ಗೆಣಂಗು ಮೇಲೆಯೋ, ಬಟಾಟೆ ಮೇಲೆಯೋ?

May 25, 2011 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 56 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನ್ನಾಂಗಿದ್ದ ಪಾಪದವ ಎಂತೆಲ್ಲ ಮಾಡ್ಳಿ, ಪುರ್ಸೊತ್ತೇ ಸಿಕ್ಕುತ್ತಿಲ್ಲೆ.ಬೈಲಿಂಗೆ ಬಾರದ್ದೆ ತುಂಬ ದಿನ ಆದರೂ ಈ ಅಜ್ಜಿ ಪರಂಚುತ್ತವಪ್ಪ! :-(
ಇಂಗ್ಳೀಶು ಕಲಿವದು ರಜ್ಜ ಹಿಂದೆಬಿದ್ದದೂ ಹಾಂಗೇ, ಈ ತೆರಕ್ಕುಗಳಿಂದಾಗಿ. ನಿಂಗೊ ಎನಗೇ ಬೈವಿ – ಮನಸ್ಸಿಲ್ಲೆ ಮಾಣಿಗೆ, ಹಾಂಗೆ ಕಲಿಯದ್ದು ಹೇಳಿಗೊಂಡು. ಆದರೆ

ನಿಜ ಸಂಗತಿ ಎನಗೆ ಮಾಂತ್ರ ಗೊಂತು ಅಲ್ದೋ?, ಪಾಪ!  ಹೇಳಿಕೆ ಹೇಳಿದ ಮತ್ತೆ ಜೆಂಬ್ರಕ್ಕೆ ಹೋಯೆಕ್ಕು, ಹಾಂಗೆ ಜೆಂಬ್ರಂಗೊ ರಜ ಮುಗಿಯಲಿ ಹೇಳಿ ಕಾವದು ಅಷ್ಟೆ.
ಮೊನ್ನೆ ಸುಬಗಣ್ಣ ಒಂದು ಜೆಂಬ್ರಲ್ಲಿ ಸಿಕ್ಕಿ ಲೊಟ್ಟೆಕತೆ ಹೇಳಿ ಎನ್ನ ತಲೆಹಾಳು ಆಯಿದು. ಎನಗೆ ಮಾಂತ್ರ ಎಂತಕೆ, ನಿಂಗೊಗುದೇ ಹಾಂಗೇ ಆಗಲಿ ಹೇಳಿಗೊಂಡು, ಆ ಕತೆಯ ಬೈಲಿಂಗೇ ಹೇಳಿಗೊಂಡಿದ್ದೆ.

:-) :-) :-)

ಒಂದಾನೊಂದು ಕಾಲಲ್ಲಿ, ಒಂದು ಊರಿಲಿ ಬಟಾಟೆಯೂ – ಗೆಣಂಗೂ ಚೆಂಙಾಯಿಗೊ ಆಗಿತ್ತಿದ್ದವಡ.
ಒಂದರಿ ಅವರಿಬ್ರಲ್ಲಿ ಮನಸ್ತಾಪ ಬಂತಡ. ಆನುಮೇಲೆ – ಆನುಮೇಲೆ ಹೇಳಿಗೊಂಡು.
ಜಗಳವ ಇತ್ಯರ್ಥ ಮಾಡ್ಳೆ ಆ ಊರಿನ ರಾಜ ಕುಂಬ್ಳಕಾಯಿಯ ಹತ್ತರೆ ಹೋಪದು ಹೇಳಿ ನಿಜಮಾಡಿದವಡ.
ತಾನು ಎಂತಕೆ ಆಚದರಿಂದ ಮೇಲೆ  – ಹೇಳುದಕ್ಕೆ ಸುಮಾರು ಕಾರಣಂಗಳ ಎರಡುದೇ ಪಟ್ಟಿಮಾಡಿಗೊಂಡು ಹೋದವಡ; ದಾರಿಲಿ ಹೋಪಗಳೂ ಜಗಳಮಾಡಿಗೊಂಡೇ ಹೋದವಡ.
ರಾಜ ಇಬ್ರ ವಾದವನ್ನುದೇ ಶಾಂತವಾಗಿ ಕೇಳಿ, ಉತ್ತರ ಹೇಳ್ತನಡ.

ಈ ಲೊಟ್ಟೆಕತೆ ಕೇಳಿದವುದೇ ಯಾವದಾರು ಒಂದು ಕಡೆಂಗೆ ಸೇರೆಕ್ಕಡ – ಹೇಳಿ ಲೊಟ್ಟೆ ಕತೆ ಮುಗುಶಿ ಸುಬಗನ ಹಾಂಗೆ ಕೂದೊಂಡ!
ಈಗ ಹೇಂಗೂ ಜೆಂಬ್ರದ ಸಮೆಯ ಅಲ್ದಾ – ಹಾಂಗಾಗಿ ಅದರ ಬಗ್ಗೆ ಮಾತಾಡುದು ಹೆಚ್ಚು ಸೂಕ್ತ ಹೇಳಿ ಚೆನ್ನೈಬಾವಂದೇ ಹೇಳಿದವು.

ನಿಂಗಳ ಪ್ರಕಾರ ಬಟಾಟೆ- ಗೆಣಂಗಿಲಿ ಯೇವದು ಮೇಗೆ?
ಸುಬಗಣ್ಣನೂ, ಆನೂ ಸೇರಿ ಸುಮಾರು ಆಲೋಚನೆ ಮಾಡಿ ಒಂದೊಂದೇ ಕಾರಣಂಗಳ ಹುಡ್ಕಿದೆಯೊ. ಅಜ್ಜಕಾನ ಬಾವ, ಚೆನ್ನೈಬಾವ, ಮುಳಿಯಬಾವ, ಎಲ್ಲೋರುದೇ ಸೇರಿದ್ದವು.
ಬನ್ನಿ, ನಿಂಗಳೂ ಹೇಳಿ.
ಬಟಾಟೆಲಿ ಎಂತೆಲ್ಲ ಮಾಡ್ಳೆಡಿತ್ತು, ಗೆಣಂಗಿಲಿ ಎಂತೆಲ್ಲ ಮಾಡ್ಳೆಡಿತ್ತು / ಯೇವದರ್ಲಿ ಎಂತರ ಮಾಡ್ಳೆಡಿತ್ತಿಲ್ಲೆ – ಎಲ್ಲವನ್ನೂ ಅಲ್ಲಿ ಮಾತಾಡುವೊ.

ಸೂ: ನೆಗೆಯ ಉತ್ತರ ಬರೆಯಿ. ಚೆಂದದ ಉತ್ತರ ಬರದು ನಿಂಗಳ ಪಾರ್ಟಿ ಗೆಲ್ಲುಸಿದರೆ ನಿಂಗೊಗೆ ಗೆದ್ದ ಗೆಂಡೆ ನಾಕು ಕೇಜಿ ಕೊಡಲಾಗುವುದು!

ಗೆಣಂಗು ಮೇಲೆಯೋ, ಬಟಾಟೆ ಮೇಲೆಯೋ?, 3.5 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 56 ಒಪ್ಪಂಗೊ

  1. ಶ್ರೀಶ

    ಪೋಡಿ ಆದರೆ ಎನಗೆ ಕೊಡದ್ದೆ ತಿನ್ನೆಡ.ಹೊಟ್ಟೆಬೇನೆ ಆಕ್ಕು.ಮತ್ತೆ ಅಬ್ಬೆ ಬೈಗಿದಾ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ದೊಡ್ಡಭಾವಶ್ರೀಅಕ್ಕ°ಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ಗಣೇಶ ಮಾವ°ಬೋಸ ಬಾವಡೈಮಂಡು ಭಾವಅನು ಉಡುಪುಮೂಲೆಅಜ್ಜಕಾನ ಭಾವಜಯಶ್ರೀ ನೀರಮೂಲೆಚೆನ್ನಬೆಟ್ಟಣ್ಣಕಾವಿನಮೂಲೆ ಮಾಣಿಒಪ್ಪಕ್ಕಕಜೆವಸಂತ°ಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ಶ್ಯಾಮಣ್ಣಪೆಂಗಣ್ಣ°ವೆಂಕಟ್ ಕೋಟೂರುವಸಂತರಾಜ್ ಹಳೆಮನೆಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ವಿಜಯತ್ತೆಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ