ಪ್ರಶಸ್ತಿ ಸ್ವೀಕರಿಸಿದ ಶ್ರೀ.ಕೆರೆಮೂಲೆ ಶಂಕರನಾರಾಯಣ ಭಟ್ಟರು

June 8, 2011 ರ 6:00 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀ.ಕೆರೆಮೂಲೆ ಶಂಕರನಾರಾಯಣ ಭಟ್ಟರು  

ಪ್ರಶಸ್ತಿ ತೆಕ್ಕೊಂಬ ಶಂ. ನಾ. ಬಾಯಾರು.

ಕೇಂದ್ರ ಮಾನವ ಸಂಪದಭಿವೃದ್ಧಿ ಇಲಾಖೆಯ ಅಧೀನಕ್ಕೆ ಒಳಪಟ್ಟು, ನಮ್ಮ ದೇಶಲ್ಲಿ ಸಾವಿರಕ್ಕಿಂತಲೂ ಹೆಚ್ಚು ಕೇಂದ್ರೀಯ ವಿದ್ಯಾಲಯಂಗೊ ಕಾರ್ಯ ನಿರ್ವಹಿಸುತ್ತಾ ಇದ್ದು. ಇದರ ಬೆಂಗಳೂರು ವಲಯಲ್ಲಿ ಕರ್ನಾಟಕ, ಗೋವಾ ಮತ್ತೆ ಕೇರಳದ ಉತ್ತರ ಭಾಗದ ವಿದ್ಯಾಲಯಂಗೊ ಸೇರಿಗೊಂಡು ಇದ್ದು. ಈ ವಲಯಲ್ಲಿ ಇಪ್ಪ ಸರಿ ಸುಮಾರು 58 ವಿದ್ಯಲಯಂಗೊ, ಊರ ಮತ್ತೆ ಪರ ಊರ ಮಕ್ಕೊಗೆ ಉತ್ತಮ ಮಟ್ಟದ ವಿದ್ಯಾಭ್ಯಾಸವ ಒದಗಿಸುತ್ತಾ ಇದ್ದು. 

ಇಂದು ಆನು ಇಲ್ಲಿ ಪರಿಚಯ ಮಾಡಿ ಕೊಡ್ಲೆ ಹೆಮ್ಮೆಪಡ್ತಾ ಇಪ್ಪ ಶ್ರೀ ಕೆರೆಮೂಲೆ ಶಂಕರನಾರಾಯಣ ಭಟ್ಟರು ಕೇಂದ್ರೀಯ ವಿದ್ಯಾಸಂಸ್ಥೆಗಳಲ್ಲಿ 25 ಕ್ಕಿಂತಲೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದವು.  ಈಗ ಪಣಂಬೂರಿನ ವಿದ್ಯಾಲಯಲ್ಲಿ ಹಿರಿಯ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದವು. 

ಗ್ರಂಥಪಾಲಕರಾಗಿ ಕೆಲಸ ಮಾಡಿದ್ದು ಮಾತ್ರ ಅಲ್ಲದ್ದೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಆವ್ತ ಹಾಂಗಿಪ್ಪ ಹಲವಾರು ಕಾರ್ಯಕ್ರಮಂಗಳ  ಮಾಡಿ ಅಲ್ಲಿಯಾಣ ಮಕ್ಕಳಿಂದಲೂ, ಹೆತ್ತವರಿಂದಲೂ, ಮಾಷ್ಟ್ರಕ್ಕಳಿಂದಲೂ ಒಳ್ಳೆ ಹೆಸರು ತೆಕ್ಕೊಂಡಿದವು. ಪಠ್ಯೇತರ ಚಟುವಟಿಕೆಯ ಸಂಯೋಜಕರಾಗಿಯೂ, ಉದ್ಯೋಗ ಮಾರ್ಗದರ್ಶಕರಾಗಿಯೂ, ಸ್ಕೌಟ್ಸ್ ಮತ್ತೆ ಗೈಡ್ಸ್ ಇದರ ಸಂಚಾಲಕರಾಗಿಯೂ, ಹೆತ್ತವರ ಮತ್ತೆ ಮಕ್ಕಳ ಸಂಘದ ಪದಾಧಿಕಾರಿಯಾಗಿಯೂ ತನ್ನ ತೊಡಗಿಸಿಗೊಂಡಿದವು. 

ಇವರ ಈ ಸಮರ್ಪಣಾ ಮನೋಭಾವದ ನಿಸ್ವಾರ್ಥ ಸೇವೆಯ ಗುರುತಿಸಿದ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ವಿಭಾಗದವು 2010 ನೇ ಸಾಲಿಲ್ಲಿ, ಬೆಂಗಳೂರು ವಿಭಾಗಲ್ಲಿ, ಇವಕ್ಕೆ “ ಕೇ ವಿ ಎಸ್ ರೀಜನಲ್ ಇನ್ಸೆಂಟಿವ್ ಅವಾರ್ಡ್” ಕೊಟ್ಟಿದವು. ರೂ 5000/= ನಗದು ಮತ್ತೆ ಪ್ರಶಸ್ತಿ ಪತ್ರ ಇಪ್ಪ ಈ ಪ್ರಶಸ್ತಿಯ ಇವಕ್ಕೆ ಬೆಂಗಳೂರಿಲ್ಲಿ, ಇಸ್ರೋದ ಮಾಜಿ ನಿರ್ದೇಶಕ ಶ್ರೀ ಮಾಧವನ್ ನಾಯರ್ ಕೊಟ್ಟು ಸನ್ಮಾನ ಮಾಡಿದವು. 

ಗ್ರಂಥಾಲಯ ವಿಜ್ಞಾನಲ್ಲಿ ಸ್ನಾತಕೋತ್ತರ ಪದವಿ ಪಡಕ್ಕೊಂಡ ಇವರ ಹವ್ಯಾಸ ಹೇಳಿರೆ ಯಕ್ಷಗಾನಕ್ಕೆ ಮದ್ದಳೆವಾದನ ಮಾಡುವದು. ಯಕ್ಷಗಾನ ಗುರು ಮಾಂಬಾಡಿ ನಾರಾಯಣ ಭಾಗವತರ ಮೊಮ್ಮಗನಾದ ಇವು ಕಾಸರಗೋಡು ತಾಲೂಕಿನ ಬಾಯಾರು ಗ್ರಾಮದ ಕೆರೆಮೂಲೆ  ದಿ. ಕೃಷ್ಣ ಭಟ್ ಮತ್ತೆ ದ್ರೌಪದಿ ಅಮ್ಮನವರ ಸುಪುತ್ರ. 

“ಶಂನಾ ಬಾಯಾರು” ಹೇಳ್ತ ಹೆಸರಿಲ್ಲಿ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಲೇಖನಂಗಳ ಪ್ರಕಟಿಸಿದ ಇವು  ಒಳ್ಳೆ ಚೆಸ್ ಆಟಗಾರ ಕೂಡಾ. 

ಇವರ ಮಗಳು ಕುಮಾರಿ ದೀಪಿಕಾ PUC ಪರೀಕ್ಷೆಲಿ ಮಾಡಿದ ಸಾಧನೆಯ, ಬೈಲಿಲ್ಲಿ ನಾವು ಗುರುತಿಸಿದ್ದು 

ಮಂಗಳೂರು ಮಂಡಲದ ಉತ್ತರ ವಲಯದ ವಿದ್ಯಾವಿಭಾಗದ ಪ್ರಧಾನರಾಗಿ ಹವ್ಯಕ ಸಮಾಜಕ್ಕೆ ಕೂಡಾ ತನ್ನ ಸೇವೆಯ ಸಲ್ಲುಸುತ್ತಾ ಇದ್ದವು. ಇವರ ಭವಿಷ್ಯ ಇನ್ನೂ ಉಜ್ವಲವಾಗಲಿ, ಇನ್ನೂ ಹೆಚ್ಚಿನ ಸನ್ಮಾನಂಗೊ ಇವರ ಹುಡ್ಕಿಂಡು ಬಪ್ಪ ಹಾಂಗೆ ದೇವರ ಅನುಗ್ರಹ ಇವಕ್ಕೆ ಇರಲಿ, ಇವರ ಸೇವೆ ನಮ್ಮ ಸಮಾಜಕ್ಕೆ ಇನ್ನು ಮುಂದೆಯೂ ಸಿಕ್ಕಲಿ ಹೇಳಿ ಹಾರೈಸುವೊ 

  

~~~ 

ವಿ.ಸೂ: ಬೈಲಿಲ್ಲಿ ಶುದ್ದಿ ಹೇಳುವಿರೋ ಕೇಳಿದ್ದಕ್ಕೆಸಂತೋಷಲ್ಲಿ ಒಪ್ಪಿದ್ದವು.

ಪ್ರಶಸ್ತಿ ಸ್ವೀಕರಿಸಿದ ಶ್ರೀ.ಕೆರೆಮೂಲೆ ಶಂಕರನಾರಾಯಣ ಭಟ್ಟರು , 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಶ೦ ನಾ ಬಾಯಾರು ಅವರ ಲೇಖನ೦ಗಳ ಓದಿ ಗೊ೦ತಿದ್ದಲ್ಲದ್ದೆ, ಅವು ನಮ್ಮವೇ ಹೇಳಿಯುದೆ, ಇಷ್ಟೆಲ್ಲಾ ಗೊ೦ತಾದ್ದುದೆ ಈಗ..
  ಧನ್ಯವಾದ೦ಗೊ

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಶಂಕರ ನಾರಾಯಣ ಭಟ್ರಿಂಗೆ ಅಭಿನಂದನೆಗೊ.
  ಅವು ತುಂಬಾ ಉತ್ತಮ ಮದ್ದಳೆಗಾರ.

  [Reply]

  VA:F [1.9.22_1171]
  Rating: 0 (from 0 votes)
 3. Heenge obba

  ಶ೦ ನಾ ಅವರ ತ೦ಗೆ ಯ ಹೆಸರು ದುರ್ಗಾ (ದುರ್ಗಾ ಶ೦ಕರಿ ಕುಕ್ಕಿಲ). ಭಾಗವತಿಕೆ ಬಗ್ಗೆ ಹಿಡಿತ ಇಪ್ಪ ಅವು ಸ್ವತಹ ಭಾಗವತಿಕೆ ಮಾಡ್ತವು.
  ಆವರ ತಮ್ಮನೂ ಹವ್ಯಾಸಿ ಭಾಗವತ.
  ಕೇರಳಲ್ಲಿ ಇನ್ನೊಬ್ಬ ಸ೦ಗೀತಗಾರನ ಕೆಲ ಜನಕ್ಕಾದರೂ ಕೇಳಿ ಗೊ೦ತಿಕ್ಕು ‘ವಿಷ್ನು ವೆಲ್ಲಿಕೊತ್’ ಹೇಳಿ. ಆವ ಶ೦ ನಾ ಅವರ ಅಮ್ಮನ ಅಕ್ಕನ ಮಗ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಪೂರಕ ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಆಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಚೆಸ್ ,ಮದ್ದಳೆ ವಾದನ,ಗ್ರ೦ಥಪಾಲನೆ,ಬರಹ,ಸ್ಕೌಟ್,ವ್ಯಕ್ತಿತ್ವ ವಿಕಸನ ,ಆಹಾ. – ಬಹುಮುಖ ಪ್ರತಿಭೆಗೆ ಸ೦ದ ಗೌರವ ಕೊಶಿ ಕೊಡುತ್ತು.ಅಭಿನ೦ದನೆಗೊ.ಬೈಲಿ೦ಗೆ ಸ್ವಾಗತವೂ.

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ಬಹುಮುಖ ಪ್ರತಿಭೆ, ಶಂನಾ ಬಾಯಾರು ಅವರ ಪರಿಚಯ ಆದ್ದದು ತುಂಬಾ ಸಂತೋಷ ಆತು. ಅವರ ಸಾಧನೆ ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯ. ಅಭಿನಂದನೆಗೊ. ಪರಿಚಯ ಮಾಡಿದ ಶರ್ಮಪ್ಪಚ್ಚಿಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 7. ಒಪ್ಪಣ್ಣ

  ಬಹುಮುಖ ಪ್ರತಿಭೆ, ಬಹುಶೃತರಾದ ಶ್ರೀಯುತ ಬಾಯಾರು ಶಂನಾಮಾವನ ಪರಿಚಯ ಮಾಡಿದ್ದು ಕಂಡುಕೊಶಿ ಆತು.
  ಅವರ ಸಾಧನೆಗೊ ಮುಂದಾಣ ತಲೆಮಾರಿಂಗೆ ಹೆಜ್ಜೆಗುರುತುಗೊ ಆಗಿರಳಿ – ಹೇಳ್ತದು ಬೈಲಿನ ಆಶಯ.

  – ಅಪ್ಪಚ್ಚೀ, ಇವರ ಬೈಲಿಂಗೆ ಕರಕ್ಕೊಂಡು ಬತ್ತಿರೋ? :-)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿದೇವಸ್ಯ ಮಾಣಿಚೂರಿಬೈಲು ದೀಪಕ್ಕಶ್ಯಾಮಣ್ಣಚೆನ್ನಬೆಟ್ಟಣ್ಣವಿಜಯತ್ತೆಅಡ್ಕತ್ತಿಮಾರುಮಾವ°ವಿದ್ವಾನಣ್ಣಸಂಪಾದಕ°ದೊಡ್ಡಭಾವನೆಗೆಗಾರ°ಒಪ್ಪಕ್ಕಬಟ್ಟಮಾವ°ಪವನಜಮಾವಚೆನ್ನೈ ಬಾವ°vreddhiಶೇಡಿಗುಮ್ಮೆ ಪುಳ್ಳಿಪುತ್ತೂರುಬಾವಮಂಗ್ಳೂರ ಮಾಣಿಶಾಂತತ್ತೆಡೈಮಂಡು ಭಾವಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಕಜೆವಸಂತ°ಜಯಗೌರಿ ಅಕ್ಕ°ಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ