ಕನಸಿನ ಸೀರೆ ಕೈಸೇರಿತ್ತು

April 22, 2017 ರ 7:58 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

             ಆನೂ ಲಕ್ಷ್ಮಿಯೂ ಒಟ್ಟಿಂಗೇ ಆಡಿ ಬೆಳದೋರು. ಸಣ್ಣಾದಿಪ್ಪಗ ಆಟ ಆಡಿದ್ದಕ್ಕೂ , ಲಡಾಯಿ ಕುಟ್ಟಿದ್ದಕ್ಕೂ ಲೆಕ್ಕವೇ ಇರ. ಆರಾದರೂ ಎಂಗಳ ಲಡಾಯಿ ಬಿಡ್ಸುಲೆ ಬಂದರೆ ಅವರ ಹಣೆವಾರ ಕೆಟ್ಟತ್ತು ಹೇಳಿ ಲೆಕ್ಕ. ಎಂಗ ಒಂದೇ . ಎಡೆಲಿ ಬಂದೋರು ಬಜ್ಜಿ. ಮದುವೆಯಾಗಿ ತುಂಬ ದೂರ ಅಲ್ಲದ್ದರೂ ಚೂರು ದೂರ ದೂರ ಇದ್ದರೂ ಮನಸ್ಸು ದೂರ ಆಯ್ದೇ ಇಲ್ಲೆ. ಲಕ್ಷ್ಮಿ ಒಳ್ಳೆ ಸ್ಥಿತಿವಂತರ ಮನೆ ಸೇರಿದ್ದು. ಎಂಗಳದ್ದು ಕಾಲಿಂಗೆಳದರೆ ತಲಗಿಲ್ಲೆ , ತಲಗೆಳದರೆ ಕಾಲಿಂಗಿಲ್ಲೆ ಹೇಳ್ತ ಪರಿಸ್ಥಿತಿ. ಅಂದರೂ ಪುಟಗಟ್ಳೆ ಕಾಗದ ಬರವದು ತಪ್ಪಿದ್ದಿಲ್ಲೆ. ಈಗಂತೂ ಮೊಬೈಲ್ , ವಾಟ್ಸಾಪ್ ಇದ್ದು. ಆನೂ ಮೊಬೈಲಿಲಿ ಗೀಸುಲೆ ಕಲ್ತೊಂಡಿದೆ. ಎನ್ನ ಯಜಮಾನ್ರು ‘ದಿನಲ್ಲಿ ಕಮ್ಮಿಲಿ ಹತ್ತು ಸರ್ತಿಯಾದರೂ ಲಕ್ಷ್ಮಿಯ ಹೆಸರು ಹೇಳದ್ದರೆ ನಿನಗೆ ಉಂಡ ಅಶನ ಜೀರ್ಣ ಆಗ ಅಲ್ಲದಾ …….. ? ‘ ಹೇಳ್ಯೊಂಡು ಯಾವಾಗ್ಲೂ ತಮಾಷೆ ಮಾಡ್ಳಿದ್ದು . ಎಂಗಳ ಸ್ನೇಹದ ಬಗ್ಗೆ ಅವಕ್ಕೂ ಎಂತ ಬೇಜಾರಿಲ್ಲೆ. ಚೂರು ಹುಳ್ಕು ಇಪ್ಪಲೂ ಸಾಕು . ಹೇಳ್ಲೆಡಿಯ.
ಮೊನ್ನೆ ಒಂದು ದಿನ ದೇವರು ಪಡು ದಿಕ್ಕಿಲಿ ಮೂಡಿದನೋ ಗೊಂತಿಲ್ಲೆ. ಯಜಮಾನ್ರು ಚೂರು ಪೈಸೆ ಎನ್ನ ಕೈಲಿ ಮಡುಗಿ `ಎರಡು ಸೀರೆ ತೆಕ್ಕೊ’ ಹೇಳಿದವು. ಎನ್ನ ಆಯ್ಕೆ ಯಾವಾಗ್ಲೂ ಬೂರ್ನಾಸು. ‘ನಿನಗೆ ಪುರುಸೊತ್ತಿದ್ದರೆ ಎನ್ನೊಟ್ಟಿಂಗೆ ಸೀರೆ ತೆಗವಲೆ ಬಪ್ಪೆಯಾ ಎರಡು ಸೀರೆ ತೆಗೆಯೆಕ್ಕಾತು . ನೀನೇ ಸೆಲೆಕ್ಟ್ ಮಾಡೆಕ್ಕಾತಾ ….’ ಹೇಳಿ ಲಕ್ಷ್ಮಿಗೆ ಮೆಸ್ಸೇಜು ಹಾಕಿದೆ. ಎರಡು ದಿನ ಕಳುದು ಪೇಟಗೆ ಹೋಪಲೆ ಮುಹೂರ್ತ ನಿಗಂಟಾತು.ಹೊಸ ಸೀರೆ ತೆಗದು ಸುತ್ತುವ ಕನಸು ಕಾಂಬಲೂ ಸುರುವಾತು. ಎನ್ನತ್ತರೆ ಇಪ್ಪ ಹೆಚ್ಚಿನ ಎಲ್ಲಾ ಸೀರೆಗಳ ಹೆಗಲಿಲಿ ನೇಲ್ಸ್ಯೊಂಡು ‘ನಾಡ್ತು ಪೇಟಗೆ ಹೋಪಗ ಈ ಸೀರೆ ಸುತ್ತೆಕ್ಕಾ …. ? ಈಸೀರೆ ಸುತ್ತೆಕ್ಕಾ ……… ? ‘ ಹೇಳಿ ಕೇಳಿ ಕೇಳಿ ಯಜಮಾನ್ರ ತಲೆ ತಿಂದೆ. ಅವಕ್ಕೂ ಬೊಡುದು ‘ನೀನು ಹಾಂಗೇ ಹೋಗು . ಹೇಂಗೂ ಅಲ್ಲಿ ಸೀರೆ ತೆಕ್ಕೊಂಬಲಿದ್ದನ್ನೇ . ಅಲ್ಲೇ ಸುತ್ತಿದರಾತು’ ಹೇಳಿ ಪರಂಚ್ಯೊಂಡು ಹೋದವು.

              ಆ ದಿನ ಬಂದೇ ಬಿಟ್ಟತ್ತು . ಲಕ್ಷ್ಮಿ ಆ ದಿನ ಉದಿಯಪ್ಪಗ ಹತ್ತು ಗಂಟೆಗೆ ಪೇಟೆಲಿ ಹೊಸ ಬಸ್ ಸ್ಟ್ಯಾಂಡಿನ ಹತ್ತರೆ ಸಿಕ್ಕುತ್ತೆ ಹೇಳಿತ್ತಿದ್ದು. ಉದಿಯಪ್ಪಗಾಣ ಕೆಲಸ ಮುಗಿಶಿಕ್ಕಿ , ಮೂಗಿಲಿ ಬಾಯಿಲಿ ತಿಂಡಿ ತಿಂದು ಪೇಟಗೆ ಹೋಗಿ ಬಸ್ ಸ್ಟ್ಯಾಂಡಿಲಿ ನಿಂದೆ. ಹತ್ತೂವರೆ ಕಳುದು ಹತ್ತೂಮುಕ್ಕಾಲಾದರೂ ಲಕ್ಷ್ಮಿಯ ಶುದ್ಧಿ ಇಲ್ಲೆ…! ಮೆಲ್ಲಂಗೆ ಮೊಬೈಲ್ ತೆಗದು ಫೋನ್ ಮಾಡಿ ‘ಎಲ್ಲಿದ್ದೆ………… ? ‘ ಕೇಳಿದೆ. ‘ಆನು ಬಸ್ ಸ್ಟ್ಯಾಂಡಿಲಿ ಕಾಯ್ತಾ ಇದ್ದೆ . ನೀನೆಂತ ಇನ್ನೂ ಬಯಿಂದಿಲ್ಲೆ ………. ? ‘ ಕೇಳಿತ್ತು. ಹೋ… ಎನ್ನ ತಲೆಯೇ……..! ಅದು ಹೇಳಿದ್ದು ಹೊಸ ಬಸ್ ಸ್ಟ್ಯಾಂಡ್, ಆನು ನಿಂದದು ಹಳೆ ಬಸ್ ಸ್ಟ್ಯಾಂಡಿಲಿ.

               ಅಂತೂ ಇಂತೂ ಲಕ್ಷ್ಮಿ ಹೋವ್ತ ವಸ್ತ್ರದ ಮಳಿಗೆಗೆ ಎತ್ತಿದೆಯ° . ಸೀರೆಯ ಆಯ್ಕೆ ಅದರದ್ದೇ. ‘ಈ ಬಣ್ಣದ ಸೀರೆಗೆ ಈ ಕಂಬಿ ಸರಿ ಕಾಣ್ತಿಲ್ಲೆ. ಈ ಕಂಬಿಗೆ ಆ ಮೈ ಬಣ್ಣ ಇದ್ದರೆ ಲಾಯ್ಕಿತ್ತು . ಆ ಬಣ್ಣ ಬೇಡ . ಈ ಬಣ್ಣ ಆಗ . ಹೇಳ್ಯೊಂಡು ಕಪಾಟಿಂದ ಒಂದೊಂದೇ ಸೀರೆ ಎಳದು ಎಳದು ಹಾಕ್ಸಿತ್ತು . ಅದರ ನೋಡಿಯೇ ಎನ್ನ ತಲೆ ತಿರುಗಿತ್ತು. ಗೊಂತಿದ್ದನ್ನೇ ……… ಹೆಮ್ಮಕ್ಕೊಗೆ ಸೀರೆ ಅಜಪ್ಪುಲೆ ಸುರು ಮಾಡಿದರೆ ಇರುಳು ಉದಿಯಾದರೂ ಗೊಂತಾಗ . ಅಕೇರಿಗೆ ನಾಲ್ಕು ಸೀರೆ ತೆಗದು ಮಡುಗಿತ್ತು. ‘ನೀನು ಯಾವಾಗ್ಲೂ ಸುತ್ತುವ ಸೀರೆಗ ಒಂದೂ ನಿನಗೆ ಒಂಬುತ್ತಿಲ್ಲೆ. ಇದು ಲಾಯ್ಕ ಇದ್ದು’ ಹೇಳಿತ್ತು. ಅದರ ಸೆಲೆಕ್ಷನ್ ನೋಡಿ ಆನು ಕಣ್ಣು ಬಾಯಿ ಬಿಟ್ಟಲ್ಲೇ ಬಾಕಿ. ಇಷ್ಟು ಚೆಂದದ ಸೀರೆ ಸುತ್ತಿದರೆ ಎನ್ನ ಹೇಂಗೆ ಕಾಂಗು…..? ಗ್ರೇಶುವಗಲೇ ಕೊಶಿ ಕೊಶಿ ಆತು. ಸರಿ   ಒಟ್ಟು ಬಿಲ್ಲೆಷ್ಟಾತು ನೋಡಿದರೆ ಎಂಟು ಸಾವಿರ…! ಧಸಕ್ ….. ಹೇಳಿತ್ತು. ಎದೆ ಒಡೆಯದ್ದದು ಭಾಗ್ಯ. ಕೈಲಿದ್ದದು ಎರಡು ಸಾವಿರ ! ಹೇಳಿದರೆ ಮರ್ಯಾದೆಗೆ ಕೊರತೆ . ಹೇಳದ್ದರೆ ಪೈಸಗೆ ಕೊರತೆ. ಎಂತ ಮಾಡುದು ಎಳದು ಹಾಕಿದ ಸೀರೆ ಅಟ್ಟಿಯ ಅಡಿಲಿ ಏಳ್ನೂರು, ಎಂಟ್ನೂರು ರೂಪಾಯಿಯ ಸಾಧಾರಣ ಸೀರೆಗ ಕಂಡತ್ತು . ಅದರಲ್ಲಿ ಕಣ್ಣಿಂಗೆ ಈಡಪ್ಪ ಎರಡು ಸೀರೆ ತೆಗದು ಕೈಲಿ ಹಿಡ್ಕೊಂಡು ‘ಏ ಲಕ್ಷ್ಮೀ , ನೀನು ತೋರ್ಸಿದ್ದು ಎನಗೆ ಒಂಬ ಹೇಳಿ ಆವುತ್ತು. ಈ ಸೀರೆ ಚೆಂದ ಇದ್ದನ್ನೆ’ ಹೇಳಿದೆ. ‘ಒಂದರಿ ಸುಮ್ಮನೆ ಕೂರು ನೀನು. ಈಗ ಆನು ತೋರ್ಸಿದ್ದು ನಿನಗೆ ಲಾಯ್ಕ ಒಂಬುತ್ತು. ‘ ಹೇಳಿತ್ತು ಲಕ್ಷ್ಮಿ. ಮರ್ಯಾದೆ ಒಳಿಶ್ಯೊಳ್ಳೆಕ್ಕನ್ನೆ ಹೇಳಿ ಆನು ಎರಡು ಸೀರೆಯ ಗಟ್ಟಿ ಹಿಡ್ಕೊಂಡು ಕಣ್ಣು ಮುಚ್ಚಿ ‘ಎನಗೆ ಇದೇ ಸೀರೆ ಅಕ್ಕು , ಎನಗೆ ಇದೇ ಸೀರೆ ಅಕ್ಕು . ಬೇರೆ ಬೇಡ್ಳೇ ಬೇಡ ‘ ಹೇಳ್ಯೊಂಡಿಪ್ಪಗ ಎನ್ನ ಭುಜ ಹಿಡುದು ಆಡ್ಸಿ ‘ಯಾವ ಸೀರೆ ….. ? ಇದೋ….. ? ‘ ಹೇಳಿ ಜೋರು ನೆಗೆ ಮಾಡುದು ಕೇಳಿತ್ತು. ಲಕ್ಷ್ಮಿಯ ಸ್ವರ ಹೀಂಗಾದ್ದು ಎಂತಪ್ಪಾ……. ? ಹೇಳಿ ಕಣ್ಣು ಬಿಟ್ಟು ನೋಡುವಗ ಹಾಸಿಗೆ ಬುಡಲ್ಲಿ ಮಡುಗಿದ ಕಾಲುದ್ದುವ ಹರ್ಕು ಎನ್ನ ಕೈಲಿದ್ದು. ಯಜಮಾನ್ರು ನೆಗೆ ಮಾಡ್ಯೊಂಡು ಹಾಸಿಗೆಲಿ ಕೂದೊಂಡಿದ್ದವು……..!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಬೊಳುಂಬು ಗೋಪಾಲ

  ಲಕ್ಷ್ಮಿ ಎಂಟು ಸಾವಿರದ ಸೀರೆಯ ಗಿಫ್ಟ್ ಆಗಿ ಕೊಟ್ಟತ್ತಾಯ್ಕು ಹೇಳಿ ಗ್ರೇಶಿದೆ. ಹೋ, ಇದು ಕನಸಿನ ಸೀರೆ ಹೇಳಿ ಮತ್ತೆ ಗೊಂತಾತದ. ಕತೆ ನೈಜವಾಗಿದ್ದು. ಲಾಯಕಾಯಿದು.
  ಅನುಪಮಕ್ಕ ವಿವಿ ಸ್ಪರ್ಧೆಲಿ ಪ್ರಥಮ ಬಹುಮಾನ ಪಡದ ಕತೆ ಬೇಗನೆ ಬರಳಿ ಬೈಲಿಂಗೆ. ಅದುದೆ ತುಂಬಾ ಲಾಯಕಿಕ್ಕು.

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ . ವಿವಿ ಸ್ಪರ್ಧೆಲಿ ಬಹುಮಾನ ಪಡದ ಕಥೆ ಹಾಕುತ್ತೆ.

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕನಸಿನ ಲೋಕಲ್ಲಿ ಅಂಗಡಿಲಿ ಸೀರೆ ಆಯ್ಕೆ ಮಾಡಿದ ಅನುಭವ ಆತು. ಹಾಸಿಗೆ ಇದ್ದಷ್ಟೆ ಕಾಲು ಚಾಚು ಹೇಳ್ತರ ಅರ್ಥ ಮಾಡಿ ಕಮ್ಮಿ ಕ್ರಯದ್ದಾದರೂ ಸಾಕು ಹೇಳಿ ತೀರ್ಮಾನ ತೆಕ್ಕೊಂಡದು ಲಾಯಿಕ ಆತು. ಗೆಳತಿ ಹತ್ರೆ ಕೇಳಲೂ ಸ್ವಾಬಿಮಾನ ಬಿಟ್ಟಿದಿಲ್ಲೆ.
  ನಿರೂಪಣೆ ಕೊಶಿ ಆತು

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ ಶರ್ಮಪ್ಪಚ್ಚಿ

  [Reply]

  VN:F [1.9.22_1171]
  Rating: 0 (from 0 votes)
 3. ಪ್ರಸನ್ನಾ ವಿ ಚೆಕ್ಕೆಮನೆ

  ಹೆಮ್ಮಕ್ಕಳ ಮನಸಿಲ್ಲಿ ಮಾತ್ರ ಅಲ್ಲ ಕನಸಿಲ್ಲಿ ಕೂಡ ಸೀರೆಯೇ ಇಪ್ಪದೂಳಿ ಈಗ ಗೊಂತಾತು. ಒಪ್ಪ ನಿರೂಪಣೆ. ಲೇಖಕಿ ಅನು ಉಡುಪುಮೂಲೆ ಅವಕ್ಕೆ ಅಭಿನಂದನೆ..

  [Reply]

  ಅನು ಉಡುಪುಮೂಲೆ

  ಅನು ಉಡುಪುಮೂಲೆ Reply:

  ಧನ್ಯವಾದಂಗೊ ಪ್ರಸನ್ನಕ್ಕ. ಹೆಮ್ಮಕ್ಕೊಗೆ ಚಿನ್ನವೂ ಸೀರೆಯೂ ಎಷ್ಟಿದ್ದರೂ ಬೊಡಿಯ ಹೇಳ್ತವು ಎಲ್ಲೋರು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ಕಜೆವಸಂತ°ನೀರ್ಕಜೆ ಮಹೇಶಅನಿತಾ ನರೇಶ್, ಮಂಚಿಶೀಲಾಲಕ್ಷ್ಮೀ ಕಾಸರಗೋಡುಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ವಿದ್ವಾನಣ್ಣಮಂಗ್ಳೂರ ಮಾಣಿಪುಣಚ ಡಾಕ್ಟ್ರುಪೆರ್ಲದಣ್ಣವಾಣಿ ಚಿಕ್ಕಮ್ಮಅಜ್ಜಕಾನ ಭಾವಪುಟ್ಟಬಾವ°ಡಾಮಹೇಶಣ್ಣಅನು ಉಡುಪುಮೂಲೆಡಾಗುಟ್ರಕ್ಕ°ಸರ್ಪಮಲೆ ಮಾವ°ಪೆಂಗಣ್ಣ°ದೊಡ್ಮನೆ ಭಾವಅಕ್ಷರದಣ್ಣಶುದ್ದಿಕ್ಕಾರ°ಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ