ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ?!

April 23, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಶಿಲು ಹೋಗಿ ಮಳೆ ಬಪ್ಪಂದ ಮದಲು ನಮ್ಮ ಚೆನ್ನೈಭಾವನ ಒಂದು ನೆಗೆಪದ್ಯ…

ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ?!
ಬೆಶಿಲೇ ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ
ಬತ್ತಿತ್ತಿದಾ ಎಂಗೊಗಿಲ್ಲಿ ನೀರಿನ ಒರತೆ |
ತಡವಲೆಡಿಯದ್ದಷ್ಟು ಇದ್ದು ನಿನ್ನ ಬೆಶಿಲ ಖಾರ
ಬಸವಳಿದವು  ಜೆನಂಗೊ ಇಲ್ಲಿ ಟಿವಿ ನ್ಯೂಸ್ ಪ್ರಕಾರ ||

ಮುಳಿ ಮನೆ ಇರಲಿ ಸೋಗೆ ಕೊಟ್ಟಗೆ ಆಗಿರಲಿ
ಒಪ್ಪಣನ ತರವಾಡು ಮನೆ ಹಂಚಿನ ಮಾಡಾಗಿರಲಿ |
ಮುಳಿಯ ಭಾವ ಇಪ್ಪದಾಯ್ಕು ಕಾಂಕ್ರೀಟ್ ಮನೇಲಿ
ಹೋಪಲೆಡಿತ್ತಿಲ್ಲೆ  ಹೆರಾಂಗೆ ಈಗ ಈ ಬೆಶಿಲಿಲಿ ||

ಕಾಡು ಇರಲಿ ತೋಟ ಇರಲಿ ಏನೇ ಇರಲಿ
ಪೆಡಚ್ಚುತ್ತವಿದ್ದವೆಲ್ಲ ಬೆಶಿಲು ಹೊತ್ತು ಕಂತಲಿ |
ಕತ್ತಲಾದರೆಂತ ಪುಣ್ಯ ಈ ಗಾವಿಲಿ
ಕೂಬಲೆಡಿತ್ತಿಲ್ಲೆ ರಜವೂ ಇಲ್ಲಿ ಏನ ಸಾಯಲಿ ||

ಏ.ಸಿ. ಹಾಕಿ ಕೂಬೋ ಹೇಳಿ ಕಾಣುತ್ತೆನಗೆ ಒಂದುಒಂದರಿ
ತಿಂಗಳ ಅಕೆರಿಗೆ ಬೆಚ್ಚಿ ಬೀಳ್ತು ಕರೆಂಟು ಬಿಲ್ಲು ನೋಡಿರೆ |
ಫೇನ ರೆಂಕೆ ತಿರುಗುತ್ತಿದ್ದು ಮೇಗೆ ನೋಡಿರೆ
ಸಾಕಾವ್ತಿಲ್ಲೆ ಅದರ ಗಾಳಿ ಎನ್ನ ಕೇಳಿರೆ ||

ಹೋಪಲಿದ್ದು ಕರೆಂಟು ಅತ್ತೆ ಅಂಬಗಂಬಗ
ತೆಗವಲೂ ಇದ್ದು ಮತ್ತೆ ಕರೆಂಟು ಅಂಬಗಂಬಗ |
ಪವರೂ ಇಲ್ಲೆ ಮೋಟರ್ ಓಡ್ಸಿ ನೀರು ಹಾಕಲೇ
ಜನಂಗಳೂ ಇಲ್ಲೆ ತೋಟಕ್ಕಿಲ್ಲಿ ನೀರು ತೋಕಲೆ ||

ಕುಡಿವಲೂ ಇಲ್ಲೆ ಎರವಲೂ ಇಲ್ಲೆ ನೀರು ಎಲ್ಲಿಯೂ
ಮಾಡೋದೆಂಗೆ ಜೆಂಬ್ರ ಈಗ ಯಾವ ಮನೆಲಿಯೂ |
ಬಾಕಿ ಇದ್ದು ಮದ್ವೆ ಉಪನಯನ ಹಲವು ದಿಕ್ಕೆಯೂ
ಹೋಪಲೆಡಿತ್ತೋ ಈ ಬೆಶಿಲ ಬೇಗೆ ನೋಡಿರೆಲ್ಲಿಯೂ ||

ಬತ್ತಿತ್ತದಾ ಹೊಳೆ ಬಾವಿ ಕೆರೆ ಸೊರಂಗವೂ
ಆರಿತ್ತದಾ ಅಂದು ಹಾಕಿದ ಕಟ್ಟ ಎಲ್ಲವೂ |
ಇದ್ದು ಹಾಂಗೇ ಪ್ರಕೃತಿಲಿಪ್ಪ ಗಿಡ ಮರ ಬಳ್ಳಿಯೂ
ಬಾಡಿ ಬೆಂದು ಒಣಗಿ ಹೋತು ಈ ವಾರಿಯೂ ||

ಬೆಶಿಲೇ....

ದೊಡ್ಡ ಭಾವ ಹೆರಟ ಅದಾ ಪೇಪರು ತಿದ್ದಲೇ
ಮಂಡೆ ಬೆಷಿಲಿ ಹಾಕಿ ಬಿಟ್ಟ ನಲ್ವತ್ತು ಮಾರ್ಕು ನಾಕು ಮಾರ್ಕಿಂಗೆ |
ಕೂಡ್ಸಿ ಅಪ್ಪಗ ಗೊಂತಾತದಾ ಅಂಕೆ ತಪ್ಪಿದ್ದು
ತಿದ್ದಿ ಬಿಟ್ಟು ನೆಗೆಯ ಮಾಡಿದ ಮಾನ ಉಳುದತ್ತು ||

ಹಳೆಮನೆಣ್ಣ ಹೋದ ಅದಾ ಫಟ ತೆಗವಲೆ
ಹಾಕಿಗೊಂಡ ಹೆಗಲ್ಲಿ ಒಂದು ತೋರ್ತು ಉದ್ದಲೆ  |
ಹೋಪಗಿದ್ದ ಬಿಳಿಯ ತೋರ್ತು ಬಪ್ಪಗಾತು ಕಪ್ಪಟೆ
ಕೇಳಿತ್ತಡ ಹೆಂಡ್ತಿ ಅಂದು ಮೋರೆ ಎಂತ ಕರಿಪ್ಪಟೆ ||

ಶ್ರೀ ಮಠದ ಕೆಲಸ ಇದ್ದು ಹೇಳಿ ಹೆರಟ ಅದಾ ಸುಭಗಣ್ಣ
ಹೋಯ್ಕಿ ಬಂದು ಕೂಬಲೆಡಿತ್ತಿಲ್ಲೆಡಾ ಬೈಲಿಂಗೆ ಬರವಲೆ ಆಗಿ ಕೆಂಗಣ್ಣ |
ವಾರ ವಾರ ಊರಿಂಗೆ ಹೋವ್ತನಡ ಅಂಬೇರ್ಪು ಹೇಳಿ ಕೆಪ್ಪಣ್ಣ
ಐರಾವತ ಬಿಟ್ಟು ಬೇರ ಬಸ್ಸ ಏರನಡ ನಮ್ಮ ನೊಂಪಣ್ಣ ||

ಪೇಟಗೋವ್ತೆ ಹೇಳಿ ಹೆರಟವಿದಾ ನಮ್ಮ ಮಾಸ್ಟ್ರು ಮಾವ
ಚೆರ್ಪು ಹಾಕಿಯಪ್ಪಗದಾ ನೆಂಪಾತಡ ಇರ್ಲಿ ಕೊಡೆ ಒಂದು ಅಂಗಿ ಕೋಲರ್ಲಿ |
ಹಲಸಿನಕಾಯಿ ತಂದವದಾ ಹಪ್ಪಳ ಮಾಡ್ಲೆ ಅಡ್ಕತ್ತಿಮಾರು ಮಾವ
ಚೀಲ ತತ್ತೆ ಹೇಳಿದ್ದನಡ ಹಪ್ಪಳ ಕೊಂಡೋಪಲೆ ಚೆನ್ನೈ ಭಾವ  ||

ವೇದ ಪಾಠ ಮಾಡುತ್ತೆ ಹೇದು ಎದ್ದು ಕೂದ ತುಪ್ಪೆಕ್ಕಲ್ಲ ತಮ್ಮ
ಬೇಗರು ಬಿಚ್ಚಿ ಸಾಕಾತಡ ಎಂತದೋ ಉಮ್ಮ |
ಮಂಗ್ಳೂರ ಮಾಣಿ ಮದುವೆ ಹೇದು ಹೋದವದಾ ಜೊಟ್ಟು ಇಪ್ಪ ಭಟ್ಟ ಮಾವ
ಅಂಗಿ ಬೇಡ ಶಾಲು ಸಾಕು ಹೇಳಿದವಡಾ ಬೊಳುಂಬು ಮಾವ ||

ಮಾವಿನ ಹಣ್ಣು  ಬೀಳುತ್ತು ಹೇದು ಕಾದೊಂಡಿದ್ದ ಭೋಸ ಭಾವ
ಸಿಕ್ಕಿರೆನಗೆ ನಾಕು ಬೇಕು ಹೇಳಿದ್ದನಡ ಅಜ್ಜಕಾನ ಭಾವ |
ನೋಡಿಗೊಂಡಿದ್ದವಡ ಶರ್ಮಪ್ಪಚ್ಚಿ ಒತ್ತಿಲಿಪ್ಪದು ಯಾವ ಭಾವ
ಗೊಂತಕ್ಕದು  ನವಗೆ ಬೈಲಿ ನಾಳೆ ಅದಾರ ಭಾವ ||

ನೆಲಕ್ಕವೇ ಲಾಯ್ಕ ಹೇಳಿ ಹೊರಳುತ್ತವಡ ಕೊಳಚಿಪ್ಪು ಭಾವ
ಫೋನ್ ಮಾಡಿ ಹೇಳಿದವಾಡ ಹಸೆಯಾದರು ತೆಕ್ಕೋ ಹೇದು ಶ್ರೀ ಅಕ್ಕಾ |
ತಂಪು ಏವುದು ಹೇದು ಯೋಚ್ಸಿ ಬರೆತ್ತಾ ಇದ್ದವಡಾ ದಾಕುಟ್ರಕ್ಕ
ಸೆಕಗೆ ಏವುದು ಲಾಯಕ್ಕ ಹೇಳಿ ಹೇಳುಗದಾ ಸುವರ್ಣಿನಿ ಅಕ್ಕಾ ||

ಭಾಗ್ಯ ಅಕ್ಕಾ ಬಕ್ಕದಾ ಒಪ್ಪ ಆಯ್ದು ಬರದ್ದು ಹೇಳಿ ಹೇಳಲೇ ಅಕೇರಿಗೆ
ನೆಂಪೂ  ಅಕ್ಕು ಸಣ್ಣದಿಪ್ಪಗ ಹಾಂಗೆ ಇತ್ತು ಹೇಳಿ ಬರವಲಿಲ್ಲಿ ಬೈಲಿಂಗೆ |
ಇದ್ದವಿನ್ನು ಕುಮಾರಣ್ಣ ಮುಣ್ ಚ್ಚಿಕ್ಕಾನಣ್ಣ ಚೆನ್ನಬೆಟ್ಟಣ್ಣ
ಸೆಕೆಯೇ ಬೇಡ ಹೇಳಿ ಊಟಿಗೋಯ್ದವಡಾ ನಮ್ಮ ಭೂಪಣ್ಣ ||

ಗಣೇಶಣ್ಣ ಮಹೇಶಣ್ಣ ಹೇಳಿ ಸೆಕೆ ಹೇಂಗೆ ಹೇದು ಎಂಗಗೆ  ಆ ಊರಿಲ್ಲಿ
ರಘು ಅಣ್ಣ ತಿರುಗತ್ತನಡ ಆಟ ಇದ್ದು ಹೇದು ಊರಿಲ್ಲಿ |
ವೆಣೂರಣ್ಣ ಅಂತೂ ಬಿಡ್ತಾ ಇಲ್ಲೆ ಬಲಿಪ್ಪನ ಪದ
ನವಗಂತೂ ಒರಕ್ಕೂ ಬತ್ತಿಲ್ಲೆ ನೆರ್ಪಕ್ಕೆ ಇದಾ ||

ಸೆಕೆ ಜಾಸ್ತಿ ಆದರೆ ಖುಶೀ ಆವ್ತಡ ಕೆದೂರ ಮಾವ ಕೇಜೀ ಮಾವಂಗೆ
ಶೀತ ತಲೆಬೇನೆ ಜ್ವರ ಹೇಳಿ ಬಕ್ಕು ಹೇದು ನಮ್ಮ ಬೈಲು ಭಾವಂಗೆ |
ಮದ್ದಿಂಗೋಪ ಕೆಲಸ ಆಗ ಹೇಳ್ತವದಾ ಪುಚ್ಚೆಪ್ಪಾಡಿ ಮಹೇಶಣ್ಣ
ಕಾಳು ಮೆಣಸು ಸಾರು ಕಷಾಯ ಎಷ್ಟೋ ಬೆಟರ್ ಹೇಳಿ ಹೇಳ್ತವಿಲ್ಲಿ ಗೋಪಾಲಣ್ಣ ||

ಎಲ್ಲವನ್ನೂ ಇರುಳು ಕೂದು ಓದುತ್ತವು ಬಾಲಣ್ಣ
ಶುದ್ಧಿ ಮಾತ್ರ ಒಂದೂ ಹೇಳ್ತವಿಲ್ಲೆ ಶುದ್ಧಿಗಾರಣ್ಣ |
ಶಾಲು ಹಾಕಿ ಗಡದ್ದಿಲಿದ್ದವು ನಮ್ಮ ಗುರಿಕ್ಕಾರಣ್ಣ
ಬಿಟ್ಟಿಕ್ಕವು ಉಪದ್ರ ಆದರೆ ಮಡುಗಿ ಪಕ್ಷಿಗಣ್ಣ ||

ಬೆಶಿಲೇ ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ
ಇದ್ದವಿನ್ನು ಬೆಶಿಲಿ ಆ ಅಣ್ಣ ಈ ಅಣ್ಣ ಆ ಭಾವ ಈ ಭಾವ |
ಆ ಮಾವ ಈ ಮಾವ ಅತ್ತೆ ಅಜ್ಜಿ ದೊಡ್ಡಮ್ಮ ಚಿಕ್ಕಮ್ಮ
ಕೇಳೋದೆಲ್ಲರೂ ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ ||

ಸೂ: ಪದ ಸೊಂತದ್ದು;  ಪಟ ಇಂಟರ್ನೆಟ್ಟಿಂದ.

~*~*~*~

ಬೆಶಿಲೇ ನೀ ಎಂತಕೆ ಹೀಂಗೊಂದು ಕಾಯ್ತೆ?!, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ಕೊಡೆಯಾಲಲ್ಲಿ ಮಳೆ ಬಂದು ರಜಾ ತಂಪಾಯಿದು ಭಾವಯ್ಯಾ. ಮದ್ರಾಸಿಲ್ಲಿ ಇನ್ನುದೆ ಸೆಕೆ ಆಯಿಕ್ಕಂಬಗ.
  ಪದ್ಯ ಲಾಯಕಾಯಿದು. ಬಾ ಮಳೆಯೇ ಬಾ.. ಹೇಳ್ತ ಲಕ್ಷ್ಮಣರಾಯನ ಪದ್ಯ ನೆಂಪಾತದ. ಚೆನ್ನೈಲಿ ತುಂಬಾ ಜೆನ ಫಿಲ್ಮ್ ಪ್ರೊಡ್ಯೂಸರುಗೊ ಇದ್ದವೂ ಹೇಳಿ ಕೇಳಿದ್ದೆ. ಆರಿಂಗಾರು ಪದ್ಯ ತೋರುಸಿರೆ ಹೇಂಗೆ ? ಸೆಕೆ ಹೇಳಿ ಉರಿ ಎಳಗದ್ದೆ ಭಾವಯ್ಯ ? ತಮಾಷೆಗೆ ಹೇಳಿದೆ ಆತೊ ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬೇಡಪ್ಪಾ ಬೇಡ ನವಗೆ ನಿಂಗೊ ಹೇಳಿದ ಆ ಪಿಲ್ಮು. ನವಗೆ ನಮ್ಮ ಬೈಲೇ ಪರಮ ಸೌಖ್ಯ. ಒಪ್ಪಕ್ಕೆ ಧನ್ಯವಾದ ಬೊಳುಂಬು ಮಾವ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಏ ಚೆನ್ನೈಭಾವ,
  ಬೆಶಿಲೇ ಬೆಶಿಲೇ ಬಪ್ಪಲೆ ನೀನಾರ ಕಾಯ್ತೆ ? ಹೇಳಿ ಕೇಳೆಕ್ಕಷ್ಟೆ.
  ನಿ೦ಗಳ ಪದ್ಯ ನೋಡಿ ಊರಿಡೀ ಮಳೆಗಾಲ ಶುರುವಾತದಾ..
  {ಮುಳಿಯ ಭಾವ ಇಪ್ಪದಾಯ್ಕು ಕಾಂಕ್ರೀಟ್ ಮನೇಲಿ} ನಿಜ ಹೇಳೆಕ್ಕೋ..ಆನಿಪ್ಪದು ಕಾ೦ಕ್ರೀಟುಕಾಡಿಲಿ,ಆದರೆ ಓಡು ಮುಚ್ಚಿದ ಮಣ್ಣಿನ ಮನೆಲಿ!!

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲಿದ್ದರೂ ಭಾವ, ನಿಂಗೊಗೆ ಬೆಶಿಯೋ ಅಲ್ಲ ನಿಂಗೊ ಬೆಶಿಯೋ ಗೊಂತಾವ್ತಿಲ್ಲೆ ಇದಾ ಕೆಲವು ಸರ್ತಿ. ಒಪ್ಪಕ್ಕೆ ಧನ್ಯವಾದ ಭಾವಯ್ಯ.

  [Reply]

  VA:F [1.9.22_1171]
  Rating: 0 (from 0 votes)
 4. AnandaSubba

  ಸೂಪರ್ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣತೆಕ್ಕುಂಜ ಕುಮಾರ ಮಾವ°ಬೋಸ ಬಾವಶೀಲಾಲಕ್ಷ್ಮೀ ಕಾಸರಗೋಡುಶುದ್ದಿಕ್ಕಾರ°ಶ್ಯಾಮಣ್ಣಡೈಮಂಡು ಭಾವವೇಣೂರಣ್ಣಗೋಪಾಲಣ್ಣಯೇನಂಕೂಡ್ಳು ಅಣ್ಣಮುಳಿಯ ಭಾವಪುಣಚ ಡಾಕ್ಟ್ರುಉಡುಪುಮೂಲೆ ಅಪ್ಪಚ್ಚಿಅಜ್ಜಕಾನ ಭಾವಕಜೆವಸಂತ°ಪುಟ್ಟಬಾವ°ಎರುಂಬು ಅಪ್ಪಚ್ಚಿಮಾಲಕ್ಕ°ಶಾ...ರೀಜಯಶ್ರೀ ನೀರಮೂಲೆನೆಗೆಗಾರ°ಅನು ಉಡುಪುಮೂಲೆಅಕ್ಷರ°ಮಾಷ್ಟ್ರುಮಾವ°ಶಾಂತತ್ತೆಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ