Oppanna.com

ಗೆಣಂಗು ಮೇಲೆಯೋ, ಬಟಾಟೆ ಮೇಲೆಯೋ?

ಬರದೋರು :   ನೆಗೆಗಾರ°    on   25/05/2011    56 ಒಪ್ಪಂಗೊ

ನೆಗೆಗಾರ°

ಎನ್ನಾಂಗಿದ್ದ ಪಾಪದವ ಎಂತೆಲ್ಲ ಮಾಡ್ಳಿ, ಪುರ್ಸೊತ್ತೇ ಸಿಕ್ಕುತ್ತಿಲ್ಲೆ.ಬೈಲಿಂಗೆ ಬಾರದ್ದೆ ತುಂಬ ದಿನ ಆದರೂ ಈ ಅಜ್ಜಿ ಪರಂಚುತ್ತವಪ್ಪ! 🙁
ಇಂಗ್ಳೀಶು ಕಲಿವದು ರಜ್ಜ ಹಿಂದೆಬಿದ್ದದೂ ಹಾಂಗೇ, ಈ ತೆರಕ್ಕುಗಳಿಂದಾಗಿ. ನಿಂಗೊ ಎನಗೇ ಬೈವಿ – ಮನಸ್ಸಿಲ್ಲೆ ಮಾಣಿಗೆ, ಹಾಂಗೆ ಕಲಿಯದ್ದು ಹೇಳಿಗೊಂಡು. ಆದರೆ

ನಿಜ ಸಂಗತಿ ಎನಗೆ ಮಾಂತ್ರ ಗೊಂತು ಅಲ್ದೋ?, ಪಾಪ!  ಹೇಳಿಕೆ ಹೇಳಿದ ಮತ್ತೆ ಜೆಂಬ್ರಕ್ಕೆ ಹೋಯೆಕ್ಕು, ಹಾಂಗೆ ಜೆಂಬ್ರಂಗೊ ರಜ ಮುಗಿಯಲಿ ಹೇಳಿ ಕಾವದು ಅಷ್ಟೆ.
ಮೊನ್ನೆ ಸುಬಗಣ್ಣ ಒಂದು ಜೆಂಬ್ರಲ್ಲಿ ಸಿಕ್ಕಿ ಲೊಟ್ಟೆಕತೆ ಹೇಳಿ ಎನ್ನ ತಲೆಹಾಳು ಆಯಿದು. ಎನಗೆ ಮಾಂತ್ರ ಎಂತಕೆ, ನಿಂಗೊಗುದೇ ಹಾಂಗೇ ಆಗಲಿ ಹೇಳಿಗೊಂಡು, ಆ ಕತೆಯ ಬೈಲಿಂಗೇ ಹೇಳಿಗೊಂಡಿದ್ದೆ.

🙂 🙂 🙂

ಒಂದಾನೊಂದು ಕಾಲಲ್ಲಿ, ಒಂದು ಊರಿಲಿ ಬಟಾಟೆಯೂ – ಗೆಣಂಗೂ ಚೆಂಙಾಯಿಗೊ ಆಗಿತ್ತಿದ್ದವಡ.
ಒಂದರಿ ಅವರಿಬ್ರಲ್ಲಿ ಮನಸ್ತಾಪ ಬಂತಡ. ಆನುಮೇಲೆ – ಆನುಮೇಲೆ ಹೇಳಿಗೊಂಡು.
ಜಗಳವ ಇತ್ಯರ್ಥ ಮಾಡ್ಳೆ ಆ ಊರಿನ ರಾಜ ಕುಂಬ್ಳಕಾಯಿಯ ಹತ್ತರೆ ಹೋಪದು ಹೇಳಿ ನಿಜಮಾಡಿದವಡ.
ತಾನು ಎಂತಕೆ ಆಚದರಿಂದ ಮೇಲೆ  – ಹೇಳುದಕ್ಕೆ ಸುಮಾರು ಕಾರಣಂಗಳ ಎರಡುದೇ ಪಟ್ಟಿಮಾಡಿಗೊಂಡು ಹೋದವಡ; ದಾರಿಲಿ ಹೋಪಗಳೂ ಜಗಳಮಾಡಿಗೊಂಡೇ ಹೋದವಡ.
ರಾಜ ಇಬ್ರ ವಾದವನ್ನುದೇ ಶಾಂತವಾಗಿ ಕೇಳಿ, ಉತ್ತರ ಹೇಳ್ತನಡ.

ಈ ಲೊಟ್ಟೆಕತೆ ಕೇಳಿದವುದೇ ಯಾವದಾರು ಒಂದು ಕಡೆಂಗೆ ಸೇರೆಕ್ಕಡ – ಹೇಳಿ ಲೊಟ್ಟೆ ಕತೆ ಮುಗುಶಿ ಸುಬಗನ ಹಾಂಗೆ ಕೂದೊಂಡ!
ಈಗ ಹೇಂಗೂ ಜೆಂಬ್ರದ ಸಮೆಯ ಅಲ್ದಾ – ಹಾಂಗಾಗಿ ಅದರ ಬಗ್ಗೆ ಮಾತಾಡುದು ಹೆಚ್ಚು ಸೂಕ್ತ ಹೇಳಿ ಚೆನ್ನೈಬಾವಂದೇ ಹೇಳಿದವು.

ನಿಂಗಳ ಪ್ರಕಾರ ಬಟಾಟೆ- ಗೆಣಂಗಿಲಿ ಯೇವದು ಮೇಗೆ?
ಸುಬಗಣ್ಣನೂ, ಆನೂ ಸೇರಿ ಸುಮಾರು ಆಲೋಚನೆ ಮಾಡಿ ಒಂದೊಂದೇ ಕಾರಣಂಗಳ ಹುಡ್ಕಿದೆಯೊ. ಅಜ್ಜಕಾನ ಬಾವ, ಚೆನ್ನೈಬಾವ, ಮುಳಿಯಬಾವ, ಎಲ್ಲೋರುದೇ ಸೇರಿದ್ದವು.
ಬನ್ನಿ, ನಿಂಗಳೂ ಹೇಳಿ.
ಬಟಾಟೆಲಿ ಎಂತೆಲ್ಲ ಮಾಡ್ಳೆಡಿತ್ತು, ಗೆಣಂಗಿಲಿ ಎಂತೆಲ್ಲ ಮಾಡ್ಳೆಡಿತ್ತು / ಯೇವದರ್ಲಿ ಎಂತರ ಮಾಡ್ಳೆಡಿತ್ತಿಲ್ಲೆ – ಎಲ್ಲವನ್ನೂ ಅಲ್ಲಿ ಮಾತಾಡುವೊ.

ಸೂ: ನೆಗೆಯ ಉತ್ತರ ಬರೆಯಿ. ಚೆಂದದ ಉತ್ತರ ಬರದು ನಿಂಗಳ ಪಾರ್ಟಿ ಗೆಲ್ಲುಸಿದರೆ ನಿಂಗೊಗೆ ಗೆದ್ದ ಗೆಂಡೆ ನಾಕು ಕೇಜಿ ಕೊಡಲಾಗುವುದು!

56 thoughts on “ಗೆಣಂಗು ಮೇಲೆಯೋ, ಬಟಾಟೆ ಮೇಲೆಯೋ?

  1. ಪೋಡಿ ಆದರೆ ಎನಗೆ ಕೊಡದ್ದೆ ತಿನ್ನೆಡ.ಹೊಟ್ಟೆಬೇನೆ ಆಕ್ಕು.ಮತ್ತೆ ಅಬ್ಬೆ ಬೈಗಿದಾ.

  2. ಆರೆಂತ ಹೇಳಿದರೂ ನಮ್ಮ ಊರಿಲಿ ಬೆಳವ ಗೆಣಂಗೇ ಮೇಲು..ಹೇಂಗೆ ಹೇಳಿರೆ ಗೆಣಂಗು ಬೆಳೆಶುಲೆ ಬಾರೀ ಸುಲಭ ರಜ್ಜ ಬೂದಿ ಹಾಕಿ ನೆಟ್ಟು ಬಿಟ್ಟರೆ ಆತು ೩-೪ ತಿಂಗಳಿಲಿ ಒಕ್ಕುದೇ ಕೆಲಸ ಅಲ್ಲಿಗೆ ಮುಗಾತು..ಬಟಾಟೆ ನಮ್ಮಲ್ಲಿ ಬೆಳೆತ್ತಿಲ್ಲೆ ಅದು ಬೆಳವ ಊರಿಲಿ ಅದಕ್ಕೆ ಕಂಡಾಬಟ್ಟೆ ರಾಸಾಯನಿಕ ಗೊಬ್ಬರ +ವಿಶಂಗಳ ಹಾಕೆಕ್ಕಡ ಹಾಂಗೆ ಓದಿದ ನೆಂಪು.. ಗೆಣಂಗೋ ತಾಜಾ.. ವಿಶ ಎಂಬ ವಸ್ತ್ತುವೇ ಇಲ್ಲೆ ಅದರಲ್ಲಿ ಮತ್ತೆ ತಿಂದರೆ ಮರದಿನ ಹೊಟ್ಟೆ clean ಅಪ್ಪದಂತೂ ಗ್ಯಾರಂಟಿ.. ಅಂಬಗ ಯಾವದು ಮೇಲೆ ????

  3. ಹೋಯ್., ಆ ಫಟ ನೋಡಿದಿರೋ…

    ಅದಾ ಆ ಗೆಣಂಗಿನ ಕುತ್ತಿ ಕುತ್ತಿ ಗಾಯ ಮಾಡಿ ಒರಳೆ ಹಿಡುದ ಹಾಂಗೆ ಮಾಡಿ ತೋರ್ಸಿದ್ದವು . ಆದಾರು ಗೆಣಂಗು ತಾಪು ಮಾಡ್ಳೆ ಮಾಡಿದ್ದು!

  4. ಈ ಪೋಕ್ರಿ ನೆಗೆಮಾಣಿಗೆ ಸಿಕ್ಕಿದ ವಿಷಯವೇ!!!!

    ಅಡಿಗೆಗೆ ಎರಡುದೇ ಬೇಕು ಮಾಣಿ. ಬಟಾಟೆ ಆದರೆ ನವಗೆ ಯಾವಾಗಳೂ ಸಿಕ್ಕುತ್ತ ಒಂದು ದೇವರಲ್ಲದಾ? ಆಪದ್ಭಾಂಧವ!!
    ಬೇರೆ ತರಕಾರಿಗ ಮನೆಲಿ ತಪ್ಪಿದರೂ ಬಟಾಟೆ ತಪ್ಪ. ಅದರ ಜಾಗೆ ಕಾಲಿ ಇಪ್ಪದು ಇದ್ದೊ? ಗೆಣಂಗು ಅಪ್ರೂಪಲ್ಲಿ ಸಿಕ್ಕುತ್ತ ಕಾರಣ ಅದು ವಿಶೇಷದ್ದು ಅಪ್ಪದು.
    ಇನ್ನಾಣ ಸರ್ತಿ ಇಲ್ಲಿಗೆ ಬಂದಪ್ಪಗ ಆಲೂ ಪರೋಟವೂ, ಗೆಣಂಗು ಪರೋಟವೂ ಮಾಡಿ ನೋಡಿಕ್ಕಿ, ಮತ್ತೆ ಗೆಣಂಗಿನ ಜಾಮೂನುದೇ, ಬಟಾಟೆ ಜಾಮೂನುದೇ ಮಾಡುವ°. ಮತ್ತೆ ಯೇವುದು ಒಳ್ಳೆದು ನೋಡುವ ಆಗದೋ?

    1. ಅಕ್ಕಾ., ಶರ್ಬತ್ತು ಮಾಡುತ್ತರೆ ಬೋಸ ಭಾವನೂ, ಗೆಂಟನೂ ಬತ್ತನಡ. ಕಡವಲೆ ಅಜ್ಜಕ್ಕಾನ ಭಾವ ಬಕ್ಕೋ?!

  5. ಹಪ್ಪಾ ನೀನೇ… ಇಂಗ್ಳೀಶು ಕಲಿತ್ತದರ ಅಲ್ಲಿ ಅರ್ದಲ್ಲಿಯೇ ಬಿಟ್ಟಿಕ್ಕಿ ಬಂದು ಅಂತೇ ನೇಕಳೆತ್ತಾ ಇದ್ದೆಯೋ… ನೀನೋ ನಿನ್ನ ಸಂಶಯವೋ..
    ಈ ಸರ್ತಿಲಿ ನಿನಗೆ ಬಟಾಟೆ ಚಿಪ್ಪುಸುದೇ ಇಲ್ಲೆ, ಗೆಣಂಗಿನ ಪೋಡಿಯುದೇ ಇಲ್ಲೆ.. ನೋಡೊ..

  6. ಪೈಸೆ ಲೆಕ್ಕಾಚಾರ ಮಾಡಿರೆ ಬಟಾಟೆಗೆ ಬೆಲೆ ಹೆಚ್ಚಿಗೆ. ‘ಲೇಸ್’ (‘ ಗ್ಯಾಸ್’ಂಗೆ ಪ್ರಾಸಬದ್ದ ಅಪ್ಪಲೆ ಈ ಹೆಸರು ಕೊಟ್ಟದು ಆದಿಕ್ಕು…!) ಕಂಪೆನಿಯವು ಇದರಿಂದಾಗಿ ಒೞೆತ ಸಂಪಾದನೆ ಮಾಡ್ತಾ ಇದ್ದವು. ಮರಾಟಿಗ ‘ಬಟಾಟ ವಡ ” ಮಾಡ್ತವು, ಗೆಣಂಗು ವಡೆ ಇಲ್ಲೆ.
    ಗ್ಯಾಸು ಲೆಕ್ಕ ಹಾಕಿರೆ ಎರಡೂ ಮೇಲೆಯೇ….!

    1. ಬಟಾಟೆ ಒಟ್ಟಾರೆ ಎಲ್ಲೋರೂ ಎಲ್ಲದಕ್ಕೂ ಹಾಕಿ ಸಾಮಾನ್ಯ ಹೇಳಿ ಹೆಸರು ಹೇಳ್ಸಿದ್ದು (ತಾಳು, ಗೊಜ್ಜು, ಕೊದಿಲು, ಮೇಲಾರ, ಅವಿಲು, ಪೋಡಿ, ಅಂಗಡಿ ಹೋಟಲುಗಳಲ್ಲೂ ಕೂಡ). ಜಾತಿ ಭೇಧ ಇಲ್ಲದ್ದೆ . ಆದರೆ ನಮ್ಮ ಗೆಣಂಗು ಹಾಂಗೆ ಅಲ್ಲ. ಕಂಡ ಕಂಡದಕ್ಕೆ ಎಲ್ಲ ಹಾಕಲೆ ಇಲ್ಲೆ , ಕಾಟುಗೊಕ್ಕೆ ಉದರ ರುಚಿಯೂ ಅರಡಿಯ – ಉಪಯೋಗವೂ ಅರಡಿಯ. ಬ್ರಾಹ್ಮರಿಂಗೆ ಹೆಚ್ಚು ಪ್ರಿಯ. ‘ಬ್ರಾಹ್ಮಣೋ ಮಮ ದೇವತಾ’ ಹೇಳಿ ಆದ ಮತ್ತೆ ಇದು ದೇವರಿಂಗೂ ಪ್ರಿಯವಾದದ್ದು.

  7. ಮೊದಾಲು ಎರಡನ್ನೂ ಸರೀ 10ರೂಪಾಯಿಗೆ ಸಿಕ್ಕುವಷ್ಟು ತೆಗೆಕು (10ರೂ. ಗೆಣಂಗು & 10ರೂ. ಬಟಾಟೆ). ಆಮೇಲೆ ಅದೆರಡರ ತಕ್ಕಡಿಯ ಎರಡು ಬದಿಲಿ ಹಾಕಿ ಯಾವುದು ಮೇಲೆ ಹೋವುತ್ತೋ ಹೇಳಿ ನೋಡಿಯಪ್ಪಗ ಯಾವುದು ಮೇಲೆ ಹೇಳಿ ಗೊಂತಕ್ಕು.

    1. ಇದು ಶುದ್ದ ಪೊಲಿಟಿಕ್ಸು… 🙁 ಗೆಣಂಗು ಚೀಪ್ ಆದಕಾರಣ ೧೦ ರೂಪಾಯಿಗೆ ಜಾಸ್ತಿ ಸಿಕ್ಕುತ್ತು. ಬಟಾಟೆ ಕಮ್ಮಿ ಸಿಕ್ಕುದು. ತ್ರಾಸಿಲಿ ಬಟಾಟೆಯೇ ಮೇಲೆ ಹೋಪದು…

  8. ಯಾವದರಿಂದ ಹೆಚ್ಚು ಗ್ಯಾಸು ಉತ್ಪತ್ತಿ ಆವುತ್ತೋ ಅದೇ ಮೇಲೆ ಹೇಳ್ಲಕ್ಕು… ಎಂತಕೆ ಹೇಳಿರೆ ಗ್ಯಾಸು ತುಂಬಿದ ಪುಗ್ಗೆ ಹೆಚ್ಚೆಚ್ಚು ಮೇಲೆ ಹೋಪದಲ್ಲದೋ?

  9. ಓ ಭಾರೀ ಪಸ್ಟಾಯಿದು ಬರದ್ದು!! ಅದೂ ಈ ಗ್ಯಾಸಿ೦ಗೆ ರೇಟು ಜಾಸ್ತಿ ಅವ್ತ ಇಪ್ಪ ಟೈಮಿಲಿ ಎನ್ಥ ಹೇಳ್ತಿ? ನೆಗೆಗಾರ ನೆಗೆ ಮಾಡ್ಥದು ಗೆಣ೦ಗು ಮತ್ತು ಬಟಾಟೆ ತಿ೦ದವರ ನೋಡಿಯೊ(ಕೇಳಿಯೊ) ಹೇ೦ಗೆ ಅ೦ಬಗ?

    ರಘು ಭಾವ೦ದು ಪದ್ಯ ಪಶ್ಟಾಯಿದು.

    ಬಟಾಟೆ ಮೇಲೆಯೊ ಗೆಣ೦ಗು ಮೇಲೆಯೊ ಹೇಳಿ ತಿ೦ದು ಹೇಳಿದರೆ ಒೞೇದಲ್ಲದೊ? ಶುರುವಿ೦ಗೆ ಎಲ್ಲರಿ೦ಗೂ ಹ೦ಚುತ್ತಿದ್ದರೆ ಹೇಳುತ್ತಿದ್ದವೊ ಎನೊ?ಅಲ್ಲದಾ? ಸರಿಯಾಗಿ!!!!

  10. ನೆಗೆಮಾಣಿಯ ಸ೦ಗಾತಕ್ಕೆ ಹೋದರಕ್ಕೊ ಒ೦ದಾರಿ?

    ಲಾಲುವಿಲ್ಲದ ಲೋಕಸಭೆಲಿ ಏರುಗೊ ಮತ್ತು
    ಆಲುವಿಲ್ಲದ ಕೊದಿಲು ತಾರ ಗಮ್ಮತ್ತು
    ಕಾಲದೇಶವ ಮೀರಿ ಸಾರಸತ್ವವನಾ೦ತ
    ಸಾಲ ಹೊಗಳಿದರೆಷ್ಟು ಮಹಿಮಾತಿಶಯನಾ II

    ಬಾಜಿಯಿಲ್ಲದ ದೋಸೆ ತಿ೦ದು ನೋಡಿದರೆನಗೆ
    ಯಾಜಿಯಿಲ್ಲದ ಯಾಗ ನೋಡಿದನುಭವವೂ
    ರಾಜಿಯಾಗಿಯೆ ಗ೦ಸಿ ಬೈಲಿನೊಳ ಬಾ೦ಧವರು
    ಸಾಜ ಬಕ್ಕೀ ಗೆಡ್ಡೆ ತಿ೦ದು ಬಾಳಿದರೇ II

    1. ವಾಹ್ ವಾಹ್! 😉 ಲೋಕಸಭೆಗೂ ಲಾಲುವಿಂಗೂ ಒಳ್ಳೆ ಜತೆ.. ಆಲೂವಿಂಗೋ ಕೊದಿಲಿಂಗೂ ಭಾರಿ ಹತ್ತರೆ.. “ಮಹಿಮಾತಿಶಯ” ಹೇಳಿದ್ದು ಪಷ್ಟಾಯಿದು!!

  11. ಅದರ್ಲಿ ಇಷ್ಟು ತಲಬೆಶಿ ಮಾಡ್ಲೆ ಎಂತ ಇದ್ದು ಮಾರಾಯನೆ! ಗೆಣಂಗೋ, ಬಟಾಟೆಯೋ, ಯಾವುದರ ಮೇಲೆ ಮಡಗಿದ್ದೆಯೋ ಅದುವೇ ಮೇಲೆ ಇಕ್ಕಷ್ಟೆ ಅನ್ನೆ! 😉

    1. ಏ ಮಾಣಿ,
      ಪ್ರಶ್ನೆ ಇಪ್ಪದು ಅದುವೇ ಈಗ.
      ಯಾವುದರ ಮೇಗೆ ಮಡುಗುದು ಹೇಳಿ.
      ನೆಗೆ ಮಾಣಿಗೆ “ನೀನು ನೆಗೆ ಮಾಡಿರೆ ಬಟಾಟೆ ಹಾಂಗೆ ಕಾಣುತ್ತೆ” ಹೇಳಿ ಉಬ್ಬಿಸಿ ಬಿಟ್ಟಿದವು.
      ಸುಭಗರಿಂಗೋ, ಸುಡ್ಲೆ ಗೆಣಂಗೇ ಆಯೆಕ್ಕಷ್ಟೆ (ಬಟಾಟೆ ಆವ್ತಿಲ್ಲೆ ಅಡ).
      ಇವೆರಡ ಮಧ್ಯೆ ರಘವಿನ ಚೌಪದಿಯ ಸುಗ್ಗಿ.
      ಫಕ್ಕನೆ ಇತ್ಯರ್ಥ ಆದರೆ ಅದ್ವೈತ ಕೀಟಕ್ಕೆ ಎಂತ ಕೆಲ್ಸ ಮತ್ತೆ?

      1. ಓ, ಅದೂ ನಿಜವೇ,, ಆದರೆ ಊಟದ ನಂತರ ಪರಿಮಳ ಪಸರಿಸುವ ಮಟ್ಟಿಂಗೆ ಎರಡುದೇ ಉಶಾರಿಯೇ.. ಯಕ್ಷಪ್ರಶ್ನೆಯ ಹಾಂಗಾತೋ ಹೇಳಿ.. 🙂 ಬಂಡಾಡಿ ಅಜ್ಜಿಯತ್ರೆ ಸ್ಟೋರ್ ರೂಮಿಲಿ ಯಾವುದರ ಮೇಗೆ ಮಡುಗಿತ್ತು ಯಾವುದರ ಕೆಳ ಮಡುಗಿತ್ತು ಹೇಳಿ ಇಚಾರ್ಸಿರೆ ಗೊಂತಕ್ಕೋ ಏನೋ>….. 😉

  12. ಏ ನೆಗೆಗಾರೋ… ನೀನು ಬಟಾಟೆಯೇ ಮೇಲು ಹೇಳಿ ಎನ್ನತ್ರೆ ನ್ಯಾಯ ಕೊಟ್ಟಂಡು ಸೋತು ಅಕೇರಿಗೆ ಬೈಲಿಲ್ಲಿಯಾದರೂ ಸಪೋರ್ಟು ಸಿಕ್ಕುಗು ಜಾನ್ಸಿ ಆ ಲೊಟ್ಟೆಕತೆಯ ಇಲ್ಲಿ ಹೇಳಿದೆ. ನೋಡು- ಈಗ ಎಂತಾತು..? ಡೆಲ್ಲಿಗೆ ವರದಿ ಕಳುಸಿದ ಭಾರದ್ವಾಜಂಗೆ ಆದಾಂಗೆ ಆತು ನಿನ್ನ ಅವಸ್ಥೆ!

    ಆಹಾ! ಮುಳಿಯ ಭಾವ ಎಷ್ಟು ಚೆಂದಕೆ ಗುಣಗಾನ ಮಾಡಿದ್ದವು ಗೆಣಂಗಿನ!

    ಆಯಿದಿಲ್ಲೆ; ಗೆಣಂಗಿನ ಗುಣಂಗೊ ಇನ್ನೂ ಇದ್ದು ನೋಡು..

    ಸೀತಾ ರಾಮ ಲಕ್ಷ್ಮಣರು ವನವಾಸ ಕಾಲದಲ್ಲಿ ಗೆಡ್ಡೆ ‘ಗೆಣಸು’ಗಳನ್ನು ತಿಂದರು ಹೇಳಿ ಇಪ್ಪದು ರಾಮಾಯಣಲ್ಲಿ. ‘ಬಟಾಟೆಯನ್ನು ತಿಂದರು’ ಹೇಳಿ ಎಲ್ಲ್ಯಾರು ಇದ್ದೊ? ನಮ್ಮ ಪರಂಪರೆಲಿ ಗೆಣಂಗಿಂಗೆ ಎಷ್ಟು ಮಹತ್ವ ಇದ್ದು ಹೇಳಿ ಇದರಿಂದ ಗೊಂತಾವ್ತು.

    ನಾವು ಮಾಡ್ಳೆ ಹೆರಟ ಎಂತಾರು ಅಗತ್ಯದ ಕೆಲಸ ಅಕೇರಿಗೆ ಉಲ್ಟಾ ಹೊಡದು ಪುಸ್ಕ್ಕ ಆದರೆ ಹೇಂಗೆ ಉದ್ಗಾರ ತೆಗೆತ್ತು? “ಸಂಗತಿ ಬಟಾಟೆ..!” ಹೇಳಿ ಅಲ್ಲದೊ? ಅಂಬಗ ಬಟಾಟೆ ಹೇಳಿರೆ ಬರೀ ತಾಪು/ನಾಲಾಯಕ್ ಹೇಳಿ ಆತಿಲ್ಯೋ?

    ಅಜ್ಜಿಮನೆ ಪುಳ್ಳಿ ಶಾಲೆಮಕ್ಕೊ ಪರೀಕ್ಷೆಲಿ ಬರವಹಾಂಗೆ ಗೆಣಂಗು-ಬಟಾಟೆ ವ್ಯತ್ಯಾಸಂಗಳ ಲಾಯ್ಕಲ್ಲಿ ಪಟ್ಟಿಮಾಡಿ ಬರದ್ದು. ಗೆಣಂಗಿನ ಕೊರದು ಬೇಶಿ ಒಗ್ಗರಣೆ ಹಾಕಿ ಉಪ್ಪುಕರಿ ಮಾಡಿರೆ ಕಾಪಿಗೆ ಫಲಾರಕ್ಕೂ ಆವ್ತು. ಬಟಾಟೆಯ ಹೀಂಗೆ ಏವದು ತಿಂತು?!

    ಒಟ್ಟಾರೆ ಹೇಳ್ತರೆ ಗೆಣಂಗು ಹೇಳಿರೆ ಗುಣಂಗಳ ನಿಧಿ! ಸುಟ್ಟು ತಿಂಬಲೂ ಆಗದ್ದ ನಿಕೃಷ್ಟ ಸಾಮಾನು ಬಟಾಟೆ!! 😉

    1. ಎನ್ನ ಓಟು ಬಟಾಟೆಗೆ.
      ಅದಕ್ಕೇ ಕೊಡೇಕು ಹೇಳಿ ಕೆಲವು ಜೆನ ಹೇಳಿದ್ದವು! 😉

      ಬಟಾಟೆ ತಿಂದರೆ ಬಟಾಟೆಯ ಹಾಂಗಾವುತ್ತು. ಆದರೆ ಗೆಣಂಗು ತಿಂದರೆ ಗೆಣಂಗಿನ ಹಾಂಗೆ ಆದ್ದಿದ್ದೋ ಎಲ್ಯಾರು? ನಿಂಗಳೇ ಹೇಳಿ, ಇದ್ದೋ?
      ಅಂಬಗ, ತನ್ನ ತಿಂದೋರಿಂಗೂ ತನ್ನಲ್ಲಿಪ್ಪ ಸಂಪೂರ್ಣ ಗುಣಲಕ್ಷಣಂಗಳ ಕೊಡ್ತ ಹಿರಿಮೆ ಬಟಾಟೆಲಿ ಇದ್ದು – ಹೇಳಿ ಕೆಲಾವುಜೆನ ಹೇಳಿಕೊಟ್ಟಿತ್ತಿದ್ದವು.. 🙂

      1. ಬಟಾಟೆಗೆ ಓಟು – ಅದಕ್ಕೇ ಕೊಡೇಕು ಹೇಳಿ ಕೆಲವು ಜೆನ ಹೇಳಿದ್ದವು!
        ಓ, ಇಲ್ಲಿಯುದೆ ಪೈಸೆ ವ್ಯವಹಾರ ಅಂಬಗ ನೆಡೆತ್ತಾಯ್ಕು !

    2. ಗೆಣಂಗಿನ ಪರ ಹಿಡುದು ವಾದಿಸಿದ ಸುಬಗನ ಮಾತು ಲಾಯಕಾಯಿದು. ಅಜ್ಜಿ ಮನೆ ಪುಳ್ಳಿಯ ಗುಣಾವಗುಣ ವರ್ಣನೆಯುದೆ ಚೆಂದ ಆಯಿದು.

    3. {ವನವಾಸ ಕಾಲದಲ್ಲಿ ಗೆಡ್ಡೆ ‘ಗೆಣಸು’ಗಳನ್ನು ತಿಂದರು} ಸುಭಗ ಭಾವಾ,ಇಲ್ಲಿ ಕೆಣುದತ್ತು. ಹಾ೦ಗಾರೆ ರಾಮ ಲಕ್ಷ್ಮಣರು ಆಲೂ ‘ಗೆಡ್ಡೆ’ ಗೆಣಸಿನ ತಿ೦ದದೋ? ಭೌಗೋಳಿಕವಾಗಿ ನೋಡುವಗ ಲಾಲೂವಿನ ಊರಿ೦ಗೆ ದೂರವಲ್ಲದ್ದ ವನಪ್ರದೇಶಲ್ಲಿಯೇ ಇವ್ವು ವನವಾಸಲ್ಲಿ ಇದ್ದದಲ್ಲದೋ?

      1. ಎಲ್ಲವೂ ಒಂದೇ ……. ಎರಡೂ ಮಣ್ಣಿನ ಒಳವೇ ಬೆಳವದು ……. ಅದಕ್ಕೇ ಎರಡನ್ನುದೇ ಗೆಡ್ಡೆ ಗೆಣಸುಗೊ ಹೇಳ್ತದನ್ನೇ ………………….

        1. ಅದಾ,ಗೆಡ್ಡ ಬಿಟ್ಟ ಈಶ್ವರ ಪ್ರಸಾದ ಭಾವ ಒಳ್ಳೆ ವಿಚಾರ ಮ೦ಡನೆ ಮಾಡಿದವು.
          ಗೆಡ್ಡೆ ಗೆಣಸು ‘ ಗಳನ್ನು’ ಹೇಳಿಯಪ್ಪಗ ಎರಡೂ ಬೇರೆ ಬೇರೆ ಆತನ್ನೆ.ಹಾ೦ಗಾಗಿ ಗೆಡ್ಡೆ ಹೇಳಿರೆ ಬಟಾಟೆಯೋ ಹೇಳಿ ಒ೦ದು ತರ್ಕ.

          1. ರಘು ಭಾವ… ಸುವರ್ಣ ಗೆಡ್ಡೆ, ಕೆಸವಿನ ಗೆಡ್ಡೆ, ಕೇರೆಟ್ಟು, ಮುಲ್ಲಂಗಿ ಕೂಡಾ ಗೆಡ್ಡೇಗಳ ಜಾತಿಗೇ ಸೇರಿತ್ತನ್ನೆ… ಅಂಬಗ ಅದನ್ನೂ ತಿಂದವೋ?

          2. ಶ್ಯಾಮಣ್ಣ,
            ತ್ರೇತಾಯುಗಲ್ಲಿ ಗೆಣ೦ಗು ಖ೦ಡಿತಾಇದ್ದಿಕ್ಕು,ಎ೦ತಗೆ ಕೇಳಿರೆ ಸಕಲವನ್ನೂ ಬಲ್ಲ ಸುಭಗ ಭಾವನೇ ಹೇಳಿದ್ದವು.ಕೆಸವಿನ ಗೆ೦ಡೆ ಇತ್ತೊ,ತಿ೦ದಪ್ಪಗ ತೊರುಸಿಗೊ೦ಡಿತ್ತೋ ಗೊ೦ತಿಲ್ಲೆ.ಮುಲ್ಲ೦ಗಿ,ಕೇರೆಟ್ಟು ಹೆರದೇಶ೦ದ ಕೆ೦ಪು ಬೆಳಿ ಚರ್ಮದವ್ವು ಬಪ್ಪಗ ಚೀಲಲ್ಲಿ ತ೦ದ ಕಾರಣ ಕಲಿಯುಗಲ್ಲಿಯೇ ಬ೦ದದಾಗಿಕ್ಕನ್ನೆ ?

          3. ಆ ಲೆಕ್ಕಲ್ಲಿ ಬಟಾಟೆಯೂ ಹದಿನೇಳ್ನೆ ಶತಮಾನಲ್ಲಿ ಪೆರು ದೇಶಂದ ಭಾರತಕ್ಕೆ ಬಂದದಡ… ಹಾಂಗಾಗಿ ತ್ರೇತಾಯುಗಲ್ಲಿ ಅದಿತ್ತಿಲ್ಲೆ ಹೇಳ್ಲಕ್ಕು.
            (ವನವಾಸ ಕಾಲದಲ್ಲಿ ಗೆಡ್ಡೆ ‘ಗೆಣಸು’ಗಳನ್ನು ತಿಂದರು)
            ಇಲ್ಲಿ ಸುಭಗ ಭಾವ ಒಂದು ಹೊಸ ವಿವಾದ ಹುಟ್ಟುಹಾಕುವ ಅಂದಾಜಿ ಇದ್ದು… ರಾಮ,ಸೀತೆಗ ವನವಾಸ ಕಾಲದಲ್ಲಿ ಗೆಡ್ಡೆ ‘ಗೆಣಸು’ಗಳನ್ನೇ ಎಂತಕೆ ತಿಂದದು? (ಲಕ್ಷ್ಮಣ ಹದಿನಾಲ್ಕು ವರ್ಷ ಊಟ-ನಿದ್ದೆ ಬಿಟ್ಟಿತ್ತಿದ್ದ ಹೇಳಿ ಎಲ್ಲಿಯೋ ಓದಿದ ನೆಂಪು) ತರಕಾರಿ, ಹಣ್ಣು ಹಂಪಲುಗಳ(ಹಂಪಲು ಹೇಳಿರೆ ಎಂತ?) ತಿಂಬಲಾವುತ್ತಿತ್ತಲ್ಲಾ?

          4. ಶ್ಯಾಮಣ್ಣೋ.. ಸೀತಾರಾಮಾದಿಗೊ ಕಾಡಿಲ್ಲಿಪ್ಪಗ ‘ಗೆಡ್ಡೆ ಗೆಣಸುಗಳನ್ನು ತಿಂದರು’ ಹೇಳಿ ಆನು ಹೇಳಿತ್ತಿದ್ದೆ ಅಲ್ಲದೊ? ಅದು ನಿಜವಾಗಿ ‘ಗೆಡ್ಡೆ’ ಅಲ್ಲ- ‘ಗೆದ್ದ’ ಹೇಳಿ ಆಯೆಕ್ಕಾದ್ದು. ರೂಢಿಲಿ ‘ಗೆಡ್ಡೆ ಗೆಣಸು’ ಹೇಳಿ ಇಪ್ಪ ಕಾರಣ ಫಕ್ಕನೆ ಎನಗೂ ಹಾಂಗೇ ಹೇಳಿಹೋತು.
            ಆ ಕಾಲಲ್ಲಿ ಇದ್ದಿದ್ದ ಬಾಕಿ ಕಂದಮೂಲಂಗಳ(ಕೆಸವು ಕೇನೆ ಮುಂಡಿ ಇತ್ಯಾದಿ) ಒಟ್ಟಿಂಗೆ ಸ್ಪರ್ಧಿಸಿ ಎಲ್ಲಾ ದೃಷ್ಟಿಲಿಯೂ ಇದುವೇ ಶ್ರೇಷ್ಠ ಹೇಳಿ ಗೆದ್ದು ಬಂದ ಕಾರಣ ಗೆಣಂಗಿಂಗೆ ‘ಗೆದ್ದ ಗೆಣಸು’ ಹೇಳ್ತ ಹೆಸರು ಬಂತು.

            ಗೆಣಸುಗಳನ್ನೇ ಎಂತಕೆ ತಿಂದದು? – ಇದಕ್ಕೆ ಕಾರಣ ಇದ್ದು. ವಾಯುಪುತ್ರ ಹನುಮಂತ ಶ್ರೀರಾಮನ ಸೇವೆ ಮಾಡಿದ್ದು ಎಲ್ಲೊರಿಂಗೂ ಗೊಂತಿಪ್ಪ ಸಂಗತಿ. ಆದರೆ ರಾಮಾಯಣ ಕಥೆಲಿ ಇಪ್ಪ ಇನ್ನೊಂದು ಮುಖ್ಯ ಸಂಗತಿ ಆರಿಂಗೂ ಗೊಂತಿಲ್ಲೆ; ಅದರ ಆನು ಈಗ ಹೇಳ್ತೆ.
            ಹನುಮಂತ ಶ್ರೀರಾಮನ ಭೇಟಿ ಅಪ್ಪಂದ ಎಷ್ಟೋ ಸಮಯ ಮದಲೇ ಅವನ ಅಪ್ಪ ವಾಯುದೇವ ಒಂದಾರಿ ಭೇಟಿ ಆಗಿ ‘ಸ್ವಾಮೀ, ಎನಗೆ ನಿನ್ನ ನಿತ್ಯವೂ ಸೇವೆ ಮಾಡೆಕ್ಕು ಹೇಳಿ ಆಶೆ. ಅನುಗ್ರಹ ಮಾಡು’ ಹೇಳಿ ಬೇಡ್ತ. ಅದಕ್ಕೆ ರಾಮದೇವರು ‘ತಥಾಸ್ತು.. ಆನು ವನವಾಸಲ್ಲಿ ಇಪ್ಪನ್ನಾರ ಯಾವ ಆಹಾರವಸ್ತುವಿಲ್ಲಿ ನಿನ್ನ ಗುಣ ಹೆಚ್ಚಿಗೆ ಇರ್ತೋ ಅದನ್ನೇ ನಿತ್ಯ ಸೇವಿಸುತ್ತೆ’ ಹೇಳಿ ವರ ಕೊಡ್ತ. ಅಲ್ಲಿಂದ ಮತ್ತೆ ಅವು ಗೆಣಂಗನ್ನೇ ತಿಂದದು.

            ಹಣ್ಣು ಹಂಪಲು (ಹಂಪಲು ಹೇಳಿರೆ ಎಂತರ?) ಏಕೆ ತಿಂದಿದವಿಲ್ಲೆ?- ಇದಕ್ಕೂ ಕಾರಣ ಇದ್ದು.
            ವ್ಯಾಕರಣಲ್ಲಿ ಹಲವಾರು ನಮೂನೆ ದೋಷಂಗೊ ಇರ್ತಡ. ಅದರಲ್ಲಿ ‘ದ್ವಿರುಕ್ತಿ ದೋಷ’ವೂ ಒಂದು. ‘ಛಪ್ಪನ್ನೈವತ್ತಾರು’ ಹೇಳ್ತಿಲ್ಯೋ-ಹಾಂಗೆ. ‘ಹಣ್ಣು ಹಂಪಲು’ ಇದು ತ್ರಿರುಕ್ತಿ ದೋಷ..!!! ನಡೂ ಸೆಂಟರ್ ಮಧ್ಯ ಹೇಳುವಾಂಗೇ ಇದುದೆ! ಹಣ್ಣು+ಹಣ್+ಫಲ ಸೇರಿ ಆದ್ದು ಇದು.

            ಇಷ್ಟು ದೊಡ್ಡ ದೋಷ ಇಪ್ಪದರ ರಾಮದೇವರು ತಿಂಗೊ? ಶ್ಯಾಮಣ್ಣ. ನಿಂಗಳೇ ಆಲೋಚನೆ ಮಾಡಿ!

            ಇಷ್ಟೆಲ್ಲ ಹೇಳಿಯಪ್ಪಗ ರಘುಭಾವ ‘ಸುಭಗರು ಸಕಲವನ್ನೂ ಬಲ್ಲವರು’ ಹೇಳಿ ಇನ್ನೊಂದಾರಿ ಹೇಳದ್ದೆ ಇರವು. ಹಿ ಹಿ ಹಿ.. 😉

            (ಸೂ- ಇಲ್ಲಿ ಬರದ್ದದು ಎಲ್ಲವೂ ಕೇವಲ ತಮಾಶೆಗೆ. ದೈವ ನಿಂದನೆ ಹೇಳಿಯೋ ಸಂಸ್ಕೃತಿಗೆ ಅಪಚಾರ ಹೇಳಿಯೋ ಆರೂ ಗ್ರೇಶಿಕ್ಕೆಡಿ. ನೆಗೆ ಬಂದರೆ ಮಾಡಿ ‘ಬಿಟ್ಟಿಕ್ಕಿ’!)

          5. ರಾಮ ರಾಮಾ…
            ಸುಭಗ ಭಾವನ ಕಲ್ಪನೆ ಅಧ್ಭುತ!! 🙂

            @ಸೂ- ಇಲ್ಲಿ ಬರದ್ದದು ಎಲ್ಲವೂ ಕೇವಲ ತಮಾಶೆಗೆ..
            ಅದು ಒಳ್ಳೇದಾತು ಸುಭಗ ಭಾವಾ.. ಅಲ್ಲದ್ರೆ ಇನ್ನು ಹಲವು ವರ್ಷ೦ಗೊ ಕಳುದು ಮು೦ದಿನ ಯಾವುದಾದರೂ ತಲೆಮಾರು ಈ ಒಪ್ಪಣ್ಣ ವೆಬ್ ಸೈಟಿನ ಈ ಒಪ್ಪವ ullEkhisi ಚರಿತ್ರೆಲಿ ಹೀ೦ಗೆ ಹೇಳಿದ್ದವು ಹೇಳಿ ವಾದಿಸಿರೂ ಆಶ್ಚರ್ಯ ಇಲ್ಲೆ!! 🙂

          6. ನಿಂಗೊ ಹೇಳಿದ್ದು ಅಕ್ಷರಶಃ ನಿಜ ಗಣೇಶ ಭಾವಾ..
            ವಿತಂಡವಾದಿಗೊ ಎಲ್ಲಿ ಅವಕಾಶ ಸಿಕ್ಕುತ್ತು ಹೇಳಿ ಕಾಯ್ತಾ ಇರ್ತವು. ನಮ್ಮ ಜಾಗ್ರತೆ ನವಗೆ 🙂

            ಆನು ಕೊಟ್ಟ ಸೂಚನೆಯ ಇನ್ನೊಂದು ಉದ್ದೇಶ- ಹಾಸ್ಯ ಅಪಹಾಸ್ಯದ ಮಧ್ಯೆ ನಿರ್ದಿಷ್ಟ ಗಡಿರೇಖೆ ಹಾಕಲೆ ಎಡಿಯದ್ದ ಕಾರಣಂದಾಗಿ ಕೆಲವರಿಂಗೆ ಕೆಲವು ತಪ್ಪುಕಲ್ಪನೆಗೊ ಉದ್ಭವ ಅಪ್ಪದು. (ಈ ವಿಷಯಲ್ಲಿ ಒಂದೆರಡು ತಿಂಗಳು ಹಿಂದೆ ಬೈಲಿಲ್ಲಿ ಶುದ್ದಿ ಬಂದು ವಿಚಾರ ಮಂಥನ ಆಯಿದು). ನಮ್ಮ ಪರಂಪರೆಯ, ದೇವ ದೇವತೆಗಳ ನಾವು ಗೌರವಿಸೆಕ್ಕು; ಅಪಹಾಸ್ಯ ಮಾಡ್ಲಾಗ- ಖಂಡಿತ ನಿಜ. ಆದರೆ ದೇವರುಗಳ ಬಗ್ಗೆ ಏನೂ ಮಾತಾಡ್ಲಾಗ, ಅವು ಕುಶಾಲು ತಮಾಶೆಗೊಕ್ಕೆ ಅತೀತರಾದವು ಹೇಳ್ತ ಮನೋಭಾವ ಕೆಲವರಿಂಗೆ ಇರ್ತು. ತೀರ ಅತಿರೇಕದ ಈ ಮಡಿವಂತಿಕೆಗೆ ಎನ್ನ ಸಹಮತ ಇಲ್ಲೆ.

          7. ಎನ್ನ ಅಜ್ಜ ಒಬ್ಬ ಮದಲು ಮಹಾಭಾರತ ಯುದ್ದಲ್ಲಿ ಕ್ರಶ್ಣ ಅರ್ಜುನಂಗೆ ವಿಶ್ವರೂಪ ದರ್ಶನ ತೋರ್ಸಿದ್ದರ ವಿವರ್ಸಿತ್ತಿದ್ದವು – ತಮಾಶೆಲಿ – ಅದರ ಬೈಲಿಲಿ ಹೇಳ್ಲೆ ಎಡಿಯ.ಸುಭಗನ ಅಭಿಮತಕ್ಕೆ ಎನ್ನ ಸಹಮತ ಇದ್ದು. ಕುಶಾಲು ತಮಾಶೆಗಳ ತಮಾಶೆಲಿಯೇ ನೋದೆಕ್ಕಷ್ತೆ ಅಲ್ಲದೆ ಅದು ನಮ್ಮ ನಮ್ಮ ಕೋಟಕ್ಕೆ ಸೀಮಿತವಾಗಿ ಇರೆಕ್ಕು. ‘ಒಪ್ಪಣ್ಣ’ ನಮ್ಮದೇ ಕೂಟ ಅಲ್ಲದೋ, ಹಾಂಗಾಗಿ ಹೀಂಗಿಪ್ಪ ತಮಶೆಗ ಬೇಕು.
            ಮತ್ತೆ ರಘು ಹೇಳಿದ ಮಾತಿಂಗೆ ಆನೂ ಸೇರ್ಸುತ್ತೆ – ಭೂತ ಭವಿಶತ್ ಕಾಲಗಳ ತಿಳ್ಕೊಂಡವರು ಸುಭಗರು. ಎಂತ..!!!

          8. ಅದಾ, ಚರಿತ್ರೆಯನ್ನು ತಿರುಚಲಾಗಿದೆ!

            {ರಾಮ ಲಕ್ಷ್ಮಣರು ವನವಾಸ ಕಾಲದಲ್ಲಿ ಗೆಡ್ಡೆ ‘ಗೆಣಸು’ಗಳನ್ನು }
            ಆನು ಓದಿದ ಪುಸ್ತಕಲ್ಲಿ “ಆಲೂಗೆಡ್ಡೆ ಗೆಣಸುಗಳನ್ನು …” ಹೇಳಿ ಇದ್ದದು.
            ಬಟಾಟೆಯ ಹೆಸರು ಮೊದಲು, ಮತ್ತೆ ಗೆಣಂಗು – ಕಂಡತ್ತಿಲ್ಲೆಯೋ?
            ನಿಂಗೊ ಬೇಕುಬೇಕೂಳಿಯೇ ’ಆಲೂ’ ಹೇಳ್ತರ ಹೊಡದು ಬೈಲಿನೋರ ಮಂಡಗೆ ನಾಮ ಹೆಟ್ಟಿಗೊಂಡಿದ್ದಿ.
            ಬೈಲಿಂಗೆ ಇಷ್ಟೆಲ್ಲ ಲೊಟ್ಟೆ ಹೇಳಿಕ್ಕಿ ಸುಬಗನಾಂಗೆ ಕೂಬದು ಕಾಣ್ತಿಲ್ಲೆಯೋ!

            ಮೂಲಪಾಠಲ್ಲಿ ’ಆಲೂ’ಗಡ್ಡೆ ಗೆಣಸು ಹೇಳ್ತರ ಬಿಟ್ಟು, ಈಗ ಗೆಣಂಗಿನ ಮಾಂತ್ರ ಎತ್ತಿ ತೋರುಸುತ್ತದಕ್ಕೆ ಆನುದೇ, ಲಾಲುದೇ ಕೋರ್ಟಿಂಗೆ ಹೋಪಲೆ ಹೆರಟಿದೆಯೊ°.
            ಇಂದಿನ್ನು ಬಸ್ಸು ಸಿಕ್ಕ, ನಾಳೆ ಹೋವ್ತೆಯೊ°, ಆತೋ? ಏ°? 😉

          9. ಅದ್ವೈತ ಕೀಟ ಎಲ್ಲಿ ಸಿಕ್ಕಲೆ?!

          10. ನಾಳ್ತಿಂಗೆ ವಾಯಿದೆ ಇದ್ದು…. ಎಲ್ಲೋರೂ ಬಂದು ಸುಧಾರ್ಸಿ ಕೊಡೆಕ್ಕು ಹೇಳಿ ಬೈಲಿನ ಹೆರಿಯೋರ ಪರವಾಗಿ ಹೇಳಿಕೆ…..

          11. ನಾಡ್ತಿಂಗೆ ಪುರುಸೋತ್ತಿಲ್ಲೆ ಬಾವ.. ಮದ್ದು ಬಿಟ್ಟಾಯೆಕಟ್ಟೇ ಇದಾ..
            ನೀನು ಹೋಗಿ ವಾಯಿದೆ ಆಟಿಗೆ ಮುಂದೆ ಹೋಪಾಂಗೆ ಮಾಡಿಕ್ಕು..

  13. ಬಟಾಟೆಲಿ ಪಾಯಸ ಮಾಡ್ಲೆ ಆವ್ತಿಲ್ಲೆ , ಗೆಣಂಗಿಲಿ ಆವ್ತು.
    ಬಟಾಟೆಲಿ ಹಪ್ಪಳ ಮಾಡ್ಲೆ ಆವ್ತಿಲ್ಲೆ , ಗೆಣಂಗಿಲಿ ಆವ್ತು.
    ಬಟಾಟೆ ಹಸಿ ತಿಂಬಲೆ ಆವ್ತಿಲ್ಲೆ , ಗೆಣಂಗು ಆವ್ತು.
    ಬಟಾಟೆಲಿ ಪಾಯಸ ಮಾಡ್ಲೆ ಆವ್ತಿಲ್ಲೆ , ಗೆಣಂಗಿಲಿ ಆವ್ತು.
    ಬಟಾಟೆ ಬರೇ ಬೆಳ್ಚಟೆ , ಗೆಣಂಗು ಕೆಂಪಾಗಿ ಕಾಂಬಲೆ ಚೆಂದ ಇರ್ತು.
    ಗೆಣಂಗು ಬರೀ ಉರುಟು ಮಾಂತ್ರ ಅಲ್ಲ ಉದ್ದವೂ ಇದ್ದು
    ಗೆಣಂಗು ಚೊಲಿ ತೆಗದು ಸಮ ಪುರುಂಚಿ ಮೊಸರು ಹಾಕಿ ಒಗ್ಗರಣೆ ಕೊಟ್ಟರೆ ಗೊಜ್ಜಿ ಆವ್ತು, ಸಾಂಬಾರು ಪಲ್ಯ ಆವ್ತು.
    ಶ್ರೀ ಅತ್ತೆ ಗೆಣಂಗು ಪರೋಟ ಮಾಡಿಯು ಕೊಟ್ಟಿದವು ಬಾರೀ ಲಾಯ್ಕ ಆವ್ತು.
    ಇನ್ನು ಸುಮಾರು ಇದ್ದು. ಅಮ್ಮ ಬೈತ್ತಾ ಇದ್ದು ಓದು ಹೇಳಿ ನಾಳೆ ಬರೆತ್ತೆ..

  14. ನವಗೆ ನಮ್ಮ ಊರಿನ ಗೆಣ೦ಗೇ ಶ್ರೇಷ್ಟ,ಅಲ್ಲದೋ ಸುಭಗಣ್ಣ?

    ತಟ್ಟಿದರೆ ಹಪ್ಪಳವು ಸುಟ್ಟರಿನ್ನೂ ರುಚಿಯು
    ಮುಟ್ಟಿ ಕಡಲೆಯ ಹೊಡಿಲಿ ಎಣ್ಣೆಗಿಳಿಸಿದರೆ
    ಹೊಟ್ಟೆಯೊಳ ಜಾಗೆಯೊ೦ದಿ೦ಚಿ೦ಚು ಒಳಿಯದ್ದೆ
    ಕಟ್ಟಕಡಿಯುವವರೆಗೆ ತಿ೦ಗು ಪೆ೦ಗಣ್ಣಾ II.

    ಪಾಯಸವ ಗ್ರೇಶಿದರೆ ಕಾಯಕವು ಮರಗಯ್ಯೊ
    ಆಯ ತಪ್ಪುವವರೆಗೆ ಸುರುದ ಮೇಲಷ್ಟೇ
    ವಾಯುದೇವನ ಮಹಿಮೆ ಶುರುವಕ್ಕು ಮರೆಯದ್ದೆ
    ಆಯುರಾರೋಗ್ಯಕ್ಕೆ ಗುಳಿಗೆ ನು೦ಗಣ್ಣಾ II

    1. ಐವಾ… ಇದು ಭಾರೀ ಲಾಯಿಕಾಯಿದು ರಘು ಭಾವಾ..

      1. ಮುಳಿಯಭಾವ, ಪದ ಭಾರಿ ಚೆಂದ ಆಯಿದು.
        ಆದರೆ ಸುಬಗಣ್ಣ ಗ್ರೇಶಿದ ಹಾಂಗೆ ಇದೆಂತ ಗೆಣಂಗಿನ ಶಬ್ದಂದಾಗಿ ಚೆಂದ ಆದ್ದಲ್ಲ, ನಿಂಗೊ ಪ್ರಾಸಕ್ಕೆ ಹಾಕಿದ ಶೆಬ್ದಂದಾಗಿ! 😉

        ಬಟಾಟೆಯ ಬಗ್ಗೆಯೂ ಒಂದು ಪದ್ಯ ಬರವೆ. ಆದರೆ ಅಂಬೆರ್ಪಿಲಿ ಆಗ ಅದೆಲ್ಲ.

    2. ಪದ್ಯ ಕೊಶೀ…. ಆತು ಭಾವಯ್ಯ. ಓದಿ ಅಪ್ಪಗ ಬಾಯಿಲಿ ನೀರು ಹರುದತ್ತದ.

      1. {…..ಓದಿ ಅಪ್ಪಗ ಬಾಯಿಲಿ ನೀರು ಹರುದತ್ತದ.}
        ತಿಂದಪ್ಪಗ ಗಾಳಿ ಬಕ್ಕು…..!

  15. ಯೇವುದು ಮೇಲೆ ಹೇಳ್ತ ಪ್ರಶ್ನೆಯೆ ಸರಿ ಅಲ್ಲ. ಎರಡನ್ನೂ ತಿಂದಾದಿಕ್ಕಿ ಮೇಗಂತಾಗಿಯೂ, ಕೆಳತಾಗಿಯೂ ಹೋವುತನ್ನೆ..ಎರಡೂ ಒಂದೇ.

  16. ಎನಗಂತೂ ಬಟಾಟೆ ಹೇಳಿ ಅಪ್ಪಗ ಮಾಜಿ ಪ್ರಧಾನಿ ಒಬ್ಬರ ತಲೆಯೇ ನೆಂಪಪ್ಪದು. ಇನ್ನು ಗೆಣಂಗು ಹೇಳಿರೆ ಸುಗುಣ ಗೆಣಂಗಿನ ಸುಟ್ಟ ಹಾಕಿದ್ದದೇ ನೆಂಪಪ್ಪದಿದಾ.
    ಪೋಡಿ ಮಾಡಿರೆ ಎರಡುದೆ ಅವಳಿ ಜವಳಿಗಳೇ.

    1. ಪೋಡಿಯೊ.. ಹಾ ಹಾ..!! ರುಚೀ ಆವುತ್ತು.. 😀
      ಎನ ಒ೦ದು ನಾಲ್ಕು…. ಪ್ಲೇಟು ಬೆಶಿ ಬೆಶಿ ಇರ್ಲಿ.. 🙂
      ಒ೦ದು ಚೆ೦ಬಿಲ್ಲಿ ನಾಲ್ಕು ಮುಕ್ಳಿ ಚಾಯಕ್ಕು ಏ?? 😉
      ಒಟ್ಟಿ೦ಗೆ ಒ೦ದು ದೊಡ್ಡ ಮೆಣಸಿನ ಪೋಡಿ ಇದ್ದರೆ ಆಗದ್ದೆ ಇಲ್ಲೆ..

      1. [ಒ೦ದು ಚೆ೦ಬಿಲ್ಲಿ ನಾಲ್ಕು ಮುಕ್ಳಿ ಚಾಯಕ್ಕು ಏ?? ]
        ಚೆಂಬಿಲ್ಲಿ ಒಳುದ ಜಾಗೆಲಿ ನೀರು ತುಂಬುಸುವೊ ಏ ???

      2. ಪೋಡಿ ಆದರೆ ಎನಗೆ ಕೊಡದ್ದೆ ತಿನ್ನೆಡ.ಹೊಟ್ಟೆಬೇನೆ ಆಕ್ಕು.ಮತ್ತೆ ಅಬ್ಬೆ ಬೈಗಿದಾ.

  17. ವೋ ನಗೆಗಾರ,

    1) ಬಟಾಟೆ ಮತ್ತೆ ಗೆಣ೦ಗು ಎನ್.ಡಿ.ಎ. ಮತ್ತೆ ಯು.ಪಿ.ಎ. ಇಪ್ಪ ಹಾ೦ಗೆ. ಎರಡೂ ಒ೦ದೆ.

    2) ಬೇರೆ ಹೇಳೆಕ್ಕಾರೆ ಇದು ಎರಡೂ ಬಯ್ಯೋ’ಗ್ಯಾಸ್ ಪ್ರೊಡಕ್ಶನ್ನಿ೦ಗೆ ಸಹಾಯಕಾರಿ. ಎರಡನ್ನೂ ಮಿಶ್ರಣ ಮಾಡಿ ಗ್ಯಾಸ್ ಅ೦ಡೆ ಒಳ ಹಾಕಿ ಪ್ರಯೋಗ ಮಾಡ್ತಾ ಇತ್ತಿದ್ದೆ ಈ ಲೇಖನ ಬಪ್ಪಗ. ಗ್ಯಾಸ್ ಕ್ರೆಯ ಏರ್ತಡ್ಡ!

    3) ಬೈಲಿಲಿ ರೈತ೦ಗೊ ಇದ್ದರೆ ಇನ್ನು ಬಟಾಟೆ ಮತ್ತೆ ಗೆಣ೦ಗು ಬೆಳೆಸಿ. ಆನು ತೆಕ್ಕೊಳ್ತೆ!
    4) ತಿ೦ಬ ವಿಷಯಲ್ಲಿ ಆನು ಉತ್ತರ ಕೊಡಲಾರೆ 😉 ಬೋಸ ಬಾವ ಆ ಕೊಡ್ತೆ ಉತ್ತರ ಹೇಳಿ ಗುರ್ಟಿಗೊ೦ಡಿತ್ತಿದ್ದ. 😉

    ಇ೦ತಿ ಗೆ೦ಟ

    1. ಇದಾ..ಅರ್ಗೆ೦ಟು ಮಾಣೀ..!! 😉
      ಬಟಾಟೆಯೋ, ಗೆಣ೦ಗೋ.. ಎನ ಎರಡೂ ಅಕ್ಕು.. 🙂
      ಗೆಣ೦ಗೋ ಬೇಶಿ, ಅಲ್ಲದ್ರೆ ಗೆಣ೦ಗು ಪಲ್ಯಾ- ಚಪ್ಪಾತಿಗೆ..!! 😀
      ಬಟಾಟೆಯೂ ಹಾ೦ಗೆ.. ಕೊದ್ದೆಲೋ, ಬಾಜಿಯೋ.. 😛
      ನಮ್ಮ ಪೆ೦ಗಣ್ಣ ಬಗೆ ಬಗೆ ಅಡಿಗೆ ಮಾಡ್ತ.. ಅವನ ಕೈರುಚಿ ನೋಡು ಒ೦ದಾರಿ.. ಏ?? 😉

      1. ಬಟಾಟೆ ಆದರೂ ಗೆಣಂಗು ಆದರೂ ಬೇಶಿರೆ, ತಿಂಬಲೆ ಹಲ್ಲು ಬೇಕೂಳಿ ಇಲ್ಲೆ ಅಲ್ಲದಾ ಬೋಚ 🙂

  18. ಎರಡನ್ನೂ ಒಟ್ಟಿಂಗೆ, ನೀರುಳ್ಳಿ ಸೇರುಸಿ ಗಸಿ ಮಾಡಿರೆ, ಮೇಲೆಯೂ ಇಲ್ಲೆ, ಕೆಳವೂ ಇಲ್ಲೆ. ನಮ್ಮ ದೇಶಲ್ಲಿಪ್ಪ ಹಾಂಗೆ, ಎಲ್ಲವೂ ಸಮಾನ ! ಗ್ಯಾಸಿಂಗೆ ಕ್ರಯ ಜಾಸ್ತಿ ಆದ ಸಮೆಲಿ ಪೂರಕವಾದ ಒಳ್ಳೆ ವಿಚಾರದ ಬಗ್ಗೆ ಚರ್ಚೆ ಆವ್ತಾ ಇದ್ದು. ಒಳ್ಳೆದಾಗಲಿ.

  19. {..ಬಟಾಟೆ- ಗೆಣಂಗಿಲಿ ಯೇವದು ಮೇಗೆ? }
    ಏ ಮಾಣೀ.. ಮೇಗೆ ಹೇ೦ಗೆ ಅಪ್ಪದು?? ಅದು ಎರಡೂ ಮಣ್ಣಿನ “ಕೆಳ” ಅಲ್ಲದೋ ಬೆಳವದೂ??

    1. ಬೆಳವದು ಕೆಳ ಆದರು ಮೇಲೆ ಬಂದ ಮೇಲೆ ಹೊಟ್ಟೆ ಒಳ ಹೋದ ಮೇಲೆ ಯೇವದು ಹೇಳಿ ನಾವು ಒಂದರಿ ಟೆಸ್ಟು ಮಾಡೆಕ್ಕಸ್ಟೆ ಚುಬ್ಬಣ್ಣ..

  20. ಯಬೋ,
    ಈ ನೆಗೆಗಾರ° “ವಾಯು”ವೇಗಲ್ಲಿ ಬೈಲಿ೦ಗೆ ಬಟಾಟೆ ಗೆಣ೦ಗಿನ ಹಿಡುಕ್ಕೊ೦ಡು ಇಳುದ್ದದೇ..ಆನು ನಿನ್ನೆ ನೆಡು ಇರುಳಿ೦ದ ಜಿಜ್ಞಾಸೆಲಿ ಇತ್ತಿದ್ದೆ,ಸುಭಗ ಭಾವನ ಕತೆಯ ಏವ ಅ೦ಕಣಲ್ಲಿ ಹಾಕುಲೆಡಿಗಪ್ಪಾ,ಹೇಳಿ.ಕಾಟ೦ಕೋಟಿ ಅಲ್ಲ,ಮಹತ್ವ ಇಪ್ಪದು,ವಿಜ್ಞಾನ ವಿಷಯ ತು೦ಬಿಗೊ೦ಡಿಪ್ಪದು,ಅಡಿಗೆ ವಿವರವೂ ಇದ್ದು.ಇನ್ನೆ೦ತ ಮಾಡೊದು ಹೇಳಿ ಬೈಲಿ೦ಗಿಳುದರೆ ಇವ° ಇಲ್ಲಿದ್ದ°,ಹೊಸ ಸಮಸ್ಯೆ ಹಿಡುಕ್ಕೊ೦ಡು!!
    ಸರಿ.ಯೇವದು ಮೇಗೆ?ಯೇವದು ಬೇಗ ಮೇಗೆ ಕೊ೦ಡು ಹೋಕು ಹೇಳಿ ಯೋಚನೆ ಮಾಡುವ ಹಾ೦ಗಾರೆ.

  21. ಚೂರಿಬೈಲು ದೀಪಕ್ಕನತ್ರೆ ಕೇಳಿರೆ ಎರಡನ್ನೂ ಹಿಡುದು ಎಣ್ಣೇಲಿ ಹಾಕಲಾವ್ತು ಹೇಳುಗು.

    ಬೆಂಗಳೂರಿಲ್ಲಿಪ್ಪವು ಒರಕ್ಕು ಬಾರದ್ರೆ ಇರುಳೇ ಬಟಾಟೆ ಚೊಲ್ಲಿ ರೆಡಿ ಮಾಡಿ ಮಡುಗುತ್ತವಡ ಅಪ್ಪೋ ಮರುದಿನಕ್ಕೆ ಕೆಲಸ ಬೇಗ ಆಗಲಿ ಹೇದು?!

    ನೋಡ್ವೋ – ನಮ್ಮ ಬೈಲಿನೋರು ಎಂತ ಹೇಳ್ತವು ಹೇದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×