ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..?

November 4, 2011 ರ 8:30 amಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಐದು ದಿನದ ನವರಾತ್ರಿ ಕಳುದ ಕೂಡ್ಳೆ ಬೋಚಬಾವನ ಕಾಂಬಲಿಲ್ಲೆ ಹೇಳಿದಿರ?
ಬೋಚಬಾವ° ಓ ಅಲ್ಲಿ ಬೈಲಕರೆಯ ಗುಡ್ಡೆಕೊಡಿಲಿ ಉದಿಹಗಲು ಬಿಡದ್ದೆ ತಪಸ್ಸು ಮಾಡಿದ್ದ°.  ತಪಸ್ಸು ಮಾಡಿಮಾಡಿ ಅವ° ಈಗ ಬೋಚದಾಸ° ಆಯಿದ°.


ತಪಸ್ಸಿಂದ ಎದ್ದು ಬೈಲಿಂಗೆ ನಡಕ್ಕೊಂಡು ಬಪ್ಪಗಳೇ, ಈ ಕೆಳಾಣ ಪದ್ಯ ಹೇಳಿಗೊಂಡು ಬಂದೆ.
ಯೇವಗಳೂ ಮಾಡುದನ್ನೇ ಬರದ್ದು, ಆದರೆ ಪದ್ಯ ಕಟ್ಟಿ ಬರದ ಕಾರಣ ನಿಂಗೊಗೆ ಹೇಳೆಕ್ಕು.
ನೋಡಿಕ್ಕಿ ಆತಾ

ಬೋಚದಾಸ°

ಭಾಗ 1:

ಉದಿಯಪ್ಪಗ ಬೇಗ ಎದ್ದು,
ಒ೦ದು ಚೆ೦ಬ್ಬು ಮೋರೆ ತೊಳದು,
ಬೆರಟ್ಟಿ ತಟ್ಟಿ , ಹಾಲು ಕರದು,
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ಒ೦ದು ಲೋಟ ಚಾಯ ಉರ್ಪ್ಪಿ,
ಗುಡ್ಡೆಲಿಪ್ಪ ಹುಲ್ಲು ಪೊರ್ಪ್ಪಿ,
ಹಟ್ಟಿಗೆಲ್ಲಾ ಹುಲ್ಲು ಹಾಕಿ,
ಬೋಚ° ಎ೦ತ ಮಾಡಿದಾ°, ಬೋಚ°  ಎ೦ತ ಮಾಡಿದಾ°..? 😉

ಒ೦ದಳಗೆ ನೀರಿಲ್ಲಿ ಮಿ೦ದು,
ಸಮಕ್ಕೆ ನಾಲ್ಕು ತೆಳ್ಳವು ತಿ೦ದು,
ಪೇಪರು ತಿರ್ಗಮುರ್ಗ ನೋಡಿ,
ಬೋಚ° ಎ೦ತ ಮಾಡಿದಾ°, ಬೋಚ°  ಎ೦ತ ಮಾಡಿದಾ°..? 😉

ಗುಡ್ಡೆ ಹತ್ತಿ ಇಳುದು ಓಡುದು.. ;)
ಗುಡ್ಡೆ ಹತ್ತಿ ಇಳುದು ಓಡುದು.. ;)—

ಗುಡ್ಡೆ ಹತ್ತಿ ಇಳುದ ಓಡಿ,
ಅಡ್ಡದಿಡ್ಡಿ ಗ೦ಡಿ ತೋಡಿ,
ಒ೦ದೇ ಕಾಲಿಲಿ ಸ೦ಕದಾ೦ಟಿ,
ಬೋಚ ಎ೦ತ ಮಾಡಿದಾ, ಬೋಚ ಎ೦ತ ಮಾಡಿದಾ..? 😉

ಹಲ್ಲು ಕಿಸಿವ ನೆಗೆ ಮಾಣಿ,
ಶುದ್ದಿ ಹುಡ್ಕುವ ಪೆ೦ಗ ಮಾಣಿ,
ಇವರೆಡಕ್ಕಿಲ್ಲಿ ಗೆ೦ಟು ಮಾಣಿ-ಯೊಟ್ಟಿ೦ಗೆ ,
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

ಮದ್ಯಾಂತಿರುಗಿ ಬಯಲಿಗಿಳಿದು,
ಪೆರಟ್ಟು ಮಾಡಿ ಬೈಗಳುತಿ೦ದು,
ಗುರಿಕ್ಕಾರ್ರು ಕೆಮಿಯ ತಿರ್ಪ್ಪಿ, 😉
ಬೋಚ° ಎ೦ತ ಮಾಡಿದಾ°, ಬೋಚ° ಎ೦ತ ಮಾಡಿದಾ°..? 😉

~*~*~

ಸದ್ಯದಲ್ಲೇ ನಿರೀಕ್ಷಿಸಿ ಮು೦ದುವರೆದ ಭಾಗ …..  :-)
ಸದ್ಯಕ್ಕೆ ತಪಸ್ಸಿಲ್ಲಿ ಲೀನ..  😎

ಸೂ: ಪಟ ಬಿಡುಸಿದ್ದು ಬೋಚು ಬಾವ °ಅಲ್ಲ.  ಅವನ ಪರವಾಗಿ ಚುಬ್ಬಣ್ಣ 😉

ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..?, 4.8 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

  1. ಅನು ಉಡುಪುಮೂಲೆ
    ಅನುಪಮ

    ಬೋಚ ಬಾವನ ತಪಸ್ಸು ಕೆಡಿಸಿದರೆ ಈ ಪದ್ಯದ ಮು೦ದಾಣ ಭಾಗ ಬೇಗ ಬಕ್ಕು.ಹಾ೦ಗಾಗಿ………………ವಿಶ್ವಾಮಿತ್ರನ ತಪಸ್ಸು ಕೆಡುಸುಲೆ ಮೇನಕೆ ಬ೦ದ ಹಾ೦ಗೆ ಅರಿನ ಕಳುಸುದಪ್ಪಾ…….ಮು೦ದಿನ ಭಾಗ ಓದ್ಲೆ ತಡ ಆವುತ್ತು…

    [Reply]

    ಬೋಸ ಬಾವ

    ಬೋಸ ಬಾವ Reply:

    ಅಪ್ಪಪ್ಪು..!
    ಅ೦ಬಗ ಒ೦ದು ಉಪಾಯ ಮಾಡುವೊ..
    ಈ ಸರ್ತಿ ಕಣ್ಣು ಮುಚ್ಚಿಗೊ೦ಡು ತಪಸ್ಸು ಮಾಡ್ತೆ.. 😉

    [Reply]

    VN:F [1.9.22_1171]
    Rating: 0 (from 0 votes)
  2. ಅರ್ಗೆ೦ಟು ಮಾಣಿ

    ಅಪ್ಪಪ್ಪು ಎಂತದೋ ಮಾಡಿದ…. ನೆ೦ಪಾವ್ತಾ ಇಲ್ಲೆ. ಗಡಿ-ಬಿಡಿಲಿ ಎ೦ತಪ್ಪ! ಏ ಮಾ೦ತ್ರ ಪದ್ಯ ಪಷ್ಟಾಯ್ದು. ಇದೊ೦ದು ಲಾಯ್ಕ ಮಾಡಿದ.. ಈ ಮೇನಕೆ ಆರು?

    [Reply]

    ಬೋಸ ಬಾವ

    ಬೋಸ ಬಾವ Reply:

    ಉಮ್ಮಪ್ಪಾ..!
    ನವಗರಡ್ಯ..

    [Reply]

    VN:F [1.9.22_1171]
    Rating: 0 (from 0 votes)
  3. ಅಡ್ಕತ್ತಿಮಾರುಮಾವ°

    ಬಾರೀ ಪಸ್ಟ್ಟಾಯಿದು ಬೋಚ ಬಾವಾ ಆ ಗುಡ್ಡೆಲಿ ಎಂತಾರೂ ವಿಶೇಶ ಇಕ್ಕಾ ಹೇಳಿ …!!ಅಲ್ಲದ್ದರೆ ಅಲ್ಲಿಂದ ಕೆಳ ಇಳಿವಗ ಹೀಂಗೆಲ್ಲಾ ಬರೆಯೆಕ್ಕಾರೆ..ಚುಬ್ಬಣ್ಣ ಪಟ ತೆಗದರೂ ಚಿತ್ರ ಬಿಡಿಸಿದರೂ ಅದು ಲಾಯಿಕವೆ ಇಕ್ಕಸ್ಟ್ಟೆ..

    [Reply]

    ಬೋಸ ಬಾವ

    ಬೋಸ ಬಾವ Reply:

    ಎ೦ತದೇ ಹೇಳಿ ಮಾವ,
    ಗುಡ್ಡೆ ಹತ್ತುಸ್ಸು.. ಭಾರಿ ಕಷ್ಟ..
    ಇಳಿವದು ಸುಲಭ ಅಲ್ಲದೊ? 😉

    [Reply]

    VN:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ನೀರ್ಕಜೆ ಮಹೇಶಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಗಣೇಶ ಮಾವ°ಅನಿತಾ ನರೇಶ್, ಮಂಚಿಚುಬ್ಬಣ್ಣದೊಡ್ಡಭಾವಪುಣಚ ಡಾಕ್ಟ್ರುರಾಜಣ್ಣಶ್ಯಾಮಣ್ಣಗೋಪಾಲಣ್ಣಶ್ರೀಅಕ್ಕ°ಕೇಜಿಮಾವ°ದೊಡ್ಮನೆ ಭಾವಬಂಡಾಡಿ ಅಜ್ಜಿಶಾಂತತ್ತೆಶೀಲಾಲಕ್ಷ್ಮೀ ಕಾಸರಗೋಡುಮುಳಿಯ ಭಾವಹಳೆಮನೆ ಅಣ್ಣಡಾಮಹೇಶಣ್ಣಪುತ್ತೂರುಬಾವಸರ್ಪಮಲೆ ಮಾವ°ಕೆದೂರು ಡಾಕ್ಟ್ರುಬಾವ°ಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ