ಮಾಂಬಾಡಿ ವೇಣುಮಾವನ ನಾಟಕ “ಶಮ್ಮಿಯ ಮದುವೆ”

June 19, 2013 ರ 9:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಳವ ಬೈಲಿಲಿ ಹೊಸ ಹೊಸತ್ತು ಬಂದುಗೊಂಡೇ ಇರೆಕ್ಕು ಹೇಳಿ ಬೊಳುಂಬುಮಾವ ಯೇವತ್ತೂ ಹೇಳುಗು.
ಹಾಂಗೆ, ಬೊಳುಂಬು ಮಾವನ ಪ್ರಯತ್ನಲ್ಲಿ ಹೊಸ ಅಂಕಣ ಆರಂಭ ಆವುತ್ತಾ ಇದ್ದು – ಅದುವೇ “ನಾಟಕಂಗೊ“.
ಬೈಲಿಲಿ ಹಲವಾರು ಜೆನ ನಾಟಕಲ್ಲಿ ಆಸಕ್ತಿ ಇಪ್ಪೋರು ಇದ್ದವು; ಅವರ ಆಸಕ್ತಿಲಿ ಈ ಗೆದ್ದೆಲಿ ಬೇಸಾಯ ನೆಡೆಯಲಿ – ಹೇಳ್ತದು ಆಶಯ.

ಮಾಂಬಾಡಿ ವೇಣುಮಾವ°
ಮಾಂಬಾಡಿ ವೇಣುಮಾವ°

ಈ ವಿಭಾಗಲ್ಲಿ ಮೊದಲನೆಯದಾಗಿ ಬತ್ತಾ ಇಪ್ಪ ನಾಟಕ “ಶಮ್ಮಿಯ ಮದುವೆ”.
ಬೊಳುಂಬುಮಾವನ ಚೆಂಙಾಯಿ, ಬೊಳುಂಬುಮಾವನ ಹಾಂಗೇ, ಕೊಡೆಯಾಲದ ಬೇಂಕಿಲಿಪ್ಪ ಮಾಂಬಾಡಿ ವೇಣುಗೋಪಾಲ ಮಾವ ಈ ನಾಟಕದ ಕರ್ತೃ.
ಕೊಡೆಯಾಲದ ಹವ್ಯಕ ವಾರ್ಷಿಕೋತ್ಸವಕ್ಕೆ ಈ ನಾಟಕವ ಆಡಿಯೂ ತೋರ್ಸಿದ್ದವಾಡ.
ನಮ್ಮ ಬೈಲಿಲಿ ಹಾಕುವನೋ ಕೇಳಿದ್ದಕ್ಕೆ ಪ್ರೀತಿಲಿ ಒಪ್ಪಿ, ಕಳುಸಿಕೊಟ್ಟಿದವು.

ಮುಂದೆಯೂ ಬೈಲಿಂಗೆ ಬಂದುಗೊಂಡು, ಬೇರೆಬೇರೆ ಗೆದ್ದೆಗಳಲ್ಲಿ ಅವರ ಕೃಷಿ ಮುಂದುವರ್ಸೇಕು ಹೇಳ್ತ ಪ್ರಾರ್ಥನೆ ನಮ್ಮದು.
ಅಪೂರ್ವ ಕಲಾನಿಧಿಯ ಬೈಲಿಂಗೆ ಕರಕ್ಕೊಂಡು ಬಂದ ಬೊಳುಂಬುಮಾವಂಗೆ ಒಂದೊಪ್ಪ.
~
ಬೈಲಿನ ಪರವಾಗಿ


ಮಾಂಬಾಡಿ ವೇಣುಗೋಪಾಲ ಮಾವನ ಪರಿಚಯ:

ಖ್ಯಾತ ಮಾಂಬಾಡಿ ಮನೆತನದ ಇವು ಈಗ ಕೊಡೆಯಾಲ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ತರಬೇತಿ ಕಾಲೇಜಿಲ್ಲಿ ತರಬೇತಿದಾರರಾಗಿದ್ದವು.

ಬಿ ಎಸ್ ಸಿ, ಮಾಡಿಕ್ಕಿ ಬಿ ಎಡ್ ಲ್ಲಿ ರಾಜ್ಯಕ್ಕೆ ಆರನೇ ರೇಂಕು ಗಳಿಸಿದ್ದವು.
ಕಾಲೇಜಿಂಗೆ ಹೋಗೆಂಡಿಪ್ಪಗ ಚೆಸ್ಸು, ಟೇಬಲ್ ಟೆನ್ನಿಸ್ಸು, ಬೇಟ್ಮಿಂಟನ್ನಿಲ್ಲಿ ಭಾಗವಹಿಸೆಂಡು, ಒಟ್ಟಿಂಗೆ ಸಾಂಸ್ಕೃತಿಕ ಕಾರ್ಯಕ್ರಮಂಗಳಲ್ಲೂ ರೈಸಿದ್ದವು.
ಐದಾರು ವರ್ಷ ಯೂನಿಯನ್ ಬ್ಯಾಂಕಿಲ್ಲಿ ದುಡುದಿಕ್ಕಿ ಮತ್ತೆ ಕರ್ನಾಟಕ ಬ್ಯಾಂಕಿಲ್ಲಿ ಅಧಿಕಾರಿಯಾಗಿ ಸೇರಿದವು.
ಬೆಂಗ್ಳೂರು, ಚೆನ್ನೈ ಮೊದಲಾದ ಕಡೆ ಬ್ರಾಂಚಿಲ್ಲಿ ಮ್ಯಾನೇಜರ್ ಆಗೆಂಡಿಪ್ಪಗ ಅವರ ಉತ್ತಮ ಸಾಧನೆಯ ಕಂಡು ಅವಕ್ಕೆ ಮೂರು ವರ್ಷ ಸತತವಾಗಿ “ಚೇರ್ ಮೇನ್ ಕ್ಲಬ್ಬಿ ”ನ ಮೆಂಬರ್‌ಶಿಪ್ ಪ್ರಶಸ್ತಿಯುದೆ ಕೊಟ್ಟಿದವು. ಕರ್ನಾಟಕ ಬ್ಯಾಂಕಿಲ್ಲಿ 18 ವರ್ಷಂದ ಸೇವೆ ಸಲ್ಲಿಸುತ್ತಾ ಇದ್ದವು.

ಯಕ್ಷಗಾನ ರಂಗಲ್ಲಿ ಒಳ್ಳೆತ ಹೆಸರು ಮಾಡಿದ ಮಾಂಬಾಡಿ ಮನೆತನ ಇವರದ್ದು. ಇವರ ಅಜ್ಜ ಪ್ರಖ್ಯಾತ ಜ್ಯೋತಿಷರಾದ ಶ್ರೀಯುತ ಮುಗುಳಿ ಈಶ್ವರ ಜೋಯಿಸರು.
ಅಪ್ಪ ಮಾಂಬಾಡಿ ಶ್ರೀ ರಾಮಕೃಷ್ಣ ಭಟ್, ಮೃದಂಗ ವಾದನಲ್ಲಿ ಹೆಸರು ಪಡದವು.
ಇನ್ನೊಂದು ವಿಶೇಷತೆ ಎಂತರ ಹೇಳಿರೆ, ಇವು ಯಕ್ಷಗಾನ ರಂಗದ ಪ್ರಖ್ಯಾತ ಭಾಗವತರಾದ ಶ್ರೀಯುತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಅಳಿಯ.
ಶಾಸ್ತ್ರಿಗಳ ಮಗಳು, ಶೈಲಜಾ ಇವರ ಧರ್ಮಪತ್ನಿ. ಮಗ, ಪ್ರತಿಭಾವಂತ, ಅನೀಶ ಇಂಜಿನಿಯರಿಂಗು ಕಲಿತ್ತಾ ಇದ್ದ.

ಇವು ಮಂಗಳೂರು ಹವ್ಯಕ ಸಭಾದ ಕಳೆದ ವರ್ಷ ಕಾರ್ಯದರ್ಶಿಯಾಗಿದ್ದು ಈ ವರ್ಷವುದೆ ಕಾರ್ಯದರ್ಶಿಯಾಗಿ ಮುಂದುವರಿತ್ತಾ ಇದ್ದವು.
ತಾಳಮದ್ದಳೆ ಹೇಳಿರೆ ಇವಕ್ಕೆ ವಿಪರೀತ ಆಸಕ್ತಿ. ಬೇರೆ ಬೇರೆ ಕಡೆ ತಾಳ ಮದ್ದಳೆ ಕಾರ್ಯಕ್ರಮಲ್ಲಿ ಅರ್ಥಧಾರಿಯಾಗಿ ಹಿರಿಯ ಕಲಾವಿದರಿಂದ ಮೆಚ್ಚುಗೆ ಪಡೆದ್ದವು.
ಪ್ರತಿ ಆದಿತ್ಯವಾರ ಸಂಜೆ ಮಂಗಳೂರು ಶರವು ದೇವಸ್ಥಾನಲ್ಲಿ, ಮಂಗಳವಾರ ಮಾರಿಗುಡಿ ದೈವಸ್ಥಾನಲ್ಲಿ ನೆಡೆತ್ತಾ ಇಪ್ಪ ತಾಳಮದ್ದಳೆ ಕಾರ್ಯಕ್ರಮಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಾ ಇದ್ದದು ಅರ್ಥಗಾರಿಕೆಲಿ ಇಪ್ಪ ಅವರ ಪ್ರೀತಿಯ ತೋರುಸುತ್ತು. ಯಕ್ಷಗಾನಲ್ಲಿ ವೇಷಧಾರಿಯೂ ಆಯಿದವು. ಹಲವಾರು ನಾಟಕಂಗಳನ್ನು ನಿರ್ದೇಶಿಸಿ ಆದರಲ್ಲೂ ಪಾತ್ರ ವಹಿಸಿದ್ದವು.

ಕಳುದ ವರ್ಷ ಮಂಗಳೂರು ಹವ್ಯಕ ಸಭೆಯ ವಾರ್ಷಿಕೋತ್ಸವಲ್ಲಿ ಮಾಡ್ಳೆ ಬೇಕಾಗಿ ಬರದ ಈ ಹವ್ಯಕ ನಾಟಕ “ಶಮ್ಮಿಯ ಮದುವೆ ” ಒಪ್ಪಣ್ಣನ ಬೈಲಿಂಗೆ ಕೊಡ್ಳೆಡಿಗೋ ಹೇಳಿ ಕೇಳಿ ಅಪ್ಪಗ ಪ್ರೀತಿಲಿ ಕಳುಸಿ ಕೊಟ್ಟಿದವು.
ಮಾಂಬಾಡಿ ವೇಣುಮಾವಂಗೆ ಹೃದಯ ತುಂಬಿದ ಸ್ವಾಗತಮ್.

~*~

ಶಮ್ಮಿಯ ಮದುವೆ

 ರಚನೆ : ಶ್ರೀ ವೇಣುಗೋಪಾಲ ಮಾಂಬಾಡಿ

ನಮ್ಮ ಸಮಾಜಲ್ಲಿ ಪ್ರಸ್ತುತ ಇಪ್ಪಂತಹ ಒಂದು ಸಮಸ್ಯೆಯ ಪ್ರತಿಬಿಂಬಿಸಿ ಬರದ ಈ ನಾಟಕಲ್ಲಿ ಬಪ್ಪಂತಹ ಪಾತ್ರಂಗಳ ವಿವರ ಇಲ್ಲಿದ್ದು.
ಅಪ್ಪ, ಅಮ್ಮ, ಮದುವೆ ಪ್ರಾಯಕ್ಕೆ ಬಂದ ಅವರ ಮಗಳು, ಮದುವೆ ದಲಾಲಿ, ಗುರಿಕ್ಕಾರ, ಮದುವೆ ಅಪ್ಪಲಿಪ್ಪ ಮೂರು ಜೆನ ವರಂಗೊ ಇಷ್ಟು ಪಾತ್ರಂಗೊ ಇಲ್ಲಿದ್ದು.
ನಾಟಕವ ಓದಿ, ವಿಮರ್ಶೆಗೆ ಸ್ವಾಗತ ಇದ್ದು.
ನಾಟಕ ಆಡಿ ತೋರುಸುತ್ತರೂ ತೊಂದರೆ ಇಲ್ಲೆ, ಎಂಗೊಗೆ ತಿಳುಶಿಕ್ಕಿ.
ಇಲ್ಲದ್ರೆ ನಾಟಕಕ್ಕೆ ಎಂಗಳನ್ನೂ ದಿನಿಗೇಳಿ, ನೋಡಿ ಸಂತೋಷ ಪಡುವೊ.
ಚಪ್ಪಾಳೆ ತಟ್ಳೆ ನಾವಿದ್ದು.

ಪಾತ್ರ ವಿವರ:

ಸುದರ್ಶನ      : ಮನೆಯ ಯಜಮಾನ, ಆಧುನಿಕ ಕಾಲದವ – ಪ್ರಾಯ ೫೫
ಪ್ರಮೀಳಾ       : ಸುದರ್ಶನನ ಹೆಂಡತ್ತಿ. ದೇವರು, ಗುರುಗೊ ಹೇಳಿ ಪ್ರೀತಿಯಿದ್ದು. ಆದರ್ಶ ಗೃಹಿಣಿ.
ಶರ್ಮಿಳಾ       : ಮದುವೆ ಅಪ್ಪಲಿಪ್ಪ ಚೆಂದದ ಕೂಸು, ವರ್ಷ ೨೩, ರಜಾ ಸ್ಟೈಲು ಜಾಸ್ತಿ.
ಕಿಟ್ಟಣ್ಣ            : ಮದುವೆ ದಲಾಲಿ , ವರ್ಷ ೬೦ ಹೇಳಿ ಮಡಗಲಕ್ಕು.
ಕೇಶವಣ್ಣ        : ಗುರಿಕ್ಕಾರ, ಪ್ರಾಯ ಐವತ್ತರ ಮೇಲೆ.
ಸುಬ್ರಹ್ಮಣ್ಯ    : ಒಂದನೇ ಮಾಣಿ ವರ, ವರ್ಷ ೨೮, ಹಣೆಲಿ ವಿಭೂತಿ, ಪಂಚೆ, ಅಂಗಿ
ವಿಷ್ಣುಮೂರ್ತಿ   : ಎರಡನೇ ಮಾಣಿ ವರ, ವರ್ಷ ೨೯, ಪೇಂಟು ಶರ್ಟು

ಸುರೇಶ         : ಮೂರನೇ ಮಾಣಿ ವರ. ವರ್ಷ ೨೮, ವಿದೇಶಲ್ಲಿ ಇಪ್ಪದು, ಆದರೂ ಜುಬ್ಬಾ ಪೈಜಾಮ.

~*~

ಅಕ್ಕಂಬಗ ನಾಟಕ ಶುರು ಮಾಡುವೊ°; ಅಲ್ಲದೊ ?

ಸೂ:

 • ಕುತೂಹಲಭರಿತ ನಾಟಕ ಶಮ್ಮಿಯ ಮದುವೆ ನಮ್ಮ ಬೈಲಿಲಿ ಬಪ್ಪ ವಾರ ನಿರೀಕ್ಷಿಸಿ >>
 • ಶಮ್ಮಿಯ ಮದುವೆ ಎರಡು ವರ್ಷ ಹಿಂದೆ ಮಂಗಳೂರು ಹವ್ಯಕ ಸಭಾದ ವಾರ್ಷಿಕೋತ್ಸವಲ್ಲಿ ನೆಡದು ಅದರ ಎಲ್ಲೋರುದೆ ಮೆಚ್ಚೆಂಡಿದವು.
  ಅದರ ಪಟಂಗಳ ಬೊಳುಂಬು ಮಾವ ತೆಗದು ಮಡಗಿದ್ದರ ನಾಟಕದ ಒಟ್ಟಿಂಗೆ ತೋರ್ಸುಗು.

  ಅಂದು ನಾಟಕಲ್ಲಿ ಭಾಗವಹಿಸಿದವರ ಪರಿಚಯ ಇಲ್ಲಿದ್ದು.

  • ರಚನೆ, ನಿರ್ದೇಶನ, ಸುದರ್ಶನನ ಪಾತ್ರ : ವೇಣುಗೋಪಾಲ ಮಾಂಬಾಡಿ 
  • ಪ್ರಮೀಳಾ : ಭಾರತಿ ಜಗದೀಶ್ 
  • ಶರ್ಮಿಳಾ : ನವ್ಯಾ 
  • ಗುರಿಕ್ಕಾರ ಕೇಶವಣ್ಣ : ಗೋಪಾಲಕೃಷ್ಣ ಬೊಳುಂಬು 
  • ದಲಾಲಿ ಕಿಟ್ಟಣ್ಣ : ರಾಮಚಂದ್ರ ಭಟ್ ಮಾಣಿಪ್ಪಾಡಿ 
  • ಒಂದನೇ ವರ : ಸುಹಾಸ್ ಬೊಳುಂಬು 
  • ಎರಡನೇ ವರ : ಮನಮೋಹನ ಜೋಯಿಸ 
  • ಮೂರನೇ ವರ : ಶ್ರೀಕೃಷ್ಣ ನೀರಮೂಲೆ 
  • ಹಿನ್ನೆಲೆ ಸಂಗೀತ : ಚಿನ್ಮಯ ಬೊಳುಂಬು

~*~

ಕೊಡೆಯಾಲಲ್ಲಿ ಎಳಗಿದ "ಶಮ್ಮಿಯ ಮದುವೆ"ಯ ನೆಂಟ್ರುಗೊ
ಕೊಡೆಯಾಲಲ್ಲಿ ಎಳಗಿದ “ಶಮ್ಮಿಯ ಮದುವೆ”ಯ ನೆಂಟ್ರುಗೊ
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ‘ಶಮ್ಮಿಯ ಮದುವೆ ‘ಯ ವೀಡಿಯೋ ತೆಗದ್ದಿಲ್ಲೆಯೋ?ಇದ್ದಿದ್ದರೆ….

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ಓಹ್, ಬಾಲಣ್ಣನ ಕುತೂಹಲಕ್ಕೆ ಮೆಚ್ಚಿದೆ. ಮದುವೆ ಆಯೆಕಾರೆ ಸುಮಾರು ಪೂರ್ವಭಾವಿ ಕೆಲಸಂಗೊ ಇದ್ದಲ್ಲದೊ ? ಮದುವಗೆ ಖಂಡಿತಾ ವೀಡಿಯೋ ಮಾಡುವೊ ? ಒಂದರಿ ಮದುವೆ ನಿಘಂಟು ಆಗಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಹಾ° … ನಾಟಕವೋ… ಅಕ್ಕು ಅಕ್ಕು. ಬರ್ಲಿ ಬರ್ಲಿ.

  ಏ ಬೋಚಬಾವೋ ??!

  [Reply]

  VA:F [1.9.22_1171]
  Rating: 0 (from 0 votes)
 3. Sandesh

  Suswagatha.. Natakada nireeksheli………

  [Reply]

  VA:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಎಲ್ಲರೂ ನಿರೀಕ್ಷಸಲೇ ಬೇಕಾದ ನಾಟಕ
  ಸ್ಟೇಜಿಲ್ಲಿ ಒಂದರಿ ನೋಡಿದ್ದೆ.
  ಇನ್ನೊಂದರಿ ಮೆಲುಕು ಹಾಕುವೊ°

  [Reply]

  VA:F [1.9.22_1171]
  Rating: 0 (from 0 votes)
 5. ಡೈಮಂಡು ಭಾವ

  ವೇಣು ಮಾವಂಗೆ ಸ್ವಾಗತ…
  ಬೈಲಿಂಗೆ ಬಪ್ಪ ನಾಟಕ ಎಲ್ಲರನ್ನೂ ರಂಜಿಸಲಿ ಹೇಳಿ ಹಾರೈಸುತ್ತೆ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಕೇಜಿಮಾವ°ಸಂಪಾದಕ°ರಾಜಣ್ಣಅಜ್ಜಕಾನ ಭಾವವೇಣೂರಣ್ಣಚುಬ್ಬಣ್ಣಪ್ರಕಾಶಪ್ಪಚ್ಚಿಮಂಗ್ಳೂರ ಮಾಣಿಮಾಷ್ಟ್ರುಮಾವ°ಸರ್ಪಮಲೆ ಮಾವ°ಯೇನಂಕೂಡ್ಳು ಅಣ್ಣಬೊಳುಂಬು ಮಾವ°ಬಂಡಾಡಿ ಅಜ್ಜಿಹಳೆಮನೆ ಅಣ್ಣಪುತ್ತೂರುಬಾವಅನು ಉಡುಪುಮೂಲೆಜಯಶ್ರೀ ನೀರಮೂಲೆಅಡ್ಕತ್ತಿಮಾರುಮಾವ°ಸುಭಗvreddhiಶಾಂತತ್ತೆಕೊಳಚ್ಚಿಪ್ಪು ಬಾವಕಜೆವಸಂತ°ಪಟಿಕಲ್ಲಪ್ಪಚ್ಚಿದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ