ನಿಂಗಳೂ ಚಂದ್ರ ಮಂಡಲಕ್ಕೆ ಹೋಪಲಕ್ಕು..

May 18, 2011 ರ 2:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರಪಂಚವೇ ಒಂದು ಅದ್ಭುತ. ಅದರಲ್ಲೂ ಕೆಲವೊಂದು ವಿಸ್ಮಯಂಗೋ.

ನೋಡಲೆ ಆರಿಂಗೆ ತಾನೇ ಕೊದಿ ಆಗ.
ಅದೂ, ರಘು ಭಾವನ ಗುಜರಾತು ಭೂಕಂಪ, ಡಾ. ಮಹೇಶಣ್ಣನ ಬ್ರಸಿಲ್ ಮರ್ಸಿಲ್ ರೋಮಾಂಟಿಕ್ ಟೂರ್ ಓದಿಯಪ್ಪಗ, ಅಲ್ಲಿ ಇಲ್ಲಿ ರೋಚಕ ಕುತೂಹಲ ನಿಜ ಸ್ಟೋರಿ ಕೇಳುವಾಗ..
ಛೆ., ಎನಗೂ ನೋಡೆಕ್ಕಾತು ಹೇಳಿ ಕಾಂಬೋದು.
ಹೀಂಗಿಪ್ಪ ಒಂದು ಅಭೂತಪೂರ್ವ ಸಂಗತಿ ಪ್ರತ್ಯಕ್ಷ ನೋಡುವ! ಸದವಕಾಶ !! ಎನಗೊಂದು ಸಿಕ್ಕಿದ್ದದಾ !!! .

ಓ ಮೊನ್ನೆ .. ಅದಾ  ಕಳುದ ಹುಣ್ಣಮೆ.
ಹುಣ್ಣಮೆಯ ಚಂದ್ರನ ಕಂಡರೆ ಆರಿಂಗೆ ತಾನೇ ಖುಶೀ ಆಗ!. ಕವಿಗೊಕ್ಕೆ ಸ್ಪೂರ್ತಿ, ಲೇಖಕಂಗೆ ಹುಮ್ಮಸ್ಸು, ಬರೆತ್ತವಂಗೆ ಮೂಡು. ಕಲ್ಪನೆಯ ರಂಗಸ್ಥಳಲ್ಲಿ ಬಣ್ಣದ ಚಿತ್ತಾರ – ಎಷ್ಟೊಂದು ಜೆನಕ್ಕೆ ಆಯ್ದಿಲ್ಲೆ?!!

ಇರುಳು ಸುಮಾರು ಒಂದೂವರೆ ಇಕ್ಕು . ನಮ್ಮ ನಿತ್ಯಾಣ ಹೊತ್ತಷ್ಟೆ ಹಾಸಿಗೆ ಸೇರ್ಲೆ. (“ಚಂದಿರ ತಂದಾ ಹುಣ್ಣಿಮೆ ರಾತ್ರಿ… ” – ಭೂಪಣ್ಣನ ಇಷ್ಟ ಪದ ನೆಂಪಾವ್ತದಾ! )

ಕರೆಂಟು ಹೋತತ್ತೆ.
15 – 25 ನಿಮಿಷ ಕಾದೂ ಬೊಡುದತ್ತಯ್ಯಾ.
ನುಸಿ ಹಿಡುದು ಬಡಿವೋ ಹೇಳಿರೆ 2 ಕಲ್ಲು ಹುಡುಕ್ಕಿ ಆಯೆಕ್ಕಷ್ಟೆ. ರಘು ಭಾವ ಹೇಳಿದಾಂಗೆ ‘ಸೆಕೆಗಾಲ ಕಳುದು ಮತ್ತೆ ಸೆಕೆಗಾಲ‘ ಇಲ್ಲಿ.

ಒಳ ಕೂಬಲೆಡಿಯ-ಮನುಗಲೆಡಿಯ ಹೇದು ಹೋದೆಯೋ ಮೇಲ್ಚಾವಡಿಗೆ (ಟೆರೆಸ್ಸಿಂಗೆ).
ಶುಭ್ರ ಆಕಾಶ. ಚಂದ್ರಣ್ಣ ಚಂದಕ್ಕೆ ನೆಗೆ ಮಾಡಿಗೊಂಡಿತ್ತಿದ್ದ. ಸುತ್ತ, ಗುರುಗಳ ಎದುರು ಶಿಷ್ಯಾದಿ ಕೂರ್ತಾಂಗೆ ತಾರೆಗಳ ರಾಶಿ. ಹೋಯಿ , ಈ ಇರುಳೂ ಗಾಳಿಯ ಸೀಳಿಗೊಂಡು ಸುಯ್ಯಿ..
ಹೇಳಿ ಎಷ್ಟು ವಿಮಾನಂಗೊ ಹೊವ್ತಾ ಇತ್ತಿದ್ದು.! 15 ನಿಮಿಷಲ್ಲಿ ಆರೋ ಏಳೋ ಎಂಗಳ ಲೆಕ್ಕಕ್ಕೆ ಸಿಕ್ಕಿತ್ತು.
ಎತ್ತರಲ್ಲಿ ಹಾರುತ್ತಾ (ಕುಣಿತ್ತಾ ?) ಹೋಪದರ ನೋಡಿರೆ ಕಲ್ಪನೆಗೆ ರಜಾ ಚಾಲೂ ಸಿಕ್ಕಿತ್ತು. ನೋಡಿಯೊಂಡು ಏನೋನೋ ಲೆಕ್ಕಾಚಾರ ಮಾಡಿಯೊಂಡಿಯೋ.

ಸುಮಾರು ಎರಡುವರೆ ಅಪ್ಪಗ ಬಂತಯ್ಯ ಹೋದ ಕರೆಂಟು. ಕೆಳ ಇಳುದು ಬಂದೆಯೋ.

ಸುಮಾರು ಮೂರು ಗಂಟೆ ಅಪ್ಪಗ ಎಂಗಳ ಪ್ರಸಿದ್ದ ‘ಚೆನ್ನೈ ಮರಿನಾ ಬೀಚಿಂಗೆ’ ಹೋದೆಯೋ ಎಂಗೋ ಐದಾರು ಜೆನ ಸೇರಿಗೊಂಡು.
ಅಲ್ಲಿ ಭಾವ ಒಂದು ರಾಕೆಟ್ ಇತ್ತಿದ್ದು. ಚಂದ್ರನಲ್ಲಿಗೆ ಹೋಗಿ ಬಪ್ಪಲೆ.
ಪ್ರತಿ ಅರ್ಧ ಗಂಟಗೊಂದು ಹೋಪಲೆ – ಬಪ್ಪಲೆ .
{ ಕನ್ಯಾಕುಮಾರಿಲಿ ಬೋಟ್ ಇದ್ದು ವಿವೇಕಾನಂದ ಸ್ಮಾರಕಕ್ಕೆ ಹೋಪಲೆ, ಪಳನಿಲಿ ರಾಟೆ ರೈಲು ಮೇಗೆ ಹೋಪಲೆ ನೆಂಪಿದ್ದೋ}.

ಎಷ್ಟು ಜೆನಂಗೊಯ್ಯಾ ನಿತ್ಯ ಸವಾರಿ ಮಾಡ್ಲೆ ಅಲ್ಲಿಗೆ!  ಹಾಂ…
ಎಂಗೊಗೂ ಒಂದು ಎಳಕ್ಕ ಬಂತು ಒಂದರಿ ಅಲ್ಲಿಗೆ ಹೋಗಿ ಬಪ್ಪೋ ಹೇದು. ಅಲ್ಲೇ ಕೌಂಟರ್ಲಿ ಟಿಕೆಟ್ ತೆಕ್ಕೊಂಡು (ಒಂದು ತಲಗೆ ಇಪ್ಪತ್ತು ರುಪಾಯಿ) ರಾಕೆಟ್ ಒಳ ಹತ್ತಿ ಕೂದಿಯೋ.
ಮೂರು ವರಗೆ ರಾಕೆಟ್ ಹೆರಟು ನಾಕು ಗಂಟಗೆ ಹೋಗಿ ಸೇರಿತ್ತು ಚಂದ್ರಮಂಡಲಕ್ಕೆ.
ಹೋಯ್, ಅಲ್ಲಿ ಎಂತದೋ ಆ ಸಮಯಲ್ಲಿ ಜಾತ್ರೆ ವಿಶೇಷ ಕಾಣುತ್ತು (ಕಾರ್ನಿವಲ್). ನಮ್ಮ ಪುತ್ತೂರು ಜಾತ್ರೆ – ಕುಂಬ್ಳೆ ಬೇಡಿಲಿ ಇಪ್ಪಾನ್ಗೆ ಸಂತೆ, ರಾಟೆ ತೊಟ್ಟಿಲು, ಚರುಮುರಿ, ಸೋಜಿ, ಮಜ್ಜಿಗೆ ನೀರು, ಕಡಲೆ. ಹೋಯ್, ಬೀಡಾ – ಬೀಡಿ, ಕೃಷ್ಣಾ ನಶ್ಯ ಅಲ್ಲಿಯೂ ಇತ್ತಿದ್ದು.
ಎಲ್ಲಾ ಸುತ್ತಿ ತಿರುಗಿ ಖುಷೀಲಿ ನೋಡಿಗೊಂಡು ಐದು ವರಗೆ ವಾಪಾಸು ಮರಿನಾ ಬೀಚಿಂಗೆ ಅದೇ ರಾಕೆಟ್ ಲಿ ಬಂದು ಇಳುದೆಯೋ. 5 ವರಗೆ ಲಾಸ್ಟ್ ಟ್ರಿಪ್. ಇರುಳು ಹೊವ್ತಿಲ್ಲೆಡ ಅಲ್ಲಿಗೆ ವಾಹನ.

ಅಷ್ಟಪ್ಪಗ ಅದಾ ಇಲ್ಲೇ ಮಾರ್ಗಲ್ಲಿ ಒಂದು ಕಾರು ಪೀಈಇ ಹೇಳಿ ಹೊರನ್ನು ಹಾಕಿಯೊಂಡು ಹೋತು.
ಫಕ್ಕನೆ ಎಚ್ಹರಿಕೆ ಆತು. ಕಣ್ಣು ಬಿಟ್ಟು ನೋಡ್ತೆ- ಮಾರಾಯರೆ, ಛೆ!., ಆನು ಇತ್ತಿದ್ದು ಹಾಸಿಗೆಲಿ !!!.

ಉದಿಯಪ್ಪಗೆದ್ದು ಹೆಂಡತಿಗೆ ನಡದ ಕತೆ ಹೇಳಿದೆ. ಅದೂ ಪರಂಚಿತ್ತು- ”ನಿಜ ಜೀವನಲ್ಲಿ ಹೇಂಗೂ ಎನ್ನ ಎಲ್ಲಿಗೂ ಹೆರ ಕರಕ್ಕೊಂಡು ಹೊವ್ತಿಲ್ಲಿ., ಕನಸ್ಸಿಲ್ಲಿ ಕೂಡ ಬಿಟ್ಟಿಕ್ಕಿ ಹೋದ್ದು!”

ಅಬ್ದುಲ್ ಕಲಾಂ ನಾವು ಕನಸು ಕಾಣೆಕು, ಏನಾರು ಸಾಧುಸೇಕು ಹೇಳಿದ್ದು ಅಪ್ಪು. ಆದರೆ, ಹೀಂಗೋ??!! . ಅಂದರೆ ಒಂದು, ‘ಇದು ಕನಸು ಕಂಡದಲ್ಲ , ಕನಸು ಬಂದದು’ ಅಪ್ಪೋ. ಅಷ್ಟಕ್ಕೇ ಸಮಾಧಾನ.

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಪ್ರೋತ್ಸಾಹಿಸಿ ಒಪ್ಪ ಕೊಟ್ಟು ಹುರಿದುಂಬಿಸುವ ಬೈಲಿನ ಎಲ್ಲಾ ಬಂಧುಗಳಿಂಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಯಬ್ಬ,ಚೆನ್ನೈಭಾವನ ಕನಸೇ..ಚ೦ದ್ರಲೋಕಲ್ಲಿ ಚಾಯದ ಕಡ ಮಡಿಕ್ಕೊ೦ಡಿದ್ದ ಮಲೆಯಾಳಿ ಚೆಕ್ಕ ಸಿಕ್ಕಿದ್ದಿಲ್ಲೆಯೋ ಹಾ೦ಗಾರೆ?

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಅಪ್ಪಪ್ಪು. ‘ರೆಘು ನಾಯರ್ ಟಿ ಸ್ಟಾಲ್’ – ಅಲ್ಲಿಂದಲೇ ಅದಾ ಎಂಗೋ ಪಳಂಪೊರಿ ಚಾಯ ಕುಡುದಿಕ್ಕಿ ಹೆರಟದು ಅಖೇರಿಗೆ.

  [Reply]

  VA:F [1.9.22_1171]
  Rating: 0 (from 0 votes)
 4. ಪಟಿಕಲ್ಲಪ್ಪಚ್ಚಿ
  ಪಟಿಕ್ಕಲ್ಲಪ್ಪಚ್ಚಿ

  ಚೆನ್ನೈ ಭಾವ, ಭಾರೀ ಲಾಯಕಿದ್ದು ನಿಂಗಳ ಕನಸು. ಎನಗೂ ಒಂದು ಹಾಂಗಿಪ್ಪ ಒಂದು ಕನಸು ಬಿದ್ದಿದ್ದರೆ ಹೇಳಿ ಆಸೆ ಆವ್ತು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಸುವರ್ಣಿನೀ ಕೊಣಲೆದೀಪಿಕಾವಿದ್ವಾನಣ್ಣಎರುಂಬು ಅಪ್ಪಚ್ಚಿಯೇನಂಕೂಡ್ಳು ಅಣ್ಣಪುತ್ತೂರುಬಾವಪವನಜಮಾವಪ್ರಕಾಶಪ್ಪಚ್ಚಿಗೋಪಾಲಣ್ಣದೊಡ್ಡಮಾವ°ನೆಗೆಗಾರ°ಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿವೇಣೂರಣ್ಣದೇವಸ್ಯ ಮಾಣಿಮಾಷ್ಟ್ರುಮಾವ°ಮಾಲಕ್ಕ°ಮುಳಿಯ ಭಾವವಾಣಿ ಚಿಕ್ಕಮ್ಮಮಂಗ್ಳೂರ ಮಾಣಿಶ್ರೀಅಕ್ಕ°ಶುದ್ದಿಕ್ಕಾರ°ದೊಡ್ಮನೆ ಭಾವಕೊಳಚ್ಚಿಪ್ಪು ಬಾವಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ