Oppanna.com

ಹೊಟ್ಟೆ ದೊಡ್ಡ ಆದರೆ ಹತ್ತು ಲಾಭ ನಷ್ಟಂಗೊ!

ಬರದೋರು :   ನೆಗೆಗಾರ°    on   10/05/2010    16 ಒಪ್ಪಂಗೊ

ನೆಗೆಗಾರ°

ಅದಪ್ಪು,
ನಮ್ಮ ಬೈಲಿಂಗೆ ಒಬ್ಬ ನೆಗೆಗಾರ° ಬಂದು ಸೇರಿದ°.
ನೆಗೆಗೊ – ಬರೆಕ್ಕಾರೆ ಆರಾರು ಒಬ್ಬ° ನೆಗೆಗಾರ° ಇರೆಕ್ಕನ್ನೆ, ಹಾಂಗೆ!
ಇನ್ನು ಮುಂದೆ ನಮ್ಮ ನೆಗೆಗೊ ಬೆಳೆತ್ತಾ ಇರ್ತು.
ಹಾಂ, ನೆಗೆಗಾರನ ಮಿಂಚಂಚೆ: nege@oppnna.com
ನಿಂಗಳತ್ರೂ ನೆಗೆಗೊ, ತಮಾಶೆಗೊ ಇದ್ದರೆ ಕಳುಸಿಕೊಡಿ, ಇಲ್ಲಿ ಹಾಕುವ°, ಎಲ್ಲೊರೂ ನೆಗೆಮಾಡುವೊ°, ಆತಾ?
ಏ°?

~
ಒಪ್ಪಣ್ಣ

ಹೊಟ್ಟೆದೊಡ್ಡ ಆದ್ದದರ ಹತ್ತು ಕಷ್ಟಂಗೊ:

    • ತಿಂಬಗ ಅರುದರೆ – ಮದಲಿಂಗೆ ಸೀತ ಕೆಳ ಬಿದ್ದುಗೊಂಡು ಇತ್ತು – ಈಗ ಅಂಗಿಲಿ ಕಲೆ ಆವುತ್ತು!
    • ಪೇಂಟಿನ ಗುಬ್ಬಿ ಸರಿ ಹಾಕಿದ್ದೋ ಹೇಳಿ ನೋಡೆಕ್ಕಾರೂ ಬಗ್ಗೆಕ್ಕಾವುತ್ತು!, ಜೋಡು ಹಾಕಿದ್ದು ಸರಿ ಆಯಿದೋ – ಇಲ್ಲೆಯೋ ಹೇಳಿ ಬೇರೆಯವರತ್ರೆ ಕೇಳೆಕ್ಕಷ್ಟೆ!!
    • ವಾಹನ ಬಿಡ್ಳೆ ಹೇಂಡ್ಳು / ಷ್ಟೇರಿಂಗು ಹರಟೆ ಆವುತ್ತು!
    • ಬೈಕ್ಕಿನ ಹಿಂದೆ ಕೂಬದು ಬಾರಿ ಕಷ್ಟ, ಕಾರಿನ ಸೀಟಿಂದ ಬೇಕಪ್ಪಗ ಏಳುಲೆಡಿತ್ತಿಲ್ಲೆ!
    • ಕವುಂಚಿ ಮನುಗಿರೆ ಬೆನ್ನು ಬೇನೆ ಆವುತು – ಬಗ್ಗಿದ ಹಾಂಗಾಗಿ!
    • ಒಂಟಿಪಾಲಲ್ಲಿ ನೆಡವಗ ಕಾಲು ಮಡಗಿದ್ದು ಕಾಣದ್ದೆ ಉದುರುವ ಹೆದರಿಕೆ ಆವುತ್ತು!
    • ಕಂಪ್ಯೂಟರು ಕುಟ್ಟುವಗ ಕೀಬೋರ್ಡು ದೂರ ಮಡಗೆಕ್ಕಾವುತ್ತು, ಒತ್ತಿದ್ದು ಸರಿಯೋ – ತಪ್ಪೋ ಕಾಣ್ತಿಲ್ಲೆ!
    • ಪೂಜಗೆ ಕೂದಲ್ಲಿ ಕೌಳಿಗೆಸಕ್ಕಣ ನೆಲಕ್ಕಲ್ಲಿ ಮಡಗಿದ್ದು ಕಾಣ್ತೇ ಇಲ್ಲೆ!
    • ಮುಂಡು ಸುತ್ತುದೇ ಒಳ್ಳೆದು ಕಾಣ್ತು! ಅಂಗಿ, ಪೇಂಟುಗೊ ಪೂರ ಸಣ್ಣ ಅಪ್ಪಲೆ ಸುರು ಆವುತ್ತು! – ಕೆಲಸದಾಳಿಂಗೇ ದಾನ ಹಿಡಿಯೆಕ್ಕಷ್ಟೆ!
    • ಹೊಟ್ಟೆ ಬೆಳದರೆ ವ್ಯಾಯಾಮ ಮಾಡ್ಳೆ ಉದಾಸ್ನ ಅಪ್ಪದು – ವ್ಯಾಯಾಮ ಮಾಡದ್ದೆ ಹೊಟ್ಟೆ ಇನ್ನೂ ಬೆಳವದು!!

    ಹೊಟ್ಟೆಬೆಳದರೆ ಅಪ್ಪ ಹತ್ತು ಗುಣಂಗೊ:

      • ರಜ ಜಾಸ್ತಿ ತಿಂದರೂ ಆರೂ ಎಂತೂ ಗ್ರೇಶುತ್ತವಿಲ್ಲೆ!
      • ಎಲ್ಲೇ ಆದರೂ, “ಬನ್ನಿ ಬಾವ, ಕೂರಿ” – ಹೇಳಿ ಕೂಬಲೆ ಜಾಗೆ ಮಾಡಿ ಕೊಡ್ತವು! ಬಸ್ಸಿಲಿ ಆರಾಮಲ್ಲಿ  ಕೂಪಲೆ ಸೀಟುಬಿಟ್ಟುಕೊಡ್ತವು! ಕಾರಿಲಿ ಸೀಟಿಲಿ ಎರಾಗಿ ಕೂರುಸುತ್ತವು.
      • ಜೆಂಬ್ರಲ್ಲಿ ಕನಿಷ್ಠ ಒಂದು ಹೋಳಿಗೆ ಇಡೀ ಬಳುಸುತ್ತವು!
      • ನೆರೆಕರೆ ಜೆಂಬ್ರಂಗಳಲ್ಲಿ ಸುದಾರಿಕೆಗೆ ಹೋಗದ್ರೂ ಆರುದೇ ಎಂತ ಗ್ರೇಶುತ್ತವಿಲ್ಲೆ!
      • ಬಚ್ಚುವಗ ಕೈಯ ಹೊಟ್ಟೆಮೇಲೆ ಮಡಗಿ ಕೂದಂಡು ಒರಗುಲಾವುತ್ತು!
      • ಪಕ್ಕನೆ ಎಂತಾರು ಬರೇಕಾರೆ ಬೇರೆ ಮೇಜೋ – ರಟ್ಟಿನಕಡೆಯೋ – ಮತ್ತೊ ಹುಡ್ಕೆಕ್ಕಾವುತ್ತಿಲ್ಲೆ!
      • ಜೆನರಿಂದ ಒಂದು ರಜ್ಜ ದೂರ ಇದ್ದೇ ಇರ್ತು – ಆದುನಿಕ ಸಮಾಜದ ತತ್ವದ ಹಾಂಗೆ!
      • ಮುಂಡು – ವೇಷ್ಟಿ ಸುತ್ತಿರೆ ಚೆಂದ ಕಾಣ್ತು!! – ಅಲ್ಲದ್ರೆ ಕಡ್ಡಿಗೆ ಒಸ್ತ್ರ ಸುಂದಿದ ಹಾಂಗೆ ಕಾಣ್ತಡ!
      • ಕೀಬೋರ್ಡಿನ / ಲೇಪ್ಟಾಪಿನ ಹೊಟ್ಟೆಮೇಲೆಯೇ ಮಡಿಕ್ಕೊಂಬಲಾವುತ್ತಡ (ಶ್ತೋಮಕ್-ಟೋಪ್)..!
      • ಜಾಸ್ತಿ ತಿಂಬಲೆಡಿತ್ತು, ಜಾಸ್ತಿ ತಿಂದಷ್ಟೂ ಹೊಟ್ಟೆ ಬೆಳೆತ್ತು!!
      ಇದು ಕಷ್ಟಂಗೊ – ಗುಣಂಗೊ ಆರಿಂಗೆ?
      ಶಾಂಬಾವನ ಹಾಂಗೆ ಜನ್ಮದಾರಭ್ಯ ಹೊಟ್ಟೆ ಇದ್ದವಂಗೆ ಅಲ್ಲ, ಪ್ರಕಾಶಮಾವನ ಹಾಂಗೆ – ಎಡೆಲಿ ಬಂದವಂಗೆ ಅನುಭವ ಅಪ್ಪದು.
      ನಿಂಗೊಗೆ ಯೇವದಾರು ಗೊಂತಿದ್ದರೆ, ಅನುಭವಕ್ಕೆ ಬಂದಿದ್ದರೆ – ತಿಳುಶಿ!
      ಕೇವಲ ನೆಗೆಗಾಗಿ!
      ~
      ನೆಗೆಗಾರ°
      nege@oppanna.com

      16 thoughts on “ಹೊಟ್ಟೆ ದೊಡ್ಡ ಆದರೆ ಹತ್ತು ಲಾಭ ನಷ್ಟಂಗೊ!

      1. ದೊಡ್ಡ ಹೊಟ್ಟೆಯ ಲಾಭಂಗಳ ಗಮನಲ್ಲಿ ಮಡಿಕ್ಕೊಂಡು , ದೊಡ್ಡ ಹೊಟ್ಟೆ ಬೆಳಶುವ,ಉಳುಶುವ ಆಲೋಚನೆ ಇದ್ದರೆ ಎನ್ನ ಅಭ್ಯಂತರ ಏನೂ ಇಲ್ಲೆ.
        ಆರಿಂಗಾರೂ ಹೊಟ್ಟೆ ಕರಗ್ಸೆಕ್ಕು ಹೇಳಿ ಕಂಡರೆ ಎನ್ನ contact ಮಾಡಿ, ಮಾಹಿತಿ ಕೊಡ್ತೆ 🙂

      2. Take a bow brother…
        Superb piece of work.. Keep it up…
        HINGE JORU JORU NEGE MADSIGONDIRI..
        ALL THE BEST :):):)

        1. ಹೊಟ್ತೆ ಹುಣ್ಣಾದರೆ ತುಪ್ಪ ತಿನ್ನೆಕ್ಕಡ… ಮೇಲೆ ಡಾಗುಟ್ರು ಬರದ್ದವು… ಇನ್ನು ತುಪ್ಪ ತಿಂದಿಕ್ಕಿ ನೆಗೆ ಮಾಡುದು ಒಳ್ಳೆದು….

      3. ಬೆಳ್ತಿಗೆ ಅನ್ನ ದಿನಾ ಉಂಡರೆ ಹೊಟ್ಟೆ ಬೆಳೆತ್ತಡ, ಅಪ್ಪೋ?
        ಟೀವಿಲಿ ಉದಿಯಪ್ಪಗಳೇ ಹೊಟ್ಟೆ ಕರಗುಸುದು ಹೇಂಗೆ ಹೇಳಿ ಪಾಠ ಆವುತ್ತು. ಹಿಂದೆ ವ್ಯಾಯಾಮ, ಏರೋಬಿಕ್ಸು ಮಾಡ್ಸಿಂಡು ಇತ್ತಿದ್ದವು. ಈಗ ಸಾನಾ ಬೆಲ್ಟ್‌ನ ಜಾಹೀರಾತು ಬೈಂದು. ಅಷ್ಟೇ ವೆತ್ಯಾಸ.

        1. ಆದಿಕ್ಕು!
          ಅದಕ್ಕೆ ಬರೇ ಬೆಳ್ತಿಗೆ ಅನ್ನದ ಬದಲು ತುಪ್ಪವೋ – ಬೆಣ್ಣೆಯೋ ಸೇರಿಸೆಂಡು ಉಣ್ಣೆಕ್ಕಿದಾ! 😀

          1. ತುಪ್ಪ ಅಥವಾ ಬೆಣ್ಣೆ ತಿಂದರೆ ಹೊಟ್ಟೆ ಬತ್ತು ಹೇಳ್ತದರ ಆನು ಒಪ್ಪುತ್ತಿಲ್ಲೆ… ತುಪ್ಪ/ಘೃತ,ಬೆಣ್ಣೆ/ನವನೀತ ಹೇಳ್ತದಕ್ಕೆ ಆಯುರ್ವೇದಲ್ಲಿ ತುಂಬಾ ಪ್ರಾಮುಖ್ಯತೆ ಕೊಟ್ಟಿದವು…
            ಎಲ್ಲಾ ಸ್ನೇಹ ಪದಾರ್ಥಂಗಳಲ್ಲಿ ತುಪ್ಪವೇ ಅತ್ಯುತ್ತಮವಾದ್ದು…. ಇದು ಹೊಟ್ಟೆಯ ಹುಣ್ಣು (ulcer) ಅಪ್ಪದರ ತಡೆತ್ತು….
            ಹೊಟ್ಟೆ ಬಪ್ಪದು ವ್ಯಾಯಾಮ ಕಮ್ಮಿ ಅಪ್ಪ ಕಾರಣಂದ… ತಿಂದ ಆಹಾರಲ್ಲಿ ಸಿಕ್ಕಿದ ಶಕ್ತಿಯ ಸರಿಯಾಗಿ ಕೆಲಸ ಮಾಡಿ ಉಪಯೋಗ ಮಾಡಿಗೊಂಡರೆ ಖಂಡಿತಾ ಹೊಟ್ಟೆ ಬತ್ತಿಲ್ಲೆ….
            ಆನು ಹೀಂಗೆ ಹೀಳಿದೆ ಹೀಳಿ ಬೇಕಾದಷ್ಟು ತುಪ್ಪ,ಬೆಣ್ಣೆ ತಿಂಬ ಯೋಚನೆ ಮಾಡೆಡಿ ನೆಗೆಗಾರ ಅಣ್ಣ… ಯಾವುದೇ ಆಹಾರವಾಗಲಿ ಹಿತ-ಮಿತವಾಗಿ ತೆಕ್ಕೊಂಡರೆ ಅದುವೇ ನಮ್ಮ ಕಾಪಡ್ತು…”ಮಿತ ಭೋಜನಂ ಸ್ವಾಸ್ಥ್ಯಮ್” ಹೇಳಿ ಸಂಹಿತೆಗಳಲ್ಲಿ ಹೇಳಿದ್ದವು….. 🙂

      4. ಈಗ ಹೊಟ್ಟೆ ಬೆಳೆಶುದಾ ಹೊಟ್ಟೆ ಕರಗುಸುದಾ ಹೇಳಿ ಕಂಪ್ಯೂಸು ಆವ್ತಾ ಇದ್ದು

        1. ಚೆನ್ನಬೆಟ್ಟಣ್ಣ,
          ಹೊಟ್ಟೆ ಇಳುಶಿರೂ ಸ್ವರ್ಗ,
          ಹೊಟ್ಟೆ ಬೆಳೆಶಿರೂ ’ಸ್ವರ್ಗ’..!
          ಆಯ್ಕೆ ನಿಂಗಳದ್ದು 😉
          ಎಂತಹೇಳ್ತಿ?

      5. ಇಷ್ಟೆಲ್ಲ ಸಂಗತಿ ಹೊಟ್ಟೆಯ ಬಗ್ಗೆ ಎನಗೆ ಗೊಂತೆ ಇತ್ತಿಲ್ಲೆ ಮರಾಯ್ರೆ.. 🙂 ಈಗಾಣ ಐಟಿ ಬಿಟಿ ಯ ಕೆಲಸಗಳಲ್ಲಿ ಜೆನಂಗೊಕ್ಕೆ ನೆಗೆಮಾಡ್ಲುದೆ ನನಪ್ಪಾವುತ್ತಿಲ್ಲೆ,, 🙂 ಒಳ್ಳೆ ಅಂಕಣ..

      Comments are closed.

      ಒಪ್ಪಣ್ಣ
      ದೇವಸ್ಯ ಮಾಣಿ
      ಕಾವಿನಮೂಲೆ ಮಾಣಿ
      ಅಕ್ಷರ°
      ಅನಿತಾ ನರೇಶ್, ಮಂಚಿ
      ಅನು ಉಡುಪುಮೂಲೆ
      ಎಬಿ ಭಾವ
      ಬಂಡಾಡಿ ಅಜ್ಜಿ
      ಬಟ್ಟಮಾವ°
      ಪುಣಚ ಡಾಕ್ಟ್ರು
      ಮಾಲಕ್ಕ°
      ಬೋಸ ಬಾವ
      ಒಪ್ಪಣ್ಣ
      Menu
      ×