ಇದೊಂದು ಬಿಟ್ಟು ಬೇರೆ ಎಂತಾದರೂ ಅಕ್ಕು..

August 29, 2011 ರ 10:30 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಇದೊಂದು ಬಿಟ್ಟು ಬೇರೆ ಎಂತಾದರೂ ಅಕ್ಕು…” – ಈ ಮಾತಿನ ನಾವು ತುಂಬಾ ಜನರ ಬಾಯಿಲಿ ಕೇಳ್ತಾ ಇರ್ತು.
ವಿಷಯ, ಸಂದರ್ಭ ಬೇರೆ ಬೇರೆ ಅಷ್ಟೆ.
ಎನಗೆ ಹೀಂಗೆ ಅನ್ಸಿದ್ದು ಓ ಮೊನ್ನೆ ಬಾಯಿಲಿ ನಾಲ್ಕು ಬಾಯಿಹುಣ್ಣು ಆದಪ್ಪಗ. ಒಂದು ವಾರದ ಮಟ್ಟಿಗೆ ನರಕ ಯಾತನೆ ತಡವಲೆ ಎಡಿಯ.
ಎರಡು ಮೂರು ವರ್ಷ ಮೊದಲಿನವರೆಗೂ ಬಾಯಿಹುಣ್ಣು ಎನಗೆ ಖಾಯಂ ಅತಿಥಿ ಆಗಿದ್ದ ಕಾರಣ ಅದರ ಬಗ್ಗೆ ಎನಗೆ ಹೆದರಿಕೆ ಏನೂ ಇತ್ತಿಲ್ಲೆ. ಹಾಂಗಾಗಿಯೆ ಸುರುವಾಣ ಎರಡು ದಿನ ಕೇರ್ ಮಾಡಿದ್ದಿಲ್ಲೆ. ಮೂರನೇ ದಿನಂದ ಸುರು ಆತದ ಇದರ ಕಾಟ, ಏನು ಮಾಡಿದರೂ ತಡಕ್ಕೊಂಬಲೆ ಎಡಿಯ. ಅದೂ ಜಾಗೆ ನೋಡಿ ಹುಟ್ಟಿದ ಹಾಂಗೆ ತುಟಿ, ಕೊಡಿ ನಾಲಗೆ, ಕಡೆ ನಾಲಗೆ, ಕಿರು ನಾಲಗೆಯ ಹತ್ತರೆ… ಹೀಂಗೆ ಮೂರು ನಾಲ್ಕು ಕಡೆಲಿ ಒಟ್ಟಿಗೆ ದಾಳಿ ನಡೆಸಿತ್ತು.

ಸರಿಯಾಗಿ ಒಬ್ಬನ ಹತ್ರೆ ಮಾತಾಡ್ಲೆ ಎಡಿಯ, ಎಂತ ತಿಂಬಲೂ ಎಡಿಯ, ಕೊನೆಗೆ ರಾತ್ರಿ ಸರಿಯಾಗಿ ನಿದ್ದೆಯೂ ಬಾರ. ಹೀಂಗಾಗಿಯೇ ಎನಗೆ ಇದೊಂದು ಬಿಟ್ಟು ಬೇರೆ ಎಂತಾದರೂ ಅಕ್ಕು ಹೇಳಿ ಅನ್ಸಿದ್ದು. ಹಾಂಗೆ ಹೇಳಿ ಆನು ಮದ್ದು ಮಾಡಿದ್ದಿಲ್ಲೆ ಹೇಳಿ ಅಲ್ಲ. ಬೊಂಡ ಕುಡುದು ಆತು, ಕಣ್ಣ ಚಾಯ ಆತು, ಬಸಳೆ ಕೊಡಿ ಚೂಂಟಿ ಆತು, ಗಿಡಲ್ಲಿದ್ದ ಪೇರಳೆ ಕೊಡಿ ಖಾಲಿ ಆತು, ಲೀಟರುಗಟ್ಟಲೆ ನೀರು ಕುಡುದಾತು, ಕೊನೆಗೆ ಇಂಗ್ಲಿಷ್ ಮಾತ್ರೆ ನುಂಗಿಯೂ ಆತು. ಆದರೂ ಬಾಯಿಹುಣ್ಣು ಮಾತ್ರ ಕಮ್ಮಿ ಆಯಿದಿಲ್ಲೆ!
ಹಾಂಗೇ ಇನ್ ಕಮಿಂಗ್ ಉಪದೇಶಗಳೂ. ಜಾಜಿಮಲ್ಲಿಗೆ ಕೊಡಿ ತಿನ್ನು, ಅರಾರೂಟ್ ಹೊಡಿ ನೀರಿಲಿ ಹಾಕಿ ಕುಡಿ, ಎಳ್ಳೆಣ್ಣೆಲಿ ಬಾಯಿ ಮುಕ್ಕುಳುಸು – ಹೀಂಗೇ ಒಂದರ ಮೇಲೆ ಒಂದು ಹಿತವಚನ ಬತ್ತಾ ಇತ್ತು.
ಇಷ್ಟೆಲ್ಲಾ ಮದ್ದಿನ ಫಲವೋ ಹೇಳುವ ಹಾಂಗೆ ಒಂದು ವಾರ ಅಪ್ಪಗ ಎನ್ನ ಬಾಯಿಹುಣ್ಣು ಒಂದು ಸಮಾಧಾನಕರ ಸ್ಥಿತಿಗೆ ತಲುಪಿತ್ತು. ಮದ್ದು ತಿನ್ನದಿದ್ರೆ ಏಳು ದಿನ ಬೇಕಾವುತ್ತಿತ್ತೋ ಏನೋ ಗುಣ ಅಪ್ಪಲೆ!

ಹಾಂಗೆ ಹೇಳಿ ಇದೇನೂ ಸುರು ಅಲ್ಲ ಹೀಂಗೆ ಅನ್ಸುದು. ಶೀತ ಆದರೂ, ಜ್ವರ ಬಂದರೂ ಆ ಸಮಯಕ್ಕೆ ಹೀಂಗೇ ಅನ್ಸುತ್ತು. ಶೀತ ಆದಪ್ಪಗ ಸುರಿವ ಸಿಂಬಳ(ಸಂಬಳ ತೆಕ್ಕೊಂಬಲೆ ಕಷ್ಟ ಆವ್ತಿಲ್ಲೆ), ಸಾಲಾಗಿ ಬಪ್ಪ ಆಕ್ಷಿ, ಒಟ್ಟಿಂಗೇ ಬಪ್ಪ ಸೆಮ್ಮ ಕಫ, ಕೆಲವು ಜೆನಂಗೊಕ್ಕೆ ದಮ್ಮು ಹೀಂಗೆ ಒಂದೊಂದು ಅನುಭವಿಸಿ ಅಪ್ಪಗಳೇ ಗೊಂತಾಪ್ಪದು ಎಷ್ಟು ಕಷ್ಟ ಹೇಳಿ.

ನಾವು ಬೇರೆ ಯಾವುದೂ ಅಕ್ಕು ಹೇಳುದು ಇದೊಂದೇ ವಿಷಯಲ್ಲಿ ಅಲ್ಲ. ನಾವು ಯಾರ ಹತ್ತರೆ ಆದ್ರೂ ‘ನಿನ್ನ ಕೆಲಸ ಹೇಂಗಿದ್ದು ಮಾರಾಯ?’ ಹೇಳಿ ಕೇಳಿರೆ, ‘ಈ ಕೆಲಸ ಒಂದು ಆಗ, ತಲೆ ಹೋಪಷ್ಟು ಕೆಲಸ, ಸಂಬಳ ಮಾತ್ರ ಕಮ್ಮಿ’ ಹೇಳಿ ಹೇಳುವವ್ವೇ ಹೆಚ್ಚು.
ಮಾಷ್ಟ್ರಂಗೆ ಜನಗಣತಿ ಕೆಲಸ, ಬ್ಯಾಂಕಿನವಕ್ಕೆ ವರ್ಷಾಂತ್ಯ, ಮಾರ್ಕೆಟಿಂಗ್/ಎಲ್ಲೈಸಿ ಏಜೆಂಟಂಗೆ ಟಾರ್ಗೆಟ್, ಲಾಯರಕ್ಕೊಗೆ ಫೀಸ್ ಸರಿಯಾಗಿ ಬತ್ತಿಲ್ಲೆ, ವ್ಯಾಪಾರಿಗೊಕ್ಕೆ ಗಿರಾಕಿಯೇ ಇಲ್ಲೆ ಹೀಂಗೆ ಒಬ್ಬೊಬ್ಬಂಗೆ ಅವನ ಕೆಲಸ ಕಷ್ಟವೇ, ಇನ್ನೊಬ್ಬಂದೇ ಆರಾಮ.

ಒಬ್ಬ ಸಿಎಯನ್ನೇ ಉದಾಹರಣೆಗೆ ತೆಕ್ಕೊಂಡರೂ, ಕೆಲಸಕ್ಕೆ ಸೇರಿದವ ಹೇಳುದು ‘ಹಗಲು ರಾತ್ರಿ ಕೆಲಸ, ಬೇಕಾಪ್ಪಗ ರಜೆ ಸಿಕ್ಕುತ್ತಿಲ್ಲೆ, ಸ್ವಂತ ಆಫೀಸ್ ಮಡುಗುದೇ ಒಳ್ಳೆದು, ಸ್ವಾತಂತ್ರ್ಯ ಇರ್ತು’ ಹೇಳಿ.
ಅದೇ ಸ್ವಂತ ಆಫೀಸ್ ಮಡುಗಿದವನ ಕಷ್ಟ ಬೇರೆಯೇ. ‘ಜೆನ ಸರಿಯಾಗಿ ಬತ್ತವಿಲ್ಲೆ, ಬಂದವೂ ಫೀಸ್ ಕೊಡ್ಲೆ ಕಿರಿ ಕಿರಿ ಮಾಡ್ತವು, ಕೆಲಸಕ್ಕೆ ಸರಿಯಾಗಿ ಅಸಿಸ್ಟಂಟ್ ಸಿಕ್ಕುತ್ತವಿಲ್ಲೆ, ಸೆಟ್ಲ್ ಆಯೆಕ್ಕಾದ್ರೆ ೫-೧೦ ವರ್ಷ ಬೇಕಾವುತ್ತು, ಕೆಲಸಕ್ಕೆ ಸೇರಿದ್ರೆ ತಿಂಗಳ ಕೊನೆಗೆ ಸಂಬಳ ತಪ್ಪದ್ದೆ ಬತ್ತು’. ಹೀಂಗೆ ಅವರವರ ಕೆಲಸಲ್ಲಿ ಸಂತೋಷ, ಸಮಾಧಾನ ಇಪ್ಪವು ಕಡಮ್ಮೆ. ಇದನ್ನೇ ನಮ್ಮ ಹಿರಿಯರು ದೂರದ ಬೆಟ್ಟ ನುಣ್ಣಗೆ ಹೇಳಿ ಹೇಳಿದ್ದು.

ಎನಗೆ ಎನ್ನ ಬಾಸ್ ಯವಾಗ್ಳೂ ಕಿರಿಕಿರಿ, ಆಚೆ ಡಿಪಾರ್ಟ್ ಮೆಂಟಿಲಿಪ್ಪ ಬಾಸೇ ಪಾಪ. ಹೇಳಿದ್ರೆ ಮುಗಿಯ..
ಇನ್ನೂ ಒಂದು ಪರಿಸ್ಥಿತಿಲಿ ನವಗೆ ಇಪ್ಪದರಲ್ಲಿ ಸಮಾಧಾನ ಇರ್ತಿಲ್ಲೆ. ನವಗೆ ಯಾವಾಗಳೂ ಇನ್ನೊಬ್ಬರ ಹತ್ರೆ ಇಪ್ಪ ವಸ್ತುವಿನ ಮೇಲೆಯೇ ಕಣ್ಣು.
ಆಚೆ ಮನೆಯವಂಗೆ ೧೦ ಲಕ್ಷದ ಕಾರು ಬಂದ್ರೆ, ಇವಂಗೆ ನಿದ್ದೆ ಬತ್ತಿಲ್ಲೆ. ಇವನ ಹತ್ರ ಇಪ್ಪ, ಇದುವರೆಗೂ ರೈಸಿಕೊಂಡಿದ್ದ ೮ ಲಕ್ಷದ ಕಾರು ಲೆಕ್ಕಕ್ಕೇ ಇಲ್ಲೆ.
(ಬೆಂಗಳೂರು ಕಡೆಯವಕ್ಕೆ ಹೀಂಗಿಪ್ಪದು ಜಾಸ್ತಿ ಹೇಳಿ ಎನ್ನ ಭಾವನೆ, ಎಷ್ಟು ಸತ್ಯ ಗೊತ್ತಿಲ್ಲೆ).

ಕೆಲವು ಜೆನಕ್ಕೆ ಅವರ ಮಕ್ಕಳ ಇತರ ಮಕ್ಕಳೊಟ್ಟಿಗೆ ಹೋಲಿಕೆ ಮಾಡಿ, ಇವ ಏನೂ ಕಲಿತ್ತನಿಲ್ಲೆ/ಬರೀ ದಡ್ಡ ಹೇಳಿ ಪದೇ ಪದೇ ಹೇಳುವ ಅಭ್ಯಾಸ.
ಇದು ಮಕ್ಕಳ ಹತ್ರವೇ ಹೇಳುದಾಯಿಕ್ಕು ಅಥವಾ ಮಕ್ಕಳ ಎದುರಿಲಿ ಪರಿಚಯಸ್ಥರ ಹತ್ರ ಹೇಳುದೂ ಆಯಿಕ್ಕು.
ಇನ್ನು ಕೆಲವರಿಂಗೆ ವಿದೇಶಂದ ತಂದ ವಸ್ತು ಆದ್ರೆ ಮಾತ್ರ ಅದು ಒಳ್ಳೆದು ಸ್ವದೇಶಿ ಆದರೆ ಕೀಳು, ಆಲೋಪತಿ ಮಾತ್ರ ಒಳ್ಳೆದು ಆಯುರ್ವೇದ ಒಳ್ಳೆದಲ್ಲ, ಹೀಂಗೇ ಹಿತ್ತಲ ಗಿಡ ಮದ್ದಲ್ಲ ಹೇಳುವ ಹಾಂಗೆ ನಮ್ಮದೇ ಆದ್ದು ನಗಣ್ಯ.
ಎನ್ನ ಫ್ರೆಂಡ್ ಒಬ್ಬ ದಿನಾ ಬೈಕಿಲಿ ೪ ಕಿಮೀ ದೂರದ ಜಿಮ್ಮಿಗೆ ಹೋಗಿ ಒಂದು ಗಂಟೆ ವ್ಯಾಯಾಮ ಮಾಡಿ ಬತ್ತ, ಆದರೆ ಯೋಗ ಮಾಡ್ಲೆ ತಯಾರಿಲ್ಲೆ.

ಹೀಂಗೆ ನವಗೆ ಸಮಾಧಾನ ಹೇಳುದು ಇಲ್ಲೆ. ಆನೂ ಇದಕ್ಕೆ ಹೊರತಲ್ಲ. ಉಳುದವಕ್ಕೆ ಬುದ್ಧಿ ಹೇಳುವಷ್ಟು ದೊಡ್ಡವನೂ ಆನಲ್ಲ.

ಬಾಯಿಹುಣ್ಣು ಆದಪ್ಪಗ ಸುರುವಾದ ಆಲೋಚನೆ ಎಲ್ಲೆಲ್ಲಿಗೋ ತಲುಪಿತ್ತು. ಬೈಲಿಂಗೆ ಹೇಳುವ ಅನ್ಸಿತ್ತು.

ಮತ್ತೆ ಕಾಂಬ,
ವೋಣಿಯಡ್ಕ ಕಿಟ್ಟಣ್ಣ

ಇದೊಂದು ಬಿಟ್ಟು ಬೇರೆ ಎಂತಾದರೂ ಅಕ್ಕು.., 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಅಪ್ಪು ಕಿಟ್ಟಣ್ಣ , ಈ ಜೆಂಬಾರ ಆತೇ ಇಲ್ಲೆ. ಒಪ್ಪಕ್ಕೆ ಬರದ್ದಿ ಹೇಳಿ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಶಾಮ ಪ್ರಸಾದ್

  ಎಲ್ಲರ ಮನಸ್ಸಿಲಿ ಬಪ್ಪ ವಿಚಾರ. ತುಂಬಾ ಚೆಂದಕೆ ಬರದ್ದಿ.

  [Reply]

  VA:F [1.9.22_1171]
  Rating: 0 (from 0 votes)
 3. ಶೇಡಿಗುಮ್ಮೆ ಪುಳ್ಳಿ
  ಪ್ರಸಾದ್

  ಕಿಟ್ಟಣ್ಣಾ , ಎಲ್ಲೋರ ಬಾಯಿಲಿಯೂ ಬತ್ತ ಎಲ್ಲೋರೂ ಕೇಳ್ತ ವಿಚಾರ ಆದರುದೇ ನಿರೂಪಣಾ ಶೈಲಿ ಬಾರೀ ಲಾಯಿಕ ಆಯಿದು ಹೇಳಿ ಒಂದು ಒಪ್ಪ…………..

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಎಲ್ಲೋರ ತಲೆತಿಂತ ವಿಚಾರವ ಚೆಂದಕೆ ವಿವರುಸಿದ್ದೆ ಕಿಟ್ಟಣ್ಣ. ನಮ್ಮದು ಬಿಟ್ಟು ಬೇರೆಯವರದ್ದೆ ಚೆಂದ ಕಾಣ್ತದು ಮನುಷ್ಯರ ಸಹಜ ಗುಣವೇ ನಿಜ.

  [Reply]

  VA:F [1.9.22_1171]
  Rating: 0 (from 0 votes)
 5. ಬೋದಾಳ
  ಬೋದಾಳ

  ಎನಗೂ ಹಾಂಗೇ…. ಈ ಇದು ಬಿಟ್ಟು ಬೇರೆ ಯೇವದಾದರೂ ಆವ್ತೀತು …..:(

  [Reply]

  VA:F [1.9.22_1171]
  Rating: 0 (from 0 votes)
 6. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಎಲ್ಲರಿಂಗೂ ಧನ್ಯವಾದ..

  [Reply]

  VN:F [1.9.22_1171]
  Rating: 0 (from 0 votes)
 7. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಿತ್ಯ ನಮ್ಮಲ್ಲಿ ನೆಡೆತ್ತ ನೈಜ ಸಂಗತಿಯ ನಿರೂಪಣೆ ಲಾಯಿಕ ಆಯಿದು. ಇದು ಎಲ್ಲರ ಅನುಭವಕ್ಕೂ ಬಪ್ಪ ವಿಶಯವೇ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಮುಳಿಯ ಭಾವದೀಪಿಕಾಡೈಮಂಡು ಭಾವಗೋಪಾಲಣ್ಣಪುಟ್ಟಬಾವ°ತೆಕ್ಕುಂಜ ಕುಮಾರ ಮಾವ°ಪುಣಚ ಡಾಕ್ಟ್ರುಬಟ್ಟಮಾವ°ವೇಣಿಯಕ್ಕ°ನೆಗೆಗಾರ°ಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ಶಾಂತತ್ತೆಸಂಪಾದಕ°ಪಟಿಕಲ್ಲಪ್ಪಚ್ಚಿವಾಣಿ ಚಿಕ್ಕಮ್ಮಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಪವನಜಮಾವವಿದ್ವಾನಣ್ಣಕಳಾಯಿ ಗೀತತ್ತೆಅಕ್ಷರದಣ್ಣಪುತ್ತೂರಿನ ಪುಟ್ಟಕ್ಕಕೇಜಿಮಾವ°ಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ