Oppanna.com

ಕಾಲುಬೇನೆಯ ಮದ್ದು

ಬರದೋರು :   ಅನಿತಾ ನರೇಶ್, ಮಂಚಿ    on   13/02/2014    10 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

‘ಎಂಕಟೀ ಎಂಕಟೀ’ ಹೇಳಿ ಇವು ಹೆರಂದ ದಿನಿಗೇಳಿದು ಕೇಳಿತ್ತು. ಏವಗಳೂ ಇವು ಪೇಟೆಂದ ಬಪ್ಪಗ ಆನು ಕೈಸಾಲೆಯ ಬಾಗಿಲ ಪಡಿಗೆ ಎರಗಿ ಕೂದುಕೊಂಡು ಕಾಯ್ವದು.. ಇಂದು ಅಟ್ಟುಂಬಳಂದ ಹೆರ ಬಪ್ಪಲೆ ಹೇಳಿ ಹೆರಡುವಾಗ ಕಾಲು ಹಿಡ್ಕೊಳ್ಳೆಕ್ಕಾ.. ಇವಕ್ಕೆ ಸಾವಿರ ಸರ್ತಿ ಹೇಳಿ ಆಯ್ದು..ಕಾಲು ಬೇನೆಗೆ ಎಂತಾರು ಎಣ್ಣೆಯೋ ಕಷಾಯವೋ ತನ್ನಿ ಹೇಳಿ..ಇವಕ್ಕೆಲ್ಲಿ ಕೆಮಿ ಕೇಳ್ತು? ಊರಿನವಕ್ಕೆಲ್ಲಾ ಉಪಕಾರ ಮಾಡುದರಲ್ಲಿ ಮನೆ ನೆಂಪಪ್ಪಲೆ ಪುರುಸೊತ್ತು ಬೇಡದಾ.. ಇದಾ ಈಗ ಎನ್ನ ಅಲ್ಲಿ ಹೆರ ಕಾಣ್ತಿಲ್ಲೆ ಹೇಳಿ ಅಪ್ಪಗ ಎಂತಾತು ಹೇಳಿ ಒಳ ಬಪ್ಪದು ಬಿಟ್ಟು ಅಲ್ಲೇ ದೊಂಡೆ ಬಿಚ್ಚಿಕೊಂಡು ಬೊಬ್ಬೆ ಹರಿತ್ತವು. ಈಗ ರಜಾ ಕಮ್ಮಿ ಆಯ್ದಪ್ಪ.. ಆದರೂ ಆನೀಗ ಹೆರ ಹೋಗೆ .. ಬೇಕಾರೆ ಬರಲಿ ಒಳ.. ಹೆಂಡತಿಗೂ ಬಂಙ ಆವ್ತು ಹೇಳಿ ಗೊಂತಾಗಲಿ..
 
‘ಎಂತಾತು ಎಂಕಟೀ..’ ಹೇಳಿ ಭಾರೀ ಪ್ರೀತಿ ಇಪ್ಪವರ ಹಾಂಗೆ ಹತ್ತರೆ ಬಂದು ಕೇಳಿದವು .ಎನಗೆಲ್ಲಿತ್ತೋ ಪಿಸುರು ‘ಇನ್ನೆಂತಪ್ಪದು ಬಾಕಿ ಇದ್ದು ಹೇಳಿ.. ಎನಗೆ ಕಾಲು ಗೆಂಟು ಬಗ್ಗುಸುಲೆ ಎಡಿತ್ತಿಲ್ಲೆ ಹೇಳಿ ದಿನ ಎಷ್ಟಾತು ನಿಂಗೊಗೆ. ಒಂದು ರಜ್ಜ ಮದ್ದು ತಂದುಕೊಡೆಕ್ಕು ಹೇಳಿ ಕಂಡಿದಿಲ್ಲೆ. ಆನೆಂತಾ ಮೆಶಿನ್ನಾ ಸುಚ್ಚು ಹಾಕಿರೆ ಕೊಣಿವಲೆ. ಉದ್ಯಪ್ಪಂದ ಕೆಲಸ ಮಾಡಿ ಮಾಡಿ ಸಾಕಾಗಿರ್ತು. ಒಂದು ರಜ್ಜ ಕೂದು ಬಚ್ಚೆಲು ತೆಗವಲೂ ಪುರುಸೊತ್ತಿಲ್ಲೆ ಎನಗೆ…. ಎನ್ನ ಆರು ಕೇಳುವವಿದ್ದವು ಈ ಮನೆಲಿ… ಮೊನ್ನೆ ಒಂದರಿ ಮದ್ದು ತಪ್ಪಲೆ ತೈಂದಿ ಇಲ್ಲೆ ಹೇಳ್ತಿಲ್ಲೆ.. ಆದರೆ ಅದರಲ್ಲಿ ರಜ್ಜ ಗುಣ ಆಯ್ದಿಲ್ಲೆನ್ನೆ..
 
‘ಅಯ್ಯೋ ಹಾಂಗೆಂತಕೆ ಹೇಳ್ತೆ ಎಂಕಟೀ.. ಇದಾ ನೋಡು ಇಂದು ನಿನಗೆ ಮಾತ್ರೆ ತಪ್ಪಲೆ ಹೇಳಿಯೇ ಪೇಟೆಗೆ ಹೋದ್ದಿದ ಆನು.. ನಿಲ್ಲು ಕೊಡ್ತೆ.. ಮೊದಾಲು ಒಂದರಿ ತೋಟಕ್ಕೆ ಹೋಯ್ಕೊಂಡು ಬತ್ತೆ..’ ಹೇಳಿ ತೋಟದ ತಡಮ್ಮೆ ದಾಂಟಿಕ್ಕಿ ಹೋದವು. ‘ಅಲ್ಲ ಎಂತ ಹೇಳೆಕ್ಕು ಇವಕ್ಕೆ .. ತೋಟ ಎಂತ ಓಡಿ ಹೋವ್ತಾ? ಅದೆಂತ ಸಂಕಪಾಷಾಣ ತೈಂದವೋ ಅದರ ಮೊದಾಲು ಕೊಟ್ಟಿಕ್ಕಿ ಹೋಪಲೆಂತಪ್ಪ.. ಅದನ್ನು ಆನೇ ಹುಡ್ಕಿ ತೆಕ್ಕೊಳ್ಳೆಕ್ಕಷ್ಟೆ.. ಎಲ್ಲಾ ಎನ್ನ ಕರ್ಮ.. ಹೇಳಿರೆ ಆನು ಮಹಾ ಪರಂಚಟೆ , ರಜ್ಜ ಕೂಡಾ ತಾಳ್ಮೆ ಇಲ್ಲೆ ಹೇಳಿ ಎನ್ನನ್ನೇ ದೂರುಗು.. ಇಂತವರೊಟ್ಟಿಂಗೆ ಆನಾದ ಕಾರಣ ಚೆಂದಲ್ಲಿ ಸಂಸಾರ ಮಾಡ್ತಾ ಇದ್ದೆ. ಬಾಕಿದ್ದವರಾದರೆ ಇವರ ಸಂತೆಲಿ ಮೂರು ಕಾಸಿಂಗೆ ಮಾರಿಕ್ಕಿ ಹೋವ್ತಿತ್ತವು..
ಎಲ್ಲಿ ಮಡುಗಿದವಪ್ಪಾ ಚೀಲಾ.. ಯಬ್ಬಾ.. ಅಷ್ಟು ಪಕ್ಕ ಅದರ ಮೇಗಾಣ ಜೆಂಗಲ್ಲಿ ಮಡುಗಿ ಆಯ್ದು. ಎಂತ ಕೆಳ ಮಡುಗಿರೆ ರಜ್ಜ ಹೊತ್ತಿಲಿ ಒರಳೆ ಬಕ್ಕೋ.. ಇನ್ನದರ ತೆಗವಲೆ ಆನೇ ಸರ್ಕಸ್ ಮಾಡಿ ನೇಲೆಕ್ಕಷ್ಟೆ. ಮರದ ಕುರ್ಚಿ ಮಡುಗಿ ಹತ್ತಿ ತೆಗವದೇ ಒಳ್ಳೇದು.. ಎಲ್ಯಾದರೂ ಎಕ್ಕಳ್ಸಿ ಜಾರಿ ಬಿದ್ದರೆ ರಜ್ಜ ಸರಿ ಇಪ್ಪ ಕಾಲು ಪೂರಾ ಮುರುದು ಮೂಲೆಲಿ ಕೂರೆಕ್ಕಕ್ಕು.. ಹೋ.. ದೇವಾ ಇದೆಂತದಿದು ದೊಡ್ಡ ತೊಟ್ಟೆಲಿ ಮಾತ್ರೆ, ಅರ್ಧ ಕ್ಯಾನಿಲಿ ಕಷಾಯ ಎಲ್ಲಾ ಇದ್ದನ್ನೆ..ಇನ್ನು ತಿಂಗಳುಗಟ್ಲೆ ಇದನ್ನೇ ಉರ್ಪೆಕ್ಕಾ ಎಂತ ಕಥೆಯೋ.. ಈಗಳೇ ಒಂದು ಡೋಸ್ ತೆಕ್ಕೊಂಡ್ರೆ ಹೊತ್ತೋಪ್ಪಗ ಶಾರದೆ ಮನೆಗೆ ಜೆಂಬ್ರದ ಮುನ್ನಾಣ ದಿನಕ್ಕೆ ಹೋಪಲಕ್ಕೋ ಹೇಳಿ.. ಎಂತಕೂ ಇವರತ್ತರೆ ಹೇಂಗೆ ತೆಕ್ಕೊಂಬದು ಹೇಳಿ ಕೇಳೆಕ್ಕನ್ನೆ.. ಇವ್ವಿನ್ನು ಬಪ್ಪಗಳೇ ಹೊತ್ತು ಮಾಡಿಕೊಂಡು ಬಕ್ಕು. ಮಾತ್ರೆ ನುಂಗಿ ಒಂದು ಗಂಟೆಯಾದರೂ ಬೇಡದಾ ಪವರ್ ಗೊಂತಪ್ಪಲೇ.. ಹೋ.. ಆನೆಂತರ ಹೆಡ್ಡಿಯ ಹಾಂಗೆ ಮಾಡುದು .. ಇಲ್ಲಿಯೇ ಇದ್ದನ್ನೆ ಚೀಟಿ.. ಅದನ್ನೇ ಓದಿರಾತು. ಈಗಾಣ ಡಾಕ್ಟ್ರಕ್ಕಳದ್ದು ಇದೊಂದು ಒಳ್ಳೇ ಕೆಲಸ ಇದಾ.. ಚೀಟಿಲಿ ಲಾಯ್ಕಲ್ಲಿ ಬರದು ಕೊಡ್ತವನ್ನೇ.. ಎಷ್ಟೆಷ್ಟು ಹೊತ್ತಿಂಗೆ ಹೇಂಗೇಂಗೆ ನುಂಗೆಕ್ಕು ಹೇಳಿ.. ಈಗಂಗೆ ಒಂದು ಲೋಟ ಕಷಾಯವುದೇ ನಾಲ್ಕು ಮಾತ್ರೆಯುದೇ ಇದ್ದು.. ಇವರ ಕಾವಲೆಂತ ಇದ್ದು.. ಮೊದಾಲು ತೆಕ್ಕೊಳ್ತೆ. ಇವು ತೋಟಂದ ಬಪ್ಪಗಳೇ ರಜ್ಜ ಗೆಲುವಿಲಿ ಓಡಾಡದ್ರೆ ಮತ್ತೆ ಶಾರದೆ ಮನೆಗೆ ನೀನು ಬಾರದ್ದರೆ ಅಕ್ಕು.. ವಾಪಾಸು ಬಂದಿಕ್ಕಿ ಕಾಲು ಬೇನೆ ಹೇಳಿ ರಾಗ ಎಳವಲೆ.. ಹೇಳಿ ಹೇಳುಗು. ಅಲ್ಲಾ ಆನೆಂತ ಬೇಕು ಹೇಳಿಯೇ ಕಾಲು ಬೇನೆ ಮಾಡಿಕೊಳ್ತನಾ.. ಮೊನ್ನೆ ರಜ್ಜ ಹತ್ತರಾಣ ಮನೆಯ ಮಕ್ಕೋ ಬಂದಿತ್ತಿದ್ದವು ಹೇಳಿ ಮರ ಹತ್ತಿ ಪೇರಳೆ ಕೊಯ್ದಪ್ಪ .. ಅಷ್ಟಕ್ಕೆ ಈ ಕರ್ಮದ ಕಾಲು ಬೇನೆ ಶುರು ಆಯೆಕ್ಕಾ… ಮೊದಲೆಲ್ಲಾ ತೋಟಲ್ಲಿ ಆದ ಜಂಬುನೇರಳೆ, ನೇರಳೆ, ಪೇರಳೆ, ಪನ್ನೇರಳೆ.. ಎಲ್ಲಾ ಮರಂಗಳ ಸಲೀಸಾಗಿ ಹತ್ತಿ ಇಳುದು ಮಾಡ್ಯೊಂಡಿತ್ತೆ ಹೇಳಿ..
ಹೋ.. ಅದಾರಲ್ಲಿ ಬಪ್ಪದು .. ಈಚಣ್ಣ ಅಲ್ಲದಾ.. ಇವ ಎಂತಪ್ಪ ಇಷ್ಟೊತ್ತಿಲಿ.. ಈಗ ಎನ್ನಂದ ಎಡಿಯ ತೋಟದ ತಲೇಗೆ ಹೋಗಿ ಇವರ ದಿನಿಗೇಳುಲೆ.. ಅಮಸರ ಇದ್ದರೆ ಅವನತ್ತ್ರೆಯೇ ತೋಟಕ್ಕೆ ಹೋಗು ಮಾರಾಯ ಹೇಳಿ ಹೇಳುದು ಒಳ್ಳೇದಾ ಹೇಳಿ.. ಅಬ್ಬಾ.. ಬದ್ಕಿದೆ.. ಇವ್ವೇ ಬತ್ತಾ ಇದ್ದವನ್ನೇ.. ಈಗ ಆನು ಚೀಲ ತೆಗದ್ದು ನೋಡಿರೆ ಬಯ್ಗು. ಅಲ್ಲಿಯೇ ಮಡುಗುದು ಒಳ್ಳೇದು..
ಈಚಣ್ಣ ಹೆರಂದಲೇ ಕಾಫಿ ಎಂತ ಬೇಡ ಚಿಕ್ಕಮ್ಮಾ ಹೇಳಿ ಬೊಬ್ಬೆ ಹೊಡದ್ದು ಕೇಳಿತ್ತು. ಅವ ಬೇಡ ಹೇಳುದು ಅವನ ಕ್ರಮ ಆನು ಕೊಡದ್ದೇ ಇಪ್ಪಲೆಡಿತ್ತಾ.. ಒಟ್ಟಿಂಗೆ ಇವಕ್ಕು ಬೇಕಕ್ಕು ಈಗ.. ಎರಡು ಲೋಟ ಹಿಡ್ಕೊಂಡು ಹೆರ ಹೋಪದೇ ಒಳ್ಳೇದು.. ಅರ್ರೇ.. ಇವ್ವೆಂತರ ಆನೀಗ ಕುಡುದ ಕಷಾಯ ಮತ್ತೆ ಮಾತ್ರೆಯ ತೊಟ್ಟೆಯ ಅವಂಗೆ ಕೊಡ್ತಾ ಇದ್ದವು.. ಅವಂಗು ಕಾಲು ಬೇನೆಯಾ ಎಂತ ಕಥೆ.. ಇದೆಂತದಿದು ಜೀರಿಗೆ ಮಿಟಾಯಿ ಹಾಂಗಿಪ್ಪ ಮಾತ್ರೆ.. ಇದೆಂತಕೆ ಎನ್ನತ್ತರೆ ಕೊಡ್ತಾ ಇದ್ದವಪ್ಪ..ಹಾಂ.. ಎಂತಾ.. ಇದರ ಹೊತ್ತಿಂಗೆ ಒಂದರ ಹಾಂಗೆ ಮೂರು ಮಾತ್ರೆ ನುಂಗೆಕ್ಕಾ.. ಅಂಬಗ ಆನೀಗ ನಾಲ್ಕು ಮಾತ್ರೆದೇ ಕಷಾಯದೇ ಕುಡುದೆನ್ನೆ ಅದೆಂತರದಪ್ಪಾ..
ಅಯ್ಯೋ ರಾಮಾ.. ಇದೆಂತ ಅವಸ್ಥೆ.. ಆ ಮದ್ದು ಕಾಲು ಬೇನೆಗೆ ಇಪ್ಪದಪ್ಪು.. ಆದರೆ ಅದು ಅವನ ಮನೆಯ ಕರವ ದನ ಕಾಳಿಗೆ ಹೇಳಿ ಇವರತ್ತರೆ ತರ್ಸಿದ್ದಡ.. ದೇವಾ.. ಆನೀಗ ಅದನ್ನೇ ನುಂಗಿದ್ದನ್ನೆ … ಎಂತಕ್ಕಪ್ಪಾ ಇನ್ನು…

10 thoughts on “ಕಾಲುಬೇನೆಯ ಮದ್ದು

  1. ಗೆ೦ಟು ಬೇನೆಗಾದರೆ ‘ಶಮನ ತೈಲ’.. ಮತ್ತೆ ಮಸಲ್ ಬೇನೆ ಆದರೆ ‘ಗೋಮೂತ್ರ ಹರೀತಕಿ’.. ಲಾಯಿಕಾವುತ್ತು ಹೇಳ್ತವು..
    ಆನು ಡಾಕ್ಟರ ಅಲ್ಲ ಆತೋ.
    ಅನ್ಪತ್ಯ೦ಗಳಲ್ಲಿ ಮಾತಾಡುವದು ಕೇಳೀದ್ದು

  2. ಪ್ರತಿಕ್ರಿಯೆಗಾಗಿ ಧನ್ಯವಾದಂಗೋ..

  3. ಅವನ ಮನೆಯ ಕರವ ದನ ಕಾಳಿಗೆ ಹೇಳಿ ಇವರತ್ತರೆ —— ಇನ್ನು ನಿ೦ಕುಟ್ಟಿ ಹೇಳಿ, ಎ೦ಕಟೀಯ ,ಭದ್ರ-ಕಾ…….. ರೂಪ ಕಾಣುತ್ತಾ ಎನೋ?.

  4. ಲಾಯ್ಕ ಆಯಿದು.ಪರಂಚಟೆಯ ಬಗ್ಗೆ ಕತೆ!

  5. ಮದ್ದು ಕುಡುದ ಎಂಕಟಕ್ಕನ ತಲೆಲಿ ಎರಡು ಕೊಂಬು ಬಾರದ್ರೆ ಸಾಕು. ಸದ್ಯ ಗೆದ್ದಗೆ ಬಿಡ್ತ ಕೀಟನಾಶಿನಿ ಆಗಿತ್ತಿಲ್ಲೆ. ಕೀಟ ನಾಶಿನಿ ಆಗಿದ್ರೆ “ವೆಂಕಟಿ ಇನ್ ಸಂಕಟ” ಆವ್ತಿತು !!!

  6. ‘ಅವಸರವೇ ಅಪಘಾತಕ್ಕೆ ಕಾರಣ’ಹೇಳ್ತವಲ್ಲದೋ?ಹಾಂಗೇ ಆತಿದು.ಪಷ್ಟಾಯಿದು.

  7. ಹ್ಹ..ಹ್ಹ..ಹ್ಹಾ. ಇನ್ನು ಎಂತಕ್ಕು ಹೇಳಿ ಸುಖ ಇಲ್ಲೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×