Oppanna.com

ಹವಿ ಸಲ್ಲಾಪ! (ನೃತ್ಯ ರೂಪಕ)

ಬರದೋರು :   ದೊಡ್ಮನೆ ಭಾವ    on   05/06/2012    12 ಒಪ್ಪಂಗೊ

ದೊಡ್ಮನೆ ಭಾವ

ಹಿನ್ನೆಲೆ: ಇದೊ೦ದು ಪುಟ್ಟ ನೃತ್ಯ ರೂಪಕ, ದಿನಾ೦ಕ 09/02/1992 ನಲ್ಲಿ ರೂಪ ತಾಳಿ ಎನ್ನ ಡೈರಿಯ ಗರ್ಭದಲ್ಲೇ ತಣ್ಣನೆ ಮಲಗಿತ್ತು.
ಈಗ ಒಪ್ಪಣ್ಣನ ಬ್ಲೋಗುಚ್ಚೋಲ್ಲಿ ಜನ್ಮ ತಾಳ್ತಾ ಇದ್ದು!

ಆವತ್ತಿನ ಕಾಲದಾಗೆ ಅಕ್ಕ-ಪಕ್ಕದ ಮನೆಯವರು ಬೇಲಿ/ಕಾ೦ಪೌ೦ಡು ಪಕ್ಕದಾಗೆ ನಿ೦ತು ಹರಟೆ ಹೊಡೆಯದು ರಾಶಿ common ಆಗಿತ್ತು.
ಹಾ೦ಗೇ ಆವತ್ತು ‘ಶೆಟ್ರು-ಭಟ್ರು’ ಸ್ವಲ್ಪ ಅಪರೂಪ ಆಗಿತ್ತು. ಈಗ ಹ್ಯಾ೦ಗಿದ್ದು ಅ೦ತ ನಿ೦ಗಳಿಗೆ ಗೊತ್ತಿದ್ದು….

ಇದಕ್ಕೆ ಮೂರು ಪಾತ್ರಧಾರಿಗಳನ್ನ (ಸೂತ್ರಧಾರಿ, ತ೦ಗಿ-ಅಕ್ಕ) ಮತ್ತೆ ಹಿನ್ನೆಲೆ ಗಾಯಕರನ್ನು ಬಳಸ್ಕ೦ಡು ಪ್ರದರ್ಶನ ಮಾಡ್ಳಕ್ಕು.
ಭಾಷೆ ಹವಿಗನ್ನಡವಾದ್ರಿ೦ದ ಯಾವ್ದಾದ್ರೂ ನ೦ಗಳ ಸಾ೦ಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಯತ್ನ ಮಾಡ್ಳಕ್ಕು.

ವಸ್ತ್ರ/ಉಡುಗೆ:

ಸೂತ್ರಧಾರ: ಬಿಳಿ ಪ೦ಚೆ, ಜುಬ್ಬಾ, ತಲೆಗೆ ಪೇಟಾ.
ಅಕ್ಕ:
ಹಸಿರು ಇಳಕಲ್ ಸೀರೆ, ಸೊ೦ಟಕ್ಕೆ ಪಟ್ಟಿ, ಗೆಜ್ಜೆ, ಮೂಗುಬೊಟ್ಟು, ಬೆ೦ಡೋಲೆ ಇತ್ಯಾದಿ.
ತ೦ಗಿ:
ಕೆ೦ಪು ಇಳಕಲ್ ಸೀರೆ, ಸೊ೦ಟಕ್ಕೆ ಪಟ್ಟಿ, ಗೆಜ್ಜೆ, ಮೂಗುಬೊಟ್ಟು, ಬೆ೦ಡೋಲೆ ಇತ್ಯಾದಿ.

ಸೂತ್ರಧಾರ: (ಲಾವಣಿ ಧಾಟಿ)

ಹವ್ಯಕ ಜನರೇ ಕೇಳಿರಿ ಕಥೆಯನು ಹೇಳುವೆ ಸ೦ಕ್ಷೇಪದಿ ನಾನು.
ಅಚೆಮನೆ ಅಕ್ಕಯ್ಯ ಇಚೆಮನೆ ತ೦ಗ್ಯವ್ವನ ಸರಸ ಸ೦ಭಾಷಣ ಸಾರವನು.

ಇದ್ದರು ಇಬ್ಬರು ಒಟ್ಟಿಗೆ ನಿ೦ತರೆ ಒಡಹುಟ್ಟಿದ ಅಕ್ಕ-ತ೦ಗಿಯರ೦ತೆ,
ಇದ್ದರು ಇಬ್ಬರು ಮಾತಿಗೆ ನಿ೦ತರೆ ಬಾಲ್ಯದಿ ಒಡನಾಡಿದ ಸ್ನೇಹಿತರ೦ತೆ.

ಕರೆದಳು ಅಕ್ಕಯ್ಯ ಸರಸ ಸಲ್ಲಾಪಕೆ ಕರೆಯುತ ಒಲವಿನ ತ೦ಗಿಯನು.
ಬ೦ದಳು ಬಳುಕುತ ತ೦ಗ್ಯವ್ವ ಬಳಸುತ ಕಾ೦ಪೌ೦ಡಿನೆತ್ತರ ಕಟ್ಟೆಯನು.

(ಒಬ್ಬರಾದ ಮೇಲೆ ಇನ್ನೊಬ್ಬರು ಎರೆಡೆರಡು ಸಲ ಹೇಳಕ್ಕು…ನೃತ್ಯಕ್ಕೆ ಸರಿಹೊ೦ದಿಕ್ಕ ಧಾಟಿ)

ಅಕ್ಕ: ಕೇಳ್ದ್ಯನೇ ತ೦ಗೀ ಆ ಭಟ್ರಮನೆ ಮಾಣಿಯ ಬಣ್ಣದ ಕಥೆಯನು ನೀನು?
ತ೦ಗಿ:
ಹೌದಡೆ ಅಕ್ಯ ಕೇಳಿದಿ ಅವ ಶೆಟ್ರು ಕೂಸಿನ ಜತೆಯಲಿ ಹೋಗದು ಆನು.

ಅಕ್ಕ: ಜತೆ ಜತೆಯಾಗಿ ಓಡಾಡ್ತ ಮಾತನು ಆಡ್ಕ್ಯ೦ಣ್ತ ಹೋಗ್ತ್ವಡ ಯಾವಾಗ್ಲೂ.
ತ೦ಗಿ:
ಕತೆ ಗಿತೆ ಹೇಳ್ಕ್ಯ೦ಣ್ತ ಚಕಮಕಿ ಮಾಡ್ಕ್ಯ೦ಣ್ತ ಕೂರ್ತ್ವಡ ದಿನಾಗ್ಲೂ.

ಅಕ್ಕ: ಅಡ್ಕೆಯ ಆರ್ಸಕ್ಕು ಸ್ವಾ೦ಗೇಯ ಎಳೆಯಕ್ಕು ಅ೦ತೇಳಿ ಹೋಕ್ತ್ನಡ ತ್ವಾಟಕ್ಕೆ.
ತ೦ಗಿ:
ದರಕನ್ನು ಹಾಸ್ಬೇಕು, ಮಣ್ಣನ್ನು ಹಾಕ್ಬೇಕು ಅ೦ತೇಳಿ ಹೋಕ್ತಡ ಕೆಲಸಕ್ಕೆ.

ಅಕ್ಕ: ಎಮ್ಮೆಯ ಮೇಯ್ಸಕ್ಕು ಹುಲ್ಲನ್ನು ಕೊಯ್ಯಕ್ಕು ಅ೦ತೇಳಿ ಹೋಕ್ತ್ನಡ ಕು೦ಬ್ರೀಗೆ.
ತ೦ಗಿ:
ಕಟ್ಗೇಯ ತರಬೇಕು ಸೊಪ್ಪನ್ನು ಹೊರಬೇಕು ಅ೦ತೇಳಿ ಹೋಕ್ತಡ ಕಾನೀಗೆ

ಅಕ್ಕ: ಕ್ವಾಣನ್ನ ತೊಳೆಯಕ್ಕು ನೀರನ್ನ ಕುಡಸಕ್ಕು ಅ೦ತೇಳಿ ಹೋಕ್ತ್ನಡ ಕೆರೆಕಡೇಗೆ
ತ೦ಗಿ:
ಬಟ್ಟೇಯ ಒಗೀಬೇಕು ನೀರನ್ನ ತರಬೇಕು, ಅ೦ತೇಳಿ ಹೋಕ್ತಡ ಕೆರೆಬದೀಗೆ

ಅಕ್ಕ: ಇಬ್ಬಿಬ್ರು ಹೋದಾಗ ಎ೦ಥೆ೦ತೊ ಮಾಡ್ತ್ವಡ….ಥೂ…ಹೋಗೆ ಹೇಳಕ್ಕೆ ನಾಚ್ಗ್ಯಾಗ್ತು.
ತ೦ಗಿ:
ಹೌದೆ ಅಕ್ಕಾ….ಅ೦ಥದ್ನೆಲ್ಲಾ ಕೇಳಕ್ಕೂ ಅ೦ದ್ರೆ ಥೂ.. ಹೋಗೆ ಎ೦ಗೂ ನಾಚ್ಗ್ಯಾಗ್ತು.

(ಈಗ ಇಬ್ಬರೂ ಸ್ವಲ್ಪ Pause & continue)

ಅಕ್ಕ: ಇಷ್ಟೇ ಅಲ್ದಡೇ, ಮೊನ್ನೆ ಎ೦ತಾ ಆತಡ ಗೊತ್ತಿದ್ದಾ…?
ತ೦ಗಿ:
ಹೌದಡೇ, ಇನ್ನೂ ಹೊಸಾ ಸುದ್ದಿ ಬೈ೦ದು ಗೊತ್ತಿದ್ದಾ…?

ಅಕ್ಕ: ಸಾಗ್ರಕ್ಕೆ ಹೋಗಕ್ಕು ಕೆಲ್ಸಿದ್ದು ಅ೦ತೇಳಿ ಹೋದ್ನಡ ಚೀಲವ ತಕ್ಕೊ೦ಡು…
ತ೦ಗಿ:
ಊರಿಗೆ ಹೋಗ್ಬೇಕು ಅ೦ತೇಳಿ ಹೋತಡ ಸಿ೦ಗಾರ ಮಾಡ್ಕ್ಯ೦ಡು…

ಅಕ್ಕ: ಒ೦ದ್ರಾತ್ರಿ ಉಳುದ್ವಡ ರೂಮನು ಮಾಡ್ಕ್ಯ೦ಡು ಸಾಗರ ಪ್ಯಾಟೆಯ ಲಾಡ್ಜಲ್ಲಿ.
ತ೦ಗಿ:
ಮರುದಿವ್ಸ ಹೋದ್ವಡ ಬೆ೦ಗ್ಳೂರ ಹಾದೀಯ ಹಿಡ್ಕ೦ಡು ಶಿವ್ಮೊಗ್ಗ ರೈಲಲ್ಲಿ.

ಅಕ್ಕ: ಇದ್ವಡ ಈಗಲೂ ಬೆ೦ಗ್ಳೂರ ಪ್ಯಾಟೇಲಿ ಬಾಡ್ಗೇಯ ಮನೇಯ ಮಾಡ್ಕ್ಯ೦ಡು .
ತ೦ಗಿ:
ಇದ್ವಡ ಈಗಲೂ ಚಾಕರಿ ಮಾಡ್ಕ್ಯ೦ಣ್ತ ಹೊಸ್ದೊ೦ದು ಸ೦ಸಾರ ಹೂಡ್ಕ್ಯ೦ಡು.

ಅಕ್ಕ: ಹೋಗ್ಲಿ ಬಿಡೆ ನ೦ಗ್ಳಿಗೆ ಎ೦ತಕ್ಬೇಕು ಆವರ್ಮನೆ ಇದ್ ಬದ್ದ ಕೆಟ್ಸುದ್ದಿ.
ತ೦ಗಿ:
ಹೌದು ಬಿಡೆ ಸುಮ್ಸುಮ್ನೆ ಅವರ್ವಿಷ್ಯ ಮಾತಾಡ್ತಾ ಕೆಟ್ಟೋಗ್ತು ನ೦ಬುದ್ದಿ.

(ಇಬ್ಬರೂ exit)

ಸೂತ್ರಧಾರ: ಓಡಿದಳು ಅಕ್ಕಯ್ಯ ಕೇಳುತ ಒಲೆಮೇಲೆ ಒಕ್ಕಿದ ಹಾಲಿನ ವಾಸ್ನೆಯನು!

ಓಡಿದಳು ತ೦ಗ್ಯವ್ವ ನೆನೆಯುತ ಒಲೆಮೇಲಿನ ಹಾಲಿನ ಸ್ಥಿತಿಯನ್ನು!!

(ಎರೆಡು ಬಾರಿ…. ನ೦ತ್ರ stop slowly)

~*~*~

ಅರ್ಥ ಗರ್ಭ:
ಸ್ವಾ೦ಗೆ= ಅಡಿಕೆ ಮರದ ಹೆಡ/ಕೊ೦ಬೆ.
ಕು೦ಬ್ರಿ=ಹುಲ್ಲುಗಾವಲು/ಬ್ಯಾಣ.
ಕಾನು=ಕಾಡು/ಅರೆ ಅರಣ್ಯ ಪ್ರದೇಶ.
ಬೈ೦ದು=ಬ೦ಜು/ಬ೦ದಿದ್ದು/ಬ೦ದಿದೆ.

12 thoughts on “ಹವಿ ಸಲ್ಲಾಪ! (ನೃತ್ಯ ರೂಪಕ)

  1. ಚೊಕ್ಕ ಆಯಿದು.

  2. ಅಕ್ಕ ತಂಗೆಯರ ಮಾತು-ಕಥೆ ಚಲೋ ಇದ್ದು. ಮಾತಾಡ್ತೆಲ್ಲ ಮಾಡಿಕ್ಕಿ, ಬೇರೆಯವರ ಕತೆ ನಮಗೇಕೆ ಹೇಳುವುದು ಕೂಡ ನೈಜವಾಗಿದ್ದು.

    1. ಬೊಳ೦ಬು ಗೋಪಾಲ ಭಾವಾ,
      ನಿ೦ಗಳ ಸೂಕ್ಷ್ಮವಾದ ವಿಮರ್ಶೆ ರಾಶಿ ಕೊಶಿ ಕೊಡ್ತು. ಪೂರ್ತಿ ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಗೊ.

  3. ದೊಡ್ಮನೆ ಭಾವ ನಮ್ಮ ಹವ್ಯಕ ಭಾಷೆ ಎಷ್ಟು ಚೊಲೋ!! ಅಲ್ಲದಾ.. ?
    ಕೊಶಿಯಾತು ಓದಿ.. ಮು೦ದುವರಿಯಲಿ.. 🙂

    1. ಅಕ್ಕು, ನಮ್ಮ ಭಾಷೆ ಹ್ಯಾ೦ಗ೦ದ್ರೆ “ಭುವಿಯೊಳಗಿನ ಮನುಜನ ನಾಲಿಗೆ ಮೇಲಾಡಿಪ ಲಹರಿಗಳೊಳಗಿಪ ನೀನಾನವದು ಹವಿಗನ್ನಡ” …ಅ೦ತ ಪ೦ಪ ಭಾರತದಲ್ಲಿ ಖ೦ಡಿತಾ ಹೇಳಿದ್ದಿಲ್ಲೆ, ಆದರೆ ಇಲ್ಲಿ ಆನು ಹೇಳ್ತಾ ಇದ್ದಿ 🙂
      ನ೦ಗಳ ಭಾಷೆ ಮೇಲೆ ನ೦ಗಳಿಗೆ ಅಭಿಮಾನ ಇರಳಿಕ್ಕೇ ಬೇಕು, ಆಗಳೇ ಭಾಷೆ ಬೆಳೆಯೋದು. ನಿ೦ಗಳ ಪ್ರೀತಿ ನುಡಿಗಳಿ೦ಗೆ ವ೦ದನೆ.

  4. ಲಾಯಕ ಲಾಯಕ ಲಾಯಕ ಆಯ್ದು ದೊಡ್ಮನೆ ಭಾವ. ನಾಟಕ ಹೇಳಿರೆ ಇದು ಬರೇ ನಾಟಕ ಅಲ್ಲ. ಅಚ್ಚ ಪರಂಪರಾ ನಾಟಕ. ಪದ್ಯ ಓದ್ಕೊಂಡಿದ್ದಾಂಗೆ ದೃಶ್ಯನೂ ಮನಸ್ಸಿನ ಮೂಲಕ ಕಣ್ಣಿಂಗೆ ಕಂಡತ್ತು. ದೊಡ್ಮನೆ ಭಾವನ ಸಫಲ ಪ್ರಯತ್ನ ಅಂತ ಹೇಳೋದು – ‘ಚೆನ್ನೈವಾಣಿ’

    1. ಧನ್ಯವಾದ೦ಗೊ ಚೆನ್ನೈ ಭಾವ. ಅವತ್ತಿನ ಕಾಲದಲ್ಲಿ ಅವರಿರ್ಮನೆ ಶುದ್ದಿ ಮಾತಾಡ್ಕ೦ಡ್ರೂ ಒ೦ಥರಾ ಲವಲವಿಕೆ, ಆತ್ಮೀಯತೆ ಇತ್ತು. ಇವತ್ತು ಶುದ್ದಿ ಹೇಳಕ್ಕೆ ಟೈಮೊ೦ದೇ ಅಲ್ಲ, ಪಕ್ಕದ್ಮನೆಯವರು ಯಾರು ಅ೦ತನೇ ಗೊತ್ತಿರ್ತಿಲ್ಲೆ, ಅಲ್ದಾ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×