ಶಮ್ಮಿಯ ಮದುವೆ : ದೃಶ್ಯ 5

August 14, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಟಕದ ನಾಲ್ಕನೆ ದೃಶ್ಯ ಇಲ್ಲಿದ್ದು.

ಪಾತ್ರ ವರ್ಗ:

ಸುದರ್ಶನ : ಮನೆಯ ಯಜಮಾನ, ಆಧುನಿಕ ಕಾಲದವ – ಪ್ರಾಯ 55
ಪ್ರಮೀಳಾ : ಸುದರ್ಶನನ ಹೆಂಡತ್ತಿ. ದೇವರು, ಗುರುಗೊ ಹೇಳಿ ಪ್ರೀತಿಯಿದ್ದು. ಆದರ್ಶ ಗೃಹಿಣಿ.
ಶರ್ಮಿಳಾ : ಮದುವೆ ಅಪ್ಪಲಿಪ್ಪ ಚೆಂದದ ಕೂಸು, ವರ್ಷ 23, ರಜಾ ಸ್ಟೈಲು ಜಾಸ್ತಿ.
ಕಿಟ್ಟಣ್ಣ : ಮದುವೆ ದಲಾಲಿ , ವರ್ಷ 60 ಹೇಳಿ ಮಡಗಲಕ್ಕು.
ಕೇಶವಣ್ಣ : ಗುರಿಕ್ಕಾರ, ಪ್ರಾಯ ಐವತ್ತರ ಮೇಲೆ.
ಸುಬ್ರಹ್ಮಣ್ಯ : ಒಂದನೇ ಮಾಣಿ ವರ, ವರ್ಷ 28, ಹಣೆಲಿ ವಿಭೂತಿ, ಪಂಚೆ, ಅಂಗಿ
ವಿಷ್ಣು ಮೂರ್ತಿ : ಎರಡನೇ ಮಾಣಿ ವರ, ವರ್ಷ 29, ಪೇಂಟು ಶರ್ಟು
ಸುರೇಶ : ಮೂರನೇ ಮಾಣಿ ವರ. ವರ್ಷ 28, ವಿದೇಶಲ್ಲಿ ಇಪ್ಪದು, ಆದರೂ ಜುಬ್ಬಾ ಪೈಜಾಮ.

                                          ದೃಶ್ಯ  ೫ :

(ಮನೆಯ ದೃಶ್ಯ)

ಸುದ : ಪಮ್ಮಿ, ಕೇಶವಣ್ಣನ ಪೋನ್ ಬಂದಿತ್ತು.  ಆ ಮಾಣಿ ಸುರೇಶ°, ಅವಂಗೆ, ನಮ್ಮ ಶಮ್ಮಿ ಅಷ್ಟೊಂದು ಇಷ್ಟಾ ಆಯಿದಿಲ್ಲೇಡ.  ಅವ° ಅಮೇರಿಕಾಲ್ಲಿದ್ದರೂ,  ಇಂಡಿಯನ್, ಭಾರತೀಯನೇ  ಆಗಿಪ್ಪಲೆ ಬಯಸುತ್ತನಾಡ.  ಶಮ್ಮಿಯ ವೇಷ ಮಾತಾಡುದು ಎಲ್ಲ ನೋಡುವಗ ಆರಾದರೂ ಅಮೇರಿಕಾದೋನಿಂಗೆ ಕೊಡ್ಳಕ್ಕು ಹೇಳುವಾಂಗಾತಾದಿಕ್ಕು.  ಹೂಂ. ಇನ್ನೆಂತ ಮಾಡುದೋ ಗೊಂತಾವುತ್ತಿಲ್ಲೆ.  ಇರ್ಲಿ…  ಅಲ್ಲ… ಶಮ್ಮಿ ಎಂತ ಇನ್ನೂ ಬೈಂದಿಲ್ಲೆ.

ಪ್ರ : ಹೊತ್ತು ಗೊತ್ತು ಬೇಕಾನ್ನೆ. ಪಾರ್ಟಿ ಗೀರ್ಟಿ ಹೇಳಿ ಹೋದಿಕ್ಕು.

ಸುದ :  ಫೋನ್ ಮಾಡುವೊ°.  ಇದಾ. ಅದರ ಮೆಸ್ಸೇಜು ಬಯಿಂದು. ಎಂತಪ್ಪಾ ಲೇಟು ?

(ಇಬ್ಬರೂ ಮೊಬೈಲನ್ನು ನೋಡುತ್ತಿರುವರು. ಹಿನ್ನೆಲೆಯಿಂದ ಶರ್ಮಿಳಾ ಮಾತಾಡುತ್ತಿರುವಾಗ ಸ್ಥಿರವಾಗಿ ನಿಲ್ಲುವರು)

ಶರ್ಮಿಳ : (ಒಳಗಿಂದ )ಡ್ಯಾಡಿ, ಆನು ನಿಂಗೊಗೆ ತಲೆಬಿಸಿ ಕೊಡುತ್ತು ಬೇಡಾ ಹೇಳಿ ಎನ್ನ ಕೊಲೀಗ್ ಒಬ್ಬನ ಮದುವೆ ಆವ್ತಾ ಇದ್ದೆ.  ಇಮ್ರಾನ್ ಹಶ್ಮಿ ಹೇಳಿ.  ಅವ° ಎಂಗಳ ಪುಣೆ ಕಾಂಪಸ್ಸಿಲ್ಲಿ ಇಪ್ಪದು.  ನೆಟ್ಟಿಲ್ಲಿ ಪರಿಚಯ ಆದ್ದದು.  ಎಂಗೊಗೆ ಆರು ತಿಂಗಳ ಪರಿಚಯ.  ಇದರ ಎಲ್ಲ ಮನೆಲೇ ಹೇಳಿ ರಾದ್ದಾಂತ ಅಪ್ಪದು ಬೇಡ ಹೇಳಿ ಹೇಳಿದ್ದಿಲ್ಲೆ.  ಇದೀಗ ಆನು ಟ್ರೈನಿಲ್ಲಿ ಪುಣೆಗೆ ಹೋವ್ತಾ ಇದ್ದೆ.  ಕೆಲವು ದಿನಲ್ಲಿ ಎಂಗೊ ಒಟ್ಟಿಂಗೆ ನಿಂಗಳ ಮೀಟ್ ಅಪ್ಪಲೆ ಬತ್ತೆ.  ಅಮ್ಮಂಗೂ ಹೇಳಿಕ್ಕಿ. ಬಾಯ್.

ಪ್ರ : ಆ. ಎಂತಾ. ನಮ್ಮ ಶಮ್ಮೀ  ಆರೊಟ್ಟಿಂಗೋ ಓಡಿ ಹೋತಾ . . . ಅಯ್ಯೋ . . .(ಕುಸಿದು ಬೀಳ್ತು).

ಸುದ : ಪಮ್ಮಿ, ಪಮ್ಮಿ, ಎಂತಾತು, ಏ ಮಾತಾಡು . . (ಒಳ೦ಗೆ ಹೋಗಿ ನೀರು ತಂದು) ಅಯ್ಯೋ ಎಂತಾತು. (ಡಾಕ್ಟ್ರಿಗೆ ಪೋನ್ ಮಾಡುವ ಅಭಿನಯ) ಡಾಕ್ಟ್ರೆ, ಬೇಗ ಬನ್ನಿ. ಹೆಂಡತ್ತಿ ಪ್ರಮೀಳ ಇಲ್ಲಿ ಎಚ್ಚರ ತಪ್ಪಿ ಬಿದ್ದಿದು. ಒಂದರಿ ಬನ್ನಿ.

(ಇನ್ನಾಣ ದೃಶ್ಯ ಬಪ್ಪವಾರ ನೋಡುವೋ°)

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಯೆಲ !!

  [Reply]

  VA:F [1.9.22_1171]
  Rating: 0 (from 0 votes)
 2. Supriya

  ಇದು ಎಂತ ಆತು!!!!

  [Reply]

  VA:F [1.9.22_1171]
  Rating: 0 (from 0 votes)
 3. ಶ್ಯಾಮಣ್ಣ
  ಶ್ಯಾಮಣ್ಣ

  ಇಮ್ರಾನ್ ಹಶ್ಮಿ ಹೇಳಿರೆ ಆರು? ಆ ಫಿಲ್ಮ್ ಯಾಕ್ಟರಾ?

  [Reply]

  VN:F [1.9.22_1171]
  Rating: +1 (from 1 vote)
 4. ಯೇಸಂ

  ಹ್ಮ್! ನಮ್ಮವಕ್ಕೆ ಹೋಗಿ ಹೋಗಿ ಸಿಕ್ಕುದು ಬ್ಯಾರಿಗಳುದೆ ಪೊಬು೯ಗಳುದೆ. ಬ್ರಾಹ್ಮಣರ ಮಯಾ೯ದಿ ತೆಗವಲೆ

  [Reply]

  VA:F [1.9.22_1171]
  Rating: +1 (from 1 vote)
 5. ಎ೦ .ಕೆ.

  ಅ೦ತೂ ಶಮ್ಮಿ , ಕೋಲೀಗ್ ನ ಕೊಳಿ ಕ೦ಡೊ ಎನೋ, ಕೊನೆಗೆ ಪನಾ೦ದೆ ೧೨(ಪದ್ರಾಡ್)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಸುಭಗಅನಿತಾ ನರೇಶ್, ಮಂಚಿಚೆನ್ನಬೆಟ್ಟಣ್ಣಪೆಂಗಣ್ಣ°ಶ್ರೀಅಕ್ಕ°ಪುಣಚ ಡಾಕ್ಟ್ರುಅಕ್ಷರ°ಡಾಮಹೇಶಣ್ಣಮಂಗ್ಳೂರ ಮಾಣಿಅನುಶ್ರೀ ಬಂಡಾಡಿಚೆನ್ನೈ ಬಾವ°ಹಳೆಮನೆ ಅಣ್ಣಬಟ್ಟಮಾವ°ಯೇನಂಕೂಡ್ಳು ಅಣ್ಣಒಪ್ಪಕ್ಕಸರ್ಪಮಲೆ ಮಾವ°ಸುವರ್ಣಿನೀ ಕೊಣಲೆಕಜೆವಸಂತ°ಚುಬ್ಬಣ್ಣಡಾಗುಟ್ರಕ್ಕ°ಕಾವಿನಮೂಲೆ ಮಾಣಿಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ಮಾಲಕ್ಕ°ರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ