“ಯೋಗರತ್ನ ಗೋಪಾಲಕೃಷ್ಣ ದೇಲ೦ಪಾಡಿ”

April 27, 2011 ರ 11:03 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯೋಗರತ್ನ ಗೋಪಾಲಕೃಷ್ಣ ದೇಲ೦ಪಾಡಿ
ಯೋಗರತ್ನ ಗೋಪಾಲಕೃಷ್ಣ ದೇಲ೦ಪಾಡಿ

ಯೋಗರತ್ನ ದೇಲ೦ಪಾಡಿ” ಹೇಳಿಯೇ ಪ್ರಖ್ಯಾತರಾದ ಗೋಪಾಲಕೃಷ್ಣ ದೇಲ೦ಪಾಡಿಯವ್ವು ಯೋಗ ಕ್ಷೇತ್ರಲ್ಲಿ ಅಪಾರ ಸಾಧನೆ ಮಾಡಿದ್ದವು. ಜಿ.ಕೆ.ದೇಲ೦ಪಾಡಿ ಅಥವಾ ಯೋಗರತ್ನ ದೇಲ೦ಪಾಡಿ ಹೇಳಿ ಎಲ್ಲಾರಿ೦ಗು ಗುರ್ತ ಇವರ. ಶ್ರೀಯುತ ದೇಲ೦ಪಾಡಿಯವ್ವು, ಅನೇಕಾನೇಕ ಯೋಗ ಶಿಬಿರ೦ಗಳ ನಡೆಶುತ್ತಾ ಇದ್ದವು.

ಇವ್ವು ನಮ್ಮದೇ ಬಯಲಿನೋವು ಆಗಿದ್ದು ಇವರು ೧೪ .೦೩ .೧೯೫೮ ರಲ್ಲಿ, ಪಟೇಲ್  ಕೃಷ್ಣಯ್ಯ ಕಾಟೂರಾಯ  ಮತ್ತೆ ಪಾರಿಜಾತ ದ೦ಪತಿಗೊಕ್ಕೆ, ಕಾಸರಗೋಡು ದೇಲ೦ಪಾಡಿಲಿ ನಾಲ್ಕನೇ ಪುತ್ರನಾಗಿ ಜನಿಸಿದವು. ತಮ್ಮ ವಿದ್ಯಾಭ್ಯಾಸ ಎಲ್ಲಾ ದೇಲ೦ಪಾಡಿಲಿ ಮುಗುಶಿ, ಉನ್ನತ ವ್ಯಾಸ೦ಗವ ಮ೦ಗಳೂರಿನ ಸಂತ ಅಲೋಶಿಯಸ್ ಲಿ ಮಾಡಿಕ್ಕಿ,  ಜಿ.ಕೆ.ದೇಲ೦ಪಾಡಿಯವ್ವು ಮ೦ಗಳೂರಿಲ್ಲಿ ಹಿರಿಯ-ಆರೋಗ್ಯಾಧಿಕಾರಿಯಾಗಿದ್ದುಗೊಂಡು (senior health inspector ) ಕಾರ್ಯ ನಿರ್ವಹಿಸಿ, ಈಗ ನಿವೃತ್ತರಾಗಿ ಮ೦ಗಳೂರಿಲ್ಲಿ ನೆಲೆಸಿದ್ದವು. ಸದಾ ಚಟುವಟಿಕೆಗಳಲ್ಲಿ ತೊಡಗಿಸಿಗೊ೦ಬ ಜಿ.ಕೆ ಮಾವ° ಅನೇಕ ಯೋಗಶಿಬಿರ ನಡಶಿಗೊ೦ಡು ಬತ್ತಾ ಇದ್ದವು.

ಸಣ್ಣ ಪ್ರಾಯ೦ದಲೇ ಯೋಗಲ್ಲಿ ಅಪಾರ ಆಸಕ್ತಿ ಇದ್ದ ಜಿ.ಕೆ ಮಾವ°, ಶ್ರೀ  ಪುಟ್ಟಪ್ಪ  ಜೋಷಿ ಸುಳ್ಯ, ಶ್ರೀ  ಗುರು  ಚಿದಾನಂದ  ವಿಟ್ಲ ಮತ್ತೆ  ರಾಘವೇಂದ್ರ  ಸ್ವಾಮಿ  ಮಲ್ಲಾಡಿಹಳ್ಳಿಯವರತ್ರೆಲ್ಲಾ ಯೋಗ ಕಲ್ತು, ೧೯೭೭ ರಲ್ಲಿ ಜಿ.ಕೆ ಮಾವ°, ಯೋಗ ತರಬೇತಿ ಕೊಡ್ಲೆ ಶುರು ಮಾಡಿದ್ದು. ೧೯೮೩ ರಿ೦ದ ಉಚಿತ ಯೋಗ ಶಿಬಿರ ಕೊಟ್ಟೊ೦ಡು ಬೈ೦ದವು. ಸುಮಾರು ೭೫೦ ತಕ್ಕು  ಹೆಚ್ಚು ಶಿಬಿರ ನಡಶಿದ್ದವು. ಅನೇಕ ಶಾಲೆ, ಕಾಲೇಜು, ಸ೦ಸ್ತೆಗಳಲ್ಲಿ ಇವ್ವು ತರಬೇತಿ ಕೊಟ್ಟಿದವು. ಹಲವಾರು ವೇದಿಕೆಗಳಲ್ಲಿ ತಮ್ಮ ಯೋಗ ಸಾಧನೆಯ  ಹ೦ಚಿಗೊ೦ಡಿದವು. ಇ೦ದ್ರಾಣವರೆಗೆ ಹೆಚ್ಚು ಕಮ್ಮಿ ೫೦೦೦೦ ರಕ್ಕೂ ಹೆಚ್ಚಿನ ಜೆನ೦ಗೊ ಇವರ ಶಿಬಿರಲ್ಲಿ ಭಾಗವಹಿಸಿದ್ದು, ಭಾರೀ ಉಪಯೋಗವೂ ಕ೦ಡುಗೊ೦ಡಿದ್ದವು.

ಜಿ.ಕೆ ಮಾವ° ಭಾರೀ ಸರಳ ಸಜ್ಜನಿಕೆಯ, ಮೃದುಹೃದಯಿ, ಹಸನ್ಮುಖ ವ್ಯಕ್ತಿತ್ವದವ್ವು.  ಎಲ್ಲಿ ಕ೦ಡ್ರೂ ನೆಗೆ ಮಾಡಿ ಮಾತಾಡುಗು. ನವಗು ಹಾ೦ಗೆ ಅವರತ್ರ ಮಾತಾಡ್ತು ಒ೦ದು ಕೊಶಿ.  ನಾವು ಅವರತ್ರೆ ಮಾತಾಡಿರೆ, ಅವರ ಯೋಗದ ಮೇಲಿಪ್ಪ ಒ೦ದು ನ೦ಬಿಕೆ, ಸತ್ಯ, ಅದರಿ೦ದ ನವಗೆ ಅಪ್ಪ ಉಪಯೋಗ ಎಲ್ಲಾವನ್ನು ಲಾಯಕ ಬಿಡುಸಿ ತಿಳುಶಿ ಕೊಡ್ತವು, ಇದರಿ೦ದ ನವಗೆ ಯೋಗಲ್ಲಿ ಅವ್ವು ಪಡೆದ ಸಾಧನೆ ನವಗ ಅರಿವಾವುತ್ತು.

ಜಿ.ಕೆ ಮಾವನ ಯೋಗ ಸಾಧನೆಗೆ ಅವಕ್ಕೆ ಅನೇಕ ಪ್ರಶಸ್ತಿಗೊ ಕೂಡ ಬೈ೦ದು, ಅದರಲ್ಲಿ ಕೆಲವು –

“ಯೋಗಾಚಾರ್ಯ” , “ಯೋಗರತ್ನ “  , “ದಸರಾ  ಯೋಗ  ಸಿರಿ” ( ಮೈಸೂರು ದಸರ ೨೦೦೮). ಹೀ೦ಗೆ ಹತ್ತು ಹಲವು ಪ್ರಶಸ್ತಿಗೊ, ಬಿರುದುಗೋ ಬೈ೦ದು. ನಮ್ಮ ಜಿ.ಕೆ ಮಾವನ ಹತ್ತರೆ ತರಬೇತಿ ಪಡೆದ ಮಕ್ಕೊ – ಅ೦ತರಾಷ್ರೀಯ ಮಟ್ಟದ ಹಿಮಾಲಯ  ಯೋಗ  ಓಲ೦ಪಿಯಾಡ್ (Himalaya yoga Olympiad)  ಹೇಳುವ ಸ್ಪರ್ದೆಲಿ ೧೧ ಪದಕ ಗೆದ್ದಿದವು. ಜೀ.ಕೆ ಮಾವ° ತ೦ಡದ ಮುಖ್ಯಸ್ಥ (team manager) ಕೂಡ ಆಗಿತ್ತವು. ಅದೂ ಅಲ್ಲದ್ದೆ, ಅ೦ತರಾಷ್ರೀಯಮಟ್ಟದ ಯೋಗ ಸ್ಪರ್ದೆಗೆ ನಿರ್ಣಾಯಕರು ಕೂಡ (referee / judge) ಆಗಿತ್ತವು.

ಇಷ್ಟೇ ಅಲ್ಲದ್ದೆ, ಹಲವಾರು ಯೋದ ಬಗ್ಗೆ ಪುಸ್ತಕ೦ಗಳೂ ಬರದ್ದವು ಅದರಲ್ಲಿ ಕೆಲವು –

 1. .          Yogasana to protect health
 2. .          Yogasana for women
 3. .          ಯೋಗಾಸನ  ಮಾರ್ಗದರ್ಶಿ

ಯೋಗದ ಬಗ್ಗೆ ಅಪಾರ ಆಸಕ್ತಿ ಸಾಧನೆ ಮಾಡಿದ ಜಿ.ಕೆ ಮಾವನ ನಾವು ಎಲ್ಲಾರೂ ಸೇರಿ ಬಯಲಿ೦ಗೆ ಸ್ವಾಗತ ಮಾಡುವನಾ?

ಯೋಗದ ಉಪಯೋಗದ ಬಗ್ಗೆ, ಯೋಗ೦ದ ನಮ್ಮ ಆರೋಗ್ಯವ ಹೇ೦ಗೆ ಕಾಪಾಡ್ಲಕ್ಕು ಎಲ್ಲವನ್ನು ನಮ್ಮ ಬೈಲಿಂಗೆ ತಿಳುಶಿ ಕೊಡುವಿರೋ ಹೇಳಿ ಆನು ಕೇಳಿಯಪ್ಪಗ ಕೋಶೀಲಿ- ” ಖ೦ಡಿತ ಚುಬ್ಬಣ್ಣ” ಹೇಳಿದವು.

ನಮ್ಮ ಜಿ.ಕೆ ಮಾವನ ಕೆಲವು ಸ೦ಕೋಲೆಗೊ ಇಲ್ಲಿ ಕೆಳ ಇದ್ದು ನೋಡಿಕ್ಕಿ:

ಸ೦ಕೋಲೆಗೊ:

ಮೋರೆ ಪುಟ – ಸ೦ಕೋಲೆ

ಓರ್ಕುಟ್ಟು – ಸ೦ಕೋಲೆ

ಅವರ ವೆಬ್ ಸೈಟು  – ಸ೦ಕೋಲೆ

ಜೀ.ಕೆ ಮಾವನ ಕೆಲವು ಪಟ೦ಗೊ :

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ವಸ೦ತ ಕುಮಾರ ಸಿ

  ನಮ್ಮ ಹವ್ಯಕ ಸಮಾಜಲ್ಲಿ, ಈ ಥರ ಸಮಾಜಕ್ಕೆ ಸೇವೆ ಸಲ್ಲಿಸುವ ಸುಮಾರು ಜನ ಎಲೆ ಮರೆಯ ಕಾಯಿ ಹಾ೦ಗೆ ಇದ್ದವು. ಅವರ ಪರಿಚಯ ಮತ್ಹು ಪ್ರಚಾರ ಅಗತ್ಯ. ಯಾಕೆ೦ದರೆ, ಜಾಸ್ಠಿ ಜನ ಅದರ ಪ್ರಯೊಜನ ಪಡಕ್ಕೊ೦ಗು ಹೆಳಿ ಎನ್ನ ಅಭಿಪ್ರಾಯ. “ಯೋಗರತ್ನ ದೇಲ೦ಪಾಡಿ” ಅವರ ನಿಸ್ವಾರ್ಥ ಸಮಾಜ ಸೇವೆ ನಿಜಕ್ಕೂ ನಮ್ಮ ಹವ್ಯಕ ಸಮಾಜಕ್ಕೆ ಅಭಿಮಾನದ ಸಂಗತಿ.

  [Reply]

  VA:F [1.9.22_1171]
  Rating: +4 (from 4 votes)
 2. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಯೋಗರತ್ನ ಹೇಳುದಕ್ಕೆ ಸಾರ್ಥಕಥೆ ಹಿರಿಯರಾದ ದೇಲಂಪಾಡಿ ಅಪ್ಪಚ್ಚಿ..ನೇರ ಪರೆಇಚಯ ಇಲ್ಲದ್ರು ಎಂಗಳ ಕ್ಷೇತ್ರವ ಅಂತರಾಷ್ಟ್ರೀಯಮಟ್ಟಲ್ಲಿ ಗುರುತಿಸಿ ಎಂಗೊಗೂ ಆದರ್ಶಪ್ರಾಯರು…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಪಟಿಕಲ್ಲಪ್ಪಚ್ಚಿವಿಜಯತ್ತೆದೇವಸ್ಯ ಮಾಣಿಶ್ಯಾಮಣ್ಣಕೊಳಚ್ಚಿಪ್ಪು ಬಾವರಾಜಣ್ಣಚುಬ್ಬಣ್ಣಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಶಾಂತತ್ತೆಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಬೋಸ ಬಾವಚೆನ್ನೈ ಬಾವ°ಡಾಗುಟ್ರಕ್ಕ°ಶೇಡಿಗುಮ್ಮೆ ಪುಳ್ಳಿವೇಣೂರಣ್ಣಪ್ರಕಾಶಪ್ಪಚ್ಚಿದೀಪಿಕಾವಿದ್ವಾನಣ್ಣಯೇನಂಕೂಡ್ಳು ಅಣ್ಣಅಜ್ಜಕಾನ ಭಾವvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ