Oppanna.com

ನಮ್ಮ ಬೈಲಿನ ಬಗ್ಗೆ ಒಂದೆರಡು ದ್ವಿಪದಿಗೊ!

ಬರದೋರು :   ನೀರ್ಕಜೆ ಮಹೇಶ    on   15/07/2010    31 ಒಪ್ಪಂಗೊ

ನೀರ್ಕಜೆ ಮಹೇಶ

ಈ ದ್ವಿಪದಿ ಹೇಳುದು ಎನಗೆ ಭಾರಿ ಲಾಯಿಕ ಅಪ್ಪದು. ೧೦೦ ಶಬ್ದಲ್ಲಿ ಹೇಳುದರ ಸಣ್ಣಕ್ಕೆ ಎರಡು ಗೆರೆಲೇ ಹೇಳುಲೆ ಆವುತ್ತು ಹೇಳಿ ಇದ್ದರೆ ಅದಕ್ಕಿಂತ ಗಮ್ಮತ್ತು ಎಂತ ಇದ್ದು ಹೇಳಿ? ಸಾಲದ್ದಕ್ಕೆ ಅದರ ಓದುವವಂಗೆ ಅದರ ಅರ್ಥಮಾಡಿಯೊಂಬಲೆ ಚೂರು ತಲೆ ಓಡ್ಸೆಕ್ಕಾವುತ್ತು. ಒಂದೇ ಕವಿತೆಗೆ ಬೇರೆ ಬೇರೆ ಅರ್ಥ ಬಕ್ಕು ಬೇರೆ ಬೇರೆ ಓದುಗರಿಂಗೆ! ಇರಲಿ, ಒಪ್ಪಣ್ಣನ ಬೈಲಿನ ಬಗ್ಗೆ ಒಂದೆರಡು ದ್ವಿಪದಿ ಬರವ ಹೇಳಿ ಕಂಡತ್ತು. ಅಜಕ್ಕಾನ ಭಾವ ದ್ವಿಪದಿ ಹೇಳ್ರೆ ಹರುದು ಬೀಳ್ತವು. ಅದೆಂತ ಹೆದರಿಕೆಯೋ? ಗೊಂತಿಲ್ಲೆ. ಅವರ ಕ್ಷಮೆ ಕೇಳಿ ಇದೋ ಶುರು ಮಾಡಿದೆ :
೧.
ಒಪ್ಪಣ್ಣನ ಬೈಲಿಲಿತ್ತವಕ್ಕೆ ಸಿಕ್ಕುತ್ತು ಬೆಶಿ ಬೆಶಿ ಒಪ್ಪಂಗೊ
ಈ ಬೈಲಿಂಗೆ ಬಾರದ್ದ ಹವ್ಯಕರು ಬರೇ ಬೆಪ್ಪಂಗೊ!
೨.
ಒಪ್ಪಣ್ಣನ ಬೈಲಿಲಿ ಹಾಕುತ್ತವು ಚೆಂದ ಚೆಂದದ ಪಟ
ಅದಕ್ಕೆ ಕಮೆಂಟು ಬರವಲೆ ಹೋದರೆ ಮಾತ್ರ ಎಲ್ಲ ತಟಪಟ!
೩.
ಒಪ್ಪಣ್ಣನ ಬೈಲಿಲಿ ಎಲ್ಲಾ ಬಗೆಯ ಲೇಖನಂಗಳೂ ಇದ್ದು
ಏನೂ ಬರೆಯದ್ದೆ ಉದಾಸಿನ ಮಾಡುವವಕ್ಕೆ ಬೇಕು ಒಂದು ಗುದ್ದು!
೪.
ಒಪ್ಪಣ್ಣನ ಬೈಲಿಲೆ ಮಳೆ ಬಪ್ಪದು ಯೇವಗ?
ನಮ್ಮ ನೆಗೆಗಾರಣ್ಣ ಕಾಮೆಂಟು ಬರದಪ್ಪಗ!
ಇನ್ನು ದ್ವಿಪದಿಗಳ ಹೇಳ್ರೆ ಮೈಲು ದೂರ ಓಡುವ ಅಜಕ್ಕಾನ ಭಾವನಂಥೋರಿಂಗೆ ಒಂದು ಚೂರು ದೊಡ್ಡ ಕವನವೂ ಇದ್ದು :
ಒಪ್ಪಣ್ಣನ ಬೈಲಿಲಿ ಇಪ್ಪದು ಬರೇ ಅಕ್ಷರಂಗೊ
ಗಣಕಲ್ಲಿ ಕುಟ್ಟಿದ ಒಣ ಲೇಖನಂಗೊ
ಹುಲ್ಲಿಲ್ಲೆ ದನ ಇಲ್ಲೆ ಕೆದೆ ಇಲ್ಲೆ
ಅಡಕ್ಕೆ ತೋಟ ಇಲ್ಲೆ ತೆಂಗಿನ ಮರ ಇಲ್ಲೆ
ಕಾಟು ಹುಳಿ ಮಾವಿನ ಗೊಜ್ಜು ಇಲ್ಲೆ
ತೋಟದ ಕರೇಣ ಎಳತ್ತು ಗುಜ್ಜೆ ಇಲ್ಲೆ
ದನದ ಮೈ ಪರಿಮಳ ಇಲ್ಲೆ ದಾಸನ ಹೂಗು ಇಲ್ಲೆ
ಮುಟ್ಟಾಳೆ ಕಿಳಿಂಜೇಲು ಇಲ್ಲೆ ಉದ್ದ ಕೊಡೆ ಇಲ್ಲೆ
ತರವಾಡು ಮನೆ ಇಲ್ಲೆ ಗುರಿಕ್ಕಾರ ಇಲ್ಲೆ
ಊರ ದೇವಸ್ಥಾನ ಇಲ್ಲೆ ಜಾತ್ರೆ ಇಲ್ಲೆ
ಜಂಬ್ರ ಇಲ್ಲೆ ಘಮ ಘಮ ಜಂಬ್ರದ ಊಟ ಇಲ್ಲೆ
ವೇಸ್ಟಿ ಸುತ್ತಿಯೊಂಡು ಹಂತಿಲಿ ಕೂದು ಚೂರ್ಣಿಕೆ ಹೇಳುಲಿಲ್ಲೆ
ಆಟ ಇಲ್ಲೆ ಕೊಶಿ ಅಕ್ಕಿ ಅಶನ ಊಟ ಇಲ್ಲೆ
ಜಡಿಗುಟ್ಟಿ ಬಪ್ಪ ಮಳೆ ಇಲ್ಲೆ ಬೆಗರು ಬಿಚ್ಚುವ ಕೆಲಸ ಇಲ್ಲೆ
ಬಾಯಿ ಕೆಂಪು ಮಾಡುವ ಎಲೆ ಅಡಕ್ಕೆ ಇಲ್ಲೆ
ಹೊಟ್ಟೆ ತಂಪು ಮಾಡುವ ಮಜ್ಜಿಗೆ ಇಲ್ಲೆ
ರೇಟ್ ಪೋಯಿ! ಊರಿನ ಬಸ್ಸು ಇಲ್ಲೆ
ಯಾರಿಗೇS ಉದಯವಾಣಿ ತರಂಗ.. ಪೇಪರುಗೊ ಇಲ್ಲೆ
ಕೊಂಕಣಿ ಹೋಟ್ಲಿನ ಬನ್ನು ಇಲ್ಲೆ ಗೋಳಿಬಜೆ ಇಲ್ಲೆ
ಕುಂಟಲ ಹಣ್ಣು ತಿಂದೊಂಡು ಶಾಲೆಗೆ ಹೋಪ ಮಕ್ಕ ಇಲ್ಲೆ
.
.
.
ಇಷ್ಟೆಲ್ಲ ಇಲ್ಲದ್ದರೂ ಚಿಂತಿಲ್ಲೆ
ಎಂತಕ್ಕೆ ಹೇಳ್ರೆ ಈ ಇಲ್ಲದ್ದರ ಎಲ್ಲ
ಯೋಚನೆ ಮಾಡಿಯೊಂಡು ಇರ್ತವಲ್ಲ ಹವ್ಯಕರು ಇಲ್ಲೇ!!

31 thoughts on “ನಮ್ಮ ಬೈಲಿನ ಬಗ್ಗೆ ಒಂದೆರಡು ದ್ವಿಪದಿಗೊ!

  1. ಛೆ ಛೆ ಇದರಾನೋಪ್ಪೆ. ಇಲ್ಲೆ ಹೇಳಿದ ಎಲ್ಲವೂ ಇದ್ದು ಇಲ್ಲಿ.

    1. ಎಂತ ಇದ್ದರೂ “ರೇಟ್ ಪೋಯಿ” ಹೇಳ್ತ ಬಸ್ಸುಗೊ ಇದ್ದೋ? ಅವು ಕುಶಾಲಿಂಗೆ ಬರದ್ದದು…

  2. “ಈ ಬೈಲಿಂಗೆ ಬಾರದ್ದ ಹವ್ಯಕರು ಬರೇ ಬೆಪ್ಪಂಗೊ!”
    ಛೇ ಛೇ ಇದು ಬೇಕಾತಿಲ್ಲೆ ಅಪ್ಪಚ್ಚಿ.

  3. ಅಪ್ಪಚ್ಚಿ … ದ್ವಿಪದಿಗೋ, ಪದ್ಯಂಗೋ ತುಂಬಾ ಲಾಯಕ ಆಯ್ದು …

  4. ಮಾವಾ ನಿಂಗ ಲಾಯಿಕ ಬರೆತ್ತಿ ಆತೋ. ನಿನ್ನುದೆ ಬರೆಯಿ ಆತೋ. ಅತ್ತೆ ಎಂತ ಮಾಡ್ತವು.

  5. ಪ್ರತಿಕ್ರಿಯಿಸಿದ ಎಲ್ಲಾ ಹವೀಕರಿಂಗೂ ಧನ್ಯವಾದಂಗೊ..

  6. ಅಯ್ಯೋ, ಶಿವಶಿವಾ..
    ಈ ಬಿಂಗಿ ಮಕ್ಕಳ ಅವಸ್ತೆ ಕಂಡು ಒಂದು ಮಾತು ಕೇಳ್ತೆ..
    (ಎರಡ್ಣೇ ಗೆರೆ ಮರದತ್ತು,ನೆಂಪಾದ ಮತ್ತೆ ಹೇಳ್ತೆ.. ) 😉 🙁

    1. ಹ ಹ ಹಾ… ಸೂಪರ್.. ಅದಕ್ಕೇ ಹೇಳಿದ್ದು ಆನು.. ನೆಗೆಗಾರಣ್ಣ ಕಮೆಂಟು ಬರದಪ್ಪಗ… ಹೇಳಿ!

  7. ಒಪ್ಪಣ್ಣನ ಬಯಲಿನ ಬಗ್ಗೆ ಬರದ ದ್ವಿಪದಿ ಮತ್ತೆ ಕವನ ಅರ್ಥಪೂರ್ಣವಾಗಿ ಲಾಯಿಕ್ ಆಯಿದು. ಇನ್ನೂದೆ ಹೀಂಗೆ ಬರೆತ್ತಾ ಇರಿ.

    1. ಧನ್ಯವಾದ.. ಖಂಡಿತ ಬರೆತ್ತೆ…

  8. @ನೀರ್ಕಜೆ ಅಪ್ಪಚ್ಚಿ , ಒಪ್ಪಿದೆ ಅಪ್ಪಾ, ಒಪ್ಪಿದೆ ಅಪ್ಪಾ…. ಭಾರೀ ಲಾಯಿಕ ಆಯಿದು ಪದ್ಯ ಬರದ್ದು ಮಾಂತ್ರ……

        1. @ಅಜಕ್ಕಾನ ಭಾವ, ನೆಗೆಗಾರ ಭಾವ…ನಿಂಗ ಎಲ್ಲೋರು ಸೇರ್ಯೊಂಡು ಅವರ ನೀರು ನೀರ್ ಮಾಡೆಡಿ….. ಮದಲೇ ಬೆಗರುದು ಜಾಸ್ತಿ ನಿಂಗಳ ಅಪ್ಪಚ್ಚಿ…

  9. ರಾಮ ರಾಮಾ….. ಎಂತಾವುತ್ತಾ ಇದ್ದು ಇಲ್ಲಿ…..?
    {ಇನ್ನು ದ್ವಿಪದಿಗಳ ಹೇಳ್ರೆ ಮೈಲು ದೂರ ಓಡುವ ಅಜಕ್ಕಾನ ಭಾವನಂಥೋರಿಂಗೆ ಒಂದು ಚೂರು ದೊಡ್ಡ ಕವನವೂ ಇದ್ದು }:@ಅಜಕ್ಕಾನ ಭಾವ , ದ್ವಿಪದಿ ಓದಿಯೇ ಮೈಲು ದೂರ ಓಡಿದರೆ, ಈಗ ಈ ದೊಡಾ ಕವನ ಓದಿ ಎಲ್ಲಿಗೆತ್ತಿದಿಯಪ್ಪೋ….. ಶಿವ ಶಿವಾ……..

    1. ಚೇ ಹೆಸರು ಬದಲ್ಸೆಡಿ ಹೇಳಿರೆ ಕೇಳ್ತಿಲ್ಲೆಯೊ ಚಿಕ್ಕಮ್ಮಾ..
      @{ಈಗ ಈ ದೊಡಾ ಕವನ ಓದಿ ಎಲ್ಲಿಗೆತ್ತಿದಿಯಪ್ಪೋ}
      ಅಜ್ಜಕಾನ ಬಾವ ಕವನ ದೊಡ್ಡ ಆದ್ರೆ ಹತ್ರ ಬಪ್ಪದು… ಅದಕ್ಕೆ ಅಪ್ಪಚ್ಚಿ ಬರದ ಕೂಡ್ಲೆ ಒಪ್ಪ ಕೊಟ್ಟದು…
      ಅಜ್ಜಕಾನ ಬಾವ ಬರದ ಪದ್ಯಕ್ಕೆ ಅಪ್ಪಚ್ಚಿಯ ಸುದ್ದಿಯೇ ಇಲ್ಲೆ.. ಚಿಕ್ಕಮ್ಮ ಆದ್ರೂ ಓದಿದ್ದಿರಾ ಇಲ್ಲೆಯಾ..

      1. @ಅಜ್ಜಕಾನ ಬಾವ {ಕವನ ದೊಡ್ಡ ಆದ್ರೆ ಹತ್ರ ಬಪ್ಪದು.} ಓ ಹಾಂಗೆ ಅಂಬಗ….. ಆನು ಓದಿದೆ ,… ಆದರೆ ಆನು ಹಾಂಗೆಲ್ಲಾ ಅಪ್ಪಚ್ಚಿಗೆ ಬೈವ ಕ್ರಮ ಇಲ್ಲೆ.. ಆನು ಪಾSSSSSಪ……

          1. ಸರೀ ನೋಡಿ, ಮೀಸೆ ತಿರುವುತ್ತಾ ಇದ್ದವು ನಿಂಗಳಾ ಅಪ್ಪಚ್ಚಿ….

      2. ಬೇಜಾರು ಮಾಡ್ದಿ ಭಾವ… ಪ್ರತಿಕ್ರಿಯೆ ಬರವಲೆ ಪುರುಸೊತ್ತಪ್ಪಲಿಲ್ಲೆ ಇದ.. ಅದಕ್ಕೇ…

    2. { ಎಲ್ಲಿಗೆತ್ತಿದಿಯಪ್ಪೋ }
      ಎಲ್ಲಿಗಾರು ಹೋವುತ್ತೆ ಹೇಳಿ ಹೆರಟ°..
      ಕೃಷ್ಣಬಸ್ಸಿಲಿ ರಶ್ಶಿತ್ತಡ, ಒಪಾಸು ಬಂದ°..
      ಚೆ! 😉

        1. @ಸರೀ ನೋಡಿ, ಮೀಸೆ ತಿರುವುತ್ತಾ ಇದ್ದವು ನಿಂಗಳಾ ಅಪ್ಪಚ್ಚಿ…
          ಇಲ್ಲಿ ಗೊಂತಪ್ಪಲೇ ಆಗ ಹೇಳಿ ಬದುಲಿಸಿದ್ದು.. ಅದೆಂತದೋ ಇದ್ದಲ್ಲದ ಓರುಕುಟ್ಟು ಅಲ್ಲಿ ನೋಡಿದ್ದೆಯ ಎಂಗೊ..

          1. {ಅದೆಂತದೋ ಇದ್ದಲ್ಲದ ಓರುಕುಟ್ಟು ಅಲ್ಲಿ ನೋಡಿದ್ದೆಯ ಎಂಗೊ.. } ಅದು ಆನು ತೆಗದ ಪಟ….. ಅಪ್ಪಚ್ಚಿಗೆ ಗೊಂತಾಗದ್ದ ಹಾಂಗೆ! 🙂

          2. ಇದಾ ಭಾವ, ಶೆನಿವಾರ, ಆಯಿತ್ಯವಾರ ಕಂಪ್ಯೂತರ್ ಕುಟ್ಟುಲೆ ಆವುತ್ತಿಲ್ಲೆ… ಎನಗೆ ವೀಕ್ಲಿ ೨ ದಿನ ರಜೆ….

  10. ನೀರ್ಕಜೆ ಅಪ್ಪಚ್ಚಿ ಅವರ ನಿಜ ಪ್ರತಿಭೆಯ ಸಾದರ ಪಡುಸಿದ್ದವು ಇಲ್ಲಿ, ಭಾರೀ ಖುಷಿ ಆತು…

  11. ಪೇಟೆಲಿ ತಂಪು ಕೋಣೆಲಿ ಕೂದೊಂಡು ತಲೆ ಬೆಶಿ ಮಾಡಿಯೊಂಡ ನೀರ್ಕಜೆ ಅಪ್ಪಚ್ಚಿ..!
    ಮನೇಲಿ ಬಿಸಿ ಪಾತ್ರೆಲಿ ಅಶನ ಮಾಡಿಯೊಂಡು ಕಾದ ಚಿಕ್ಕಮ್ಮನ್ನನ ಬೈಗಳು ಕೇಳಿ ಆದ ಅಪ್ಪಚ್ಚಿ..!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×