Oppanna.com

ಆಟಿ ಕಳಂಜನ ವಾಟ್ಸ್ಯಾಪ್ ಸ್ಪೆಷಲ್

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   03/08/2016    15 ಒಪ್ಪಂಗೊ

ಆಟಿ ಕಳಂಜನ ಬಗ್ಗೆ ಒಪ್ಪಣ್ಣ ಬರೆದ್ದದು ನೋಡಿಯಪ್ಪಗ ಹೋದ ವರ್ಷ ನಮ್ಮಲ್ಲಿಗೆ ಬಂದ ಆಟೀ ಕಳಂಜನ ನೆಂಪಾತು. ಪ್ರತೀ ವಷರ್ಾಣ ಹಾಂಗೆ ಈ ವರ್ಷವೂ ಅದರ ಕಾಲ್ಗೆಜ್ಜೆ ಶಬ್ಧ ಓ ಅಲ್ಲೆ ಕೇಳುವಾಗಳೇ ಗೇಟು ತೆಗದು ಮಡಗಿದೆ. ಝಲ್…ಝಲ್…ಶಬ್ಧದೊಟ್ಟಿಂಗೆ ಕಳಂಜ ಬಂತದ. ಅದರ ಅಪ್ಪ ಮೊನ್ನ (ಬಹುಷಃ ಮೋಹನ ಹೇಳುವ ಹೆಸರು ಹಾಂಗಾದ್ದಾದಿಕ್ಕು). ಇದು ಲಕ್ಷ್ಮಣ. ಸಾಧಾರಣ ಹದಿನಾಲ್ಕು ಹದಿನೈದು ವರ್ಷದ ಆಣು. ಮೊನ್ನನ ಡಮಕ…ಡಮಕ…ಪೆಟ್ಟಿಂಗೆ ಕಳಂಜ ಕೊಡೆ ತಿರುಗ್ಸಿಯೋಂಡು ಕೊಣುದತ್ತಯ್ಯ….ಕೊಣುದತ್ತು. ಆನು ಐದಾರು ಪಟ ತೆಗೆದೆ. ಎಲ್ಲ ಆಗಿಯಪ್ಪಗ ಪ್ರತೀ ವರ್ಷ ಕೊಡ್ತ ಹಾಂಗೆ ತೆಂಗಿನಕಾಯಿಯೊಟ್ಟಿಂಗೆ ಪೈಸೆ ಕೊಟ್ಟೆ.

ಅಕ್ಕ ನಿಮ್ಮ ಮಗಣ (`ನ’ ಕಾರ ಕ್ಕೆ `ಣ’ ಕಾರ ಹೇಳ್ತದು ಮೊನ್ನನ ಅಭ್ಯಾಸ) ಜೀಣ್ಸು ಪೇಂಟು ಇದ್ರೆ ಇವ್ಣಿಗೆ ಕೊಡಿಯಕ್ಕಾ...” ಪೈಸೆ, ತೆಂಗಿನಕಾಯಿ ತೆಕ್ಕೊಂಡಿಕ್ಕಿ ಮೊನ್ನ ಕೇಳಿತ್ತು.

“ನನ್ನ ಮಗ ತುಂಬಾ ಉದ್ದ ಇದ್ದಾನಲ್ಲ? ಇವ್ನಿಗೆ ಅದು ಹಾಳಿತ ಆದೀತಾ?” ಕಳಂಜನ ತೋಸರ್ಿ ಕೇಳಿದೆ.

ನನ್ನಮ್ಮ ಟೈಲರು ಮಾಡ್ತಾರೆ. ಅವರಿಗೆ ಅದನ್ನು ಸಣ್ಣದು ಮಾಡ್ಲಿಕೆ ಗೊತ್ತುಂಟು.” ಕಳಂಜ ಪಾತ್ರಧಾರಿ ಲಕ್ಷ್ಮಣ ತೆಗದ ಬಾಯಿಗ ಹೇಳಿತ್ತದ.

ಹಾಂಗೆ ಎನ್ನ ಮಗನ ಹಳೆ ಜೀನ್ಸ್ ಪೇಂಟೂದೆ ಅದರ ಚೀಲದೊಳಾಂಗೆ ಹೊಕ್ಕತ್ತು. ಅಂದರೂ ಅವಿಬ್ರೂ ಇನ್ನೂ ಹೆರಡ್ತ ಸೂಚನೆ ಕಂಡತ್ತಿಲ್ಲೆ.

“ಇನ್ನು ಎಂತ ಆಗ್ಬೇಕು ಮೊನ್ನ?” ಕೇಳಿದೆ. ಅಪ್ಪನೂ ಮಗನೂ ಮೋರೆ ಮೋರೆ ನೋಡಿಯೋಂಡವು. ಮಗನೇ ಮೆಲ್ಲಂಗೆ ಹೇಳಿತ್ತು,

“ಅಕ್ಕಾ…, ನೀವೀಗ ತೆಗೆದ ಪಟ ಒಮ್ಮೆ ತೋರಿಸ್ತೀರಾ…?”

ati kalanja
Aati Kalenja

ಎನಗೆ ಅದರ ಪಾಪ ಕಂಡತ್ತು. ಕೂಲಿ ಕೆಲಸಲ್ಲಿ ದಿನ ಕಳಿತ್ತ ಇವಕ್ಕೆ ನಮ್ಮ ಕೈಲಿಪ್ಪ ಹಾಂಗಿರ್ತ ಸ್ಮಾಟರ್್ ಫೋನು ಕಂಡೇ ಗೊಂತಿರ….,ಪಾಪ..ಕಣ್ಣಿಲ್ಲಿಯಾದ್ರೂ ನೋಡಿಯೋಳಲಿ ಹೇಳಿ ಜಾನ್ಸಿದೆ. ಕಳಂಜನ ಹತ್ರೆ ಹೋಗಿ ಎಲ್ಲ ಪಟಂಗಳ ತೋಸರ್ಿದೆ. ಪುನಃ ಪುನಃ ನೋಡಿತ್ತು.

ಅಕ್ಕಾ, ಈ ಪಟ ಯಾವುದೂ ಕ್ಲಿಯರ್ ಬಲರ್ಿಲ್ಲ…,ನಾನು ಇನ್ನೊಮ್ಮೆ ಪಟಕ್ಕೆ ಬೇಕಾದ ಹಾಗೆ ಕುಣೀತೇನೆ…,ನೀವು ಚಂದದ ಪಟ ತೆಗೀಬೇಕು ಆಯಿತಾ…?” ಹೇಳಿತ್ತು.

`ಯೆಲಾ…ಇದರ ಬೀರ್ಯವೇ…?’ ಹೇಳಿ ಕಂಡ್ರೂ ಎಂತೂ ಹೇಳದ್ದೆ “ಆಯಿತು..” ಹೇಳಿಕ್ಕಿ ಪಟ ತೆಗವಲೆ ತಯಾರಾದೆ.

ಒಂದು….,ಎರಡು….,ಮೂರು….,ಪಟ ತೆಗದ್ದದೇ ತೆಗದ್ದು. ಎನಗೆ ಪಟ ತೆಗದು ಬಚ್ಚೀರೂ ಅದಕ್ಕೆ ಕೊಣುದು ಬಚ್ಚಿದ್ದಿಲ್ಲೆ!

“ಏ…ಇವತ್ತಿಗೆ ಇಷ್ಟು ಸಾಕು ಮಾರಾಯಾ…” ಹೇಳಿ ಆನು ಹೇಳಿದ ಮತ್ತೆ ನಿಲ್ಸಿತ್ತು. ಪಟಂಗಳ ಕಳಂಜ ನೋಡಿತ್ತಯ್ಯ ನೋಡಿತ್ತು. ಸುಮಾರು ಕಾಲು ಘಂಟೆ ತಿರುಗ್ಸಿ ಮುರುಗ್ಸಿ ನೋಡಿತ್ತು. ಕಡೇಂಗೆ ಹೇಳಿತ್ತು,

ಅಕ್ಕಾ…, ಇದ್ರಲ್ಲಿ ಈ ನಾಲ್ಕು ಪಟ ಒಂದು ಮಟ್ಟು ಬಂದಿದೆ. ನೋಡಿ, ಇದ್ರಲ್ಲಿ ನೀವು ಹಿಡ್ದ ಯ್ಯಾಂಗಲ್ ಸರಿ ಆಗ್ಲಿಲ್ಲ…,ಇದನ್ನು ಸ್ವಲ್ಪ ಎಡಿಟ್ ಮಾಡ್ಬೇಕು…,ಈ ಪಟವನ್ನು ಉಂಟಲ್ಲಾ…ವಿಂಟೇಜ್ ಮೋಡಿನಲ್ಲಿಟ್ಟು ಎಡಿಟ್ ಮಾಡ್ಬೇಕು, ಆಗ ಫೋಟೋ ಇಫೆಕ್ಟ್ ಓಳ್ಳೇದು ಬರ್ತದೆ…,” ಹೀಂಗೇ ಅದು ಹೇಳಿಯೋಂಡು ಹೋದ ಹಾಂಗೇ ಎನಗೆ ಬೆಗರು ಬಿಚ್ಚಲೆ ಸುರುವಾತದ.

“ಏ ಲಕ್ಷ್ಮಣ..,ನೀನು ಇದನ್ನೆಲ್ಲ ಕಲ್ತದ್ದು ಎಲ್ಲಿಯಾ…?” ಕೇಳಿದೆ

“ನಿಮ್ಮದು 2ಜಿ ಅಲ್ವಕ್ಕಾ…? ನನ್ನತ್ರ 3ಜಿ ಉಂಟು…ಇವತ್ತು ತಲರ್ಿಲ್ಲ ಅಷ್ಟೇ…ಇಕ್ಕೊಳ್ಳಿ ನನ್ನ ನಂಬರು. ನಿಮ್ಮದ್ರಲ್ಲಿ ಫೀಡ್ ಮಾಡಿ. ನಾನು ಹೇಳಿದ ಆ ಮೂರು ಪಟವನ್ನು ನನ್ಗೆ ವಾಟ್ಸ್ಯಾಪ್ ಮಾಡಿ ಆಯಿತಾ…?” ಹೇಳಿತ್ತು. ಆನು ಗೆಬ್ಬಾಯಿಸಿ ನೋಡಿಯೊಂಡು ಅಂತೇ ತಲೆಯಾಡ್ಸಿಬಿಟ್ಟೆ.

3ಜಿ ಮೊಬೈಲು ಇಪ್ಪ ಜೆನಕ್ಕೆ ಎನ್ನ ಮಗನ ಹಳೆ ಜೀನ್ಸು ಪೇಂಟು ಎಂತಕೆ ಹೇಳ್ತ ಪ್ರಶ್ನೆ ಎನ್ನ ನಾಲಗೆ ಕೊಡಿವರೇಂಗೆ ಬಂತು. ಕೇಳ್ಲೆ ದೈರ್ಯ ಬಯಿಂದಿಲ್ಲೆ. ಇನ್ನು ಅದಕ್ಕೆ ಎಂತ ಹೇಳ್ತೋ ದೇವರೇ ಬಲ್ಲ.

ಆಯ್ತು ಬತರ್ೇವೆ ಅಕ್ಕ..,ಬರುವ ವರ್ಷ ಕಾಣುವಾ..” ಹೇಳಿಕ್ಕಿ ಎರಡೂದೆ ಹೋದವು.

ಈ ವರ್ಷವೂದೆ ಆಟಿಕಳಂಜನ ಕಾಯ್ತಾ ಇದ್ದೆ. ಈ ವಷರ್ಾಣ ಅದರ ಬೇಡಿಕೆ ಎಂತ ಇತರ್ೋ…
ಅದರ ಪೂರೈಸುವ ಶಕ್ತಿ ಎನಗಿಕ್ಕೋ ಗೊಂತಿಲ್ಲೆ.

 

 

15 thoughts on “ಆಟಿ ಕಳಂಜನ ವಾಟ್ಸ್ಯಾಪ್ ಸ್ಪೆಷಲ್

  1. ಅಪ್ಪು. ಅದು +1 ಕಲಿತ್ತ ಹುಡುಗ. ಅದರತ್ರೆ ಆ ಬಗ್ಗೆ ಕೇಳಿಯಪ್ಪಗ ಅದರ ಅಪ್ಪ ಎಂತ ಹೇಳಿದ್ದು ಹೇಳಿರೆ , `ಕುಣಿಯದಿದ್ರೆ ದೋಸ (ದೋಷ) ಕಾಣ್ತದೆ…’

  2. ಅಷ್ಟೆಲ್ಲ ಅದು ಕಲ್ತು ಗೊಂತಿದ್ದರು ಸಂಸ್ಕೃತಿ ಮರೆಯದ್ದೇ ಅದು ಆಟಿ ಕಳಂಜನ ವೇಷ ಹಾಕಿ ನಿಂಗಳ ಮನೆಗೆ ಬಂದು ಕೊಣುದತ್ತ ನ್ನೇ … ಅದಕ್ಕೆ ಹ್ಯಾಟ್ಸಾಫ್ ಹೇಳೆಕ್ಕು…

  3. ಅಷ್ಟೆಲ್ಲ ಅದು ಕಲ್ತು ಗೊಂತಿದ್ದರು ಸಂಸ್ಕೃತಿ ಮರೆಯದ್ದೇ ಅದು ಆಟಿ ಕಳಂಜನ ವೇಷ ಹಾಕಿ ನಿಂಗಳ ಮನೆಗೆ ಬಂದು ಕೊಣುದತ್ತ ನ್ನೇ … ಅದಕ್ಕೆ ಹ್ಯಾಟ್ಸಾಫ್ ಹೇಳೆಕ್ಕು… ಶ್ಯಾಮಣ್ಣ

  4. ಧನ್ಯವಾದಂಗೊ ಬೊಳುಂಬು ಅಣ್ಣಾ. ಹ್ಹ.. ಅದು ಪೇಟೆಲಿ ಕಾಂಬಲೆ ಸಿಕ್ಕಿದ್ರೆ `ಹಾಯ್ ಅಕ್ಕ, ಹೇಗಿದ್ದೀರಿ..?’ ಹೇಳಿ ಕೇಳ್ತು. ಇನ್ನೂ ಅದರ ವೇಷ ಹೇಂಗಿಕ್ಕು ಹೇಳಿ ನಿಂಗಳ ಕಲ್ಪನೆಗೆ ಬಿಟ್ಟದು…

  5. ಮಾಡರ್ನ್ ಆಟಿ ಕಳಂಜ ಲಾಯಕಾಯಿದು. ಆಟಿ ಕಳುದ ಕೂಡ್ಳೆ ಅದರ ವೇಷ ಹೇಂಗಿಕ್ಕು ಹೇಳಿ ಆಲೋಚನೆ ಮಾಡ್ತಾ ಇದ್ದೆ.

  6. ವಾಟ್ಸಾಪ್, ಚಾಲೂ ಮಾಡ್ತ, ಮಾಡ್ರನ್ ಆಟಿಕಳಂಜನೇ !! . ಇಲ್ಲದ್ರೆ ಅವು ತುಳುವಿಲ್ಲಿ ಅಲ್ಲೊ ಮಾತಾಡುದು. ಕನ್ನಡಲ್ಲಿ ಅಲ್ಲ. ಶೀಲ, ನೀನೂ ತುಳು ಗೊಂತಿಲ್ಲದ್ದೋಳಲ್ಲನ್ನೆ!.!! ಅಂತೂ ಒಂಧತ್ತು ನಿಮಿಷ ಕಾಮಿಡಿ ಮಾಡಿದ ಕಾರಣ ಹೀಂಗೊಂದು ವಿಷಯವೂ ಸಿಕ್ಕಿತ್ತು.ಅಲ್ಲೊ ಶೀಲಾ?

    1. ಅಪ್ಪು ವಿಜಯಕ್ಕಾ, ನಿಂಗೊ ಹೇಳಿದಿರನ್ನೇ ತುಳು ಮಾತಾಡ್ತದು ಹೇದು..? ತುಳು ಬಿಡಿ…, ಅದು ಎನ್ನತ್ರೆ ಇಂಗ್ಲೀಷು ಮಾತಾಡದ್ದು ಎನ್ನ ಪುಣ್ಯ.., ಅದರ ಅಪ್ಪನತ್ರೆ ಸುರುವಿಂಗೆ ತುಳುವಿಲ್ಲಿ ಮಾತಾಡಿಯಪ್ಪಗ ಅದು ಉತ್ತರ ಕೊಟ್ಟದು ಕನ್ನಡಲ್ಲಿ…!

  7. ಒಳ್ಳೆ ಕಾಮಿಡಿ ಇದ್ದು ..ಆನು ಇತ್ತಿದೇ ಅವು ಬಂದಿಪ್ಪಗ ಮಾಡ್ರನ್ ಆಟಿ ಕಳಂಜ

    1. ಅಪ್ಪು ನಿವೇದಿತಾ, ಈ ಸರ್ತಿ ನಿಂಗೊ ಯಾರೂ ಮನೇಲಿ ಇಲ್ಲೇ ಹೇಳಿಯೋ ಎಂತೋ ಆಟಿಕಳಂಜ ಬಯಿಂದೆ ಇಲ್ಲೇ

  8. ಅಪ್ಪು. ಹಿಸ್ಟರಿಯೊಟ್ಟಿಂಗೆ ಡ್ರಾಮವೂ ಸೇರಿಯಪ್ಪಗದ ಮನುಷ್ಯರು ಬ್ಬೆಬ್ಬೆಬ್ಬೆ ಆವುತ್ತದು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×