Oppanna.com

ಶಮ್ಮಿಯ ಮದುವೆ : ದೃಶ್ಯ 4

ಬರದೋರು :   ವೇಣು ಮಾಂಬಾಡಿ    on   07/08/2013    4 ಒಪ್ಪಂಗೊ

ನಾಟಕದ ಮೂರನೆ ದೃಶ್ಯ ಇಲ್ಲಿದ್ದು
ಸುದರ್ಶನ : ಮನೆಯ ಯಜಮಾನ, ಆಧುನಿಕ ಕಾಲದವ – ಪ್ರಾಯ ೫೫
ಪ್ರಮೀಳಾ :  ಸುದರ್ಶನನ ಹೆಂಡತ್ತಿ.  ದೇವರು, ಗುರುಗೊ ಹೇಳಿ ಪ್ರೀತಿಯಿದ್ದು. ಆದರ್ಶ ಗೃಹಿಣಿ.
ಶರ್ಮಿಳಾ :  ಮದುವೆ ಅಪ್ಪಲಿಪ್ಪ ಚೆಂದದ ಕೂಸು, ವರ್ಷ ೨೩, ರಜಾ ಸ್ಟೈಲು ಜಾಸ್ತಿ.
ಕಿಟ್ಟಣ್ಣ :  ಮದುವೆ ದಲಾಲಿ , ವರ್ಷ ೬೦ ಹೇಳಿ ಮಡಗಲಕ್ಕು.
ಕೇಶವ :  ಗುರಿಕ್ಕಾರ, ಪ್ರಾಯ ಐವತ್ತರ ಮೇಲೆ.
ಸುಬ್ರಹ್ಮಣ್ಯ : ಒಂದನೇ ಮಾಣಿ ವರ, ವರ್ಷ ೨೮, ಹಣೆಲಿ ವಿಭೂತಿ, ಪಂಚೆ, ಅಂಗಿ
ಕೃಷ್ಣ ಮೂರ್ತಿ : ಎರಡನೇ  ಮಾಣಿ ವರ,  ವರ್ಷ ೨೯, ಪೇಂಟು ಶರ್ಟು
ಸುರೇಶ :  ಮೂರನೇ  ಮಾಣಿ ವರ. ವರ್ಷ ೨೮, ವಿದೇಶಲ್ಲಿ ಇಪ್ಪದು, ಆದರೂ ಜುಬ್ಬಾ ಪೈಜಾಮ.
ದೃಶ್ಯ ೪ : (ಮನೆಯ ದೃಶ್ಯ)
ಸುದರ್ಶನ : (ಪೇಪರ್ ಓದುತ್ತಾ ಇರುತ್ತ° ) (ಪ್ರಮೀಳಾ ಪ್ರವೇಶ, ಕೈಯಲ್ಲಿ ಪೂಜಾ ವಸ್ತುಗಳು.)
ಓ, ಎಂತಾ, ಪೂಜಾರ್ತಿಗಳದ್ದು, ದೊಡ್ಡ ಕಾರ್ಯಕ್ರಮ ಮುಗುಶಿ ಬಂದಾಂಗೆ ಕಾಣ್ತು.
ಪ್ರಮೀಳಾ : (ಮೌನ, ದಿಟ್ಟಿಸಿ ನೋಡಿ) ಇದಾ ರಜ ಇತ್ಲಾಗಿ ಬನ್ನಿ. ಬೇಕಾರೆ ನಿಂಗಳ ಚೇರ್ ಎಳಕ್ಕೊಳಿ. ನಿಂಗಳತ್ರೆ ರಜಾ ಎನಗೆ ಮಾತಾಡೆಕ್ಕು.
ಸುದ :ಊ°. ಎಂತಾ, ಎಂತೆಂತ ಸಂಗತಿ.  ಇನ್ನೂ ಕಾಪಿ ತಿಂಡಿ ಆಯಿದಿಲ್ಲೆ. ಸಂಡೇ ಹೇಳಿ ಎಲ್ಲದಕ್ಕೂ ರಜೆಯೊ ?
(ಪೇಪರನ್ನು ಕೈಯಿಂದ ಎಳೆದು, ರಟ್ಟೆಯನ್ನು ಹಿಡಿದೆಳೆದು, ಮುಂದೆ ಬಂದು)
ನೋಡಿ, ನಿಂಗಳನ್ನೂ ಮಗಳನ್ನೂ ಇಷ್ಟು ಸಮಯ ಸಹಿಸೆಂಡೇ ಬಂದೆ.  ಇಲ್ಲೆ, ಇಲ್ಲೆ, ಇನ್ನು ಎನಗೆ ಸಹಿಸಲೆಡಿಯ.  ನಿಂಗಳೋ,  ನಿಂಗಳ ಫ್ಯಾಶನ್ನೊ, ಫ್ರೆ೦ಡುಗಳ ಒಟ್ಟಿಂಗೆ ಎಲ್ಲೆಲ್ಲಿಯೋ ತಿರುಗುದು, ಪಾರ್ಟಿ ಹೇಳಿ ಹೋಪದು, ಅದೇ ಆತು ನಿಂಗಳದ್ದು. ರಜಾ, ರಜಾ ಆದರು ಜವಾಬ್ದಾರಿ ಇದ್ದೊ ?
ಸುದ : ಅಲ್ಲ, ಎನ್ನದೆಂತ ತಪ್ಪಾಯಿದು ಮಾರಾಯ್ತಿ.
ಪ್ರಮೀಳಾ : ತಪ್ಪು. . . ಎಲ್ಲಿ ಸರಿ ಇತ್ತಿದ್ದಿ ? ಒಳ್ಳೆ ಗವರ್ಮೆಂಟು ಕೆಲಸಲ್ಲಿ ಇತ್ತಿದ್ದಿ.  ನಿಂಗಳ ಶೋಕಿಂಗೆ ಸಂಬಳ ಸಾಕಾತಿಲ್ಲೆ.  ಲಂಚ ಅದೂ ಇದೂ ಹೇಳಿ ಪೈಸೆ ಮಾಡ್ಳೆ ಹೆರಟಿ.  ಚೆ.   ಪೈಸೆ ಪೈಸೆ ಹೇಳಿ ಆಶೆಪಟ್ಟು, ಕಡೆಂಗೆ ಎಂತಾತು ? ಲೋಕಾಯುಕ್ತದವಕ್ಕೆ ಕಂಪ್ಲೆಂಟು ಹೋತು, ಹಿಡುದವು.  ಕೆಲಸವುದೆ ಹೋತು.
ಸುದ : ನೋಡು, ನೋಡು ಹಿಂದಾಣದ್ದೆಲ್ಲ ಹೇಳಿ ಹಂಗಿಸೆಕು ಹೇಳಿ ಇಲ್ಲೆ. ಅದು ಅದು ಎನಗಾಗದ್ದೋರು ಆರೋ ಮಾಡಿದ್ದು.  ಎಂತರ ಆನು ಮಾಂತ್ರ ತೆಕ್ಕೊಂಡಿತ್ತೋನು ?  ಬರೀ ಸಂಬಳಲ್ಲಿ ಈ ಒಂದು ಮನೆಯನ್ನಾದ್ರೂ ಕಟ್ಟೆಂಬಲೆ ಎಡಿತ್ತಿತ ?
ಪ್ರಮೀಳಾ :    ಎಲ್ಲೋರು, ಮನ್ನೆ ಎಡ್ಡಿದೆ ಹೇಳಿದ್ದು ಹಾಂಗೆ. ನನ್ನ ವಿರೋಧಿಗಳು ಮಾಡಿದ ಕುತಂತ್ರ ಹೇಳಿ.  ಲಂಚ ತೆಕ್ಕೊಂಡದು ಲೊಟ್ಟೆ ಅಲ್ಲಾನೆ.  ಒಳುದೋರು ತೆಕ್ಕೊಂಡಿಕ್ಕು, ಹಾಂಗೇಳಿ ನಾವು ನಮ್ಮ ಸತ್ಯ, ನ್ಯಾಯವ ಬಿಡೆಕ್ಕೊ.  ಆಮೇಲೆ ಮನೆ ಕಟ್ಟಿದ್ದು, ನೆಮ್ಮದಿ ಮುಖ್ಯವೋ, ಆಡಂಬರವ ? ಬಾಡಿಗೆ ಮನೆಲಿಪ್ಪಗ ನೆಮ್ಮದಿಲಿತ್ತಿಲ್ಲೆಯೊ ? ಈಗೆಂತಾತು ?
ಸುದ : ಹಾಂಗುದೆ ಎಂತಾತು ಹೇಳಿ ಈಗ.. ನಮ್ಮ ಶಮ್ಮಿಗೆ ಮದುವೆ ಆಯಿದಿಲ್ಲೆ ಹೇಳಿ ಅಲ್ಲದೊ ?  ಅದಕ್ಕೊಂದು ಮಾಣಿ ಹೇಳಿ ಇಕ್ಕೇ ಇಕ್ಕು.  ಮದುವೆ ಆಗೇ ಅಕ್ಕು.  ಅಷ್ಟು ಚೆಂದದ ಕೂಸು, ಒಳ್ಳೆ ಕಲ್ತಿದು,
ಬಿ.ಇ., ಎಮ್ ಬಿ ಎ, ಒಳ್ಳೆ ಕೆಲಸ ಇನ್ನೆಂತ ಬೇಕು ?
ಪ್ರಮೀಳಾ : ಎಲ್ಲಾ ಅಪ್ಪು, ಎಲ್ಲಾ ಇದ್ದು.  ಒಳ್ಳೆ ಬುದ್ದಿ ಒಂದು ಬಿಟ್ಟು.  ಅದರ ರೂಮಿಂಗೆ ಏವತ್ತಾರೂ ಹೋಯಿದೀರ ? ಅದರ ಕ್ರಮಂಗ, ಅದರ ರೀತಿ ನೀತಿಗೊ ಎಲ್ಲ ಏವದೂ ಒಳ್ಳೆ ಮನೆತನದ ಕೂಸುಗಳ ಹಾಂಗಿಲ್ಲೆ ಗೊಂತಿದ್ದೊ ?
ಸುದ : ಅಪ್ಪು, ಕ್ರೀಮು ಪೌಡರು, ಲಿಪ್ ಸ್ಟಿಕ್ಕು ಎಲ್ಲಾ ಇಕ್ಕು. ನಿನಗಿದೆಲ್ಲ ಆವ್ತಿಲ್ಲೆ.  ಈಗಾಣೋರಿಂಗೆ ಅದೆಲ್ಲ ಬೇಡದೊ ?
ಪ್ರಮೀಳಾ : ಹುಂ. ಅಷ್ಟೆ ಆದರೆ ಆನು ಇಷ್ಟೊಂದು ಹೇಳ್ತಿತಿಲ್ಲೆ.  ಆನು ವಿವರವಾಗಿ ಹೇಳ್ತಿಲ್ಲೆ.  ಆದರೆ ಅರ್ಥ ಮಾಡ್ಯೊಳಿ ಅಷ್ಟೆ.
ಸುದ : ಸರಿ, ಈಗ ಎಂತಾಯೆಕ್ಕು.  ನೀನೆಂತ ವಿಶೇಷ ಪೂಜೆಯನ್ನೆಂತೋ ಮಾಡಿಕ್ಕಿ ಬಂದ ಹಾಂಗೆ ಕಾಣ್ತು.
ಪ್ರಮೀಳಾ : ಅಪ್ಪು, ಆವ್ತಪ್ಪದರ ಎಲ್ಲ ನೋಡಿ ಹೀಂಗೆ ಇದ್ದರಾಗ ಹೇಳಿ, ನಮ್ಮ ಜೋಯಿಸ ವೆಂಕಟೇಶಣ್ಣನಲ್ಲಿಗೆ ಹೋಗಿತ್ತಿದ್ದೆ. ನಮ್ಮ ಜಾತಕಂಗಳ ಎಲ್ಲ ನೋಡಿಕ್ಕಿ ಅವ ಹೇಳಿದ ಮುಖ್ಯ ವಿಷಯ ಇಷ್ಟು.  ನವಗೆ ದೇವ ದೋಷ, ಗುರು ದೋಷ ಕಾಣ್ತಾ ಇದ್ದು ಹೇಳಿದವು.  ಅಲ್ಲ. ಅದು ನವಗೇ ಗೊಂತಿಪ್ಪದೆ. ಈ ಮನೆ ಒಕ್ಕಲಾದ ಮೇಲೆ ಒಂದು ಪೂಜೆ ಏವದಾರು ನಮ್ಮಲ್ಲಿ ಆಯಿದ ? ಮತ್ತೆ ಮಠ, ಗುರುಗೊ ಹೇಳಿರೆ ನಿಂಗೊಗೆ ಏವತ್ತೂ ತಾತ್ಸಾರವೇ ?
ಸುದ : ಅದಿರ್ಲಿ.  ಈಗ ಎಂತ ಮಾಡೆಕ್ಕು ಹೇಳಿ ಅವ ಹೇಳ್ತ ?
ಪ್ರಮೀಳಾ : ನಿಂಗ ದಿನ ನಿತ್ಯ ೪೮ ಗಾಯತ್ರಿ ಜಪ ಮಾಡೆಕು, ರುದ್ರ ಕಲುತ್ತು ಅದರ ಹೇಳೆಕ್ಕು, ಮನೆಲೊಂದು ಶಿವಪೂಜೆ, ಶತರುದ್ರ ಸಹಿತ ಆಯೆಕ್ಕು. ಮತ್ತೆ ಗುರುದೋಷ ನಿವಾರಣೆಗೆ, ಗುರುಸೇವೆ ಗೋಸೇವೆ ಆಯೆಕ್ಕು ಹೇಳಿದ°.  ಆನು ನಮ್ಮ ಗುರಿಕ್ಕಾರರ ಇಲ್ಲಿಗೆ ಬಪ್ಪಲೆ ಹೇಳಿದ್ದೆ. (ಕೇಶವಣ್ಣನ ಪ್ರವೇಶ) ಅದಾ ಕೇಶವಣ್ಣನುದೆ ಬಂದವದ.
ಪ್ರಮೀಳಾ : ಬನ್ನಿ ಕೇಶವಣ್ಣ, ಕೂರಿ.  ನಿಂಗಳ ವಿಷಯವೇ ಮಾತಾಡೆಂಡಿತ್ತಿದ್ದೆಯೊ°.  ಇದಾ ಮನೆ ಹಣ, ಗೋಪೂಜೆಗಿಪ್ಪ ಪೈಸೆ, ಈ ಸರ್ತ್ಯಾಣ ಚಾತುರ್ಮಾಸ್ಯದ ಹಣ,  ಆಮೇಲೆ ಬೇರೆಂತ ಇದ್ದೋ , ಅದೆಲ್ಲವನ್ನೂ ಕೊಡ್ತಿಯೊಂ.  ಆನು ಆಸರಿಂಗೆ ತೆಕ್ಕೊಂಡು ಬತ್ತೆ.
ಸುದ : (ಒಳ ಹೋಗಿ ಪರ್ಸು ತೆಕೊಂಡು ಬತ್ತ°). ಸರಿ ಅಂಬಗ,  ಇದಾ, ಎಲ್ಲ ರಶೀದಿ ಹಾಕಿ ಎಷ್ಟಾತು ಹೇಳು.  ಪಮ್ಮಿ ಇಷ್ಟು ಹೇಳಿದ ಮೇಲೆ ಮುಗುತ್ತು.  ಮತ್ತೆ ಇನ್ನಾಣ ರುದ್ರದ ಕ್ಲಾಸು ಏವಗ ?
ಕೇಶವ : ನಾಡ್ದು ಸೋಮವಾರ, ಭಾರತೀ ಕಾಲೇಜಿಲ್ಲಿ ಉದಿಯಪ್ಪಗ ಸುರು ಆವ್ತು.  ಯೋ, ಆ ಸುರೇಶ° ಹೆರ ಕಾಯ್ತಾ ಇದ್ದನಾಯ್ಕು. ಎಂಗೊ ಭಾರತೀ ಕಾಲೇಜಿಂಗೆ ಹೆರಟದು.  ಅಕ್ಕಂಬಗ ಕಾಂಬೊ°.
ಸುದರ್ಶನ :  ಚೆ, ಅವರ ಒಳ ಕರ್ಕೊಂಡು ಬಪ್ಪಲಾವ್ತಿತಿಲ್ಲೆಯೊ.  ಬಪ್ಪಲೆ ಹೇಳು ಅವರ.
ಕೇಶವ : ಅದು ಸರಿ, ಏ, ಸುರೇಶಾ ಬಾ ಇಲ್ಲಿ.
ಕೇಶವ : ಆ°... ಇವರ ಪರಿಚಯ ಮಾಡ್ಳೆ ಬಿಟ್ಟೊತದ.  ಇವು, ಸುರೇಶ° ಹೇಳಿ, ನಮ್ಮ ಮಾಬಲಣ್ಣನ ಮಗ°. ಅಮೇರಿಕಲ್ಲಿ ಪೇಸ್ ಬುಕ್ ಕಂಪೆನಿಲಿ ದೊಡ್ಡ ಪೋಸ್ಟಿಲ್ಲಿದ್ದ°. ಈಗ ಒಂದು ತಿಂಗಳಿಂಗೆ ರಜೇ ಹೇಳಿ ಭಾರತಲ್ಲಿ ಇದ್ದ°. ಆನು ಅವರಲ್ಲಿಗೆ ಹೋದಿಪ್ಪಗ ನಮ್ಮ ಭಾರತಿ ಕಾಲೇಜಿನ ವಿಷಯ ಮಾತಾಡಿದೆಯೊ°.  ಕೂಡ್ಳೆ ಎನಗೆ ನೋಡೆಕ್ಕು, ಎನ್ನ ಕೈಲಿ ಎಂತ ಮಾಡ್ಳೆಡಿಗೋ ಅದರ ಮಾಡ್ತೆ ಹೇಳಿ ಹೇಳಿದ°.
ಸುದ : ಓ. ಭೇಟಿ ಆದ್ದು ತುಂಬಾ ಸಂತೋಷ ಆತು. ಆನು ಸುದರ್ಶನ ಹೇಳಿ.  ಇದು ಪ್ರಮೀಳ.   ಹಾಂ. ಎನ್ನ ಮಗಳನ್ನು ಇಂಟ್ರೊಡ್ಯೂಸ್ ಮಾಡ್ತೆ.  ಶಮ್ಮೀ, ಒಂದಾರಿ  ಇಲ್ಲಿ ಬಾ.
ಶಮ್ಮಿ : ಎಂತಾ ಡ್ಯಾಡೀ . . . (ಪ್ರವೇಶ)
ಸುದ : ಇದೆನ್ನ ಮಗಳು,  ಶರ್ಮಿಳಾ ಹೇಳಿ. ಇಲ್ಲೆ,  ಇನ್ಫ್ಫೋಸಿಸ್ ಲ್ಲಿ ವರ್ಕ್ ಮಾಡ್ತಾ ಇದ್ದು.
ಶಮ್ಮಿ : ಹಾಯ್ (ಕೈ ಚಾಚುತ್ತು)
ಸುರೇಶ : ನಮಸ್ತೇ (ಕೈ ಮುಗಿದು) ನಿಂಗಳೆಲ್ಲ ಭೇಟಿ ಆದ್ದದು ಸಂತೋಷ ಆತು.
ಪ್ರಮೀಳಾ  : (ಕಾಪಿ ಕೊಡ್ತು ) ಇದ ಕಾಫಿ ತೆಕ್ಕೊಳ್ಳಿ.
ಸುದ  : ನಿಂಗೊ ಇನ್ನು ಎಷ್ಟು ದಿನ ಊರಿಲ್ಲಿ ಇದ್ದಿ ?
ಸುರೇಶ : ಒಂದು ಹತ್ತು ದಿನ ಅಷ್ಟೆ.  ಅಪ್ಪ ಒಂದೆರಡು ಕೂಸುಗಳ ನೋಡ್ಳೆ ಇದ್ದು ಹೇಳಿ ಬರ್ಸಿದವು. ಅಮೇರಿಕಲ್ಲಿ ಈಗ ಕ್ರಿಸ್ಮಸ್ಸು, ನ್ಯೂ ಇಯರ್ ಹೇಳಿ ರಜೆ ಇದ.
ಸುದ : (ಕೇಶವನ ಹತ್ತಿರ ದಿನಿಗೇಳಿ) ಕೇಶವ, ಹೇಂಗೆ ನಮ್ಮ ಶಮ್ಮಿಯ ಪ್ರಸ್ತಾಪ ಮಾಡುದ ?
ಕೇ : ಅಡ್ಡಿ ಇಲ್ಲೆ, ಆದರೆ ಅವಂಗೆ ನಿಂಗಳ ಮಗಳಿನ ಈ ಕ್ರಮ,  ವೇಷ ಎಲ್ಲ ಹಿಡಿತ್ತಾ ಇಲ್ಲೆಯೊ ಏನೋ? ಅಮೇರಿಕಲ್ಲಿದ್ದರೂ ಇಲ್ಯಾಣ ಕ್ರಮ, ಸಂಪ್ರದಾಯವ ಬಿಡದ್ದೋನು ಅವ°.  ಆಮೇಲೆ, ಕೇಳಿ ನೋಡ್ತೆ.
ಸುದ : ಅಷ್ಟು ಮಾಡು. (ಕಾಫಿ ಕುಡಿದು ಹೆರಡುತ್ತವು )
ಸುರೇಶ : ಎಂಗ ಹೆರಡುತ್ತೆಯ°. ಮತ್ತೊಂದರಿ ಸಿಕ್ಕುವೊ°. (ಹೋವ್ತವು)
ಶರ್ಮಿಳ : ಓಹ್.  ಹೇಂಡ್ ಸಮ್.
ಪ್ರ : ಎಂತ ಕೇಶವಣ್ಣನಲ್ಲಿ ಶರ್ಮಿಳೆಯ ವಿಷಯ ಹೇಳಿದಿರೊ ?
ಸುದ : ಕೇಶವಂಗೆ ಕೇಳ್ಲೆ ಹೇಳಿದ್ದೆ.  ಎಂತ ಹೇಳ್ತ ನೋಡುವೊ°. ಹೇಂಗಾರೂ ಕೂಸಿನ ನೋಡಿ ಆದಾಂಗಾತನ್ನೆ.
(ಇನ್ನಾಣ ದೃಶ್ಯ ಬಪ್ಪವಾರ ನೋಡುವೋ°)
 
DSC_7244 DSC_7229

4 thoughts on “ಶಮ್ಮಿಯ ಮದುವೆ : ದೃಶ್ಯ 4

  1. layakka iddhu…
    enage ee nataka thumba oppa! 🙂
    please forgive me if somethng goes wrong whn i try to speak havvyaka kannada..
    learning…. 😉

  2. ಅರೆ…. ಸುದರ್ಶನ ಚೇಂಜ್ ಆದನಾ ಅಷ್ಟು ಬೇಗ… ಅಥವಾ ಎಂತದಾದರೂ ಕುತ್ರಟೆ ಇದ್ದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×