ಎನ್ನಜ್ಜನ ಸೈಕಲ್ ಸವಾರಿ !

December 30, 2010 ರ 3:19 pmಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೂವತ್ತೈದು ವರ್ಷ ಹಿಂದಾಣ ಇನ್ನೊಂದು ಲೇಖನ ಇಲ್ಲಿದ್ದು.  ಇದುದೆ ಎನ್ನ ಅಪ್ಪ (ವಿದ್ವಾನ್ ದಿವಂಗತ ಬೊಳುಂಬು  ಕೃಷ್ಣ ಭಟ್) ಬರದ ಒಂದು ಹವ್ಯಕ ಲೇಖನ. ಆ ಕಾಲಲ್ಲಿ ಈಗಾಣ ಕಾಲದ ಹಾಂಗೆ   ಟಿವಿಯ ಪೊದ್ರ ಇತ್ತಿಲ್ಲೆ.  ಆಧುನಿಕ ಕಾಲದ, ಕಾರು ಬೈಕು,  ವಿವಿಧ ತರದ ವೈಜ್ಞಾನಿಕ ಉಪಕರಣಂಗೊ ಕಡಮ್ಮೆ ಇದ್ದ ಕಾಲ ಅದು.    ಎಲ್ಲೋರಿಂಗು ಪುರುಸೊತ್ತು ಹೇಳ್ತದು ಇತ್ತು.  ಈಗಾಣ ಕಾಲಲ್ಲಿ ಕೆಲಸ ಏವದೂ ಇಲ್ಲದ್ರೂ, ಪುರುಸೊತ್ತು ಹೇಳ್ತದು ಆರ ಕೈಲಿಯುದೆ ಇಲ್ಲೆ. ಹಳ್ಳಿ ಮನೆಲಿ ಒಂದು ಸೈಕಲು ಹೇಳಿರು ಅಂದ್ರಾಣ ಕಾಲಲ್ಲಿ ವಿಶೇಷವೇ. ಅಂಬಗಾಣ ಕಾಲ ಹೇಂಗಿದ್ದಿಕ್ಕು ಹೇಳಿ ಮನಸ್ಸಿಲ್ಲಿ ಗ್ರೇಸಿಂಡು ಈ ಲೇಖನ ಓದಿ.  ಅಜ್ಜನ ಭಾಷೆಲಿ, ಅಜ್ಜನ ಶೈಲಿಲೇ  ಹೋವ್ತ ಈ  ಕಥೆಯ ಓದುವಗ ಒಪ್ಪಣ್ಣ ಕಳುದ ವರ್ಷ ಬರದ “ರೂಪತ್ತೆ ಕಾರು ಕಲುತ್ತ ಶುದ್ದಿ ನೆಂಪಕ್ಕು.  ಅಂದೇ ಈ ಕಥೆಯ ಬೈಲಿನವಕ್ಕೆ ಹೇಳೆಕು ಹೇಳಿ ಇದ್ದಿದ್ದೆ.  ಎಲ್ಲದಕ್ಕೂ ಕಾಲ ಕೂಡಿ ಬರೆಕಲ್ಲದೊ ?     ಏ ಒಪ್ಪಣ್ಣ,  ರೂಪತ್ತೆ ಕಾರು ಕಲುತ್ತ ಶುದ್ದಿ ಲಾಯಕಿತ್ತು.  ಅದರ ಒಂದರಿ ಇಲ್ಲಿಗೆ ಲಿಂಕು ಮಾಡ್ಳೆ ಗುರಿಕ್ಕಾರಂಗೆ ಹೇಳಿಕ್ಕುಆತೊ ?

ಎಲ್ಲಿ ಹೋದರೂದೆ ಕಟ್ಟಿದ ಮನೆ ತಪ್ಪದ್ದೆ ಒಂದು ಜಾತಿ ರೇಡಿಯೋ.     ಹಕ್ಕಿ ಎದ್ದು ನೆಲಕ್ಕೆ ಕೂರೇಕಾರೆ ಮದಲೆ ಸುರುವಾತು ಹರಟೆ ಮಾಡಲೆ. ನೆಡು ಇರುಳಾದರೂ ಮುಗಿವಲೆ ಇಲ್ಲೆ. ಮತ್ತೆ ಎಂತಾರೂದೆ ವಿಶೇಷ ಜೆಂಬಾರ ಮಿನಿ ಇದ್ದೂ ಹೇದಾದರೆ, ಮೈಕ್ರೋ, ಪೆಟ್ಟಿಪ್ಪಾಟ್ಟೋ ಇದ್ದೇ ಇದ್ದಾನೆ.

ಹಾಂಗೆ ಮಾರ್ಗಕ್ಕೆ ಇಳುದರೆ ಸಾಕು ಒಂದು ಸೈಕಲು.  ಮತ್ತೆ ದೊಡ್ಡ ಮಾರ್ಗಂಗಳಲ್ಲಿ ಹೇಂಗೂ ಇದ್ದಾನೆ !  ಮೋಂಟ್ರು, ರಾಲಿ, ಕಾರು ಹೇದೂ, ಅದಾದರೂ ಸಾರ ಇಲ್ಲೆ. ಎಲ್ಲಿಯಾದರೂ ದೂರ ಹೋಯೆಕಾರೆ ಒಂದು ಉಪಕಾರ ಇದ್ದು ಹೇಳುವೊ.  ಆದರೆ ಈ ಸೈಕಲ್ಲಿಂದ ಎಂತ ಪ್ರಯೋಜನ ಕೇಳ್ತೆ ಆನು. ಎಲ್ಲಿಯಾದರೂ ಹೋಪಲೆ ಹೆರಟರೆ ಸಾಕು. ಮಾರ್ಗ ಹೇದು ಇಲ್ಲೆ.  ಗುಡ್ಡೆ ಹೇದು ಇಲ್ಲೆ.  ಎಲ್ಲಿಯಾದರೂ ಇದ್ದೇ ಇದ್ದವು, ಈ ಸೈಕಲು ಪೋರಂಗೊ.  ಹಿಂದಂದ ಬಂದವು “ಕಿಣ್, ಕಿಣ್” ಮಾಡಿದವು.  ಎಲ್ಲಿಂದ ಬತ್ತು, ಹೇದು ಗೊಂತಾವುತ್ತೊ ? ನಾವು ಎತ್ತ ತಿರುಗಿತ್ತೋ ಅತ್ತಂದಾಯಿಂದಲೆ ಬಂದವು ಅವು ಮೈಗೆ ಹಾಕಲೆ, ಹಾಂಗೆ ಒಂದಾರಿ ಎಂಗಳ ಅಳಿಯ ರಾಮನ ಹತ್ತರೆ ಎನಗೆ ಹೇದು ಹೋತು.

“ಅಪ್ಪೋ, ರಾಮ ಈ ಬೆಳ್ಳೆಕ್ಕಾರಂಗೊ ಮಾಡಿದ್ದದು ಮತ್ತೆಲ್ಲ ಒಳ್ಳೆದಾಯಿದಾನೆ! ಆದರೆ ಈ ಕೆಟ್ಟುಂಕೆಣಿ ರೇಡಿಯೋ, ಮತ್ತೊಂದು ಹುಳು ಸೈಕಲು, ಎಂತಾಕೆ ಮಾಡಿ ಹಾಕಿದವೊ ” ಹೇದು.

ಅಷ್ಟಪ್ಪಾಗ ಅವನ ಲೆಕ್ಚರು ಸುರು ಆತು. “ಅಲ್ಲ ಮಾವ, ಬೆಳ್ಳೆಕ್ಕಾರಂಗೊ ಈ ಕಾಂಗ್ರೆಸ್ಸಿನವರ ಹಾಂಗೆ ಉಪಕಾರಕ್ಕೆ ಇಲ್ಲದ್ದ ಕೆಲಸ ಮಾಡುತ್ತವಲ್ಲ. ಅದರಿಂದ ಜೆನಂಗವಕ್ಕೆ ಒಳ್ಳೆ ಉಪಕಾರ ಇದ್ದು.  ಸೈಕಲಿಂದ ಸಮಯ ಉಳಿತಾಯ ಆವುತ್ತು. ರೇಡಿಯೋಂದ ಸಮಯ ಬೇಜಾರಿಲ್ಲದ್ದೆ ಕಳವಲೆ ಆವುತ್ತು. ಹಾಂಗಾಗಿ ಈ ಎರಡು ಸಾಧನಂಗೊ ಬಹಳ ಅಗತ್ಯ.  ದೂರ ಹೋಪಲೆ ಬಸ್ಸು ಕಾರು ಇದ್ದರೂದೆ ಅದು ನಮಗೆ ಬೇಕಪ್ಪಗ ಬೇಕಾದಲ್ಲಿ ಇದ್ದೊ ? ಸಮಯ ಕಾದು ಕೂರೆಡದೊ ? ಅಷ್ಟಪ್ಪಾಗ ಬಂದರೆ ಬಂತು, ಇಲ್ಲದ್ರೆ ಇಲ್ಲೆ. ಸೈಕಲ್ ಆದರೆ ಹಾಂಗಲ್ಲ, ನಮಗೆ ಬೇಕಪ್ಪಗ ಬಿಟ್ಟೊಂಡು ಹೋಪಲಾವುತ್ತಿಲ್ಲೆಯೊ ? ದೊಡ್ಡ ದೊಡ್ಡವಕ್ಕೆ ಕಾರು, ನಮ್ಮ ಹಾಂಗಿಪ್ಪವಕೆ ಸೈಕಲು ” ಹೇದು ರಂಗು ಮಾಡಿದ ಅಳಿಯ.

ಅಂಬಾಗ ಎನಗೆ ತೋರಿತ್ತು. ಅಪ್ಪದು ಹೇದು. ಆದರೆ ಸಮಯ ಕಳವಲೆ ರೇಡಿ (ರೇಡಿಯೋ) ಎನಗೆ ಅಗತ್ಯ ಇಲ್ಲೆ. ಎನಗೆ ಸಮಯ ಎಷ್ಟಿದ್ದರೂ ಸಾಲುತ್ತಿಲ್ಲೆ.  ಒಂದು ಮದುವೆ, ಉಪನಯನ, ಬಾರ್ಸ, ಪುಣ್ಯಾಯ, ಬೊಜ್ಜ, ವರ್ಶಾಂತ, ತಿತಿ, ಮತಿ ಹೇದು ದಿನ ನಿತ್ಯ ಇದ್ದೇಇದ್ದು.  ಎಷ್ಟು ಓಡಿದರೂ ಸಾಕಾವುತ್ತಿಲ್ಲೆ.  ಹಾಂಗಾಗಿ ನಮಗೂ ಒಂದು ಸೈಕಲ್ಲು ತೆಕ್ಕೊಂಡರೆ ಅಕ್ಕೋ ಹೇದು. ರಾಮನ ಹತ್ರೆ ಹೇದೂ ಹೋತು.  ಅವಂಗೆ ಅಷ್ಟು ಹೇದ್ದೇ ಸಾಕಾತು. ತೋಳಗೆ ಮೀಸೆ ಹೊಗುಸಲೆ ಎಡೆ ಸಿಕ್ಕಿದರೆ ಸಾಕಾಡ. ಅದು ಹೇಂಗಾದರೂ ಹೊಗುಗಾಡ. ಹಾಂಗೆ ರಾಮಂಗೆ ರಜ ಎಡೆ ಸಿಕ್ಕಿದ್ದು ಅವ ಅದರ ಗಟ್ಟಿ ಹಿಡುಕ್ಕೊಂಡ.

“ಅಕ್ಕು ಮಾವ, ಬಹಳ ಒಳ್ಳೆದು. ಅಪ್ಪಲೆ ಬೇಕು ನಮಗೂ ಒಂದು ಸೈಕಲು” ಹೇದು ಸುರು ಮಾಡಿದ.

“ಅಪ್ಪೋ ರಾಮ, ಅದರ ನಾವೆಲ್ಲಿ ಮಾಡುಸುವುದು ” ?

“ಮಾವ ಅದರ ಮಾಡುಸುವುದಲ್ಲ. ಅದು ಬೆಳ್ಳೆಕ್ಕಾರಂಗೊ ಮಾಡಿ ಕೊಡೆಯಾಲಕ್ಕೆ ಎಲ್ಲ ಕಳುಸುತ್ತವು. ಅಲ್ಲಿಂದ ತೆಕ್ಕೊಂಡರಾತು. ”

ಅಂಬಾಗ ಆನು ಹೇದೆ. “ಅದೆಲ್ಲಿ ಸಿಕ್ಕುತ್ತಪ್ಪ ! ಎನಗೆ ಅದೊಂದು ಅರಡಿಯ. ಆನು ಕೊಡೆಯಾಲಕ್ಕೆ ಅಡಕ್ಕೆ ತೆಕ್ಕೊಂಡು ಹೋದರೆ ರಾಮಪ್ಪ ಸೇನವನ ಬಂಡಸಾಲೆಗೆ,  ಶಂಭು ಭಾವನ ಹೋಟ್ಳಿಂಗೆ ಅಷ್ಟೆ ! ಮತ್ತೆ ಅಲ್ಲೆ ಇಲ್ಲೆ ತಿರುಗಿಂಡು ಹೋವುತ್ತ ಕಟ್ಟಲೆ ಇಲ್ಲೆ. ಬೇರೆಂತಾರು ಬೇಕಾದರೆ ಕಣ್ಯಾರಲ್ಲೆ ಸಿಕ್ಕುತ್ತಾನೆ. ಮತ್ತೆಂತಕೆ ಹೋಯೇಕು ನಮಗೆ ಆರಾರ ಬಾಗಿಲಿಂಗೆ.  ಹಾಂ. ನೆಂಪಾತು, ಅದ ನಾವು ಭಂಡಸಾಲೆಗೆ ಹೋಪಾಗ ತುಂಬಾ ಮೋಂಟ್ರುಗೊ ಓಡುತ್ತ ಆ ಒಂದು ಜಾಗೆ ಇದ್ದಾನೆ, ಎಂತ ಹೇಳುತ್ತವಪ್ಪ ಅದಕ್ಕೆ, “ಸೋಂಪನ ಕಟ್ಟೆ” ಅಲ್ಲದೊ, ಅಲ್ಲಿ ಕಲ್ಯಾಣಿ ಭಾವನ ಹೇದು ಬರಕ್ಕಂಡು ಒಂದು ದೊಡ್ಡ ಕಟ್ಟೋಣ ಇದ್ದಾನೆ.  ಅದು ಎಂತದಪ್ಪ, ಕಾಪಿ ಹೋಟ್ಳೋ, ಗಡಂಗೊ ? ಕಲ್ಯಾಣಿ ಹೇದರೆ ದೀವಿತ್ತಿಯೇ ಆಗಿರೇಕು. ಅದರ ಭಾವನ ಹೋಟ್ಳು ಹೇದರೆ ಗಡಂಗೇ ಆಯಿಕ್ಕು. ಅದರ ಬಾಗಿಲಿಲ್ಲಿ ಸುಮಾರು ನಿಲ್ಲಿಸೆಂಡು ಇದ್ದತ್ತು “.

ಅಂಬಾಗ ರಾಮ ಹೇಳಿದ “ಅಲ್ಲ ಮಾವ ! ಸೋಂಪನ ಕಟ್ಟೆ ಅಲ್ಲ, ಹಂಪನಕಟ್ಟೆ. ಕಲ್ಯಾಣಿ ಭಾವನದ್ದು ಅಲ್ಲ, ಕಲ್ಯಾಣಿಭವನ ಹೇದು. ಅದು ಕಾಪಿ ಹೋಟ್ಳೆ, ಗಡಂಗು ಅಲ್ಲ. ಶುದ್ದ ಉಡುಪಿ ಬ್ರಾಹ್ಮಣರದ್ದು. ಅದರ ಎದುರು ನಿಲ್ಲುಸಿದ್ದದು ಅಲ್ಲಿಗೆ ಕಾಪಿ ಕುಡಿವಲೆ ಬಂದವರದ್ದು.  ಮಾರುತ್ತ ಬಗೆ ಅಲ್ಲ. ಅದಿರಳಿ ನಿಂಗೊಗೆ ಆಯೇಕು ಹೇದು ಇದ್ದರೆ ಆನು ತಂದು ಕೊಡುವೆ, ರೂಪಾಯಿ ಎನ್ನ ಹತ್ರೆ ಕೊಟ್ಟರೆ ಸಾಕು.”

“ಅದಕ್ಕೆ ರೂಪಾಯಿ ಎಷ್ಟು ಬೇಕಕ್ಕು? ”

ರಾಮ ಹೇಳಿದ, “ರೂಪಾಯಿ ಎಂತದು, ಒಂದು ಮುನ್ನೂರು ಇದ್ದರೆ ಸಾಕಕ್ಕು” ಹೇದು ಸಲೀಸಾಗಿ ! ಎನಗೆ ಒಂದಾರಿ ಜುಂ ಹೇಳಿತ್ತು. “ಅಷ್ಟು ರೂಪಾಯಿ! ಇಷ್ಟು ರೂಪಾಯಿ ತೆಕ್ಕೊಂಡು ನಿನಗೆ ಒಬ್ಬಂಗೆ ಹೋಪಲೆಡಿಗೊ ?  ಆನೂ ಬರೆಕೊ ? ಅದು ಪೇಟೆ. ಹೇಗ್ರಿತ್ತವು ಬೇಕಾದರೂ ಇಕ್ಕು ಅಲ್ಲಿ. ನೀನು ಬಿಡುಸುತ್ತದರ ನೋಡೆಂಡು ಬಾಯಿಗೆ ಹಾಕಿಕ್ಕಲೆ !” ಹೇದು ಜಾಗ್ರತೆ ಹೇಳಿದೆ.

ಅಂಬಾಗ ಅವ ಹೇದ “ಅದೆಲ್ಲ ಸಾರ ಇಲ್ಲೆ, ನಿಂಗೊಗೆ ಹೆದರಿಕೆ ಬೇಡ” ಹೇದು.

“ಆದರೂದೆ ಎನಗೆ ಧೈರ್ಯ ಬರೇಕಾನೆ, ಈಗಾಣ ಮಕ್ಕೊಗೆ ಒಂದೊಂದು ವೇಷ.  ಹೇದರೆ ! ಎಣ್ಣೆ ಕಾಕತದ ಹಾಂಗಿರುತ್ತ ವಸ್ತ್ರದ ಅಂಗಿಯ ಎದುರಾಣ ಕಿಸೆಲಿ ರೂಪಾಯಿ ಹಾಕುಗು. ಎಲ್ಲೋರು ಕಾಣುತ್ತ ಹಾಂಗೆ, ಒಂದು ಪಕ್ಕೀಟು ಬೇಡ, ಅದರ ಮೇಗೆ ಹಾಕಲೆ ಚೌಕ ಬೇಡ. ಹೆಗಲಿಂಗೊಂದು ಎಲೆವಸ್ತ್ರ ಬೇಡ, ಎಂತದು ಬೇಡ. ದೊಡ್ಡ ದೊರೆ ಹಾಂಗೆ ಕುತ್ತ ನೆಡಗತ್ತೆ. ಹೇಂಗೆ ಹೀಂಗೆರುತ್ತವರ ಹತ್ತರೆ ರೂಪಾಯಿ ಕೊಡುತ್ತದು ?!”

ಅಂತೂ ರಾಮ ಎನ್ನ ಹೇಂಗಾರುದೆ ಚೆಪ್ಡಿ ಮಾಡಿ ಒಪ್ಪುಸಿ ರೂಪಾಯಿ ಬೇಡಿಂಡು ಹೋಗಿ, ಕೊಡೆಯಾಲಂದ ಒಂದು ಸೈಕಲ್ಲು ತೆಕೊಂಡೇ ಬಂದ. ಬಂದಿಕ್ಕಿ ಹೇಳುತ್ತ, “ಹರ್ಕುಲಿಸಿಂಗೆ ಅಷ್ಟು. ಬಿ ಎಸ್ ಸಿ ಗೆ ಇಷ್ಟು. ರಾಬಿನ್ ಹುಡಿಂಗೆ ಅಷ್ಟು. ಆಚದಕ್ಕೆ ಅಷ್ಟು, ಈಚದಕ್ಕೆ ಇಷ್ಟು” ಹೇದು ವಿವರುಸಲೆ ಸುರು ಮಾಡಿದ !

“ನೀನು ಅದಕ್ಕೆಲ್ಲಾ ಕ್ರಯ ಕೇಳಲೆ ಹೋದ್ದದೆಂತಕೆ, ನಮಗೆ ಬೇಕಾದ್ದು ಸೈಕಲು ಅಲ್ಲದೊ ?”

“ಅದೆಲ್ಲಾ ಸೈಕಲಿನ ಜಾತಿಗಳೇ,  ನಮ್ಮ ಭತ್ತಲ್ಲಿ ಬೇರೆ ಬೇರೆ ಜಾತಿ ಇಲ್ಲೆಯೊ, ತವ್ವನೋ, ಪುಂಜಕಯಮ್ಮೆಯೋ, ಕಳಮ್ಮೆಯೋ, ಹಾಂಗೆ”.

“ಹಾಂಗೋ! ಎನಗೆ ತೋರಿತ್ತು, ಹಾಂಗೆಲ್ಲ ಹೇದರೆ, ಒಂದೊಂದಾರಿ ಮಾರ್ಗಲ್ಲಿ ಪಟ ಪಟ ಪಟ ಮಾಡೆಂಡು ಹೆಂಡತ್ತಿಯನ್ನು ಹಿಂದೆ ಕೂರುಸೆಂಡು ಬತ್ತವಾನೆ, ಹಾಂಗಿರುಸ್ಸಾಗಿಕ್ಕು ಜಾನುಸಿದೆ. ಏ, ಅಬ್ಬ, ಆ ಜೆನಂಗಳ ಎಡೆಲಿ ಇವರದ್ದು ಒಂದು ಕುಶಾಲು. ಇವಕ್ಕೆ ಹೆಂಡತ್ತಿ ಇದ್ದರೆ ಅದರ ಎಲ್ಲೋರಿಂಗು ತೋರುಸೆಂಡು ತಿರುಗೇಕೋ, ಮೈಗೆ ಮೈ ಚಾಂಟುಸಿಂಡು ಕೂರುಸೆಂಡು ಹೋವುತ್ತದು ನೋಡೇಕು. ಅಲ್ಲ ಆ ಕೂಸುಗೊಕ್ಕಾದರೂ ಒಂದಿಷ್ಟು ನಾಚಿಕೆ ಬೇಕಾನೆ !? ಗೆಂಡನ ಮೈಗೆ ಚಾಂಟಿ ಕೂದೊಂಡು ನಾಲ್ಕು ಜೆನರ ಎದುರು ಪ್ರದರ್ಶನ ಇವರದ್ದುಮರ್ಯಾದೆ ಇಲ್ಲಾದ್ದ ದಗಣೆಗೊ. ಅವು ಆದರೂ ಬಿದ್ದರೆ ಕುಂಡೆಂದ ದೂಳು ಕುಡುಗಿಕ್ಕಿ, ಮೋರೆ ಹುಳಿ ಮಾಡ್ಯೊಂಡು ಹೋಕತ್ತೆ. ಈ ಕುದುರೆಗೊ ಸೀರೆ ರವಕ್ಕೆ ಹಾಕಿಂಡು ಹಾಂಗಿರುತ್ತ ಕೆಟ್ಟುಂಕೆಣಿಲಿ ಎಂತಕೆ ಕೂರೇಕು ಹೇದು ? ರಾಮ ! ನೀನೂದೆ ಹಾಂಗಿರುತ್ತದಕ್ಕೆ ಕ್ರಯ ಮಾಡಲೆ ಹೋದೆಯೋ ತೋರಿತ್ತು “.

“ಅದು ಮಾವ !, “ಮೋಟಾರ್ ಬೈಕು”. ಅದು ಯಂತ್ರಲ್ಲಿ ಹೋವುತ್ತದು, ಅದು ಈ ಮುನ್ನೂರಕ್ಕೆ ಎಲ್ಲಿಯೂ ಸಿಕ್ಕ !  ಮೂರು, ನಾಲ್ಕು ಸಾವಿರ ಕೊಡೆಕು” ಹೇದು.

“ಓಹೋ! ಹಾಂಗೋ.  ಆನು ಇಷ್ಟರ ವರೆಗೆ ಮಾಡಿದ ರೂಪಾಯಿ ಎಲ್ಲ ಹಾಕಿದರೂ ಹಾಂಗಿರುತ್ತದರ ತೆಗವಲೆ ಎಡಿಯಪ್ಪ ! ಅದೂ ಅಲ್ಲದ್ದೆ, ಈ ನಿನ್ನ “ಅತ್ತೆ”ಯ ಹತ್ತರೆ ಹಿಂದೆ ಕೂಬಲೆ ಹೇದರೆ ಅದು ಬಪ್ಪಲೂ ಬಾರ ! ಹಾಂಗಾಗಿ ನಮಗದರ ಸುದ್ದಿ ಬೇಡ. ಅದಿರಳಿ,   ಈ ಸೈಕಲಿಲಿ ಕೂರುತ್ತದು ಹೇಂಗೆ ಹೇಳು ನೋಡುವೊ ?”

“ನಾಳಂಗೆ ಗುಡ್ಡಗೆ ಹೋಗಿ ಅದರ ಕ್ರಮ ಎಲ್ಲ ಹೇದು ನಿಂಗೊಗೆ ಕಲುಸಿ ಬಿಡುತ್ತೆ”.

………………..

ಅಜ್ಜ ಸೈಕಲು ಕಲುತ್ತ ವಿಷಯವ ಇನ್ನಾಣ ಕಂತಿಲ್ಲಿ ಹೇಳ್ತೆ,  ಈಗಾಗಲೆ ತುಂಬಾ ಉದ್ದ ಆತು.    ಇನ್ನಾಣ ಕಂತಿಲ್ಲಿ ಇನ್ನೂ ರಂಜನೆ ಇದ್ದು.  ನಾಲ್ಕು ದಿನ ಕಾಯ್ತಿ ಅಲ್ದೊ ?! ವಿಮರ್ಶೆಗೆ ಸ್ವಾಗತ.    ವಿರಾಮದ ನಂತರ ಲೇಖನ ಮುಂದುವರಿಯುವುದು. …

ಗೋಪಾಲ ಮಾವ

 

ಎನ್ನಜ್ಜನ ಸೈಕಲ್ ಸವಾರಿ !, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಡಾಮಹೇಶಣ್ಣ
  ಮಹೇಶ

  ಮಾವಾ,
  ಕ೦ತು ಕಟ್ಲೆ ತಡವು ಮಾಡೆಡಿ, ಬಡ್ಡಿ ಕಟ್ಟೆಕಾಗಿ ಬಕ್ಕು!!

  [Reply]

  VA:F [1.9.22_1171]
  Rating: 0 (from 0 votes)
 2. ದೊಡ್ಡಭಾವ

  ಪಷ್ಟು ಕ್ಲಾಸು ಆಯಿದು.ಮುಂದಾಣ ಕಂತಿನ ಕಾಯ್ತಾ ಇದ್ದೆ.ಅಪ್ಪ ಬಾಕಿ ಕಥೆ ಪೂರ್ತಿ ಮಾಡಿದವು.ಆದರೂ ಬೈಲಿಲ್ಲಿ ಓದುಲೆ ಒಂದು ಖೊಷಿ.
  ಮಾವಾ,ಎನಗೊಂದು ಸಂಶಯ.ಈ ಬರವಣಿಗೆಲಿ ಬಪ್ಪ ರಾಮನೂ, ಬೈಲಿನ ದೊಡ್ಡಮಾವ° ಹೇಳಿರೂ ಒಬ್ಬನೇ ಆಗಿಕ್ಕೋ…?

  [Reply]

  VA:F [1.9.22_1171]
  Rating: 0 (from 0 votes)
 3. ಮೋಹನಣ್ಣ
  Krishnamohana Bhat

  ಬೊಳು೦ಬುಮಾವ೦ ಎರಡ್ನೆಕ೦ತು ತಡವು ಮಾಡೀರೆ ಆನು ಸೀದ ನಿ೦ಗಳಲ್ಲಿಗೇ ಬಪ್ಪೆ ಕತೆಯ ಎರಡ್ನೆ ಕ೦ತಿನೊಟ್ಟಿ೦ಗೆ ಒ೦ದು ಕಾಪಿಯು ನಷ್ಟ ಅಕ್ಕು ಒಟ್ಟಿ೦ಗೆ ಒ೦ದಷ್ಟು ಎನ್ನ ಕೊರೆತವನ್ನೂಸಹಿಸೇಕಕ್ಕು.ಎನ್ನ ಅಪ್ಪ೦ ನಿ೦ಗಳ ಅಪ್ಪ೦ ಲೇಖನ ಬರೆತ್ತ ವಿಷಯ ಹೇಳಿಯೊ೦ಡಿತ್ತಿದ್ದವು ನಮ್ಮ ಹಾ೦ಗಿದ್ದವು ಬರದರೂ ಅದರ ಪ್ರಿ೦ಟುಮಾಡ್ಲೆ ಪೇಪರಿ೦ಗೆ ಕಳುಸಲೆ ಎಲ್ಲ ಎಡಿಗಾಗ ಹೇಳಿಹೇಳುಗು.ರಜ ರಜ ಗೀಚುತ್ತ ಅಬ್ಯಾಸ ಅಪ್ಪ೦ಗೂ ಇತ್ತು ದುರ್ದಯಿವ ವಶಾತ್ ಒ೦ದು ದೊಡ್ಡ ಕಪಾಟು ತು೦ಬಾ ಪುಸ್ತಕ೦ಗೊ ಎ೦ಗಳ ಅಶ್ರದ್ದೇ೦ದ ಒರಳಗೆ ಬಲಿ ಆತು.ಇ೦ದ್ರಾಣ ಕ್ರಯಕ್ಕಾದರೆ ಲಕ್ಷಕ್ಕೆ ಎತ್ತುಗು ಅಷ್ಟು ಪುಸ್ತಕ೦ಗೊ ಅದರಲ್ಲಿ ಎಷ್ಟೋ ಇ೦ದು ಸಿಕ್ಕಲೇ ಸಾದ್ಯ ಇಲ್ಲದ್ದದು.ಇರಳಿ ಆನು ಈಗಲೇ ಕೊರವಲೆ ಸುರುಮಾಡೀರೆ ಬಯಲಿನೋರೆಲ್ಲ ಎನ್ನ ಕಾ೦ಬಾಗ ತಲೆ ತಪ್ಸಿ ಹೋಪಲೆ ಸುರು ಮಾಡುಗು.ಒಪ್ಪ೦ಗಳೊಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಗೋಪಾಲ ಮಾವ

  ದೊಡ್ಡಬಾವ ಕೇಳಿದ ಸಂಶಯ ಎನಗೂ ಬಂತು. ಆ ಅಳಿಯ ರಾಮ, ದೊಡ್ಡ ಭಾವ “ರಾಮ”ನೇ ಆಯ್ಕೊ ಹೇಳಿ. ನಿಜ ಆಗಿಪ್ಪಲೂ ಸಾಕು. ಆದರೆ ಗುರಿಕ್ಕಾರರು ಲೇಖನದ ಕೆಳ ಬರದ ವಿಶೇಷ ಸೂಚನೆಲಿ ಹೇಳಿದ್ದವು, ಈ ಲೇಖನಂಗಳಲ್ಲಿ ಬತ್ತ ವ್ಯಕ್ತಿಗೊ ಬರೇ ಕಾಲ್ಪನಿಕ ವ್ಯಕ್ತಿಗೊ. ನಿಜ ಜೀವನಕ್ಕೂ, ಬೊಳುಂಬು ಮಾವ ವಿವರುಸುವ ಕಥೆಗೂ ಏವ ಸಂಬಂಧವೂ ಇಲ್ಲೆ. ಆದರೆ, ಮನಸ್ಸಿಂಗೆ ಕೊಶಿ ಕೊಡುತ್ತರೆ, ಮನಸ್ಸಿಂಗೆ ಬೇಜಾರು ಆಗದ್ರೆ, ಈ ಲೇಖನದ ಒಟ್ಟಿಂಗೆ ಇದ್ದ ಸಂಬಂಧಂಗೊ, ಕಾಲ್ಪನಿಕ ಆಯೆಕೂ ಹೇಳಿ ಎಂತಕೆ ? ನಿಜವಾದರೂ ತೊಂದರೆ ಇಲ್ಲೆ ಅಲ್ಲದೊ ಅಳಿಯಾ ?

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಗೋಪಾಲ ಮಾವ

  ಎಡಕ್ಕಿಲ್ಲಿ ಉತ್ತರ ಕೊಡ್ಳೆ ಎಡಿತ್ತಿಲ್ಲೆ ಆನೇ, ಈ ಹೊಸಾ ಬೈಲಿಲ್ಲಿ. ಕೃಷ್ಣಮೋಹನ ಭಾವಯ್ಯ, ನಿಂಗೊ ಎಷ್ಟು ಕೊರದರೂ ಬೇಜಾರಿಲ್ಲೆ. ಒಂದಾರಿ ಕೂದು ಹಳೆ ವಿಚಾರಂಗಳ ಎಲ್ಲ ಖುದ್ದು ಮಾತಾಡುವೊ. ನಿಂಗೊ ಹೇಳಿದ ಹಾಂಗೆ, ಹಳೆ ಪುಸ್ತಕಂಗೊ ಎಲ್ಲ ಎಷ್ಟೋ ಒರಳೆ ಹಿಡುದು ಹಾಳಾಯಿದು. ಇದ್ದರನ್ನಾದರೂ ಒಳುಸುತ್ತ ಏರ್ಪಾಟು ಆಯೆಕೀಗ. ಒಪ್ಪಕ್ಕೆ, ಪ್ರತಿಯೊಪ್ಪ.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಬೊಳೂಂಬು ಮಾವ
  ಈಗ ಎಡಕ್ಕಿಲ್ಲಿ ಉತ್ತರ ಕೊಡುಲಾವುತ್ತು..

  ಗುರಿಕ್ಕಾರ್ರು ಎರಡು ದಿನಲ್ಲಿ ಆಯೆಕ್ಕು ಹೇಳಿಯಪ್ಪಗ ಹಗಲಿರುಳು ಕೆಲಸ ಮಾಡಿದ್ದವಡ.. ಅಷ್ಟೊತ್ತಿಗೆ ಎಂತ್ಸೊ ಮಿಸ್ಟೇಕು ಆದ್ದು ಕಾಣ್ತು….

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಗೋಪಾಲ ಮಾವ

  ಮಹೇಶಾ, interest ಜಾಸ್ತಿ ಆದಷ್ಟು ಒಳ್ಳೆದಲ್ಲದೊ ? ಬ್ಯಾಂಕಿನವಕ್ಕಲ್ಲ, ಠೇವಣಿದಾರರಿಂಗೆ.

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಗೋಪಾಲ ಮಾವ°.., ಕತೆ ಲಾಯ್ಕಲ್ಲಿ ಸುರುಮಾಡಿದ್ದಿ.. ಹಳೆ ಭಾಷೆ ಹೀಂಗೇ ಅಂಬಗಂಬಗ ಬತ್ತಾ ಇದ್ದರೆ ಎಂಗೊಗೂ ಬಕ್ಕಿದಾ.. ಇಲ್ಲದ್ದರೆ ದೊಡ್ಡ ಮಾವನ ಹತ್ತರೆ ಮಾತಾಡೆಕ್ಕಷ್ಟೇ!!!
  ಈಗ ಅವ್ವುದೇ ಮಾತಾಡುದು ಕಡಮ್ಮೆ ಮಾಡಿದ್ದವು ಬೈಲಿಲಿ… :-(
  ಬತ್ತವೋ ಕಾವದು ಅವರ.. ಒಪ್ಪಣ್ಣ ಹೇಳಿದ್ದ°.., ಬತ್ತವು ಬೇಗ ಹೇಳಿ.. ಬಕ್ಕು..
  ಇನ್ನಾಣ ಕಂತು ಬರಲಿ ಬೇಗ.. ಚಿತ್ರ ಬರದ್ದದು ಲಾಯ್ಕಾಯಿದು ಆತೋ…

  [Reply]

  VA:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಬೊಳುಂಬು ಕೃಷ್ಣ ಮಾವನ ಲೇಖನ ಕೊಶೀ ಆತು. ಹಳೆ ಹವ್ಯಕ ಭಾಷೆಲಿ ಚೆಂದಕೆ ವಿವರಿಸಿದ್ದವು.
  [ಮೈಕ್ರೋ, ಪೆಟ್ಟಿಪ್ಪಾಟ್ಟೋ ಬೆಳ್ಳೆಕ್ಕಾರಂಗೊ, ದಗಣೆ]- ಅಂಬಗಾಣ ಕಾಲದ ಚೆಂದದ ಶಬ್ದಂಗೊ
  [ತೋಳಗೆ ಮೀಸೆ ಹೊಗುಸಲೆ ಎಡೆ ಸಿಕ್ಕಿದರೆ ಸಾಕಾಡ]- ಒಳ್ಳೆ ಪಳಮೆ. ಎಲ್ಲಾ ಕಾಲಕ್ಕೂ ಹೊಂದುವದು.
  [ಮೈಗೆ ಮೈ ಚಾಂಟುಸಿಂಡು ಕೂರುಸೆಂಡು ಹೋವುತ್ತದು ನೋಡೇಕು]
  ಅಂಗಣಾಣ ಜೀವನ ಶೈಲಿ ಕೂಡಾ ಗೊಂತಾವ್ತು. ಹಳೇ ಕಾಲಲ್ಲಿ ಗೆಂಡ ಹೆಂಡತಿ ನೆಡಕ್ಕೊಂಡು ಹೋವ್ತರೆ ಗೆಂಡನಿಂದ ಸುಮಾರು ಹಿಂದೆ ಹೆಂಡತಿ ಇಕ್ಕಷ್ಟೆ. ಒಟ್ಟೊಟ್ಟಿಂಗೆ ಹೋಗವು.
  [ಒಂದು ಪಕ್ಕೀಟು ಬೇಡ, ಅದರ ಮೇಗೆ ಹಾಕಲೆ ಚೌಕ ಬೇಡ. ಹೆಗಲಿಂಗೊಂದು ಎಲೆವಸ್ತ್ರ ಬೇಡ]- ಪಕ್ಕಾ ಬ್ರಾಹ್ಮಣ ಟ್ರೇಡ್ ಮಾರ್ಕ್ !!!
  ಇದರ ಒದಗಿಸಿದ ಗೋಪಾಲ ಮಾವಂಗೆ ಧನ್ಯವಾದಂಗೊ. ಚಿತ್ರ ಲಾಯಿಕ ಆಯಿದು
  ಇನ್ನಾಣ ಸಂಚಿಕೆಯ ನಿರೀಕ್ಷೆಲಿ

  [Reply]

  VA:F [1.9.22_1171]
  Rating: 0 (from 0 votes)
 9. ನೆಗೆಗಾರ°

  ಬೊಳುಂಬುಮಾವಾ°..
  ಶುದ್ದಿ ಬಾರೀ ಲಾಯಿಕಾಯಿದು.
  ಅಜ್ಜ° ಬರದ ಶೈಲಿ ಓದಿ ಎನಗೇ ನೆಗೆ ಬಂತು!
  ಎಡಕ್ಕಿಲಿ ಹಾಕಿದ ಚಿತ್ರವೂ ಅಷ್ಟೇ ಪಷ್ಟಾಯಿದು.
  ಅವರ ಶುದ್ದಿಗೊ ಇನ್ನೂ ಇದ್ದರೆ ಬರಳಿ. :-)

  ಹೇಳಿದಾಂಗೆ, ಶುದ್ದಿಯ ಕರೆಲಿ ನಿಂಗಳ (ಮೀಸೆ ಇಪ್ಪ) ಪಟ ಕಂಡು ಕೊಶಿ ಆತು.
  ಅತ್ತೆಗೂ ತೋರುಸಿ ಒಂದರಿ :-)

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಪುತ್ತೂರಿನ ಪುಟ್ಟಕ್ಕಚುಬ್ಬಣ್ಣಡಾಮಹೇಶಣ್ಣಹಳೆಮನೆ ಅಣ್ಣಪವನಜಮಾವಅಕ್ಷರದಣ್ಣಕಳಾಯಿ ಗೀತತ್ತೆಮುಳಿಯ ಭಾವವೇಣಿಯಕ್ಕ°ಅನುಶ್ರೀ ಬಂಡಾಡಿಸುಭಗಅಕ್ಷರ°ಅನು ಉಡುಪುಮೂಲೆವೆಂಕಟ್ ಕೋಟೂರುಗಣೇಶ ಮಾವ°ದೊಡ್ಮನೆ ಭಾವದೇವಸ್ಯ ಮಾಣಿಬೋಸ ಬಾವಪಟಿಕಲ್ಲಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣಶ್ಯಾಮಣ್ಣಡಾಗುಟ್ರಕ್ಕ°ಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ