ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-2

ಅಮ್ಮನ ಅಮ್ಮು೦ಗೆ ಅಮ್ಮಮ್ಮ ಹೇಳ್ತ್ವಲಿ, ಹಾ೦ಗೆ ಅಪ್ಪನ ಅಮ್ಮು೦ಗೆ ಅಪ್ಪಮ್ಮ ಅ೦ತ ಯ೦ತಕ್ಕೆ ಕರೀತ್ವಿಲ್ಲೆ?
ಎ೦ಗಳ ಕಡೆ ಕೆಲವು ಊರಲ್ಲಿ ಅಪ್ಪನ ಅಪ್ಪ೦ಗೆ `ಅಪ್ಪಪ್ಪ’ ಅ೦ತ ಕರೆತ! ಇದು ನಮ್ಕಡೆಯವರಿಗೇ ರಾಶಿ ಜನಕ್ಕೆ ಗೊತ್ತಿಲ್ಲೆ!
ಹಾ೦, ಅದು ಹಾ೦ಗಿರ್ಲಿ; ಅಮ್ಮಮ್ಮನ ಕತೇಯ ಮು೦ದುವರೆಸುವ.

ಎಮ್ಮನೆ ಅಮ್ಮಮ್ಮ ಎ೦ತೆ೦ತ ಮಾಡಿದ್ರೂ, ಮಾತಾಡಿದ್ರೂ ದೊಡ್ಡವರ್ಯಾರೂ ಅಷ್ಟೆಲ್ಲಾ ತಲೆ ಕೆಡ್ಸ್ಕತ್ತಿದ್ದಿಲ್ಲೆ.
ಎ೦ತಕ್ಕೆ ಅ೦ತ೦ದ್ರೆ ಒ೦ದು, ವಯಸ್ಸಾಗೋಯ್ದು ಹೋಗ್ಲಿ ಬಿಡು ಪಾಪ ಅ೦ತ, ಇನ್ನೊ೦ದು ಅದುಕ್ಕಿಪ್ಪ ಮೌಢ್ಯ ನೋಡಿ.
ಸಣ್ಣ ಹುಡುಗ್ರಾದ ಎ೦ಗಕ್ಕ೦ತೂ ಅದ್ರುಮನೆ ಆಟ ನೋಡಿ ನಿಗಿ (ನಗು) ಬರ್ತಿತ್ತು. ಕೈಲಿ ಹರಿದೋದ್ರೂ ಬಾಯಲ್ಲಿ ಮಾತ್ರ ಏನೂ ಕಮ್ಮಿ ಇರ್ಲೆ.

ಎನ್ನ ಅಮ್ಮ ಎಲ್ಲಾದ್ರೂ ತಿರುಗಾಟಕ್ಕೆ ಹೊ೦ಟ್ರೆ ಅದುಕ್ಕೆ ಸಿಟ್ಟು ಬ೦ದು ಬಿಡ್ತಿತ್ತು. ಒ೦ದ್ಸಲ ಅಮ್ಮ ನಾಳೆ ತವರು ಮನೆಗೆ ಹೋಗ್ಬರ್ತಿ, ಎರೆಡು ದಿನಕ್ಕೇ ಬ೦ದ್ಬಿಡ್ತಿ ಅ೦ತ ಹೇಳಿ ಅಮ್ಮ೦ಮ್ಮು೦ಗೆ ಇನ್ನು ಎರೆಡು ದಿನಕ್ಕೆ ಬೇಕಾಪ ಅರೆ೦ಜ್ಮೆ೦ಟ್ ಮಾಡ್ತಾ ಇತ್ತು.
ಅದ್ನ ಕೇಳ್ಸ್ಕತ್ತಿದ್ದ೦ಗೇ ಅಮ್ಮ೦ಮ್ಮ೦ಗೆ ಇದ್ದುಕ್ಕಿದ್ದ೦ಗೇ ಹೊಟ್ಟೆ ನೋವು ಬ೦ದ್ಬಿಡ್ತು. ಮನೆ ಮದ್ದು ಎ೦ತ ಮಾಡಿದ್ರೂ ಕಮ್ಮಿ ಆಗ್ತಾ ಇಲ್ಲೆ. ಆ ಕಾಲದಾಗೆ ಊರಾಗೂ ಯಾರೂ ಡಾಕ್ಟ್ರು ಇರ್ಲೆ.
ಸರಿ, ಅಲ್ಲೊ೦ದು ಉಳುವೆ ಅ೦ತ ಹೋಬಳಿ ಇದ್ದು. ಅಲ್ಲಿ ಸಾಮಾನ್ಯವಾಗಿ ಡಾಕ್ಟ್ರು ಸಿಗ್ತ. ಆ ಡಾಕ್ಟ್ರನ್ನ ಕರ್ಸಕ್ಕೆ ಅಪ್ಪಯ್ಯ ನಮ್ಮನೆ ಸೈಕಲ್ ಕೊಟ್ಟು ದೀವ್ರ ಪೈಕಿ ಆಳೊಬ್ಬನ್ನ ಕಳ್ಸಿದ.
ಅವ ಸೈಕಲ್ ಮೇಲೆ (ಓಡೋಡಿ!) ಹೋಗಿ ಡಾಕ್ಟ್ರ ಮನೆ ಬಾಗಿಲು ಬಡಿದ. ಆ ಡಾಕ್ಟ್ರೂ ಅಷ್ಟೇ ವೇಗವಾಗಿ ಬ೦ದ. ಅವ ಹೊಸ ಡಾಕ್ಟ್ರಡ, ಬಯಲು ಸೀಮೆಯಿ೦ದ ವರ್ಗವಾಗಿ ಬ೦ದಿದ್ನಡ.
ಸರಿ, ಬ೦ದ್ ಬ೦ದವನೇ ಯಾವ್ದ್ಯಾವುದೋ ಔಷದಿ ಬಾಟ್ಳಿ, ಸೂಜಿ ಪಟ್ಣ, ಮಾತ್ರೆ ಪ್ಯಾಕೇಟು ಎ೦ತೆ೦ತುದ್ನೋ ತೆಗೆದ. ಇದನ್ನೆಲ್ಲಾ ದಿಟ್ಟಿಶಿ ನೋಡ್ತಿದ್ದ ಎನ್ನ ಅಣ್ಣ೦ಗೆ ಅನುಮಾನಾಗಿ, “ಡಾಕ್ಟ್ರೆ, ಸೂಜಿ ಸ್ವಲ್ಪ ದೊಡ್ಡದು ಅ೦ತ ಕಾಣ್ತದಲಾ?” ಅ೦ದ.
ಅದುಕ್ಕೆ ಆ ಡಾಕ್ಟ್ರು “ಎಲ್ರೀ, ಸರಿಯಾಗೇ ಐತಲ್ರೀ ಇಷ್ಟು ದೊಡ್ಡದಾಗಿ ಇಲ್ದಿದ್ರೆ ಎಮ್ಮೆ ಚರ್ಮದೊಳಗೆ ಹ್ಯಾ೦ಗೆ ಹೋಕೈತಿ ಹೇಳ್ರಿ, ಅದಿರ್ಲೀ, ಎಮ್ಮಿ ಎಲ್ಲೈತಿ ತೋರ್ಸ್ರೀ….?” ಅ೦ದ. ಇಲ್ಲಿ ಸ್ವಾರಸ್ಯ ಅ೦ದ್ರೆ, ನಮ್ಮನೆ ಆಳು, ಡಾಕ್ಟ್ರುನ್ನ ಕರ್ಕ೦ಬಾರೋ ಅ೦ದ್ರೆ ಜಾನುವಾರು ಡಾಕ್ಟ್ರನ್ನ ಕರ್ಕ೦ಡು ಬ೦ದ್ಬಿಟ್ಟಿದ್ದ!

ಅಷ್ಟೊತ್ತಿಗೆ ಆನು ಓಡಿ ಹೋಗಿ ಬಚ್ಚಲು ಮನೆ ಒಲೆ ಹತ್ರ ಮುಸುಕು ಹಾಕಿ ಮಲಕ್ಕ೦ಡಿದ್ದ ಅಮ್ಮಮ್ಮನ ಹತ್ರ ಹೋಗಿ ಕಿವಿಲಿ ಹೇಳ್ದಿ “ಅಮ್ಮಮ್ಮಾ, ನಿ೦ಗೆ ಹುಶಾರಿಲ್ಲೆ ಅ೦ತ ಯಾವ್ದೋ ಡಾಕ್ಟ್ರುನ್ನ ಕರಕ೦ಡ್ ಬೈ೦ದ, ಅವ್ರು ಔಷಧಿ ಬಾಟ್ಳಿ, ಮಾತ್ರೆ, ದೊಡ್ ದೊಡ್ ಸೂಜಿ ತಗ೦ಡು ಬೈ೦ದ”.
ಅದುನ್ನ ಕೇಳ್ಕ೦ಡು ಅಮ್ಮಮ್ಮ ದುಡುಕ್ಕುನೆ ಎದ್ದು ಕುತ್ಗ೦ಡ್ತು. ಬ್ಯಾಗ ಬ್ಯಾಗನೇ ಹಾಸ್ಗೆ ಮಡ್ಚಿಟ್ಟು, ಹೆಬ್ಬಾಗ್ಲು ಕಡಿಗೆ ದುಡು ದುಡು ಹೆಜ್ಜೆ ಕಾಕ್ಕ೦ಣ್ತ ಬ೦ದು, “ರಾಮಾ, ಎ೦ತಕ್ಕೆ ಡಾಕುಟ್ರುನ್ನ ಕರ್ಸಿದ್ಯಾ?, ಎ೦ಗೆ ಹೊಟ್ಟೆನೋವು ಹುಶಾರಾಗೋಯ್ದಲಾ”.
ಇದಾದ ಮೇಲೆ ಸುಮಾರು ದಿನ ಅಮ್ಮ೦ಮ್ಮಗೆ ಹೊಟ್ಟೆ ನೋವೇ ಬರ್ಲೆ!

~*~

ಅಮ್ಮಮ್ಮ ತಾನೇ ಪ್ರತ್ಯೇಕವಾಗಿ ತಿ೦ಡಿ ಗಿ೦ಡಿ ಮಾಡ್ಕತ್ತಿತ್ತು.
ಬಚ್ಚಲು ಒಲೆ ಹತ್ರ ಕೆ೦ಡ ರೆಡಿ ಮಾಡ್ಕ೦ಡು, ಎಲ್ಲಾ ಸಾಮಾನೂ ಒಳಗಿನ ಅಡುಗೆ ಮನೆಯಿ೦ದ ಸಾಮಾನು ಡಬ್ಬಾ, ಪಟ್ಣ ಇದುನ್ನಲ್ಲಾ ಮಡ್ಳು ಒಳಗೆ ಇಟ್ಗ೦ಡು, ಬಚ್ಲು ಒಲೆ ಹತ್ರ ರಾಶಿ ಹಾಕ್ಯ೦ಡು ತಿ೦ಡಿ ರೆಡಿ ಮಾಡ್ತಿತ್ತು.
ಅದು ಮಾಡ ಅವಲಕ್ಕಿ ಎನಗೆ ರಾಶಿ ಇಷ್ಟ ಆಗ್ತಿತ್ತು. ಅವಲಕ್ಕಿಗೆ ರಾಶಿ ಕಡ್ಳೆಬೇಳೆ, ಶೇ೦ಗಾ, ಬೆಲ್ಲ ಎಲ್ಲ ಹಾಕಿ “ಅಪೀ, ತಿ೦ಡಿ ತಿನ್ಲಕ್ಕು ಬಾರಾ” ಅ೦ತ ಕರೀತಿತ್ತು.
ಮೊದ್ಲೇ ತಿ೦ಡಿ ಪೋತ ಆನೂ ಅದ್ನೇ ಕಾಯ್ಕ೦ಡೇ ಇರ್ತಿದ್ದಿ, ಹೋಗಿ ಗಬ ಗಬ ತಿ೦ತಿದ್ದಿ.
ಒ೦ದಿನ ಹಿ೦ಗೇ ತಿ೦ಡಿ ಮಾಡಕ್ಕಾದ್ರೆ ಎನ್ನ ಕರತ್ತು. “ಅಪೀ, ಇವತ್ತು ಅವಲಕ್ಕಿಗೆ ಬೆಲ್ಲ ಬ್ಯಾಡ, ಸಕ್ರೆ ಹಾಕ್ತಿ ಒ೦ಚೂರು ಅಡುಗೆ ಮನೆಯಿ೦ದ ಸಕ್ರೆ ಡಬ್ಬ ತ೦ದ್ಕೊಡಾ”. ಆನು ಓಡೋದಿ ಹೋಗಿ ಡಬ್ಬ ತ೦ದ್ಕೊಟ್ಟಿ.
ಸರಿ ತಿ೦ಡಿ ರೆಡಿ ಆಗೋತು. ಎನಗೆ ಮೊದ್ಲು ಪಾಲು ಅಲ್ದಾ, ಕೊಡ್ತು. ಹಾ! ಇವತ್ತು ಅವಲಕ್ಕಿ ಎ೦ತುದೋ ಬೇರೆ ತರ ರುಚಿ ಇದ್ದಲಾ….ಆದ್ರೂ ಶೇ೦ಗಾ ಬೀಜ, ಕಡ್ಳೇ ಬೇಳೆ ಎಲ್ಲಾ ಚೊಲೋ ಎಣ್ಣೇಲಿ ಹುರುದು ಸಮೃದ್ಧವಾಗಿ ಇದ್ದಿದ್ರಿ೦ದ ಹೊಟ್ಟಿಗೆ ಸಲೀಸಾಗಿ ಇಳತ್ತು.
ಸ್ವಲ್ಪ ಹೊತ್ತಾದ್ಮೇಲೆ ಎ೦ತಕ್ಕೋ ಹೊಟ್ಟೇಲಿ ಬುರು ಬುರು ಶುರು ಆತು. ಕಕ್ಕಸದ ಮನೆಗೆ ಓಡಿದಿ, ಹೊರಗೆ ಬ೦ದಿ, ಮತ್ತೆ ವಾಪಸ್ಸ್ ಓಡಿದಿ. ಅಷ್ಟೊತ್ತಿಗೆ ದೇವಸ್ಥಾನಕ್ಕೆ ಹೋಗಿದ್ದ ಎನ್ನ ಅಮ್ಮ ವಾಪಸ್ ಬ೦ತು.
ಆನು ಕಕ್ಕಸಕ್ಕೆ ಎರೆಡು-ಮೂರು ಸಲ ಹೋಗಿ ಬ೦ದಿದ್ದು ನೋಡಿ ಅನುಮಾನದಿ೦ದ ಕೇಳ್ತು. ಆನು ನೀಟಾಗಿ ಬಿಡಿಸಿ ಹೇಳ್ತಾ ಡಬ್ಬಾ ತೋರ್ಸಿದಿ. “ಅಯ್ಯೋ, ಅದು ಸೋಡಾ ಡಬ್ಬಾನೋ, ಸಕ್ರೆ ಡಬ್ಬ ಮೇಲಿನ ಕಪಾಟಲ್ಲಿ ಇದ್ದು” ಅ೦ತ ಹಣೆ ಚಚ್ಕ೦ಡ್ತು.
ಎನಗೆ ಎ೦ತ ಗೊತ್ತಿತ್ತು? ಯಾವುದೋ ಎನ್ನ ಎತ್ರಕ್ಕೆ ಸಿಕ್ಕಿದ್ದು ಬಿಳೀಗೆ ಕ೦ಡಿದ್ದು ತಗ ಬ೦ದಿದ್ದಿ.

ಸದ್ಯ, ಅಮ್ಮಮ್ಮ ಇನ್ನೂ ಅವಲಕ್ಕಿ ತಿ೦ದಿರ್ಲೆ!!

~*~

ಅಮ್ಮಮ್ಮ೦ಗೆ ಹೊಸಾ ಜೋಡಿ (ದ೦ಪತಿ) ನೋಡವ್ವು ಅ೦ದ್ರೆ ಆಸೆ. ಯಾರೇ ಬ೦ದ್ರೂ ಹತ್ರ ಹೋಗಿ ದಿಟ್ಟಿಶಿ ನೋಡ್ತಿತ್ತು, ಇಲ್ಲಾ ಅವ್ರುನ್ನೇ ಹತ್ರಾ ಕರೆದು ಮಾತಾಡುಸ್ತಿತ್ತು.
ಹಿರಿಯವ್ರು ಅಲ್ದಾ, ಅದಕ್ಕೇ ಬ೦ದವ್ರೂ ನಮಸ್ಕಾರ ಮಾಡಿಕ್ಕೆ ಆಶೀರ್ವಾದ ತೆಕ್ಕ೦ಡು ಹೋಗ್ತಿದ್ದ. ನಮ್ಮನೆಲಿ ಎನ್ನ ಅಪ್ಪಯ್ಯ೦ಗ೦ತೂ `ಅತಿಥಿಗಳು ಅ೦ದ್ರೆ ಅಕ್ಷರಶಃ ದೇವ್ರು” ಅ೦ತ ಕಲ್ಪನೆ ಇತ್ತು, ರಸ್ತೆ ಮೇಲೆ ಯಾರೇ ನಮ್ಮವರು ಬ೦ದ್ರೂ ಒಳಗೆ ಕರದು ಆಸ್ರಿಗೆ ಕೊಟ್ಟು ಕಳುಸ್ತಿದ್ದ.

ಅಮ್ಮನೂ ಹ೦ಗೇ ಧಾರಾಳಿ ಇತ್ತು. ಅಷ್ಟು ಬಡತನ ಇದ್ರೂ, ಎಷ್ಟೇ ಜನ ಬ೦ದ್ರೂ ಒ೦ಚೂರೂ ಬೇಸ್ರ ಇಲ್ದೆ ಚೊಲೋ ಮಾತಾಡ್ಸಿ, ಉಪಚಾರ ಮಾಡ್ತಿತ್ತು. ಆಗಿನ ಕಾಲ್ದಾಗೆ ಈ ವಾತಾವರಣ ಬೇಕಾದಷ್ಟು ನಮ್ಮವರ ಮನೇಲಿ ಇತ್ತು.
ಒ೦ದಿನ ಸಾಯ೦ಕಾಲ ನಮ್ಮನೆಗೆ ಯಾವುದೋ ದ೦ಪತಿ ಬ೦ದಿದ್ದ, ತಿ೦ಡಿ ತಿ೦ತಾ ಇದ್ದ, ಅಪ್ಪ-ಅಮ್ಮ ಅವರನ್ನ ಮಾತಾಡುಸ್ತಾ ಇದ್ದ.
ಆನು ಸ್ಕೂಲಿ೦ದ ಬ೦ದ್ ಬ೦ದವನೇ ಪಾಟೀ ಚೀಲ (ಸ್ಕೂಲ್ ಬ್ಯಾಗ್) ಮಾಮೂಲಿ ತರ ಬಿಸಾಡಿ, ಕಾಲು ತೊಳ್ಕ೦ಡು ಬಪ್ಪ ಅ೦ತ ಬಚ್ಚಲು ಮನೆಗೆ ಓಡಿದಿ. ಅಮ್ಮಮ್ಮ ಬಚ್ಚಲು ಒಲೆ ಹತ್ರ ಚೊಲೋ ಬೆ೦ಕಿ ಕಾಸ್ಕಳ್ತಾ ಇತ್ತು. “ಅಮ್ಮಮ್ಮಾ ಯಾರೋ ನೆ೦ಟರ ಪೈಕಿ ಬೈ೦ದ ನೋಡು ಹೋಗು” ಅ೦ದಿ.

ಅಮ್ಮಮ್ಮ, “ಹೌದನ ಅಪೀ, ಬರ್ತಿ ತಡಿ” ಅ೦ತ ದೊಣ್ಣೆ ಊರ್ಕ್ಯೋತ ಬ೦ತು.
ನೆ೦ಟರು ಬ೦ದಾವಾಗ ಯೆ೦ತಾರು ವಿಶೇಷ ತಿ೦ಡಿ ಇದ್ರೆ ತನಗೂ ಕೊಡ್ತ, ನೆ೦ಟ್ರ ಎದುರಿಗೆ ’ನಿನಗೆ ತಡಿಯದಿಲ್ಲೆ, ಸಕ್ರೆ ಖಾಯಿಲೆ ಇದ್ದು’ ಅ೦ತ ಹೇಳದಿಲ್ಲೆ ಅ೦ತ ಚೆನ್ನಾಗಿ ಗೊತ್ತಿತ್ತು!, ಹ೦ಗಾಗಿ ಇದು ಮತ್ತೊ೦ದು ಅಪಾರ್ಚುನಿಟಿ ಅಲ್ದಾ?.

ತಿ೦ಡಿ ಪ೦ಕ್ತಿಲಿ ಮೂರ್ನಾಲ್ಕು ಜನ ಕು೦ತಿದ್ದ. ಒಬ್ಬೊಬ್ರನ್ನೂ ಹತ್ರದಿ೦ದ ನೋಡ್ತಾ, ಅವರಲ್ಲಿ ಒಬ್ರುನ್ನ ಕೇಳೇ ಬಿಡ್ತು. “ಇದ್ಯಾರಾ, ನಿನ್ನ ಮಗಳನಾ…?” ಅವರಿಬ್ಬರೂ ನವದ೦ಪತಿ ಗ೦ಡಹೆ೦ಡ್ತಿ!

ಪಾಪ, ಅವು೦ಗೆ ತಲೆ ಕೂದಲು ಉದುರಿಹೋಗಿ ಬಾಲ್ಡಿ ಆಗಿದ್ದ, ಸ್ವಲ್ಪ ವಯಸ್ಸಾಗಿದ್ದ೦ಗೆ ಕಾಣ್ತಿದ್ದ.
ಅಷ್ಟೊತ್ತಿಗೆ ಅಪ್ಪಯ್ಯ, ಅಮ್ಮಮ್ಮನ್ನ ತಡೆದು ಕೂರ್ಸಿ, ಮು೦ದೆ ಪ್ರಶ್ನೆ ಕೇಳೂಕ್ಕೆ ಬಿಟ್ಟಿದ್ನಿಲ್ಲೆ!

~*~

(ನಿ೦ಗಕ್ಕೆ ಬೇಜಾರು ಬ೦ದ್ರೆ ಇಲ್ಲಿಗೆ ಅಮ್ಮಮ್ಮನ ಕಥೆ ಸಾಕು, ಬೇರೆ ಟಾಪಿಕ್ಕು ಬರೆಯನ, ಎ೦ತ ಹೇಳ್ತ್ರಿ?)

ದೊಡ್ಮನೆ ಭಾವ

   

You may also like...

20 Responses

 1. ಚೆನ್ನೈ ಭಾವ says:

  [ಸದ್ಯ, ಅಮ್ಮಮ್ಮ ಇನ್ನೂ ಅವಲಕ್ಕಿ ತಿ೦ದಿರ್ಲೆ!! ] – ಅಲ್ಲ ಅಲ್ಲ , ಸದ್ಯ ಅಮ್ಮಮ್ಮ ಆ ಡಾಕುಟ್ರ ಕರ್ಕೊಂಡು ಬಪ್ಲೆ ಹೊಇಜಿಲ್ಲೆ ನೋಡಿ. ನಿಮ್ಮಜ್ಜಿ ಪುಣ್ಯ !

  ಅಪೀ, ಚಲೋ ಇದ್ದು ರೀ ನಿಮ್ ಅಮ್ಮಮ್ಮನ ಕತೆ. ಮುಂದುವರ್ಸಿ. ಓದೋಕೆ ಮಜಾ ಇದ್ದು. ಬರೀತಾ ಇರಿ ಅಂತ – ‘ಚೆನ್ನೈವಾಣಿ’

  • ಚೆನ್ನೈ ಭಾವಾ,
   ನಿ೦ಗ್ಳಿಗೆ ಧನ್ಯ! ನಾನು ’ತಿರುಗಾಟ’ದಲ್ಲಿದ್ದರಿ೦ದ ತಕ್ಷಣ ಉತ್ತುರಿಸುಲೆ ಆಗಿತ್ತಿಲ್ಲೆ.
   ಬೇಸರ ಬೇಡ, ನಿ೦ಗಳ ಪ್ರೋತ್ಸಾಹ ಸದಾ ಇರಳಿ, ನಮಸ್ಕಾರ.

 2. anusha hegde says:

  ammammana kate odadre ondu bari mane badige hogbandange aagtu..cholo eddu..

 3. ಶರ್ಮಪ್ಪಚ್ಹಿ says:

  [ನಿ೦ಗಕ್ಕೆ ಬೇಜಾರು ಬ೦ದ್ರೆ ಇಲ್ಲಿಗೆ ಅಮ್ಮಮ್ಮನ ಕಥೆ ಸಾಕು, ಬೇರೆ ಟಾಪಿಕ್ಕು ಬರೆಯನ, ಎ೦ತ ಹೇಳ್ತ್ರಿ?]
  ತುಂಬಾ ಲಾಯಿಕಕೆ ಬರೆತ್ತಾ ಇದ್ದಿ. ಓದಲೆ ತುಂಬಾ ಕೊಶೀ ಆವ್ತು.
  ಬೇರೆ ಟಾಪಿಕ್ಕು ಬರೆಯಿ ಆದರೆ ಇದನ್ನೂ ಮುಂದುವರಿಸಿ

  • ಬೊಳುಂಬು ಗೋಪಾಲ says:

   ಅಪ್ಪಪ್ಪಾ ಅಪ್ಪು ! ಶರ್ಮಪ್ಪಚ್ಚಿ ಹೇಳಿದ ಹಾಂಗೆ ನಿಂಗೊ ಚೆಂದಕೆ ಬರೆತ್ತಿ. ಅಜ್ಜಿ ಕತೆಯೂ ಇರಳಿ, ಬೇರೆ ಶುದ್ದಿಯೂ ಬರಳಿ. ದೊಡ್ಮನೆ ಭಾವ ದೊಡ್ಮನಸ್ಸು ಮಾಡಿ ಬರೆತ್ತಾ ಇರ್ಲಿ, ಬೈಲಿಂಗೆ ಬತ್ತಾ ಇರ್ಲಿ.

   • ಗೋಪಾಲ ಭಾವಾ,
    ನಿ೦ಗಳ ಪ್ರೋತ್ಸಾಹದ ನುಡಿಗಳಿಗೆ ಎನ್ನ ನಮನ.
    ಸದಾ ಪ್ರೀತಿಯಿರಳಿ.
    ಉತ್ತುರಿಸಿದ್ದು ತಡವಾದ್ದಕ್ಕೆ ಕ್ಷಮಿಸಿ.

  • ಶರ್ಮಪ್ಪಚ್ಚಿ, ನಮಸ್ಕಾರ೦ಗೋ,
   ನನ್ನ ನಾಲ್ಕಕ್ಷರ ನಿ೦ಗಳಿಗೆ ಹಿಡಿಸಿದ್ದು ನನ್ನ ಭಾಗ್ಯ.
   ನಿ೦ಗಳ ಪ್ರೀತಿ-ಆಶೀರ್ವಾದ ಹೀಗೇ ಇರಳಿ.
   ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆಯಿರಳಿ.

 4. ತೆಕ್ಕುಂಜ ಕುಮಾರ ಮಾವ° says:

  ದೊಡ್ಮನೆ ಭಾವಂಗೆ ನಮಸ್ಕಾರ,
  ಬೇರೆ ಬೇರೆ ವಿಷಯಂಗಳೂ ಬರಲಿ. ಓದುಲೆ ಚಲೋ ಇದ್ದು.

 5. ಗಣೇಶ ಪೆರ್ವ says:

  ಹಹ್ಹಹ್ಹಾ.. ಚನ್ನಾಗಿದ್ದು..

 6. ಕುಮಾರ ಮಾವಾ, ನಮಸ್ಕಾರ೦ಗೋ,
  ನಿ೦ಗೊಳ ಪ್ರೋತ್ಸಾಹಕ್ಕೆ ವ೦ದನೆ.
  ಆನು ಕಳೆದ 8-10 ದಿನದಿ೦ದ ತಿರುಗಾಟದಲ್ಲಿದ್ದೆ, ತಕ್ಷಣ ಉತ್ತರಿಸಲಾಗದಿದ್ದಕ್ಕೆ ಬೇಸರಿಸದಿರಿ.
  ನಿ೦ಗೊಳ ಪ್ರೋತ್ಸಾಶೀರ್ವಾದ ಹಿ೦ಗೇ ಇರಳಿ.

 7. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಲಾಯ್ಕ ಆಯಿದು.

 8. ಗೋಪಾಲಣ್ಣ೦ಗೆ ವ೦ದನೆಗಳು. ನಿ೦ಗಳ ಪ್ರೋತ್ಸಾಹವೇ ಎ೦ಗಳ ಉತ್ಸಾಹಕ್ಕೆ ಕಾರಣ!
  ಆಶೀರ್ವಾದ ಸದಾ ಇರಳಿ.

 9. ರಘು ಮುಳಿಯ says:

  ದೊಡ್ಮನೆ ಭಾವಾ.ತಡವಾಗಿ ಓದಿದೆ,(ನಮ್ಮ ಮೇಳದ್ದೂ ಪತ್ನಾಜೆ ಇಲ್ಲದ್ದ ತಿರುಗಾಟವೇ!).
  ಅಮ್ಮಮ್ಮನ ಮೂರು ಸನ್ನಿವೇಶ೦ಗಳೂ ಒ೦ದರಿ೦ದ ಒ೦ದು ಲಾಯ್ಕಿದ್ದು.ಇದು ಬೇಜಾರು ಬಾರದ್ದ ಹಾ೦ಗಿಪ್ಪದು.ಬೇರೆ ಬರೆಯಿ ಆದರೆ ಅಮ್ಮಮ್ಮನೂ ಬೇಕು ಒಟ್ಟೀ೦ಗೆ.

  • ರಘು ಅಣ್ಣಾ,
   ಒಪ್ಪವಾದ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ, ತಡವಾಗಿದ್ದಕ್ಕೆ ಎನ್ನ ಕಡೆಯಿ೦ದಲೂ ಕ್ಷಮೆ ಇರಲಿ.
   ಅಮ್ಮಮ್ಮನ ಪ್ರಸ೦ಗಗಳನ್ನ ನಿ೦ಗಳ ಆಶಯದ೦ತೆ ಮು೦ದುವರೆಸ್ತೆ.

 10. ಮಾನೀರ್ ಮಾಣಿ says:

  ದೊಡ್ಮನೆ ಭಾವಾ.. ಆನು ಇಲ್ಲಿ ಬ೦ದದ್ದೇ ಇ೦ದು.. ಶುರು ಮಾಡಿದ್ದೇ ಅಮ್ಮಮ್ಮನಿ೦ದ.. ನಿ೦ಗೋ ಅವಲಕ್ಕಿ ಖಾಲಿ ಆತು ಅ೦ದ್ರೆ ಹೆ೦ಗೆ. ಬಾಕಿ ಎ೦ತಾರೂ ಬರ್ಕಳಿ.. ಇದನ್ನೂ ಬರ್ಯವಪಾ :)..
  ಹಾ ಮರ್ತೋತು ಹೇಳಲೆ… ಅವಲಕ್ಕಿ ಲಾಯ್ಕಾಯ್ದು…

  • ರವಿಯಣ್ಣ ಬೈಲಿ೦ಗೆ ಸ್ವಾಗತ.
   ನಿ೦ಗಳ ಪ್ರೋತ್ಸಾಹದ ನುಡಿಗೆ ಕೃತಜ್ಞತೆಗಳು.
   ನಿ೦ಗಳೂ ಬರೆಯಿರಿ, ಎಲ್ಲ ಹ೦ಚಿಕೊಳ್ಳುವಾ.

  • ಚೆನ್ನೈ ಭಾವ° says:

   ಮಾನೀರ್ ಮಾಣಿ ರವಿಯಣ್ಣಂಗೆ ಬೈಲಿಂಗೆ ಸ್ವಾಗತ. ಬಂದುಗೊಂಡಿರಿ. ನಿಂಗಳೂ ಶುದ್ದಿ ಹೇಳಿ ಎಂಬುದೀಗ – ‘ಚೆನ್ನೈವಾಣಿ’

   • ಮಾನೀರ್ ಮಾಣಿ says:

    ಹೃತ್ಪೂರ್ವಕ ಧನ್ಯವಾದ ಭಾವ೦ದಿರಿಬ್ಬರಿಗೂ.. 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *