ಹೆಗ್ಳ ಒಕ್ಕಿದ್ದೊ?? – ಬೋಸನ ಹಾಸ್ಯ೦ಗೊ…!! :D

March 9, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 39 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೋಸನ ಹಾಸ್ಯ೦ಗೊ…!!

~

ಓ ಮೊನ್ನೆ, ಆನು, ಅರ್ಜೆ೦ಟು ಮಾಣಿ, ನೆಗೆಗಾರ , ಪೆ೦ಗಣ್ಣ ಎಲ್ಲಾ ಒಟ್ಟು ಸೇರಿ ಬಸ್ಸಿಲ್ಲಿ ಪುತ್ತೂರಿಲ್ಲಿಪ್ಪ ಶ್ರೀಅಕ್ಕನಲ್ಲಿಗೆ  ಕಾಯಿ ಹೋಳಿಗೆ ತಿ೦ಬಲೆ ಹೋದ್ಯೊ ..  :)

ಉದ್ಯಪ್ಪಗ 4 ಕು ಗ೦ಟೆಗೇ ಎದ್ದು ಅರ್ಜೆ೦ಟು ಮಾಣಿ ಅರ್ಜೆ೦ಟುಮಾಡ್ಲೆ ಸುರುಮಾಡಿದ… ಒ೦ದು ಒರಿಕ್ಕವೇ ಇಲ್ಲೆ ಅವ೦ಗೆ.. 😛

ಹಾ೦ಗು ಹೀ೦ಗು ಉದ್ಯಪ್ಪ ಬೇಗ ಎಲ್ಲಾರೂ ಎದ್ದು ..  ನಿತ್ಯ ಕರ್ಮ೦ಗಳ ಮುಗುಶಿ.. ಬಸ್ಸು ಸ್ಟೇ೦ಡಿ೦ಗೆ ಓಡಿದ್ಯೊ..

ಪುತ್ತೂರು ಪುತ್ತೂರು ಹೇಳಿಯೋ೦ಡು, ಅಲ್ಲಿ ಒ೦ದು ಬಸ್ಸು ಹೆರಟೊ೦ಡು ಇತ್ತು..

ಅಸುಟಪ್ಪಗ,  ಆನು ಹೇಳಿದೆ “ ಬಸ್ಸಿಲಿ ಸೀಟು ಇಲ್ಲೆ ಭಾವ …!!”  :(

ಪೆ೦ಗಣ್ಣ.. “ಸೀಟು ಬೇಕಷ್ಟು ಇದ್ದು.. ಕೂಪಲೆ ಜಾಗೆ ಇಲ್ಲೆ..” ಹೇಳಿ ಪಿಸುಕ್ಕನೆ ನೆಗೆಮಾಡಿದ… 😀

ಬಸ್ಸಿಲಿ ಮಾರ್ಗ

ಅರ್ಜೆ೦ಟುಮಾಣಿ ಗಡಿಬಿಡಿ ಮಾಡಿದ, ಮತ್ತೆ ಅದೇ ಬಸ್ಸು ಹತ್ತಿದ್ಯೊ..

ಹಾ೦ಗು ರಜ್ಜ ಮು೦ದೆ ಹೋದಪ್ಪಗ ಜಾಗೆ ಸಿಕ್ಕಿತು ಕೂಪಲೇ..

ಆನು ಕರೇ ಸೀಟು ಬೇಕು ಹೇಳಿ ಕಿಟುಕಿ ಹತ್ತರೆ ಕೂದೆ.. ನೆಗೆಗಾರ ಎನ್ನ ಹತ್ತರೆ, ಪೆ೦ಗಣ್ಣ, ಆಚಕರೆ..
ಅರ್ಜೆ೦ಟು ಮಾಣಿ.. ಬಾಗಿಲ ಬುಡಲ್ಲಿ.. ಬಸ್ಸು ನಿಲ್ಲುಸಿಯಪ್ಪಗ ಓಡ್ಲೆ.. 😉

ಹೋಪಗ ಬಸ್ಸು ಒ೦ದು ಜಾತಿ ಒಚ್ಚೆ೦ಡು, ನಮ್ಮ ನೆಗ್ಗಿ ನೆಗ್ಗಿ ಹಾಕೆ೦ಡು ಇತ್ತು..

ಹಾ೦ಗಿದ್ದರೂ ನಮ್ಮ ಪೆ೦ಗಣ್ಣ೦ಗೆ ಒಳ್ಳೆ ಒರಕ್ಕು…. ಗೊರಕ್ಕೆ ಯೋ ಗೊರಕ್ಕೆ.. 😀

ನೆಗೆಗಾ೦ಗೆ, ಒ೦ದು ಜಾತಿ ನೆಗೆ ಬಿಡ… ಬಾಯಿ ಕೋಲು ಹಾಕೆ೦ಡೆ ಇಕ್ಕು….

ಈ ಬಸ್ಸು ಒಚ್ಚುತ್ತ ಮದ್ಯಲ್ಲಿ ಆನು ಕೇಳಿದೆ- ” ಇದು ಎ೦ತ ಭಾವ ಮಾರ್ಗ ಪೂರ ಹೀ೦ಗಿದ್ದು ಹೇಳಿ…?”

ಹೆಗ್ಲ ಮಾರ್ಗವ ಒಕ್ಕಿದ್ದು

ನೆಗೆಗಾರ- ” ಯೋ.. ಇದು ಹೆಗ್ಳ ಒಕ್ಕಿ ಹಾಕಿದ್ದು” ಹೇಳಿದ…

ಅಪ್ಪೊ?? ಉಮ್ಮಪ್ಪ…

ನಿ೦ಗೊ ಎಲ್ಲ ಎ೦ತ ಹೇಳ್ತಿ…??
ಆ ಹೆಗ್ಳ ಯಾವುದು ಹೇಳಿ ಗೊ೦ತಾದರೆ ಒ೦ದಾತಿಳಿಶಿಕ್ಕಿ ?? 😉

-ನಿ೦ಗಳ ಬೋಸ.. 😉

ಹೆಗ್ಳ ಒಕ್ಕಿದ್ದೊ?? – ಬೋಸನ ಹಾಸ್ಯ೦ಗೊ…!! :D, 5.0 out of 10 based on 2 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 39 ಒಪ್ಪಂಗೊ

 1. ಸುಭಗ
  ಸುಭಗ

  ಏ ಬೋಸ ಭಾವ.. ನೀನು ಎನ್ನ ಖಾಸಾ ದೋಸ್ತಿ. ಹಾಂಗಾದಕಾರಣ ಸುಮ್ಮನೆ ಬಿಟ್ಟೆ! ಬೇರೆ ಆರಾದರೂ ಆಗಿದ್ರೆ ಎರಡು ಏರ್ಸುತ್ತಿತ್ತೆ! ಅಲ್ಲದ್ರು- ಆ ಸುರುವಾಣ ಪಟಕ್ಕೆ ‘ಮಾರ್ಗಲ್ಲಿ ಬಸ್ಸು’ ಹೇಳಿ ಆಯೆಕ್ಕಾದ್ದಕ್ಕೆ ‘ಬಸ್ಸಿಲ್ಲಿ ಮಾರ್ಗ’ ಹೇಳಿ ಆರಾರು ಹೆಸರು ಕೊಡುಗೊ?!

  ಬೋಸ! ರಣ ಬೋಸ..!!

  [Reply]

  ಬೋಸ ಬಾವ

  ಬೋಸ ಬಾವ Reply:

  ಸುಭಗಣ್ಣೊ, ನಾವು ಕಾಸ ದೋಸ್ತೆಗೊ ಅಲ್ಲದೊ.. 😉
  ಹಾ, ಮತ್ತೆ ಅದು “ಬಸ್ಸಿಲಿ ಹೊಪಗ ಕಂದ ಮಾರ್ಗ ” ಬರದಿತ್ತೆ , 😀
  ಇದರ ಹೆಗ್ಳಳ ಅರ್ದ ತಿ೦ದು ಹಾಕಿ- “ಬಸ್ಸಿಲ್ಲಿ ಮಾರ್ಗ” ಹೇಳಿ ಆಯಿದು.. :(

  [Reply]

  VN:F [1.9.22_1171]
  Rating: 0 (from 0 votes)
 2. ಸುಭಗ
  ಸುಭಗ

  ಅದ, ಆ ಎರಡ್ಣೆ ಪಟಲ್ಲಿ ಹೆಗ್ಳನ ಕಾರ್ಬಾರು ಸರೀ..ಗೊಂತಾವ್ತು. ಮಾರ್ಗ ಒಕ್ಕುವಗ ಸಿಕ್ಕಿದ ದೊಡ್ಡ ಎರಡು ಮುಂಡಿಗೆಂಡೆಯ ಒಳಾಣ ತಿರುಳು ಪೂರಾ ತಿಂದು ಮುಗುಶಿ ಚೋಲಿಯ ಅಲ್ಲೆ ಕರೇಲಿ ಬಿಟ್ಟಿದು. ಕಂಡತ್ತೊ?

  ನಿನ್ನಾಂಗಿಪ್ಪ ಬೋಸಂಗೊ ‘ಅದು ಮುಂಡಿ ಚೋಲಿ ಅಲ್ಲ; ಸಿಮೆಂಟು ಪೈಪಿನ ತುಂಡು’ ಹೇಳ್ಳೂ ಸಾಕು! 😉

  [Reply]

  ಬೋಸ ಬಾವ

  ಬೋಸ ಬಾವ Reply:

  ಅಪ್ಪಪ್ಪು.. ಅದರ ಮಾಟೆ ಮಾಡಿಮಡುಗಿದ್ದು.. :(

  [Reply]

  VN:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°

  ಅಪ್ಪಾ ಬೋಸ ಭಾವ!!! ನಿನ್ನ ಬೆನ್ನು ಎಲ್ಲಿದ್ದು? ನಾಲ್ಕು ಮಡುಗುತ್ತೆ ನೋಡು!!! x-( x-(

  ಕಾಯಿ ಹೋಳಿಗೆ ನಿನಗೆ ಪ್ರೀತಿ ಹೇಳಿ ಲೋಕಕ್ಕೇ ಗೊಂತಿದ್ದು. ಅದರ ತಿಂದಪ್ಪಗ ಅಕ್ಕನ ಮನೆಗೆ ಬಂದದು ಎಂತಕ್ಕೆ ಹೇಳಿದೇ ಮರದ್ದು ಅಲ್ಲದಾ?!!! x-(
  ಚೆನ್ನೈ ಭಾವಂಗೆ ತಲೆಬೆಶಿ ಆತು ನೋಡು ನೀನು ಕಾಯಿ ಹೋಳಿಗೆ ತಿಂಬಲೇ ಅಷ್ಟು ದೂರ ಆ ಘಸಣಿ ಮಾರ್ಗಲ್ಲಿ ಹೋದ್ದದಾ ಹೇಳಿ!!!
  ಎಂಗಳ ಮನೆಲಿ ಕೋಡಿ ಹೋಮ ಆದ್ದದಕ್ಕೆ ಬಂದದಲ್ಲದಾ ನಿಂಗೋ ಎಲ್ಲರೂ.. ಬಾಕಿ ಯಾವುದೂ ನೆಂಪಿಲ್ಲೆ ಅಲ್ಲದಾ ನಿನಗೆ!! ಹಪ್ಪಾ ನೀನೇ!!
  ಪುಣ್ಯ!! ಒಟ್ಟಿಂಗೆ ಆರೆಲ್ಲ ಇತ್ತಿದ್ದವು ಹೇಳಿ ಆದರೂ ನೆಂಪಿದ್ದನ್ನೇ!! ಭಾಗ್ಯ!! ಬಂದು ಹೋಪನ್ನಾರವೂ ಮಾರ್ಗದ ವಿವರಣೆ ಬಿಟ್ಟರೆ ಬೇರೆ ಎಂತ್ಸೂ ಮಾತಾಡಿದ್ದಾ ಇಲ್ಲೆ ಪುಣ್ಯಾತ್ಮ!! ಹೊಸತ್ತಾಗಿ ಈ ಲೋಕಕ್ಕೆ ಬಂದೋರ ಹಾಂಗೆ!! ಎಲ್ಲಿಯೂ ಕಂಡಿದಿಲ್ಲೆಯಾ ಹೀಂಗಿರ್ತ ಮಾರ್ಗ?
  ನೆಗೆಮಾಣಿಯ ಬಿಂಗಿ ನೋಡಿ ಸುಮಾರು ಜನ ಕೇಳಿದವು ಆ ಮಾಣಿ ಆರಾತು ಹೇಳಿ!! 😉
  ಇನ್ನು ಪೆಂಗಣ್ಣಂದೇ, ಅರ್ಗೆಂಟು ಮಾಣಿಯ ಕತೆ ಹೇಳುದು ಬೇಡ!!
  ಆಗಲಿ ಅಕ್ಕನ ಮೇಲೆ ಪ್ರೀತಿ ಮಡುಗಿ ಮಾರ್ಗಕ್ಕೆ ಬಯ್ಕೊಂಡು ಆದರೂ ಬತ್ತಿಕ್ಕಿದಿರನ್ನೇ!! ಇನ್ನು ಕೆಲವು ಜನಂಗ ಇದ್ದವಿದಾ
  (ತಮ್ಮಂದ್ರು, ಸಮ್ಮಾನದೋರು)!! ಅವಕ್ಕೆ ಅಕ್ಕನ ಮನೆ ದಾರಿಯೇ ಸಿಕ್ಕಿದ್ದಿಲ್ಲೆಡ್ಡ!!! :-(
  ಬಕ್ಕು ನೋಡುವಾ°..

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಕ್ಕಾ,
  ಬೋಸನ ಬೆನ್ನಿ೦ಗೆ ಬಿದ್ದದು ನೋಡಿರೆ ಸಮ್ಮಾನದೋರು ಹೆದರುಗೋ ಹೇಳಿ !!.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಅವಕ್ಕೂ ಈ ಸಮ್ಮಾನವುದೇ ಇರಲಿಯಾ ಹೇಳಿ ಆವುತ್ತು. ಅಕ್ಕನ ಮನೆ ಸಮ್ಮಾನ ನೆಂಪು ಒಳಿಯೆಡದಾ? 😉 😉
  ಆಗದೋ ಭಾವ°?

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಬೋಸ ಭಾವ, ನೆಗೆಗಾರ ಪೆ೦ಗಣ್ಣ, ಅರ್ಜೆ೦ಟು ಮಾಣಿ, ಎಲ್ಲಾ ಒಟ್ಟಿಂಗೆ ಒಂದೇ ಬಸ್ಸಿಲ್ಲಿ ಇದ್ದರೆ ಹೇಂಗೆ ಇಕ್ಕು ಹೇಳಿ ಅಂದಾಜು ಮಾಡಿರೆ ನೆಗೆ ಬತ್ತು.
  ಡಾಮರು ಹಾಕಿದ ಮಾರ್ಗ ಕಾಂಬಗ ಹೆಗ್ಗಳಕ್ಕೆ ಸಜ್ಜಿಗೆ ಒಗ್ಗರಿಸಿ ಹಾಕಿದ ಹಾಂಗೆ ಕಾಣುತ್ತಾಯಿಕ್ಕು!!!
  [ಅಕ್ಕನ ಮನೆ ಸಮ್ಮಾನ ನೆಂಪು ಒಳಿಯೆಡದಾ?] ತಮ್ಮಂದಿರೇ ಜಾಗ್ರತೆ, ಅಕ್ಕ ನಿಂಗೊಗೆ ಒಳ್ಕ್ಷ್ಳೆ ನೆಂಪಿಲ್ಲಿ ಒಳಿತ್ತ ಸಮ್ಮಾನ ಮಾಡ್ಲೆ ತಯಾರು ಮಾಡ್ತಾ ಇದ್ದು :)

  ಬೋಸ ಬಾವ

  ಬೋಸ ಬಾವ Reply:

  ಅಪ್ಪಚ್ಚಿ… ಹೋಳಿಗೆ ತಿ೦ದು, ಒ೦ದು ಗುದ್ದು ಬೆನ್ನಿ೦ಗೆ ಸಿಕ್ಕೆರೆ ಕ೦ಢಿತ ನೆ೦ಪಿಕ್ಕು ಹೇಳಿ ಅರ್ಜೆ೦ಟು ಮಾಣಿ ಹೇಳಿದಾ.. 😉

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ನಾವು ಹೇಳಿದ್ರ ಅದಾ ಬಾವ ಆರ ಹತ್ರೂ ಹೆಳ್ತ ಇಲ್ಲೆ. ಓಪ್ಪ ಬಾವ ಇವ 😉 ಹೋಳಿಗೆಗೆ ಚೂರು ಕಾಯಿ ಕಮ್ಮಿ ಆತು ಹೇಳಿ ಅಲ್ದೊ ನೀ ಹೇಳಿದ್ದು?

  VN:F [1.9.22_1171]
  Rating: +2 (from 2 votes)
  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಅಪ್ಪಚ್ಚಿ ಜಾಗ್ರತೆ ಎಚ್ಚರಿಸಿದ್ದು ಖುಶಿ ಆತು. ಶ್ರೀ ಆಕ್ಕೊ ಹಾ೦ಗೆಲ್ಲ ಬೆನ್ನಿ೦ಗೆ ನಿ೦ಗೊಗೆ ಸಜ್ಜಿಲಿ ಕೊಟ್ಟ ಹ೦ಗಿದ್ದು 😛 ಎ ಆನಾರತ್ರೂ ಹೆಳ್ತಿಲ್ಲೆಪ್ಪ ಎ೦ತ ಬೊಸಣ್ಣಾ!

  VN:F [1.9.22_1171]
  Rating: +2 (from 2 votes)
  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಅಕ್ಕಕ್ಕೊ! ಹೋಳಿಗೆ ಲಾಯ್ಕಾಯ್ದು. ಎನ್ನ ಹೊಟ್ಟೆಗೆ ಜಾಸ್ತಿ ಮಾತ್ರೆ ಬೇಕಾಯ್ದಿಲ್ಲೆ 😛 ದಾಕುಟ್ರು “ಆಹಾರವಿಷ” ಹೇಳಿ ಎ೦ತದೊ ಹೇಳಿದೊವು, ಆನದ್ರ ಎ೦ತ ಹೇಳಿ ಎಲ್ಲ ಕೇಟುಲೆ ಹೋಯ್ದಿಲ್ಲೆ.

  VN:F [1.9.22_1171]
  Rating: +2 (from 2 votes)
  ಬೋಸ ಬಾವ

  ಬೋಸ ಬಾವ Reply:

  ಅಕ್ಕೊ.. ಅದು ಸರಿ.. ಕೋಡಿ ಹೋಮಕ್ಕೆ ಬ೦ದ್ಸಲ್ಲದೊ… 😀
  ಮರದೇ ಹೋತಿದಾ.. 😉
  ಎನಗೆ ಹೋಳಿಗೆ ತಿಬಲೆ ಹೋದುಳಿ ಏ ನೆ೦ಪ್ಪು.. 😛

  [Reply]

  VN:F [1.9.22_1171]
  Rating: +1 (from 1 vote)
  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಮತ್ತೆ ಅಕ್ಕೊ ಚೆನ್ನೈ ಭಾವಂಗೆ ತಲೆಬೆಶಿ ಆದ್ದದೆ೦ತಕೆ ಹೇಳಿ ಗೊ೦ತಾತು, ಕಳಕಳಿ, ನೋಡು, ನಿನ್ನ ಮನೆ ಈ ಹೆಗ್ಳ೦ಗಳ ಊರಿಲಿ ಹೇಳಿ ಕೇಟಿಕ್ಕಿ 😛 ಚೆನ್ನೈ ಭಾವ ಕುಶಿ ಆತು ನಿ೦ಗಳ ಕಟಕಟಿ ಕೇಳಿ ಃ)

  [Reply]

  VN:F [1.9.22_1171]
  Rating: +2 (from 2 votes)
 4. ಬಪ್ಪಗ ಮತ್ತೆ ಕಡೇ ಸಿಟೇ ಸಿಕ್ಕಿದ ಕಾರಣ ಮನಗೆ ಎತೊಗ ಎಲ್ಲ ಕರಗಿದ್ದಡ..

  [Reply]

  VA:F [1.9.22_1171]
  Rating: 0 (from 0 votes)
 5. ಸುಮನ ಭಟ್ ಸಂಕಹಿತ್ಲು.

  ಅರ್ಗೆಂಟು ಮಾಣಿ ಮತ್ತೆ ಅರ್ಜೆಂಟು ಮಾಣಿ ಒಬ್ಬನೆಯಾ?
  ಒಪ್ಪಲ್ಲಿ ಬರವಗ ಅರ್ಗೆಂಟು ಮಾಣಿ ಉತ್ತರ ಬರೆತ್ತ, ಬಾಕಿ ಕಡೆ ಅರ್ಜೆಂಟು ಮಾಣಿ ಹೇಳಿ ಇದ್ದನ್ನೆ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ದೊಡ್ಡಭಾವವೇಣೂರಣ್ಣಕೊಳಚ್ಚಿಪ್ಪು ಬಾವಪೆಂಗಣ್ಣ°ಬೋಸ ಬಾವಶಾ...ರೀಪೆರ್ಲದಣ್ಣಶುದ್ದಿಕ್ಕಾರ°ಹಳೆಮನೆ ಅಣ್ಣಅನು ಉಡುಪುಮೂಲೆಅನುಶ್ರೀ ಬಂಡಾಡಿವಿಜಯತ್ತೆಚೆನ್ನಬೆಟ್ಟಣ್ಣಬೊಳುಂಬು ಮಾವ°vreddhiಎರುಂಬು ಅಪ್ಪಚ್ಚಿಜಯಗೌರಿ ಅಕ್ಕ°ಡಾಮಹೇಶಣ್ಣಕೇಜಿಮಾವ°ಬಂಡಾಡಿ ಅಜ್ಜಿಒಪ್ಪಕ್ಕವಿನಯ ಶಂಕರ, ಚೆಕ್ಕೆಮನೆನೆಗೆಗಾರ°ಶ್ರೀಅಕ್ಕ°ವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ