Oppanna.com

ಯೋಗಲ್ಲಿ ಡಾಕುಟ್ರೇಟು ಸಿಕ್ಕಿತ್ತಡ…….

ಬರದೋರು :   ಅನು ಉಡುಪುಮೂಲೆ    on   07/05/2012    20 ಒಪ್ಪಂಗೊ

ಅನು ಉಡುಪುಮೂಲೆ

ಮರದ ಎಲೆಗಳ ಎಡೆಲಿ ಇಪ್ಪ ಕಾಯಿ ನಮ್ಮ ಕಣ್ಣಿಂಗೆ ಕಾಣ್ತಿಲ್ಲೆ. ಹಾಂಗೇ ನಮ್ಮಲ್ಲಿ ಇಪ್ಪ ಕೆಲವು ಪ್ರತಿಭೆಗೊ ಕೂಡ.
ಕಾಟುಕುಕ್ಕೆ ದೇವಸ್ಥಾನಂದ ಒಂದು ಮೈಲಿ ದೂರಲ್ಲಿ ಇಪ್ಪ ಕೈಯ್ಯಂಕೂಡ್ಲು ಮನೆಯ ಗಣಪತಿ ಭಟ್ , ಶಂಕರಿ ದಂಪತಿಗಳ ಹೆರಿ ಮಗನೇ ಉದಯ ಕುಮಾರ.

ನಮ್ಮ ಉದಯಣ್ಣ

ಇವು ಯೋಗ ವಿಜ್ಞಾನದ ಬಗ್ಗೆ ಬರದ “ಎಸ್ಸೆಸ್ ಮೆಂಟ್ ಆಫ್ ದಿ ಎಫೆಕ್ಟ್ ಆಫ್ ಯೋಗ ಥೆರಪಿ ಆನ್ ಸೈನೆಸೈಟಿಸ್ ಯೂಸಿಂಗ್ ಇನ್ಫ್ರಾರೆಡ್ ಥರ್ಮಲ್ ಇಮೇಜಿಂಗ್ ಸಿಸ್ಟಮ್” ಹೇಳ್ತ ಪ್ರಬಂಧಕ್ಕೆ ಮಂಗ್ಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟು ಪದವಿ ಕೊಟ್ಟಿದು.
ಅಲ್ಲದ್ದೆ ಭಾರಿ ಲಾಯ್ಕದ ಪ್ರಬಂಧ ಹೇಳ್ತ ಪುರಸ್ಕಾರವೂ ಸಿಕ್ಕಿದ್ದು.

ಮಂಗ್ಳೂರಿನ ವಿಶ್ವವಿದ್ಯಾನಿಲಯಲ್ಲಿ ಯೋಗವಿಜ್ಞಾನ ವಿಭಾಗ ಶುರುವಾದ್ದು 1998ರಲ್ಲಿ .
ಈ 14 ವರ್ಷಲ್ಲಿ ಯೋಗವಿಜ್ಞಾನಲ್ಲಿ ಡಾಕುಟ್ರೇಟು ಮಾಡಿದ್ದು ನಮ್ಮ ಉದಯಣ್ಣನೇ ಅಡ.

ಮಾನವ ಪ್ರಜ್ಞೆ , ಯೋಗ ವಿಜ್ಞಾನದ ಪ್ರಾಧ್ಯಾಪಕಂದೆ, ಅಧ್ಯಕ್ಷಂದೆ ಆಗಿಪ್ಪ ಡಾಕುಟ್ರೇಟ್ ಪದವಿ ಪಡದ ಕೆ. ಕೃಷ್ಣ ಭಟ್ಟರ ಮಾರ್ಗದರ್ಶನಲ್ಲಿ ಈ ಪ್ರಬಂಧವ ಸಿದ್ಧಪಡ್ಸಿದ್ದವು.
ಭಾರತ ಸರಕಾರದ ವಿಜ್ಞಾನ , ತಂತ್ರಜ್ಞಾನ ಇಲಾಖೆ ಕೊಟ್ಟ ಇಂಡೋರಶ್ಯನ್ ಸಹಯೋಗದ ಸಂಶೋಧನಾ ಯೋಜನೆಯ ಅಡಿಲಿ ಕೆಲಸ ಮಾಡಿ ಈ ( ಪಿ. ಹೆಚ್ . ಡಿ.) ಪ್ರಬಂಧ ತಯಾರಾಯ್ದು.

ಈ ಉದಯಣ್ಣ ಹತ್ತನೇ ಕ್ಲಾಸ್ಸಿನ ವರೆಗೆ ಕಲ್ತದು ಕಾಟುಕುಕ್ಕೆ ಶಾಲೆಲಿ.
ಅಡ್ಯನಡ್ಕಲ್ಲಿ ಪಿ.ಯು.ಸಿ. ಓದಿ, ಪುತ್ತೂರಿನ ವಿವೇಕಾನಂದಲ್ಲಿ ಡಿಗ್ರಿ ಕಲ್ತದು.
ಅಲ್ಲಿಂದ ಎಮ್ಮೆಸ್ಸಿ ಓದುಲೆ ಕೊಣಾಜೆಗೆ ಎತ್ತಿದವು. 2005ರಲ್ಲಿ ಯೋಗ ವಿಜ್ಞಾನಲ್ಲಿ ಚಿನ್ನದ ಪದಕ ಸಿಕ್ಕಿತ್ತು. ಆದರೆ ಪ್ರಚಾರ ಬಯಸದ್ದ ನಮ್ಮ ಉದಯಣ್ಣನ ಸುದ್ದಿ ಆರಿಂಗೂ ಗೊಂತೇ ಆಯಿದಿಲ್ಲೆ.

ನಮ್ಮ ಸಮಾಜಲ್ಲಿ ಇಂಥ ಒಬ್ಬ ಪ್ರತಿಭಾಶಾಲಿ ಇದ್ದವು ಹೇಳುದು ನವಗೆ ಒಂದು ಹೆಮ್ಮೆಯ ವಿಚಾರ.

ವಿಶೇಷ ಎಂತ ಹೇಳಿರೆ ಉದಯಣ್ಣ ನಮ್ಮ ಹರಿಯೊಲ್ಮೆ ಕೂಸು ಸೌಮ್ಯನೊಟ್ಟಿಂಗೆ ದಾಂಪತ್ಯ ಜೀವನಕ್ಕೆ ಕಾಲು ಮಡುಗಿದ ದಿನವೇ ಅವರ ಪ್ರಬಂಧಕ್ಕೆ ಡಾಕುಟ್ರೇಟು ಸಿಕ್ಕಿದ್ದು!
ಉದಯಣ್ಣ ಪ್ರಬಂಧ ಬರದು ಒಪ್ಪುಸಿ ಕಾದುಕೂದುಗೊಂಡು ಇತ್ತಿದ್ದವಡ.
ಆದರೆ ಗೃಹಸ್ಥ ಹೇಳ್ತ ಪದವಿ ಸಿಕ್ಕಿದ ದಿನವೇ ಡಾಕುಟ್ರೇಟು ಪದವಿ ಸಿಕ್ಕಿದ್ದು ಭಾರಿ ಆಶ್ಚರ್ಯ ಅಲ್ಲದಾ…?

20 thoughts on “ಯೋಗಲ್ಲಿ ಡಾಕುಟ್ರೇಟು ಸಿಕ್ಕಿತ್ತಡ…….

  1. ಉದಯಣ್ನಂಗೆ ಅಭಿನಮ್ದನೆಗೊ, ಅವ್ವು ಸಂಶೋಧನೆ ಮಾಡಿದ ವಿಷಯ ತುಂಬಾ ಲಾಯ್ಕಿದ್ದು, ಸೈನಸೈಟಿಸ್ ಸಮಸ್ಯೆಗೆ ಯೋಗ ಚಿಕಿತ್ಸೆಲಿ ಉತ್ತಮ ಪರಿಹಾರ ಇದ್ದು, ಆದರೆ ಅದರ ವೈಜ್ಞಾನಿಕವಾಗಿ ಸಿದ್ಧಪಡ್ಸಿದ್ದವು ಉದಯಣ್ನ.
    ಇವ್ವು ತುಂಬಾ ಸಜ್ಜನ ವ್ಯಕ್ತಿ, ಒಂದರಿ ಆನು ಎನ್ನ ವಿದ್ಯಾರ್ಥಿಗಳ ಕರಕ್ಕೊಂಡೂ ಒಂದು ಯೋಗಾಸನ ಸ್ಪರ್ಧೆಗೆ ಹೋಗಿಪ್ಪಗ ಅಲ್ಲಿ ತೀರ್ಪುಗಾರರಾಗಿ ಬಂದಿತ್ತಿದ್ದವು, ಅಲ್ಲಿ ಸಿಕ್ಕಿ ತುಂಬ ಲಾಯ್ಕಕ್ಕೆ ಮಾತಾಡಿದ್ದವು. down to earth ಹೇಳ್ತಿಲ್ಲೆಯ..ಹಾಂಗಿದ್ದ ವ್ಯಕ್ತಿತ್ವ 🙂

    1. ಎನ್ನ ಬಗ್ಗೆ ಶುದ್ದಿ ಬರೆದ ಅನುಪಮ ಉಡುಪಮೂಲೆ ಇವಕ್ಕೆ ಧನ್ಯವಾದ೦ಗ… ಮತ್ತೆ ಇದಕ್ಕೆ ಪ್ರತಿಕ್ರಿಯಿಸಿದ ಎಲ್ಲೊರಿ೦ಗೂ ಧನ್ಯವಾದ…. ಆದರೆ ಹೊಗಳಿದ್ದು ಜಾಸ್ತಿ ಆತು ಹೇಳಿ ಅನಿಸುತ್ತು….

  2. ಉದಯಣ್ಣಂಗೆ ಅಭಿನಂದನೆಗೊ

  3. ಉದಯಣ್ಣಂಗೆ ಅಭಿನಂದನೆಗೊ!!!
    ಶುದ್ದಿ ಹೇಳಿದ ಅಕ್ಕಂಗೂ ಧನ್ಯವಾದ.

  4. ಎನ್ನ ಕ್ಲಾಸು ಮೆಟ್\ ರೂ೦ಮೆಟ್, ಆದ ಆತ್ಮೀಯ ಉದಯ ಕುಮಾರ್, ಡಾ.ಉದಯ ಆದ ಸ೦ದರ್ಭಲ್ಲಿ ಅವ೦ಗೆ ಅಭಿನ೦ದನಗೊ…

  5. ಬಹಳ ಸಂತೋಷ.ಅಭಿನಂದನೆಗೊ.

  6. ಈ ಶುಧ್ಧಿಗೆ ಅಭಿಪ್ರಾಯ ಹೇಂಗೆ ಬರವದಪ್ಪಾ?

    ಯಾವತ್ತಿನಂತೆ ಈ ಶುಧ್ಧಿದೆ ಬರದ್ದು ಭಾರೀ ಲಾಯಿಕ ಆಯಿದು ಅನು.
    ಶುಧ್ಧಿಲಿಪ್ಪ ಉದಯಣ್ಣ ಎನ್ನ ತಂಗೆ ಗಂಡ ಭಾವನೆ ಹೇಳಿ ಎನಗೆ ಹೆಮ್ಮೆ ಆವ್ತು.
    ದೇವರ ದಯಂದ ಎಲ್ಲಾ ಒಳಿತಾಗಲಿ ಅವರ ಬಾಳಿಲ್ಲಿ ಹೇಳಿ ತುಂಬು ಮನಸ್ಸಿಲ್ಲಿ ಹಾರೈಸುತ್ತೆಯೊ.

    ಮತ್ತೊಂದು ಸಂತೋಷ ಹೇಳಿರೆ ಬಾಲ್ಯಂದ ಪರಿಚಯ ಇಪ್ಪ ಅನುವಿನ ಎಷ್ಟೋ ವರ್ಷದ ಮೇಲೆ ಉದಯ-ಸೌಮ್ಯರ ಮದುವೆಲಿ ಕಂಡು ಮಾತಾಡ್ಸಿದ್ದೆ ಹೇಳಿ. ಅದರ ಮಗನ ಕಾರ್ಯಕ್ರಮ ಬಗ್ಗೆ ತುಂಬಾ ಕೇಳಿತ್ತಿದ್ದೆ, ನಿಜವಾಗಿ ನೋಡ್ಲೆದೆ ಅವಕಾಶ ಆತು ಸಟ್ಟುಮುಡಿ ದಿನ…

    ಹೀಂಗೆ ಬರೆತ್ತಾ ಇರು,
    ~ಸುಮನಕ್ಕ…

  7. ಡಾ. ಉದಯಣ್ಣಂಗೆ ಅಭಿನಂದನೆಗೊ.

  8. ಯೋಗದ ಮಾಣಿಯ ಯೋಗದ ಗುರುಗೊಕ್ಕೆ ಯೋಗಲ್ಲಿಯೇ ಡಾಗುಟ್ರು ಸಿಕ್ಕಿತ್ತೋ?
    ಉಫ್! ಎಲ್ಲವೂ ಒಂದು “ಯೋಗ”ವೇ!

  9. ಡಾ. ಉದಯಂಗೆ ಅಭಿನಂದನೆಗೊ. ಡಬ್ಬಲ್ ಡಾಕ್ಟರೇಟು ಒಟ್ಟಿಂಗೆ ಸಿಕ್ಕಿದ್ದು ನಿಜವಾಗಿಯುದೆ ಆಶ್ಚರ್ಯ ಹಾಂಗೂ ಸಂತೋಷದ ವಿಷಯ. ಯೋಗಾಯೋಗ ಎಲ್ಲದಕ್ಕೂ ಬೇಕಾನೆ.

  10. ಯೋಗ ಕ್ಷೇತ್ರಲ್ಲಿ ಗಮನಾರ್ಹ ಸಂಶೋಧನೆ ಮಾಡಿದ ಉದಯಣ್ಣಂಗೆ ಅಭಿನಂದನಗೊ

  11. ಅಕ್ಕಾ,
    ಪ್ರಚಾರ ಬಯಸದ್ದ ಪ್ರತಿಭೆ ಉದಯಣ್ಣನ ಪರಿಚಯ ಮಾಡ್ಸಿದ್ದಕ್ಕೆ ಧನ್ಯವಾದ.ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಯೋಗಮಾರ್ಗ ಹಿಡಿಯೇಕಡ.ಆ ಮಾರ್ಗಲ್ಲಿ ಮು೦ದೆ ಬ೦ದು ನಮ್ಮ ಸಮಾಜಕ್ಕೂ ಹೆಮ್ಮೆತಪ್ಪ ಸಾಧನೆ ಮಾಡಿದ ಉದಯಣ್ಣ೦ಗೆ ಅಭಿನ೦ದನೆ.ಮು೦ದೆ ಹೆಚ್ಚು ಸಾಧನೆ,ಮನ್ನಣೆ ಸಿಕ್ಕಲಿ ಹೇಳಿ ಹಾರೈಕೆಗೊ.
    {ಭಾರಿ ಆಶ್ಚರ್ಯ ಅಲ್ಲದಾ…?} ನಿಜಕ್ಕೂ ಇದು ಒ೦ದು ಯೋಗವೇ !

  12. ಉದಯಣ್ಣ೦ಗೆ ಹೊಸ ಸಾಧನೆಯ ಸಾಧಿಸಿದ್ದಕ್ಕೆ ಅಭಿನ೦ದನೆಗೊ, ವೈವಾಹಿಕ ಜೀವನದ ಶುಭಾಶಯ೦ಗೊ.

  13. ಡಬಲ್ ಅಭಿನಂದನೆಗೊ. ಡಬಲ್ ಶುಭಾಶಯಂಗೊ. ಉಜ್ವಲ ಭವಿಷ್ಯ ಪರಮಾತ್ಮ ಕರುಣಿಸಲಿ.

  14. ಉದಯಣ್ಣಂಗೆ ಅಭಿನಂದನೆಗೊ.

  15. ಎನ್ನ ಗುರುಗಳು ಅಪ್ಪು ಅದಕ್ಕಿಂತ ಹೆಚ್ಚು ಆತ್ಮೀಯರು ಅಪ್ಪು ಈ ಉದಯಣ್ಣಾ..ಸೌಮ್ಯ ಸ್ವಭಾವದ ಈ ಉದಯಣ್ಣ ಯೋಗ ವಿಷಯಲ್ಲಿ ಸಾಧನೆ ಮಾಡಿದ್ದಕ್ಕೆ ಅಭಿನಂದನೆಗೊ..ಇವರ ಸಾಧನೆಯ ಎಲ್ಲರು ಗುರುತಿಸಲಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×