸಿ ಕೊಟ್ಟ ಇವರ ಈ ಸಾಧನೆ ಇನ್ನು ಮುಂದೆಯೂ ಹೀಂಗೇ ಮುಂದುವರಿಯಲಿ, ಉದ್ಯೋಗಲ್ಲಿ ಅವಕ್ಕೆ ಇನ್ನೂ ಹೆಚ್ಚಿನ ಭಡ್ತಿ ಸಿಕ್ಕಲಿ,ಅವರ ಜೀವನ ಅಭಿವೃದ್ಧಿ ಹೊಂದಲಿ ಹೇಳುವದೇ ನಮ್ಮೆಲ್ಲರ ಆಷಯ ಮತ್ತೆ ಹಾರೈಕೆ.

ಶರ್ಮಪ್ಪಚ್ಚಿ

ಶರ್ಮಪ್ಪಚ್ಚಿ

   

You may also like...

17 Responses

 1. madhusoodana says:

  Good article. I know Sri Gopalakrishna for quite a few years. He is always positive in attitude, has a good sense of humour and a walking encyclopedia. More importantly, a very good human being.

 2. gopalakrishna BHAT S.K. says:

  THE books of poetry mentioned in the article have been released on 10.8.10

 3. Indira K Bhat says:

  Thanks a lot Sharma Bhava, for writing about my brother

  I am really proud of him

  May god bless him

  I wish all the best to gopala!!! to

 4. Krishnamohana Bhat says:

  Gopalakrishna Bhatru enage snehitaru netru eradu appu.avara bagye banda lekhana nodi khushi aatu.avu nijavaada saahasi tumba chala vaadi.aradde sahaaya elladde kelasa maaduvade avakke khushi.anga vaikalya heluvadu elliyu evagalu avra saahasakke addi aayidille.Devaru avakke dhirgaayusuu kottu ee chaladottinge munduvaritha shaktiyannu arogyabhagyavannu kodli heli haarayisiyondu avakke oppangala surimale surusutte.

 5. Indira K Bhat says:

  +2

 6. Karuvaje Keshava bhat says:

  Gopal krishna bhat is my broher-in-law. ( my wife,indira’s brother.) In my opinion gopal is one kind of gem and an ideal person for those who are desparated in life. He may be physically handicaped but prooved himself he is no way inferior to others in all aspects. Also a wellversed knowleged person in our culture, customs,curricular, extra curricular day to day activitives. Most appriciated thing is his keen intrest on learing habit( maybe discussion / reading ), day to day thirsty of knowlege. He is also ideal person in giving due respect for elders and lovely affection to youngerone. Totally, he is just like an index of moving encyclopedia.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *