ನಮ್ಮ ಬೈಲಿನ ಬಗ್ಗೆ ಒಂದೆರಡು ದ್ವಿಪದಿಗೊ!

ಈ ದ್ವಿಪದಿ ಹೇಳುದು ಎನಗೆ ಭಾರಿ ಲಾಯಿಕ ಅಪ್ಪದು. ೧೦೦ ಶಬ್ದಲ್ಲಿ ಹೇಳುದರ ಸಣ್ಣಕ್ಕೆ ಎರಡು ಗೆರೆಲೇ ಹೇಳುಲೆ ಆವುತ್ತು ಹೇಳಿ ಇದ್ದರೆ ಅದಕ್ಕಿಂತ ಗಮ್ಮತ್ತು ಎಂತ ಇದ್ದು ಹೇಳಿ? ಸಾಲದ್ದಕ್ಕೆ ಅದರ ಓದುವವಂಗೆ ಅದರ ಅರ್ಥಮಾಡಿಯೊಂಬಲೆ ಚೂರು ತಲೆ ಓಡ್ಸೆಕ್ಕಾವುತ್ತು. ಒಂದೇ ಕವಿತೆಗೆ ಬೇರೆ ಬೇರೆ ಅರ್ಥ ಬಕ್ಕು ಬೇರೆ ಬೇರೆ ಓದುಗರಿಂಗೆ! ಇರಲಿ, ಒಪ್ಪಣ್ಣನ ಬೈಲಿನ ಬಗ್ಗೆ ಒಂದೆರಡು ದ್ವಿಪದಿ ಬರವ ಹೇಳಿ ಕಂಡತ್ತು. ಅಜಕ್ಕಾನ ಭಾವ ದ್ವಿಪದಿ ಹೇಳ್ರೆ ಹರುದು ಬೀಳ್ತವು. ಅದೆಂತ ಹೆದರಿಕೆಯೋ? ಗೊಂತಿಲ್ಲೆ. ಅವರ ಕ್ಷಮೆ ಕೇಳಿ ಇದೋ ಶುರು ಮಾಡಿದೆ :

೧.
ಒಪ್ಪಣ್ಣನ ಬೈಲಿಲಿತ್ತವಕ್ಕೆ ಸಿಕ್ಕುತ್ತು ಬೆಶಿ ಬೆಶಿ ಒಪ್ಪಂಗೊ
ಈ ಬೈಲಿಂಗೆ ಬಾರದ್ದ ಹವ್ಯಕರು ಬರೇ ಬೆಪ್ಪಂಗೊ!

೨.
ಒಪ್ಪಣ್ಣನ ಬೈಲಿಲಿ ಹಾಕುತ್ತವು ಚೆಂದ ಚೆಂದದ ಪಟ
ಅದಕ್ಕೆ ಕಮೆಂಟು ಬರವಲೆ ಹೋದರೆ ಮಾತ್ರ ಎಲ್ಲ ತಟಪಟ!

೩.
ಒಪ್ಪಣ್ಣನ ಬೈಲಿಲಿ ಎಲ್ಲಾ ಬಗೆಯ ಲೇಖನಂಗಳೂ ಇದ್ದು
ಏನೂ ಬರೆಯದ್ದೆ ಉದಾಸಿನ ಮಾಡುವವಕ್ಕೆ ಬೇಕು ಒಂದು ಗುದ್ದು!

೪.
ಒಪ್ಪಣ್ಣನ ಬೈಲಿಲೆ ಮಳೆ ಬಪ್ಪದು ಯೇವಗ?
ನಮ್ಮ ನೆಗೆಗಾರಣ್ಣ ಕಾಮೆಂಟು ಬರದಪ್ಪಗ!

ಇನ್ನು ದ್ವಿಪದಿಗಳ ಹೇಳ್ರೆ ಮೈಲು ದೂರ ಓಡುವ ಅಜಕ್ಕಾನ ಭಾವನಂಥೋರಿಂಗೆ ಒಂದು ಚೂರು ದೊಡ್ಡ ಕವನವೂ ಇದ್ದು :

ಒಪ್ಪಣ್ಣನ ಬೈಲಿಲಿ ಇಪ್ಪದು ಬರೇ ಅಕ್ಷರಂಗೊ
ಗಣಕಲ್ಲಿ ಕುಟ್ಟಿದ ಒಣ ಲೇಖನಂಗೊ

ಹುಲ್ಲಿಲ್ಲೆ ದನ ಇಲ್ಲೆ ಕೆದೆ ಇಲ್ಲೆ
ಅಡಕ್ಕೆ ತೋಟ ಇಲ್ಲೆ ತೆಂಗಿನ ಮರ ಇಲ್ಲೆ

ಕಾಟು ಹುಳಿ ಮಾವಿನ ಗೊಜ್ಜು ಇಲ್ಲೆ
ತೋಟದ ಕರೇಣ ಎಳತ್ತು ಗುಜ್ಜೆ ಇಲ್ಲೆ

ದನದ ಮೈ ಪರಿಮಳ ಇಲ್ಲೆ ದಾಸನ ಹೂಗು ಇಲ್ಲೆ
ಮುಟ್ಟಾಳೆ ಕಿಳಿಂಜೇಲು ಇಲ್ಲೆ ಉದ್ದ ಕೊಡೆ ಇಲ್ಲೆ

ತರವಾಡು ಮನೆ ಇಲ್ಲೆ ಗುರಿಕ್ಕಾರ ಇಲ್ಲೆ
ಊರ ದೇವಸ್ಥಾನ ಇಲ್ಲೆ ಜಾತ್ರೆ ಇಲ್ಲೆ

ಜಂಬ್ರ ಇಲ್ಲೆ ಘಮ ಘಮ ಜಂಬ್ರದ ಊಟ ಇಲ್ಲೆ
ವೇಸ್ಟಿ ಸುತ್ತಿಯೊಂಡು ಹಂತಿಲಿ ಕೂದು ಚೂರ್ಣಿಕೆ ಹೇಳುಲಿಲ್ಲೆ

ಆಟ ಇಲ್ಲೆ ಕೊಶಿ ಅಕ್ಕಿ ಅಶನ ಊಟ ಇಲ್ಲೆ
ಜಡಿಗುಟ್ಟಿ ಬಪ್ಪ ಮಳೆ ಇಲ್ಲೆ ಬೆಗರು ಬಿಚ್ಚುವ ಕೆಲಸ ಇಲ್ಲೆ

ಬಾಯಿ ಕೆಂಪು ಮಾಡುವ ಎಲೆ ಅಡಕ್ಕೆ ಇಲ್ಲೆ
ಹೊಟ್ಟೆ ತಂಪು ಮಾಡುವ ಮಜ್ಜಿಗೆ ಇಲ್ಲೆ

ರೇಟ್ ಪೋಯಿ! ಊರಿನ ಬಸ್ಸು ಇಲ್ಲೆ
ಯಾರಿಗೇS ಉದಯವಾಣಿ ತರಂಗ.. ಪೇಪರುಗೊ ಇಲ್ಲೆ

ಕೊಂಕಣಿ ಹೋಟ್ಲಿನ ಬನ್ನು ಇಲ್ಲೆ ಗೋಳಿಬಜೆ ಇಲ್ಲೆ
ಕುಂಟಲ ಹಣ್ಣು ತಿಂದೊಂಡು ಶಾಲೆಗೆ ಹೋಪ ಮಕ್ಕ ಇಲ್ಲೆ
.
.
.
ಇಷ್ಟೆಲ್ಲ ಇಲ್ಲದ್ದರೂ ಚಿಂತಿಲ್ಲೆ
ಎಂತಕ್ಕೆ ಹೇಳ್ರೆ ಈ ಇಲ್ಲದ್ದರ ಎಲ್ಲ
ಯೋಚನೆ ಮಾಡಿಯೊಂಡು ಇರ್ತವಲ್ಲ ಹವ್ಯಕರು ಇಲ್ಲೇ!!

ನೀರ್ಕಜೆ ಮಹೇಶ

   

You may also like...

31 Responses

 1. ಅಜ್ಜಿಮನೆ ಪುಳ್ಳಿ says:

  ಮಾವಾ ನಿಂಗ ಲಾಯಿಕ ಬರೆತ್ತಿ ಆತೋ. ನಿನ್ನುದೆ ಬರೆಯಿ ಆತೋ. ಅತ್ತೆ ಎಂತ ಮಾಡ್ತವು.

 2. ಮುರಳಿ says:

  ಅಪ್ಪಚ್ಚಿ … ದ್ವಿಪದಿಗೋ, ಪದ್ಯಂಗೋ ತುಂಬಾ ಲಾಯಕ ಆಯ್ದು …

 3. ಬೊಳುಂಬು ಕೃಷ್ಣಭಾವ° says:

  “ಈ ಬೈಲಿಂಗೆ ಬಾರದ್ದ ಹವ್ಯಕರು ಬರೇ ಬೆಪ್ಪಂಗೊ!”
  ಛೇ ಛೇ ಇದು ಬೇಕಾತಿಲ್ಲೆ ಅಪ್ಪಚ್ಚಿ.

 4. ಚೆನ್ನೈ ಭಾವ says:

  ಛೆ ಛೆ ಇದರಾನೋಪ್ಪೆ. ಇಲ್ಲೆ ಹೇಳಿದ ಎಲ್ಲವೂ ಇದ್ದು ಇಲ್ಲಿ.

  • ಬೊಳುಂಬು ಕೃಷ್ಣಭಾವ° says:

   ಎಂತ ಇದ್ದರೂ “ರೇಟ್ ಪೋಯಿ” ಹೇಳ್ತ ಬಸ್ಸುಗೊ ಇದ್ದೋ? ಅವು ಕುಶಾಲಿಂಗೆ ಬರದ್ದದು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *