ಶಮ್ಮಿಯ ಮದುವೆ : ದೃಶ್ಯ 03

ನಾಟಕದ ಎರಡನೆ ದೃಶ್ಯ ಇಲ್ಲಿದ್ದು

ಪಾತ್ರ ವರ್ಗ:

ಸುದರ್ಶನ : ಮನೆಯ ಯಜಮಾನ, ಆಧುನಿಕ ಕಾಲದವ – ಪ್ರಾಯ 55
ಪ್ರಮೀಳಾ : ಸುದರ್ಶನನ ಹೆಂಡತ್ತಿ. ದೇವರು, ಗುರುಗೊ ಹೇಳಿ ಪ್ರೀತಿಯಿದ್ದು. ಆದರ್ಶ ಗೃಹಿಣಿ.
ಶರ್ಮಿಳಾ : ಮದುವೆ ಅಪ್ಪಲಿಪ್ಪ ಚೆಂದದ ಕೂಸು, ವರ್ಷ 23, ರಜಾ ಸ್ಟೈಲು ಜಾಸ್ತಿ.
ಕಿಟ್ಟಣ್ಣ : ಮದುವೆ ದಲಾಲಿ , ವರ್ಷ 60 ಹೇಳಿ ಮಡಗಲಕ್ಕು.
ಕೇಶವಣ್ಣ : ಗುರಿಕ್ಕಾರ, ಪ್ರಾಯ ಐವತ್ತರ ಮೇಲೆ.
ಸುಬ್ರಹ್ಮಣ್ಯ : ಒಂದನೇ ಮಾಣಿ ವರ, ವರ್ಷ 28, ಹಣೆಲಿ ವಿಭೂತಿ, ಪಂಚೆ, ಅಂಗಿ
ವಿಷ್ಣು ಮೂರ್ತಿ : ಎರಡನೇ ಮಾಣಿ ವರ, ವರ್ಷ 29, ಪೇಂಟು ಶರ್ಟು
ಸುರೇಶ : ಮೂರನೇ ಮಾಣಿ ವರ. ವರ್ಷ 28, ವಿದೇಶಲ್ಲಿ ಇಪ್ಪದು, ಆದರೂ ಜುಬ್ಬಾ ಪೈಜಾಮ.

                                 ದೃಶ್ಯ 3 :

( ಮನೆಯ ದೃಶ್ಯ)

ಸುದ : ಪಮ್ಮೀ, ಮಗಳಿಂಗೆ ಇಂದು ಬೇಗ ಬಪ್ಪಲೆ ಹೇಳಿದ್ದೆಯಾ ?

ಪ್ರಮೀಳಾ : ಹೂಂ.  ಆದರೆ, ಎಂತ ಪ್ರಯೋಜನಕ್ಕೋ, ಆ ದೇವರಿಂಗೇ ಗೊಂತು.

ಸುದ : (ಕೋಟು ಹಾಕಲೆ ಸುರು ಮಾಡಿ) ಇಂದು ಬಪ್ಪೋನು ಸೋಫ್ಟ್ ವೇರ್ ಇಂಜಿನಿಯರು.  ಒಳ್ಳೆ ಮನೆತನ..  ಅದಕ್ಕೆ ಹೀಂಗೆ.  ಎಂತಕೆ ಗೊಂತಾತೊ .  ನಮ್ಮದು ಒಂದು ಗೆಟ್ ಅಪ್ ಬೇಡದೊ, ಹೆ. ನಮ್ಮ ನೋಡುವಗಳೇ ಅವಕ್ಕೆ ಒಂದು ಗೌರವ ಬರೆಕದ.

ಪ್ರಮೀಳ : ಎಲ್ಲ ಸಾಕು.  ಅದ, ಬಂದವೂ ಹೇಳಿ ಕಾಣ್ತು.  (ಕಿಟ್ಟಣ್ಣನೂ, ಕೃಷ್ಣ ಮೂರ್ತಿಯೂ ಬತ್ತವು)

ಸುದ : ಓ, ಬನ್ನಿ ಬನ್ನಿ.  ಕೂರಿ.  ಪಮ್ಮಿ ಇದಾ, ರಜಾ ಆಸರಿಂಗೆ ತೆಕ್ಕೊ.   ಒಳ್ಳೆ ಬೆಶಿಲಲ್ಲದೊ.  ಹೇಳಿದಾಂಗೆ, ಎಂತ ಮಾಡ್ತಾ ಇಪ್ಪದು.

ಕೃಷ್ಣಮೂರ್ತಿ : ಆನು ಬೆಂಗ್ಳೂರಿಲ್ಲಿ ‘ಕೋಗ್ನಿಸೆಂಟ್’ ಕಂಪೆನಿಲಿ ಪ್ರೋಗ್ರಾಂ ಡೈರೆಕ್ಟರ್ ಆಗೆಂಡಿದ್ದೆ.  ನಿನ್ನೆ ಊರಿಂಗೆ ಬಂದದಷ್ಟೆ.

ಸುದ : ಓ ಗುಡ್. ಅಲ್ಲಿ ಆರಿದ್ದವೊ ?

ಕೃಷ್ಣಮೂರ್ತಿ : ಆನೊಬ್ಬನೆ,  ಊರಿಲ್ಲಿ ರಜಾ ತೋಟ ಇದ್ದು. ಅಪ್ಪಂಗೆ ನೋಡ್ಯೊಂಬಲೆ ಎಡಿತ್ತಿಲ್ಲೆ.  ಪ್ರಾಯವುದೆ ಆತಲ್ಲದೊ. ಜಾಗೆ ಮಾರಿ ಎನ್ನೊಟ್ಟಿಂಗೆ ಇರಿ ಹೇಳಿ ಹೇಳಿದ್ದೆ.  ತಮ್ಮ ಎಮ್.ಎಸ್. ಮಾಡ್ಳೆ ಯು ಎಸ್ ಗೆ ಹೋಯಿದ.  ಅಕ್ಕ ಭಾವನುದೆ ಬೆಂಗ್ಳೂರಿಲ್ಲಿ ಇದ್ದವು.

ಕಿಟ್ಟಣ್ಣ :   ಸುದರ್ಶನಣ್ಣ,  ಇವು ನಿಂಗೊಗೆ ಸರಿ ಅಪ್ಪಾಂಗೆ ಇಪ್ಪೋರು.   ಮನೆಲಿ ಹೇಳಿಗೊಂಬ ಹಾಂಗೆ ಪೂಜೆ ಪುನಸ್ಕಾರ ಹೇಳಿ ಎಂತ ಇಲ್ಲೆ.  ತಕ್ಕ ಮಟ್ಟಿಂಗೆ ಅಷ್ಟೆ. ಮಠಕ್ಕು ಅವಕ್ಕುದೆ ಅಷ್ಟಷ್ಟೆ. ಹಾಂಗಾಗಿ. ಕುಳುವಾರು ನಿಂಗೊಗೆ ಹೇಳಿ ಮಾಡುಸಿದ ಹಾಂಗಿದ್ದದ.

ಸುದ : ಹೂಂ. ಶಮ್ಮಿ ಬಂತದ.  ಶಮ್ಮಿ. ಇವ° ಕೃಷ್ಣ ಮೂರ್ತಿ ಹೇಳಿ. ಬೆಂಗ್ಳೂರಿಲ್ಲಿ ಸೋಫ್ಟ್ ವೇರ್ ಕಂಪೆನಿಲಿದ್ದ°.

ಶಮ್ಮಿ :  ಇದಾ, ರಜ ಇತ್ಲಾಗಿ ಬತ್ತೆಯಾ.  (ಕುರ್ಚಿ ಎಳೆದು ಕುಳಿತುಕೊಂಡು) ತೊಂದರೆ ಇಲ್ಲೆ. ನಿಂಬಲಕ್ಕಲ್ಲದೊ ?  ಹೆಸರೆಂತ ?

ಕೃಷ್ಣಮೂರ್ತಿ :  ಕೃಷ್ಣಮೂರ್ತಿ.
ಶಮ್ಮಿ : ಕೃಷ್ಣಮೂರ್ತಿ.  ಅದು ಅಷ್ಟು ಲಾಯಕ ಇಲ್ಲೆ.  ಕಿಶನ್ ಹೇಳಿ ದಿನಿಗೇಳ್ತೆ.  ಇನ್ನು ನೀನು ಕಿಶನ್.. ಓಕೆ ?.  ಬೆಂಗ್ಳೂರಿಲ್ಲಿ ಏವ ಏರಿಯಲ್ಲಿ ಇಪ್ಪದು.  ಹಾಂ. ಅಪ್ಪೊ. ಮತ್ತೆ.  ಅಪ್ಪ ಅಮ್ಮ ಎಲ್ಲ ಊರಿಲ್ಲೇ ಇರ್ತವಾಯ್ಕಲ್ಲದೊ.  ನಮ್ಮೊಟ್ಟಿಂಗೆ ಅವು ಬೆಂಗೂರಿಲ್ಲಿ ಇಪ್ಪದು ಎನಗೆ ಇಷ್ಟ ಇಲ್ಲೆ.  ಅಕ್ಕನೂ ಅಲ್ಲಿ ಇದ್ದಾಡ.  ಅದುದೆ ಅಂಬಗಂಬಗ ನಮ್ಮಲ್ಲಿಗೆ ಬಪ್ಪದೆಲ್ಲ ಬೇಡ. ಮತ್ತೆ ಎನಗೆ ಫುಲ್ ಫ್ರೀಡ೦ ಬೇಕು.  ಎನಗೆ ಕೆಲಸಕ್ಕೆ ಹೋಪಲೇ ಇಷ್ಟ.  ಇನ್ನು ಕನಿಷ್ಟ ಐದು ವರ್ಷ ಮಗುವಿನ ಬಗ್ಗೆ ಆಸೆ ಬೇಡ. ಮತ್ತೆ. . .

ಕೃಷ್ಣಮೂರ್ತಿ : ಇನ್ನು ಸಾಕಾತ. ನಿನ್ನ ಕಂಡಿಶನ್ನುಗಳ ಒಪ್ಪುತ್ತ ಆರಾದರೂ ಒಳ್ಳೆ ಬೇರೆ ಮಾಣಿ ಅಲ್ಲ ಗಂಡಸು ಇದ್ದರೆ ನೋಡಿಗೊ.   I am a family person.  ಮದುವಗೆ ಮೊದಲೇ ಇಷ್ಟೆಲ್ಲ ನಿನ್ನ  conditions ಇದ್ದರೆ,  ಎನ್ನ ಜೀವನವೇ ಮಿಸರಿ ಆಗಿ ಹೋಕು.  ಮೊದಲೇ ಹೇಳಿದ್ದಕ್ಕೆ ಥಾಂಕ್ಸ್.  ಬಾಯ್. ಕಿಟ್ಟಣ್ಣ. ನಾವು ಹೋಪೊ.  ಎನಗೆ ಇದು ಸರಿ ಆಗ.  (ಹೋವ್ತವು)

ಸುದ : ಶಮ್ಮಿ.  ಎಂತಾತ° ?

ಶಮ್ಮಿ : ಎನ್ನ ಕೆಲವು ಕಂಡಿಶನ್ನುಗಳ ಹೇಳಿದೆ. ನರ್ವಸ್ ಆದ°. boy seems handsome.
ಸುದ : Earning too. ಒಳ್ಳೆ  position,  salary  ಯುದೆ. ?

ಶಮ್ಮಿ : ಅದರ ಎಲ್ಲ ಕಟ್ಟೆಂಡು ಎನಗೆ ಎಂತ ಆಯೆಕು.  ಎನ್ನ ಫ್ರೀಡ೦ ಗೆ ಅಡ್ಡಿ ಅಪ್ಪಲಾಗ ಅಷ್ಟೆ. ಇನ್ನು ಅತ್ತೆ ಮಾವ° ಎಲ್ಲ ಎಂಗಳ ಒಟ್ಟಿ೦ಗೆ ಅಲ್ಲಿ. ಚೆ ಚೆ.  (ಸೀದ ಒಳಂಗೆ ಹೋವ್ತು)

ಸುದ : ಓಕೆ ಮಗಳೆ.

ಪ್ರಮೀಳ :  ಎಂತ ಓಕೆಯೊ.  ಅಲ್ಲ ಆನುದೆ ನೋಡ್ತಾ ಇದ್ದೆ.  ಈ ಅಪ್ಪ ಮಗಳ ಮರ್ಜಿ ಎನಗಂತೂ ಸಾಕಾಗಿ ಹೋತಪ್ಪ.  ಆ ದೇವರೇ ಬುದ್ದಿ ಕೊಡೆಕಷ್ಟೆ.  (ಕಣ್ಣನೀರು ಉದ್ದಿಗೊ೦ಡು ಒಳ೦ಗೆ)

(ಇನ್ನಾಣ ದೃಶ್ಯ ಬಪ್ಪವಾರ ನೋಡುವೋ°)

 

DSC_7234 DSC_7238 DSC_7239

ವೇಣು ಮಾಂಬಾಡಿ

   

You may also like...

7 Responses

 1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಲಾಯ್ಕ ಇದ್ದು. ಹಾಂಗಾರೆ ಪಾತ್ರಧಾರಿಗಳ ಪಟ ಎಲ್ಲಿ?

 2. ರಘುಮುಳಿಯ says:

  ಹೊ.ಈ ಕ೦ಡಿಶನುಗಳ ನೋಡಿಯೇ ಹೆದರಿಕೆ ಆತು. ಮು೦ದೆ೦ತಾವುತ್ತೊ?

 3. ಸುಮನ ಭಟ್ ಸಂಕಹಿತ್ಲು. says:

  ಯಬ್ಬಾ ಶಮ್ಮಿಯ ಹಾಂಕಾರವೆ? ಹೇಂಗೆ ಪೆದಂಬಿನ ಹಾಂಗೆ ಮಾತಾಡ್ತು ಆ ಕೂಸು?

 4. ಚೆನ್ನೈ ಭಾವ° says:

  ಯಬ್ಬ ದಗಣೆಯೇ!!

 5. ತೆಕ್ಕುಂಜ ಕುಮಾರ ಮಾವ° says:

  ಶಮ್ಮಿ ಕಮ್ಮಿಲಿ ಏನೂ ಇಲ್ಲೆ. ಇನ್ನಾಣ ವಾರ ಆರು ಬಕ್ಕು….?

 6. ಸಂದೇಶ says:

  ಒಂದು ಮಟ್ಟಿನೋರ ಮಾರಿ ತಿಂಗು ಈ ದಗಣೆ. ಫ್ರೀಡಂ ಹೆಚ್ಚಾತು ಇದಕ್ಕೆ. ಹಪ್ಪಾ!!

 7. ಸಂದೇಶ says:

  ಹೀಂಗಿಪ್ಪ ಕೂಸುಗೊ(ಅಲ್ಲ ಹೆಮ್ಮಾರಿಗೊ) ಇಪ್ಪ ಕಾರಣವೇ ಹಳ್ಳಿಲಿ ‘ಮಾಣಿ’ಯಂಗಳ ಸಂಖ್ಯೆ ಏರುದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *