ವೈದ್ಯಕೀಯ ಕ್ಷೇತ್ರದ ಹಾಸ್ಯಂಗೊ

July 2, 2010 ರ 11:52 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವೈದ್ಯಕೀಯ ಕ್ಷೇತ್ರಲ್ಲಿ ಸುಮಾರು ತಮಾಶೆಗೊ ನಡೆತ್ತು. ಕೆಲಾವು ಸರ್ತಿ ನವಗೆ ನೆಗೆ ಮಾಡ್ಲೂ ಎಡಿಯದ್ದ ಪರಿಸ್ಥಿತಿ !! ಹೀಂಗಿದ್ದ ಸುಮಾರು ಅನುಭವಂಗ ಆಯ್ದು ಎನಗೆ. ಒಂದು ಕಥೆ ಇಲ್ಲಿ ನಿಂಗಳೊಟ್ಟಿಂಗೆ ಹಂಚಿಗೊಳ್ತೆ.
ಆನು ಕಲಿವಗ ಎಂಗೊಗೆ ಒಂದರಿ ಒಂದು ಸರ್ವೇ ಮಾಡ್ಲಿತ್ತು, ಹಳ್ಳಿಗೊಕ್ಕೆ ಹೋಗಿ ಅಲ್ಲಿಯಾಣವರ ಅವರ ಆರೊಗ್ಯದ ಮಟ್ಟ, ಆಹಾರದ ಗುಣಮಟ್ಟ, ಸ್ವಚ್ಛತೆ, ಇದರ ಬಗ್ಗೆ ಅವಕ್ಕಿಪ್ಪ ಮಾಹಿತಿ ಎಲ್ಲಾ ನೋಡಿ ಅದರ ಬರವ ಕೆಲಸ. ಎಂಗಳ ಎರಡು ಜನಂಗಳ ಗುಂಪು ಮಾಡಿ ಕಳ್ಸಿತ್ತಿದ್ದವು, ಎನ್ನೊಟ್ಟಿಂಗೆ ಇದ್ದವ ಮಹಾರಾಷ್ಟ್ರದಂವ, ಅವಂಗೆ ಕನ್ನಡ ಬಾರದ್ದ ಕಾರಣ ಆನು ಜೆನಂಗಳೊಟ್ಟಿಂಗೆ ಮಾತಾಡಿಗೊಂಡಿತ್ತಿದ್ದೆ. ಸುಮಾರು ಮನೆಗೊಕ್ಕೆ ಹೋಗಿ ಎಂಗೊಗೆ ಬೇಕಾದ ಮಾಹಿತಿಗಳ ತೆಕ್ಕೊಂಡೆಯ. ಒಂದು ಮನೆಲಿ ಒಂದು ಅಜ್ಜ ಕೂದುಗೊಂಡಿತ್ತು, ಆನು ಹೋಗಿ ಮಾತು ಶುರು ಮಾಡಿದೆ. ಮನೆಲಿ ಎಷ್ಟು ಜೆನ ಇದ್ದವು, ಎಂತ ಕೆಲಸ ಮಾಡುದು, ಆಹಾರ ಕ್ರಮ ಇತ್ಯಾದಿ… ಕಡೇಂಗೆ ಆರೋಗ್ಯದ ಬಗ್ಗೆ ಕೇಳೇಕನ್ನೆ…ಅಂಬಗಂಬಗ ಅಸೌಖ್ಯ ಎಲ್ಲ ಎಂತಾರು ಬತ್ತಾ ನಿಂಗಳಾ ಮನೆಲಿಪ್ಪವಕ್ಕೆ? ಹೊಟ್ಟೆಬೇನೆ? ಜ್ವರ? ಭೇದಿ? ವಾಂತಿ ಎಂತಾರು ಹೆಚ್ಚಾಗಿ ಆವ್ತ? ಹೇಳಿ ಕೇಳಿದೆ. ಆನು ಭಾರಿ serious ಆಗಿ ದೊಡ್ಡ ಡಾಕ್ಟ್ರನ ಸ್ಟೈಲಿಲ್ಲಿ ಪ್ರಶ್ನೆ ಕೇಳಿಕ್ಕಿ, ಉತ್ತರಕ್ಕೆ ಕಾಯ್ತಾ ಇತ್ತಿದ್ದೆ. ಆ ಅಜ್ಜಂಗೆ ಆನು ಹೇಳಿದ್ದು ಎಷ್ಟು ಅರ್ಥ ಆತೋ ಎನಗೆ ಗೊಂತಿಲ್ಲೆ, “ನಮ್ಮ ಮಣೆಯಲ್ಲಿ ಯಾರಿಗೂ ಎಂತದೂ ಇಲ್ಲ, ಮಗನಿಗೆ ಮೊಣ್ಣೆ ಮದುವೆ ಮಾಡಿದ್ದು, ಸೊಸೆ ಇನ್ನೂ ವಾಂತಿ ಮಾಡ್ಲಿಲ್ಲ ಡಾಕ್ಟ್ರೇ” ಹೇಳಿ ಉತ್ತರ ಕೊಟ್ಟಪ್ಪಗ ಎನಗೆ ಎಂತ ಮಾಡುದು ಹೇಳಿ ಗೊಂತಾಯ್ದಿಲ್ಲೆ, ನೆಗೆ ತಡೆವಲೆ ಎಡಿಯ, ಎನ್ನೊಟ್ಟಿಂಗೆ ಇದ್ದ ಎನ್ನ ಕ್ಲಾಸ್ಮೇಟಿಂಗೆ ಕಥೆ ಎಂತ ಹೇಳಿ ಅರ್ಥ ಆಯ್ದಿಲ್ಲೆ. ಹೇಂಗಾರು ಕೆಲಸ ಮುಗುಶಿ ಆ ಮನೆಂದ ಹೆರ ಬಂದ ಮೇಲೆ ಎನ್ನ ಕ್ಲಾಸ್ಮೇಟಿಂಗೆ ವಿಷಯವ ವಿವರ್ಸಿದೆ. ಮತ್ತೆ ಕಾಲೇಜಿಂಗೆ ಎತ್ತಿದ ಮೇಲೆ ಎಲ್ಲರಿಂಗೂ ಈ ಕಥೆಯ ಹೇಳಿ ಬಿದ್ದು ಬಿದ್ದು ನೆಗೆ ಮಾಡಿದೆಂಯ.
ಎನ್ನ ಮನೆಲಿ ಎನ್ನ ಈಗಳೂ ನೆಗೆ ಮಾಡ್ತವು! ಆನು ಸರ್ವೆ ಹೇಳಿ ಹೇಳಿರೆ ಸಾಕು, ಈ ಕಥೆಯ ನೆಂಪು ಮಾಡಿ ನೆಗೆ ಮಾಡ್ತವು.
ವೈದ್ಯಕೀಯ ಕ್ಷೇತ್ರದ ಹಾಸ್ಯಂಗೊ, 2.0 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಬಲ್ನಾಡುಮಾಣಿ

  ಹಿ ಹಿ ಹಿ,, :) ಒಳ್ಳೆ ತಮಾಷೆ ಸಂಗತಿ… ಕೆಲವು ಹಾಂಗಿಪ್ಪ ಜೋಕುಗ ಇದ್ದು , :) “ಮಗುವಿಗೆ ಸಿಕ್ಕಾಪಟ್ಟೆ ವಾಂತಿ, ಭೇದಿ ಡಾಕ್ಟೇ, ಏನಾದ್ರು ಮಾಡಿ” ಹೇಳಿರೆ, ಆ ಡಾಕ್ಟ್ರ “ಅದನ್ನೆಲ್ಲ ನೀವು ತಲೆಗೆ ಹಚ್ಕೋಬೇಡಿ ಅಮ್ಮಾ,, ನಾನಿದಿನಲ್ಲಾ, ಔಷಧಿ ಎಲ್ಲಾ ಕೊಟ್ಟಿದಿನಿ” ಹೇಳಿತ್ತಡ.. ಮಗುವಿನ ವಾಂತಿ-ಭೇದಿಯ ತಲೆಗೆ ಹಚ್ಚಿಗೊಂಬದೆಂತಕಪ್ಪಾ ಹೇಳಿ ಆನು ಅಲೋಚನೆ ಮಾಡ್ತಾ ಇದ್ದೆ.. 😀

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಆನು ಶಾಲೆಗೆ ಹೋಗಿಯೊಂಡಿಪ್ಪಗ ಎಂಗಳ ಸೀನಿಯರ್ ಗೊ ’ಕಾಂಪೌಂಡರ್ ಗುಂಡಣ್ಣ’ ಹೇಳ್ತ ನಾಟಕ ಮಾಡಿತ್ತವು, ಅದರ್ಲಿ ಈ ಡಯಲಾಗ್ ಇತ್ತಿದ್ದು !!

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಹ್ಮ್.. :) ಅನುದೆ ಆದರ ಅರೋ ಹೇಳುದು ಕೇಳಿತ್ತಿದ್ದೆ,, ನಿಂಗಳ ಕತೆ ಕೇಳಿ ಅಪ್ಪಗ ನೆನಪಾತು,, :)

  [Reply]

  VA:F [1.9.22_1171]
  Rating: 0 (from 0 votes)
 2. ಕಳಾಯಿ ಗೀತತ್ತೆ
  ಕಳಾಯಿ ಗೀತತ್ತೆ

  ಹಿ ಹಿ…:D

  [Reply]

  VA:F [1.9.22_1171]
  Rating: 0 (from 0 votes)
 3. Anantanna

  Mattondu joku-

  ” Daktre, nimminda yavagadru tappagitta”

  ” Houdu! Vand sari vab kotydheeshange telyagadde yerde dinadalli guna appange oushadhi kotti idde.”

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  !! :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಅನಿತಾ ನರೇಶ್, ಮಂಚಿಅಜ್ಜಕಾನ ಭಾವಜಯಶ್ರೀ ನೀರಮೂಲೆಪಟಿಕಲ್ಲಪ್ಪಚ್ಚಿಮುಳಿಯ ಭಾವಹಳೆಮನೆ ಅಣ್ಣಚೆನ್ನೈ ಬಾವ°ಡಾಗುಟ್ರಕ್ಕ°ನೆಗೆಗಾರ°ವೆಂಕಟ್ ಕೋಟೂರುಪುಣಚ ಡಾಕ್ಟ್ರುನೀರ್ಕಜೆ ಮಹೇಶಕಳಾಯಿ ಗೀತತ್ತೆದೊಡ್ಡಭಾವದೊಡ್ಡಮಾವ°ಶೀಲಾಲಕ್ಷ್ಮೀ ಕಾಸರಗೋಡುಅಕ್ಷರದಣ್ಣಜಯಗೌರಿ ಅಕ್ಕ°ವಿಜಯತ್ತೆಸಂಪಾದಕ°vreddhiಚೂರಿಬೈಲು ದೀಪಕ್ಕವೇಣಿಯಕ್ಕ°ಸುಭಗದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ